Connect with us

Chamarajanagar

ಸಿಸಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಆರ್ ಕೃಷ್ಣಮೂರ್ತಿ ಭೂಮಿ ಪೂಜೆ

Published

on

ಯಳಂದೂರು : ತಾಲೂಕಿನ ಯರಗಂಬಳ್ಳಿ ಗ್ರಾಮದ ಪರಿಶಿಷ್ಟ ಜಾತಿ ಬಡಾವಣೆಯಲ್ಲಿ ಒಂದು ಕೋಟಿ 40 ಲಕ್ಷ ರೂಪಾಯಿ ಸಿಸಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಆರ್ ಕೃಷ್ಣಮೂರ್ತಿ ಭೂಮಿ ಪೂಜ ನೆರವರಿಸಿದರು.

ಬಳಿಕ ಮಾತನಾಡಿದ ಅವರು ಮುಖ್ಯಮಂತ್ರಿಗಳ ಪರಿಶಿಷ್ಟ ಜಾತಿಯ ಪ್ರಗತಿ ಕಾಲೋನಿ ಯೋಜನೆ ಅಡಿಯಲ್ಲಿ ಸುಮಾರು ಒಂದು ಕೋಟಿ 40 ಲಕ್ಷ ರೂಪಾಯಿಗಳ ಸಿ.ಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಲಾಗುತ್ತಿದ್ದು , ಇದರಿಂದ ಪರಿಶಿಷ್ಟ ಜಾತಿಯ ಕಾಲೋನಿಗಳಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು. ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿರುವ ಗುಂಬಳ್ಳಿ – ಯರಗಂಬಳ್ಳಿ ರಸ್ತೆ ಅಭಿವೃದ್ಧಿಗೆ ಸುಮಾರು 70 75 ಲಕ್ಷಗಳ ಅನುದಾನ ಗಣಿ ಇಲಾಖೆ ವತಿಯಿಂದ ಬಿಡುಗಡೆಯಾಗುತ್ತಿದ್ದು ರಸ್ತೆ ಅಭಿವೃದ್ಧಿಗೆ ಅನುಮೋದನೆ ನೀಡಲಾಗಿದೆ. ಶೀಘ್ರದಲ್ಲೇ ಅದಕ್ಕೂ ಸಹ ಭೂಮಿ ಪೂಜೆ ಮಾಡಲಾಗುವುದು ಎಂದು ತಿಳಿಸಿದರು. ಇದರ ಜೊತೆಗೆ ಉಪ್ಪಿನ ಮೊಳೆಯಿಂದ ಬಿಳಿಗಿರಿರಂಗಪ್ಪನ ಬೆಟ್ಟದ ಮುಖ್ಯ ರಸ್ತೆ ಅಭಿವೃದ್ಧಿಗೂ ಸಹ ಅನುಮೋದನೆ ದೊರಕ್ಕಿದ್ದು ಶೀಘ್ರದಲ್ಲೇ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು. ವೈ.ಕೆ ಮೊಳೆ ರಸ್ತೆ ಯಿಂದ ಚಂಚಳ್ಳಿ ಅಡ್ಡ ರಸ್ತೆ ವರೆಗೂ ಸುಮಾರು 6 ಕೋಟಿ ಅನುದಾನ ಬಿಡುಗಡೆಯಾಗುತ್ತಿದ್ದು ಅದನ್ನು ಸಹ ಶೀಘ್ರದಲ್ಲೇ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದರು.

ಇದೇ ವೇಳೆ ಯರಗಂಬಳ್ಳಿ ಗ್ರಾಮಸ್ಥರು ಶಾಸಕರಿಗೆ ವಿವಿಧ ಮನವಿಗಳನ್ನು ಸಲ್ಲಿಸಿದರು. ಶಾಸಕರು ಸ್ಪಂದಿಸಿ ಶೀಘ್ರದಲ್ಲೇ ತಮ್ಮ ಮನವಿಗಳೆಲ್ಲವನ್ನು ಒಂದೊಂದಾಗಿ ಆದ್ಯತೆ ನೀಡಿ ಬಗೆಹರಿಸಲಾಗುವುದು ಅಲ್ಲಿಯವರೆಗೂ ತಾಳ್ಮೆ ಕಳೆದುಕೊಳ್ಳದೆ ಇರಬೇಕು ಎಂದು ತಿಳಿಸಿದರು.

ಗ್ರಾಮ ಪಂಚಾಯತಿ ಅಧ್ಯಕ್ಷ ಭಾಗ್ಯ, ಉಪಾಧ್ಯಕ್ಷ ಮಂಜುಳಾ, ಸದಸ್ಯರಾದ ಮಹೇಶ್, ಸಿದ್ದರಾಜು, ಸೋಮಣ್ಣ ,ಮಲ್ಲಿಕಾರ್ಜುನ, ನಿರ್ಮಿತಿ ಕೇಂದ್ರದ ಪ್ರಾಜೆಕ್ಟ್ ಡೈರೆಕ್ಟರ್ ಮಂಜುಳಾ, ನಿರ್ಮಿತಿ ಕೇಂದ್ರದ ಇಂಜಿನಿಯರ್ ನಂದೀಶ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಯೋಗೇಶ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರು, ಶಾಸಕರ ಆಪ್ತ ಕಾರ್ಯದರ್ಶಿ ಚೇತನ್, ವಿಜಯ್ , ಪರಶಿವಮೂರ್ತಿ
ಸೇರಿದಂತೆ ಇತರರು ಹಾಜರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Chamarajanagar

ಯಳಂದೂರಿನಲ್ಲಿ ವಿಜೃಂಭಣೆಯಿಂದ ಬಕ್ರೀದ್ ಆಚರಣೆ

Published

on

ಯಳಂದೂರು : ಪಟ್ಟಣದಲ್ಲಿ ತ್ಯಾಗ ಬಲಿದಾನಗಳ ಸಂಕೇತವಾದ ಬಕ್ರೀದ್ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಜಾಮಿಯಾ ಮಸೀದಿ ಬಳಿ ಜಮಾವಣೆಗೊಂಡ ಮುಸ್ಲಿಂ ಬಾಂಧವರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಈದ್ಗಾ ಮೈದಾನಕ್ಕೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಪಟ್ಟಣ ಸೇರಿದಂತೆ ತಾಲೂಕಿನ ಮಾಂಬಳ್ಳಿ ಯರಿಯೂರು ಗುಂಬಳ್ಳಿ ಯರಗಂಬಳ್ಳಿ ಇರಸವಾಡಿ ಸೇರಿದಂತೆ ಗ್ರಾಮೀಣ ಪ್ರದೇಶದ ಈದ್ಗಾ ಮೈದಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ನಂತರ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ಪ್ರಾರ್ಥನೆ ಸಮಯದಲ್ಲಿ ಮುಸ್ಲಿಂ ಧರ್ಮಗಳು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಪಟ್ಟಣದ ಮುಸ್ಲಿಂ ಬಡಾವಣೆಯಲ್ಲಿರುವ ದರ್ಗಾಕ್ಕೆ ತೆರಳಿ ಹಲೋ ಸಹ ವಿಶೇಷ ಪ್ರಾರ್ಥನೆ ಸಲ್ಲಿಸಿ ಸಿಹಿಯನ್ನು ಹಂಚಲಾಯಿತು. ಪಟ್ಟಣದ ಮುಸ್ಲಿಂ ಬಡಾವಣೆ ಸೇರಿದಂತೆ ಬಳೆಪೇಟೆಯಲ್ಲಿರುವ ಚಿಣ್ಣರು ವಿವಿಧ ಪೋಷಕಗಳನ್ನು ಧರಿಸಿ ಸಂಭ್ರಮ ಪಟ್ಟರು. ಪೊಲೀಸ್ ಇಲಾಖೆ ವತಿಯಿಂದ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Continue Reading

Chamarajanagar

ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 133 ನೇ ಜನ್ಮದಿನಾಚರಣೆಯ ಕಾರ್ಯಕ್ರಮ

Published

on

ಯಳಂದೂರು ಜೂನ್ 16


ಯಳಂದೂರು ತಾಲ್ಲೂಕಿನ ವೈ.ಕೆ. ಮೋಳೆ ಗ್ರಾಮದ ಡಾ. ಬಿ.ಆರ್. ಅಂಬೇಡ್ಕರ್ ಯುವ ಸಂಘದ ವತಿಯಿಂದ ಹಾಂಗೂ ಉರಿಲಿಂಗಿಪೆದ್ದಿಮಠದ ಶ್ರೀ ಜ್ಞಾನ ಪ್ರಕಾಶ್ ಸ್ವಾಮಿಗಳ ದಿವ್ಯ ಸಾನಿಧ್ಯ ದಲ್ಲಿ ಆಯೋಜಿಸಲಾಗಿದ್ದ ವಿಶ್ವ ರತ್ನ, ಸಂವಿಧಾನ ಶಿಲ್ಪಿ, ಸಮಾನತೆಯ ಹರಿಕಾರ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 133 ನೇ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ

ಕೊಳ್ಳೇಗಾಲ ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಎ.ಆರ್. ಕೃಷ್ಣಮೂರ್ತಿ ಅವರು ಭಾಗವಹಿಸಿ. ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ನಂತರ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿಗಳನ್ನ ಸನ್ಮಾನಿಸಿ ಗೌರವಿಸಲಾಯಿತು, ಈ ವೇಳೆ ಚಲನಚಿತ್ರ ನಟ ಚೇತನ್ ಅಹಿಂಸ ರವರು, ಎ.ಎಸ್.ಎಸ್.ಕೆ. ಅಧ್ಯಕ್ಷರಾದ ಸಂದೇಶ್ ರವರು,

ಮುಖಂಡರಾದ ಕಿನಕಹಳ್ಳಿ ರಾಚಯ್ಯ ರವರು, ಕಂದಹಳ್ಳಿ ನಂಜುಂಡಸ್ವಾಮಿ ರವರು, ಲೋಕೇಶ್ ಸಿಗಡಿ, ಮಧು ಮಾಲತಿ ರವರು, ಹಾಗೂ ಡಾ.ಬಿ‌.ಆರ್‌ ಅಂಬೇಡ್ಕರ್ ಯುವಕ ಸಂಘದ ಪದಾಧಿಕಾರಿಗಳು,ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Continue Reading

Chamarajanagar

ಯಳಂದೂರು:ತಾಲೂಕಿನ ಯರಿಯೂರು ಗ್ರಾಮದಲ್ಲಿ ಕರಾರಸಾ ನಿಗಮದ ಬಸ್ಸುಗಳು ಗ್ರಾಮದಲ್ಲಿ ನಿಲುಗಡೆ ಮಾಡಬೇಕೆಂದುಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿ ರಸ್ತೆ ತಡೆದು ಪ್ರತಿಭಟನೆ

Published

on

ತಾಲೂಕಿನ ಯರಿಯೂರು ಗ್ರಾಮಸ್ಥರು ಗ್ರಾಮದಲ್ಲಿ ಗುರುವಾರ ರಾಷ್ಟ್ರೀಯ ಹೆದ್ದಾರಿ 209 ರಸ್ತೆಯನ್ನು ತಡೆದು ಪ್ರತಿಭಟನೆ ಮಾಡಿ
ಗ್ರಾಮದಿಂದ ವಿದ್ಯಾರ್ಥಿಗಳು ಕೂಲಿಕಾರ್ಮಿಕರು ಹಾಗೂ ಸಾರ್ವಜನಿಕರು ದಿನನಿತ್ಯ ಚಾಮರಾಜನಗರ, ಕೊಳ್ಳೇಗಾಲ ಮೈಸೂರು, ಬೆಂಗಳೂರು ಮಲೆ‌ಮಹದೇಶ್ವರ ಬೆಟ್ಟ ಮುಂತಾದ ಸ್ಥಳಗಳಿಗೆ ತೆರಳುತ್ತಾರೆ ಹಾಗೂ ಆ ಸ್ಥಳಗಳಿಂದ ಗ್ರಾಮಕ್ಕೆ ಆಗಮಿಸುತ್ತಾರೆ ಇಂತಹ ಗ್ರಾಮದಲ್ಲಿ ಕರರಾಸಾ ನಿಗಮದ ಬಸ್ಸುಗಳು ನಿಲ್ಲಿಸದೆ ಗ್ರಾಮಸ್ಥರಿಗೆ ಬಹಳ‌ತೊಂದರೆಯಾಗುತ್ತಿದೆ ಎಂದು ಆರೋಪಿ ಪ್ರತಿಭಟನೆ ನಡೆಸಿ .ಗ್ರಾಮಸ್ಥರು ಎಲ್ಲಿಗೆ ಹೋದರು ಯಳಂದೂರಿನಲ್ಲಿ ಇಳಿದು ಮತ್ತೆ ಖಾಸಗಿ ಬಸ್ಸಿನಲ್ಲಿ ಗ್ರಾಮಕ್ಕೆ ಬರಬೇಕಾದ ಸಂದರ್ಭ ಬಂದಿದೆ ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳ ವಿರುದ್ದ ಘೋಷಣೆಕೂಗಿ ಪ್ರತಿಭಟನೆ ಮಾಡಿದರು

ವಿಷಯತಿಳಿದ ಸಾರಿಗೆ ಇಲಾಖೆಯ ವಿಭಾಗಾಧಿಕಾರಿಗಳು ಪ್ರತಿಭಟನೆಯ ಸ್ಥಳಕ್ಕೆ ಆಗಮಿಸಿ ಪ್ರತಭಟನಾಕಾರ ಮನವಿಯನ್ನು ಆಲಿಸಿ ಮುಂದಿನ ದಿನಗಳಲ್ಲಿ ಕೋರಿಕೆ ನಿಲುಗಡೆಗೆ ಅವಕಾಶ ಮಾಡುತ್ತೇವೆ ಎಂದು ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಕೈ ಬಿಡಲಾಯಿತು

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ನಿಂಗರಾಜು, ಚಂದ್ರಶೇಖರ್ ಪ್ರಕಾಶ್ ಕೃಷ್ಣಯ್ಯ ಹಾಗೂ ಗ್ರಾಮಸ್ಥರು ‌ಪ್ರತಿಭಟನೆಯಲ್ಲಿ ಭಾಗವಿಹಿಸಿದರು

Continue Reading

Trending

error: Content is protected !!