Hassan
ಮನೆಗಳ್ಳನ ಬಂಧನ : 140 ಗ್ರಾಂ.ಚಿನ್ನ ವಶ
ಅರೇಹಳ್ಳಿ: ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ನಡೆದ ಕೆಲವೇ ದಿನಗಳಲ್ಲಿ ಆಭರಣ ಸಮೇತ ಆರೋಪಿಯನ್ನು ಬಂಧಿಸುವಲ್ಲಿ ಅರೇಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೇಲೂರು ತಾಲೂಕು ಸ್ಕೂಲ್‌ಗರ್ಜೆ ಗ್ರಾಮದ ಯೋಗೇಶ(24) ಬಂಧಿತ ಆರೋಪಿ. ಈತನಿಂದ ಅಂದಾಜು 20 ಲಕ್ಷ ರೂ. ಮೌಲ್ಯದ 140 ಗ್ರಾಂ. ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

ಘಟನೆ ಹಿನ್ನೆಲೆ ಏನು?
ಸಮೀಪದ ನಾಗೇನಹಳ್ಳಿ ಗ್ರಾಮದ ಹನುಮೇಗೌಡ ಎಂಬುವರ ಮನೆಯಲ್ಲಿ ಕಳೆದ ಜನವರಿ 23ರಂದು ಬರೋಬ್ಬರಿ 140 ಗ್ರಾಂ. ತೂಕದ ಚಿನ್ನದ ವಡನೆಗಳನ್ನು ಆರೋಪಿ ಕಳ್ಳತನ ಮಾಡಿದ್ದ.
ಪತ್ತೆಗಾಗಿ ಎಸ್‌ಪಿ ಶುಭಾನ್ವಿತಾ ಅವರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಎಂ.ಕೆ.ತಮ್ಮಯ್ಯ ಹಾಗೂ ಶ್ರೀನಿಧಿ ಅವರ ಮಾರ್ಗದರ್ಶನದಲ್ಲಿ ಅರಸೀಕೆರೆ ಉಪ ವಿಭಾಗದ ಡಿವೈಎಸ್‌ಪಿ ಬಿ.ಆರ್.ಗೋಪಿ, ಹಳೇಬೀಡು ವೃತ್ತಿ ನಿರೀಕ್ಷಿಕ ಜಗದೀಶ್ ಬಿ.ಆರ್. ಅವರ ನೇತೃತ್ವದಲ್ಲಿ ತನಿಖಾ ತಂಡ ರಚನೆ ಮಾಡಿದ್ದರು.

ತಂಡದಲ್ಲಿ ಅರೇಹಳ್ಳಿ ಪಿಎಸ್‌ಐ ಶೋಭಾ, ಸಿಬ್ಬಂದಿಗಳಾದ ಪೃಥ್ವಿ , ಸುಪ್ರೀತ್, ಹೇಮಕಾಂತ್, ಫಕೃದ್ದೀನ್, ಸಮೀನಾ ತಾಜ್ ಇದ್ದರು.
ಈ ತಂಡವು ಕಳ್ಳತನ ನಡೆದ ಎರಡು ವಾರಗಳ ಅಂತರದಲ್ಲಿ ಆರೋಪಿ ಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಆತನಿಂದ 140 ಗ್ರಾಂ. ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

ಬೆಂಗಳೂರಿನಲ್ಲಿ ಕೆಲ ವರ್ಷ ಬೇಕರಿ ಕೆಲಸ ಮಾಡಿಕೊಂಡಿದ್ದ ಖದೀಮ, ಅದಾದ ಬಳಿಕ ಕಾರು ಚಾಲಕನಾಗಿದ್ದ. ಈಗ್ಗೆ ಆರು ತಿಂಗಳ ಹಿಂದೆ ಊರಿಗೆ ಬಂದವನೇ ಕಳ್ಳತನದ ಕಸುಬಿಗೆ ಇಳಿದಿದ್ದ. ಈ ಹಿಂದೆಯೂ ಒಂದು ಕಳ್ಳತನ ಪ್ರಕರಣದಲ್ಲಿ ಈತ ಭಾಗಿಯಾಗಿದ್ದ.
ಅಚ್ಚರಿ ಎಂದರೆ ಈತ ಜ.23 ರಂದು ಕಳವು ಮಾಡಿದ್ದ ಚಿನ್ನಾಭರಣಗಳನ್ನು ಮನೆಯಲ್ಲೇ ಇಟ್ಟಿದ್ದ ಎನ್ನಲಾಗಿದೆ. ಇದೀಗ ಮನೆಗಳ್ಳ ಖಾಕಿ ಕೈಗೆ ಸಿಕ್ಕಿ ಬಿದ್ದಿದ್ದಾನೆ. ತನಿಖಾ ತಂಡದ ಯಶಸ್ವಿ ಕಾರ್ಯಕ್ಕೆ ಎಸ್ಪಿ ಅವರು ಪ್ರಸಂಶೆ ವ್ಯಕ್ತಪಡಿಸಿದ್ದಾರೆ.
Hassan
ಮಾವಿನಕೆರೆಯಲ್ಲಿ ಚೆನ್ನಮ್ಮ ಪುಣ್ಯಸ್ಮರಣೆ ಸಿದ್ಧತೆ ಪರಿಶೀಲಿಸಿದ ಕುಮಾರಸ್ವಾಮಿ
ಹಾಸನ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಪತ್ನಿ ದಿವಂಗತ ಚೆನ್ನಮ್ಮ ಅವರ 11ನೇ ದಿನದ ಪುಣ್ಯಸ್ಮರಣೆ ಕಾರ್ಯಕ್ರಮದ ಸಿದ್ಧತೆಗಳನ್ನು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಇಂದು ಸಂಜೆ ಪರಿಶೀಲಿಸಿದರು.
ಜುಲೈ. 30ರಂದು ಹೊಳೆನರಸೀಪುರ ತಾಲ್ಲೂಕಿನ ಮಾವಿನಕೆರೆ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಲಿದ್ದು, ರಾಜ್ಯದ ವಿವಿಧ ಭಾಗಗಳಿಂದ ರಾಜಕೀಯ ಮುಖಂಡರು, ಗಣ್ಯರು ಹಾಗೂ ಅಪಾರ ಸಂಖ್ಯೆಯ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆಯಿದೆ.

ಈ ಹಿನ್ನೆಲೆಯಲ್ಲಿ ಕಾರ್ಯಕ್ರಮ ನಡೆಯಲಿರುವ ಸ್ಥಳಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ ಅವರು ವೇದಿಕೆ ನಿರ್ಮಾಣ, ಆಸನ ವ್ಯವಸ್ಥೆ, ವಾಹನ ನಿಲುಗಡೆ, ಕುಡಿಯುವ ನೀರು, ಭದ್ರತೆ ಹಾಗೂ ಸಾರ್ವಜನಿಕರಿಗೆ ಕಲ್ಪಿಸಲಾಗುತ್ತಿರುವ ಮೂಲಸೌಲಭ್ಯಗಳ ಕುರಿತು ಅಧಿಕಾರಿಗಳು ಮತ್ತು ಪಕ್ಷದ ಮುಖಂಡರಿಂದ ಮಾಹಿತಿ ಪಡೆದು ಅಗತ್ಯ ಸೂಚನೆಗಳನ್ನು ನೀಡಿದರು.
ಕಾರ್ಯಕ್ರಮವು ಯಾವುದೇ ಅಡಚಣೆಯಿಲ್ಲದೆ ಸುಸೂತ್ರವಾಗಿ ನಡೆಯುವಂತೆ ಎಲ್ಲ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಲು ಸಂಬಂಧಿಸಿದವರಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಎಚ್.ಡಿ. ರೇವಣ್ಣ ಸೇರಿದಂತೆ ಪಕ್ಷದ ಮುಖಂಡರು ಮತ್ತು ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.
Hassan
ಕೇಂದ್ರ ಸರ್ಕಾರದ ವಿರುದ್ಧ ಸಂಸದ ಶ್ರೇಯಸ್ ಪಟೇಲ್ ಆಕ್ರೋಶ
ಹಾಸನ: ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು ರಸ್ತೆ ಬದಿಯಲ್ಲೇ ಊಟ ಮಾಡಿ ನರಕಯಾತನೆ ಅನುಭವಿಸುತ್ತಿದ್ದರೂ ಕೇಂದ್ರ ಸರ್ಕಾರದ “ದಪ್ಪ ಚರ್ಮದ” ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹಾಸನ ಸಂಸದ ಶ್ರೇಯಸ್ ಪಟೇಲ್ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.

ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಹಿಳಾ ಸಂಸದರು ಎನ್ನುವುದನ್ನು ಕೂಡ ಗಮನಿಸದೆ ಪೊಲೀಸರು ನಮ್ಮನ್ನು ಕೀಳಾಗಿ ನಡೆಸಿ ಸ್ಟೇಡಿಯಂನಲ್ಲಿ ಕೂಡಿಹಾಕಿದ್ದರು ಎಂದು ಆರೋಪಿಸಿದರು. ‘ಅಚ್ಛೇ ದಿನ್’ ಬರುತ್ತದೆ ಎಂದಿದ್ದವರು ಇಂದು ವಿದ್ಯಾರ್ಥಿಗಳನ್ನು ಬೀದಿಪಾಲು ಮಾಡಿದ್ದಾರೆ. ಆತ್ಮಗೌರವವಿದ್ದರೆ ಕೇಂದ್ರ ಸಚಿವರು ಕೂಡಲೇ ರಾಜೀನಾಮೆ ನೀಡಿ ಜನರ ಮುಂದೆ ಬರಲಿ ಎಂದು ಸವಾಲುಹಾಕಿದರು. ದೇಶಕ್ಕೆ ರಾಹುಲ್ ಗಾಂಧಿ ಅವರ ನೇತೃತ್ವದ ಅಗತ್ಯವಿದ್ದು, ವಿದ್ಯಾರ್ಥಿಗಳ ಪರವಾಗಿ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ತಿಳಿಸಿದರು.
Hassan
ಆಗಸ್ಟ್ 18ರೊಳಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಆಯ್ಕೆ; ಕೇಂದ್ರ ಸಚಿವರ ರಾಜೀನಾಮೆಗೆ ಸಂಸದೆ ಸುಧಾ ಆಗ್ರಹ
ಹಾಸನ: ಕಾಂಗ್ರೆಸ್ ಸಂಘಟನ ಸೃಜನ ಅಭಿಯಾನದಡಿ ಹಾಸನದಲ್ಲಿ ಜಿಲ್ಲಾಧ್ಯಕ್ಷರ ಆಯ್ಕೆಗಾಗಿ ಸಭೆ ನಡೆಸಲಾಗಿದ್ದು, ಆಸಕ್ತರು ಯಾರು ಬೇಕಾದರೂ ಚುನಾವಣೆಯಲ್ಲಿ ಸ್ಪರ್ಧಿಸಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ಆಗಸ್ಟ್ 18ರೊಳಗೆ ಹೈಕಮಾಂಡ್‌ಗೆ ಸಲ್ಲಿಸಲಾಗುವುದು ಎಂದು ಎಐಸಿಸಿ ವೀಕ್ಷಕಿ ಹಾಗೂ ಸಂಸದೆ ಸುಧಾ ತಿಳಿಸಿದ್ದಾರೆ.

ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಅತ್ಯಂತ ಕ್ಷಮಿಸಲಾರ ಅಪರಾಧವಾಗಿದ್ದು, ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡಲಾಗಿದೆ. ಇದರ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕೂಡಲೇ ರಾಜೀನಾಮೆ ನೀಡಬೇಕು ಹಾಗೂ ಪ್ರಧಾನಿ ಮೋದಿ ಮೌನ ಮುರಿಯಬೇಕು ಎಂದು ಆಗ್ರಹಿಸಿದರು. ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಪೊಲೀಸರು ದೌರ್ಜನ್ಯ ಎಸಗಿರುವುದನ್ನು ಅವರು ತೀವ್ರವಾಗಿ ಖಂಡಿಸಿದರು.
-
Politics8 hours agoಪ್ರಜ್ವಲ್ ರೇವಣ್ಣ ವಿಡಿಯೋ ಹಂಚಿಕೆ ಪ್ರಕರಣ: ಆರೋಪಿಗಳ ವಿರುದ್ಧ ಕೋರ್ಟ್ ಕ್ರಮ, 8 ಮಂದಿಗೆ ಸಮನ್ಸ್
-
National10 hours agoಕೇಂದ್ರದ ಭರವಸೆ ಬಳಿಕ NEET ಪ್ರತಿಭಟನೆ ವಾಪಸ್: ಸುದ್ದಿಗೋಷ್ಠಿಯಲ್ಲಿ CJP ಘೋಷಣೆ
-
National11 hours agoಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಪ್ರಧಾನ್ ರಾಜೀನಾಮೆ ದೊಡ್ಡ ಹೆಜ್ಜೆ: ರಾಹುಲ್ ಗಾಂಧಿ
-
National13 hours agoನೀಟ್ ಪ್ರತಿಭಟನೆಗೆ ಬಿಗ್ ವಿನ್: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ
-
Chikmagalur20 hours agoಮುಸ್ಲಿಂ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ – ಸಿ.ಟಿ. ರವಿ ವಿರುದ್ಧ ಎಸ್ಡಿಪಿಐ ದೂರು
-
Politics11 hours agoಧರ್ಮೇಂದ್ರ ಪ್ರಧಾನ್ ರಾಜೀನಾಮೆ| ವಿದ್ಯಾರ್ಥಿ-ಯುವಜನರ ಗೆಲುವು: ಸಿದ್ದರಾಮಯ್ಯ
-
National12 hours agoವಿದ್ಯಾರ್ಥಿಗಳ ಹೋರಾಟಕ್ಕೆ ಜಯ? ಧರ್ಮೇಂದ್ರ ಪ್ರಧಾನ್ ರಾಜೀನಾಮೆ, ಸಿಜೆಪಿ ಸಂಭ್ರಮ
-
Politics9 hours agoNEET ವಿವಾದ: ಧರ್ಮೇಂದ್ರ ಪ್ರಧಾನ್ ಪರ ಬ್ಯಾಟ್ ಬೀಸಿದ ವಿಜಯೇಂದ್ರ
