Connect with us

Hassan

ಬೈಕ್‌ಗೆ ಕಾರು ಡಿಕ್ಕಿ ಸ್ಥಳದಲ್ಲೇ ಪತ್ನಿ ಸಾವು, ಪತಿ ಸ್ಥಿತಿ ಗಂಭೀರ

Published

on

HASSAN-BREAKING

ಹಾಸನ : ಬೈಕ್‌ಗೆ ಕಾರು ಡಿಕ್ಕಿ

ಸ್ಥಳದಲ್ಲೇ ಪತ್ನಿ ಸಾವು, ಪತಿ ಸ್ಥಿತಿ ಗಂಭೀರ

ಗೊಲ್ಲರಹೊಸಳ್ಳಿ ಗ್ರಾಮದ ಸುಕನ್ಯಾ (45) ಮೃತ ಮಹಿಳೆ

ಹಾಸನ ಜಿಲ್ಲೆ, ಚನ್ನರಾಯಪಟ್ಟಣ ಬಾಗೂರು ಬೈಪಾಸ್‌ನಲ್ಲಿ ಘಟನೆ

ಸುಕನ್ಯಾ ಪತಿ ನರಸಿಂಹ ಅವರಿಗೆ ಗಂಭೀರ ಗಾಯ

ಗಾಯಾಳು ಚನ್ನರಾಯಪಟ್ಟಣ ಆಸ್ಪತ್ರೆಗೆ ದಾಖಲು

ಬೈಕ್‌ಗೆ ಡಿಕ್ಕಿ ಹೊಡೆದು ಕಾರು ನಿಲ್ಲಿಸದೆ ಪರಾರಿಯಾದ ಚಾಲಕ

KA-51 X 7745 ನಂಬರ್‌ನ ಆ್ಯಕ್ವೀವ್ ಹೋಡಾ ಬೈಕ್

ಗೊಲ್ಲರಹೊಸಳ್ಳಿ ಗ್ರಾಮಕ್ಕೆ ತೆರಳುತ್ತಿದ್ದ ದಂಪತಿ

ಬೆಂಗಳೂರಿನಿಂದ ಹಾಸನಕ್ಕೆ ಬರುತ್ತಿದ್ದ ಕಾರು

ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ

ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ

Continue Reading
Click to comment

Leave a Reply

Your email address will not be published. Required fields are marked *

Hassan

ಅಪ್ರಾಪ್ತ ಬಾಲಕರಿಂದ ಕಾರಿನಲ್ಲಿ ಜಾಲಿರೈಡ್

Published

on

HASSAN-BREAKING

ಹಾಸನ : ಅಪ್ರಾಪ್ತ ಬಾಲಕರಿಂದ ಕಾರಿನಲ್ಲಿ ಜಾಲಿರೈಡ್

ನಿಯಂತ್ರಣ ತಪ್ಪಿ ನಿಂತಿದ್ದ ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಕಾರು

ಅಪ್ರಾಪ್ತ ಚಲಾಯಿಸುತ್ತಿದ್ದ ಕಾರು ಸೇರಿ ಎರಡು ಕಾರುಗಳು ಜಖಂ

ಹಾಸನ ನಗರದ ಕೆ.ಆರ್.ಪುರಂನಲ್ಲಿ ಘಟನೆ

ಹೋಟೆಲ್ ಪೋರ್ಟಿಕೊದಲ್ಲಿ ನಿಲ್ಲಿಸಿದ್ದ ಕಾರು

ಕಾರು ನಿಯಂತ್ರಣಕ್ಕೆ ಸಿಗದೆ ರಸ್ತೆ ದಾಟಿ ಮತ್ತೊಂದು ಕಾರಿಗೆ ಡಿಕ್ಕಿ

ನೂರಾರು ವಾಹನಗಳು ಸಂಚಾರ ಮಾಡುವ ಹೈಸ್ಕೂಲ್ ಫೀಲ್ಡ್ ರೋಡ್ ದಾಟಿ ಕಾರಿಗೆ ಡಿಕ್ಕಿ ಹೊಡೆದ ಅಪ್ರಾಪ್ತರು

ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಸ್ಥಳಕ್ಕೆ ಹಾಸನ ಸಂಚಾರಿ ಪೊಲೀಸರು ಭೇಟಿ, ಪರಿಶೀಲನೆ

ಕಾರನ್ನು ವಶಕ್ಕೆ ಪಡೆದ ಸಂಚಾರಿ ಪೊಲೀಸರು

ಬಾಲಕ‌ ಪೋಷಕರ ವಿರುದ್ಧ ಪ್ರಕರಣ ದಾಖಲು

ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ನಿಯಂತ್ರಣ ತಪ್ಪಿ ನಿಂತಿದ್ದ ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಕಾರು

ಅಪ್ರಾಪ್ತ ಚಲಾಯಿಸುತ್ತಿದ್ದ ಕಾರು ಸೇರಿ ಎರಡು ಕಾರುಗಳು ಜಖಂ

ಹಾಸನ ನಗರದ ಕೆ.ಆರ್.ಪುರಂನಲ್ಲಿ ಘಟನೆ

ಹೋಟೆಲ್ ಪೋರ್ಟಿಕೊದಲ್ಲಿ ನಿಲ್ಲಿಸಿದ್ದ ಕಾರು

ಕಾರು ನಿಯಂತ್ರಣಕ್ಕೆ ಸಿಗದೆ ರಸ್ತೆ ದಾಟಿ ಮತ್ತೊಂದು ಕಾರಿಗೆ ಡಿಕ್ಕಿ

ನೂರಾರು ವಾಹನಗಳು ಸಂಚಾರ ಮಾಡುವ ಹೈಸ್ಕೂಲ್ ಫೀಲ್ಡ್ ರೋಡ್ ದಾಟಿ ಕಾರಿಗೆ ಡಿಕ್ಕಿ ಹೊಡೆದ ಅಪ್ರಾಪ್ತರು

ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯ

ಸ್ಥಳಕ್ಕೆ ಹಾಸನ ಸಂಚಾರಿ ಪೊಲೀಸರು ಭೇಟಿ, ಪರಿಶೀಲನೆ

ಕಾರನ್ನು ವಶಕ್ಕೆ ಪಡೆದ ಸಂಚಾರಿ ಪೊಲೀಸರು

ಬಾಲಕ‌ ಪೋಷಕರ ವಿರುದ್ಧ ಪ್ರಕರಣ ದಾಖಲು

ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

Continue Reading

Hassan

ರಾಜ್ಯ ಮಟ್ಟದ ಕರ್ನಾಟಕ ಪವರ್ ಲಿಪ್ಟಿಂಗ್ ನಲ್ಲಿ ಬಹುಮಾನ

Published

on

ಹಾಸನ : ಕಳೆದ ಎರಡು ದಿನಗಳಿಂದ ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಪವರ್ ಲಿಪ್ಟರ್ಸ್ ಸಂಸ್ಥೆ ಮತ್ತು ರಾಜ್ಯ ಪವರ್ ಲಿಪ್ಟರ್ಸ್ ಸಂಸ್ಥೆ ಮಂಗಳೂರು. ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೪೯ನೇ ಪುರುಷ ರ ಮತ್ತು ೪೧ನೇ ಮಹಿಳೆಯರ ರಾಜ್ಯ ಸೀನಿಯರ್ ಪವರ್ ಲಿಫ್ಟಿಂಗ್ ಸ್ಪರ್ದೆಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ಬಹುಮಾನವನ್ನು ವಿತರಿಸಲಾಯಿತು.

ಕರ್ನಾಟಕ ಪವರ್ ಲಿಪ್ಟಿಂಗ್ ಅಸೋಸಿಯೇಶನ್ ನಿಂದ ನಡೆದ ೫೯ ಕೆ.ಜಿ. ವಿಭಾಗದಲ್ಲಿ ಮಂಗಳೂರಿನ ಬಾಲಾಂಜನೇಯ ಜಿಮ್ ನ ಕೆ. ಸಚೀನ್ ಪ್ರಥಮ ಸ್ಥಾನಗಳಿಸಿದರು. ೬೬ ಕೆ.ಜಿ. ವಿಭಾಗದಲ್ಲಿ ಶಿವಮೊಗ್ಗ ಜಿಲ್ಲೆಯ ಎ. ನಾಗರಾಜು, ೭೪ ಕೆ.ಜಿ. ವಿಭಾಗದಲ್ಲಿ ದಾವಣಗೆರೆಯ ಕಾರ್ಪನ್ ಜಿಮ್ ತನ್ವೀರ್ ಅಹಮದ್, ೮೩ ಕೆ.ಜಿ. ವಿಭಾಗದಲ್ಲಿ ಆರ್. ಅರುಣ್ ಸಾಯಿ ಕುಮಾರ್, ೯೩ ಕೆ.ಜಿ. ವಿಭಾಗದಲ್ಲಿ ಬೆಂಗಳೂರಿನ ಪವರ್ ಲಿಫ್ಟಿಂಗ್ ಅಸೋಸಿಯೇಶನ್ ನ ಸಂದೀಪ್ ನಾಯ್ಡ್, ೧೦೫ ಕೆ.ಜಿ. ವಿಭಾಗದಲ್ಲಿ ಮಂಗಳೂರಿನ ಬಾಲಾಂಜನೇಯ ಜಿಮ್ ನ ಸಿದ್ದಾರ್ಥ ಸುವರ್ಣ, ೧೨೦ ಕೆ.ಜಿ. ವಿಭಾಗದಲ್ಲಿ ಮಂಗಳೂರಿನ ಬಾಲಾಂಜನೇಯ ಜಿಮ್ ನ ಪ್ರಸಾದ್ ಡಿಸೋಜಾ, ತ್ರಿಶೂಲ್ ಆರ್. ಅರ್ಚನ ಪ್ರಥಮ ಬಹುಮಾನ ಪಡೆದುಕೊಂಡರು.

ಇನ್ನು ಮಹಿಳೆಯರ ೪೭ ಕೆ.ಜಿ. ವಿಭಾಗದಲ್ಲಿ ಹಾಸನದ ಏರೋ ಫಿಟ್ನೆಸ್ ಜಿಮ್ ನ ಡಿ.ಆರ್. ಸಿಂಚನಾ, ೫೨ ಕೆ.ಜಿ. ವಿಭಾಗದಲ್ಲಿ ಬೆಂಗಳೂರಿನ ಪವರ್ ಲಿಪ್ಟಿಂಗ್ ಅಸೋಸಿಯೇಶನ್ ಮಿಟಾಲಿ ಬಿಸ್ವಾಲ್, ೫೭ ಕೆ.ಜಿ. ವಿಭಾಗದಲ್ಲಿ ಮಂಗಳೂರಿನ ಐರನ ಡೆನ್ ನ ಕೆ.ಎನ್. ದೇವಿ, ೬೩ ಕೆ.ಜಿ. ವಿಭಾಗದಲ್ಲಿ ಬೆಂಗಳೂರಿನ ಬಾಲಾರ್ಕ ಫೀಟ್ನೆಸ್ ನ ಪವಿತ್ರ ಶಂಕರನ್, ೬೯ ಕೆ.ಜಿ. ವಿಭಾಗದಲ್ಲಿ ಹುಬ್ಬಳ್ಳಿಯ ಎಂಟರನಲ್ ಜಿಮ್ ನ ನಾಗಶ್ರೀ, ೭೬ ಕೆ.ಜಿ. ವಿಭಾಗದಲ್ಲಿ ಹುಬ್ಬಳ್ಳಿಯ ಎಂಟರನಲ್ ಜಿಮ್ ನ ಫಹರನಜ್ ಎ. ಹುಸೇನ್, ೮೪ ಕೆ.ಜಿ. ವಿಭಾಗದಲ್ಲಿ ಮಂಗಳೂರಿನ ಐರನ್ ಡೆನ್ ನ ಎನ್. ದೀಪಾ ಮತ್ತು ರಕ್ಷಾ ಬೇಕಾಲ್ ಬಹುಮಾನ ಗಳಿಸಿದರು.

ಕಾರ್ಯಕ್ರಮದಲ್ಲಿ ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಸಂಸ್ಥೆ ಅದ್ಯಕ್ಷರು ಹಾಗೂ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಈ. ಕೃಷ್ಣೇಗೌಡ ವಹಿಸಿದ್ದರು. ರಾಜ್ಯ ಪವರ್ ಲಿಪ್ಟರ್ಸ್ ಸಂಸ್ಥೆಯ ಕಾರ್ಯದರ್ಶಿಗಳಾದ, ಸತೀಶ್ ಕುದ್ರೋಳಿಯವರು ಬಹುಮಾನ ವಿತರಣಾ ಮಾಡಿದರು. ಮುಖ್ಯ ಅತಿಥಿಗಳಾಗಿ ಕ್ರಷ್ನರಾಜು, ವಿಜಯಕುಮಾರ್, .ಪ್ರತಾಪ್, ಯೋಗನಾತ್, ಲೋಕೇಶ್, ಸಂಜಯ್, ರಾಜು, ಜಗದೀಶ್, ಹೇಮಂತ್, ಲೋಹಿತ್ ಗೌಡ, ಅಂತರರಾಷ್ಟ್ರೀಯ ಪವರ್ ಲಿಪ್ಟರ್ಸ್ ಹನುಮಂತಗೌಡ, ಹೆಚ್.ಆರ್. ಯಶೋದರ, ರಗು, .ದರ್ಮೇಗೌಡ, ಕ್ರೀಡಾ ಪರಿಷತ್ ಕಾರ್ಯ ದರ್ಶಿಗಳಾದ ನಿರಂಜನ ರಾಜ್ ಇತರರು ಉಪಸ್ಥಿತರಿದ್ದರು.

Continue Reading

Hassan

ವಿದ್ಯಾರ್ಥಿಗಳಲ್ಲಿ ಸಂಶೋಧನ ಮನೋಭಾವ ಉತ್ತೇಜಿಸಲು ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ವಿಜಯ ರಿಸರ್ಚ್ ಕೇಂದ್ರ ಪ್ರಾರಂಭ : ತಾರಾ ಎಸ್. ಸ್ವಾಮಿ

Published

on

ಹಾಸನ: ಇಂದಿನ ಸಮಾಜದಲ್ಲಿ ಸಂಶೋಧನೆ, ನಾವೀನ್ಯತೆ, ಸೃಜನಶೀಲತೆ ಮತ್ತು ನಾಯಕತ್ವ ಕೌಶಲಗಳ ಅಭಿವೃದ್ಧಿ ಅತ್ಯಂತ ಮುಖ್ಯವಾಗಿದೆ. ವಿದ್ಯಾರ್ಥಿಗಳಲ್ಲಿ ಸಂಶೋಧನ ಮನೋಭಾವವನ್ನು ಉತ್ತೇಜಿಸಲು, ವಿಜಯ ಶಾಲೆಯಲ್ಲಿ ೨೦೨೩-೨೪ರ ಶೈಕ್ಷಣಿಕ ವರ್ಷದಲ್ಲಿ ವಿಜಯ-ರಿಸರ್ಚ್ ಸೆಂಟರ್ ಅನ್ನು ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಪ್ರಾರಂಭಿಸಲಾಗಿದೆ ಎಂದು ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕರಾದ ತಾರಾ ಎಸ್. ಸ್ವಾಮಿ ಮತ್ತು ಅಕಾಡೆಮಿಕ್ ಹೆಡ್ ಡಾ. ಎಸ್. ಶ್ರೀಲಕ್ಷ್ಮಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಶೈಕ್ಷಣಿಕ ವರ್ಷದಲ್ಲಿ ವಿ-ರಿಸರ್ಚ್ ಸೆಂಟರ್ ಅನ್ನು ಪ್ರಾರಂಭಿಸಲಾಗಿದ್ದು, ಈ ಸಂಶೋಧನಾ ಕೇಂದ್ರದ ಮೊದಲ ಪ್ರಾಜೆಕ್ಟ್ ಎಂದರೇ ಪ್ರೌಢಶಾಲಾ ವಿದ್ಯಾರ್ಥಿಗಳ ವೃತ್ತಿ ಆಕಾಂಕ್ಷೆಗಳ ಬಗ್ಗೆ ನಮ್ಮ ರಾಜ್ಯದಲ್ಲಿ ನಡೆಸಿದ ಮೊದಲ ಅಧ್ಯಯನ ಇದಾಗಿದೆ. ಎಲ್ಲಾ ಕ್ಷೇತ್ರದಲ್ಲೂ ಒಂದು ರೀತಿ ವ್ಯತ್ಯಾಸವಿದ್ದು, ಮುಂದಿನ ಕ್ಷಣ ಯಾವ ಕ್ಷೇತ್ರದಲ್ಲಿ ಏನಾಗಬಹುದು ಎನ್ನುವ ಕಲ್ಪನೆ ಸಹ ನಮಗೆ ಇರುವುದಿಲ್ಲ. ಇಂತಹ ಕಾಲಘಟ್ಟದಲ್ಲಿ ಸುಸ್ತೀರ ಸಮಾಜ ಅತ್ಯಂತ ಶೀಘ್ರ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಯೋಚಿಸಿದಾಗ ಪ್ರೌಢಶಾಲಾ ಹಂತದಲ್ಲಿ ವಿದ್ಯಾರ್ಥಿಗಳಲ್ಲಿ ಸಮಸ್ಯೆಗಳನ್ನು ಗುರುತಿಸುವ, ಸಮಸ್ಯೆಗಳನ್ನು ವಿಶ್ಲೇಷನೆ ಮಾಡುವ ಮನೋಭಾವವನ್ನು ಬೆಳೆಸಿದಲ್ಲಿ ಹಾಗೂ ಸುಸ್ಥಿರ ಸಮಾಜ ಮತ್ತು ದೇಶವನ್ನು ಕಟ್ಟುವ ಅವಶ್ಯಕತೆ ಬಗ್ಗೆ ಅರಿವನ್ನು ಮೂಡಿಸಿದರೇ ಸಲ್ಪವಾದರೂ ಧನಾತ್ಮಕ ಬದಲಾವಣೆಯನ್ನು ತರಬಹುದು. ಈ ಉದ್ದೇಶದಲ್ಲಿ ಒಂದು ಸಣ್ಣ ಪ್ರಯತ್ನ ಮಾಡಿ ವಿಜಯ-ರಿಸರ್ಚ್ ಸೆಂಟರ್ ನ್ನು ತರಲಾಗಿದೆ ಎಂದರು.

ಪ್ರೌಢಶಾಲಾ ವಿದ್ಯಾರ್ಥಿಗಳ ಈ ಸಂಶೋಧನೆಯಿಂದ ತಿಳಿದು ಬಂದ ಅಂಶಗಳೆಂದರೇ ಶೇಕಡ ೩೦ ರಷ್ಟು ವಿದ್ಯಾರ್ಥಿಗಳು (ಬಾಲಕರು ಮತ್ತು ಬಾಲಕಿಯರು) ವೈದ್ಯಕೀಯ ವಿಜ್ಞಾನದ ವಿಭಾಗದಲ್ಲಿ, ಶೇಕಡ ೨೧ (ಬಾಲಕರು ಮತ್ತು ಬಾಲಕಿಯರು) ರಷ್ಟು ಎಂಜಿನಿಯರಿಂಗ್ ವಿಭಾಗದಲ್ಲಿ ಆಸಕ್ತಿಯನ್ನು ಹೊಂದಿದ್ದರೆ, ಉಳಿದ ಸುಮಾರು ಶೇಕಡ ೫೦ ರಷ್ಟು ಮಕ್ಕಳು ವ್ಯವಹಾರ, ಹಣಕಾಸು ಮತ್ತು ಸಾರ್ವಜನಿಕ ಆಡಳಿತದಲ್ಲಿ ಒಲವು ಹೊಂದಿದ್ದಾರೆ. ಕೃಷಿ, ಕಲೆ, ಮಾನವಿಕ ಮತ್ತು ಕಾನೂನು ವಿಷಯಗಳಲ್ಲಿ ಅತಿ ಕಡಿಮೆ ಒಲವು ಹೊಂದಿದ್ದಾರೆ. ಶೇಕಡ ೩೦ ರಲ್ಲಿ ಶೇಕಡ ೨೩ ರಷ್ಟು ವಿದ್ಯಾರ್ಥಿನಿಯರು ವೈದ್ಯಕೀಯ ವಿಜ್ಞಾನದ ವಿಭಾಗಕ್ಕೆ ಆದ್ಯತೆ ನೀಡಿದರೆ, ಶೇಕಡ ೨೧ ರಲ್ಲಿ ಶೇಕಡ ೧೨ ರಷ್ಟು ವಿದ್ಯಾರ್ಥಿಗಳು ಎಂಜಿನಿಯರಿಂಗ್ ವಿಭಾಗದ ಕಡೆಗೆ ಒಲವು ತೋರಿದ್ದಾರೆ. ವೃತ್ತಿಗಳ ಆಯ್ಕೆಯಲ್ಲಿ ವಿದ್ಯಾರ್ಥಿಗಳು ಪರಿಗಣಿಸಿದ ಒಂದು ಅಂಶ: ಶೇಕಡ ೩೭

 

ರಷ್ಟು ಮಂದಿ ವೇತನ ಮತ್ತು ಆದಾಯಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಟ್ಟಿದ್ದರೆ ಶೇಕಡ ೨೧ ರಷ್ಟು ಮಂದಿ ತಮ್ಮ ವೈಯಕ್ತಿಕ ಆಸಕ್ತಿಗೆ ಪ್ರಾಮುಖ್ಯತೆಯನ್ನು ಕೊಟ್ಟಿದ್ದಾರೆ ಎಂದರು. ಈ ಸಂಶೋಧನೆಯು ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಹಾಗೂ ಶಾಲಾ ಕಾಲೇಜುಗಳಿಗೆ ಸುಸ್ಥಿರ ಸಮಾಜ ಮತ್ತು ಸುಸ್ಥಿರ ದೇಶವನ್ನು ಕಟ್ಟಲು ವಿವಿಧ ವೃತ್ತಿಗಳ ಅಗತ್ಯತೆಯ ಬಗ್ಗೆ ಮಾಹಿತಿಯನ್ನು ನೀಡಿದೆ. ವಿದ್ಯಾರ್ಥಿಗಳ ವೃತ್ತಿ ಆಕಾಂಕ್ಷೆಗಳನ್ನು ಗುರುತಿಸಿ ಪ್ರೌಢಶಾಲಾ ಮಟ್ಟದಲ್ಲಿ ವೃತ್ತಿ ಕೌಶಲ ತರಬೇತಿಗಳನ್ನು ಪರಿಚಯಿಸುವ ಅಗತ್ಯವಿದೆ ಎಂದು ಒತ್ತಿ ಹೇಳುತ್ತದೆ. ಇಂತಹ ಸಂಶೋಧನೆಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ನಡೆದರೆ, ವಿದ್ಯಾರ್ಥಿಗಳಿಗೆ ಪ್ರೌಢಶಾಲಾ ಹಂತದಲ್ಲಿ ಹಲವು ವೃತ್ತಿ ಸಂಬಂಧಿತ ಕಾರ್ಯಕ್ರಮಗಳನ್ನು ಪರಿಚಯಿಸಲು ಬೇಕಾದಂತಹ ದತ್ತಾಂಶ (ಡೇಟಾ) ವನ್ನು ಒದಗಿಸುತ್ತವೆ. ಹಾಗೂ ಇದು ದೇಶಾದ್ಯಂತ ಕೌಶಲ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ ಎಂದು ಹೇಳಿದರು.

ಅಕಾಡೆಮಿಕ್ ಹೆಡ್ ಡಾ. ಎಸ್. ಶ್ರೀಲಕ್ಷ್ಮಿ ಇವರ ಮಾರ್ಗದರ್ಶನದಲ್ಲಿ ೨೦೨೩-೨೪ ಸಾಲಿನ ೧೦ನೇ ತರಗತಿಯ ವಿದ್ಯಾರ್ಥಿ ಹರಿಪ್ರಸಾದ್ ಮತ್ತು ಸಮೃದ್ಧಿ ವಿಜಯ ಶಾಲೆಯ ೨೦೨೩-೨೪ ಸಾಲಿನ ೧೦ನೇ ತರಗತಿಯ ವಿದ್ಯಾರ್ಥಿಗಳು. ಸಂಶೋಧನಾ ವಿಷಯವನ್ನು ಗುರುತಿಸುವುದು, ಪ್ರಶ್ನೆಗಳನ್ನು ರೂಪಿಸುವುದರ ಜೊತೆಗೆ ಸಂಬಂಧಿತ ಅಧ್ಯಯನಗಳನ್ನು ಪರಿಶೀಲಿಸುವುದು, ರಿಸರ್ಚ್ ಟೂಲ್ ಗಳನ್ನು ತಯಾರಿಸುವುದು, ದತ್ತಾಂಶವನ್ನು ಸಂಗ್ರಹಿಸುವುದು, ವಿಶ್ಲೇಷಿಸುವುದು ಮತ್ತು ತೀರ್ಮಾನಗಳನ್ನು ತೆಗೆದುಕೊಳ್ಳುವವರೆಗೆ ಸಂಪೂರ್ಣ ಸಂಶೋಧನಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಶಾಲಾ ವಿದ್ಯಾರ್ಥಿ ನಾಯಕ ಕೆ. ಹರಿಪ್ರಸಾದ್ ಇವರ ನಾಯಕತ್ವ ಗುಣ ಮತ್ತು ವಿಶ್ಲೇಷಣಾ ಕೌಶಲ ಶ್ಲಾಘನೀಯ. ಸಮೃದ್ಧಿ. ವಿ ದತ್ತಾಂಶ ವಿಶ್ಲೇಷಣೆ ಮಾಡುವುದರಲ್ಲಿ ಹೆಚ್ಚಿನ ಪರಿಣಿತಿಯನ್ನು ಹೊಂದಿದ್ದರು. ದೇಶಾದ್ಯಂತ ಈ ಕಾರ್ಯಕ್ರಮಕ್ಕೆ

ಆಯ್ಕೆಯಾಗುವ ಕೆಲವೇ ಕೆಲವು ವಿದ್ಯಾರ್ಥಿಗಳಲ್ಲಿ ಹರಿಪ್ರಸಾದ್ ಒಬ್ಬರು ಎಂದರು. ಹತ್ತು ತಿಂಗಳ ಅವಧಿಯಲ್ಲಿ, ನಮ್ಮ ಪ್ರೌಢಶಾಲಾ ವಿದ್ಯಾರ್ಥಿಗಳು ಸಂಶೋಧನೆ, ಸಂವಹನ ಮತ್ತು ನಾಯಕತ್ವ ಕೌಶಲಗಳನ್ನು ಬೆಳೆಸಿಕೊಳ್ಳುತ್ತಿರುವುದನ್ನು ನಾವು ಕಂಡೆವು. ಈ ಅಧ್ಯಯನವು ವಿದ್ಯಾರ್ಥಿಗಳ ಸಂಶೋಧನಾ ಕೌಶಲವನ್ನು ಹೆಚ್ಚಿಸುವ ಭರವಸೆಯನ್ನು ಮೂಡಿಸಿದೆ. ವಿದ್ಯಾರ್ಥಿಗಳ ಈ ಸಂಶೋಧನೆಯು ಶೈಕ್ಷಣಿಕ ಮ್ಯಾಕ್ಷೆನ್‌ಗಳಲ್ಲಿ ಪ್ರಕಟಣೆಗೊಳ್ಳುವ ನಿರೀಕ್ಷೆಯಲ್ಲಿದೆ. ವಿಜಯ ಶಾಲೆಯಲ್ಲಿ ಸುಸ್ಥಿರ ಸಮಾಜ ನಿರ್ಮಾಣಕ್ಕೆ ಪೂರಕವಾದಂತಹ ರಿಸರ್ಚ್ ಎನ್ವಿರಾನ್‌ಮೆಂಟನ್ನು ಬೆಳೆಸುವುದು, ವಿವಿಧ ಕ್ಷೇತ್ರಗಳಲ್ಲಿರುವ ತಜ್ಞರ ಸಹಯೋಗದೊಂದಿಗೆ ಸಂಶೋಧನೆಯನ್ನು ಮುಂದುವರಿಸುವುದು ನಮ್ಮ ಉದ್ದೇಶವಾಗಿದೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ವಿಜಯ ಶಾಲೆಯ ಸುಬ್ಬಸ್ವಾಮಿ, ವಿದ್ಯಾರ್ಥಿ ಹರಿಪ್ರಸಾದ್ ಇತರರು ಉಪಸ್ಥಿತರಿದ್ದರು.

Continue Reading

Trending

error: Content is protected !!