Connect with us

Uncategorized

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯ ಸಮಾವೇಶದ ಜೊತೆಯಲ್ಲಿ ಕೇಂದ್ರ ಸರ್ಕಾರ ದ ಮೋದಿ ಗ್ಯಾರಂಟಿಯ ಪುಕ್ಕಟ್ಟೆ ಪ್ರಚಾರ

Published

on

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯ ಸಮಾವೇಶದ ಜೊತೆಯಲ್ಲಿ ಕೇಂದ್ರ ಸರ್ಕಾರ ದ ಮೋದಿ ಗ್ಯಾರಂಟಿಯ ಪುಕ್ಕಟ್ಟೆ ಪ್ರಚಾರ.
ಇಂದು ಚಾಮರಾಜನಗರ ಜಿಲ್ಲೆ ಯಲ್ಲಿ ರಾಜ್ಯ ಸರ್ಕಾರ ದ 5 ಗ್ಯಾರಂಟಿ ಗಳ ಯೋಜನೆ ಯಶಸ್ವಿಯಾದ ಹಿನ್ನೆಲೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ನವರು ಜಿಲ್ಲೆ ಗೆ ಆಗಮನ.
ಸಮಾವೇಶ ಕ್ಕೆ ಜಿಲ್ಲೆ ಯ ಪ್ರತಿ ಗ್ರಾಮ ಪಂಚಾಯತಿ ಯಿಂದ ತಲಾ 2 ಬಸ್ ಗಳನ್ನು
ನಿಯೋಜಿಸಲಾಗಿದೆ.
ಆದರೆ ಗ್ಯಾರಂಟಿ ಯೋಜನೆ ಸಮಾವೇಶ ಮತ್ತು ಸವಲತ್ತು ವಿತರಣ ಕ್ಕೆ ನಿಯೋಜಿಸಿರುವ ಬಸ್ ನಲ್ಲಿ ಕೇಂದ್ರ ಸರ್ಕಾರ ದ ಮೋದಿ ಸರ್ಕಾರ ದ ಗ್ಯಾರಂಟಿ ಎಲ್ಲರಿಗೂ ಭದ್ರತೆ ಎಂಬ ಸ್ಟಿಕರ್ ಇರುವ ಬಸ್ ನಲ್ಲಿ ಸಮಾವೇಶ ಕ್ಕೆ ಫಲಾನುಭವಿಗಳನ್ನು ಕರದೊಯಿತ್ತಿರುವುದು ನಗೆ ಪಾಟಲಿಗೆ ಗುರಿಯಾಗಿದೆ.

ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳ ಸಮಾವೇಶಕ್ಕೆ ಮಹಿಳೆಯರು ತೆರಳುವ ಕೆ ಎಸ್ ಆರ್ ಟಿ ಸಿ ಬಸ್ ನಲ್ಲಿ ಕೇಂದ್ರ ಸರಕಾರದ ಮೋದಿ ಗ್ಯಾರಂಟಿ ಜಾಹೀರಾತು.

ಏನೇ ಮಾಡಲಿ ಜನರಿಗೆ ಒಳ್ಳೆಯದು ಮಾಡುತ್ತಿರುವ ರಾಜ್ಯ ಸರಕಾರಕ್ಕೆ ಮತ್ತು ಕೇಂದ್ರ ಸರಕಾರಕ್ಕೆ ಅಭಿನಂದನೆಗಳು. ಈ ಎಲ್ಲಾ ಬೆಳವಣಿಗೆ ಲೋಕಸಭಾ ಚುನಾವಣಾ ಕಾರಣ.

Continue Reading
Click to comment

Leave a Reply

Your email address will not be published. Required fields are marked *

Uncategorized

ಅನಾಥ ಮಕ್ಕಳಿಗೆ ಅನ್ನದಾನ ಮಾಡುವ ಮೂಲಕ ವಾರ್ಷಿಕೋತ್ಸವ ಆಚರಿಸಿದ ಕರ್ನಾಟಕ ಭೀಮ ಸೇನೆ

Published

on

ನಂಜನಗೂಡು ಮೇ.22

ಅನಾಥ ಮಕ್ಕಳಿಗೆ ಅನ್ನದಾನ ಮಾಡುವ ಮೂಲಕ ವಿನೂತನವಾಗಿ ಕರ್ನಾಟಕ ಭೀಮ ಸೇನೆ ಎರಡನೇ ವರ್ಷದ ವಾರ್ಷಿಕೋತ್ಸವವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಿದ್ದಾರೆ.
ಮೈಸೂರಿನ ವಿಜಯನಗರದ ಸವಿ ನೆನಪು ಫೌಂಡೇಷನ್ ಸೇವಾಶ್ರಮದಲ್ಲಿ ಕರ್ನಾಟಕ ಭೀಮ ಸೇನೆಯ ಎರಡನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಮೈಸೂರು ಜಿಲ್ಲಾ ಘಟಕದ ವತಿಯಿಂದ ಸುಮಾರು 50ಕ್ಕೂ ಹೆಚ್ಚು ಅನಾಥ ಮಕ್ಕಳಿಗೆ ಒಂದು ದಿನದ ಅನ್ನದಾನ ಮಾಡುವ ಮೂಲಕ ಮೂರನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.
ಅನಾಥ ಮಕ್ಕಳೊಂದಿಗೆ ಕರ್ನಾಟಕ ಭೀಮ ಸೇನೆಯ ಪದಾಧಿಕಾರಿಗಳು ಕೇಕ್ ಕತ್ತರಿಸಿ ಮಕ್ಕಳಿಗೆ ಕೇಕ್ ಕಟ್ ಮಾಡಿ ತಿನ್ನಿಸಿ, ಊಟ ಬಡಿಸಿ ಸಂಭ್ರಮಾಚರಣೆ ಮಾಡಿದ್ದಾರೆ.
ಬಳಿಕ ಕರ್ನಾಟಕ ಭೀಮ ಸೇನೆಯ ಜಿಲ್ಲಾಧ್ಯಕ್ಷ ಸರ್ವೇಶ್ ಮಾತನಾಡಿ, ರಾಜ್ಯಾದ್ಯಂತ ಸಂಘಟನೆಯು ಬಲಿಷ್ಠವಾಗಿ ಬೆಳೆಯುತ್ತಿದೆ. ಏಕಕಾಲದಲ್ಲಿ ಕಾರ್ಯಕ್ರಮ ನಡೆಸಲು ಎರಡನೇ ವರ್ಷದ ಸಂಭ್ರಮಾಚರಣೆಯನ್ನು ಅನಾಥ ಮಕ್ಕಳಿಗೆ ಒಂದು ದಿನದ ಅನ್ನದಾನ ಮಾಡಲು ಸಂಘಟನೆಯು ತೀರ್ಮಾನ ಮಾಡಲಾಗಿತ್ತು. ಅದರಂತೆ ಇಂದು ಮಕ್ಕಳಿಗೆ ಅನ್ನದಾನ ಮಾಡಿದ್ದೇವೆ. ಸರ್ಕಾರಿ ಆಸ್ಪತ್ರೆಗಳಲ್ಲಿರುವ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ, ಆರೋಗ್ಯ ತಪಾಸಣೆ, ರಕ್ತದಾನ ಶಿಬಿರವನ್ನು ಮಾಡಲಾಗುತ್ತಿದೆ.
ಮುಂದಿನ ದಿನಗಳಲ್ಲಿ ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಮತ್ತು ಕೆ.ಶಿವರಾಂ ರವರ ನೆನಪಿನಾರ್ಥವಾಗಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲು ತೀರ್ಮಾನ ಮಾಡಿದ್ದೇವೆ. ಅಂಬೇಡ್ಕರ್ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ನಾವು ಸಂಘಟನೆಯನ್ನು ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಗೌರವಾಧ್ಯಕ್ಷ ಮಾದೇಶ್, ಮೈಸೂರು ತಾಲ್ಲೂಕು ಗೌರವಾಧ್ಯಕ್ಷ ವೈರಮುಡಿ, ಮೈಸೂರು ತಾಲ್ಲೂಕು ಅಧ್ಯಕ್ಷ ಮಲ್ಲೇಶ್, ಜಿಲ್ಲಾ ಕಾರ್ಯದರ್ಶಿ ಬಾಲರಾಜು, ನಗರ ಸಂಘಟನಾ ಕಾರ್ಯದರ್ಶಿ ರವಿಚಂದ್ರ, ನಂಜನಗೂಡು ತಾಲ್ಲೂಕು ಅಧ್ಯಕ್ಷ ಬಾಣೂರು ಶಿವಸ್ವಾಮಿ, ಹುಣಸೂರು ತಾಲ್ಲೂಕು ಅಧ್ಯಕ್ಷ ಶಿವು, ನಂಜನಗೂಡು ತಾಲ್ಲೂಕು ಗೌರವಾಧ್ಯಕ್ಷರಾದ ಎಚ್.ಡಿ ಶಂಭಯ್ಯ, ರವಿಚಂದ್ರ ಪ್ರಕಾಶ್ ಪುಟ್ಟಸ್ವಾಮಿ ಸೇರಿದಂತೆ ಹಲವರು ಭಾಗವಹಿಸಿದ್ದರು.

ನಂಜನಗೂಡು ಮಹದೇವಸ್ವಾಮಿ ಪಟೇಲ್.

Continue Reading

Uncategorized

ನನಗೆ ನ್ಯಾಯಾಲಯದ ಬಗ್ಗೆ ಗೌರವವಿದೆ – ಮಾಜಿಸಚಿವ ಎಚ್.ಡಿ.ರೇವಣ್ಣ

Published

on

ಹಾಸನ : ಹಾಸನ ಜಿಲ್ಲೆ, ಹೊಳೆನರಸೀಪುರದಲ್ಲಿ ಮಾಜಿಸಚಿವ ಎಚ್.ಡಿ.ರೇವಣ್ಣ ಹೇಳಿಕೆ

ನ್ಯಾಯಾಲಯದಲ್ಲಿ ಪ್ರಕರಣ ಇರುವಾಗ ನಾನು ಯಾವುದೇ ಪ್ರತಿಕ್ರಿಯೆ ಕೊಡಲ್ಲ

ನನಗೆ ನ್ಯಾಯಾಲಯದ ಬಗ್ಗೆ ಗೌರವವಿದೆ

ನಾನು ದೇವರ ಮೇಲೆ ನಂಬಿಕೆ ಇಟ್ಟಿರುವವನು

ರಾಜ್ಯದ, ಜಿಲ್ಲೆಯ ಹಾಗೂ ಹೊಳೆನರಸೀಪುರದ‌ ದೇವೇಗೌಡರನ್ನು ಅರವತ್ತು ವರ್ಷದಿಂದ ರಾಜಕೀಯ ಶಕ್ತಿ ಕೊಟ್ಟಿದ್ದಾರೆ

ಕುಮಾರಸ್ವಾಮಿ, ನನಗೆ ಶಕ್ತಿ ಕೊಟ್ಟಿದ್ದಾರೆ

ಇಪ್ಪತ್ತೈದು ವರ್ಷ ಶಾಸಕನಾಗಿ ಕೆಲಸ ಮಾಡಿದ್ದೇನೆ

ಹೊಳೆನರಸೀಪುರ ತಾಲ್ಲೂಕು ಜನರು, ಜಿಲ್ಲೆಯ ಜನರ ಜೊತೆ ನಾನು ಬದುಕಿರುವವರೆ ನಿಮ್ಮ ಜೊತೆ ನಾನು ದೇವೇಗೌಡರು, ಕುಮಾರಸ್ವಾಮಿ ನಮ್ಮ ಕುಟುಂಬ ಇರುತ್ತದೆ

ಯಾರು ದೃತಿಗೆಡಬೇಕಾದ ಪ್ರಮೇಯವಿಲ್ಲ

ಜಿಲ್ಲೆಯ ಜನ ನನಗೆ ಸಹಕಾರ ಕೊಟ್ಟಿದ್ದಾರೆ, ಆ ಸಹಕಾರಕ್ಕೆ ನಾನು ಋಣಿಯಾಗಿರುತ್ತೇನೆ

ನಮ್ಮ ಕಾರ್ಯಕರ್ತರ ಸಂಕಷ್ಟಕ್ಕೆ ಇರ್ತಿನಿ

ಹೊಳೆನರಸೀಪುರದ ಶ್ರೀ ಆಂಜನೇಯಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ ಮಾಜಿಸಚಿವ ಎಚ್.ಡಿ.ರೇವಣ್ಣ

ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಎಚ್.ಡಿ.ರೇವಣ್ಣ

ಕುಟುಂಬಸ್ಥರ ಹೆಸರಿನಲ್ಲಿ ಅರ್ಚನೆ ಮಾಡಿಸಿದ ಎಚ್‌ಡಿಆರ್

ಪ್ರಜ್ವಲ್‌ರೇವಣ್ಣ ಹೆಸರಲ್ಲೂ ಅರ್ಚನೆ ಮಾಡಿಸಿದ ಎಚ್.ಡಿ.ರೇವಣ್ಣ

Continue Reading

Uncategorized

ಬೆಳ್ತಂಗಡಿ: ‘ಪೊಲೀಸ್ ಠಾಣೆ ನಿಮ್ಮ‌ ಅಪ್ಪಂದಾ’ ಪಿಎಸ್ಐಗೇ ಧಮ್ಕಿ ಹಾಕಿದ ಶಾಸಕ ಹರೀಶ್ ಪೂಂಜ – ಎಫ್ಐಆರ್ ದಾಖಲು

Published

on

ಮಂಗಳೂರು: ತನ್ನ ಬೆಂಬಲಿಗರ ಪೊಲೀಸ್ ಠಾಣೆಯಲ್ಲಿ ಧರಣಿ ನಡೆಸಿದ್ದಲ್ಲದೆ, ಠಾಣೆ ಏನು ನಿಮ್ಮ ಅಪ್ಪಂದಾ ಎಂದು ಪೊಲೀಸರಿಗೇ ಧಮ್ಕಿ ಹಾಕಿರುವ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜ ಮೇಲೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ.

ಬೆಳ್ತಂಗಡಿಯ ಮೆಲಂತಬೆಟ್ಟುವಿನಲ್ಲಿ ಕಾರ್ಯಾಚರಿಸುತ್ತಿದ್ದ ಅಕ್ರಮ ಕಲ್ಲುಕ್ವಾರೆಗೆ ತಹಶೀಲ್ದಾರ್ ಹಾಗೂ ಪೊಲೀಸರು ಜಂಟಿಯಾಗಿ ದಾಳಿ ನಡೆಸಿದ್ದರು‌. ಈ ವೇಳೆ ಕಲ್ಲುಕ್ವಾರೆ ನಡೆಸುತ್ತಿದ್ದ ಶಾಸಕ ಹರೀಶ್ ಪೂಂಜ ಆಪ್ತ, ಬೆಳ್ತಂಗಡಿ ತಾಲೂಕು ಯುವಮೋರ್ಚ ಅಧ್ಯಕ್ಷ ಶಶಿರಾಜ್ ಶೆಟ್ಟಿ ಹಾಗೂ ಮತ್ತಿತರರನ್ನು ಪೊಲೀಸರು ಶನಿವಾರ ಬಂಧಿಸಿದ್ದರು‌‌. ಈ ಬಂಧನವನ್ನು ವಿರೋಧಿಸಿ ಬೆಳ್ತಂಗಡಿ ಠಾಣೆಯೆದುರು ಶಾಸಕ ಹರೀಶ್ ಪೂಂಜ ಹಾಗೂ ಬೆಂಬಲಿಗರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಪೊಲೀಸರ ವಿರುದ್ಧ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು‌. ಅಲ್ಲದೆ ಬೆಳ್ತಂಗಡಿ ಪಿಎಸ್ಐ ಮುರುಳಿಧರ್ ನಾಯ್ಕ್ ಅವರಿಗೆ ಶಾಸಕ ಹರೀಶ್ ಪೂಂಜ ಅವರು ಬೆದರಿಕೆ ಹಾಕಿದ್ದರು‌. ಈ ಹಿನ್ನೆಲೆಯಲ್ಲಿ ಶಾಸಕರ ವಿರುದ್ಧ ಪ್ರಕರಣ ದಾಖಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕಲ್ಲುಕೋರೆ ಮಾಲಕ ಪ್ರಮೋದ್ ದಿಡುಪೆ ತಲೆಮರೆಸಿಕೊಂಡಿದ್ದಾನೆ. ಆತನ ಬಂಧಿಸಲು ಪೊಲೀಸರ ಹುಡುಕಾಟ ನಡೆಸುತ್ತಿದ್ದಾರೆ.

Continue Reading

Trending

error: Content is protected !!