Chikmagalur
ನಗರಸಭೆ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
ಚಿಕ್ಕಮಗಳೂರು : ಇ-ಸ್ವತ್ತು ಮಾಡಿಕೊಡಲು ಲಂಚದ ಬೇಡಿಕೆ ಇಟ್ಟು ಫೋನ್ ಪೇ ಮೂಲಕ ಹಣ ಹಾಕಿಸಿಕೊಂಡು ಮತ್ತಷ್ಟು ಹಣ ಪೀಕಲು ಪ್ಲಾನ್ ಮಾಡಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ಚಿಕ್ಕಮಗಳೂರು ನಗರಸಭೆ ವಾರ್ಡ್ 2 ರ ಬಿಲ್ ಕಲೆಕ್ಟರ್ ಪ್ರದೀಪ್ ಸಿಕ್ಕಿಬಿದ್ದ ಭ್ರಷ್ಟ
ಸದಾಶಿವಮೂರ್ತಿ ಎಂಬುವವರ ಬೈಪಾಸ್ ರಸ್ತೆಯ ಜಾಗದ ಇ-ಸ್ವತ್ತು ಮಾಡಿಕೊಡಲು ಚಿಕ್ಕಮಗಳೂರು ನಗರಸಭೆ ವಾರ್ಡ್2 ಬಿಲ್ ಕಲೆಕ್ಟರ್ ಪ್ರದೀಪ್ ಲಂಚ ಪಡೆಯುವ ವೇಳೆ ಲೋಕಾಯುಕ್ತರಿಗೆ ಸಿಕ್ಕಿಬಿದ್ದಿದ್ದಾನೆ.
ಸದಾಶಿವಮೂರ್ತಿ ಮಗ ರಾಕೇಶ್ ನೀಡಿದ ದೂರಿನ ಮೇರೆಗೆ ಇಂದು ಕಾರ್ಯಾಚರಣೆ ನಡೆಸಿದ ಲೋಕಾ ಇನ್ಸ್‌ಪೆಕ್ಟರ್ ಅನಿಲ್ ರಾಥೋಡ್ ಹಾಗೂ ಮಲ್ಲಿಕಾರ್ಜುನ ನೇತೃತ್ವದ ತಂಡ ಪ್ರದೀಪ್ ನನ್ನು ನಗರಸಭೆ ಕಚೇರಿ ಎದುರು ಬಂಧಿಸಿದ್ದಾರೆ
Chikmagalur
ಅಂತರ್ ಜಿಲ್ಲಾ ಕಳವು- ದರೋಡೆ ಪ್ರಕರಣ : ಬಂಗಾರದ ಗಟ್ಟಿ ಸೇರಿದಂತೆ 25 ಲಕ್ಷ ಮೌಲ್ಯದ ವಸ್ತು ವಶ
ಚಿಕ್ಕಮಗಳೂರು: ಅಂತರ್ ಜಿಲ್ಲಾ ಕಳವು- ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರನ್ನು ಬಂಧಿಸಿರುವ ಪೊಲೀಸರು ಬಂಗಾರದ ಗಟ್ಟಿ ಸೇರಿದಂತೆ 25 ಲಕ್ಷ ಮೌಲ್ಯದ ವಸ್ತು ವಶಪಡಿಸಿಕೊಂಡಿದ್ದಾರೆ.
ಚಿಕ್ಕಮಗಳೂರು ನಗರದ ಬಸವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಅನೇಕ ಕಳ್ಳತನ ಪ್ರಕರಣ ನಡೆದಿದ್ದು ಪ್ರಭಾರ ವೃತ್ತ ನಿರೀಕ್ಷಕ ಗವಿರಾಜ್ ಪಿ.ಐ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.
ಬೆಂಗಳೂರಿನ ಆರ್ ಟಿ ನಗರದಲ್ಲಿ ನೆಲೆಸಿದ್ದ ಚಿಕ್ಕಮಗಳೂರು ಉಪ್ಪಳ್ಳಿ ನಿವಾಸಿ ಮೊಹಮದ್ ಕಬೀರ್, ಡಿಜೆ ಹಳ್ಳಿವಾಸಿ ಯೂಸುಫ ಪಾಷಾ ನನ್ನು ಬಂಧಿಸಿ ಒಟ್ಟು 334 ಗ್ರಾಂ ಬಂಗಾರದ ಗಟ್ಟಿ, ಮತ್ತು ಕೃತ್ಯಕ್ಕೆಬಳಸಿದ್ದ ಬಜಾಜ್ ಪಲ್ಸರ್ ಬೈಕ್ ( ತುಮಕೂರಿನಲ್ಲಿ ಕಳವು ಮಾಡಿದ್ದು) ಒಟ್ಟು ಬೆಲೆ 25,00,000/- ವಶಪಡಿಸಿಕೊಳ್ಳಲಾಗಿದೆ.
ಅಹಮದ್ ಕಬೀರ್ ನನ್ನು 2023 ನೇ ಸಾಲಿನಲ್ಲಿ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಬಂಧಿಸಿದ್ದು,
12 ಮನೆಕಳವು ಪ್ರಕರಣಗಳು ಪತ್ತೆಯಾಗಿದ್ದು, ಆರೋಪಿಯಿಂದ 295 ಗ್ರಾಂ ಚಿನ್ನ & 350 ಗ್ರಾಂ
ಬೆಳ್ಳಿಯ ಭರಣ ಹಾಗೂ 1 ಪಿಸ್ತೂಲ್ & ಗುಂಡುಗಳು ದೊರೆತಿದ್ದವು.
ಪಿಸ್ತೂಲ್ ಅನ್ನು
ವೈಜ್ಞಾನಿಕ ಪರೀಕ್ಷೆಗೆ ಕಳುಹಿಸಿದಾಗ 11.07.2020 ರಂದು
ಚಿಕ್ಕಮಗಳೂರು ನಗರದ ಕೇಸರಿ ಜ್ಯೂಯೆಲರಿ ಚಿನ್ನದ ಅಂಗಡಿಯಲ್ಲಿ ಗುಂಡು ಹಾರಿಸಿ ದರೋಡೆಗೆ
ಪ್ರಯತ್ನಿಸಿದ್ದಾಗ ಸ್ಥಳದಲ್ಲಿ ದೊರೆತ ಗುಂಡಿಗೆ ಹೋಲಿಕೆಯಾಗಿರುವುದಾಗಿ ಎಫ್.ಎಸ್.ಎಲ್
ವರದಿಯಿಂದ ದೃಢಪಟ್ಟಿದೆ.
ಆರೋಪಿ ಕಬೀರ್ ಮತ್ತು ಆತನ ಸಹಚರರು ದರೋಡೆ ಪ್ರಕರಣದಲ್ಲಿ
ಭಾಗಿಯಾಗಿರುವುದೂ ಬೆಳಕಿಗೆ ಬಂದಿದೆ.
ಈತನ ವಿರುದ್ಧ ಮಂಗಳೂರು ನಗರ, ಶಿವಮೊಗ್ಗ , ತುಮಕೂರು , ದಾವಣಗೆರೆ ,
ಚಾಮರಾಜನಗರ ಜಿಲ್ಲೆ ಗಳಲ್ಲಿ 50 ಕ್ಕೂ ಹೆಚ್ಚು ಕಳವು ಪ್ರಕರಣಗಳು ದಾಖಲಾಗಿದ್ದು, ಆರೋಪಿಯು
ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದು ಈತನ ವಿರುದ್ಧ
ವಾರೆಂಟ್ ಹೊರಡಿಸಲಾಗಿತ್ತು, ಕಾರ್ಯಾಚರಣೆ ತಂಡಕ್ಕೆ ಪೊಲೀಸ್ ಅಧೀಕ್ಷಕರು ಬಹುಮಾನ ಘೋಷಿಸಿದ್ದಾರೆ.
Chikmagalur
ಕಾಯಕವನ್ನೇ ಉಸಿರಾಗಿಸಿಕೊಂಡವರು ನಿಜ ಶರಣ ಅಂಬಿಗರ ಚೌಡಯ್ಯ
ಚಿಕ್ಕಮಗಳೂರು: ಜ. ೨೧: ಶರಣ ಎಂದರೆ ಅಂಬಿಗರ ಚೌಡಯ್ಯ, ಯಾವುದನ್ನು ಕ್ಷಣ ಮಾತ್ರಕ್ಕೆ ಒಪ್ಪಿಕೊಳ್ಳದೇ ಸತ್ಯದ ಪರವಾಗಿ ಸದಾ ನಿಂತವರು. ಅವರಲಿದ್ದ ಜಾಣ್ಮೆ ಅಪಾರ ಕಾಯಕವನ್ನೇ ಉಸಿರಾಗಿಸಿಕೊಂಡಿದ್ದ ಅನುಭವಿ ಜೀವಿ ಅವರಾಗಿದ್ದರು ಎಂದು ಸಾಹಿತಿ ಬಿ ತಿಪ್ಪೇರುದ್ರಪ್ಪ ಹೇಳಿದರು.
ಜಿಲ್ಲಾಡಳಿತದ ವತಿಯಿಂದ ಇಂದು ನಗರದ ಕುವೆಂಪು ಕಲಾಮಂದಿರದ ಹೇಮಾಂಗಣದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಅಂಬಿಗರ ಚೌಡಯ್ಯ ಸಿದ್ಧಿ ಸಾಧಕ ನಿಜಶರಣರಾಗಿದ್ದು, ಮೌಢ್ಯತೆ, ಕಂದಾಚಾರ, ಸಾಮಾಜಿಕ ಸಮಸ್ಯೆಗಳಿಗೆ ತಮ್ಮ ವಚನಗಳ ಮೂಲಕವೇ ಛಾಟಿ ಬೀಸಿರುವುದನ್ನು ಗಮನಿಸಬಹುದಾಗಿದೆ ಎಂದ ಅವರು ಹಳೆಯ ಮತ್ತು ಹೊಸ ನಂಬಿಕೆಗಳ ಅವ್ಯವಸ್ಥೆಯಲ್ಲಿದ್ದ ಅಂದಿನ ಸಮಾಜದ ಲೋಪದೋಷಗಳನ್ನು ನಿರ್ದಾಕ್ಷಣ್ಯವಾಗಿ ಎತ್ತಿ ತೋರಿಸುವ ಅವರ ವಚನಗಳು ಅಂದಿನ ಸಾಮಾಜಿಕ ಅವಶ್ಯಕತೆಯ ಪರಿಣಾಮಗಳೆಂದು ನಾವು ಭಾವಿಸಬಹುದು ಎಂದರು.
ಅಂಬಿಗರ ಚೌಡಯ್ಯನವರ ವಚನಗಳಲ್ಲಿ ನಿಜಶರಣ ಮೊರೆತದ ಜೊತೆಗೆ ಸುಧಾರಕನ ಕಟುಟೀಕೆಯು ಕೇಳಿ ಬರುತ್ತದೆ. ಅವರ ವಚನಗಳು ಅನರ್ಥ ಸಾಧಕವಾದ ಕೋಪದಿಂದ ಹೊರಹೊಮ್ಮಿದ್ದಲ್ಲ, ಕನ್ನಡ ಸಾಹಿತ್ಯದಲ್ಲಿ ಇಂತಹ ದಿಟ್ಟತನ, ವ್ಯಗ್ರತೆ ಕಂಡು ಬರುವುದು ಬಹುಶಃ ಇಬ್ಬರಲ್ಲಿ ಮಾತ್ರ ಅದು ಒಬ್ಬರು ಸಿಡಿಲು ನುಡಿಯ ಸರ್ವಜ್ಞ ಮತ್ತೊಬ್ಬರು ಕೆಚ್ಚೆದೆಯ ಅಂಬಿಗರ ಚೌಡಯ್ಯ ಎಂದು ತಿಳಿಸಿದರು.
೧೨ನೇ ಶತಮಾನದಲ್ಲೇ ದಾಸ ಸಾಹಿತ್ಯದ ಮೂಲಕ ಮಹಿಳಾ ಸಮಾನತೆ ಪ್ರತಿಪಾದಿಸಿದ ಅಂಬಿಗರ ಚೌಡಯ್ಯನವರು ಅವರದೇ ಆದ ವೈಶಿಷ್ಟ್ಯ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಮಾಜದಲ್ಲಿನ ಡೊಂಕುಗಳ ಬಗ್ಗೆ ಪ್ರತಿಯೊಬ್ಬರು ನಿರ್ಭಯವಾಗಿ ಹೇಳುವ ಮನಸ್ಥಿತಿ ಬೆಳೆಸಿಕೊಳ್ಳಬೇಕು, ಇದನ್ನು ಅಂದೇ ಅವರು ನಿರ್ಭಯವಾಗಿ ಹೇಳುವ ಮೂಲಕ ವಿಶೇಷತೆ ಮೆರೆದಿದ್ದಾರೆ ಎಂದು ಹೇಳಿದರು.
ತಾಲ್ಲೂಕು ಕಛೇರಿಯ ಉಪ ತಹಸೀಲ್ದಾರ್ ರಾಮರಾವ್ ದೇಸಾಯಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕಾಯಕ ವ್ಯಕಿಯೆಂದೇ ಪ್ರಸಿದ್ದರಾಗಿದ್ದ ಅಂಬಿಗರ ಚೌಡಯ್ಯನವರು ತಮ್ಮ ಕಾಯಕವನ್ನೇ ಹೆಸರಿನಲ್ಲಿ ಇಟ್ಟುಕೊಂಡು ಬದುಕು ನಡೆಸಿದ ನಿಜ ಕಾಯಕ ಶರಣ ಅಂಬಿಗರ ಚೌಡಯ್ಯ. ಕಲ್ಯಾಣ ಕ್ರಾಂತಿಯಲ್ಲಿ ಶರಣ ಧರ್ಮ ರಕ್ಷಣೆ, ಹಾಗೂ ವಚನ ಸಾಹಿತ್ಯದ ಉಳುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು .ಕ್ರಾಂತಿಯೋಗಿ ಎನಿಸಿಕೊಂಡಿದ್ದ ಇಂತಹ ಮಾಹನ್ ವಚನಕಾರರ ನಾಡಿನಲ್ಲಿ ಬದುಕುತ್ತಿರುವ ನಾವೇ ಧನ್ಯರು. ಇವರ ತತ್ವ ಆದರ್ಶವನ್ನು ಮುಂದಿನ ಪೀಳಿಗೆಗೂ ತಲುಪುವಂತೆ ಮಾಡಬೇಕು. ನಮ್ಮ ಜೀವನದಲ್ಲಿ ಶರಣರ ತತ್ವಗಳನ್ನು ಆಳವಡಿಸಿಕೊಂಡು ಮುನ್ನಡೆಯಬೇಕು ಎಂದು ಹೇಳಿದರು.
ತಾಲ್ಲೂಕು ಗಂಗಾಮತ ಸಂಘದ ಅಧ್ಯಕರಾದ ಗೋಪಾಲ್, ಗಂಗಾಮತಸ್ಥರ ಸಂಘದ ಗೌರವ ಅಧ್ಯಕ್ಷ ಪುಟ್ಟಯ್ಯ, ಧರ್ಮೆಶ್ ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ರಮೇಶ್ ಎಲ್ಲರನ್ನೂ ಸ್ವಾಗತಿಸಿದರು.
Chikmagalur
ಕಾಫಿನಾಡಲ್ಲೊಂದು ಕರುಳು ಹಿಂಡುವ ಕಥೆ: ತಂದೆ ಸಾವು ತಿಳಿಯದೆ ಹಸೆಮಣೆ ಏರಿದ ಮಗಳು
ಚಿಕ್ಕಮಗಳೂರು: ಕಾಫಿನಾಡಿನಲ್ಲೊಂದು ಕರುಳು ಹಿಂಡುವ ಕಥೆ ನಡೆದಿದೆ. ಈ ಕಥೆ ಕೇಳಿದವರ ಹೃದಯ ಮಮ್ಮಲ ಮರುಗುತ್ತದೆ. ಕಂಬನಿ ಮಿಡಿಯುವಂತೆ ಮಾಡುತ್ತದೆ.
ಆಪ್ತಮಿತ್ರನಿಗೆ ಮಗಳ ಮದುವೆಯ ಕರೆಯೋಲೆ ಕೊಡಲು ಹೋದ ತಂದೆ ಮಾರ್ಗ ಮಧ್ಯೆ ಅಪಘಾತಕ್ಕೆ ಈಡಾಗಿ ಸಾವು ಬದುಕಿನ ನಡುವೆ ಆಸ್ಪತ್ರೆಯಲ್ಲಿ ಹೋರಾಟ ನಡೆಸಿ ಬಳಿಕ ಸಾವನ್ನಪ್ಪಿದ ವಿಷಯವೇ ತಿಳಿಯದ ಮುದ್ದು ಮಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹೃದಯವಿದ್ರಾವಕ ಘಟನೆ ಚಿಕ್ಕಮಳೂರು ಜಿಲ್ಲೆಯ ತರೀಕೆರೆ ಪಟ್ಟಣದಲ್ಲಿ ನಡೆದಿದೆ.
ನಿನ್ನೆ ಹಾಗೂ ಇವತ್ತು ತರೀಕೆರೆ ಪಟ್ಟಣದ ನಾಗಪ್ಪ ಕಾಲೋನಿ ನಿವಾಸಿ ಚಂದ್ರು ಎಂಬುವರ ಮಗಳ ಮದುವೆ ನಿಶ್ಚಯವಾಗಿತ್ತು. ಕೊನೆ ಮಗಳ ಮದುವೆಯನ್ನು ಅದ್ದೂರಿಯಾಗಿ ನೆರವೇರಿಸಲು ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿದ್ದರು. ಆದರೆ, ಮಗಳ ಆರತಕ್ಷತೆಯ ದಿನ ಆತ್ಮೀಯ ಸ್ನೇಹಿತರೊಬ್ಬರಿಗೆ ಲಗ್ನಪತ್ರಿಕೆ ಕೊಟ್ಟಿಲ್ಲವೆಂದು ತಾಲೂಕಿನ ಹುಲಿತಿಮ್ಮಾಪುರಕ್ಕೆ ಹೋಗಿ ಕಾರ್ಡ್ ಕೊಟ್ಟು ಆ ಮನೆಯವರನ್ನು ಮದುವೆಗೆ ಆತ್ಮೀಯವಾಗಿ ಆಹ್ವಾನಿಸಿದ್ದಾರೆ.
ಆಪ್ತ ಗೆಳೆಯನನ್ನು ಮಗಳ ಮದುವೆಗೆ ಕರೆದು ವಾಪಸ್ ತಮ್ಮ ಮನೆಗೆ ಹಿಂದಿರುಗುವ ವೇಳೆ ಮಾರ್ಗ ಮಧ್ಯೆ ಬೈಕ್ ಅಪಘಾತಕ್ಕೀಡಾಗಿದೆ. ತೀವ್ರ ಗಂಭೀರ ಗಾಯವಾಗಿದ್ದ ಚಂದ್ರು ಅವರನ್ನು ಶಿವಮೊಗ್ಗದ ಖಾಸಗಿ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮಧ್ಯಾಹ್ನನವೇ ಮರಣ ಹೊಂದಿದ್ದರು.
ವಿಷಯ ಮನೆಯವರಿಗೆ ತಿಳಿದರೆ ಮದುವೆ ನಿಂತುಹೋಗುತ್ತದೆ ಎಂದು ತಿಳಿದು ಕುಟುಂಬಸ್ಥರು ವಿಷಯವನ್ನು ಮೃತರ ಪತ್ನಿ ಹಾಗೂ ಮಗಳು ದೀಕ್ಷಾಗೆ ತಿಳಿಸಲೇ ಇಲ್ಲ. ಅಪಘಾತವಾಗಿದೆ ಆಸ್ಪತ್ರೆಯಲ್ಲಿದ್ದಾರೆಂದು ಹೇಳಿ ಭಾನುವಾರ ಸಂಜೆ ಆರತಕ್ಷತೆ ಮುಗಿಸಿ, ಇಂದು ಬೆಳಿಗ್ಗೆ ಮುಹೂರ್ತವನ್ನೂ ಮುಗಿಸಿದ್ದಾರೆ. ಮುಹೂರ್ತ ಮುಗಿದ ಬಳಿಕ ವಿಷಯವನ್ನ ಮನೆಯವರಿಗೆ ತಿಳಿಸಲಾಗಿದೆ. ವಿಷಯ ಕೇಳಿ ಮೃತನ ಪತ್ನಿ ಹಾಗೂ ಮಗಳಿಗೆ ಬರಸಿಡಿಲು ಬಡಿದಂತಾಗಿ ಕುಟುಂಬಸ್ಥರ ನೋವಿನ ಆಕ್ರಂಧನ ಮುಗಿಲುಮುಟ್ಟಿದೆ.
ಕಡೂರು ಪಟ್ಟಣದ ಬೀರೂರಿನ ತರಳಬಾಳು ಕಲ್ಯಾಣ ಮಂಟಪದಲ್ಲಿ ಮದುವೆಯಾಗಿದ್ದು ಗಂಡು-ಹೆಣ್ಣು ಮನೆಗೆ ಬರುವ ವೇಳೆ ಮನೆಗೆ ತಂದೆಯ ಮೃತದೇಹ ಕೂಡಬಂದಿತ್ತು. ಮನೆಯವರು ಮಗಳ ಮದುವೆಯಾಯಿತು ಎಂದು ಸಂತೋಷ ಪಡಬೇಕೋ ಅಥವ ಮನೆಯ ಯಜಮಾನ ಸಾವನ್ನಪ್ಪಿದ್ದಾನೆಂದು ಕಣ್ಣೀರಡಬೇಕೋ ತಿಳಿಯದಂತೆ ಕುಟುಂಬಸ್ಥರು ಶೋಕಸಾಗರದಲ್ಲಿ ಮುಳುಗಿದ್ದಾರೆ.
ಮೃತರಿಗೆ ಮೂರು ಜನ ಹೆಣ್ಣು ಮಕ್ಕಳು. ಮೊದಲ ಮಗಳ ಮದುವೆಯಲ್ಲಿ ಕೊರೋನಾ ಅಡ್ಡಿ ಬಂತು ಕುಟುಂಬಸ್ಥರು, ಸಂಬಂಧಿಕರಷ್ಟೆ ಪಾಲ್ಗೊಂಡು ಮದುವೆ ಮಾಡಿದ್ದರು. ಹಾಗಾಗಿ, ಕೊನೆ ಮಗಳ ಮದುವೆ. ಅದ್ಧೂರಿಯಾಗಿ ಮಾಡಬೇಕೆಂದು ಎಲ್ಲಾ ರೀತಿಯ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಆದರೆ, ಮದುವೆಗೆ ಅಪ್ಪನೇ ಇರಲಿಲ್ಲ. ಕುಟುಂಬಸ್ಥರು ಕೊನೆ ಮದುವೆ ಇಷ್ಟಪಟ್ಟು ಕಷ್ಟಪಟ್ಟು ಮದುವೆ ಮಾಡಿದ್ದಾನೆ. ಮದುವೆ ನಿಲ್ಲಬಾರದು ಎನ್ನುವ ಕಾರಣಕ್ಕೆ ಆಸ್ಪತ್ರೆಯಲ್ಲಿದ್ದಾನೆ. ಚೆನ್ನಾಗಿದ್ದಾನೆಂದು ಹೇಳಿ ಮದುವೆ ಮುಗಿದ ಮೇಲೆ ವಿಷಯ ತಿಳಿಸಿದ್ದಾರೆ.
ವಿಷಯ ತಿಳಿದ ತರೀಕೆರೆ ಚಂದ್ರು ಸ್ನೇಹಿತರು ಹಲವರು ಮದುವೆಗೆ ಹೋಗಿರಲಿಲ್ಲ. ಈ ಕುರುಳು ಹಿಂಡುವ ಕಥೆ ಕೇಳಿದ ಜನ ಕೂಡ ದೇವರು ಅತ್ಯಂತ ಕ್ರೂರಿ. ಯಾರಿಗೂ ಇಂತಹ ಪರಿಸ್ಥಿತಿ ಬರಬಾರದು ಎಂದು ದೇವರಿಗೆ ಹಿಡಿಶಾಪ ಹಾಕಿದ್ದಾರೆ.
-
Chamarajanagar19 hours ago
Hannur|ಒಂದೇ ಹುದ್ದೆಗಾಗಿ ಇಬ್ಬರು ಅಧಿಕಾರಿಗಳ ಜಟಾಪಟಿ
-
Hassan22 hours ago
Hassan| ಕಾಡಾನೆ ದಾಳಿಗೆ ಕಾರ್ಮಿಕ ಬ*ಲಿ
-
State14 hours ago
ಯಲ್ಲಾಪುರ, ಸಿಂಧನೂರಿನಲ್ಲಿ ಭೀಕರ ಅಪಘಾತ: ಮೃತರ ಕುಟುಂಬಕ್ಕೆ 3ಲಕ್ಷ ಪರಿಹಾರ ಘೋಷಿಸಿದ ಸಿಎಂ
-
National - International14 hours ago
ಪನಾಮಾ ಕಾಲುವೆ ವಿವಾದ: ಟ್ರಂಪ್ ಹೇಳಿಕೆ ತಿರಸ್ಕರಿಸಿದ ಪನಾಮಾ ಅಧ್ಯಕ್ಷ ಜೋಸ್ ರೌಲ್
-
Chamarajanagar11 hours ago
ಜ.23ರಂದು ಚಾಮರಾಜನಗರ ಪಟ್ಟಣದ ವಿವಿಧೆಡೆ ವಿದ್ಯುತ್ ವ್ಯತ್ಯಯ
-
Hassan17 hours ago
ಕಾಡಾನೆ ದಾಳಿಯಿಂದ ವೃದ್ದ ಸಾ*ವು ಪ್ರಕರಣ
-
National - International12 hours ago
ರಾಜ್ಯದಲ್ಲಿ ಪ್ರತ್ಯೇಕ ಎರಡು ಕಡೆ ಅಪಘಾತ: ಮೃತರಿಗೆ 2 ಲಕ್ಷ ಪರಿಹಾರ ಘೋಷಿಸಿದ ಪ್ರಧಾನಿ
-
Hassan17 hours ago
ಮೊಟ್ಟ ಮೊದಲ ಬೃಹತ್ ಎಜುಕೇಷನ್ ಎಕ್ಸ್ ಪೋ 2025 ರ ಪ್ರಚಾರ ವಾಹನಕ್ಕೆ ಚಾಲನೆ