Connect with us

Hassan

ಹೊಸ ಬಸ್ ನಿಲ್ದಾಣ ಪಾರ್ಕಿಂಗ್ ಶುಲ್ಕ ಮೂರು ಪಟ್ಟು ಹೆಚ್ಚಳ,  ಹೋರಾಟದ ಎಚ್ಚರಿಕೆ ನೀಡಿದ ಸಿ.ಡಿ. ಮನುಕುಮಾರ್.

Published

on

ಹಾಸನ: ನಗರದ ಹೊಸ ಬಸ್ ನಿಲ್ದಾಣದ ಪಾರ್ಕಿಂಗ್ ಶುಲ್ಕವನ್ನು ಮೂರರಷ್ಟು ಹೆಚ್ಚು ವಸೂಲಿ ಮಾಡಲಾಗುತ್ತಿದ್ದು, ಇದನ್ನ ಯಾರಾದರೂ ಪ್ರಶ್ನೆ ಮಾಡಿದ್ರೆ ಗುಂಡ ವರ್ತನೆ ಪ್ರದರ್ಶಿಸಿ ಹೆದರಿಸುತ್ತಾರೆ. ಈ ಬಗ್ಗೆ ಕೂಡಲೇ ಸರಿಪಡಿಸದಿದ್ದರೇ ಕರ್ನಾಟಕ ರಕ್ಷಣಾ ವೇದಿಕೆಯಿಂದ ಹೋರಾಟ ಮಾಡಲಾಗುವುದು ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಸಿ.ಡಿ. ಮನುಕುಮಾರ್ ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ನಗರದಲ್ಲಿ ಪಾರ್ಕಿಂಗ್ ಹೆಸರಿನಲ್ಲಿ ಜನರಿಂದ ಹಣ ಲೂಟಿ ಮಾಡಲಾಗುತ್ತಿದ್ದು, ಇದನ್ನ ಪ್ರಶ್ನೆ ಮಾಡಲು ಹೋದರೇ ದೌರ್ಜನ್ಯದ ಆರೋಪ ಮಾಡಲಾಗುತ್ತಿದೆ ಎನ್ನುತ್ತಾರೆ. ಇತ್ತಿಚಿಗೆ ನಗರದ ಹೊಸ ಬಸ್ ನಿಲ್ದಾಣದಲ್ಲಿ ಪಾರ್ಕಿಂಗ್ ಸ್ಥಳದ ಘಟನೆಯಲ್ಲಿ ಅಧಿಕೃತವಾಗಿ ಟೆಂಡರ್ ಗಳೆ ಆಗಿರುವುದಿಲ್ಲ. ಅನಾಧಿಕೃತವಾಗಿ ಪಾರ್ಕಿಂಗ್ ಶುಲ್ಕವನ್ನು ಸಂಗ್ರಹಿಸುತ್ತಿರುತ್ತಾರೆ. ಈ ಬಗ್ಗೆ ಪ್ರಶ್ನೆ ಮಾಡಲು ಹೋದಂತಹ ವೇಳೆ ಪಾರ್ಕಿಂಗ್ ರಶೀದಿ ಕೊಡಿ, ಯಾವ ಟೆಂಡರ್ ಆಗಿದೆ ಎಂದು ಕೇಳುವ ಸಂದರ್ಭದಲ್ಲಿ ಯಾವ ರಶೀದಿ ಕೊಡದೆ ಹಣ ಸಂಗ್ರಹ ಮಾಡುತ್ತಿದ್ದಾರೆ. ಈಬಗ್ಗೆ ಪೊಲೀಸ್ ಇಲಾಖೆಗೆ, ಸಾರಿಗೆ ಇಲಾಖೆ ಡಿಸಿಗೆ ದೂರು ಹೇಳಿದ ವೇಳೆ ಕ್ರಮ ತೆಗೆದುಕೊಳ್ಳುವುದಾಗಿ ಹೇಳುತ್ತಾರೆ. ಇದುವರೆಗೂ ಕಳೆದ ಎರಡು ತಿಂಗಳಿಂದ ಪಾರ್ಕಿಂಗ್ ವಸೂಲಿ ನಡೆಯುತ್ತಿದ್ದು, ಆದರೇ ಕಂಪ್ಯೂಟರ್ ಬಿಲ್ ಮತ್ತು ಯಾವ ರಶೀದಿ ಕೊಡಲಾಗುತ್ತಿಲ್ಲ. ಅನಾಧಿಕೃತವಾಗಿ ದುಡ್ಡು ಕಲೆಕ್ಟ್ ಮಾಡಲಾಗುತ್ತಿದೆ ಎಂದು ದೂರಿದರು. ಈ ಬಗ್ಗೆ ಜಿಲ್ಲಾಡಳಿತ ಮತ್ತು ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳು ಸ್ಪಷ್ಟನೆ ಕೊಟ್ಟು ತಕ್ಷಣ ಈ ಬಗ್ಗೆ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ ಅವರು, ಪಾರ್ಕಿಂಗ್ ಸುಂಕ ವಸೂಲಿ ಮಾಡುವುದಕ್ಕೆ ದುಶ್ಚಟ ಇರುವ ಹುಡುಗರನ್ನು ನೇಮಕ ಮಾಡಿ ಸಾರ್ವಜನಿಕರ ಬಳಿ ಗುಂಡ ವರ್ತನೆ ಮಾಡಲಾಗುತ್ತಿದೆ. ಬಾಯಿಗೆ ಬಂದಾಗೆ ಒಮದಕ್ಕೆ ಮೂರರಷ್ಟು ಸುಂಕ ವಸೂಲಿ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ಯಾರಾದರೂ ಪ್ರಶ್ನೆ ಮಾಡಿದರೇ ಅವರ ಮೇಲೆ ಹಲ್ಲೆ ಮಾಡುವುದು, ಏಕವಚನದಲ್ಲಿ ಮಾತನಾಡಿ ಅವಾಚ್ಯ ಪದಗಳಿಂದ ನಿಂದಿಸುವ ಕೆಲಸ ಮಾಡಲಾಗುತ್ತಿದೆ ಎಂದು ಗಂಬೀರವಾಗಿ ಆರೋಪಿಸಿದರು. ಇದರಿಂದ ಸಾರ್ವಜನಿಕರಿಗೆ ತೀವ್ರತರವಾದ ಕಿರಿಕಿರಿ ಆಗುತ್ತಿದೆ. ನಮ್ಮ ಕರ್ನಾಟಕ ರಕ್ಷಣಾ ವೇದಿಕೆಯಿಂದ ಸಾರಿಗೆ ಇಲಾಖೆ ಡಿಸಿ ಬಳಿ ಹೇಳಿದಾಗ ಸರಿಪಡಿಸುವುದಾಗಿ ಹೇಳಿದ್ದಾರೆ. ಸೋಮವಾರದ ಒಳಗೆ ಪಾರ್ಕಿಂಗ್ ಶುಲ್ಕ ಸರಿಪಡಿಸದಿದ್ದರೇ ಕೆ.ಎಸ್.ಅರ್.ಟಿ.ಸಿ. ಮುಂದೆನೆ ಹೋರಾಟ ಮಾಡಬೇಕಾದ ಅನಿವಾರ್ಯತೆ ಬರುತ್ತದೆ ಎಂದು ಎಚ್ಚರಿಕೆ ಕೊಡುತ್ತಿದ್ದೇವೆ. ಈಗಾಗಲೇ ಪಾರ್ಕಿಂಗ್ ನಲ್ಲೆ ವಾಹನಗಳು ಕಳ್ಳತನವಾಗಿ ಕೇಸು ಕೂಡ ಆಗಿದ್ದು, ಆದರೂ ಸಹ ಇವರ ಮೇಲೆ ಯಾವ ಕ್ರಮಕೈಗೊಂಡಿರುವುದಿಲ್ಲ. ಇಲ್ಲಿ ಪಾರ್ಕಿಂಗ್ ಮಾಡಿದಾಗ ಸಂಪೂರ್ಣ ಜವಬ್ಧಾರಿ ಪಾರ್ಕಿಂಗ್ ಟೆಂಡರ್ ತೆಗೆದುಕೊಂಡವರಿಗೆ ಸೇರುತ್ತದೆ. ಈ ಬಗೆ ಸೂಕ್ತ ಕ್ರ ತೆಗೆದುಕೊಳ್ಳಬೇಕೆಂದು ನಮ್ಮ ಒತ್ತಾಯವಾಗಿದೆ ಎಂದು ಹೇಳಿದರು.

ನಾವು ರಶೀದಿ ಕೊಡಿ ಎಂದು ಕೇಳಲು ಹೋದ ವೇಳೆ ಅಂಗವಿಕಲರು ಎಂದು ತಿಳಿಯಿತು. ಅವರ ಮೇಲೆ ನಮಗೆ ಗೌರವವಿದ್ದು, ಇದನ್ನೆ ಇಟ್ಟುಕೊಂಡು ಪೊಲೀಸರ ಬಳಿ ದೌರ್ಜನ್ಯ ಮಾಡಲು ಬಂದರೆಂದು ಈ ಬಗ್ಗೆ ಪ್ರಶ್ನೆ ಮಾಡಲು ಬಂದವರ ಮೇಲೆ ದೂರು ನೀಡುವ ಕೆಲಸ ಮಾಡಲಾಗುತ್ತಿದೆ ಎಂದು ಬೇಸರವ್ಯಕ್ತಪಡಿಸಿದರು. ಸಾರಿಗೆ ಇಲಾಖೆಗೆ ಈ ಬಗ್ಗೆ ಗಮನಕ್ಕೆ ಬಂದೆ ಇಲ್ಲ ಎಂದಿದ್ದಾರೆ. ಇವೆಲ್ಲಾ ಗಮನಿಸಿದರೇ ಇಲಾಖೆಯೂ ಕೂಡ ಇದರಲ್ಲಿ ಶಾಮೀಲಾಗಿದ್ದಾರಾ ಎನ್ನುವ ಅನುಮಾನವಿದೆ ಎಂದರು. ಒಂದಕ್ಕೆ ಮೂರರಷ್ಟು ಸುಂಕ ಹೆಸರಿನಲ್ಲಿ ಹಣ ವಸೂಲಿ ಮಾಡಿಸುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು. ಇಲ್ಲವಾದರೇ ಕರ್ನಾಟಕ ರಕ್ಷಣಾ ವೇದಿಕೆಯಿಂದ ನಾವೆ ಹೋಗಿ ನಿಲ್ದಾಣದ ಜಾಗದಲ್ಲಿ ನಿಲ್ಲಬೇಕಾಗುತ್ತದೆ ಎಂದು ಮತ್ತೊಮ್ಮೆ ಎಚ್ಚರಿಸಿದರು. ಇದೆ ರೀತಿ ಎಲ್ಲೆಲ್ಲಿ ಇಂತಹ ಪಾರ್ಕಿಂಗ್ ಸ್ಥಳಗಳಿವೆ ಅಲ್ಲಿಯೂ ಕೂಡ ಕಾನೂನು ರೀತಿ ಟೆಂಡರ್ ಪಡೆದು ನಿರ್ವಹಿಸಬೇಕು ಇಲ್ಲವಾದರೇ ನಮ್ಮ ಸಂಘಟನೆಯಿಂದ ಉಗ್ರವಾದ ಹೋರಾಟ ಮಾಡುವುದಾಗಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಉಪಾಧ್ಯಕ್ಷ ಸೀತರಾಮು, ಬೇಲೂರು ತಾಲೂಕು ಅಧ್ಯಕ್ಷ ಚಂದ್ರಶೇಖರ್, ಕಾರ್ಮಿಕ ಘಟಕದ ಅಧ್ಯಕ್ಷ ಬೋರೇಗೌಡ, ಪ್ರಧಾನ ಕಾರ್ಯದರ್ಶಿ ತನಿಗೌಡ, ಯುವ ಘಟಕದ ಆಲ್ವೀನ್ ಇತರರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Hassan

ಆರು ಜನ ನಿವೃತ್ತ ಸರಕಾರಿ ವಾಹನ ಚಾಲಕರಿಗೆ ಸನ್ಮಾನ

Published

on

ಹಾಸನ: ಅನೇಕ ವರ್ಷಗಳ ಕಾಲ ವಿವಿಧ ಇಲಾಖೆಗಳಲ್ಲಿ ಸೇವೆ ಸ್ಲಲ್ಲಿಸಿ ನಿವೃತ್ತಗೊಂಡ ಆರು ಜನ ಸರಕಾರಿ ವಾಹನ ಚಾಲಕರನ್ನು ನಗರದ ಜಿಲ್ಲಾ ಪಂಚಾಯತ್ ಆವರಣದಲ್ಲಿರುವ ಕರ್ನಾಟಕ ರಾಜ್ಯ ಸರಕಾರಿ ವಾಹನ ಚಾಲಕರ ಸಂಘದ ಜಿಲ್ಲಾ ಅಧ್ಯಕ್ಷ ಜೆ. ಶಿವಾನಂದ್ ನೇತೃತ್ವದಲ್ಲಿ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಈ. ಕೃಷ್ಣೇಗೌಡ ಅವರು ಸನ್ಮಾನಿಸಿ ಗೌರವಿಸಲಾಯಿತು.

ಇದೆ ವೇಳೆ ಮಾಧ್ಯಮದೊಂದಿಗೆ ಈ. ಕೃಷ್ಣೇಗೌಡ ಮಾತನಾಡಿ, ಹಾಸನ ಜಿಲ್ಲೆಯಲ್ಲಿ ಒಟ್ಟು ೨೪ ಸಾವಿರ ಜನ ಸರಕಾರಿ ನೌಕರರು ಇದ್ದು, ಇವರಲ್ಲಿ ವಾಹನ ಚಾಲಕರಾಗಿ ೬ ಜನರು ಸುಧೀರ್ಘ ಸೇವೆ ಸಲ್ಲಿಸಿ ನಿವೃತ್ತಗೊಂಡ ಹಿನ್ನಲೆಯಲ್ಲಿ ಅವರಿಗೆ ವಾಹನ ಚಾಲಕರ ಸಂಘದಿಂದ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ತಮ್ಮ ಸೇವಾವಧಿಯಲ್ಲಿ ಸರಕಾರಿ ಅಧಿಕಾರಿಗಳೊಂದಿಗೆ ಕಾರ್ಯ ಧಕ್ಷತೆಯೊಂದಿಗೆ ಕೆಲಸ ಮಾಡಿ ನಿವೃತ್ತಿ ಹೊಂದಿದ್ದಾರೆ. ನಿವೃತ್ತಗೊಂಡ ವಾಹನ ಚಾಲಕರ ಕುಟುಂಬಕ್ಕೆ ದೇವರು ಒಳ್ಳೆಯದನ್ನು

ಮಾಡಲಿ ಎಂದು ಹಾರೈಸಿದರು. ವಾಹನ ಚಾಲಕರ ಕಷ್ಟಗಳಿವೆ ಅದಕ್ಕೆ ಸರಕಾರ ಮತ್ತು ಸರಕಾರಿ ನೌಕರರ ಸಂಘ ಸದಾ ಅವರ ಜೊತೆ ಇರುತ್ತದೆ ಎಂದು ವಿಶ್ವಾಸವ್ಯಕ್ತಪಡಿಸಿದರು. ವಾಹನ ಚಾಲಕರ ಸಂಘಕ್ಕೆ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ನಮ್ಮ ಜಿಲ್ಲಾ ಸರಕಾರಿ ನೌಕರರ ಸಂಘದ ಮಾಧರಿಯಾಗಿ ಸಂಘಟನೆ ಮಾಡಿಕೊಂಡು ಬರುತ್ತಿದೆ. ಯಾವಾಗಲು ನಿಮ್ಮ ಜೊತೆ ಸಂಘ ಇರುವುದಾಗಿ ಹೇಳಿದರು.

ಅಬಕಾರಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದ ರಮೇಶ್, ಕಂದಾಯ ಇಲಾಖೆಯ ಎಂ.ಎನ್. ಬಸಪ್ಪ, ತಾಲೂಕು ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸಿದ ಹೊಳೆನರಸೀಪುರದ ರಂಗನಾಥ್, ಡಿ.ಹೆಚ್.ಓ. ಆರೋಗ್ಯ ನಿರ್ದೇಶಕರ ಚಾಲಕರಾಗಿದ್ದ ದಿಗಂಬರಗೌಡ, ಅರಸೀಕೆರೆ

ಆರೋಗ್ಯ ಇಲಾಖೆಯಲ್ಲಿ ವಾಹ ಚಾಲಕರಾಗಿ ಕರ್ತವ್ಯ ಇಲಾಖೆಯ ಹೆಚ್.ಎಸ್. ಪಂಚಾಕ್ಷರಿ ಈ ಆರು ಜನರು ವಾಹನ ಚಾಲಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಗೊಂಡ ಹಿನ್ನಲೆಯಲ್ಲಿ ಅವರನ್ನು ವಾಹನ ಚಾಲಕರ ಸಂಘದ ಕಛೇರಿಯಲ್ಲಿ ಸನ್ಮಾನಿಸಲಾಯಿತು.

Continue Reading

Hassan

ಹೊಳೆನರಸೀಪುರದಲ್ಲಿ ವಿಧಾನ ಪರಿಷತ್ ಸದಸ್ಯ ಯತಿಂದ್ರ ಸಿದ್ದರಾಮಯ್ಯ

Published

on

ಹೊಳೆನರಸೀಪುದಲ್ಲಿ ಆಯೋಜಿಸಿದ್ದ ನೂತನ ಲೋಕಸಭಾ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಹೇಳಿಕೆ

*ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಲು ವಿರೋಧ ಪಕ್ಷಗಳು ಸತತ ಕುತಂತ್ರ ನಡೆಸುತ್ತಿವೆ*

*ಜಾತಿ ವ್ಯವಸ್ಥೆ ಎಷ್ಟಿದೆ ಎಂದರೆ ಒಬ್ಬ ಹಿಂದುಳಿದ ವರ್ಗದವರು ಎರಡನೇ ಬಾರಿ ಮುಖ್ಯಮಂತ್ರಿ ಆಗುವುದಕ್ಕೆ ಆಗಿಲ್ಲ*

ದೇವರಾಜ ಅರಸು ಅವರನ್ನು ಬಿಟ್ಟರೆ ಎರಡನೇ ಬಾರಿ ಹಿಂದುಳಿದ ವರ್ಗದಿಂದ ಮುಖ್ಯಮಂತ್ರಿ ಆಗಿರುವುದು ಸಿದ್ದರಾಮಯ್ಯ

ಮತ್ತೊಮ್ಮೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲು ನೀವು ಕಾರಣ

*ನೀವು ಒಗ್ಗಟ್ಟಾಗಿ ಅವರ ಹಿಂದೆ ಶಕ್ತಿಯಾಗಿ ನಿಂತಿದ್ದರಿಂದ ಅವರು ಇಷ್ಟೆಲ್ಲಾ ಸವಾಲುಗಳನ್ನು ಎದುರಿಸಿದ್ದಾರೆ*

*ಇಷ್ಟೆಲ್ಲಾ ರಾಜಕೀಯ ವಿರೋಧಗಳಿದ್ದರೂ ಕೂಡ ಅವರ ಮತ್ತೊಮ್ಮೆ ಮುಖ್ಯಮಂತ್ರಿಯಾಗಲು ಸಾಧ್ಯವಾಗಿದೆ*

*ನೀವು ಎಲ್ಲಿಯವರೆಗೆ ರಾಜಕೀಯವಾಗಿ ಅವರ ಹಿಂದೆ ನಿಂತಿರುತ್ತೀರೋ ಅಲ್ಲಿಯವರೆಗೆ ಅವರನ್ನು ರಾಜಕೀಯವಾಗಿ ಅಳಿಯಲು, ಸೋಲಿಸಲು ಆಗುವುದಿಲ್ಲ*

*ಅಧಿಕಾರದಲ್ಲಿದ್ದಾಗ ಅವರಿಗೆ ಪ್ರತಿ ಹೆಜ್ಜೆಯಲ್ಲೂ ಅಗ್ನಿಪರೀಕ್ಷೆ ಇರುತ್ತದೆ*

*ಸಣ್ಣ ತಪ್ಪು ಮಾಡಿದರೂ ಸಹ ಕಾಯುತ್ತಾ ಇರುತ್ತಾರೆ*

*ಸಣ್ಣ ತಪ್ಪು ಮಾಡಿದರೂ ಸಹ ಅದನ್ನು ದೊಡ್ಡದಾಗಿ ಬಿಂಬಿಸಿ ಅವರನ್ನು ಕಾಲೆಳೆಯಲು, ಅಧಿಕಾರದಿಂದ ಕೆಳಗಿಳಿಸಲು ಎಂದು ಕಾಯ್ತಾ ಇರ್ತಾರೆ*

*ಆದರೂ ಸಹ ಮುಖ್ಯಮಂತ್ರಿಯಾಗಿ ಎರಡನೇ ಬಾರಿ ಆಯ್ಕೆ ಆಗಿರುವುದಕ್ಕೆ ನಿಮ್ಮಗಳ ಬೆಂಬಲವೇ ಕಾರಣ*

*ಯಾರೇ ಎಷ್ಟು ಅಪಪ್ರಚಾರ ಮಾಡಿದರು ಸಹ ಅದಕ್ಕೆ ಕಿವಿ ಕೊಡಬೇಡಿ ಅದನ್ನು ನಂಬಬೇಡಿ*

ಆ ವಿಷಯದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ

ನಿಮಗೆ ಗೊತ್ತಿದೆ ಸಿದ್ದರಾಮಯ್ಯ ಅವರು ಯಾವುದೇ ತಪ್ಪು ಮಾಡಿಲ್ಲ ಎಂದು

ಸಿದ್ದರಾಮಯ್ಯ ಅವರು ಸಮಾಜದ ಕಟ್ಟ ಕಡೆಯ, ತುಳಿತಕ್ಕೆ, ಶೋಷಣೆಗೆ ಒಳಗಾದ ವ್ಯಕ್ತಿಗೆ ಬೆಂಬಲ ನೀಡಿಕೊಂಡು ಸುಮಾರು 40 ವರ್ಷಗಳಿಂದ ರಾಜಕೀಯ ಮಾಡುತ್ತಿದ್ದಾರೆ

ಬೇರೆ ಯಾರಾದರೂ ಮುಖ್ಯಮಂತ್ರಿ ಆಗಿದ್ದರೆ

ಇಷ್ಟೊಂದು ಗ್ಯಾರೆಂಟಿ ಯೋಜನೆಗಳಿಗೆ 50 ರಿಂದ 60 ಸಾವಿರ ಕೋಟಿ ವೆಚ್ಚವಾಗುವ ಹಣವನ್ನು ನೇರವಾಗಿ ಜನರ ಕೈಗೆ ತಲುಪಿಸುವಂತಹ ಕೆಲಸವನ್ನು ಮಾಡುತ್ತಿದ್ದರಾ

ಗ್ಯಾರೆಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿ ಕಾರ್ಯಗಳನ್ನು ಕುಂಠಿತವಾಗದಂತೆ ನೋಡಿಕೊಳ್ಳುತ್ತಿದ್ದಾರೆ

ಆರ್ಥಿಕ ಪರಿಸ್ಥಿತಿ ಕುಸಿಯದಂತೆ ನೋಡಿಕೊಳ್ಳುತ್ತಿರುವುದು ಮುಖ್ಯಮಂತ್ರಿಗಳ ಸಾಧನೆಯಾಗಿದೆ

ಚುನಾವಣಾ ಸಮಯದಲ್ಲಿ ಮಾತ್ರ ನಾವು ರಾಜಕೀಯ ಮಾಡಬೇಕು ಪಕ್ಷದ ಪರವಾಗಿ ನಿಲ್ಲಬೇಕು

ಎಲ್ಲರಿಗೂ ಸರಿಯಾದ ನ್ಯಾಯ ಸಿಗುತ್ತಿದೆ ಎಂದರೆ ಅದು ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೊಡುಗೆ

Continue Reading

Hassan

ಪಿಯು ಎಂದರೇ ಪ್ರಧಾನವಾದ ಕಾಲಘಟ್ಟ, ಸಾಧನೆ ಮಾಡಿ – ಹೆಚ್.ಎಲ್. ಮಲ್ಲೇಶ್ ಗೌಡ

Published

on

ಹಾಸನ: ಪಿಯುಸಿ ಹಂತಕ್ಕೆ ಬಂದಿರುವ ವಿದ್ಯಾರ್ಥಿಗಳಿಗೆ ಇದೊಂದು ಪ್ರಧಾನವಾದ ಕಾಲಘಟ್ಟವಾಗಿದ್ದು, ಈ ಹಂತದಲ್ಲಿ ಸಾಧನೆ ಮಾಡಿದರೇ ನಿಮ್ಮ ಪೋಷಕರಿಗೆ ಹಾಗೂ ಶಿಕ್ಷರಿಗೂ ಸೇರಿದಂತೆ ಎಲ್ಲಾರಿಗೂ ಸಂತೋಷ ತರುತ್ತದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಚ್.ಎಲ್. ಮಲ್ಲೇಶ್ ಗೌಡ ತಿಳಿಸಿದರು.

ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಸುಜಲಾ ಪಿಯು ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಅರಿವು ಕಾರ್ಯಕ್ರಮವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಿಂದ ಬರುವ ವಿದ್ಯಾರ್ಥಿಗಳ ಬಗ್ಗೆ ಸುಜಲ ಕಾಲೇಜಿನ ಅಧ್ಯಕ್ಷರಾದ ಲೋಕೇಶ್ ಅವರು ವಿಶೇಷ ಆಸಕ್ತಿಯನ್ನು ಇಟ್ಟುಕೊಂಡು ಸಂಸ್ಥೆಯಲ್ಲಿ ಬೆಳೆಸುವ

ಕೆಲಸವನ್ನು ಮಾಡುತ್ತಿದ್ದಾರೆ. ಈ ಸಂಸ್ಥೆಯಲ್ಲಿ ಕೆಲಸ ಮಾಡುವ ಅನೇಕ ಜನರು ನನ್ನ ಶಿಷ್ಯರು ಹಾಗೂ ಗಂಗೇಗೌಡರ ಶಿಷ್ಯರು ಕೂಡ ಇರುವುದು ನಮಗೆ ಸಂತೋಷ ತಂದಿದೆ. ಇದೊಂದು ಬಹಳ ಪ್ರೀತಿಯ ಶಿಕ್ಷಣ ಸಂಸ್ಥೆ ಎಂದು ಬಣ್ಣಿಸಿದರು. ಪಿಯುಸಿ ಎಂದರೇ ತಮ್ಮೆಲ್ಲಾ ಪ್ರತಿಭೆಯನ್ನು ಹೊರಗೆ ಹಚ್ಚಿ ತಮ್ಮೆಲ್ಲ ಶ್ರಮವನ್ನು ಪರೀಕ್ಷೆಗೆ ಒಳಪಡಿಸಿ ತಮ್ಮ ವ್ಯಕ್ತಿತ್ವವನ್ನು ಅರಳಿಸಿಕೊಳ್ಳುವುದಕ್ಕೆ

ಇದೊಂದು ಪ್ರಧಾನವಾದ ಕಾಲಘಟ್ಟ ಎಂದು ಭಾವಿಸಿದ್ದೇನೆ ಎಂದರು. ಪಿಯುಸಿ ಓದುವಾಗ ಮಕ್ಕಳು ಮಾತ್ರ ಓದುವುದಿಲ್ಲ. ಅವರ ಶಿಕ್ಷಕರು ಕೂಡ ಓದುತ್ತಿರುತ್ತಾರೆ. ಜೊತೆಗೆ ಅವರ ಅಪ್ಪ ಅಮ್ಮಂದಿರು ಕೂಡ ಓದುತ್ತಿರುತ್ತಾರೆ. ನಿಮ್ಮ ಸಾಧನೆ ಒಬ್ಬರಿಗೆ ಮಾತ್ರ ಖುಷಿ ಕೊಡುವಂತದಲ್ಲ. ನಿಮಗೆ ಪಾಠ ಮಾಡಿದ ಶಿಕ್ಷಕರಿಗೆ ಅಪಾರವಾದ ಸಂತೋಷ ತಂದರೇ ಇನ್ನು ನಿಮ್ಮ ತಂದೆ ತಾಯಿಗೆ ಇನ್ನು ಹೆಚ್ಚಿನ ರೀತಿ ಖುಷಿ ಕೊಡಲಿದೆ ಎಂದು ಕಿವಿಮಾತು ಹೇಳಿದರು. ಮಕ್ಕಳು ಏನಾದರೂ ಹೆಚ್ಚಿನ ಅಂಕವನ್ನು ಗಳಿಸಿಬಿಟ್ಟರೇ ಎಲ್ಲಾರಿಗೂ ಈ ವಿಚಾರ ಹೇಳಿಕೊಳ್ಳುವ ಹಂಬಲ ಹೊಂದಿರುತ್ತಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಡಲಾಯಿತು.

ಇದೆ ವೇಳೆ ಸರಕಾರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಗಂಗೇಗೌಡ, ಸುಜಲ ಕಾಲೇಜು ಅಧ್ಯಕ್ಷರಾದ ಲೋಕೇಶ್, ಕಾರ್ಯದರ್ಶಿ ಶ್ವೇತಾ ಲೋಕೇಶ್, ಪ್ರಾಂಶುಪಾಲರಾದ ನಾಗೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.

Continue Reading

Trending

error: Content is protected !!