Mandya
ಕೆ.ವಿ.ಶಂಕರೇಗೌಡ ಕುರಿತಾದ ನಿತ್ಯ ಸಚಿವ ಕೃತಿ ಬಿಡುಗಡೆ
ಮಂಡ್ಯ: ನಗರದ ಪಿಇಎಸ್ ಕಾಲೇಜಿನ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಕರ್ನಾಟಕ ಸಂಘದ ವತಿಯಿಂದ ನಡೆದ ಕೆ.ವಿ. ಶಂಕರಗೌಡ ಕುರಿತ ನಿತ್ಯ ಸಚಿವ ಕೃತಿಯ ಬಿಡುಗಡೆಯ ಸಮಾರಂಭವನ್ನು ಅಪರ ಜಿಲ್ಲಾಧಿಕಾರಿಯಾದ ಡಾ.ಎಚ್.ಎಲ್.ನಾಗರಾಜು ಉದ್ಘಾಟಿಸಿದರು.
ಕರ್ನಾಟಕ ಸಂಘದ ಅಧ್ಯಕ್ಷರಾದ ಪ್ರೊ. ಪಿ. ಜಯಪ್ರಕಾಶಗೌಡರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವು ಜರುಗಿತು.
ಈ ಸಂದರ್ಭದಲ್ಲಿ ಪಿಇಟಿ ಸಂಸ್ಥೆಯ ನಿರ್ದೇಶಕರಾದ ಡಾ.ರಾಮಲಿಂಗಯ್ಯ, ಕೆ.ವಿ. ಶಂಕರಗೌಡ ಜೀವನಧಾರಿತ ನಾಟಕದ ನಿರ್ದೇಶಕರಾದ ಪ್ರಮೋದ್ ಶಿಗ್ಗಾಂವ್, ಪ್ರೊ.ರಾಜಪ್ಪ ದಳವಾಯಿ, ವೈ.ಎಂ. ಹನುಮಂತು, ಕೆ.ವಿ. ಶಂಕರಗೌಡರವರ ಪುತ್ರಿಯರಾದ ಪ್ರೇಮರಾಜಗೋಪಾಲ್, ಉಷಾ ವಸಂತಕುಮಾರ್, ಪ್ರೊ. ಕೆಂಪಮ್ಮ, ಹರೀಶ್ ಕುಮಾರ್, ಬಾಲಕೃಷ್ಣ, ಚಂದಗಾಲು ಲೋಕೇಶ್, ಇನ್ನಿತರರು ಉಪಸ್ಥಿತರಿದ್ದರು.
ನಿತ್ಯ ಸಚಿವ ನಾಟಕವನ್ನು ಕರ್ನಾಟಕ ಸಂಘದ ಸದಸ್ಯರು ಹಾಗೂ ಇನ್ನಿತರ ಕಲಾವಿದರು ನಡೆಸಿಕೊಟ್ಟರು.
ಇದೇ ಸಂದರ್ಭದಲ್ಲಿ ನಾಟಕದ ಕಲಾವಿದರುಗಳಿಗೆ ಹಾಗೂ ತಂತ್ರಜ್ಞರಿಗೆ ಕರ್ನಾಟಕ ಸಂಘದ ವತಿಯಿಂದ ಅಭಿನಂದಿಸಲಾಯಿತು.
Mandya
ಮಂಡ್ಯ ವಿ.ವಿ.ಗೆ ಮಧು.ಜಿ.ಮಾದೇಗೌಡ ನೇಮಕ
ಮಂಡ್ಯ: ಕರ್ನಾಟಕ ವಿಧಾನ ಪರಿಷತ್ತಿನ ಶಾಸಕ ಮಧು.ಜಿ.ಮಾದೇಗೌಡ ಅವರು ಮಂಡ್ಯ ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತ್ತಿನ ವ್ಯವಸ್ಥಾಪನಾ ಮಂಡಳಿ ಹಾಗೂ ಸಲಹಾ ಸಮಿತಿಗೆ ಸದಸ್ಯರಾಗಿ ನಾಮನಿರ್ದೇಶನ ಗೊಂಡಿದ್ದಾರೆ.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ನಾಮನಿರ್ದೇಶನ ಮಾಡಿರುತ್ತಾರೆಂದು ಪರಿಷತ್ತಿನ ಕಾರ್ಯದರ್ಶಿ ಕೆ.ಆರ್.ಮಹಾಲಕ್ಷ್ಮಿ ಈ ಕುರಿತು ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.
Mandya
ಜಿಲ್ಲೆಯಲ್ಲಿ ಹರ್ ಘರ್ ತಿರಂಗಾ ಕಾರ್ಯಕ್ರಮವನ್ನು ಬಹಳ ಅದ್ದೂರಿಯಾಗಿ ಆಚರಿಸಿ: ಶೇಖ್ ತನ್ವೀರ್ ಆಸಿಫ್
ಮಂಡ್ಯ: 2024ನೇ ಸಾಲಿನ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಜಿಲ್ಲೆಯಲ್ಲಿ ಹರ್ ಘರ್ ತಿರಂಗಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದ್ದು, ಬಹಳ ಅದ್ದೂರಿಯಾಗಿ ಕಾರ್ಯಕ್ರಮವನ್ನು ಆಚರಿಸಿ ಎಂದು ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವಿರ್ ಆಸಿಫ್ ಅವರು ತಿಳಿಸಿದರು.
ಅವರು ಸುವರ್ಣ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ “ಹರ್ ಘರ್ ತಿರಂಗಾ” ಕಾರ್ಯಕ್ರಮವನ್ನು ಆಯೋಜಿಸುವ ಸಂಬಂಧ ಪೂರ್ವ ಸಿದ್ಧತಾ ಕ್ರಮಗಳ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹರ್ ಘರ್ ತಿರಂಗಾ ಕಾರ್ಯಕ್ರಮದ ಸಂಬಂಧ ತಿರಂಗಾ ಯಾತ್ರೆ ಮತ್ತು ಮ್ಯಾರಾಥಾನ್ ಕಾರ್ಯಕ್ರಮಗಳನ್ನು ಮಂಡ್ಯ ಜಿಲ್ಲೆ ಮತ್ತು ನಗರ ವ್ಯಾಪ್ತಿಯಲ್ಲಿ ಆಯೋಜಿಸಲು ನಗರಸಭೆ ಹಾಗೂ ಎಲ್ಲಾ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಣಾಧಿಕಾರಿಗಳು, ಆಯುಕ್ತರು ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಯ ಎಲ್ಲಾ ಮುಖ್ಯಾಧಿಕಾರಿಗಳು ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.
ಹರ್ ಘರ್ ತಿರಂಗಾ ಅಭಿಯಾನದಂತೆ ಜಿಲ್ಲೆಯಾದ್ಯಂತ ವ್ಯಾಪಕ ಪ್ರಚಾರ ಮಾಡಿ ಮನೆಗಳು, ಸರ್ಕಾರಿ ಕಛೇರಿಗಳು ಹಾಗೂ ಶಾಲಾ ಕಾಲೇಜು, ಶಿಕ್ಷಣ ಸಂಸ್ಥೆಗಳ ಮೇಲೆ ರಾಷ್ಟ್ರಧ್ವಜವನ್ನು ನಿಯಮಾನುಸಾರ ಹಾರಿಸಬೇಕು.
ಸೂಚಿತ ವೆಬ್ ಸೈಟ್ hargartiranga.com ರಲ್ಲಿ ಸೆಲ್ಸಿಗಳನ್ನು ಅಪ್ ಲೋಡ್ ಮಾಡುವುದು ಕಡ್ಡಾಯ ಎಂದರು.
ಜಾಥಾ ಕಾರ್ಯಕ್ರಮ ಹರ್ ಘರ್ ತಿರಂಗಾ ಕಾರ್ಯಕ್ರಮದ ಸಂಬಂಧ ಪ್ರತಿ ಶಾಲಾ ಕಾಲೇಜು ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಸೈಕಲ್ ಜಾಥಾ/ಬೈಕ್, ಪಾರಂಪರಿಕ ನಡಿಗೆ ಹಾಗೂ ಗಾಳಿಪಟ ಹಾರಿಸುವ ಕಾರ್ಯಕ್ರಮವನ್ನು ಆಯೋಜಿಸುವ ಬಗ್ಗೆ ಕ್ರಮವಹಿಸಿ. ಜೊತೆಗೆ ತಿರಂಗಾ ಸಂಗೀತಾ ಕಾರ್ಯಕ್ರಮವನ್ನು ವಿದ್ಯಾರ್ಥಿಗಳ ಮುಖಾಂತರ ನಡೆಸಬೇಕು ಎಂದು ತಿಳಿಸಿದರು.
ಎಲ್ಲಾ ತಹಶೀಲ್ದಾರರು ಸ್ವಾತಂತ್ರ್ಯ ಯೋಧರಿಗೆ ಸನ್ಮಾನ ಕುರಿತು ಜಿಲ್ಲೆಯಲ್ಲಿ ಹಾಲಿ ಜೀವಿತ ಸ್ವಾತಂತ್ರ್ಯ ಯೋಧರಿಗೆ ಮನೆಗೆ ತೆರಳಿ ಸನ್ಮಾನ ಮಾಡಲು ಅಗತ್ಯ ಕ್ರಮವಹಿಸುವಂತೆ ತಿಳಿಸಿದರು.
ವಿಶ್ವವಿದ್ಯಾಲಯಗಳಲ್ಲಿ ಹರ್ ಘರ್ ತಿರಂಗಾ ಸಂಬಂಧ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದರು.
ಪ್ರತಿಜ್ಞಾವಿಧಿ ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಜಿಲ್ಲೆಯ ಎಲ್ಲಾ ಸರ್ಕಾರಿ / ನಿಗಮ ಮಂಡಳಿ, ಪ್ರಾಧಿಕಾರ ಹಾಗೂ ಇತರ ಕಾರ್ಯಾಲಯಗಳು, ಶಾಲಾ ಕಾಜೇಜುಗಳಲ್ಲಿ ಪ್ರತಿಜ್ಞಾ ವಿಧಿಯನ್ನು ಸ್ವೀಕಾರ ಮಾಡಬೇಕು ಎಂದರು.
ಸೌಟ್ಸ್ ಮತ್ತು ಗೈಡ್ಸ್ ಹಾಗೂ ಎನ್.ಸಿ.ಸಿ ವಿದ್ಯಾರ್ಥಿಗಳ ತಂಡದಿಂದ ತಿರಂಗಯಾತ್ರೆ ನಡೆಸಬೇಕು ಎಂದರು.
ವಿವಿಧ ಸ್ಪರ್ಧೆ ಹಾಸ್ಟೆಲ್ ವಿದ್ಯಾರ್ಥಿಗಳಿಂದ ಆಶುಭಾಷಣಾ ಸ್ಪರ್ಧೆ, ಚರ್ಚಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ರಂಗೋಲಿ ಸ್ಪರ್ಧೆ ಹಾಗೂ ಸಂಬಂಧಿತ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ವೆಬ್ ಸೈಟ್:hargartiranga.com ರಲ್ಲಿ ಅಪ್ ಲೋಡ್ ಮಾಡಬೇಕು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್.ನಾಗರಾಜು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
Mandya
ಮಾದಕ ವ್ಯಸನಗಳ ಕುರಿತು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅರಿವು ಹಾಗೂ ಪ್ರತಿಜ್ಞಾವಿಧಿ ಬೋಧನೆ
ಶ್ರೀರಂಗಪಟ್ಟಣ: ವಿದ್ಯಾರ್ಥಿಗಳು ಮಾದಕ ದ್ರವ್ಯ ವಸ್ತುಗಳಿಗೆ ಮಾರು ಹೋಗದೆ ವಿದ್ಯಾಭ್ಯಾಸದತ್ತ ಹೆಚ್ಚು ಗಮನ ಹರಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ ಕರೆ ನೀಡಿದರು.
ಅವರು ಶ್ರೀರಂಗಪಟ್ಟಣದ ಕಾವೇರಿ ಪ್ರೌಢ ಶಾಲಾ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮಂಡ್ಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿಕಲ ಚೇತನ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಮತ್ತು ಬಿ.ಜಿ.ಎಸ್ ಪದವಿ ಪೂರ್ವ ಕಾಲೇಜು ಇವರುಗಳ ಸಂಯುಕ್ತ ಆಶ್ರಯದಲ್ಲಿ 78 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ “ನಶಾ ಮುಕ್ತ ಭಾರತ ಅಭಿಯಾನ” ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಮದ್ಯಪಾನ, ಧೂಮಪಾನ,
ಗಾಂಜಾ, ಕೋಕೆನ, ಬ್ರೌನ್ ಶುಗರ್, ಅಫೀಮುಗಳಂತಹ ಮಾದಕ ವಸ್ತುಗಳಿಂದ ವಿದ್ಯಾರ್ಥಿಗಳು ಹಾಗೂ ತಮ್ಮ ಪಾಲಕರೂ ಕೂಡ ದೂರವಿರಬೇಕು. ಇವುಗಳಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ. ಜೊತೆಗೆ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ. ಕೂತುಹಲಕ್ಕಾಗಿ ಯಾರೊಬ್ಬರೂ ಮಾದಕ ದ್ರವ್ಯಗಳನ್ನು ಬಳಸಬಾರದು. ದೇಶದ ಯುವ ಜನತೆ ಮಾದಕ ವ್ಯಸನ ಎಂಬ ಜಾಲದಲ್ಲಿ ಸಿಕ್ಕಿ ನರಳುತ್ತಿದ್ದಾರೆ.
ಇತ್ತೀಚೆಗೆ ಯುವ ಸಮೂಹ ಮಾದಕವೆಂಬ ವಿಷ ವರ್ತುಲದಲ್ಲಿ ಭಾಗವಹಿಸುತ್ತಿದೆ. ಚಟಗಳು ಮೊದಲು ಸಂತೋಷ್ ನೀಡಿದರೂ, ನಂತರ ಮನಸ್ಸಿನ ನೆಮ್ಮದಿ ಹಾಗೂ ಆರೋಗ್ಯವನ್ನು ಹಾಳು ಮಾಡುತ್ತದೆ. ಕ್ಷಣಿಕ ಸುಖ ನೀಡುವ ಮೋಹಕ್ಕೆ ಬಿದ್ದು ಸುಂದರವಾದ ಜೀವನ ಹಾಳು ಮಾಡಿಕೊಳ್ಳುವದು ಬೇಡ. ಅಭ್ಯಾಸ ಹಾಗೂ ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಿ ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣ ನಮ್ಮೆಲ್ಲರ ಗುರಿಯಾಗಬೇಕು ಬನ್ನಿ “ನಶಾ ಮುಕ್ತ ಮಂಡ್ಯ ಜಿಲ್ಲೆ” ನಿರ್ಮಾಣ ಮಾಡಲು ನಾವೆಲ್ಲರೂ ಸಂಕಲ್ಪ ಮಾಡೋಣ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಮಾದಕ ವಸ್ತುಗಳ ಸೇವನೆ ಮಾಡದಿರವು ಬಗ್ಗೆ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಂಶುಪಾಲೆ ಜಯಶ್ರೀ ಎಂ, ಮುಖ್ಯ ಶಿಕ್ಷಕ ಮುದ್ದುರಾಜು, ಎನ್, ಸಹಶಿಕ್ಷಕರಾದ ಕುಮಾರಸ್ವಾಮಿ, ಮಂಜುನಾಥ, ಚಂದ್ರಶೇಖರ್, ದೈಹಿಕ ಶಿಕ್ಷಕ ಸಿ.ಆರ್.ಪಾಪಣ್ಣ, ಕಾಲೇಜು ಉಪನ್ಯಾಸಕರಾದ ಅಮ್ರಿನ ಆಲo, ಸರಿತ, ನಿರ್ಮಲ, ಶ್ರೀಶಾದಾಸ್ ಹಾಗೂ ಕಾಲೇಜು ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.
ನಂತರ ಕಾಲೇಜು ಮಕ್ಕಳಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಾರ್ವಜನಿಕರಿಗೆ ಅರಿವು ಮೂಡಿಸಿದರು.
-
Mysore4 months ago
ಶ್ರೀಮತಿ ಭವಾನಿ ರೇವಣ್ಣ ಸಹೋದರ ಇಂದು ಅಂತ್ಯಕ್ರಿಯೆ
-
State6 months ago
Free sewing machine, ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಸಲ್ಲಿಸಿ!
-
State6 months ago
ಶಾಲಾ ಮಕ್ಕಳಿಗೆ ಫೆಬ್ರವರಿ ತಿಂಗಳಲ್ಲಿ ಭರ್ಜರಿ ಹಾಲಿಡೇ! ಇಲ್ಲಿದೆ ರಜಾ ಲಿಸ್ಟ್!!!
-
Health6 months ago
Sugar Control ಆಗಬೇಕು ಅಂದ್ರೆ ಈ ಹಿಟ್ಟನ್ನು ತಿನ್ನಬೇಕಂತೆ! ಕನ್ಫ್ಯೂಸ್ ಆಗ್ಬೇಡಿ ಸುದ್ದಿ ಓದಿ
-
Hassan4 months ago
ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಹೇಳಿಕೆ
-
Uncategorized2 months ago
NEET 2024 ಮರು ಪರೀಕ್ಷೆಗೆ ಒತ್ತಾಯ: ಪೇಪರ್ ಲೀಕ್, ಮೋಸದ ಗ್ರೇಸ್ ಮಾರ್ಕ್, ಒಂದೇ ಕೇಂದ್ರದ ವಿದ್ಯಾರ್ಥಿಗಳು ಟಾಪರ್ಸ್ !!
-
Uncategorized8 months ago
ಅರ್ಜುನನ ಸಮಾದಿಗೆ ಪೂಜೆ ಸಲ್ಲಿಸಿದ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
-
State6 months ago
ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ!!. ‘ಹಳೆ ಪಿಂಚಣಿ’ ಜಾರಿಗೆ ಗ್ರೀನ್ ಸಿಗ್ನಲ್ ಕೊಟ್ಟ ರಾಜ್ಯ ಸರ್ಕಾರ.