Connect with us

Hassan

ಬಾರಿ ಮಳೆಗೆ ಕುಸಿದು ಬಿದ್ದ ವಾಸದ ಮನೆಯ ಗೋಡೆ

Published

on

HASSAN-BREAKING

ಹಾಸನ : ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಎಡೆಬಿಡದೆ ಸುರಿಯುತ್ತಿರುವ ವರ್ಷಧಾರೆ

ಬಾರಿ ಮಳೆಗೆ ಕುಸಿದು ಬಿದ್ದ ವಾಸದ ಮನೆಯ ಗೋಡೆ

ಗರ್ಭಿಣಿ ಮಹಿಳೆಯ ಕಾಲು ಮುರಿತ

ಮೂವರು ಮಕ್ಕಳು ಪ್ರಾಣಪಾಯದಿಂದ ಪಾರು

ಸಕಲೇಶಪುರ ತಾಲ್ಲೂಕಿನ, ಕುಡುಗರಹಳ್ಳಿ ಬಡಾವಣೆಯಲ್ಲಿ ಘಟನೆ

ಮನೆಯ ಹಿಂದೆ ಕೆಲಸ ಮಾಡುತ್ತಿದ್ದ ತಾಹೀರ

ಈ ವೇಳೆ ಮಳೆಯಿಂದ ಏಕಾಏಕಿ ಕುಸಿದ ಮನೆಯ ಗೋಡೆ

ಗಾಯಾಳು ತಾಹೀರಾಗೆ ಹಾಸನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ

ಸ್ಥಳಕ್ಕೆ ಅಧಿಕಾರಿಗಳು ಭೇಟಿ, ಪರಿಶೀಲನೆ

Continue Reading

Hassan

ಖಾಲಿ ಅಂಗಡಿಯಲ್ಲಿ ಕಳವು ಯತ್ನ ಒಳ ನುಗ್ಗಲು ಅಡ್ಡಿಯಾದ ಬೆಂಕಿ: ತನಿಖೆಗೆ ಮೂರು ತಂಡ ರಚನೆ

Published

on

ಅರಕಲಗೂಡು: ಪಟ್ಟಣದ ಜ್ಯುವೆಲ್ಲರಿ ಅಂಗಡಿಯಲ್ಲಿ ಚಿನ್ನಾಭರಣ ಕಳವಿಗೆ ಶನಿವಾರ ಮುಂಜಾನೆ ವಿಫಲ ಯತ್ನ ನಡೆದಿದೆ. ಪೇಟೆ ರಸ್ತೆಯಲ್ಲಿರುವ ಮಾತಾಜಿ ಜ್ಯುವೆಲ್ಲರ‍್ಸ್ ಶಾಪ್‌ನ ಗೋಡೆಯನ್ನು ಹಿಂಬದಿಯಿಂದ ಕೊರೆದು ಒಳನುಗ್ಗಿ ಆಭರಣ ದೋಚಲು ಕಳ್ಳರು ಖತಾರ್ನಾಕ್ ಪ್ಲಾನ್ ಮಾಡಿದ್ದಾರೆ. ಆದರೆ ಅದು ಸಾಧ್ಯವಾಗಿಲ್ಲ.

ಖದೀಮರು ಬಂದ ಉದ್ದೇಶ ಈಡೇರಲು ಬೆಂಕಿ ಅಡ್ಡಿಯಾಗಿದೆ. ಒಬ್ಬರು ಒಳ ಹೋಗುವಷ್ಟು ಅಗಲಕ್ಕೆ ಗೋಡೆ ಕೊರೆದ ಬಳಿಕ ಗ್ಯಾಸ್ ಕಟರ್‌ನಿಂದ ಗೋಡೆಗೆ ಹೊಂದಿಕೊಂಡಂತೆ ಇದ್ದ ಪ್ಲೇವುಡ್ ಕತ್ತರಿಸಿ ಒಳ ಪ್ರವೇಶಿಸಲು ಯತ್ನಿಸಿದ್ದಾರೆ. ಆದರೆ ಗ್ಯಾಸ್‌ಕಟರ್‌ನಿಂದ ಹೊತ್ತಿಕೊಂಡ ಬೆಂಕಿಯ ಉರಿ ಹೆಚ್ಚಾಗಿ ವ್ಯಾಪಿಸಿದ್ದರಿಂದ ಒಳ ಪ್ರವೇಶಿಸಲಾಗದೆ ಎಸ್ಕೇಪ್ ಆಗಿದ್ದಾರೆ.

ಈ ಘಟನೆಯ ಬಳಿಕ ಮುಂಜಾನೆ 4.43 ಗಂಟೆಗೆ ಅಂಗಡಿ ಮಾಲೀಕರ ಸಂಬಂಧಿಕರು ಕರೆ ಮಾಡಿ ಶಾಪ್ ಬಳಿ ಬೆಂಕಿ ಹೊತ್ತಿಕೊಂಡಿರುವುದನ್ನು ತಿಳಿಸಿದ್ದಾರೆ. ಕೂಡಲೇ ಹೋಗಿ ಶೆಟರ್ ತೆರೆದು ನೋಡಿದಾಗ ಇನ್ನೂ ಕೂಡ ಬೆಂಕಿ ಉರಿಯುತ್ತಿತ್ತು. ಬೆಳಿಗ್ಗೆ ಮಳಿಗೆಯ ಗೋಡೆಯನ್ನು ಹಿಂಬದಿಯಿಂದ ಕೊರೆದಿರುವುದು ಗೊತ್ತಾಗಿದೆ.
ಬೆಂಕಿ ಉರಿ ರಭಸಕ್ಕೆ ಸಿಸಿ ಕ್ಯಾಮೆರಾ ಹಾನಿಯಾಗಿವೆ. ವ್ಯಾಪಾರ ಮುಗಿದ ಬಳಿಕ ಆಭರಣ ಎನ್ನವನ್ನೂ ಪ್ಯಾಕ್ ಮಾಡಿ ಮನೆಗೆ ತೆಗೆದುಕೊಂಡು ಹೋಗಿದ್ದರಿಂದ ಯಾವುದೇ ವಸ್ತು ಕಳ್ಳತನ ಆಗಿಲ್ಲ ಎಂದು ಮಾಲೀಕರು ತಿಳಿಸಿದ್ದಾರೆ. ಈ ಸಂಬಂಧ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂರು ತಂಡ ರಚನೆ: ಸುದ್ದಿ ತಿಳಿದ ಕೂಡಲೇ ಸ್ಥಳೀಯ ಠಾಣೆ ವೃತ್ತ ನಿರೀಕ್ಷಕ ಕೆ.ಎಂ.ವಸಂತ್ , ಪಿಎಸ್‌ಐ ಕಾವ್ಯ ಹಾಗೂ ಸಿಬ್ಬಂದಿ, ಶ್ವಾನದಳ ಸ್ಥಳಕ್ಕೆ ಭೇಟಿ ನೀಡಿ ಕೂಲಂಕಷ ಪರಿಶೀಲನೆ ನಡೆಸಿದರು. ಮತ್ತೊಂದೆಡೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಎಸ್‌ಪಿ ಮೊಹಮದ್ ಸುಜೀತಾ ಅವರು, ಹೊಳೆನರಸೀಪುರ ಎಎಸ್‌ಪಿ ಶಾಲೂ ಹಾಗೂ ಸಿಪಿಐ ವಸಂತ್ ಅವರ ಮಾರ್ಗದರ್ಶನದಲ್ಲಿ, ಸ್ಥಳೀಯ ಪಿಎಸ್‌ಐ ನೇತೃತ್ವದಲ್ಲಿ ಪ್ರತ್ಯೇಕವಾಗಿ ಮೂರು ತನಿಖಾ ತಂಡಗಳನ್ನು ರಚನೆ ಮಾಡಿದ್ದಾರೆ.

ಈ ತಂಡವು ಈ ಹಿಂದೆ ಜಿಲ್ಲೆಯ ವಿವಿಧೆಡೆ ಇದೇ ರೀತಿ ಗೋಡೆ ಕೊರೆತು ಚಿನ್ನಾಭರಣ ಕಳವಿಗೆ ಯತ್ನ ಮಾಡಿದ್ದ ಪ್ರಕರಣಗಳ ಪರಿಶೀಲನೆಯಲ್ಲಿ ತೊಡಗಿದೆ.

ಹಳೆಯ ತಂಡವೇ ಜಿಲ್ಲೆಯಲ್ಲಿ ಮತ್ತೊಮ್ಮೆ ಸಕ್ರಿಯ ಆಗಿದೆಯೇ ಎಂಬುದರ ಜಾಡು ಹಿಡಿದು ಎಲ್ಲ ಹಂತಗಳಲ್ಲೂ ತನಿಖೆ ಮಾಡಲಾಗುತ್ತಿದೆ.

Continue Reading

Hassan

ರಾಜ್ಯ ಕಾಂಗ್ರೆಸ್ ಸರ್ಕಾರ ರೈತರನ್ನು ನಿರ್ಲಕ್ಷ್ಯ ಮಾಡಿದೆ: ಎ.ಎಸ್ ಪಾಟೀಲ್

Published

on

ಹಾಸನ: ಬೀದಿ ನಾಯಿಗಳ ಬಗ್ಗೆ ಕಾಳಜಿ ಹೊಂದಿರುವ ರಾಜ್ಯ ಕಾಂಗ್ರೆಸ್ ಸರಕಾರ ರೈತರನ್ನು ಸಂಪೂರ್ಣ ಕಡೆಗಣಿಸಿದ್ದು, ರೈತರು ಸಂಕಷ್ಟದಲ್ಲಿ ಇದ್ದರೂ ಕಣ್ಣು ಮುಚ್ಚಿ ಕುಳಿತಿದೆ ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಎ.ಎಸ್ .ಪಾಟೀಲ್ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಹಾಸನ ಜಿಲ್ಲೆಯಲ್ಲಿ ಇಂದು ವಿವಿಧೆಡೆ ಹಾನಿಯಾಗಿರುವ ಮೆಕ್ಕೆ ಜೋಳ ಬೆಳೆದ ರೈತರ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನ ಜಿಲ್ಲೆಯಲ್ಲಿ ಈ ಭಾರಿ ಸುಮಾರು 1 ಲಕ್ಷದ 10 ಸಾವಿರ ಹೆಕ್ಟೇರ್ ಜಾಮೀನಿನಲ್ಲಿ 500 ಕೋಟಿ ಮೌಲ್ಯದ ಬಿತ್ತನೆ ಜೋಳದ ಬೀಜವನ್ನು ರೈತರು ಖರೀದಿ ಮಾಡಿದ್ದಾರೆ. ಅಲ್ಲದೆ ಸುಮಾರು ಒಂದೂವರೆ ಸಾವಿರ ಕೋಟಿ ಮೌಲ್ಯದ ಔಷಧಿ ಹಾಗೂ ಗೊಬ್ಬರಗಳನ್ನು ಬಳಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು ಈ ಪೈಕಿ ಶೇಖಡಾ 50 ಕ್ಕಿಂತ ಹೆಚ್ಚು ಪ್ರದೇಶದಲ್ಲಿ ಬಿಳಿಸುಳಿ ರೋಗದಿಂದ ಬೆಳೆ ನಾಶವಾಗಿದೆ ಆದರೆ ಈ ವರೆಗೆ ಜಿಲ್ಲೆಗೆ ಕೃಷಿ ಸಚಿವರು ಅಥವಾ ಯಾವುದೇ ಕೃಷಿ ಇಲಾಖೆಯ ಪ್ರಮುಖ ಅಧಿಕಾರಿಗಳು ಭೇಟಿ ನೀಡದೆ ಇರುವುದು ರೈತರ ಮೇಲಿನ ಸರ್ಕಾರದ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದ ರೈತರ ರಾಜ್ಯದ ರೈತರ ಹಾಗೂ ಜನರ ಬಗ್ಗೆ ಕಾಳಜಿ ವಹಿಸಬೇಕಾದ ಸರ್ಕಾರ ಮನುಷ್ಯರನ್ನು ನಿರ್ಲಕ್ಷಿಸಿ ಬೆಂಗಳೂರಿನ ಬೀದಿ ನಾಯಿಗಳ ಆಹಾರಕ್ಕೆ ಪ್ರತಿನಿತ್ಯ 2 ಕೋಟಿ 88 ಲಕ್ಷ ರೂಪಾಯಿ ಹಣ ಖರ್ಚು ಮಾಡಲು ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿ ಸುಮಾರು 26 ಲಕ್ಷ ಹಾಲು ಉತ್ಪಾದಕ ಕುಟುಂಬಗಳು ಇದ್ದು ಅವರಿಗೆ ಈ ಹಿಂದೆ ಇದ್ದ ಬಿಜೆಪಿ ಸರ್ಕಾರ ನೀಡುತ್ತಿದ್ದ ಐದು ರೂಪಾಯಿ ಪ್ರೋತ್ಸಾಹಧನದ ಸುಮಾರು 900 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದ್ದಾರೆ. ಹಸುಗಳ ಬಗ್ಗೆ ಹಾಗೂ ರೈತರ ಬಗ್ಗೆ ಕಾಳಜಿ ಸರ್ಕಾರ ಬಹುಮತ ನೀಡಿದ ರಾಜ್ಯದ ಜನರನ್ನು ನಿರ್ಲಕ್ಷ್ಯ ಮಾಡಿದೆ ಎಂದು ದೂರಿದರು.

Continue Reading

Hassan

ಹೆಣ್ಣಿನ ವ್ಯಕ್ತಿತ್ವ ಪ್ರತಿಪಾದಿಸುವ ವಕ್ತಿತ್ವದವರು ನಮ್ಮ ಜೊತೆ ಇರುವುದೇ ಒಂದು ಹೆಮ್ಮೆಯ ವಿಷಯ:  ಕೆ.ಎಸ್. ಲತಾ ಕುಮಾರಿ

Published

on

ಹಾಸನ: ಪ್ರಸ್ತೂತದಲ್ಲೂ ನಾವು ಮಹಿಳೆಯರಾಗಿ ಚೆನ್ನಾಗಿ ಓದಿದ್ದೇವೆ, ಆರ್ಥಿಕವಾಗಿ ಸಬಲರಾಗಿದ್ದೇವೆ. ಎಲ್ಲಾ ಪಡೆದುಬಿಟ್ಟಿದ್ದೇವೆ ಎನ್ನುವುದು ಎಂತಹದು ಇಲ್ಲ. ಈಗಲೂ ಮಹಿಳೆಗೆ ಸಿಗಬೇಕಾದ ಗೌರವದಲ್ಲಿ ಇನ್ನು ಸಂಪೂರ್ಣವಾಗಿ ಸಿಕ್ಕಿಲ್ಲ, ಸಮಾನತೆ ದೂರದ ಮಾತು. ಅವಕಾಶ ಕೇಳಲೆ ಬೇಡಿ . ಈ ನಡುವೆಯು ಹೆಣ್ಣಿನ ವ್ಯಕ್ತಿತ್ವ ಪ್ರತಿಪಾದಿಸುವ ವಕ್ತಿತ್ವದವರು ನಮ್ಮ ಜೊತೆ ಇರುವುದೇ ಒಂದು ಹೆಮ್ಮೆಯ ವಿಷಯ ಎಂದು ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ ತಿಳಿಸಿದರು.

ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ರಂಗಸಿರಿ ಅವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ನಾಟಕಗಳ ಪ್ರದರ್ಶನ ಮತ್ತು ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತರಾದ ಬಾನುಮುಷ್ತಾಕ್ ರವರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಅಭಿನಂದಿಸಿ ಮಾತನಾಡಿದರು.

ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದವರ ಜೊತೆ ನಾವು ಕುಳಿತಿದ್ದೇವೆ ಎಂದರೆ ನಮಗೆಲ್ಲಾರಿಗೂ ಹೆಮ್ಮೆಯ ವಿಚಾರ. ರಂಗಸಿರಿಯ ಎಲ್ಲ ಸದಸ್ಯರು ಇಂತಹ ಒಳ್ಳೆಯ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಇಂತಹ ಕಾರ್ಯಕ್ರಮವನ್ನು ಹೆಚ್ಚಿನ ರೀತಿ ಮಾಡಬೇಕು. ಪ್ರತಿಯೊಬ್ಬ ಮಹಿಳೆಯಲ್ಲೂ ಹೋರಾಟಗಾರ್ತಿ ಇರುತ್ತಾಳೆ. ಬಾನುಮುಷ್ತಾಕ್ ಅವರದ್ದು ನನಗೆ ನಾಟಿರುವುದು ಅವರ ಹೋರಾಟದ ಬದುಕು. ಅವರ ಕಥೆ, ಪಾತ್ರವನ್ನ ನೋಡುತ್ತಾ ಹೋದರೆ ಅವುಗಳ ವೇದನೆ, ಹೋರಾಟಗಳು ತಿಳಿಯುತ್ತ ಹೋಗುತ್ತದೆ ಎಂದರು.

ಬಾನು ಅವರ ಬರಹ ನಮಗೆ ಕಥೆ ಅನ್ನಿಸುವುದಿಲ್ಲ, ಜೀವಂತ ವ್ಯಕ್ತಿತ್ವ ಅನ್ನಿಸುತ್ತದೆ. ಓದುತ್ತಾ ಹೋದರೆ ಅದರಲ್ಲಿ ನಮ್ಮದು ಒಂದು ಪಾತ್ರ ಇದೆ ಅನಿಸುತ್ತದೆ. ಒಬ್ಬ ಬರಹಗಾರ್ತಿಯಾಗಿ, ಪತ್ರಿಕೋಧ್ಯಮಿಯಾಗಿ ಹಾಗೂ ವಕೀಲರಾಗಿ ಸೇವೆ ನೀಡುತ್ತಿದ್ದಾರೆ. ನಾವು ಮಹಿಳೆಯರಾಗಿ ಚನ್ನಾಗಿ ಓದಿದ್ದೇವೆ, ಆರ್ಥಿಕವಾಗಿ ಸಬಲರಾಗಿದ್ದೇವೆ. ಎಲ್ಲಾ ಪಡೆದುಬಿಟ್ಟಿದ್ದೇವೆ ಎನ್ನುವುದು ಎಂತದು ಇಲ್ಲ. ಈಗಲೂ ಹೇಳುತ್ತೇವೆ ಮಹಿಳೆಗೆ ಸಿಗಬೇಕಾದ ಗೌರವದಲ್ಲಿ ಇನ್ನು ಸಂಪೂರ್ಣವಾಗಿ ಸಿಕ್ಕಿಲ್ಲ, ಸಮಾನತೆ ದೂರದ ಮಾತು. ಅವಕಾಶ ಕೇಳಲೆ ಬೇಡಿ ಎಂದು ಬೇಸರವ್ಯಕ್ತಪಡಿಸಿದರು.

ಈ ಎಲ್ಲಾ ಕೊರತೆಗಳ ನಡುವೆಯು ಸಹ ಹೆಣ್ಣನ್ನು, ಹೆಣ್ಣಿನ ವ್ಯಕ್ತಿತ್ವವನ್ನು ಪ್ರತಿಪಾದಿಸುವ ಒಂದು ಒಂದು ಉತ್ತಮ ವ್ಯಕ್ತಿತ್ವ ನಮ್ಮ ಜೊತೆ ಇದ್ದಾರೆ ಎನ್ನುವುದೆ ಒಂದು ಹೆಮ್ಮೆಯ ವಿಷಯ ಎಂದು ಕಿವಿಮಾತು ಹೇಳಿದರು. ಎಲ್ಲಾರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಒಂದು ನಾಟಕ ಮಾಯಾಮೃಗವನ್ನು ರಂಜಿತ್ ಶೆಟ್ಟಿ ಕುಕ್ಕುಡೆ ನಿರ್ದೇಶನ ಮಾಡಿದ್ದು, ಇನ್ನೊಂದು ಎದೆಯ ಹಣತೆ ನಾಟಕವನ್ನ ಡಾ. ಎಂ. ಗಣೇಶ್ ಹೆಗ್ಗೋಡ್ ನಿರ್ದೇಶನದ ಎರಡು ನಾಟಕ ಪ್ರದರ್ಶನವು ಅತ್ಯಂತ ಯಶಸ್ವಿಯಾಗಿ ಪ್ರದರ್ಶನಗೊಂಡು ಪ್ರೇಕ್ಷಕರ ಗಮನಸೆಳೆಯಿತು.

ಇದೇ ವೇಳೆ ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಅಧ್ಯಕ್ಷ ಮೋಹನ್ ಹೆಮ್ಮಿಗೆ, ಅಮೋಘ ಸುದ್ದಿ ವಾಹಿನಿ ಮುಖ್ಯಸ್ಥರು ಕೆ.ಪಿ.ಎಸ್. ಪ್ರಮೋದ್, ಅಡಿಷನಲ್‌ ಎಸ್‌ಪಿ-2 ವೆಂಕಟೇಶ್ ನಾಯ್ಡ್, ರಂಗಸಿರಿ ಕಾರ್ಯದರ್ಶಿ ಶಾಡ್ರಾಕ್, ರಂಗಸಿರಿ ಹಿರಿಯ ಕಲಾವಿದ ಜವರಯ್ಯ, ಖಜಾಂಚಿ ಡಿ.ಎಸ್. ಲೋಕೇಶ್, ಅಧ್ಯಕ್ಷ ರಂಗಸ್ವಾಮಿ, ಇತರರು ಉಪಸ್ಥಿತರಿದ್ದರು.

ಜಿಲ್ಲಾ ಕಸಾಪ ಮಾಜಿ ಗೌರವಾಧ್ಯಕ್ಷ ರವಿನಾಕಲಗೂಡು ಸ್ವಾಗತಿಸಿದರು. ಲಕ್ಷ್ಮೀನಾರಾಯಣ್ ಕಾರ್ಯಕ್ರಮ ನಿರೂಪಿಸಿದರು.

 

 

Continue Reading

Trending

error: Content is protected !!