Connect with us

Hassan

ಅಕ್ರಮ ಎಸಗಿರುವ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆರ್. ಮೋಹನಾ ಒತ್ತಾಯ

Published

on

ಹಾಸನ : ಹೇಮಾವತಿ ಯೋಜನಾ ವಲಯ ಕಛೇರಿ ಗೊರೂರು ವ್ಯಾಪ್ತಿಯಲ್ಲಿ ಅಕ್ರಮ ಎಸಗಿರುವ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸಿಐಡಿ ಇಲ್ಲವೇ ಸಮಗ್ರ ಇಲಾಖೆಯ ವಿಚಾರಣೆ ನಡೆಸಿ ಶಿಸ್ತು ಕ್ರಮಕೈಗೊಳ್ಳುವಂತೆ ಸಾಮಾಜಿಕ ಕಾರ್ಯಕರ್ತ ಆರ್. ಮೋಹನಾ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಲೋಕಾಯುಕ್ತ ನ್ಯಾಯಾಲಯದಲ್ಲಿ ಮುಖ್ಯ ಇಂಜಿನಿಯರ್ ಹೇಮಾವತಿ ಯೋಜನಾ ವಲಯ ಕಛೇರಿ ಗೊರೂರು ವ್ಯಾಪ್ತಿಯಲ್ಲಿ ಅಕ್ರಮ ಎಸಗಿರುವ ಭ್ರಷ್ಟ ಅಧಿಕಾರಿಗಳ ವಿರುದ್ಧ ದೂರು ಸಂಬಂಧ ಕ್ರಮಕೈಗೊಂಡಿರದ ಕಾರಣ ಈ ಪ್ರಕರಣಗಳನ್ನು ಸಿ,ಐ,ಡಿ ಅಥವಾ ಸಮಗ್ರ ಇಲಾಖಾ ವಿಚಾರಣೆ ನಡೆಸಿ ಶಿಸ್ತು ಕ್ರಮಕೈಗೊಳ್ಳಬೇಕು. ಲೋಕಾಯುಕ್ತ ನ್ಯಾಯಾಲದ ಐದು ಪ್ರಕರಣಗಳು ಸತ್ಯಾಂಶದಿಂದ ಕೂಡಿದ್ದು, ಅಧಿಕಾರಿಗಳು ಅಕ್ರಮ ಅವ್ಯವಹರಿಸಿ ಭ್ರಷ್ಟಚಾರ ಎಸಗಿರುವುದು ಕಛೇರಿ ಮೂಲಗಳ ಖಚಿತ ಮಾಹಿತಿ ಆದರಿಸಿ ಮಾಹಿತಿ ಹಕ್ಕು ಅಧಿನಿಯಮದ ಅಡಿಯಲ್ಲಿ ವಿಷಯಗಳ ಬಗ್ಗೆ ದಾಖಲಾತಿಗಳನ್ನು ಕೋರಲಾಗಿ ಕೆಲವು ವಿಭಾಗಗಳ ಅಧಿಕಾರಿಗಳು ದಾಖಲಾತಿಗಳನ್ನು ನೀಡಿದರೆ ಇನ್ನು ಕೆಲವು ಅಧಿಕಾರಿಗಳು ದಾಖಲಾತಿಗಳನ್ನು ನೀಡದೇ ಯಾವುದೊ ಆಮೀಷವೊಡ್ಡಿ ದಾಖಲಾತಿಗಳನ್ನು ಕೇಳದಂತೆ ಪುಡಿರೌಡಿಗಳು ಹಾಗೂ ರಾಜಕೀಯ ಮುಖಂಡರುಗಳಿಂದ ಬೆದರಿಕೆ ಹಾಕಿಸಿರುತ್ತಾರೆ ಎಂದರು. ಕಾರಣ ಕಾಮಗಾರಿ ನಿರ್ವಹಿಸಿರುವುದೇ ರಾಜಕೀಯ ಪ್ರಭಾವಿಗಳು, ಅಧಿಕಾರಿಗಳ ಭ್ರಷ್ಟಾಚಾರ ಪ್ರಚುರ ಪಡಿಸಿದ್ದರಿಂದ ನನ್ನ ಮೇಲೆ ೨೦೨೩ ಜನವರಿ ೩ ರಂದು ಹೊಳೆನರಸೀಪುರ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಸುಳ್ಳು ಪ್ರಕರಣ ದಾಖಲಿಸಿರುತ್ತಾರೆ.

ಈ ಅಧಿಕಾರಿಗಳ ದುರ್ನಡತೆ ಭ್ರಷ್ಟಚಾರ ವಿರುದ್ಧ ಇಲಾಖಾ ಮೇಲಾಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗದ ಕಾರಣ ಈ ಹಿಂದೆ ಮುಖ್ಯ ಇಂಜಿನಿಯರ್ ಆಗಿ ವಯೋನಿವೃತ್ತಿಹೊಂದಿರುವ ಎನ್ ನಾಗರಾಜು, ಅಧೀಕ್ಷಕ ಇಂಜಿನಿಯರ್ ಕೆ,ಎನ್ ನಳಿನಿ, ಕಾರ್ಯಪಾಲಕ ಇಂಜಿನಿಯರ್ ರವರುಗಳಾದ ಎಸ್ ಯೋಗೇಶ್, ಎಸ್ ಸತೀಶ್, ಎಮ್ ಬಿ ಜಯಕುಮಾರ, ಹೆಚ್ ಟಿ ದಿನೇಶ, ವಿ ಆರ್ ಮಹೇಶ, ಹಾಗೂ ಸಹಾಯಕ ಇಂಜಿನಿಯರ್ ಮನೋಜ್ ಕುಮಾರ, ರವರುಗಳ ಮೇಲೆ ನಿರ್ಧಿಷ್ಟ ವಸ್ತುವಿಷಯಗಳನ್ನಾದರಿಸಿ ಲೋಕಾಯುಕ್ತ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮುಖ್ಯ ಇಂಜಿನಿಯರ್ ರವರ ಆದೇಶದಂತೆ ವಿಭಾಗಗಳ ಕಛೇರಿ ಅಧಿಕಾರಿಗಳನ್ನು ಕೋರಲಾಗಿ ಹೇಮಾವತಿ ಬಲ ಮೇಲ್ದಂಡೆ ವಿಭಾಗ ಕಛೇರಿ ಗೊರೂರು ಕಾರ್ಯಪಾಲಕ ಇಂಜಿನಿಯರ್ ಸಿ,ಎಸ್ ವಿಶ್ವನಾಥ್ ರವರು ಕಟ್ಟುನಿಟ್ಟಿನ ಕ್ರಮ ಕೈಗೊಂಡು ಈ ವರೆಗೆ ಯಾವ ಕಾರಣಕ್ಕೆ ದಾಖಲಾತಿಗಳನ್ನು ನೀಡಿಲ್ಲವೆಂದು ತಮ್ಮ ವ್ಯಾಪ್ತಿಯ ಉಪವಿಭಾಗಗಳ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರವರುಗಳಿಗೆ ಕಾರಣ ಸೂಚನೆ ತೋರಿಸುವಂತೆ ಅಧಿಕಾರಿಗಳ ತರವಲ್ಲದ ನಡೆ ವಿರುದ್ಧ ( ಶೋಕಾಸ್ ನೋಟೀಸ್) ಅರೆ ಸರ್ಕಾರಿ ಪತ್ರ ನೀಡಿ. ನನಗೆ ನೀಡಿದ ಹಿಂಬರಹದಲ್ಲಿ ಸದರಿ ವಿಷಯದ ಬಗ್ಗೆ ಪ್ರಸ್ತಾಪಿಸಲಾಗಿರುತ್ತದೆ. ಆದರೆ ಹೇಮಾವತಿ ಬಲದಂಡೆ ನಾಲಾ ವಿಭಾಗ ಕಛೇರಿ ಹೊಳೆನರಸೀಪುರ ಕಾರ್ಯಪಾಲಕ ಇಂಜಿನಿಯರ್ ವಿ, ಆರ್ ಮಹೇಶ. ಯಗಚಿ ಯೋಜನಾ ವಿಭಾಗ ಕಛೇರಿ ಬೇಲೂರು ಕಾರ್ಯಪಾಲಕ ಇಂಜಿನಿಯರ್ ಹೆಚ್ ಟಿ ದಿನೇಶ, ಹಾಗೂ ಹೇಮಾವತಿ ಅಣೆಕಟ್ಟೆ ವಿಭಾಗ ಕಛೇರಿ ಗೊರೂರು ಕಾರ್ಯಪಾಲಕ ಇಂಜಿನಿಯರ್ ಲೋಕೇಶ್ ಮೂರು ವಿಭಾಗಗಳ ಅಧಿಕಾರಿಗಳು ಲೋಕಾಯುಕ್ತ ನ್ಯಾಯಾಲಯ ಹಾಗೂ ಮುಖ್ಯ ಇಂಜಿನಿಯರ್ ರವರ ಯಾವುದೇ ಆದೇಶಕ್ಕೂ ಕಿಮ್ಮ ಬೆಲೆ ನೀಡಿರುವುದಿಲ್ಲ ಎಂದು ದೂರಿದರು.

ಲೋಕಾಯುಕ್ತ ನ್ಯಾಯಾಲಯ ಈ ಪ್ರಕರಣಗಳ ಸಂಬಂಧ ದಾಖಲಾತಿಗಳ ಸಮರ್ಪಕ ಉತ್ತರವನ್ನು ನೀಡುವಂತೆ ಹೇಮಾವತಿ ಯೋಜನಾ ವಲಯದ ಮುಖ್ಯ ಇಂಜಿನಿಯರ್ ಗೊರೂರು ರವರಿಗೆ ನೋಟೀಸ್ ನೀಡಲಾಗಿದ್ದು, ಪ್ರಭಾರ ಮುಖ್ಯ ಇಂಜಿನಿಯರ್ ಕೆ,ಎನ್ ನಳಿನಿ ರವರು ಲೋಕಾಯುಕ್ತ ನ್ಯಾಯಾಲಯದ ಆದೇಶಕ್ಕೆ ಪ್ರತಿಯಾಗಿ ಸತ್ಯಾಂಶವನ್ನು ಬಚ್ಚಿಟ್ಟು ಸುಳ್ಳು ವರಧಿಯನ್ನು ರಚಿಸಿ ಅಧಿಕಾರಿಗಳನ್ನು ರಕ್ಷಿಸಲು ಪರೋಕ್ಷವಾಗಿ ಟೋಂಕಕಟ್ಟಿ ಲೋಕಾಯುಕ್ತ ನ್ಯಾಯಲಯಕ್ಕೆ ತಪ್ಪು ವರದಿ ಸಲ್ಲಿಸಿರುವುದು ದಾಖಲಾತಿಗಳಿಂದ ತಿಳಿಯುತ್ತದೆ. ಈ ಪ್ರಕರಣಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ಸೆಸ್ಕಾಂನಿಂದ ಪಡೆದುಕೊಂಡಿದ್ದು, ದಾಖಲಾತಿಗಳು ಸತ್ಯವನ್ನು ಸಾರುತ್ತಿದ್ದು ಅಧಿಕಾರಿಗಳ ಮೋಸವು ಬಟಾಬಯಲಾಗಿರುತ್ತದೆ.

ಆದ್ದರಿಂದ ಗೌರವಾನ್ವಿತ ಲೋಕಾಯುಕ್ತ ನ್ಯಾಯಾಲಯವು ಅಧಿಕಾರಿಗಳ ಆಮೀಷಕ್ಕೆ ಒಳಗಾಗದೇ ರಾಜಕೀಯ ಒತ್ತಡಕ್ಕೆ ಹೆದರದೆ ಐದು ಪ್ರಕರಣಗಳ ಸಮಗ್ರ ತನಿಖೆ ನಡೆಸಬೇಕು ಅಥವಾ ಸಿ,ಐ,ಡಿ ಇಲಾಖೆಗೆ ವರ್ಗಾಹಿಸಬೇಕು ಅಥವಾ ಇಲಾಖೆ ಸಮಗ್ರ ತನಿಖೆ ನಡೆಸಿ ಪ್ರಕರಣಗಳ ಅಕ್ರಮ ಎಸಗಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕೈಗೊಳ್ಳುವಂತೆ ಈ ಮೂಲಕ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಉಮೇಶ್, ಜಗದೀಶ್, ಕಾಳೇಗೌಡ ಇತರರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Hassan

ಎಸ್ಐಟಿ ಪೊಲೀಸರಿಂದ ಭಾವನಿ ರೇವಣ್ಣ ಕಾರು ಚಾಲಕನಿಗೆ ಸಮನ್ಸ್ ಜಾರಿ

Published

on

ಎಸ್ಐಟಿ ಪೊಲೀಸರಿಂದ ಭಾವನಿ ರೇವಣ್ಣ ಕಾರು ಚಾಲಕನಿಗೆ ಸಮನ್ಸ್ ಜಾರಿ

ಕಾರು ಚಾಲಕ ಅಜಿತ್ ಗೆ ಎಸ್ಐಟಿ ಸಮನ್ಸ್ ಜಾರಿ

ಸಂತ್ರಸ್ಥೆ ಕಿಡ್ನಾಪ್ ಪ್ರಕರಣ ಸಂಬಂಧ ಎರಡು ಬಾರಿ ಸಮನ್ಸ್ ಜಾರಿ ಮಾಡಿರುವ ಎಸ್ಐಟಿ

ಹೊಳೆನರಸೀಪುರ ಚಾಲಕ ಅಜಿತ್ ನಿವಾಸಕ್ಕೆ ತೆರಳಿ ಸಮನ್ಸ್

ಕಿಡ್ನಾಪ್ ಪ್ರಕರಣ ದಾಖಲಾದ ಬಳಿಕ ತಲೆಮರೆಸಿಕೊಂಡಿರುವ ಕಾರು ಚಾಲಕ ಅಜಿತ್

ಸಂತ್ರಸ್ಥೆಯನ್ನ ಕಾರಿನಲ್ಲಿ ಕರೆದೊಯ್ದಿದ್ದ ಕಾರು ಚಾಲಕ ಅಜಿತ್ ಎಂಬ ಆರೋಪ

ಕಿಡ್ನಾಪ್ ಪ್ರಕರಣ ಸಂಬಂಧ ಸಮನ್ಸ್ ಜಾರಿ ಮಾಡಿರುವ ಎಸ್ಐಟಿ ಪೊಲೀಸರು

Continue Reading

Hassan

ಭವಾನಿ ರೇವಣ್ಣ ಕಾರು ಚಾಲಕ ಅಜಿತ್ ಗೆ ಎಸ್ಐಟಿ ಸಮನ್ಸ್ ಜಾರಿ

Published

on

ಎಸ್ಐಟಿ ಪೊಲೀಸರಿಂದ ಭಾವನಿ ರೇವಣ್ಣ ಕಾರು ಚಾಲಕನಿಗೆ ಸಮನ್ಸ್ ಜಾರಿ

ಕಾರು ಚಾಲಕ ಅಜಿತ್ ಗೆ ಎಸ್ಐಟಿ ಸಮನ್ಸ್ ಜಾರಿ

ಸಂತ್ರಸ್ಥೆ ಕಿಡ್ನಾಪ್ ಪ್ರಕರಣ ಸಂಬಂಧ ಎರಡು ಬಾರಿ ಸಮನ್ಸ್ ಜಾರಿ ಮಾಡಿರುವ ಎಸ್ಐಟಿ

ಹೊಳೆನರಸೀಪುರ ಚಾಲಕ ಅಜಿತ್ ನಿವಾಸಕ್ಕೆ ತೆರಳಿ ಸಮನ್ಸ್

ಕಿಡ್ನಾಪ್ ಪ್ರಕರಣ ದಾಖಲಾದ ಬಳಿಕ ತಲೆಮರೆಸಿಕೊಂಡಿರುವ ಕಾರು ಚಾಲಕ ಅಜಿತ್

ಸಂತ್ರಸ್ಥೆಯನ್ನ ಕಾರಿನಲ್ಲಿ ಕರೆದೊಯ್ದಿದ್ದ ಕಾರು ಚಾಲಕ ಅಜಿತ್ ಎಂಬ ಆರೋಪ

ಕಿಡ್ನಾಪ್ ಪ್ರಕರಣ ಸಂಬಂಧ ಸಮನ್ಸ್ ಜಾರಿ ಮಾಡಿರುವ ಎಸ್ಐಟಿ ಪೊಲೀಸರು

Continue Reading

Hassan

ಯಾರು ಆತಂಕಪಡಬೇಕಾಗಿಲ್ಲ ಕಾಲವೇ ಉತ್ತರ ಕೊಡಲಿದೆ ಜೆಡಿಎಸ್ ಕಾರ್ಯಕರ್ತರಿಗೆ ದೈರ್ಯ ತುಂಬಿದ ಹೆಚ್.ಡಿ. ರೇವಣ್ಣ

Published

on

ಹಾಸನ : ಯಾರು ಆತಂಕಪಡಬೇಕಾಗಿಲ್ಲ. ಕಾಲವೇ ಉತ್ತರ ಕೊಡುತ್ತದೆ. ಟೈಂ ಬೇಕಾಗುತ್ತದೆ ಅಷ್ಟೇ. ನಮ್ಮ ಜಿಲ್ಲೆಯ ಜೆಡಿಎಸ್ ಕಾರ್ಯಕರ್ತರ ಸಂಕಷ್ಟಕ್ಕೆ ಜೊತೆಯಲ್ಲಿ ನಿಲ್ಲುತ್ತೇನೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ದೈರ್ಯ ತುಂಬಿದರು.

ನಗರದ ಕುವೆಂಪು ಬಡಾವಣೆಯಲ್ಲಿರುವ ಡಿ.ಟಿ. ಪರಮೇಶ್ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಾಸನ ಜಿಲ್ಲೆಯ ಲೋಕಸಭಾ ಚುನಾವಣೆ ಫಲಿತಾಂಶವನ್ನು ಜನತೆಗೆ ಬಿಟ್ಟಿದ್ದೇನೆ. ಜನತೆಯ ತೀರ್ಪಿಗೆ ತಲೆ ಬಾಗುತ್ತೇವೆ. ನಾವು ಅಧಿಕಾರಕ್ಕೋಸ್ಕರ ಹೋರಾಟ ಮಾಡುವುದಿಲ್ಲ. ಅಧಿಕಾರ ಇದ್ದರೂ ಇಲ್ಲದಿದ್ದರೂ ಕೆಲಸ ಮಾಡ್ತಿವಿ, ೪೮ ಗಂಟೆಗಳಲ್ಲಿ ಪ್ರಜ್ವಲ್ ರೇವಣ್ಣ ಬಾ ಎಂಬ ಕುಮಾರಸ್ವಾಮಿ ಮನವಿ ಮಾಡಿದ ವಿಚಾರವಾಗಿ ಮಾತನಾಡಿ, ಕೋರ್ಟ್‌ನಲ್ಲಿ ಕೇಸ್ ಇದ್ದಾಗ ನಾನು ಮಾತನಾಡುವುದಿಲ್ಲ. ಹೇಸಿಗೆಯಂತಹ ವಿಚಾರವವು ರಾಜ್ಯಕ್ಕೆ, ನಮಗೆ ಗೌರವ ತಂದುಕೊಡುವುದಿಲ್ಲ. ಈ ವಿಚಾರವನ್ನು ರಾಜಕೀಯವಾಗಿ ತೆಗದುಕೊಂಡು ಹೋಗಲಾಗುತ್ತಿದೆ. ಈದಕ್ಕೆಲ್ಲಾ ಮೂಲ ಯಾರಿದ್ದಾರೆ ಅವರನ್ನು ಬಂಧಿಸಿ ಶಿಕ್ಷೆ ವಿಧಿಸಲಿ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿದರು. ತಮ್ಮ ಮೇಲೆ ಎರಡು ಪ್ರಕರಣ ದಾಖಲು ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ರೇವಣ್ಣ ಅವರು, ಯಾರು ಆತಂಕಪಡಬೇಕಾಗಿಲ್ಲ, ಕಾಲವೇ ಉತ್ತರ ಕೊಡುತ್ತದೆ. ಟೈಂ ಬೇಕು ಅಷ್ಟೇ. ನಮ್ಮ ಜಿಲ್ಲೆಯ ಜನರನ್ನು ಅರವತ್ತು ವರ್ಷ ದೇವೇಗೌಡರು ಕಾಪಾಡಿದ್ದಾರೆ. ನಾನೀದ್ದೀನಿ, ಎ.ಮಂಜು, ಸ್ವರೂಪ್ ಪ್ರಕಾಶ್ ಇದ್ದಾರೆ. ಕಾರ್ಯಕರ್ತರು ಯಾರು ಭಯಪಡುವ, ಆತಂಕಪಡುವ ಅಗತ್ಯವಿಲ್ಲ. ನನಗೂ ಜಿಲ್ಲೆಯ ಜನ ಇಪ್ಪತ್ತೈದು ವರ್ಷ ಆಶೀರ್ವಾದ ಮಾಡಿದ್ದಾರೆ ಎಂದು ಕಾರ್ಯಕರ್ತರಿಗೆ ದೈರ್ಯ ತುಂಬಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ಒಂದು ವರ್ಷ ಆಗಿದ್ದು, ಈ ಸರ್ಕಾರದ ವೇಳೆ ಯಾವುದಾದರೂ ರಸ್ತೆ ಗುಂಡಿ ಮುಚ್ಚಿಲ್ಲ. ಶಿಕ್ಷಕರ ಹುದ್ದೆ ಭರ್ತಿ ಮಾಡಿಲ್ಲ. ಒಂದು ವರ್ಷದಲ್ಲಿ ರಾಜ್ಯಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ ಎಂದು ಕಾಂಗ್ರೆಸ್ ಪಕ್ಷಕ್ಕೆ ಪ್ರಶ್ನೆ ಮಾಡಿದರು. ರಾಜ್ಯ ಸರ್ಕಾರದ ಮಂತ್ರಿಗಳೇ ಸರ್ಕಾರಕ್ಕೆ ಧಮ್ಕಿ ಹಾಕುತ್ತಿದ್ದಾರೆ. ನಮ್ಮಲ್ಲಿ ಇದ್ದು ಆ ಕಡೆ ಹೋಗಿದ್ದಾರಲ್ಲಾ ಕೆಲವರು ಸರ್ಕಾರ ಬಂದು ಒಂದು ವರ್ಷ ಆಗಿದೆ ಹಾಸನ ಜಿಲ್ಲೆಗೆ ಏನು ಕೊಡುಗೆ ಕೊಡಿಸಿದ್ದಾರೆ ಎಂದು ಪ್ರಶ್ನೆ ಮಾಡಿದರು. ನಮ್ಮ ಆಡಳಿತದಲ್ಲಿ ನಾವು ಶಾಲಾ, ಕಾಲೇಜಿಗೆ ಮೂಲಭೂತ ಸೌಕರ್ಯ ಕೊಟ್ಟು ತೋರಿಸಿದ್ದೇವೆ. ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ನಮ್ಮ ಜಿಲ್ಲೆ ಈ ಬಾರಿ ಹದಿನೈದನೇ ಸ್ಥಾನದಲ್ಲಿದೆ. ನಮ್ಮ ಸರ್ಕಾರ ಇದ್ದಾಗ ಹಾಸನ ಜಿಲ್ಲೆ ಮೊದಲ ಸ್ಥಾನದಲ್ಲಿತ್ತು. ಈ ರೀತಿಯಾಗಲೂ ಕಾರಣ ಯಾರು ಕಾರಣ. ಈ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು. ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದ್ದರೆ ಅದು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಮಾತ್ರ. ಕುಮಾರಸ್ವಾಮಿ ಆಡಳಿತದಲ್ಲಿ ರಾಜ್ಯದಲ್ಲಿ ೧೫೦೦ ಹೈಸ್ಕೂಲ್, ೨೪೦ ಪ್ರಥಮ ದರ್ಜೆ ಕಾಲೇಜು ತೆರೆದರು. ಖಾಲಿ ಇದ್ದ ಶಿಕ್ಷಕರ ಹುದ್ದೆ ಭರ್ತಿ ಮಾಡಿದ್ದು ಎಚ್.ಡಿ.ಕುಮಾರಸ್ವಾಮಿ ಎಂದರು. ಐವತ್ತು ವರ್ಷ ಆಡಳಿತದ ಕಾಂಗ್ರೆಸ್ ಕೈಯಲ್ಲೂ ಆಗಿರಲಿಲ್ಲ. ಕುಮಾರಸ್ವಾಮಿ, ಯಡಿಯೂರಪ್ಪ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ಕೊಟ್ಟಿದ್ದಾರೆ. ಇಡೀ ಇಂಡಿಯಾ ದೇಶದಲ್ಲಿ ಶಿಕ್ಷಣಕ್ಕೆ ಒತ್ತು ಕೊಟ್ಟಿದ್ದು ದೇವೇಗೌಡರು. ದೇವೇಗೌಡರ ಕುಟುಂಬ ಯಾವುದೇ ಖಾಸಗಿ ಶಾಲೆ ಮಾಡಿಲ್ಲ. ಆದರೇ ಶಿಕ್ಷಕರ ಮಕ್ಕಳಿಗೆ ಉದ್ಯೋಗದಲ್ಲಿ ಹತ್ತು ಪರ್ಸೆಂಟ್ ಮೀಸಲಾತಿ ಕೊಡಬೇಕು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಹಾಸನ ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್, ಅರಕಲಗೂಡು ಶಾಸಕ ಎ. ಮಂಜು.ಸ್ವರೂಪ ಪ್ರಕಾಶ್. ಮಾಜಿ ಸಚಿವರಾದ ಎಚ್.ಕೆ. ಕುಮಾರಸ್ವಾಮಿ. ಮಾಜಿ ಶಾಸಕರಾದ ಕೆ.ಎಸ್. ಲಿಂಗೇಶ್ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ವಿವೇಕಾನಂದ ಇತರರು ಉಪಸ್ಥಿತರಿದ್ದರು.

Continue Reading

Trending

error: Content is protected !!