Connect with us

Chikmagalur

ತರಾತುರಿಯಲ್ಲಿ ಬಸ್ ತಂಗುದಾಣ ದುರಸ್ಥಿ : ಸಾರ್ವಜನಿಕರ ಆಕ್ರೋಶ

Published

on

ಎನ್.‌ ಆರ್.‌ ಪುರ: ಕಳೆದ ವಾರ ನರಸಿಂಹರಾಜಪುರ ತಾಲೂಕಿನ ಬೈಪಾಸ್ ಸಮೀಪದ ಬಸ್ ತಂಗುದಾಣಕ್ಕೆ ಲಾರಿ ಡಿಕ್ಕಿಯಾಗಿ ತಂಗುದಾಣ ಸಂಪೂರ್ಣ ಕುಸಿದು ಬೀಳುವ ಸ್ಥಿತಿಗೆ ತಲುಪಿತ್ತು. ಇದರ ನಿರ್ಮಾಣವನ್ನು ಸಂಪೂರ್ಣ ಕೆಡವಿ ಹೊಸದಾಗಿ ಮಾಡುವ ಭರವಸೆ ನೀಡಲಾಗಿತ್ತು ಎನ್ನಲಾಗಿದೆ. ಆದರೆ, ಇದೀಗ ತರಾತುರಿಯಲ್ಲಿ ಬೇಕಾಬಿಟ್ಟಿ ದುರಸ್ಥಿ ಮಾಡಲು ಮುಂದಾಗಿರುವ ಕುರಿತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಟ್ಟಣ ಪಂಚಾಯತಿ ಅಧ್ಯಕ್ಷರ ಮಾತಿನಂತೆ ದುರಸ್ಥಿ:
ಬಸ್ ತಂಗುದಾಣವನ್ನು ದುರಸ್ಥಿ ಮಾಡುವಾಗ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದುರಸ್ಥಿ ಕುರಿತು ಸ್ಥಳೀಯರು ವಿಚಾರಿಸಿದಾಗ ನರಸಿಂಹರಾಜಪುರ ಪಟ್ಟಣ ಪಂಚಾಯತ್ ಅಧ್ಯಕ್ಷರ ಮಾತಿನಂತೆ ದುರಸ್ಥಿ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಶಾಲಾ – ಕಾಲೇಜು ಮಕ್ಕಳು, ನೂರಾರು ಜನ ಪ್ರತಿ ನಿತ್ಯ ನಿಲ್ಲುವ ಸ್ಥಳ. ಬೇಕಾಬಿಟ್ಟಿ ದುರಸ್ಥಿ ಮಾಡಿ ಮುಂದೆ ಅನಾಹುತವಾದಲ್ಲಿ ಯಾರು ಹೊಣೆ ಎಂದು ಸ್ಥಳೀಯರು ಬಸ್ ತಂಗುದಾಣದ ದುರಸ್ಥಿಯನ್ನು ನಿಲ್ಲಿಸಿದ್ದಾರೆ.ತರಾತುರಿಯಲ್ಲಿ ಬಸ್ ತಂಗುದಾಣವನ್ನು ದುರಸ್ಥಿ ಮಾಡಲು ಮುಂದಾಗಿರುವ ಅಧ್ಯಕ್ಷರ ನಡೆ ಅನುಮಾನ ಮೂಡಿಸುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಹೊಸ ಬಸ್ ತಂಗುದಾಣವನ್ನು ನಿರ್ಮಾಣ ಮಾಡಿಕೊಂಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

Continue Reading

Chikmagalur

ಮಕ್ಕಳು ಪೋಲಿಯೋ ಸೋಂಕಿಗೆ ಒಳಗಾಗದಂತೆ ಎಚ್ಚರ ಅಗತ್ಯ: ರೇಷ್ಮಾಶೆಟ್ಟಿ

Published

on

ಚಿಕ್ಕಮಗಳೂರು: ತಾಲೂಕಿನಲ್ಲಿ ಒಂದೇ ಒಂದು ಮಗುವೂ ಪೋಲಿಯೋ ಸೋಂಕಿಗೆ ಒಳಗಾಗದಂತೆ ಎಚ್ಚರ ವಹಿಸುವ ಜವಾಬ್ದಾರಿ ನಮ್ಮೆಲ್ಲರದು ತಹಸೀಲ್ದಾರ್ ರೇಷ್ಮಾ ಶೆಟ್ಟಿ ತಿಳಿಸಿದ್ದಾರೆ.

ತಾಲೂಕು ತಹಸೀಲ್ದಾರರ ಕಚೇರಿಯಲ್ಲಿ ಸೋಮವಾರ ನಡೆದ ತಾಲೂಕು ಮಟ್ಟದ ಪಲ್ಸ್ ಪೋಲಿಯೊ ಚಾಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಾಗೆಯೇ ಡಿ.21 ರಂದು ನಡೆಯುವ ಪಲ್ಸ್ ಪೋಲಿಯೊ ಲಸಿಕೆ ಕಾರ್ಯಕ್ರಮದಲ್ಲಿ 0.5 ವರ್ಷದ ಎಲ್ಲಾ ಮಕ್ಕಳಿಗೂ ಹನಿ ಹಾಕಿಸುವುದು ಅಗತ್ಯ ಎಂದು ಹೇಳಿದರು.


ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ತಾಲೂಕು ಆರೋಗ್ಯಾಧಿಕಾರಿ ಡಾ.ಸೀಮಾ ಮಾತನಾಡಿ, 2014 ರಿಂದ ಇದುವರೆಗೆ ರಾಜ್ಯದಲ್ಲಿ ಯಾವುದೇ ಪೋಲಿಯೊ ಪ್ರಕರಣಗಳು ದಾಖಲಾಗಿಲ್ಲ. ಪೋಲಿಯೋ ಎನ್ನುವ ಪಿಡುಗಿನಿಂದ ನಮ್ಮ ದೇಶ ಮುಕ್ತವಾಗಿದ್ದರೂ ಅಕ್ಕಪಕ್ಕದ ದೇಶಗಳಲ್ಲಿ ಅದರ ಅಸ್ತಿತ್ವವಿದ್ದು, ನಾವು ಎಚ್ಚರಿಕೆ ವಹಿಸುವುದು ಅಗತ್ಯ ಎಂದರು.

ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ ಯಶಸ್ವಿಯಾಗಲು ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಜವಾಬ್ದಾರಿಯುತವಾಗಿ ತೊಡಗಿಸಿಕೊಳ್ಳಬೇಕು. ತಾಲೂಕಿನಲ್ಲಿ ವಲಸಿಗರು, ಆದಿವಾಸಿಗಳು, ಅಲೆಮಾರಿಗಳು ವಾಸಿಸುವ ಕಡೆ ಹೆಚ್ಚಿನ ನಿಗಾ ವಹಿಸಿ ಅಭಿಯಾನ ಯಶಸ್ವಿಗೊಳಿಸಬೇಕೆಂದು ಸೂಚಿಸಿದರು.


ಚಿಕ್ಕಮಗಳೂರು ತಾಲೂಕಿನಲ್ಲಿ 21,960 ಮಕ್ಕಳು ಡಿ. 21 ರಿಂದ 24 ರವರೆಗೆ ಪಲ್ಸ್ ಪೋಲಿಯೊ ಲಸಿಕೆ ಅಭಿಯಾನ ನಡೆಯಲಿದ್ದು, ತಾಲೂಕಿನಲ್ಲಿ 0.5 ವರ್ಷದ 21,960 ಮಕ್ಕಳನ್ನು ಗುರುತಿಸಲಾಗಿದೆ. ಒಟ್ಟು 222 ಬೂತ್‌ಗಳನ್ನು ಸ್ಥಾಪಿಸಲಾಗಿದ್ದು, ಒಟ್ಟು 956 ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ಒಟ್ಟು 5 ಸ್ಥಿರ ಬೂತ್‌ಗಳು ಮತ್ತು 24 ಸಂಚಾರಿ ಬೂತ್‌ಗಳನ್ನು ಗುರುತಿಸಲಾಗಿದೆ. ಮೊದಲ ಮೂರು ದಿನಗಳು ತಾಲೂಕಿನ ಗ್ರಾಮಾಂತರ ಭಾಗಗಳಲ್ಲಿ ಆಯೋಜನೆಗೊಂಡಿವೆ. 4ನೇ ದಿನ ನಗರ ಪ್ರದೇಶದಲ್ಲಿ ಮನೆ ಮನೆ ಭೇಟಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ವಿಜಯಕುಮಾರ್ ಮಾತನಾಡಿ, ಪೋಲಿಯೊ ಲಸಿಕಾ ಅಭಿಯಾನ ಯಶಸ್ವಿಯಾಗಲು ತಾಲ್ಲೂಕು ಆಡಳಿತ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದರು.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ (ಗ್ರೇಡ್-1) ರೇವಣ್ಣ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಂಗನಾಥ್, ನಗರಸಭೆಯಿಂದ ಡಾ.ಸುಭಾಷ್, ಆರೋಗ್ಯ ನಿರೀಕ್ಷಕ ರಂಗಪ್ಪ, ರಾಘವೇಂದ್ರ, ಜೆ.ಎನ್.ಬೇಬಿ, ಕಲಾಧರೆ, ಜೀವರಾಜು, ಕ್ರಾಂತಿಕುಮಾರ್, ರುಖಿಯಾ ಅವರಲ್ಲದೆ, ತಾಲ್ಲೂಕು ಹಿಂದುಳಿದ ವರ್ಗಗಳ ಇಲಾಖೆ, ಕ್ಷೇತ್ರ ಶಿಕ್ಷಣ ಇಲಾಖೆ, ಮೆಸ್ಕಾಂ. ಸಾರಿಗೆ ಇಲಾಖೆ, ಪಶು ಸಂಗೋಪನಾ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತಿತರ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.

Continue Reading

Chikmagalur

ಪ್ರೀತಿಸಿ ಮೋಸ: ಯುವಕನ ಮನೆ ಮುಂದೆ ಯುವತಿ ಗಲಾಟೆ

Published

on

ಚಿಕ್ಕಮಗಳೂರು : ನಗರದ ಕಲ್ಯಾಣ ನಗರದಲ್ಲಿ 10 ವರ್ಷದಿಂದ ಪ್ರೀತಿಸಿ ಈಗ ಬೇರೆ ಮದುವೆಗೆ ರೆಡಿಯಾದ ಯುವಕನ  ಮನೆ ಮುಂದೆ ಬಂದು ಯುವತಿ ಗಲಾಟೆ ಮಾಡಿರುವ ಘಟನೆ ನಡೆದಿದೆ.

ಹಾಸನ ಜಿಲ್ಲೆ ಬೇಲೂರು ಮೂಲದ ಯುವತಿ ಅಶ್ವಿನಿ ಎಂಬ ಯುವತಿ ಗಲಾಟೆ ಮಾಡಿದ್ದಾರೆ.

ಕಲ್ಯಾಣ ನಗರದ ಶರತ್ ಎಂಬ ಯುವಕನನ್ನು  ಅಶ್ವಿನಿ ಪ್ರೀತಿಸಿದ್ದರು. ಆಕೆಯಿಂದಲೇ ಯುವಕ 4 ಲಕ್ಷದ 50 ಸಾವಿರ ಪಡೆದುಕೊಂಡಿರೋ ಆರೋಪ ಮಾಡಿದ್ದಾರೆ.

ಶರತ್ ಮದುವೆಯಾಗಿ ಡಿವೋರ್ಸ್ ಆಗಿರೋದನ್ನು ಮುಚ್ಚಿಟ್ಟು ಪ್ರೀತಿಸಿದ್ದರು. ನಾಳೆ ಬೇರೆ ಹುಡುಗಿ ಜೊತೆ ಮದುವೆಯಾಗಲಿದ್ದಾರೆ. ಹಾಗಾಗಿ ಇಂದು ಶರತ್ ಮನೆ ಮುಂದೆ ಬಂದು ಯುವತಿಯಿಂದ ಗಲಾಟೆ ನಡೆಸಿದ್ದಾರೆ.

ಬೇಲೂರಿನ ಯುವತಿ ಮನೆಗೆ ಹೋಗಿ ಆಕೆ ತಾಯಿ ಬಳಿ ನಿಮ್ಮ ಮಗಳನ್ನು ನಾನೇ ಮದುವೆಯಾಗುತ್ತೀನಿ ಎಂದು ತಿಳಿಸಿದ್ದರು.  ಈತ ಮದುವೆಯಾಗುತ್ತೇನೆ ಎಂದು ಆಕೆಗೆ ಬಂದು ಐದು ಸಂಬಂಧಗಳನ್ನು ಬಿಟ್ಟಿದ್ದರು. ಅಶ್ವಿನಿ ತಾಯಿ, ಮೊದಲು ಮದುವೆಯಾಗಿ 2 ತಿಂಗಳಿಗೆ ಡೈವರ್ಸ್ ನೀಡದ್ದಾನೆಂದು ಯುವತಿ‌ ಆರೋಪ ಮಾಡಿದ್ದಾರೆ. ಆದರೆ ಈಗ ನನಗೆ ಮೋಸ ಮಾಡಿದ್ದಾನೆ, ನಾಳೆ ಬೇರೆಯವರಿಗೂ ಮೋಸ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೂ ಯುವತಿ ಆತನ ವಿರುದ್ಧ ಅಟ್ರಾಸಿಟಿ ಸೇರಿದಂತೆ ಮೂರು ಕೇಸ್ ದಾಖಲಿಸಿದ್ದಾರೆ.  ಆದರೆ ಯುವಕ‌ ಶರತ್, ಎಲ್ಲಾ ಕೇಸಿಗೂ ಸ್ಟೇ ತಂದು ಬೇರೆ ಮದುವೆಯಾಗುತ್ತಿದ್ದಾರೆ. ಹೀಗಾಗಿ ಇಂದು ಯುವಕನ ಮನೆ ಮುಂದೆ ಬಂದು ಯುವತಿ ಅಶ್ವಿನಿ ನ್ಯಾಯಕ್ಕಾಗಿ ಗಲಾಟೆ ಮಾಡಿದ್ದಾರೆ.

Continue Reading

Chikmagalur

ಚಿಕ್ಕಮಗಳೂರು :ಅಡಿಕೆ ಮರದಿಂದ ಬಿದ್ದು ವ್ಯಕ್ತಿ ಸಾವು

Published

on

ಚಿಕ್ಕಮಗಳೂರು :ಅಡಿಕೆ ಮರದಿಂದ ಬಿದ್ದು ವ್ಯಕ್ತಿ ಒಬ್ಬರು ಮೃತಪಟ್ಟಿದ್ದಾರೆ.

ಅಡಿಕೆ ಮರದಲ್ಲಿ ಗೊನೆ ಕೊಯ್ಯುವಾಗ ಬಿದ್ದು ಸಾವಪ್ಪಿದ ಘಟನೆ ಕಳಸ ತಾಲೂಕಿನ ಬೂದಿಗುಂಡಿ ಗ್ರಾಮದಲ್ಲಿ ನಡೆದಿದೆ.

ಮಂಜು (35) ಮೃತ ದುರ್ದೈವಿ. ಹಳುವಳ್ಳಿ ಗ್ರಾಮದ ಅಡಿಕೆ ತೋಟಕ್ಕೆ ಕೆಲಸಕ್ಕೆ ಹೋಗಿದ್ದ ಮಂಜು ಮರ ಹತ್ತಿ ಗೊನೆ ಕೊಯ್ಯುವಾಗ ಆಯಾ ತಪ್ಪಿ ಬಿದ್ದು ಸಾವನ್ನಪ್ಪಿದ್ದಾನೆ.

ಕಳಸ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

Trending

error: Content is protected !!