Mandya
₹2.76 ಕೋಟಿ ಉಳಿತಾಯ ಆಯವ್ಯಯ ಬಜೆಟ್ ಮಂಡನೆ
ಮಂಡ್ಯ: ನಗರಸಭೆಯ 2024–25ನೇ ಸಾಲಿನ ₹2.76 ಕೋಟಿ ಉಳಿತಾಯ ಆಯವ್ಯಯವನ್ನು ನಗರಸಭೆಯ ಆಡಳಿತಾಧಿಕಾರಿ ಮತ್ತು ಜಿಲ್ಲಾಧಿಕಾರಿ ಕುಮಾರ್ ಮಂಡಿಸಿದರು.
ನಗರಸಭೆಯ ಧರಣಪ್ಪ ಸಭಾಂಗಣದಲ್ಲಿ ಸೋಮವಾರ 2024–25ನೇ ಸಾಲಿನ ಅಂದಾಜು ಆಯ–ವ್ಯಯ ಮಂಡಿಸಿ, 101,55,55,037 ರೂಗಳಲ್ಲಿ ಹಿಂದಿನ ಸಾಲಿನ ಮುಂದುವರಿದ ಕಾಮಗಾರಿಯೂ ಸೇರಿದಂತೆ ಪ್ರಸಕ್ತ ಸಾಲಿನ ನೌಕರರ ವೇತನ ನಿರ್ವಹಣಾ ವೆಚ್ಚ ಮತ್ತು ಬಂಡವಾಳ ಕಾಮಗಾರಿಗಳ ₹98,78,79 ಅಂದಾಜು ವೆಚ್ಚ ಮಾಡುವ ನಿರೀಕ್ಷೆಯೊಂದಿಗೆ ₹2,76,76,37 ಉಳಿತಾಯ ಬಜೆಟ್ ಪ್ರಕಟಿಸಿದರು.
ಆರಂಭಿಕ ಶಿಲ್ಕು 19.26 ಲಕ್ಷ, 2024–25ನೇ ಸಾಲಿಗೆ ನಗರಸಭೆ ಸ್ವಂತ ಸಂಪನ್ಮೂಲಗಳಿಂದ ನಿರೀಕ್ಷಿತ ಆದಾಯ ₹22.57 ಕೋಟಿ, ಸರ್ಕಾರಕ್ಕೆ ಪಾವತಿಸಬೇಕಾದ ತೆರಿಗೆಗಳು ಮತ್ತು ಕರಗಳ ಬಾಬ್ತು ₹8.86 ಕೋಟಿ ಹಾಗೂ ಸರ್ಕಾರದಿಂದ ನಿರೀಕ್ಷಿತ ಅನುದಾನಗಳು ₹50.85 ಕೋಟಿ ಸೇರಿ ಒಟ್ಟು 101.55 ಕೋಟಿ ಹಿಂದಿನ ಸಾಲಿನ ಮುಂದುವರಿದ ಕಾಮಗಾರಿಗಳೂ ಸೇರಿದಂತೆ 2024–25ನೇ ಸಾಲಿನ ನೌಕರರುಗಳ ವೇತನ, ನಿರ್ವಹಣಾ ವೆಚ್ಚಗಳು ಮತ್ತು ಬಂಡವಾಳ ಕಾಮಗಾರಿಗಳಿಗೆ ಒಟ್ಟಾರೆ 98.78 ಕೋಟಿಯ ಅಂದಾಜು ₹2.76 ಕೋಟಿ ಉಳಿತಾಯ ಆಯವ್ಯಯ ಮಂಡಿಸಲಾಗಿದೆ ಎಂದರು.
2023–24ನೇ ಸಾಲಿನ ಪರಿಷ್ಕೃತ ಅಮದಾಜು ಪ್ರಾರಂಭಿಕ ಶಿಲ್ಕು ₹19,64,25,037, ಜೆಮೆಗಳು ₹61,46,99,000, ಒಟ್ಟು ₹81,11,24,037, ಪಾವತಿಗಳು ₹61,84,60,000, ಅಖೈರು ಶಿಲ್ಕು ₹19,26,64,037. 2024–25ನೇ ಸಾಲಿನ ಅಂದಾಜು ಆಯವ್ಯಯದ ಸಾರಾಂಶ ಪ್ರಾರಂಭಿಕ ಶಿಲ್ಕು ₹19,26,64,037, ಜಮೆಗಳು ₹82,28,91,000, ಒಟ್ಟು 1,01,55,55,037, ಪಾವತಿಗಳು ₹98,78,79,000, ಅಖೈರು ಶಿಲ್ಕು ₹2,76,76,037 ಎಂದು ವಿವರಿಸಿದರು.
ನಗರಸಭೆಗೆ ಸ್ವಂತ ಸಂಪನ್ಮೂಲಗಳಿಂದ ಮತ್ತು ಸರ್ಕಾರದಿಂದ ಬರಬಹುದಾದ ಅನುದಾನಗಳ ಸೇರಿದಂತೆ ಪ್ರಮುಖ ಆದಾಯಗಳೆಂದರೆ ಆಸ್ತಿ, ತೆರಿಗೆ, ದಂಡ, ಕರಗಳ ಸಂಗ್ರಹಣ ಶುಲ್ಕದಿಂದ ₹1,500 ಲಕ್ಷ, ಅಭಿವೃದ್ಧಿ ಮತ್ತು ಬೆಟರ್‌ಮೆಂಟ್ ಶುಲ್ಕಗಳ ಸಂಗ್ರಹಣೆಯಿಂದ ₹160 ಲಕ್ಷ, ಘನ ತ್ಯಾಜ್ಯ ವಸ್ತು ನಿರ್ವಹಣೆ ಶುಲ್ಕ ಸಂಗ್ರಹಣೆಯಿಂದ ₹150 ಲಕ್ಷ, ಮಳೆಗೆಗಳ ಠೇವಣಿ, ಬಾಡಿಗೆ ಮತ್ತು ದಂಡ ವಸೂಲಿನ ಸಂಗ್ರಹಣೆಯಿಂದ ₹104.85 ಲಕ್ಷ, ಒಳಚರಂಡಿ ಸಂಪರ್ಕ ಮತ್ತು ಬಳಕೆಗದಾರರ ಶುಲ್ಕ ಸಂಗ್ರಹಣೆಯಿಂದ ₹52.80 ಲಕ್ಷ, ಉದ್ದಿಮೆ ಪರವಾನಗಿ ಶುಲ್ಕ ಮತ್ತು ಉದ್ದಿಮೆ ಪರವಾನಗಿ ಮೇಲಿನ ದಂಡ ಸಂಗ್ರಹಣೆಯಿಂದ ₹51.50 ಲಕ್ಷ, ಅನುಪಯುಕ್ತ ವಸ್ತುಗಳ ಮಾರಾಟದಿಂದ ₹40 ಲಕ್ಷ, ರಸ್ತೆ ಅಗೆತ ಮತ್ತು ಪುನಃಸ್ತಾಪನೆ ಶುಲ್ಕ ಸಂಗ್ರಹಣೆಯಿಂದ ₹33 ಲಕ್ಷ, ಖಾತಾ ಬದಲಾವಣೆ ಶುಲ್ಕ ಸಂಗ್ರಹಣೆಯಿಂದ ₹30 ಲಕ್ಷ.
ನಗರಸಭೆ ವಸತಿ ಗೃಹಗಳು ಹಾಗೂ ನಗರಸಭೆ ಹಳೇ ಕಚೇರಿ ಕಟ್ಟಡ ಬಾಡಿಗೆಯಿಂದ ₹25 ಲಕ್ಷ, ಕಟ್ಟಡ ಪರವಾನಗಿ ಶುಲ್ಕ ಸಂಗ್ರಹಣೆಯಿಂದ ₹32.60 ಲಕ್ಷ, ರಾಜ್ಯ ಸರ್ಕಾರದಿಂದ ಸಂಗ್ರಹಿಸಲ್ಟಟ್ಟ ಸ್ಟ್ಯಾಂಪ್ ಶುಲ್ಕದ ಸರ್‌ಚಾರ್ಜ್‌ನಿಂದ ₹12 ಲಕ್ಷ, ಬ್ಯಾಂಕ್ ಖಾತೆಗಳ ಮೇಲಿನ ಬಟ್ಟಿ ಸಂಗ್ರಹಣೆಯಿಂದ ₹25 ಲಕ್ಷ, ಜಾಹಿರಾತು ಶುಲ್ಕದಿಂದ ₹6.50 ಲಕ್ಷ, ಸಾರ್ವಜನಿಕ ಶೌಚಾಲಯ ನಿರ್ವಹಣೆ ಶುಲ್ಕದಿಂದ ₹5 ಲಕ್ಷ, ಆಸ್ತಿ ತೆರಿಗೆಯೊಂದಿಗೆ ವಸೂಲಿಸಲಾಗುವ ಕರಘಳು, ಗುತ್ತಿಗೆದಾರರು, ಸರಬರಾಜುದಾರರು ಹಾಗೂ ನೌಕರರ ವೇತನದ ಕಟಾವಣೆಗಳಿಂದ ₹886.40 ಲಕ್ಷ, ಎಸ್‌ಎಫ್‌ಸಿ ವಿದ್ಯುತ್ ಅನುದಾನದಿಂದ ₹1628 ಲಕ್ಷ, ಎಸ್‌ಎಫ್‌ಸಿ ವೇತನ ಅನುದಾನ ಹಾಗೂ ಪಿಂಚಣಿ ವಂತಿಕೆ ಅನುದಾನ ₹868 ಲಕ್ಷ, 15ನೇ ಹಣಕಾಸಿನ ಯೋಜನೆಯ ಅನುದಾನ ₹591 ಲಕ್ಷ.
ತ್ಯಾಜ್ಯ ವಿಲೇವಾರಿಗೊಳಿಸಲು ಸರ್ಕಾರದಿಂದ ಬರುವ ಅನುದಾನ ₹496.24 ಲಕ್ಷ, ಎಸ್‌ಎಫ್‌ಸಿ ಮುಕ್ತನಿಧಿ ಅನುದಾನ ₹207 ಲಕ್ಷ, ಎಸ್‌ಎಫ್‌ಸಿ ವಿಶೇಷ ಅನುದಾನ ₹1000 ಲಕ್ಷ, ಪೌರಕಾರ್ಮಿಕರ ಗೃಹಭಾಗ್ಯ ಯೋಜನೆ ಅನುದಾನ ₹237.90 ಲಕ್ಷ, ಸ್ವಚ್ಚ ಕಲಿಕಾ ಗೃಹ ಕೇಂದ್ರ ನಿರ್ಮಾಣ ಅನುದಾನ ₹30 ಲಕ್ಷ, ಎಸ್‌ಎಫ್‌ಸಿ ಕುಡಿಯುವ ನೀರು ಅನುದಾನ ₹10 ಲಕ್ಷ. ಸ್ವಚ್ಚ ಭಾರತ ಮಿಷನ್ 1.0 ಯೋಜನೆಯಡಿ ಐಸಿಸಿ ಚಟುವಟಿಕೆಗಳಿಗಾಗಿ ಸರ್ಕಾರದಿಂದ ಬರುವ ಅನುದಾನ ₹7 ಲಕ್ಷ.
ನಗರಸಭೆಗೆ ಸ್ವಂತ ಸಂಪನ್ಮೂಲಗಳು ಮತ್ತು ಸರ್ಕಾರದಿಂ ಬರಬಹುದಾದ ಅನುದಾನಗಳಿಂದ ನಗರದ ಅಭಿವೃದ್ಧಿಗಾಗಿ ಮುಂದುವರಿದ ಕಾಮಗಾರಿಗಳು ಹೊಸ ಕಾಮಗಾರಿಗಳು ಹಾಗೂ ನಿರ್ವಹಣೆಗಾಗಿ ಪ್ರಮುಖ ವೆಚ್ಚಗಳ ಅಳವಡಿಸಿಕೊಂಡಿರುವ ಆಯವ್ಯಯವೆಂದರೆ, ನಗರಸಭೆ ವ್ಯಾಪ್ತಿಯಲ್ಲಿ 15ನೇ ಹಣಕಾಸು, ಎಸ್‌ಎಫ್‌ಸಿ ಮುಕ್ತನಿಧಿ, ಎಸ್‌ಎಫ್‌ಸಿ ವಿಶೇಷ ಅನುದಾನ ಮತ್ತು ನಗರಸಭೆ ಮತ್ತು ನಗರಸಭಾ ನಿಧಿ ಅನುದಾನಗಳಲ್ಲಿ ರಸ್ತೆಗಳು, ಕಲ್ಲು ಹಾಸುಗಳು ಮತ್ತು ಪಾದಚಾರಿ ಮಾರ್ಗಗಳು, ಮಲೆ ನೀರು ಚರಂಡಿಗಳು, ಸೇತುವೆಗಳು ಮತ್ತು ಇತರೆ ಸ್ಥಿರಾಸ್ಥಿಗಳ ಕಾಮಗಾರಿಗಳಿಗಾಗಿ ₹1786 ಲಕ್ಷ ಮೀಸಲಿರಿಸಲಾಗಿದೆ.
ಒಳಚರಂಡಿ ಮಾರ್ಗಗಳು ಹಾಗೂ ಮೆಷಿನ್‌ಹೋಲ್‌ಗಳ ದುರಸ್ಥಿ, ನಿರ್ವಹಣೆ ಮತ್ತು ನಿರ್ಮಾಣ ಕಾಮಗಾರಿಗಳಿಗಾಗಿ ₹440 ಲಕ್ಷ ಮೀಸಲಿರಿಸಲಾಗಿದೆ. ಕಚೇರಿಯ ವಾಹನಗಳು ಹಾಗೂ ಯಂತ್ರೋಪರಣಗಳ ದುರಸ್ಥಿ, ನಿರ್ವಹಣೆ ಮತ್ತು ನಿರ್ಮಾಣ ಕಾಮಗಾರಿಗಳಿಗಾಗಿ ₹440 ಲಕ್ಷ ಮೀಸಲಿರಿಸಲಾಗಿದೆ. ಕಚೇರಿಯ ವಾಹನಗಳು ಹಾಗೂ ಯಂತ್ರೋಪಕರಣಗ ದುರಸ್ಥಿ ಸೇರಿದಂತೆ ಇತರೆ ₹199 ಲಕ್ಷ, ವೃತ್ತಗಳು ಮತ್ತು ರಸ್ತೆಗಳಿಗೆ ನಾಮಫಲಕಗಳ ಅಳವಡಿಕೆ ಹಾಗೂ ಡಿಜಿಟಲ್ ಡಿಸ್ ಪ್ಲೇ ಬೋರ್ಡ್ ಅಳವಡಿಕೆಗಾಗಿ ₹96 ಲಕ್ಷ ಮೀಸಲಿರಿಸಲಾಗಿದೆ. ಮಾರುಕಟ್ಟೆ ನಿರ್ಮಾಣ ಕಾಮಗಾರಿಯ ಬಾಕಿ ಬಿಲ್ಲು ಪಾವತಿಗಾಗಿ ಹಾಗೂ ಅವಶ್ಯವಿರುವ ಬಾಕಿ ಕಾಮಗಾರಿಗಳಿಗಾಗಿ ₹200 ಲಕ್ಷ ಕಾಯ್ದಿರಿಸಲಾಗಿದೆ.
ನೀರು ಸರಬರಾಜು ವ್ಯವಸ್ಥೆ ಕಾಮಗಾರಿಗಳಿಗಾಗಿ ₹305 ಲಕ್ಷ, ಗಿಡ ನೆಡಲು, ರಕ್ಷಣೆ ಮಾಡಲಿ ₹10 ಲಕ್ಷ, ರಾಷ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆಯಡಿ, ನಗರಸಭೆ ಸದಸ್ಯರ ಗೌರವಧನ, ಪ್ರವಾಸ ಕಾರ್ಯಕ್ರಮ ಹಾಗೂ ಇತರೆ ವೆಚ್ಚಗಳಿಗಾಗಿ ₹60 ಲಕ್ಷ, ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡೆ, ಇತರೆ ದೇಣಿಗೆ ಸಹಾಯಧನಗಳ ಉದ್ದೇಶಕ್ಕಾಗಿ ₹18 ಲಕ್ಷ, ಕಚೇರಿ ನಿರ್ವಹಣೆ ವೆಚ್ಚಘಳು, ವೃತ್ತಿಪರ ಶುಲ್ಕಗಳು, ಸದಸ್ಯತ್ವ ಶುಲ್ಕಗಳಿ ಪಾವತಿಗಾಗಿ ₹115.05 ಲಕ್ಷ, ನಿರ್ಮಿಸಿರುವ ರಾತ್ರಿ ನಿರಾಶ್ರಿತರ ತಂಗುದಾಣದ ನಿರ್ವಹಣೆಗಾಗಿ ₹10 ಲಕ್ಷ, ಆಸ್ತಿ ತೆರಿಗೆ ಮೇಲೆ ವಸೂಲಿಸಲಾಗುವ ಕರಗಳು, ಗುತ್ತಿಗೆದಾರರ, ಸರಬಾರಜುದಾರರು ಹಾಗೂ ನೌಕರರ ವೇತನದ ಕಟಾವಣೆಗಳನ್ನು ಪಾವತಿಸಲು ₹917.65 ಲಕ್ಷ ಕಾಯ್ದಿರಿಸಲಾಗಿದೆ.
ಬೀದಿದೀಪಗಳ ನಿರ್ವಹಣೆ ಮತ್ತು ಹೊಸ ಬೀದಿದೀಪಗಳ ಅಳವಡಿಕೆಗಾಗಿ ₹220.25 ಲಕ್ಷ, ಉದ್ಯಾನವನಗಳಲ್ಲಿ ಪಾದಚಾರಿ ಮಾರ್ಗಗಳನ್ನು ನಿರ್ಮಿಸಿ, ಲಘೂ ವ್ಯಾಯಾಮ ಸಾಧನಗಳನ್ನು ಮತ್ತು ಮಕ್ಕಳ ಆಟಿಕೆಗಳನ್ನು ಅಳವಡಿಸಿ ಅಭಿವೃದ್ಧಿ ಪಡಿಸಲು ₹150 ಲಕ್ಷ, ಸ್ಮಶಾನಗಳನ್ನು ಅಭಿವೃದ್ಧಿಪಡಿಸಲು ₹75 ಲಕ್ಷ, ಗರಸಭೆಯ ನೌಕರರ ವೇತನ, ಭತ್ಯೆಗಳು ಮತ್ತು ಇತರೆ ಭತ್ಯೆಗಳಿಗಾಗಿ ₹1080 ಲಕ್ಷ, ಸ್ವಚ್ಚತಾ ಕಾರ್ಯದಲ್ಲಿ ತೊಡಗಿರುವ ಹೊರಗುತ್ತಿಗೆ ಕ್ಲೀನರ್ಸ್‌ಗಳು, ವಾಹನ ಚಾಲಕರು, ಭದ್ರತಾ ಸಿಬ್ಬಂದಿ ಹಾಗೂ ವೆಟ್‌ವೆಲ್ ಮತ್ತು ಎಸ್‌ಟಿಪಿ ಪ್ಲ್ಯಾಂಟ್‌ಗಳ ನಿರ್ವಹಣೆ ನೌಕರರ ವೇತನ ಪಾವತಿಗಾಗಿ ₹315 ಲಕ್ಷ,
ಘನತ್ಯಾಜ್ಯ ವಿಲೇವಾಡರಿ ಘಟಕದ ಅಭಿವೃದ್ಧಿಗಾಗಿ ₹305 ಲಕ್ಷ, ಕಟ್ಟಡ ದುರಸ್ತಿ ಮತ್ತು ನಿರ್ವಹಣೆ ಹಾಗೂ ಹೊಸ ಕಟ್ಟಡ ನಿರ್ಮಾಣಕ್ಕೆ ₹80 ಲಕ್ಷ, ಪಾರಂಪರಿಕ ತ್ಯಾಜ್ಯ ವಿಲೇವಾರಿಗೆ ₹343.44 ಲಕ್ಷ, ಎಸ್ಸಿ,ಎಸ್ಟಿ ಹಾಗೂ ವಿಶೇಷ ಚೇತನರ ಕಲ್ಯಾಣ ಕಾರ್ಯಕ್ರಮಗಳಿಗೆ ₹102.90 ಲಕ್ಷ. ಆರೋಗ್ಯ ಶಾಕೆಗೆ ತ್ಯಾಜ್ಯ ವಿಲೇವಾರಿ ಮಾಡಲು ಹಾಗೂ ಒಳಚರಂಡಿ ನಿರ್ವಹಣೆ ಮಾಡಲು ವಾಹನಗಳು ಮತ್ತು ಯಂತ್ರೋಪರಣಗಳ ಖರೀದಿಗಾಗಿ ಹಾಗೂ ತ್ಯಾಜ್ಯ ನೀರು ಮರುಗಳಕೆ ಕಾಮಗಾರಿಗಾಗಿ ₹400 ಲಕ್ಷ ಮೀಸಲಿರಿಸಲಾಗಿದೆ ಎಂದು ವಿವರಿಸಿದರು.
ಈ ಆಯವ್ಯಯ ತಯಾರಿಸಿ ಮಂಡಿಸಲು ಸಲಹೆ ಸೂಚನೆ ಸಹಕಾರ ನೀಡಿದವರಿಗೆಲ್ಲ ವಂದನೆಗಳು ತಿಳಿಸುತ್ತಾ ಮಂಡ್ಯ ನಗರಸಭೆಯ 2023–24ನೇ ಸಾಲಿನ ಪರಿಷ್ಕೃತ ಹಾಗೂ 2023–25ನೇ ಸಾಲಿನ ಅಂದಾಜು ಆಯವ್ಯಯವನ್ನು ಸಭೆಯು ಅನುಮೋದಿಸಬೇಕು ಎಂದು ಮನವಿ ಮಾಡಿದರು.
ಶಾಸಕ ಪಿ.ರವಿಕುಮಾರ್‌ಗೌಡ ಗಣಿಗ, ನಗರಸಭೆ ಆಯುಕ್ತ ಮಂಜುನಾಥ್ ಭಾಗವಹಿಸಿದ್ದರು
Mandya
ಡೆಂಗ್ಯೂ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಅಗತ್ಯ ಡಾ.ಡಿ.ಟಿ.ಮಂಜುನಾಥ
ಶ್ರೀರಂಗಪಟ್ಟಣ : ಮಳೆಗಾಲದ ಸಂದರ್ಭದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಡೆಂಗ್ಯೂ ರೋಗದ ನಿಯಂತ್ರಣಕ್ಕೆ ಸೂಕ್ತ ಮುನ್ನೆಚ್ಚರಿಕೆ ಅಗತ್ಯವಾಗಿದೆ ಎಂದು ಪ್ರಭಾರಿ ತಾಲೂಕು ಆರೋಗ್ಯ ಅಧಿಕಾರಿ ಡಾ.ಡಿ.ಟಿ.ಮಂಜುನಾಥ್ ತಿಳಿಸಿದರು.
ಅವರು ತಾಲೂಕಿನ ಚಂದಗಾಲು ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಹಾಗೂ ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ ಡೆಂಗ್ಯೂ ನಿಯಂತ್ರಣ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಾರ್ವಜನಿಕರು ತಮ್ಮ ಮನೆಯ ಸುತ್ತ ಮುತ್ತ ಬಿಸಾಡುವ ಘನ ತ್ಯಾಜ್ಯಗಳಲ್ಲಿ ನೀರು ನಿಂತಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಆದ್ದರಿಂದ ಘನ ತ್ಯಾಜ್ಯಗಳನ್ನು ಸರಿಯಾಗಿ ವಿಲೇವಾರಿ ಮಾಡಿ. ಮನೆಯಲ್ಲಿಯ ನೀರು ಸಂಗ್ರಹಿಸುವ ಪರಿಕರಗಳನ್ನು ವಾರಕ್ಕೊಂದು ಸಾರಿ ಸ್ವಚ್ಛವಾಗಿ ಉಜ್ಜಿ ತೊಳೆದು ನೀರನ್ನು ಭರ್ತಿ ಮಾಡಿಕೊಳ್ಳುವುದು. ಹಾಗೆಯೆ ವಾರಕ್ಕೊಂದು ದಿನ ಒಣ ದಿನ ಆಚರಿಸಿ ಡೆಂಗ್ಯೂ ಜ್ವರದ ಲಕ್ಷಣ ಕಂಡ ಕೂಡಲೇ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಮಾಡಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ ಡೆಂಗ್ಯೂ ಜ್ವರ ನಿಯಂತ್ರಣ ಎಲ್ಲರ ಜವಾಬ್ದಾರಿ ಆಗಿದೆ ಎಂದು ಸಲಹೆ ನೀಡಿದರು.
ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಜವರಪ್ಪ, ಸದಸ್ಯರಾದ ರಮೇಶ್, ಕುಮಾರ್, ಮುಖ್ಯ ಶಿಕ್ಷಕಿ ಭಾರತಿ, ಪಿಡಿಒ ಶಿಲ್ಪ , ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ್, ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ಮೋಹನ್, ಆರೋಗ್ಯ ನಿರೀಕ್ಷಣಾಧಿಕಾರಿ ಕೃಷ್ಣೇಗೌಡ, ಸಮುದಾಯ ಆರೋಗ್ಯ ಅಧಿಕಾರಿ ಸಹನಾ, ಮೌಲ್ಯ,ಪ್ರಾಥಮಿಕ ಆರೋಗ್ಯ
ಸುರಕ್ಷಾಧಿಕಾರಿ ವಿನಯಾ ಹಾಗೂ ಶಾಲಾ ಶಿಕ್ಷಕರು, ಮಕ್ಕಳು, ಆಶಾ ಕಾರ್ಯಕರ್ತೆಯರು,ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದು, ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಮುಖ್ಯ ಸರ್ಕಲ್ ನಲ್ಲಿ ಮಾನವ ಸರಪಳಿ ನಿರ್ಮಿಸಿ ಸಾರ್ವಜನಿಕರಿಗೆ ಅರಿವು ಮೂಡಿಸಿದರು.
Chamarajanagar
ನದಿ ಪಾತ್ರದಲ್ಲಿ ಬರುವ ಎಲ್ಲಾ ಗ್ರಾಮಗಳ ಜನತೆ ಜನತೆ ಸುರಕ್ಷಿತ ಸ್ಥಳಕ್ಕೆ ತೆರಳಲು ಮನವಿ
ಕೆ.ಆರ್.ಪೇಟೆ
ಹೇಮಾವತಿ ಡ್ಯಾಂನಿಂದ ನದಿಗೆ 30ಸಾವಿರ ಕ್ಯೂಸೆಕ್ಸ್ ನೀರು ಬಿಟ್ಟಿರುವ ಕಾರಣ ಕೆ.ಆರ್.ಪೇಟೆ ತಾಲ್ಲೂಕಿನ ಬಂಡಿಹೊಳೆ ಬಳಿಯ ಹೇಮಗಿರಿ ಮತ್ತು ಮಂದಗೆರೆ ಅಣೆಕಟ್ಟೆಗಳಲ್ಲಿ ನದಿಯು ಉಕ್ಕಿ ಹರಿಯುತ್ತಿದೆ.
ಹಾಗಾಗಿಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ಹೇಮಾವತಿ ನದಿಯು 46ಕಿ.ಮೀ ದೂರ ಹರಿಯಲಿದ್ದು ನದಿ ಪಾತ್ರದಲ್ಲಿ ಬರುವ ಎಲ್ಲಾ ಗ್ರಾಮಗಳ ಜನತೆ ಜನತೆ ಸುರಕ್ಷಿತ ಸ್ಥಳಕ್ಕೆ ತೆರಳಬೇಕು. ಜನಜಾನುವಾರುಗಳನ್ನು ನದಿಗೆ ಇಳಿಸಬಾರದು. ಬಟ್ಟೆ ಪಾತ್ರೆ, ತೊಳೆಯಲು ನದಿ ಬಳಿ ಹೋಗಬಾರದು. ನದಿಯಲ್ಲಿ ಸ್ನಾನಮಾಡುವುದಾಗಲಿ, ಈಜುವುದಾಗಲಿ ಮಾಡಬಾರದು. ಮೀನುಗಾರರು ನದಿಯಲ್ಲಿ
ಮೀನು ಹಿಡಿಯಲು ಹೋಗಬಾರದು ಎಂದು ಕೆ.ಆರ್.ಪೇಟೆ ಹೇಮಾವತಿ ನೀರಾವರಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಆನಂದ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತ್ ಇಓ ಸತೀಶ್, ಕಿಕ್ಕೇರಿ ಪೊಲೀಸ್ ಇನ್ಸ್ ಪೆಕ್ಟರ್ ರೇವತಿ, ದಬ್ಬೇಘಟ್ಟ ಪಿಡಿಓ ಉಮಾಶಂಕರ್, ಮಂದಗೆರೆ ಪಿಡಿಓ ಸುವರ್ಣ, ಸಹಾಯಕ ಸಬ್ ಇನ್ಸ್ ಪೆಕ್ಟರ್
ಶಿವಲಿಂಗಯ್ಯ, ಹೇಮಾವತಿ ನಂ.20 ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಯವರಾದ ವಿಶ್ವನಾಥ್, ಸಹಾಯಕ ಇಂಜಿನಿಯರ್ ರವರಾದ ರಾಘವೇಂದ್ರ, ಮೋಹನ್ ಕುಮಾರ್, ಹೆಚ್.ಡಿ. ನಾಯಕ್ ಸೇರಿದಂತೆ ಹಲವು ನೀರಾವರಿ ಅಧಿಕಾರಿಗಳು ಉಪಸ್ಥಿತರಿದ್ದರು.
Mandya
ಖಾಸಗಿ ಕಂಪನಿಗಳಲ್ಲಿ ಮೀಸಲಾತಿ ಬಗ್ಗೆ ರಾಜ್ಯ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬಾರದು
ಮಂಡ್ಯ : ಖಾಸಗಿ ಕಂಪನಿಗಳಲ್ಲಿ ಮೀಸಲಾತಿ ನೀಡುವ ಬಗ್ಗೆ ರಾಜ್ಯ ಸಚಿವ ಸಂಪುಟ ತೆಗೆದುಕೊಂಡಿರುವ ನಿರ್ಧಾರದಿಂದ ಹಿಂದೆ ಸರಿಯಬಾರದು ಎಂದು ಮೈಶುಗರ್ ಕಬ್ಬು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಎಸ್.ಎಂ.ವೇಣುಗೋಪಾಲ್ ತಾಕೀತು ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸಚಿವ ಸಂಪುಟ ತೆಗೆದುಕೊಂಡಿರುವ ತೀರ್ಮಾನದಿಂದ ಕನ್ನಡಿಗರಿಗೆ ಉದ್ಯೋಗ ಪಡೆಯಲು ಅನುಕೂಲವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗ ತೆಗೆದುಕೊಂಡಿರುವ ನಿರ್ಣಯದಿಂದ ಹಿಂದೆ ಸರಿಯಬಾರದು ಎಂದು ಆಗ್ರಹ ಪಡಿಸಿದರು.
ದಶಕಗಳಿಂದ ಖಾಸಗಿ ವಲಯದ ಕಂಪನಿಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಸಿಗಬೇಕು ಎನ್ನುವುದು ನಮ್ಮ ಆಗ್ರಹವಾಗಿತ್ತು . ಮುಖ್ಯಮಂತ್ರಿಯ ಸಿದ್ದರಾಮಯ್ಯ ಅವರು ಖಾಸಗಿ ಉದ್ಯಮಗಳಲ್ಲಿ ಸಿ ಮತ್ತು ಡಿ ವಲಯಗಳಲ್ಲಿ ಶೇಕಡ 70ರಷ್ಟು ಹಾಗೂ ಎ ಮತ್ತು ಬಿ ಹುದ್ದೆಗಳಿಗೆ ಶೇಕಡ 50 ರಷ್ಟು ಮೀಸಲಾತಿ ಕಲ್ಪಿಸುವ ಬಗ್ಗೆ ರಾಜ್ಯ ಸಚಿವ ಸಂಪುಟ ಕೈಗೊಂಡಿರುವ ತೀರ್ಮಾನ ಸಮಂಜಸವಾಗಿದೆ ಎಂದರು.
ಆದರೆ ಕಾರಣಾಂತರಗಳಿಂದ ಈ ತೀರ್ಮಾನದಿಂದ ರಾಜ್ಯ ಸರ್ಕಾರ ಹಿಂದೆ ಸರಿದಿರುವುದು ಕಂಡುಬಂದಿದ್ದು , ಹಾಗಾಗಿ ಯಾವುದೇ ಕಾರಣಕ್ಕೂ ಈ ದಿಟ್ಟ ಕ್ರಮದಿಂದ ಸರ್ಕಾರ ಹಿಂದೆ ಸರಿಯಬಾರದು ಎಂದು ಒತ್ತಾಯಿಸಿದರು.
ಅಪ್ರೆಂಟಿಸ್ ಮತ್ತು ಇಂಟರ್ಶಿಪ್ ತರಬೇತಿ ನೀಡಬೇಕು ಅನ್ನುತ್ತಿದ್ದಾರೆ ಆದರೆ ಕಂಪನಿಗಳೇ ನೀಡಬಹುದು ಎಂದು ತಿಳಿಸಿದರು.
ನಮ್ಮ ನೆಲ ನಮ್ಮ ಜಲ ಬಳಕೆ ಮಾಡಿಕೊಂಡು ಕೆಲಸ ನೀಡುವ ವಿಚಾರದಲ್ಲಿ ವಿರೋಧ ವ್ಯಕ್ತ ಪಡಿಸುತ್ತಿರುವುದು ಸರಿಯಲ್ಲ. ಕನ್ನಡಿಗರಿಗೆ ಸಿಗುವ ಸೌಲಭ್ಯವನ್ನು ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಕಾರ್ಯರೂಪಕ್ಕೆ ತರಬೇಕು ಎಂದು ತಾಕೀತು ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಗೌರವಾಧ್ಯಕ್ಷ ಎಸ್ ಕೃಷ್ಣ, ಶಿವಲಿಂಗಯ್ಯ , ಎಂ ಸಿ ರಮೇಶ್, ಮಂಜು ಸೇರಿದಂತೆ ಇತರರು ಉಪಸ್ಥಿತರಿದ್ದರು.
-
Mysore3 months ago
ಶ್ರೀಮತಿ ಭವಾನಿ ರೇವಣ್ಣ ಸಹೋದರ ಇಂದು ಅಂತ್ಯಕ್ರಿಯೆ
-
State6 months ago
Free sewing machine, ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಸಲ್ಲಿಸಿ!
-
State6 months ago
ಶಾಲಾ ಮಕ್ಕಳಿಗೆ ಫೆಬ್ರವರಿ ತಿಂಗಳಲ್ಲಿ ಭರ್ಜರಿ ಹಾಲಿಡೇ! ಇಲ್ಲಿದೆ ರಜಾ ಲಿಸ್ಟ್!!!
-
Health6 months ago
Sugar Control ಆಗಬೇಕು ಅಂದ್ರೆ ಈ ಹಿಟ್ಟನ್ನು ತಿನ್ನಬೇಕಂತೆ! ಕನ್ಫ್ಯೂಸ್ ಆಗ್ಬೇಡಿ ಸುದ್ದಿ ಓದಿ
-
Hassan3 months ago
ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಹೇಳಿಕೆ
-
Uncategorized1 month ago
NEET 2024 ಮರು ಪರೀಕ್ಷೆಗೆ ಒತ್ತಾಯ: ಪೇಪರ್ ಲೀಕ್, ಮೋಸದ ಗ್ರೇಸ್ ಮಾರ್ಕ್, ಒಂದೇ ಕೇಂದ್ರದ ವಿದ್ಯಾರ್ಥಿಗಳು ಟಾಪರ್ಸ್ !!
-
Uncategorized8 months ago
ಅರ್ಜುನನ ಸಮಾದಿಗೆ ಪೂಜೆ ಸಲ್ಲಿಸಿದ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
-
State6 months ago
ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ!!. ‘ಹಳೆ ಪಿಂಚಣಿ’ ಜಾರಿಗೆ ಗ್ರೀನ್ ಸಿಗ್ನಲ್ ಕೊಟ್ಟ ರಾಜ್ಯ ಸರ್ಕಾರ.