Manglore
SIT ಮಂಜುನಾಥ್ ನಿಂದ ಕೇಸ್ ವಾಪಸ್ ಪಡೆಯಲು ಭೀಮನಿಗೆ ಬೆದರಿಕೆ
ಧರ್ಮಸ್ಥಳ ಗ್ರಾಮ ವ್ಯಾಪ್ತಿಯಲ್ಲಿ ಹಲವಾರು ಶವಗಳನ್ನು ಹೂತು ಹಾಕಲಾಗಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನೇತ್ರಾವತಿ ನದಿ ಬಳಿಯಲ್ಲಿ ತೀವ್ರ ಶೋಧ ಕಾರ್ಯಾಚರಣೆ ನಡೆಯುತ್ತಿರುವ ನಡುವೆ ದೂರುದಾರನಿಗೆ ಬೆದರಿಕೆ ಬಂದಿದೆ. ಈ ಸಂಬಂಧ ದೂರು ನೀಡಿರುವ ಅನಾಮಧೇಯ ವ್ಯಕ್ತಿಗೆ ದೂರು ವಾಪಸ್ ಪಡೆಯುವಂತೆ ಶಿರಸಿ ಗ್ರಾಮಾಂತರ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸ್ ಇನ್‌ಸ್ಪೆಕ್ಟರ್(ಎಸ್‌ಐ) ಮಂಜುನಾಥ್ ಗೌಡ ಒತ್ತಡ ಹೇರುತ್ತಿದ್ದಾರೆ ಎಂದು ತಿಳಿದುಬಂದಿದೆ.
“ನೀನು ದೂರು ನೀಡಿರುವುದರಿಂದ ನಿನಗೆಯೇ ಶಿಕ್ಷೆಯಾಗುತ್ತದೆ. ನೀನು ಜೀವಮಾನವಿಡೀ ಜೈಲಿನಲ್ಲಿರಬೇಕಾಗುತ್ತದೆ. ಪೊಲೀಸರು ನಿನ್ನನ್ನೇ ಬಂಧಿಸುತ್ತಾರೆ” ಎಂದು ಬೆದರಿಸಿ ದೂರು ವಾಪಸ್ ಪಡೆಯುವಂತೆ ಒತ್ತಡ ಹೇರಲಾಗುತ್ತಿದೆ ಎಂದು ಆರೋಪ ಕೇಳಿಬಂದಿದೆ.

ಅಷ್ಟು ಮಾತ್ರವಲ್ಲದೆ ದೂರು ವಾಪಸ್ ಪಡೆದು, ಈ ರೀತಿ ದೂರು ನೀಡುವಂತೆ ಹೊರಗಿನವರು ಪ್ರಚೋದಿಸಿದ್ದರು ಎಂದು ಹೇಳಿಕೆ ನೀಡುವಂತೆ ಮಾಡಿ ಅದನ್ನೆಲ್ಲ ತನ್ನ ಮೊಬೈಲ್‌ನಲ್ಲಿ ಎಸ್‌ಐ ಚಿತ್ರಿಸಿಕೊಂಡಿದ್ದಾರೆ. ಅದಾದ ಬಳಿಕ ಎಸ್‌ಐ ರಜೆಯ ಮೇಲೆ ತೆರಳಿದ್ದಾರೆ ಎಂದು ಹೇಳಲಾಗಿದೆ.
ಇನ್ನು ಈಗಾಗಲೇ ದೂರುದಾರನ ಪರ ವಕೀಲರು ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಅವರಿಗೆ ಇ-ಮೇಲ್ ಮೂಲಕ ದೂರು ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಸಾಮಾಜಿಕ ಹೋರಾಟಗಾರರು ಈ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿದ್ದು ಎಸ್‌ಐ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
Manglore
ಪುತ್ತೂರು: ಇಸ್ರೇಲ್‌ನಿಂದ ಊರಿಗೆ ಬಂದಿದ್ದ ಯುವಕ ಸಂಬಂಧಿಕರ ಮನೆಯಲ್ಲಿ ವಿದ್ಯುತ್ ಆಘಾತದಿಂದ ಸಾ*ವು
ಪುತ್ತೂರು: ಇಸ್ರೇಲ್‌ನಲ್ಲಿ ಉದ್ಯೋಗಿಯಾಗಿ ಇತ್ತೀಚೆಗಷ್ಟೇ ರಜೆಗೆ ಊರಿಗೆ ಬಂದಿದ್ದ ಯುವಕನೊಬ್ಬ ವಿದ್ಯುತ್ ಆಘಾತದಿಂದ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನಿಡಳ್ಳಿ ಗ್ರಾಮದಲ್ಲಿ ನಡೆದಿದೆ.
ಬೇಳೂರಿನ ಅಂಕಿಹಳ್ಳಿ ನಿವಾಸಿ ರೋಶನ್ ಪಿಂಟೋ (29) ಮೃತಪಟ್ಟ ಯುವಕ.
ರೋಶನ್ ಇಸ್ರೇಲ್‌ನಲ್ಲಿ ಉದ್ಯೋಗದಲ್ಲಿದ್ದು, ರಜೆಗೆ ಕುಟುಂಬದೊಂದಿಗೆ ಊರಿಗೆ ಬಂದಿದ್ದರು. ರೋಶನ್ ತಮ್ಮ ತಂದೆ-ತಾಯಿ ಹಾಗೂ ಇಬ್ಬರು ಮಕ್ಕಳೊಂದಿಗೆ ನಿಡಳ್ಳಿ ಗ್ರಾಮದ ಬೊಳುಂಬುಡೆ ಪ್ರದೇಶದಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಬಂದಿದ್ದರು. ಮಧ್ಯಾಹ್ನ ಊಟ ಮುಗಿಸಿ ಕೈ ತೊಳೆಯುವ ಸ್ಥಳಕ್ಕೆ ತೆರಳಿದ್ದ ವೇಳೆ ರೋಶನ್ ಅವರು ಆಕಸ್ಮಿಕವಾಗಿ ವಿದ್ಯುತ್ ತಂತಿ ಸ್ಪರ್ಶಕ್ಕೊಳಗಾಗಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ.
ತಕ್ಷಣ ಅವರನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತಾದರೂ, ವೈದ್ಯರು ಅವರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ವಿದೇಶದಲ್ಲಿ ಉದ್ಯೋಗದಲ್ಲಿದ್ದು ರಜೆಗೆ ಬಂದಿದ್ದ ಯುವಕನ ಅಕಾಲಿಕ ಸಾವು ಕುಟುಂಬವನ್ನು ಆಘಾತಕ್ಕೆ ತಳ್ಳಿದ್ದು, ಪ್ರದೇಶದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಇತ್ತೀಚೆಗೆ ಅವರು ಹೊಸ ಮನೆ ನಿರ್ಮಿಸಿ ಈ ತಿಂಗಳ ಆರಂಭದಲ್ಲೇ ಗೃಹಪ್ರವೇಶ ಮಾಡಿದ್ದರು. ಸದ್ಯ ಮೃತ ರೋಶನ್ ಪಿಂಟೋ ಅವರ ಅಂತ್ಯಕ್ರಿಯೆ ಸಕಲೇಶಪುರದಲ್ಲಿ ನೆರವೇರಿಸಲಾಗಿದೆ.
Manglore
ಪ್ರವಾಸಿಗರಿಗೆ ಜಲಪಾತ ವೀಕ್ಷಣೆ, ಪರ್ವತ ಏರಲು ಜೂ.1ರಿಂದ ಅವಕಾಶ
ಬೆಳ್ತಂಗಡಿ: ಮಳೆಗಾಲದ ಆರಂಭಕ್ಕೆ ದಿನಗಣನೆ ಆರಂಭವಾಗಿದೆ.ಬೇಸಿಗೆಯ ಬಿಸಿ ಗೆ ಒಣಗಿದ್ದ ಹುಲ್ಲುಗಾವಲು ಆಗ್ಗಾಗ ಸುರಿದ ಮಳೆಗೆ ಮತ್ತೆ ಹಸಿರಾಗಿದೆ. ಪ್ರಜ್ಞಾವಂತ ಪ್ರವಾಸಿಗರನ್ನು ಪಶ್ಚಿಮ ಘಟ್ಟ ಮತ್ತೆ ಕೈ ಬೀಸಿ ಕರೆಯುತ್ತಿದೆ. ಹೌದು ,ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಾರಣ ಸ್ಥಳ, ಪ್ರಮುಖ ಜಲಪಾತ ಜೂನ್ 1ರಿಂದ ಪ್ರವಾಸಿಗರ ವೀಕ್ಷಣೆಗೆ ತೆರೆದುಕೊಳ್ಳಲಿದೆ. ಕಳೆದ ಜನವರಿಯಲ್ಲಿ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದಿಂದ ನೇತ್ರಾವತಿ ಪೀಕ್, ಬಂಡಾಜೆ ಜಲಪಾತ, ಗಡಾಯಿಕಲ್ಲು ಮೊದಲಾದ ಸ್ಥಳಗಳಿಗೆ ಪ್ರವಾಸಿಗರಿಗೆ ನಿಷೇಧ ಹೇರಲಾಗಿತ್ತು.
ಬೆಳ್ತಂಗಡಿ ತಾಲೂಕಿನಲ್ಲೇ ಮಲವಂತಿಗೆ ಗ್ರಾಮ ಅತೀ ಹೆಚ್ಚು ಪ್ರೇಕ್ಷಣಿಯ ಸ್ಥಳಗಳನ್ನು ಒಳಗೊಂಡಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನ ವನದ ವ್ಯಾಪ್ತಿಯಲ್ಲಿ ಬರೋ ಗ್ರಾಮದ ಅರಣ್ಯ ಭಾಗಕ್ಕೆ ಅತೀ ಹೆಚ್ಚು ಸಂಖ್ಯೆಯಲ್ಲಿ ಪ್ರವಾಸಿಗರು ಚಾರಣಿಗರು ಬರುತ್ತಾರೆ.ಆದರೆ ಬೇಸಿಗೆಯಲ್ಲಿ ಕಾಡ್ಗಿಚ್ಚಿನ ಭಯ ಸ್ಥಳೀಯರಲ್ಲಿದ್ದು, ಜೂನ್ 1ರವರೆಗೆ ಪ್ರವಾಸಿರಿಗೆ ನಿಷೇಧ ಹೇರಲಾಗಿತ್ತು.

ನೇತ್ರಾವತಿ ಪೀಕ್ ಮತ್ತು ಬಂಡಾಜೆ ಜಲಪಾತ ಪ್ರದೇಶಗಳಿಗೆ ಅರಣ್ಯ ವಿಹಾರ್ ವೆಬ್ ಸೈಟ್ ಮೂಲಕ ಆನ್ ಲೈನ್ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಗಡಾಯಿಕಲ್ಲು ಮತ್ತು ಕಡಮಗುಂಡಿ ಜಲಪಾತ ಪ್ರದೇಶಗಳ ವೀಕ್ಷಣೆಗೆ ಆಫ್ ಲೈನ್ ವ್ಯವಸ್ಥೆ ಇದೆ.ಚಾರಣಿಗರು, ಪ್ರವಾಸಿರು ಇಲಾಖೆಯ ನಿಯಮಗಳನ್ನು ಪಾಲಿಸುವುದು ಅಗತ್ಯವಾಗಿದೆ.
ಬೆಳ್ತಂಗಡಿ ತಾಲೂಕಿನ ಇನ್ನೊಂದು ಪ್ರಮುಖ ಚಾರಣ ಸ್ಥಳವಾದ ನಡ-ಲಾಯಿಲ ಗ್ರಾಮದ ಗಡಾಯಿಕಲ್ಲಿಗೂ ಜೂನ್ 1ರಿಂದ ಪ್ರವೇಶ ಲಭಿಸಲಿದೆ.ಇಲ್ಲಿ ಕಳೆದ ಫೆಬ್ರವರಿ ಯಲ್ಲಿ ಅಗ್ನಿ ಅವಘಡದ ಎಚ್ಚರಿಕೆ ಹಾಗೂ ಹುಲಿಗಣತಿ ಅಂಗವಾಗಿ ಪ್ರವೇಶ ನಿಷೇದ ಹೇರಲಾಗಿತ್ತು.ಸಮುದ್ರ ಮಟ್ಟದಿಂದ 1,700 ಅಡಿ ಎತ್ತರದಲ್ಲಿರುವ ಗಡಾಯಿಕಲ್ಲು ಚಾರಣಿಗರ ಆಕರ್ಷಣೆಯ ಕೇಂದ್ರವಾಗಿದೆ.ಹೆಚ್ಚಿನ ಮಳೆ ಉಂಟಾದರೆ ಕಲ್ಲುಗಳು ಜಾರುವ ಕಾರಣ ಇಲ್ಲಿ ಮಳೆಗಾಲದ ಯಾವುದೇ ಸಮಯ ಪ್ರವೇಶಕ್ಕೆ ನಿಷೇಧ ಹೇರುವ ಸಾಧ್ಯತೆ ಇದೆ.ಕಡಮಗುಂಡಿ ಹಾಗೂ ಬೊಳ್ಳೆ ಜಲಪಾತಗಳು ಈಗಾಗಲೇ ಸಾರ್ವಜನಿಕ ವೀಕ್ಷಣೆಗೆ ತೆರೆದುಕೊಂಡಿದೆ.ಖಾಸಗಿ ಸ್ಥಳದಲ್ಲಿರುವ ಎರ್ಮಾಯಿ ಜಲಪಾತ ವೀಕ್ಷಣೆಗೆ ಯಾವುದೇ ನಿರ್ಬಂಧ ಇರಲಿಲ್ಲ.
ಈ ಬಾರಿ ಆಗಾಗ ಸುರಿದ ಬೇಸಿಗೆಯ ಮಳೆಯಿಂದಾಗಿ ಅರಣ್ಯ ಪ್ರದೇಶವೆಲ್ಲಾ ಒದ್ದೆಯಾಗಿದ್ದು,ಹಸಿರಿನಿಂದ ನಳನಳಿಸುತ್ತಿದೆ.ಹಳ್ಳ,ತೊರೆಗಳಲ್ಲಿ ಸಾಮಾನ್ಯ ಪ್ರಮಾಣದ ನೀರ ಹರಿವು ಆರಂಭವಾಗಿದೆ.ಮುಂದಿನ ದಿನಗಳಲ್ಲಿ ಮಳೆಗಾಲ ಆರಂಭವಾಗಲಿದ್ದು,ಆ ಸಮಯ ಜಲಪಾತಗಳು ಹೆಚ್ಚಿನ ನೀರಿನೊಂದಿಗೆ ತಮ್ಮ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲಿವೆ.
Manglore
ಮಂಗಳೂರು: 7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್
ಮಂಗಳೂರು: ನ್ಯಾಯಾಲಯಕ್ಕೆ ವಿಚಾರಣೆಗೆ ಸುಮಾರು 7ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ಕಸಬಾ ಬೇಂಗ್ರೆ ನಿವಾಸಿ ಅಕ್ರಂ ಬಂಧಿತ ಆರೋಪಿ.

ಉಪ್ಪಿನಂಗಡಿ ಠಾಣಾ ಅಕ್ರ:158/2015 ಕಲಂ:457, 380 ಐಪಿಸಿ ಪ್ರಕರಣದಲ್ಲಿ ಆರೋಪಿಯಾಗಿದ್ದ ಅಕ್ರಂ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ಸುಮಾರು 7 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಮೇ 22ರಂದು, ಉಪ್ಪಿನಂಗಡಿ ಪೊಲೀಸ್ ಠಾಣಾ ತನಿಖಾ ಪಿಎಸ್ಐ ಕೌಶಿಕ್ ಬಿ.ಸಿ. ಹಾಗೂ ಸಿಬ್ಬಂದಿ ಮಂಗಳೂರಿನ ಪಣಂಬೂರಿನಲ್ಲಿ ದಸ್ತಗಿರಿ ಮಾಡಿದ್ದಾರೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ. ಆರೊಪಿಯ ವಿರುದ್ಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ಮೂರು ಪ್ರಕರಣಗಳು ಮತ್ತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿರುತ್ತದೆ.
-
Mysore13 hours agoಮೈಸೂರಿನಲ್ಲಿ ಸಿಡಿಲು ಬಡಿದು ಮಡಿಕೇರಿಯ ಹೊಸೊಕ್ಲು ರೋಷನ್ ಬಾಲಕೃಷ್ಣ (43) ನಿಧನ .
-
Mysore7 hours agoದೈವ ನಿಂದನೆ ಪ್ರಕರಣ: ಚಾಮುಂಡಿ ತಾಯಿ ಸನ್ನಿಧಿಯಲ್ಲಿ ಕ್ಷಮೆ ಕೇಳಿದ ಬಾಲಿವುಡ್ ನಟ ರಣವೀರ್ ಸಿಂಗ್
-
State6 hours agoರಾಜ್ಯ ರಾಜಕೀಯದಲ್ಲಿ ಮತ್ತೆ ಚರ್ಚೆಗೆ ನಾಯಕತ್ವ ಬದಲಾವಣೆ: ಹೈಕಮಾಂಡ್ ಸಭೆ ಕುತೂಹಲ
-
Sports6 hours agoಧರ್ಮಶಾಲಾದಲ್ಲಿ ಆರ್ಸಿಬಿಗೆ ಗುಡ್ ನ್ಯೂಸ್: ಫಿಲ್ ಸಾಲ್ಟ್ ಕಮ್ಬ್ಯಾಕ್ ಸಾಧ್ಯತೆ
-
Hassan8 hours ago2025-26ರ ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ : ಫುಟ್ಬಾಲ್ನಲ್ಲಿ ಹಾಸನ ಜಿಲ್ಲೆಗೆ ರನ್ನರ್-ಅಪ್ ಗೌರವ
-
Manglore9 hours agoಪ್ರವಾಸಿಗರಿಗೆ ಜಲಪಾತ ವೀಕ್ಷಣೆ, ಪರ್ವತ ಏರಲು ಜೂ.1ರಿಂದ ಅವಕಾಶ
-
Hassan6 hours ago“ರಾಜ್ಯದ ಸಾಲ ₹10 ಲಕ್ಷ ಕೋಟಿ ತಲುಪಲಿದೆ”: ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ
-
Politics24 hours agoಹರ್ಮನ್ಪ್ರೀತ್ ಕೌರ್ಗೆ ಪದ್ಮಶ್ರೀ ಗೌರವ
