Mandya
ನಾಗಮಂಗಲ ಬಿಜೆಪಿ-ಜೆಡಿಎಸ್ ಮೈತ್ರಿ ಸಮಾವೇಶ
ನಾಗಮಂಗಲ: ಚುನಾವಣೆಯಲ್ಲಿ ಕಾಂಗ್ರೆಸ್ ಹಲವಾರು ಸುಳ್ಳು ಹೇಳುತ್ತಿದೆ. ಜೆಡಿಎಸ್ ಮುಗಿಸಲು ಕಾಂಗ್ರೆಸ್ ತೀರ್ಮಾನಿಸಿದೆ ಎಂದು ನಾಗಮಂಗಲ ಮಾಜಿ ಶಾಸಕ ಸುರೇಶ್ ಗೌಡ ಹೇಳಿದರು.
ಜೆಡಿಎಸ್, ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಜೆಡಿಎಸ್ ಹಾಗೂ ಬಿಜೆಪಿ ಪಕ್ಷದ ಶಕ್ತಿ ಕಾರ್ಯಕರ್ತರು.
ನಾಗಮಂಗಲ: ಚುನಾವಣೆಯಲ್ಲಿ ಕಾಂಗ್ರೆಸ್ ಹಲವಾರು ಸುಳ್ಳು ಹೇಳುತ್ತಿದೆ. ಜೆಡಿಎಸ್ ಮುಗಿಸಲು ಕಾಂಗ್ರೆಸ್ ತೀರ್ಮಾನಿಸಿದೆ ಎಂದು ನಾಗಮಂಗಲ ಮಾಜಿ ಶಾಸಕ ಸುರೇಶ್ ಗೌಡ ಹೇಳಿದರು.
ಜೆಡಿಎಸ್, ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಜೆಡಿಎಸ್ ಹಾಗೂ ಬಿಜೆಪಿ ಪಕ್ಷದ ಶಕ್ತಿ ಕಾರ್ಯಕರ್ತರು.
ಕುಮಾರಣ್ಣ ಅಭ್ಯರ್ಥಿ ಆಗಲು ಬಯಸಿರಲಿಲ್ಲ. ನಮ್ಮ ಒತ್ತಾಯದಂತೆ ಪಕ್ಷದ ಉಳಿವಿಗಾಗಿ ಅವರು ಅಭ್ಯರ್ಥಿ ಆಗಿದ್ದಾರೆ.
ಅಧಿಕಾರಕ್ಕೆ ಬಂದರೆ ಹತ್ತು ಕೆಜಿ ಅಕ್ಕಿ ಕೊಡುವುದಾಗಿ ಸಿದ್ದರಾಮಯ್ಯ ಹೇಳಿದ್ರು. ಕೊರೊನಾ ವೇಳೆ 5ಕೆಜಿ ಅಕ್ಕಿ 2ಕೆಜಿ ರಾಗಿಯನ್ನ ಮೋದಿ ಕೊಡ್ತಿದ್ರು. ಯಾರಿಗೂ ಅವರು ಹೇಳಿ ಕೊಡಲಿಲ್ಲ. ಕಾಂಗ್ರೆಸ್ ಸರ್ಕಾರ ಹೇಳಿದಂತೆ 15ಕೆಜಿ ಅಕ್ಕಿ ಕೊಡಬೇಕಿತ್ತು. ಆದರೆ 3ಕೆಜಿ ಅಕ್ಕಿ ಕೊಟ್ಟು 10ಕೆಜಿ ಕೊಟ್ಟೆ ಎಂದು ಸುಳ್ಳು ಹೇಳುತ್ತಿದೆ. 4ರೂ ಇದ್ದ ಯೂನಿಟ್ 7ರೂಪಾಯಿ ಮಾಡಿದ್ದಾರೆ. ರೈತ ವಿದ್ಯುತ್ ಸಂಪರ್ಕ ಪಡೆಯಲು 2.5ಲಕ್ಷ ಕೊಡಬೇಕು. ಇದು ನೀವು ಕೊಡ್ತಿರುವ ಫ್ರೀ ವಿದ್ಯುತ್?
ಬಸ್ ದರ ಹೆಚ್ಚಿಸಿ ಹೆಂಗಸರಿಗೆ ಫ್ರೀ ಅಂತಾರೆ. ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದು ಫ್ರೀ ಕಾರ್ಯಕ್ರಮವಾ?
ಸ್ಟಾಂಟ್ ಪೇಪರ್, ಆರ್‌ಟಿಸಿ ಬೆಲೆ ಹೆಚ್ಚಿಸಿದ್ದೀರಿ. ಎಷ್ಟು ದಿನ ಜನಕ್ಕೆ ಮೋಸ ಮಾಡ್ತೀನಿ. ಪಾಪ ಮಂತ್ರಿ ಯಾಕೆ ಅಳುತ್ತಿದ್ದಾನೋ ಗೊತ್ತಿಲ್ಲ.
ಯಾಕಪ್ಪ ಅಳುತ್ತಿದ್ದೀಯಾ ಕಂದ.
ಮೋಸದಿಂದ ಗೆದ್ದೆ ಅಂತಾಲ? ಲೂಟಿ ಹೊಡೆದದ್ದು ಸಾಕಾಲಿಲ್ಲಾ ಅಂತಾನಾ? ಬೇರೆಯವರು ಹೃದಯದಿಂದ ಅತ್ತರೆ ತಪ್ಪು, ನೀನು ಗ್ಲಿಸರೀನ್ ಹಾಕೊಂಡು ಅಳಬಹುದಾ? ಎಂದು ಸಚಿವ ಚಲುವರಾಯಸ್ವಾಮಿ ವಿರುದ್ಧ ವ್ಯಂಗ್ಯವಾಡಿದರು.
ಕಾಂಗ್ರೆಸ್ ಗೆಲ್ಲಿಸಿ ತಪ್ಪಾಯ್ತು ಎಂದು ಕಾಂಗ್ರೆಸ್ ಪಕ್ಷದವರೆ ಹೇಳ್ತಿದ್ದಾರೆ.
ಸೋತಾಗ 5ವರ್ಷ ಎಲ್ಲಿ ಹೋಗಿದ್ದೆ.
ಮಂತ್ರಿ ಆಗಿದ್ಯಲ್ಲಾ ತಾಕತ್ತಿದ್ದರೆ ನೀನು ನಿಲ್ಲಬೇಕು ಎಂಪಿ ಚುನಾವಣೆಗೆ. ನಿನ್ನ ಧರ್ಮಪತ್ನಿ ನಿಲ್ಲಸಬೇಕಿತ್ತು. ಅಭಿವೃದ್ಧಿ ಮಾಡಿದ್ದರೆ ನೀನು ಸ್ಪರ್ಧೆ ಮಾಡಬೇಕಿತ್ತು ಅಲ್ವಾ? ಪಾಪ ಚಂದ್ರಣ್ಣ, ಹಾಲು ಕೊಡುವ ಹಸು ಎಂದು ಕರೆದು ಗೊಡ್ಡು ಹಸ ಮಾಡ್ತಿದ್ದೀರಾ? ಈ ಸರ್ಕಾರ ಎಷ್ಟು ದಿನ ಇರುತ್ತದೋ ಗೊತ್ತಿಲ್ಲ.
ಈ ಸರ್ಕಾರದಲ್ಲಿ ಅಸಮಾಧಾನ ತುಂಬಿ ತುಳುಕುತ್ತಿದೆ. ಯಾರು ಏನೇ ಹೇಳಿದ್ರು ಕುಮಾರಸ್ವಾಮಿ ಗೆದ್ದೆ ಗೆಲ್ತಾರೆ ಮಂತ್ರಿ ಆಗ್ತಾರೆ.
ಕುಮಾರಸ್ವಾಮಿ ಬಂದಿರೋದೆ, ಚಲುವರಾಯಸ್ವಾಮಿ ಬಲಿ ಹಾಕೋಕೆ.
ಕಾಂಗ್ರೆಸ್ ಇಡೀ ದೇಶದಲ್ಲಿ ಗೆಲ್ಲೋದೆ 30-40 ಸೀಟು. ಇವರು ಸರ್ಕಾರ ಮಾಡಲು ಆಗುತ್ತಾ? ರೈತರು ಆತ್ಮಹತ್ಯೆ ಮಾಡಿಕೊಂಡಾಗ ಬಂದದ್ದು ಕುಮಾರಣ್ಣ. ಆತ್ಮಹತ್ಯೆ ಮಾಡಿಕೊಳ್ಳಬೇಡಿ ನಿಮ್ಮ ಸಾಲ ಮನ್ನಾ ಮಾಡ್ತೀನಿ ಎಂದು ಮಾಡಿದ್ರು. ಕುಮಾರಣ್ಣರನ್ನ ಉಳಿಸಿಕೊಳ್ಳಿ, ಉಳಿಸಿಕೊಳ್ಳಿ.
ಇದು ನಮ್ಮ ಪಕ್ಷದ ಭವಿಷ್ಯದ ಪ್ರಶ್ನೆ ಎಂದು ಮನವಿ ಮಾಡಿದರು.
ಮೈತ್ರಿ ಅಭ್ಯರ್ಥಿ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿ, ಕಾಂಗ್ರೆಸ್ ಜೊತೆ ಸೇರಿದಾಗ ನನ್ನನ್ನ ಹೀನಾಯವಾಗಿ ನಡೆಸಿಕೊಂಡರು. ಅವರು ಏನೇನು ಮಾಡಿದ್ರು ಅನ್ನೋದನ್ನ ಕಾಲಭೈರವೇಶ್ವರನ ಪಾದಕ್ಕೆ ಹಾಕ್ತೇನೆ. ರೈತರ ಕುಟುಂಬ ಉಳಿಸಲು, ತಾಯಂದಿರ ಮಾಂಗಲ್ಯ ಉಳಿಸಲು ರೈತರ ಸಾಲಮನ್ನಾ ಮಾಡಿದೆ. ನಾನು ಏನು ಮಾಡಿದೆ ಅಂತಾ ಕೇಳ್ತಾರೆ. ನನ್ನ ಈ ಜಿಲ್ಲೆಯ ಜನಕ್ಕೆ ನಾನು ಎಂದೂ ದ್ರೋಹ, ಅನ್ಯಾಯ ಮಾಡಿಲ್ಲ. ನಾನು ಸಿಎಂ ಆಗಿದ್ರಿಂದ ಮಂಡ್ಯದಲ್ಲಿ ಅವರು ಅಭಿವೃದ್ಧಿ ಮಾಡಲು ಸಾಧ್ಯವಾಯ್ತು.
ರೈತರು ಆತ್ಮಹತ್ಯೆ ಮಾಡಿಕೊಂಡಾಗ ಈತ ಯಾರ ಮನೆಗೆ ಹೋಗಿದ್ದ? ಏನ ಸಹಾಯ ಮಾಡಿದ್ರು ಗೊತ್ತಿಲ್ಲ ಎಂದು ಸಚಿವ ಚಲುವರಾಯಸ್ವಾಮಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ಮಂಡ್ಯ ಜಿಲ್ಲೆಯ ಜನರು ನನಗೆ ದೊಡ್ಡ ಶಕ್ತಿ ಕೊಟ್ಟಿದ್ದಾರೆ. ನಾನು ಹುಟ್ಟಿದ್ದು ಹಾಸನ ಜಿಲ್ಲೆಯಲ್ಲಿ.
ರಾಜಕೀಯ ಜನ್ಮ ಕೊಟ್ಟಿದ್ದು ರಾಮನಗರ.
ನನಗೆ ರಾಜ್ಯದಲ್ಲಿ ದೊಡ್ಡ ಶಕ್ತಿ ಕೊಟ್ಟಿದ್ದು ಮಂಡ್ಯ. ಕೊಬ್ಬರಿ ದರ ಹೆಚ್ಚಳದ ಬಗ್ಗೆ ಮೋದಿಯವರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದೆ.
ಬರೀ ಘೋಷಣೆ ಮಾಡಿದೆ, ಇನ್ನು ಬಿಡುಗಾಸನ್ನ ರಾಜ್ಯ ಸರ್ಕಾರ ಕೊಟ್ಟಿಲ್ಲ. 6 ತಿಂಗಳಿಂದ ಹಾಲಿನ ಪ್ರೋತ್ಸಾಹ ಧನ ಕೊಟ್ಟಿಲ್ಲ.
ಮಂಡ್ಯ ಜಿಲ್ಲೆ ಕಳೆದುಕೊಂಡ್ರೆ ನಾವು ಸಂಪೂರ್ಣ ನೆಲಕಚ್ಚುತ್ತೇವೆ ಅನ್ನೋದು ಗೊತ್ತು. ಹೀಗಾಗಿ ನಾನು ಮಂಡ್ಯದಿಂದ ಸ್ಪರ್ಧಿಸ್ತಾ ಇದ್ದೀನಿ.
ನನಗೆ ಹಾಲನ್ನಾದ್ರೂ ಕೊಡಿ, ವಿಷವನ್ನಾದ್ರೂ ಕೊಡಿ.
ಎರಡನ್ನೂ ಸಮಚಿತ್ತದಿಂದ ಸ್ವೀಕರಿಸ್ತೇನೆ. ಮದ್ದೂರಿನ ತಿಮ್ಮದಾಸ್ ಹೋಟೆಲ್ನಲ್ಲಿ ಏನು ನಡೀತ್ತಿದೆ. ಬಸ್ ನಲ್ಲಿ ಕರೆತಂದು ಹಗಲು ರಾತ್ರಿ ಆನ್ ಲೈನ್ ಗೇಮ್ ಹಾಡಿಸ್ತಿದ್ದಾರೆ. ಹಣದಿಂದ ಗೆಲ್ತೀವಿ ಅನ್ನೋ ದುರಂಕಾರದ ಮಾತಾಡ್ತಿದ್ದಾರೆ. ಮಂಡ್ಯ ಜಿಲ್ಲೆಯ ಜನ ದೇಶಕ್ಕೆ ಮಾದರಿಯಾಗಿ ಉತ್ತರ ಕೊಡಿ.
ಹಾಲಲ್ಲಾದ್ರೂ ಹಾಕಿ, ನೀರಲ್ಲಾದ್ರೂ ಹಾಕಿ.
ನಾಗಮಂಗಲದ ಜನ ಸ್ವಾಭಿಮಾನದಿಂದ ಬದುಕುವ ಜನ.
ಗ್ಯಾರಂಟಿಗಳ ಹೆಸರಲ್ಲಿ ಖಾಲಿ ಚೊಂಬು ಜಾಹೀರಾತು ಕೊಡ್ತಿದ್ದಾರೆ.
ಸಿಕ್ಕ ಸಿಕ್ಕಂತೆ ಲೂಟಿ ಮಾಡಿ, ಸರ್ಕಾರದ ಖಜಾನೆ ಖಾಲಿ ಮಾಡಿದ್ದಾರೆ ಎಂದು ಕಾಂಗ್ರೆಸ್ ವಿರುದ್ದ ಹೆಚ್ಡಿಕೆ ಹರಿಹಾಯ್ದರು.
ಸಮಾವೇಶದಲ್ಲಿ ಬಿಜೆಪಿ ಸಂಸದ ಪ್ರತಾಪ್ ಸಿಂಹ, ಜೆಡಿಎಸ್ ಬಿಜೆಪಿ ಮಾಜಿ ಶಾಸಕರು, ಮುಖಂಡರುಗಳು ಉಪಸ್ಥಿತರಿದ್ದರು.


Mandya
ನಾಗಮಂಗಲದಲ್ಲಿ ಗಣೇಶ ಹಬ್ಬ, ಈದ್ ಮಿಲಾದ್ ಹಬ್ಬದ ಅಂಗವಾಗಿ ಪೊಲೀಸರಿಂದ ಪೂರ್ವ ಸಿದ್ಧತೆ
ನಾಗಮಂಗಲ: ಗೌರಿ-ಗಣೇಶ ಹಬ್ಬವನ್ನು ಶಾಂತಿ , ಸೌಹಾರ್ದತೆ ಮತ್ತು ಶ್ರದ್ಧಾ , ಭಕ್ತಿ ಯಿಂದ ಆಚರಿಸುವ ಮೂಲಕ ಸಾರ್ವಜನಿಕರು ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕು. ಹಾಗೂ ಪೋಲಿಸ್ ಇಲಾಖೆಯೊಂದಿಗೆ ಸಾರ್ವಜನಿಕರು ಸಂಪರ್ಕದಲ್ಲಿದ್ದರೆ ತಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಅಪರಾಧ ಪ್ರಕರಣಗಳು ನಡೆಯದಂತೆ ತಡೆಯಲು ಸಹಕಾರಿಯಾಗುತ್ತದೆ ಎಂದು ಮಂಡ್ಯ ಜಿಲ್ಲೆ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ
ಅಭಿಪ್ರಾಯಪಟ್ಟರು.
ಅವರು ಪಟ್ಟಣದ ಸೌಮ್ಯ ಕೇಶವ ದೇವಾಲಯದಿಂದ ಪ್ರಮುಖ ಬೀದಿಗಳಲ್ಲಿ ಸೂಕ್ಷ್ಮ ಪ್ರದೇಶದ ವೃತ್ತಗಳಲ್ಲಿ ಸುಮಾರು 250ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಗರದಲ್ಲಿ ಪಥ ಸಂಚಲನ ನಡೆಸಿ ಸಾರ್ವಜನಿರ ರಕ್ಷಣೆ ಮತ್ತು ಸೇವೆಗಾಗಿ ಪೋಲಿಸ್ ಇಲಾಖೆಯು ಸದಾ ಸಿದ್ಧವಾಗಿದೆ ಎಂಬ ಸಂದೇಶ ನೀಡುವ ಮೂಲಕ ನಗರದ ಸಾರ್ವಜನಿಕರಲ್ಲಿ ಆತ್ಮಸ್ಥೈರ್ಯ ತುಂಬಿದರು.

ಹಬ್ಬಗಳನ್ನು ಶ್ರದ್ಧಾ ಮತ್ತು ಭಕ್ತಿ ಹಾಗೂ ‘ಶಾಂತಿಯುತವಾಗಿ ಆಚರಿಸಬೇಕು. ಗಣೇಶ ಮೂರ್ತಿ ಯ ಪ್ರತಿಷ್ಠಾಪನೆ ಮತ್ತು ವಿಸರ್ಜನೆಯ ನಡುವೆ ಯಾವುದೇ ರೀತಿಯ ಗಲಾಟೆ ಗದ್ಧಲಕ್ಕೆ ಅವಕಾಶ ನೀಡಬಾರದು.
ಸರ್ಕಾರ ಆದೇಶಿಸಿರುವ ಮಾರ್ಗಸೂಚಿಯಂತೆ ಕಾರ್ಯಕ್ರಮಗಳನ್ನು ನಡೆಸಬೇಕು. ಹಾಗೂ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಸ್ಥಳಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ಅಬ್ಬರದ ಧ್ವನಿವರ್ಧಕ ಮತ್ತು ಡಿಜೆ ಬಳಕೆಯು ನಿಯಂತ್ರಿಸಲಾಗಿದ್ದು, ಆಯೋಜಕರು ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
ಮತ್ತು ಗಣೇಶ ಮೂರ್ತಿ ಪ್ರತಿಷ್ಠಾಪನೆ ಸ್ಥಳದ ಸುತ್ತಮುತ್ತಲೂ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಆಯೋಜಕರು ಎಚ್ಚರಿಕೆ ವಹಿಸಬೇಕು ಎಂದು ಕರೆ ನೀಡಿದರು
ಈ ಸಂದರ್ಭದಲ್ಲಿ ,ಅಡಿಷನಲ್ ಎಸ್ಪಿ ತಿಮ್ಮಯ್ಯ, ನಾಗಮಂಗಲ ಡಿ ವೈ ಎಸ್ ಪಿ ಚೆಲುವರಾಜು, ಸಿಪಿಐ ನಿರಂಜನ್, ಪಟ್ಟಣ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಶಿವಕುಮಾರ್, ಗ್ರಾಮಾಂತರ ಪೋಲಿಸ್ ಠಾಣೆ ಪಿಎಸ್ಐ ರಾಜೇಂದ್ರ, ಬೆಳ್ಳೂರು ಪಿಎಸ್ಐ ರವಿಕುಮಾರ್, ಬಿಂಡಿಗನವಿಲೆ ಪಿಎಸ್ಐ ಮಾರುತಿ, ಪೋಲಿಸ್ ಸಿಬ್ಬಂದಿಗಳು, ಹೋಂ ಗಾರ್ಡ್, ಕೆಎಸ್ಆರ್ ಪಿ ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು
Mandya
ಮಾದಕ ವಸ್ತುಗಳ ಸೇವನೆಯಿಂದ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ : ಪ್ರತಾಪ್ ಲಿಂಗಯ್ಯ
ಮಂಡ್ಯ : ಮಾದಕ ವಸ್ತುಗಳ ಸೇವನೆಯಿಂದ ದೇಶದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ರಾಜ್ಯ ಎನ್ ಎಸ್ ಎಸ್ ಘಟಕದ ಅಧಿಕಾರಿ ಡಾ.ಪ್ರತಾಪ್ ಲಿಂಗಯ್ಯ ಅವರು ಅಭಿಪ್ರಾಯಪಟ್ಟರು.
ನಗರದ ಪಿ.ಇ.ಎಸ್ ಇಂಜಿನಿಯರ್ ಕಾಲೇಜಿನ ಕೆ.ವಿ ಶಂಕರೆಗೌಡ ಸಭಾಂಗಣದಲ್ಲಿ ಪಿ.ಇ.ಎಸ್ ಪದವಿ ಪೂರ್ವ ಕಾಲೇಜು, ರಾಷ್ಟ್ರೀಯ ಸೇವಾ ಯೋಜನೆ ಘಟಕ, ರಾಷ್ಟ್ರೀಯ ಸೇವಾ ಯೋಜನಾ ರಾಜ್ಯ ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ನಶಾ ಮುಕ್ತ ಭಾರತ ಅಭಿಯಾನ ಬೈಕ್ ಜಾಥಾ ಹಾಗೂ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಭಾರತದಲ್ಲಿ ಸರಿಸುಮಾರು 25 ಕೋಟಿಗೂ ಹೆಚ್ಚಿನ ಜನರು ಮಾದಕ ವಸ್ತುಗಳ ವ್ಯಸನಿಗಳಿದ್ದಾರೆ. ಅದರಲ್ಲಿ ಯುವ ಜನತೆಯ ಪ್ರಮಾಣವೇ ಹೆಚ್ಚು ಎಂದು ಹೇಳಿದರು.

ಕೇಂದ್ರ ಸರ್ಕಾರ ಮಾದಕ ವ್ಯಸನಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಆಗಸ್ಟ್ 1 ರಿಂದ 31 ರವರೆಗೆ ಭಾರತದಾದ್ಯಂತ ನಶಾ ಮುಕ್ತ ಭಾರತ ಅಭಿಯಾನ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಜೋತೆಗೂಡಿ “ನಶಾ ಮುಕ್ತ ಭಾರತ ಅಭಿಯಾನ ಬೈಕ್ ಜಾಥಾ” ಯನ್ನು ರಾಜ್ಯದ ಬಂಡಿಪುರದಿಂದ ಬೀದರ್ ನ ವರೆಗೆ ಈ ಬೈಕ್ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಬೈಕ್ ಜಾಥಾ ಸಾಗುವ ದಾರಿಯುದ್ದಕ್ಕೂ ಆಯ್ದ ಶಾಲಾ ಕಾಲೇಜುಗಳಲ್ಲಿ ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಜಗತ್ತಿನಲ್ಲಿ ಅತಿ ಹೆಚ್ಚು ಯುವ ಸಮೂಹ ಹೊಂದಿರುವ ದೇಶ ನಮ್ಮ ಭಾರತ ಆದರೆ ಇಲ್ಲಿ ಯುವಕರೇ ಹೆಚ್ಚು ಮಾದಕ ವ್ಯಸನಿಗಳಾಗಿರುವುದು ದುಃಖದ ಸಂಗತಿ. ನಮ್ಮ ದೇಶದಲ್ಲಿ 3.1 ಕೋಟಿಗೂ ಅಧಿಕ ಜನರು ಗಾಂಜಾ ವ್ಯಸನಿಗಳಾಗಿದ್ದಾರೆ ಇದರಿಂದ ಅವರ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮ ಉಂಟಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ನಮ್ಮ ರಾಜ್ಯದಲ್ಲಿ 6.5 ಲಕ್ಷ ಎನ್ ಎಸ್ ಎಸ್ ಸ್ವಯಂ ಸೇವಕರಿದ್ದಾರೆ. 14 ಕೋಟಿಗೂ ಹೆಚ್ಚಿನ ಯುವ ಜನತೆ ನಶಾ ಮುಕ್ತ ಭಾರತ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ ಇವರೆಲ್ಲರ ಸಹಯೋಗದೊಂದಿಗೆ ಆರೋಗ್ಯಕರ ಸಮಾಜವನ್ನು ನಿರ್ಮಾಣ ಮಾಡಬೇಕಿದೆ. ನಿಮ್ಮ ಸುತ್ತ ಮುತ್ತಲಿನವರು ಮಾದಕ ವ್ಯಸನಿಗಳಾಗಿದ್ದರೇ ಅವರನ್ನು ಮಾದಕ ವಸ್ತುಗಳಿಂದ ದೂರವಿರುವಂತೆ ಪ್ರೇರೇಪಿಸಬೇಕು ಎಂದು ತಿಳಿ ಹೇಳಿದರು.

ಆರೋಗ್ಯ ಇಲಾಖೆಯ ವಿಶ್ವಜಿತ್ ನಾಯಕ್ ಅವರು ಮಾತನಾಡಿ ಒಂದು ದೇಶವನ್ನು ಹಾಳು ಮಾಡಲು ಯುದ್ಧವನ್ನೇ ಮಾಡಬೇಕು ಎಂದೆನಿಲ್ಲ. ಅ ದೇಶದ ಯುವ ಸಮೂಹ ಮಾದಕ ವ್ಯಸನಿಗಳಾದರೆ ಸಾಕು ಅ ದೇಶ ನಾಶವಾಗುತ್ತದೆ. ಸಾಮಾನ್ಯವಾಗಿ ಡ್ರಗ್ಸ್ ಗಳನ್ನು ವೈದ್ಯಕೀಯ ಚಿಕಿತ್ಸೆಗೆ ಅಗತ್ಯ ಪ್ರಮಾಣದಲ್ಲಿ ಬಳಸಲಾಗುತ್ತದೆ. ಡ್ರಗ್ಸ್ ಸೇವನೆಯಿಂದ ಮೆದುಳಿನಲ್ಲಿ ಉತ್ಪತ್ತಿಯಾಗುವ ಡೊಕೋಮೀನ್ ಅಂಶದಿಂದ ಉಲ್ಲಾಸ ಸಿಗುತ್ತದೆ. ಮಾದಕ ವಸ್ತುಗಳನ್ನು ಕುತೂಹಲಕ್ಕಾಗಿ ಒಮ್ಮೆ ಸೇವನೆ ಮಾಡಿದರೆ ಅದನ್ನು ಬೀಡುವುದು ಕಷ್ಟಕರ ಎಂದು ಎಚ್ಚರಿಸಿದರು.
ಮಾದಕ ವ್ಯಸನಿಗಳು ವ್ಯಸನದ ಸಂದರ್ಭದಲ್ಲಿ ಅರಿವೇ ಇಲ್ಲದೆ ಕ್ರೂರ ಮಟ್ಟಕ್ಕೆ ಇಳಿದು ಅಪರಾಧ ಎಸಗುತ್ತಾರೆ. ಮಾದಕ ವ್ಯಸನಕ್ಕೆ ಬಲಿಯಾಗಿರುವ ಎಷ್ಟೋ ನಿದರ್ಶನಗಳು ನಮ್ಮ ಮುಂದಿವೆ ನಾವೆಲ್ಲರೂ ಒಗ್ಗೂಡಿ ನಶಾ ಮುಕ್ತ ಭಾರತವನ್ನು ಕಟ್ಟಬೇಕಿದೆ ಯುವ ಜನತೆ ಮಾದಕ ವಸ್ತುಗಳಿಂದ ದೂರವಿರಿ ಎಂದು ತಿಳಿಸಿದರು.
ಕರ್ನಲ್ ಜಗದೀಪ್ ಸಿಂಗ್ ಅವರು ಮಾತನಾಡಿ ಯುವ ಜನತೆ ತಾವು ಏನೇನು ಸೇವನೆ ಮಾಡುತ್ತಿದ್ದೇವೆ ಎಂಬುದರ ಕುರಿತು ಜಾಗೃತರಾಗಿರಬೇಕು. ಉತ್ತಮ ಅಭ್ಯಾಸಗಳನ್ನು ಬೆಳೆಸಿಕೊಳ್ಳುವ ಮೂಲಕ ದುಶ್ಚಟಗಳಿಂದ ದೂರವಿರಬಹುದು. ಯುವ ಜನತೆ ನಮ್ಮ ದೇಶದ ಶಕ್ತಿ. ಯುವಕರು ಭಾರತೀಯ ಸೇನೆಯಲ್ಲಿ ಬಂದು ದೇಶ ಸೇವೆ ಮಾಡಿ ಎಂದು ಕರೆ ನೀಡಿದರು.
ಗೃಹ ಇಲಾಖೆಯ ಅಭಿಷೇಕ್ ಮಾತನಾಡಿ ಮಾದಕ ವಸ್ತುಗಳ ಸೇವನೆ ನಿಮ್ಮ ಭವಿಷ್ಯವನ್ನು ಹಾಳು ಮಾಡುತ್ತದೆ. ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಪಟುಗಳು ಕ್ರೀಡೆಯಲ್ಲಿ ಸಾಧನೆ ಮಾಡಲು ಡ್ರಗ್ಸ್ ಬಳಸಿ ತಮ್ಮ ಉದಯೋನ್ಮುಖ ಜೀವನವನ್ನೇ ಹಾಳು ಮಾಡಿಕೊಂಡಿದ್ದಾರೆ. ಡ್ರಗ್ಸ್ ಹಾಗೂ ಮಾದಕ ವಸ್ತುಗಳ ಸೇವನೆ ಕಾನೂನು ಬಾಹಿರವಾಗಿದೆ. ನಗರ ಪ್ರದೇಶಗಳಲ್ಲಿ ಇಂಜಿನಿಯರಿಂಗ್ ಹಾಗೂ ಮೆಡಿಕಲ್ ವಿದ್ಯಾರ್ಥಿಗಳು ಡ್ರಗ್ಸ್ ಚಟಕ್ಕೆ ಹೆಚ್ಚು ಬಲಿಯಾಗುತ್ತಿದ್ದಾರೆ ಎಂದು ಹೇಳಿದರು.
ನಿಮ್ಮ ಸುತ್ತ ಮುತ್ತಲು ಯಾರಾದರೂ ಡ್ರಗ್ಸ್ ಮಾರಾಟ ಮಾಡುತ್ತಿರುವ ಕುರಿತು ನಿಮಗೆ ಖಚಿತ ಮಾಹಿತಿ ಇದ್ದರೆ ಹತ್ತಿರ ಪೊಲೀಸ್ ಠಾಣೆಗೆ ತಿಳಿಸಿ ಇದರಿಂದ ಎಷ್ಟೋ ಮನೆಗಳಲ್ಲಿ ಶಾಂತಿ ನೆಲೆಸುತ್ತದೆ. ಯುವ ಸಮೂಹ ಭಾರತದ ಭವಿಷ್ಯ ಹಾಗಾಗಿ ಮಾದಕ ವಸ್ತುಗಳಿಂದ ದೂರವಿರಿ ಎಂದು ಕಿವಿಮಾತು ಹೇಳಿದರು.
ಮೈ ಭಾರತ್ ಪೋರ್ಟಲ್ ನ ಮುಸ್ತಫಾ ಅವರು ಮಾತನಾಡಿ ಭಾರತ ದೇಶವನ್ನು ನಶಾ ಮುಕ್ತವಾಗಿಸಲು ಈ ಬೈಕ್ ರ್ಯಾಲಿ ಅಭಿಯಾನವನ್ನು ಆರಂಭಿಸಿದ್ದೇವೆ. ಮಾದಕ ವಸ್ತುಗಳಿಂದ ದೂರವಿದ್ದು ಸುಂದರ ರಾಜ್ಯ ಮತ್ತು ದೇಶವನ್ನು ಕಟ್ಟಬೇಕಿದೆ. ಯುವ ಜನತೆ ನಮ್ಮೊಂದಿಗೆ ಸೇರಿ ನಶಾ ಮುಕ್ತ ಅಭಿಯಾನಕ್ಕೆ ಕೈ ಜೋಡಿಸಿ ಎಂದು ಕರೆ ನೀಡಿದರು.
ಮಾಜಿ ಮಿಸಸ್ ಇಂಡಿಯಾ ರೇಣುಕಾ ಅವರು ಮಾತನಾಡಿ ಡ್ರಗ್ಸ್ ಸೇವನೆಯಿಂದ ಕ್ಯಾನ್ಸರ್ ನಂತಹ ಮಾರಕ ರೋಗಗಳು ಉಂಟಾಗುತ್ತವೆ. ದುಶ್ಚಟಗಳಿಗೆ ದಾಸರಾಗದೆ ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯಿರಿ ಉತ್ತಮ ವಾತಾವರಣದಲ್ಲಿ ಇರಿ. ಭಾರತದ ಭವಿಷ್ಯ ನಿಮ್ಮ ಕೈಯಲ್ಲಿದೆ ಎಂದು ತಿಳಿಸಿದರು.
ಬೈಕ್ ರೈಡರ್ ಡಾ.ಜಾಫರ್ ಅವರು ಮಾತನಾಡಿ ಕೇವಲ ಕುತೂಹಲಕ್ಕಾಗಿ ನೀವು ಡ್ರಗ್ಸ್ ಸೇವನೆ ಮಾಡಿದರೆ ಅದು ನಿಮ್ಮನ್ನು ಮಾದಕ ವ್ಯಸನದತ್ತ ಕೊಂಡೊಯ್ಯುತ್ತದೆ. ಇದರಿಂದಾಗಿ ನಿಮ್ಮ ಕುಟುಂಬ ಪಶ್ಚತಾಪ ಪಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪಿ.ಇ.ಎಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಷಣ್ಮುಗಂ ಕೆ ಅವರು ಮಾತನಾಡಿ ಪ್ರಸ್ತುತ ಸಮಾಜದಲ್ಲಿ ಮಾದಕ ವ್ಯಸನ ಹಾಗೂ ದುಶ್ಚಟಗಳಿಂದ ಅನೇಕ ಮಕ್ಕಳು ಸಾಯುತ್ತಿದ್ದಾರೆ. ನಾವೆಲ್ಲರೂ ನಮಗೆ ಸಾಧ್ಯವಾದಷ್ಟು ಮಾದಕ ವಸ್ತುಗಳ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು. ಎಲ್ಲರೂ ಮಾದಕ ವಸ್ತುಗಳಿಂದ ದೂರವಿರಬೇಕು ಎಂದು ಹೇಳಿದರು.
ನಂತರ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳಿಂದ ದೂರವಿರುವಂತೆ ಪ್ರತಿಜ್ಞಾವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಓಂಪ್ರಕಾಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕಿ ಎಸ್.ಎಚ್ ನಿರ್ಮಲ, ಬೈಕ್ ರೈಡರ್ಸ್ ಪಿ.ಇ.ಎಸ್ ಕಾಲೇಜಿನ ಭೋದಕ ಮತ್ತು ಭೋದಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Mandya
ವಿಶ್ವವೇ ಮೆಚ್ಚುವ ಮಹಾನ್ ಹಾಕಿ ಕ್ರೀಡಾಪಟು ಧ್ಯಾನ್ ಚಂದ್: ಡಾ.ಕುಮಾರ
ಮಂಡ್ಯ : ಹಾಕಿ ಕ್ಷೇತ್ರದಲ್ಲಿ ಭಾರತ ದೇಶವಲ್ಲದೆ ಇಡೀ ವಿಶ್ವವೇ ತಿರುಗಿ ನೋಡುವಂತೆ ಸಾಧನೆ ಮಾಡಿದ ಮಹಾನ್ ಹಾಕಿ ಕ್ರೀಡಾಪಟು ಮೇಜರ್ ಧ್ಯಾನ್ ಚಂದ್ ಅವರು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅವರು ಬಣ್ಣಿಸಿದರು.
ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಮೇರಾ ಯುವ ಭಾರತ್ ಇವರ ಸಂಯುಕ್ತಾಶ್ರಯದಲ್ಲಿ ಹಾಕಿ ಮಾಂತ್ರಿಕ ಮೇಜರ್ ಧ್ಯಾನ್‌ಚಂದ್ ರವರ ಜನ್ಮದಿನದ ಅಂಗವಾಗಿ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ರಾಷ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕ್ರೀಡಾ ದಿನದಂದು ಕ್ರೀಡೆಯಲ್ಲಿ ಅಪರಾವದಂತಹ ಸಾಧನೆಗೈದ ಸಾಧಕರನ್ನು ಸ್ಮರಿಸುವುದರ ಜತೆಗೆ ಕ್ರೀಡಾ ಮೌಲ್ಯಗಳನ್ನು ಹಾಗೂ ಕ್ರೀಡಾ ಮನೋಭಾವನೆಯನ್ನು ಪ್ರತಿಯೊಬ್ಬರೂ ಬದುಕಿನಲ್ಲಿ ಅಳವಡಿಸಕೊಳ್ಳಬೇಕು ಎಂದು ತಿಳಿಸಿದರು.
ಧ್ಯಾನ್ ಚಂದ್ ಅವರು ಕ್ರೀಡಾಪಟುವಾಗಿದ್ದಂತಹ ಸಂದರ್ಭದಲ್ಲಿ ಕ್ರೀಡಾಕ್ಷೇತ್ರವನ್ನು ಚಿನ್ನದಯುಗ ಎಂದು ಕರೆಯಲಾಗುತಿತ್ತು. ಒಲಂಪಿಕ್ಸ್ ನಲ್ಲಿ ಚಿನ್ನದ ಪದಕವನ್ನು ಪಡೆದ ಹಿರಿಮೆಯೂ ಅವರಿಗೆ ಸಲ್ಲುತ್ತದೆ. ಭಾರತವಲ್ಲದೆ ಇತರೆ ದೇಶಗಳು ಸಹ ಅವರ ಸಾಧನೆಯನ್ನು ಗುರುತಿಸುವಂತಹ ಇತಿಹಾಸವನ್ನು ಅವರು ಸೃಷ್ಟಿಸಿದ್ದಾರೆ ಎಂದರು.
ದೇಹ ಸದೃಢವಾಗಿದ್ದರೆ ಮನಸ್ಸು ಕೂಡ ಸದೃಢವಾಗಿರುತ್ತದೆ. ಆದ್ದರಿಂದ ಮಾನಸಿಕವಾಗಿ, ದೈಹಿಕವಾಗಿ ಹಾಗೂ ಸದೃಢವಾಗಿ ಬದುಕಲು ಪ್ರತಿಯೊಬ್ಬರೂ ಕ್ರೀಡಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ನಮ್ಮನ್ನ ನಾವು ಕ್ರೀಡೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುವುದರಿಂದ ಬದುಕಿನಲ್ಲಿ ಶಿಸ್ತು ಹಾಗೂ ನೈತಿಕತೆಯ ಮೌಲ್ಯಗಳನ್ನು ಕಾಣಬಹುದು. ಪ್ರತಿಯೊಂದು ಕ್ರೀಡೆಯು ತನ್ನದೇ ಆದ ಮೆರಗು ಹಾಗೂ ನಿಯಮಗಳನ್ನು ಹೊಂದಿದೆ. ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರ ಜತೆಗೆ ಕ್ರೀಡಾ ನಿಯಮಗಳನ್ನು ಪಾಲಿಸುವುದರಿಂದ ಆರೋಗ್ಯಕರ ಜೀವನವನ್ನು ನಡೆಸಬಹುದು ಎಂದು ತಿಳಿಸಿದರು.

ಸ್ಪರ್ಧೆಯಲ್ಲಿ ವಿಜೇತರಾಗುವುದಕ್ಕಿಂತ ಸ್ಪರ್ಧೆಯಲ್ಲಿ ಭಾಗವಹಿಸುವುದು ಬಹಳ ಮುಖ್ಯವಾಗಿರುತ್ತದೆ. ಮನಸ್ಸು ನಿಶ್ಚಲವಾಗಿರಬೇಕೆಂದರೆ ದೇಹವನ್ನು ದಂಡಿಸಬೇಕು. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಅನೇಕ ಕ್ರೀಡಾ ಮೌಲ್ಯಗಳನ್ನು ಕಲಿಯಬಹುದು ಹಾಗೂ ಸದೃಢವಾಗಿ ಬದುಕಬಹುದು ಎಂದರು.
ಪ್ರಸ್ತುತ ಸಮಾಜದಲ್ಲಿ ಜೀವನದ ಕ್ರಮಗಳು ಅವ್ಯವಸ್ಥೆಯಿಂದ ಕೂಡಿದೆ. ಮನಸಿಚ್ಛೆ ಸೇವಿಸುವ ಆಹಾರದಿಂದ ಆರೋಗ್ಯ ಉತ್ತಮವಾಗಿರುವುದಿಲ್ಲ, ಆಗಾಗಿ ಜೀವನದ ಕ್ರಮದಲ್ಲಿ ಶಿಸ್ತಿನ ಅವಶ್ಯಕತೆಯಿದೆ. ಬದುಕಿನಲ್ಲಿ ಒಬ್ಬ ವ್ಯಕ್ತಿಯ ಸಾಧನೆಯ ಹಿಂದೆ ಆತನ ಶಿಸ್ತು ಮಹತ್ತರ ಪಾತ್ರ ವಹಿಸಿರುತ್ತದೆ. ಬದುಕಿನಲ್ಲಿ ಮತ್ತು ಆಹಾರ ಪದ್ಧತಿಯಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳಿ ಎಂದು ಯುವ ಪೀಳಿಗೆಗೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಕ್ರೀಡಾ ದಿನಾಚರಣೆ ಅಂಗವಾಗಿ ಪ್ರಮಾಣ ವಚನ ಭೋದಿಸಿದರು.
ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಜಿ. ಓಂಪ್ರಕಾಶ್, ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ್ ಹಾಗೂ ಮುಖ್ಯ ಶಿಕ್ಷಕಿ ಡಾ. ಮಂಗಳ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
-
State17 hours agoಬೆಟ್ಟಿಂಗ್ ಪ್ರಕರಣ: ನಾನು ಸತ್ತರೆ ED ಅಧಿಕಾರಿಗಳೇ ಹೊಣೆ; ಶಾಸಕ ವೀರೇಂದ್ರ ಆರೋಪ
-
Chamarajanagar13 hours agoಅನಾರೋಗ್ಯದಿಂದ ನಾಲ್ಕನೇ ತರಗತಿ ವಿದ್ಯಾರ್ಥಿ ಸಾ*ವು
-
Hassan20 hours agoರಸ್ತೆಗೆ ಅಡ್ಡಲಾಗಿ ಮರ ಬೀಳಿಸಿದ ದೈತ್ಯಾಕಾರದ ಒಂಟಿಸಲಗ
-
Kodagu10 hours agoಮೀನು ಮಾರಾಟ: ನಾಲ್ಕು ಚಕ್ರ ವಾಹನ ಖರೀದಿಗೆ ಅರ್ಜಿ ಆಹ್ವಾನ
-
National11 hours agoBCCI ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ರೋಜರ್ ಬಿನ್ನಿ
-
Mysore11 hours agoಮಹಿಳೆಯರಿಗೆ ಆಭರಣವೇ ಭೂಷಣ: ಉದ್ಯಮಿ ಎಚ್. ಎನ್ .ವಿಜಯ್
-
Chamarajanagar13 hours agoಗುಂಡ್ಲುಪೇಟೆ: ಬಂಡೀಪುರ ರಸ್ತೆಯಲ್ಲಿ ಓಡಾಡಿದ ಕಾಡಾನೆ ಚಿರಾಡಿದ ಕಾರಿನಲ್ಲಿದ್ದ ಪ್ರಯಾಣಿಕರು
-
Uncategorized13 hours agoದೀಕ್ಷಾ ಭೂಮಿ ಯಾತ್ರೆ
