Special
BSNL Recruitment 2026: ಬಿಎಸ್‌ಎನ್‌ಎಲ್‌ನಲ್ಲಿ ಭರ್ಜರಿ ನೇಮಕಾತಿ;ತಿಂಗಳಿಗೆ ₹90,000 ವರೆಗೆ ವೇತನ
ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಇಂಜಿನಿಯರಿಂಗ್ ಮತ್ತು ಫೈನಾನ್ಸ್ ಹಿನ್ನೆಲೆಯ ಅಭ್ಯರ್ಥಿಗಳಿಗೆ ಇದು ಅತ್ಯುತ್ತಮ ಅವಕಾಶ. ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) 2026ನೇ ಸಾಲಿನ Senior Executive Trainee (SET) ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಿದೆ.
ಹುದ್ದೆಗಳ ವಿವರ:
ಟೆಲಿಕಾಂ ವಿಭಾಗ
•ಹುದ್ದೆಗಳ ಸಂಖ್ಯೆ: 95
•ಅರ್ಹತೆ: ಇಂಜಿನಿಯರಿಂಗ್ ಹಿನ್ನೆಲೆ ಹೊಂದಿದ ಅಭ್ಯರ್ಥಿಗಳು
ಫೈನಾನ್ಸ್ ವಿಭಾಗ :
•ಹುದ್ದೆಗಳ ಸಂಖ್ಯೆ: 25
•ಅರ್ಹತೆ: ಲೆಕ್ಕಪತ್ರ ಮತ್ತು ವಾಣಿಜ್ಯ ಕ್ಷೇತ್ರದ ಅಭ್ಯರ್ಥಿಗಳು
ಶೈಕ್ಷಣಿಕ ಅರ್ಹತೆ:
ಟೆಲಿಕಾಂ ವಿಭಾಗ: 60% ಅಂಕಗಳೊಂದಿಗೆ BE / B.Tech ಪದವಿ ಹೊಂದಿರಬೇಕು.
ಫೈನಾನ್ಸ್ ವಿಭಾಗ: ಕಾಲ್ ಅಥವಾ CMA (ಕಾಸ್ಟ್ & ಮ್ಯಾನೇಜ್‌ಮೆಂಟ್ ಅಕೌಂಟೆಂಟ್) ಪದವಿ ಪೂರ್ಣಗೊಳಿಸಿರುವವರು
ವಯೋಮಿತಿ: 21-30 ವರ್ಷ
ಮೀಸಲಾತಿಗೆ ಅನುಗುಣವಾಗಿ ವಯೋಸಡಿಲಿಕೆ ಇರುತ್ತದೆ
ವೇತನ ವಿವರ:
•ಮೂಲ ವೇತನ: ₹24,900 – ₹50,500
•HRA, DA, TA, ವೈದ್ಯಕೀಯ ಹಾಗೂ ಇತರೆ ಭತ್ಯೆಗಳು ಸೇರಿ
ಒಟ್ಟು ಮಾಸಿಕ ವೇತನ: ಸುಮಾರು ₹80,000 ರಿಂದ ₹90,000
ಆಯ್ಕೆ ಪ್ರಕ್ರಿಯೆ ಹಂತಗಳು:
•ಕಂಪ್ಯೂಟರ್ ಆಧಾರಿತ ಪರೀಕ್ಷೆ
•ದಾಖಲೆಗಳ ಪರಿಶೀಲನೆ
ಅರ್ಜಿ ಸಲ್ಲಿಸುವ ವಿಧಾನ:
* ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅಗತ್ಯ ಮಾಹಿತಿ ಹಾಗೂ ದಾಖಲೆಗಳನ್ನು ನೀಡುವುದರ ಮೂಲಕ ಅರ್ಜಿ ಪೂರ್ಣಗೊಳಿಸಬೇಕು
ಅಧಿಕೃತ ವೆಬ್ಸೈಟ್ : https://bsnl.co.in
ಅರ್ಜಿ ಶುಲ್ಕ:
•General / OBC / EWS: ₹2,500
•SC / ST / PwBD: ₹1,250
ಪ್ರಮುಖ ದಿನಾಂಕಗಳು:
•ಅರ್ಜಿ ಪ್ರಾರಂಭ: 05 ಫೆಬ್ರವರಿ 2026
•ಅರ್ಜಿ ಕೊನೆಯ ದಿನ: 07 ಮಾರ್ಚ್ 2026
•ಅರ್ಜಿ ತಿದ್ದುಪಡಿ ಅವಧಿ: 08 ರಿಂದ 15 ಮಾರ್ಚ್ 2026
•ಪರೀಕ್ಷೆ (ತಾತ್ಕಾಲಿಕ): 29 ಮಾರ್ಚ್ 2026
ಉತ್ತಮ ವೇತನ, ಕೇಂದ್ರ ಸರ್ಕಾರದ ಉದ್ಯೋಗ ಭದ್ರತೆ ಹಾಗೂ ವೃತ್ತಿ ಬೆಳವಣಿಗೆಯ ಅವಕಾಶಗಳನ್ನು ಬಯಸುವ ಅಭ್ಯರ್ಥಿಗಳಿಗೆ ಒಂದು ಅತ್ಯುತ್ತಮ ಅವಕಾಶವಾಗಿದೆ. ನೀವು ಅರ್ಹರಾಗಿದ್ದರೆ ಕೊನೆಯ ದಿನಾಂಕದವರೆಗೆ ಕಾಯದೆ ಈಗಲೇ ಅರ್ಜಿ ಸಲ್ಲಿಸುವುದು ಉತ್ತಮ.
Special
Kisan Tractor Yojana : ಸರ್ಕಾರದಿಂದ ರೈತರಿಗೆ ಅರ್ಧ ಬೆಲೆಗೆ ಹೊಸ ಟ್ರಾಕ್ಟರ್
ರೈತರ ಕೃಷಿ ಕೆಲಸವನ್ನು ಸುಲಭಗೊಳಿಸುವ ಹಾಗೂ ಯಾಂತ್ರೀಕರಣವನ್ನು ಉತ್ತೇಜಿಸುವ ಉದ್ದೇಶದಿಂದ ಸರ್ಕಾರವು Kisan Tractor Yojana ಎಂಬ ಮಹತ್ವದ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ಅರ್ಹ ರೈತರಿಗೆ ಹೊಸ ಟ್ರಾಕ್ಟರ್ ಖರೀದಿಗೆ ಶೇಕಡಾ 50ರಷ್ಟು ಸಹಾಯಧನ (ಸಬ್ಸಿಡಿ) ನೀಡಲಾಗುತ್ತದೆ. ಇದರಿಂದ ಕಡಿಮೆ ಆದಾಯ ಹೊಂದಿರುವ ಸಣ್ಣ ಹಾಗೂ ಅಲ್ಪಭೂಧರ ರೈತರು ಕೂಡ ಆಧುನಿಕ ಟ್ರಾಕ್ಟರ್‌ಗಳನ್ನು ಖರೀದಿಸಲು ಸಾಧ್ಯವಾಗುತ್ತದೆ.
ಯೋಜನೆಯ ಉದ್ದೇಶ:
ಈ ಯೋಜನೆಯ ಮುಖ್ಯ ಉದ್ದೇಶ ಕೃಷಿಯಲ್ಲಿ ಮಾನವ ಶ್ರಮದ ಅವಲಂಬನೆಯನ್ನು ಕಡಿಮೆ ಮಾಡಿ, ಉತ್ಪಾದಕತೆಯನ್ನು ಹೆಚ್ಚಿಸುವುದಾಗಿದೆ. ಟ್ರಾಕ್ಟರ್ ಬಳಕೆಯಿಂದ ಬಿತ್ತನೆ, ಹೊಲ ಉಳುವುದು,ಸಾಗಣೆ ಮುಂತಾದ ಕೆಲಸಗಳು ವೇಗವಾಗಿ ಹಾಗೂ ಕಡಿಮೆ ವೆಚ್ಚದಲ್ಲಿ ಮುಗಿಯುತ್ತವೆ. ಇದರಿಂದ ರೈತರ ಸಮಯವೂ ಉಳಿಯುತ್ತದೆ.
ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು:
1. ಅರ್ಜಿದಾರರು ಭಾರತೀಯ ನಾಗರಿಕರಾಗಿರಬೇಕು.
2. ವಾರ್ಷಿಕ ಆದಾಯ 2 ಲಕ್ಷಕ್ಕಿಂತ ಕಡಿಮೆ ಇರಬೇಕು.
3. ಒಂದು ಕುಟುಂಬಕ್ಕೆ ಒಂದೇ ಸಬ್ಸಿಡಿ.
4. ಈ ಹಿಂದೆ ಯಾವುದೇ ಟ್ರ್ಯಾಕ್ಟರ್‌ನ ಸಬ್ಸಿಡಿ ಪಡೆದಿರಬಾರದು.
5. ಅರ್ಜಿದಾರರು ಮೂಲ ಭೂ ದಾಖಲೆಗಳನ್ನು ಹೊಂದಿರಬೇಕು.

ಅಗತ್ಯ ದಾಖಲೆಗಳು:
1. ಆಧಾರ್ ಕಾರ್ಡ್
2. ಭೂಮಿ ದಾಖಲೆ (RTC / ಪಹಣಿ)
3. ಬ್ಯಾಂಕ್ ಪಾಸ್‌ಬುಕ್
ಪಾಸ್‌ಪೋರ್ಟ್ ಗಾತ್ರದ ಫೋಟೋ
ಅರ್ಜಿಸುವ ವಿಧಾನ:
ರೈತರು ಈ ಅರ್ಜಿಯನ್ನು ಆನ್‌ಲೈನ್ ಅಥವಾ ಆಫ್ ಲೈನ್ ಮೂಲಕ ಸಲ್ಲಿಸಬಹುದು. ಮೊದಲು,ಕೃಷಿ ಯಾಂತ್ರಿಕರಣ ಪೋರ್ಟಲ್ agrimachinery.nic.in ಗೆ ಭೇಟಿ ನೀಡಿ, ಅಗತ್ಯ ಮಾಹಿತಿಗಳನ್ನು ಸಲ್ಲಿಸಿ ಅರ್ಜಿ ಸಲ್ಲಿಸಿ.
ಆಫ್ ಲೈನ್ ನಲ್ಲಿ, ಸಮೀಪದ ಕೃಷಿ ಇಲಾಖೆ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
Kisan Tractor Yojana ರೈತರ ಬದುಕಿಗೆ ಬದಲಾವಣೆ ತರುವಂತಹ ಮಹತ್ವದ ಯೋಜನೆಯಾಗಿದ್ದು, ಹೆಚ್ಚಿನ ವೆಚ್ಚದ ಟ್ರ್ಯಾಕ್ಟರ್ ಖರೀದಿಸಲು ಹಿಂಜರಿಯುತ್ತಿದ್ದ ರೈತರಿಗೆ ಇದೊಂದು ಸದವಕಾಶವಾಗಿದೆ. ರೈತರು ಇದರ ಸದುಪಯೋಗ ಪಡೆಯಬೇಕು.
Special
ಕಲೆ, ಸಾಹಿತ್ಯ, ನಾಟ್ಯ ಹಾಗೂ ಸಂಸ್ಕಾರದಲ್ಲಿ ಶ್ರೀಮಂತ ದೇಶ ಭಾರತ: ನ್ಯಾ.ಗೋಪಾಲಗೌಡ
ಬೆಂಗಳೂರು: ಕಲೆ, ಸಾಹಿತ್ಯ, ನಾಟ್ಯ ಹಾಗೂ ಸಂಸ್ಕಾರದಲ್ಲಿ ಇಡೀ ಪ್ರಪಂಚದಲ್ಲಿಯೇ ಭಾರತ ದೇಶ ಶ್ರೀಮಂತವಾದದ್ದು ಎಂದು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಾದ ಗೋಪಾಲಗೌಡ ಅವರು ಹೇಳಿದ್ದಾರೆ.
ಮಲ್ಲೇಶ್ವರಂನ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಏರ್ಪಡಿಸಿದ್ದ ವಕೀಲ ಆರ್.ಮಹೇಶ್ ಮತ್ತು ಆಶಾ ದಂಪತಿಗಳ ಸುಪುತ್ರಿ ಶ್ರೇಯಾ ಮಹೇಶ್ ಅವರ ರಂಗ ಪ್ರವೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹಲವು ವಿಭಾಗದಲ್ಲಿ ದೇಶದ ಶ್ರೀಮಂತಿಕೆ ಇಲ್ಲದೆ ಇರಬಹುದು. ಆದರೆ,ಕೆಲೆ ಮತ್ತು ಸಂಸ್ಕೃತಿಕತೆಯಲ್ಲಿ ನಮ್ಮ ದೇಶ ಎಂದೂ ಹಿಂದೆ ಬಿದ್ದಿಲ್ಲ. ಇದು ನಮ್ಮ ಹೆಗ್ಗಳಿಕೆ ಎಂದರು.
ಭರತ ನಾಟ್ಯ ಎನ್ನುವುದು ನಮ್ಮ ನೆಲದಲ್ಲಿಯೇ ಬೆಳೆದು ಅರಳಿದ ಕಲೆ. ಕು.ಶ್ರೇಯ ಅವರು ಅಮೋಘವಾಗಿ ನಾಟ್ಯ ಪ್ರದರ್ಶನ ಮಾಡಿದ್ದಾರೆ. ಒತ್ತಡ, ದುಗುಡವನ್ನು ಹೊರತಾದ ಪರಿಸ್ಥಿತಿಯಲ್ಲಿ ಮನಸ್ಸಿಗೆ ಇಂಪಾದ ವಾತಾವರಣವನ್ನು ಕಲಾ ಪ್ರದರ್ಶನ ನೀಡುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಪ್ರತಿಭಾನ್ವಿತೆ ಕು.ಶ್ರೇಯ ಅವರನ್ನು ಹಲವು ಸಂಘ ಸಂಸ್ಥೆಗಳು ಸನ್ಮಾನಿಸಿದರು.
ಈ ಕಾರ್ಯಕ್ರಮದಲ್ಲಿ ಹೆಚ್ಚುವರಿ ಅಡ್ವಕೇಟ್ ಕಿರಣ್ ವಿ ರಾವ್, ಹಿರಿಯ ಸಿವಿಲ್ ನ್ಯಾಯಾಧೀಶರಾದ ನಿವೇದಿತಾ, ಯೋಗಮಿತ್ರ ಡಾ.ಎ.ಸುಬ್ರಹ್ಮಣ್ಯನ್, ಧರಣಿ ಕಶ್ಯಪ್, ಡಾ.ಸುಪರ್ಣವೆಂಕಟೇಶ್, ವಕೀಲ ಎ.ಪಿ. ರಂಗನಾಥ್, ಗೀತಾರಾಜ್ ಹಾಜರಿದ್ದರು.
Special
ಪೋಸ್ಟ್ ಆಫೀಸ್ ಉದ್ಯೋಗ ಅವಕಾಶ: ನೇರ ನೇಮಕಾತಿ
ಎಸ್ಸೆಸ್ಸೆಲ್ಸಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಭಾರತೀಯ ಅಂಚೆ ಇಲಾಖೆಯಿಂದ ಭರ್ಜರಿ ಉದ್ಯೋಗ ಅವಕಾಶ ಪ್ರಕಟವಾಗಿದ್ದು, ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ 1023 ಪೋಸ್ಟ್‌ಮ್ಯಾನ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ನೇಮಕಾತಿಯ ವಿವರ:
ಈ ನೇಮಕಾತಿಯಲ್ಲಿ ಭಾಗವಹಿಸಲು ಕನಿಷ್ಠ ವಿದ್ಯಾರ್ಹತೆ SSLC ಪಾಸ್ ಆಗಿರಬೇಕು. ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ, ನಿಮ್ಮ ಹತ್ತನೇ ತರಗತಿ ಅಂಕಗಳ (ಮೆರಿಟ್ ಲಿಸ್ಟ್ ) ಪ್ರಕಾರ ನಿಮ್ಮ ಆಯ್ಕೆ ಮಾಡಲಾಗುತ್ತದೆ. ಇದರಿಂದ ಗ್ರಾಮೀಣ ಮತ್ತು ನಗರ ಪ್ರದೇಶದ ಅಭ್ಯರ್ಥಿಗಳಿಗೆ ಸಮಾನ ಅವಕಾಶ ಸಿಗಲಿದೆ.
ಅರ್ಜಿ ಸಲ್ಲಿಸುವ ವಿವರ:
1. ಆನ್‌ಲೈನ್ ಅರ್ಜಿ ಪ್ರಕ್ರಿಯೆ ಆರಂಭ: 31 ಜನವರಿ 2026
2. ಕೊನೆ ದಿನಾಂಕ: 14 ಫೆಬ್ರವರಿ 2026
3. ಅರ್ಜಿ ಶುಲ್ಕ ಪಾವತಿ ಕೊನೆ ದಿನ: 16 ಫೆಬ್ರುವರಿ 2026
4. ಮಹಿಳಾ, SC/ST, PWD ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರಹಿತ. ಇತರ ಅಭ್ಯರ್ಥಿಗಳು ₹100/- ಅನ್ನು ಪಾವತಿಸಬೇಕು.
5. ಕನಿಷ್ಠ ವಯಸ್ಸು 18 ವರ್ಷ, ಗರಿಷ್ಠ 40 ವರ್ಷ; ವರ್ಗಾನುಸಾರ ವಯೋಮಿತಿ ಸಡಿಲಿಕೆ ಅನ್ವಯವಾಗುತ್ತದೆ.

ವೇತನ ವರದಿ:
1. ಬ್ರಾಂಚ್ ಪೋಸ್ಟ್‌ಮಾಸ್ಟರ್ (BPM): ₹12,000 – ₹29,380/–
2. ಸಹಾಯಕ BPM / GDS: ₹10,000 – ₹24,470/–
ಹುದ್ದೆಗಳು ಜಿಲ್ಲಾವಾರುವಾಗಿ ಹಂಚಿಕೆ ಮಾಡಲಾಗಿದ್ದು, ಅಭ್ಯರ್ಥಿಗಳು ತಮ್ಮದೇ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು. ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಬ್ಬರೂ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಾನುಸಾರ ವೇತನ, ಭತ್ಯೆಗಳು ಮತ್ತು ಭದ್ರ ಉದ್ಯೋಗ ಸೌಲಭ್ಯಗಳು ಲಭ್ಯವಿರುತ್ತವೆ.
ಪೋಸ್ಟ್ ಆಫೀಸ್ ಉದ್ಯೋಗವು ಶಾಶ್ವತ ಹಾಗೂ ಗೌರವಾನ್ವಿತ ಸರ್ಕಾರಿ ಕೆಲಸವಾಗಿದ್ದು, ಭವಿಷ್ಯದಲ್ಲಿ ಪದೋನ್ನತಿ ಅವಕಾಶಗಳೂ ಇವೆ. ಆದ್ದರಿಂದ ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ಬಿಡದೆ, ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸುವಂತೆ ಸಲಹೆ ನೀಡಲಾಗುತ್ತದೆ.
-
Politics16 hours agoಆಡಳಿತ- ವಿಪಕ್ಷಗಳ ಜಿದ್ದಾಜಿದ್ದಿಗೆ ಬಲಿಯಾದ ವಿಧಾನ ಪರಿಷತ್ ಕಲಾಪ
-
Kodagu22 hours agoಕಾರೆಕೆರೆ ಕಾವಲು: 47 ದಲಿತ ಕುಟುಂಬಗಳಿಗೆ ಭೂಮಿ ಮಂಜೂರಿಗೆ ಆಗ್ರಹ
-
Kodagu22 hours agoಕೋಮು ಸಾಮರಸ್ಯ ಮೂಡಿಸುವಲ್ಲಿ ಉರೂಸ್ ಕೊಡುಗೆ ಅಪಾರ
-
National18 hours agoಕರ್ನಾಟಕದಲ್ಲಿ ಮಾನವ-ವನ್ಯಜೀವಿ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಭೂಪೇಂದ್ರ ಯಾದವ್ಗೆ ಎಚ್ಡಿಕೆ ಮನವಿ
-
Hassan14 hours agoಪ್ರತ್ಯೇಕ ಪ್ರಕರಣ: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ
-
Hassan19 hours ago2027 ರ ಅಂತ್ಯಕ್ಕೆ ಎತ್ತಿನಹೊಳೆ ನೀರು ಹರಿಸಲು ಕ್ರಮ: ಕೃಷ್ಣ ಬೈರೇಗೌಡ
-
Mysore18 hours agoಜಿಲ್ಲಾ ಪೊಲೀಸರಿಂದ ಗೋದಾಮು, ಕೈಗಾರಿಕಾ ಶೋಧ
-
Chamarajanagar18 hours agoಬೆಳಗಿನ ವೇಳೆ ವಿದ್ಯುತ್ ಪೂರೈಕೆಗೆ ಒತ್ತಾಯಿಸಿ ರೈತರಿಂದ ಪ್ರತಿಭಟನೆ
