Connect with us

Mandya

ಮನುಷ್ಯರ ಜೀವ ಉಳಿಸಲು ರಕ್ತದಾನದಿಂದ ಸಾಧ್ಯ: ನ್ಯಾ. ರೂಪ

Published

on

ಶ್ರೀರಂಗಪಟ್ಟಣ : ರಕ್ತದಾನದಂತಹ ಪವಿತ್ರ ಕಾರ್ಯದಿಂದ ಮಾತ್ರ ಮನುಷ್ಯರ ಜೀವ ಉಳಿಸಲು ಸಾಧ್ಯ, ಇದರ ಅರಿವು ಎಲ್ಲರಿಗೂ ಅಗತ್ಯವಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ರೂಪ ಎಂ.ಡಿ. ಹೇಳಿದರು.

ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಸ್ವಾಮೀ ವಿವೇಕಾನಂದ, ಶ್ರೀಬಾಲಗಂಗಾಧರನಾಥ ಸ್ವಾಮೀಜಿ, ಶ್ರೀ ಸುಭಾಷ್ ಚಂದ್ರ ಬೋಸ್ ಅವರ ಜಯಂತಿ ಹಾಗೂ ದಿ. ಮಾಜಿ ಮುಖ್ಯ ಮಂತ್ರಿ ಎಸ್.ಎಂ.ಕೃಷ್ಣ ಅವರ ನೆನಪಿನ ಅಂಗವಾಗಿ, ಓಂ ಶ್ರೀನಿಕೇತನ ಟ್ರಸ್ಟ್, ವಕೀಲರ ಸಂಘ, ಉದ್ಯೋಗದಾತ ಪೌಂಡೇಷನ್ ಇವರ ಸಹಯೋಗದಲ್ಲಿ ನಡೆದ ಬೃಹತ್ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದಿನ ನಿತ್ಯ ಸಂಭವಿಸುತ್ತಿರುವ ಅಪಘಾತದ ಗಾಯಾಳುಗಳಿಗೆ, ಹೆರಿಗೆಗೆ ದಾಖಲಾಗುವ ಗರ್ಭಿಣಿಯರಿಗೆ, ರಕ್ತಹೀನತೆ ಹಾಗೂ ಇತರೆ ರೋಗಗಳಿಂದ ಬಳಲುತ್ತಿರುವವರಿಗೆ ತುರ್ತಾಗಿ ರಕ್ತದ ಅಗತ್ಯವಿರುತ್ತದೆ. ೧೮ ರಿಂದ ೬೫ ವರ್ಷದ ನಡುವಿನ ಆರೋಗ್ಯವಂತರು ರಕ್ತದಾನ ಮಾಡಿ ಇಂತಹ ಪವಿತ್ರ ಕಾರ್ಯದಲ್ಲಿ ಭಾಗವಹಿಸಿ ರಕ್ತದಾನ ಮಾಡಬೇಕು. ಜೊತೆಗೆ ರಕ್ತದಾನ ಕುರಿತು ಬೇರೆಯವರಿಗೂ ಜಾಗೃತಗೊಳಿಸಲು ಮುಂದಾಗಬೇಕು ಎಂದು ಅವರು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಓಂ ಶ್ರೀನಿಕೇತನ ಸಂಸ್ಥೆ ಅಧ್ಯಕ್ಷ ಹಾಗೂ ವಕೀಲ ಎಂ.ಪುಟ್ಟೇಗೌಡ ಮಾತನಾಡಿ, ರಕ್ತದಾನ ಮಾಡುವುದು ಜೀವ ಉಳಿಸುವ ಪ್ರಕ್ರಿಯೆ ಆಗಿದ್ದು , ಈ ಪ್ರಯತ್ನಕ್ಕೆ ನಾವೆಲ್ಲರೂ ಕೈಜೋಡಿಸಿ, ರಕ್ತದಾನ ಮಾಡಿ ಮತ್ತೊಬ್ಬರ ಜೀವ ಉಳಿಸುವ ಕೆಲಸ ಮಾಡಬೇಕು. ಜೊತೆಗೆ ಇಂದಿನ ಯುವಕರು ರಕ್ತ ದಾನ ದಂತಹ ಪವಿತ್ರ ಕಾರ್ಯದಲ್ಲಿ ಸ್ವಯಂ ಪ್ರೇರಿತರಾಗಿ ಭಾಗವಹಿಸಿ ರಕ್ತದಾನ ಮಾಡಬೇಕು ಎಂದು ಹೇಳಿದರು.

ನ್ಯಾಯಾಧೀಶರಾದ ವಿಜಯಕುಮಾರ್, ಹನುಮಂತರಾಯಪ್ಪ ಬಿ.ಆರ್, ತಹಶೀಲ್ದಾರ್ ಪರುಶುರಾಮ್ ಸತ್ತಿಗೇರಿ ಕಾರ್ಯಕ್ರಮ ಕುರಿತು ಮಾತನಾಡಿದರು.

ಈ ವೇಳೆ ವಕೀಲರ ಸಂಘದ ಅಧ್ಯಕ್ಷ ಸತ್ಯನಾರಾಯಣ, ತಾ.ಪಂ ಇಒ ವೇಣು, ಉದ್ಯೋತದಾತ ಪೌಂಡೇಷನ್ ಮುಖ್ಯಸ್ಥ ರುಕ್ಮಾಂಗದ, ಶೇಷಾಂದ್ರಿ ಪುರಂ ಎಂಜಿನಿಯರ್ ಕಾಲೇಜಿನ ಎನ್‌ಎಸ್‌ಎಸ್ ಅಧಿಕಾರಿ ಡಾ.ರಾಘವೇಂದ್ರ, ಮಂಡ್ಯ ಮತ್ತು ಮೈಸೂರು ರಕ್ತ ನಿಧಿ ಕೇಂದ್ರದ ಸಿಬ್ಬಂದಿಗಳು ರಕ್ತ ಶೇಖರಣೆ ಮಾಡಿಕೊಂಡರು.

ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಪೊಲೀಸ್ ಇಲಾಖೆ, ಸರ್ಕಾರಿ ಇಲಾಖೆ ಅಧಿಕಾರಿಗಳು, ಪತ್ರಕರ್ತರು, ವಕೀಲರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಸೇರಿದಂತೆ ನೂರಕ್ಕೂ ಹೆಚ್ಚು ಮಂದಿ ಬೃಹತ್ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಸ್ವಯಂ ಪ್ರೇರಿತ ರಕ್ತದಾನ ಮಾಡಿದರು.

Continue Reading

Mandya

ಡಾ.ಶಾಮನೂರು ಶಿವಶಂಕರಪ್ಪ ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕ ವ್ಯಕ್ತಿ: ಎಸ್.ಎಂ.ಗಂಗಾಧರ

Published

on

ಮದ್ದೂರು: ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ಅವರು ಸುದೀರ್ಘವಾದ ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕವಾಗಿ ಹಾಗೂ ದಕ್ಷತೆಯಿಂದ ಕರ್ತವ್ಯನಿರ್ವಹಿಸಿ ಸಹಸ್ರಾರು ಮಂದಿಗೆ ಅನುಕೂಲ ಕಲ್ಪಿಸಿದ್ದಾರೆಂದು ಶರಣರ ಸಂಘಟನೆ ವೇದಿಕೆ ತಾಲೂಕು ಅಧ್ಯಕ್ಷ ಎಸ್.ಎಂ.ಗಂಗಾಧರ ತಿಳಿಸಿದರು.

ನಗರದ ಶರಣರ ಸಂಘಟನೆಯ ವೇದಿಕೆಯ ಕಚೇರಿಯಲ್ಲಿ ಸೋಮವಾರ ಶಾಮನೂರು ಶಿವಶಂಕರಪ್ಪ ಅವರಿಗೆ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

 

ಡಾ.ಶಾಮನೂರು ಶಿವಶಂಕರಪ್ಪ ಅವರು ಜನ ಕಲ್ಯಾಣ ಟ್ರಸ್ಟ್ ಮೂಲಕ ಹಲವಾರು ಜನಪರ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಇವರ ನಿಧನ ಸಮಾಜಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಕಂಬಿನಿ ಮಿಡಿದರು.

ವೀರಶೈವ ವೇದಿಕೆಯ ಕಲ್ಲೇಶ್‌ ಕುಮಾರ್, ನಟರಾಜ್, ಬಸವಣ್ಣ, ಗಿರೀಶ್, ರಶ್ಮಿ, ನಾಗೇಶ್, ಶಿಲ್ಪವಿಶ್ವನಾಥ್, ನಾಗರತ್ನ, ಎಂ.ಎನ್.ಬಸವಣ್ಣ ಸೇರಿದಂತೆ ಇತರರು ಇದ್ದರು.

Continue Reading

Mandya

ಮಹಾನ್‌ ನಾಯಕರ ಪುತ್ಥಳಿ ನಿರ್ಮಾಣದ ಭರವಸೆ ನೀಡಿರುವ K.M. ಉದಯ್‌ ನಿರ್ಧಾರ ಪ್ರಶಂನೀಯ: ಆನಂದಚಾರಿ

Published

on

ಮದ್ದೂರು: ನಗರದ ಪೇಟೆ ಬೀದಿ ಅಗಲೀಕರಣ ಸಂದರ್ಭದಲ್ಲಿ ಪ್ರಮುಖ ಸರ್ಕಲ್‌ಗಳಿಗೆ ಅನೇಕ ಸಮುದಾಯಗಳ ಮಹಾನ್ ನಾಯಕರ ಪುತ್ಥಳಿ ನಿರ್ಮಾಣಕ್ಕೆ ಮುಂದಾಗಿರುವ ಶಾಸಕ ಕೆ.ಎಂ .ಉದಯ್ ಕ್ರಮ ಪ್ರಶಂಸನೀಯ ಎಂದು ವಿಶ್ವಕರ್ಮ ಸಮಾಜದ ಜಿಲ್ಲಾ ಜಿಲ್ಲಾಧ್ಯಕ್ಷ ತೈಲೂರು ಆನಂದಚಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಶ್ವಕರ್ಮ ಸಮುದಾಯದ ಬಹಳ ದಿನದ ಬೇಡಿಕೆಗಳಲ್ಲಿ ಒಂದಾದ ಅಮರಶಿಲ್ಪಿ ಜಕ್ಕಣ್ಣಾಚಾರಿ ರವರ ಸರ್ಕಲ್ ಹಾಗೂ ಅವರ ಪ್ರತಿಮೆ ನಿರ್ಮಾಣ ಮಾಡಲು ಮುಂದಾಗಿರುವ ಜತೆಗೆ ಅನೇಕ ಮಹನೀಯರ ಪ್ರತಿಮೆ ನಿರ್ಮಾಣ ಮಾಡುತ್ತಿರುವುದು ಸಂತಸ ತಂದಿದೆ ಎಂದು ಪ್ರಕಟಣೆಯಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ.

 

ತಾಲೂಕಿನ ಕಾಯಕ ಸಮುದಾಯಗಳ ಬಗ್ಗೆ ಕಾಳಜಿಯನ್ನು ಇಟ್ಟು ಬಡ ವಿದ್ಯಾರ್ಥಿಗಳಿಗೆ ನೆರವು ನೀಡುತ್ತಾ ಬಡವರಿಗೆ ಆಶ್ರಯ ಯೋಜನೆಯ ಜತೆಗೆ ದೇವಾಲಯಗಳಿಗೆ ನೆರವು ನೀಡುತ್ತಾ ತಾಲೂಕಿನಲ್ಲಿ ಎಂದೂ ಕಾಣದ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ ಶಾಸಕ ಕೆ.ಎಂ. ಉದಯ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ವಿಶ್ವಕರ್ಮ ಸಮುದಾಯ ಭವನ ಹಾಗೂ ವಿಶ್ವಕರ್ಮ ಕುಲದೇವತೆ ಕಾಳಿಕಾಂಬ ದೇವಸ್ಥಾನಕ್ಕೆ ನಿವೇಶನ ನೀಡಬೇಕು. ಕಾಯಕ ಸಮುದಾಯಗಳ ಸಮುದಾಯ ಭವನಕ್ಕೆ ಹಾಗೂ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಸಹಕರಿಸಬೇಕು ಹಾಗೂ ಸಂಘ ಸಂಸ್ಥೆಗಳ ಬೆಂಬಲಿಸುವುದರ ಜತೆಗೆ ಅವರ ಮನವಿಗೆ ಸ್ಪಂದಿಸಬೇಕೆಂದು ಮನವಿ ಮಾಡಿದ್ದಾರೆ.

Continue Reading

Mandya

5 ತಿಂಗಳೊಳಗೆ ಮದ್ದೂರು ನಗರದ ಕಾಮಗಾರಿ ಆರಂಭವಾಗಲಿದೆ: ಕೆ. ಎಂ. ಉದಯ್

Published

on

ಮದ್ದೂರು : 5 ತಿಂಗಳೊಳಗೆ ನಗರದ ಪೇಟೆಬೀದಿ ಆಗಲೀಕರಣ ಕಾಮಗಾರಿ ಆರಂಭವಾಗಲಿದೆ ಎಂದು ಶಾಸಕ ಕೆ. ಎಂ. ಉದಯ್ ಹೇಳಿದರು.

ಈ ಬಗ್ಗೆ ಕದಲೂರಿನ ಅವರ ನಿವಾಸದ ಕಚೇರಿಯಲ್ಲಿ ಸೋಮವಾರ ಕರೆಯಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಮೊದಲು ನಗರದ ಪ್ರಮುಖ ಬೀದಿಯಾದ ಪೇಟೆ ಬೀದಿಯನ್ನು 100 ಅಡಿಗೆ ವಿಸ್ತರಣೆ ಮಾಡಲು ಅನುಮೋದನೆ ಪಡೆಯಲಾಗಿತ್ತು. ಅದರಂತೆ ಸಂಬಂಧಪಟ್ಟ ಆಧಿಕಾರಿಗಳು ಡಿಪಿಆರ್ ಅನ್ನೂ ಕೂಡಾ ಸಿದ್ಧಪಡಿಸಿದ್ದರು. ಆದರೆ ಇತ್ತೀಚೆಗೆ ಕಾರಣಾಂತರಗಳಿಂದ 80 ಅಡಿಗಳಿಗೆ ವಿಸ್ತರಣೆ ಮಾಡಲು ಸಿಎಂ ಸಿದ್ದರಾಮಯ್ಯ ರವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಮಟ್ಟದ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ತೀರ್ಮಾನವಾದ ಹಿನ್ನೆಲೆಯಲ್ಲಿ ಮತ್ತೆ 80 ಅಡಿಗಳಿಗೆ ಡಿ ಪಿ ಆರ್ ಅನ್ನು ಸಿದ್ದಪಡಿಸಿ ಇಷ್ಟರಲ್ಲೇ ಕಳುಹಿಸಲಾಗುವುದು ಎಂದು ಹೇಳಿದರು.


ಅದಕ್ಕಾಗಿಯೇ ಇಂದು ತಹಸೀಲ್ದಾರ್, ಪೌರಾಡಳಿತ ಆಯುಕ್ತೆ, ಪಿ ಡಬ್ಲ್ಯೂ ಡಿ ಅಧಿಕಾರಿಗಳು ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇನೆ, ರಸ್ತೆಯ ವಿನ್ಯಾಸ ಸೇರಿದಂತೆ ಹಲವು ವಿಷಯದ ಬಗ್ಗೆ ಚರ್ಚಿಸಲಾಯಿತು ಎಂದರು.

ಮುಂದಿನ ದಿನಗಳಲ್ಲಿ ವಿಸ್ತರೀಕರಣಕ್ಕೆ ಜಾಗವನ್ನು ಕಳೆದುಕೊಳ್ಳುವವವರಿಗೆ ಈಗಿರುವ ಮೌಲ್ಯಕ್ಕಿಂತ 2 ಪಟ್ಟು ಪರಿಹಾರ ಹಾಗೂ ಶಿಫ್ಟಿಂಗ್ ಗಾಗಿ ಹೆಚ್ಚುವರಿಯಾಗಿ 5ಲಕ್ಷ ರೂ ಗಳನ್ನು ನೀಡುವುದಾಗಿ ತಿಳಿಸಿದರು.


ಈ ವೇಳೆ ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

Continue Reading

Trending

error: Content is protected !!