Hassan
ಹಾಸನದಲ್ಲಿ ಜಿಲ್ಲಾ ಬಿಜೆಪಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಭೆ
ಹಾಸನ :
ಸಭೆಯಲ್ಲಿ ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷ ನವಿಲೆ ಅಣ್ಣಪ್ಪ ಹೇಳಿಕೆ
ಬಿಜೆಪಿ ಕಾರ್ಯಕರ್ತರು ದೇಶ, ರಾಷ್ಟ್ರ ಮೊದಲು ಎನ್ನುವವರು
ರಾಷ್ಟ್ರ, ರಾಜ್ಯ ಮಟ್ಟದಲ್ಲಿ ಏನು ನಿರ್ಣಯ ಆಗಿದೆ ಎನ್ನೋದನ್ನ ನೋಡುತ್ತಿದ್ದೇವೆ
ಬಿಜೆಪಿ ಕಾರ್ಯಕರ್ತರಿಗೆ ಗೌರವ ಸಿಗಬೇಕು
ಹಾಗಾಗಿ ಎಲ್ಲರೂ ಒಗ್ಗಟ್ಟಾಗಿ ಇರಬೇಕು
ದೇಶ ಮೊದಲು ಎನ್ನುವ ಬಿಜೆಪಿ ಕಾರ್ಯಕರ್ತರು ಕನಸು ಮನಸ್ಸಿನಲ್ಲ ನರೇಂದ್ರಮೋದಿಯವರಿಗೆ ಚೂರಿ ಹಾಕಲ್ಲ
ಕಾಂಗ್ರೆಸ್‌ನವರಿಗೆ ನಾವು ಮತ ಹಾಕಲ್ಲ
ನಾವು ಯಾರ ಅಡಿಆಳಲ್ಲ, ಆರು ಲೋಕಸಭಾ ಕ್ಷೇತ್ರದಲ್ಲಿ ಒಂದಲ್ಲ ಒಂದು ಕ್ಷೇತ್ರ ಗೆದ್ದಿದ್ದೇವೆ
ನಮ್ಮದೇ ಆದ ಶಕ್ತಿಯನ್ನು ಬಿಜೆಪಿ ಹೊಂದಿದೆ
ನಂಜೇಗೌಡ, ಬಿ.ಡಿ.ಬಸವರಾಜು, ಎ.ಮಂಜು ಅವರಿಗೆ ಬಿಟ್ಟುಕೊಟ್ಟೆವು
ಈ ಚುನಾವಣೆಯಲ್ಲಿ ನರೇಂದ್ರಮೋದಿ ಅವರನ್ನು ಗೆಲ್ಲಿಸುವ ಕೆಲಸ ಮಾಡಬೇಕು
ರಾಜ್ಯ ನಾಯಕರ ನಿರ್ಣದಂತೆ ನಾವೆಲ್ಲರೂ ನಡೆದುಕೊಳ್ಳಬೇಕು
ಸಭೆಯಲ್ಲಿ ಶಾಸಕ ಸಿಮೆಂಟ್ ಮಂಜು ಹೇಳಿಕೆ
ಲೋಕಸಭಾ ಚುನಾವಣೆ ಬಂದಿದೆ
ಪಕ್ಷ ಕೇಂದ್ರ ಮಟ್ಟದಲ್ಲಿ ಮೈತ್ರಿ ಆಗಿರುವ ಇದು ಎಲ್ಲರಿಗೂ ಗೊತ್ತಿದೆ
ದೇಶ ಮೊದಲು ಎಂದು ಯಾರಾದರೂ ಹೇಳುತ್ತಾರೆ ಎಂದರೆ ಅದು ಭಾರತೀಯ ಜನತಾ ಪಾರ್ಟಿ
ನರೇಂದ್ರಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಮಂತ್ರಿ ಮಾಡಬೇಕು
ಈ ದೇಶ ಮುನ್ನೆಡೆಸಲು ಇನ್ನೂ ಹೆಚ್ಚಿನ ಶಕ್ತಿ ಕೊಡಬೇಕು
ನಾಳೆ ವಿಜಯೇಂದ್ರ ಅಣ್ಣಾ ಬರ್ತಾರೆ
ಅವರಿಗೆ ನಾವೆಲ್ಲಾ ಕೈಜೋಡಿಸಬೇಕು
ನಾವೆಲ್ಲರೂ ಒಗ್ಗಟ್ಟಿನಿಂದ ಈ ಚುನಾವಣೆಯಲ್ಲಿ ಕೆಲಸ ಮಾಡಬೇಕು
Hassan
ತಾಲೂಕಿನಾದ್ಯಂತ ಮಹಾಶಿವರಾತ್ರಿ ಸಂಭ್ರಮ
ವರದಿ ಸತೀಶ್ ಚಿಕ್ಕಕಣಗಾಲು
ಆಲೂರು: ತಾಲೂಕಿನಾದ್ಯಂತ ಮಹಾಶಿವರಾತ್ರಿ ಸಂಭ್ರಮ ಮನೆ ಮಾಡಿತ್ತು. ಶಿವನ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಿಗೆ ನಸುಕಿನಿಂದಲೇ ಮಹಿಳೆಯರು, ಮಕ್ಕಳು, ವೃದ್ಧರು ಸೇರಿದಂತೆ ಕುಟುಂಬ ಸಮೇತರಾಗಿ ತೆರಳಿ ಶಿವನ ದರ್ಶನ ಪಡೆದು ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.

ಉಪವಾಸ ಆಚರಣೆಯಲ್ಲಿ ತೊಡಗಿದ್ದ ಜನರು ಬೆಳಗ್ಗೆಯಿಂದಲೂ ಆಲೂರು ಪಟ್ಟಣದ ಕೆ.ಇ.ಬಿ ವೃತ್ತದ ಬಳಿ ಇರುವ ಸಂಗಮೇಶ್ವರ ಶಿವನ ದೇವಸ್ಥಾನ, ಬೇಡುಚವಳ್ಳಿ ಮಲ್ಲಿಕಾರ್ಜುನ ಸ್ವಾಮಿ ದೇವಾಲಯ, ಮರಸು ಗ್ರಾಮದ ಕಲ್ಲೇಶ್ವರ ಸ್ವಾಮಿ, ತೊಗರನಹಳ್ಳಿ ಬಸವಣ್ಣನವರ ದೇವಾಲಯ, ಕೆಂಚನಹಳ್ಳಿ ಬಸವೇಶ್ವರ ಸ್ವಾಮಿ ದೇವಸ್ಥಾನ, ಹೊಸೂರು ಚನ್ನಾಪುರ ಬಸವಣ್ಣ ದೇವಾಲಯ, ಬ್ಯಾಬ ಗ್ರಾಮದ ಮಲ್ಲೇಶ್ವರ ಸ್ವಾಮಿ ದೇವಸ್ಥಾನ, ಹುಣಸುವಳ್ಳಿ ಗ್ರಾಮದ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನ, ದೊಡ್ಡಕಣಗಾಲು ವೀರಭದ್ರೇಶ್ವರ ಸ್ವಾಮಿ ದೇವಸ್ಥಾನ, ಮರಸು ಹೊಸಳ್ಳಿ ಗ್ರಾಮದ ಬಸವಣ್ಣ ದೇವಾಲಯ, ದೊಡ್ಡಕಣಗಾಲು ಕಲ್ಲೇಶ್ವರ ಮತ್ತು ಮಲ್ಲೇಶ್ವರ ಸ್ವಾಮಿ ದೇವಸ್ಥಾನ, ಮುದಿಗೆರೆ ಮಲ್ಲೇಶ್ವರ ಸ್ವಾಮಿ ದೇವಸ್ಥಾನ, ನಾಕಲಗೂಡು ಮಲ್ಲೇಶ್ವರ ಸ್ವಾಮಿ ದೇವಸ್ಥಾನ, ಕಿರುಗಡಲು ಗ್ರಾಮದಶ ಪಂಚಲಿಂಗೇಶ್ವರ ಸ್ವಾಮಿ ದೇವಸ್ಥಾನ, ಸೊಂಪುರ ಗ್ರಾಮದ ನಂಜುಂಡೇಶ್ವರ ಸ್ವಾಮಿ ದೇವಸ್ಥಾನ, ಡಿ. ಕಣಗಾಲು ಗ್ರಾಮದ ಕಾಳಸ್ಥೆಶ್ವರ ಸ್ವಾಮಿ ದೇವಸ್ಥಾನ, ಪಾಳ್ಯ ಹೋಬಳಿ ವ್ಯಾಪ್ತಿಯ ಪಾಳ್ಯ ಗ್ರಾಮದ ರಾಮೇಶ್ವರ ಸ್ವಾಮಿ ದೇವಸ್ಥಾನ, ತ್ರಿಪುರಂತೇಶ್ವರ, ಜೆ. ತಿಮ್ಮನಹಳ್ಳಿಯ ಭೈರವೇಶ್ವರ ಸ್ವಾಮಿ ದೇವಸ್ಥಾನ, ಕಾರ್ಜುವಳ್ಳಿಯ ಕಲ್ಲೇಶ್ವರ ಸ್ವಾಮಿ ದೇವಸ್ಥಾನ, ಕಡದರವಳ್ಳಿ ಗ್ರಾಮದ ಮಲ್ಲೇಶ್ವರ ಸ್ವಾಮಿ ದೇವಸ್ಥಾನ, ಹುಲ್ಲಹಳ್ಳಿಯ ಮಲ್ಲೇಶ್ವರ ಸ್ವಾಮಿ ದೇವಸ್ಥಾನ, ಬಿಡದರವಳ್ಳಿಯ ಮಲ್ಲೇಶ್ವರ ಸ್ವಾಮಿ ದೇವಸ್ಥಾನ, ಅಳುವಳ್ಳಿಯ ಮಲ್ಲೇಶ್ವರ ಸ್ವಾಮಿ ದೇವಸ್ಥಾನ, ದೇತಾಪುರ ಗ್ರಾಮದ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ,

ಕುಂಬಾರಹಳ್ಳಿಯ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ, ಬೀರುಕನಳ್ಳಿಯ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನ, ಕಾಮತಿಯ ಬಸವಣ್ಣ ಸ್ವಾಮಿ ದೇವಸ್ಥಾನ, ಚಿಕ್ಕಕಣಗಾಲು ಗ್ರಾಮದ ಕಾಳೇಶ್ವರ, ಮಲ್ಲೇಶ್ವರ ಸ್ವಾಮಿ ದೇವಸ್ಥಾನ, ಬೆಳಮೆ ಬಸವಣ್ಣ ಸ್ವಾಮಿ ದೇವಸ್ಥಾನಗಳಲ್ಲಿ ಹಾಗೂ ಕುಂದೂರು ಹೋಬಳಿ ವ್ಯಾಪ್ತಿಯ ತುರುಗನವಳ್ಳಿ ಮಲ್ಲೇಶ್ವರ ಹಾಗೂ ಬಸವಣ್ಣ ಸ್ವಾಮಿ ದೇವಸ್ಥಾನ, ಹಸುಗನೂರು ಕೈಲಾಸನಾಥೇಶ್ವರ ಸ್ವಾಮಿ ದೇವಸ್ಥಾನ, ಕಡಗಬಲ ಕಲ್ಲೇಶ್ವರ ಸ್ವಾಮಿ ದೇವಸ್ಥಾನ, ಬಾಚನಹಳ್ಳಿ ಕಲ್ಲೇಶ್ವರ ಸ್ವಾಮಿ ದೇವಸ್ಥಾನ, ಹಂಚೂರು ಮಲ್ಲೇಶ್ವರ ಸ್ವಾಮಿ ದೇವಸ್ಥಾನ, ಮೇರ್ವೆ ಮಲ್ಲೇಶ್ವರ ಸ್ವಾಮಿ ದೇವಸ್ಥಾನ, ಚಟ್ಟನಹಳ್ಳ ಮಲ್ಲೇಶ್ವರ ಸ್ವಾಮಿ ದೇವಸ್ಥಾನ, ಕಾರಿಗನಹಳ್ಳಿ ಬಸವಣ್ಣ ಸ್ವಾಮಿ ದೇವಸ್ಥಾನ, ಕದಾಳು ಮಲ್ಲೇಶ್ವರ ಸ್ವಾಮಿ ದೇವಸ್ಥಾನ, ಮುದ್ದನಹಳ್ಳಿ ಬಸವಣ್ಣ ಸ್ವಾಮಿ ದೇವಸ್ಥಾನ, ಕುದರವಳ್ಳಿಯ ಜಂಗಮಾನ್ಯ ಸ್ವಾಮಿ ದೇವಸ್ಥಾನಗಳ್ಳಿ, ಕೆಂಚಮ್ಮ ಹೊಸಕೋಟೆ ಹೋಬಳಿಯ ವ್ಯಾಪ್ತಿಯಲ್ಲಿನ ಹರಹಳ್ಳಿಯ ಮಲ್ಲೇಶ್ವರ ಸ್ವಾಮಿ ದೇವಸ್ಥಾನ, ಮಾದಿಹಳ್ಳಿ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ, ಕಾರಗೋಡು ಬಸವಣ್ಣ ಸ್ವಾಮಿ ದೇವಸ್ಥಾನ, ಅಂಜಲಿಗೆ ಸೊಮೇಶ್ವರ ಸ್ವಾಮಿ ದೇವಸ್ಥಾನ, ಅಬ್ಬನ ಗ್ರಾಮದ ಅಮೃತ ಲಿಂಗೇಶ್ವರ ಸ್ವಾಮಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆದವು. ದೇವಸ್ಥಾನಗಳ ಅರ್ಚಕರಿಂದ ಶಿವಲಿಂಗ ಮೂರ್ತಿಗೆ ಅಭಿಷೇಕ ಪೂಜೆ, ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಜಲಾಭಿಷೇಕ, ಬಿಲ್ವಪತ್ರೆ ಅರ್ಪಣೆ ಮಾಡಲಾಯಿತು. ಪಲ್ಲಕ್ಕಿ ಉತ್ಸವ, ಬಳಿಕ ಮಹಾ ಆರತಿ ಕಾರ್ಯಕ್ರಮ ಸೇರಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು. ಭಕ್ತರು ಶ್ರದ್ಧಾ ಭಕ್ತಿಯಿಂದ ತೆರಳಿ ದರ್ಶನ ಪಡೆದು, ಪೂಜೆ ಸಲ್ಲಿಸುತ್ತಿದರು.

ಪುರೋಹಿತ ಶಶಿ ಮಾತನಾಡಿ, ಹಿಂದೂಗಳ ಪ್ರಮುಖ ಹಬ್ಬಗಳಲ್ಲೊಂದಾದ ಮಹಾಶಿವರಾತ್ರಿ ಆಚರಣೆಗೂ ಹಿನ್ನೆಲೆಯಿದೆ, ಕೈಲಾಸವಾಸಿ ಶಿವನಿಗೆ ಶಿವರಾತ್ರಿ ಅತ್ಯಂತ ಪ್ರಿಯವಾದ ದಿನ. ಶಿವರಾತ್ರಿಯಂದು ತನ್ನನ್ನು ಪೂಜಿಸುವ ಭಕ್ತರಿಗೆ ತಾನು ವಿಶೇಷವಾಗಿ ಅನುಗ್ರಹ ನೀಡುವುದಾಗಿ ಸ್ವತಃ ಶಿವನೇ ಪಾರ್ವತಿಯಲ್ಲಿ ಅರುಹಿದ್ದಾನೆ ಎನ್ನುತ್ತದೆ ಶಿವಪುರಾಣ. ಮಹಾ ಶಿವರಾತ್ರಿಯಂದು ಬಿಲ್ವಪತ್ರೆಯನ್ನು ಶಿವಲಿಂಗದ ಮೇಲಿಟ್ಟು ಪೂಜಿಸಿದರೆ, ಯಾಗ ಮಾಡಿದ ಫಲ ದೊರೆಯುತ್ತದೆ ಎಂದೂ ಹಿರಿಯರು ಹೇಳುತ್ತಾರೆ. ಅಲ್ಲದೇ, ಶಿವರಾತ್ರಿಯ ಆಚರಣೆಗೆ ವೈಜ್ಞಾನಿಕ ಕಾರಣಗಳೂ ಇವೆ. ಭಾರತೀಯರು ಆಚರಿಸುವ ಯಾವುದೇ ಹಬ್ಬ-ಹರಿದಿನಗಳು, ಸಮಾರಂಭ, ದಿನಾಚರಣೆ, ಜಯಂತಿ, ಉತ್ಸವಗಳು ಸಾಮಾನ್ಯವಾಗಿ ಅಮರವಾಗಿ ಉಳಿದಿರುವ ಯಾವುದೋ ಗತ ವ್ಯಕ್ತಿಯ, ಶಕ್ತಿಯ ಅಥವಾ ಪ್ರಾಚೀನತೆಯ ಪ್ರತೀಕಗಳಾಗಿರುತ್ತವೆ ಎಂದು ತಿಳಿಸಿದರು.
ಪೋಟೋ ಕ್ಯಾಪ್ಶನ್: ಆಲೂರು ಪಟ್ಟಣದ ಕೆಇಬಿ ವೃತ್ತದ ಬಳಿ ಇರುವ ಸಂಗಮೇಶ್ವರ ದೇವಸ್ಥಾನದಲ್ಲಿ ಪುರೋಹಿತ ಶಶಿ ರವರ ನೇತೃತ್ವದಲ್ಲಿ ಶಿವಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು.
Hassan
ಸಂತ ಸೇವಾಲಾಲ್ ಜಯಂತಿ ಆಚರಣೆ : ಕೆ.ಎಂ.ಶಿವಲಿಂಗೇಗೌಡರವರಿಂದ ಪುಷ್ಪನಮನ
ಅರಸೀಕೆರೆ : ಸಂತ ಸೇವಾಲಾಲ್ ಜಯಂತಿ ಅರಸೀಕೆರೆ ನಗರದ ಮಿನಿ ವಿಧಾನಸೌಧದ ಕಂದಾಯ ಭವನದಲ್ಲಿ ತಾಲೂಕು ಆಡಳಿತದ ಮಂಡಳಿ ವತಿಯಿಂದ ಏರ್ಪಡಿಸಿದ್ದ ಸಂತ ಸೇವಾಲಾಲ್ ಜಯಂತಿಯಲ್ಲಿ ಅರಸೀಕೆರೆ ಜನಪ್ರಿಯ ಶಾಸಕರಾದ ಕೆ,ಎಂ, ಶಿವಲಿಂಗೇಗೌಡರು ಭಾಗವಹಿಸಿ ಪುಷ್ಪನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿಗಳಾದ ಸಂತೋಷ್ ಕುಮಾರ್, ತಾಲೂಕು ಭೂ ನ್ಯಾಯ ಮಂಡಳಿಯ ಸದಸ್ಯರಾದ ಹರತನಹಳ್ಳಿ ಜಯಣ್ಣ, ವಕೀಲರಾದ ಕುಮಾರನಾಯ್ಕ್, ಮಂಜುಳಾ ಬಾಯಿ, ಕೃಷ್ಣಾ ನಾಯ್ಕ್, ಪೃಥ್ವಿ ನಾಯಕ್ ಹಾಗೂ ಸಮಾಜದ ಮುಖಂಡರುಗಳು ಭಾಗವಹಿಸಿದ್ದರು.
Hassan
ಕೊಟ್ಟೂರಪ್ಪ ನಿಧನ
ಅರಸೀಕೆರೆ : ಅರಸೀಕೆರೆ ತಾಲೂಕಿನ ಮಾಡಾಳು ದಾಖಲೆ ಸೀತಾಪುರ ಗ್ರಾಮದ ನಿವಾಸಿ
ಕೊಟ್ಟೂರಪ್ಪರವರು, (ಜುಮ್ಮಿ)75 ಶನಿವಾರ ರಾತ್ರಿ ನಿಧನರಾಗಿದ್ದಾರೆ.

ಪತ್ನಿ ಇಬ್ಬರು ಪುತ್ರರು ಹಾಗೂ ನಾಲ್ಕು ಮಂದಿ ಹೆಣ್ಣು ಮಕ್ಕಳು ಹಾಗೂ ಅಪಾರ ಬಂದು ವರ್ಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಭಾನುವಾರ ಮಧ್ಯಾನ ಅವರ ತೋಟದಲ್ಲಿ ನೆರವೇರಿತು.
-
Mysore12 hours agoಮಲೆ ಮಹದೇಶ್ವರ ಶತನಾಮಾವಳಿ ಲೋಕಾರ್ಪಣೆ: ಶ್ರೀಮಾಯಕಾರ ಗುರುಕುಲದಿಂದ ನಿರ್ಮಾಣ
-
National - International4 hours agoIND v/s PAK T-20 WC| 114ಕ್ಕೆ ಪಾಕ್ ಆಲೌಟ್: ಟೀಂ ಇಂಡಿಯಾಗೆ ಭರ್ಜರಿ ಜಯ
-
Hassan12 hours agoಸಂತ ಸೇವಾಲಾಲ್ ಜಯಂತಿ ಆಚರಣೆ : ಕೆ.ಎಂ.ಶಿವಲಿಂಗೇಗೌಡರವರಿಂದ ಪುಷ್ಪನಮನ
-
Hassan17 hours agoನಿಗೂಢ ನಾಪತ್ತೆಯ ಪ್ರಕರಣಕ್ಕೆ ಬಹುದೊಡ್ಡ ಮೇಜರ್ ಟ್ವಿಸ್ಟ್ : ಮಹಿಳೆ ಪೊಲೀಸರ ವಶಕ್ಕೆ,
-
Chikmagalur4 hours agoತಾಯಿ ಬುದ್ಧಿವಾದ ಹೇಳಿದ್ದಕ್ಕೆ ಬೇಸತ್ತು ಬಾಲಕಿ ಆತ್ಮಹ*ತ್ಯೆಗೆ ಶರಣು
-
Kodagu11 hours agoರೋಮನ್ ಕ್ಯಾಥೋಲಿಕ್ ಕ್ರಿಕೆಟ್ ಟೂರ್ನಿಯಾ ಉದ್ಘಾಟನಾ ಕಾರ್ಯಕ್ರಮ
-
Hassan8 hours agoತಾಲೂಕಿನಾದ್ಯಂತ ಮಹಾಶಿವರಾತ್ರಿ ಸಂಭ್ರಮ
-
Chikmagalur9 hours agoಭದ್ರಾ ನದಿಯಲ್ಲಿ ಸೆಳೆತ ಮತ್ತು ಅಪಾಯಕಾರಿ ಗುಂಡಿಗಳ ಬಗ್ಗೆ ಅರಿವು ಇಲ್ಲ : ಬಲಿಯಾಗುತ್ತಿರುವ ವಲಸೆ ಕಾರ್ಮಿಕರು ಮತ್ತು ಪ್ರವಾಸಿಗರು
