Connect with us

Hassan

ಬಾರಿ ಮಳೆ ಗಾಳಿಗೆ ರಸ್ತೆಗೆ ಉರುಳಿ ಬಿದ್ದ ಮರ

Published

on

ಹಾಸನ : ಹಾಸನ ಜಿಲ್ಲೆಯ ವಿವಿಧೆಡೆ ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆ

ಬಿರುಗಾಳಿ ಸಹಿತ ಸುರಿದ ಬಾರಿ ಮಳೆ

ಬಾರಿ ಮಳೆ ಗಾಳಿಗೆ ರಸ್ತೆಗೆ ಉರುಳಿ ಬಿದ್ದ ಮರ

ಕಳೆದ ಎರಡು ಗಂಟೆಯಿಂದ ಟ್ರಾಫಿಕ್ ಜಾಮ್

ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಶಿರಾಡಿಘಾಟ್‌ ರಸ್ತೆಯಲ್ಲಿ ಘಟನೆ

ಮಂಗಳೂರು-ಬೆಂಗಳೂರು ಸಂಪರ್ಕ ಕಲ್ಪಿಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿ 75 ಶಿರಾಡಿಘಾಟ್ ರಸ್ತೆ

ರಸ್ತೆಗೆ ಮರ ಬಿದ್ದಿದ್ದರಿಂದ ಟ್ರಾಫಿಕ್ ಜಾಮ್

ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ವಾಹನ ಸವಾರರ ಪರದಾಟ

ಮರ ತೆರವು ಕಾರ್ಯಾಚರಣೆ ಆರಂಭ

Continue Reading
Click to comment

Leave a Reply

Your email address will not be published. Required fields are marked *

Hassan

ಶಾಸಕ ಸಿಮೆಂಟ್ ಮಂಜು ಹುಟ್ಟುಹಬ್ಬದ ಪ್ರಯುಕ್ತ ಡಿ.23ಕ್ಕೆ ಸಕಲೇಶಪುರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

Published

on

ಸಕಲೇಶಪುರ: ಸಕಲೇಶಪುರ-ಆಲೂರು-ಕಟ್ಟಾಯ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಸಿಮೆಂಟ್ ಮಂಜು ಅವರ ಹುಟ್ಟುಹಬ್ಬದ ಅಂಗವಾಗಿ ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.

ಈ ಶಿಬಿರವೂ ಡಿ.23ರ ಮಂಗಳವಾರ ನಗರದ ಶ್ರೀ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಶಿಬಿರದಲ್ಲಿ ಸಾರ್ವಜನಿಕರಿಗೆ ಎಲ್ಲಾ ರೀತಿಯ ವೈದ್ಯಕೀಯ ತಪಾಸಣೆಗಳನ್ನು ಉಚಿತವಾಗಿ ನಡೆಸಲಾಗುವುದರ ಜೊತೆಗೆ ಅಗತ್ಯವಿರುವ ಔಷಧಿಗಳನ್ನು ಕೂಡ ಉಚಿತವಾಗಿ ವಿತರಿಸಲಾಗುತ್ತದೆ. ಗ್ರಾಮೀಣ ಹಾಗೂ ನಗರ ಪ್ರದೇಶದ ಜನರಿಗೆ ಸುಲಭವಾಗಿ ಆರೋಗ್ಯ ಸೇವೆ ದೊರಕಿಸುವ ಉದ್ದೇಶದಿಂದ ಈ ಶಿಬಿರವನ್ನು ಆಯೋಜಿಸಲಾಗಿದೆ.

ಶಿಬಿರದಲ್ಲಿ ವೈದ್ಯಶಾಸ್ತ್ರ, ಚರ್ಮರೋಗ, ಕೀಲು ಹಾಗೂ ಮೂಳೆ, ಶಸ್ತ್ರಚಿಕಿತ್ಸೆ, ನೇತ್ರ ಚಿಕಿತ್ಸಾ, ಮಕ್ಕಳ ವೈದ್ಯಕೀಯ, ಕಿವಿ, ಮೂಗು, ಗಂಟಲು (ಇಎನ್‌ಟಿ), ಪ್ರಸೂತಿ ಮತ್ತು ಸ್ತ್ರೀರೋಗ, ದಂತ ಚಿಕಿತ್ಸಾ ಹಾಗೂ ಮನೋ ವೈದ್ಯಕೀಯ ಸೇರಿದಂತೆ ಅನೇಕ ಪ್ರಮುಖ ವಿಭಾಗಗಳ ತಜ್ಞ ವೈದ್ಯರು ಭಾಗವಹಿಸಲಿದ್ದಾರೆ.

ಸಾರ್ವಜನಿಕರು ಈ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಜ್ಞ ವೈದ್ಯರ ಸಲಹೆ ಹಾಗೂ ಚಿಕಿತ್ಸೆ ಪಡೆದು ಸದುಪಯೋಗ ಮಾಡಿಕೊಂಡುಕೊಳ್ಳಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.

Continue Reading

Hassan

ಪಾನಮತ್ತರಾಗಿ ಶಾಲೆಗೆ ಬರುತ್ತಿದ್ದ ಶಿಕ್ಷಕನಿಗೆ ಅಮಾನತು ಶಿಕ್ಷೆ

Published

on

ಚನ್ನರಾಯಪಟ್ಟಣ: ತಾಲೂಕಿನ ಸೋರೆಕಾಯಿಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಹರೀಶ್ ಪಾನಮತ್ತನಾಗಿ ಶಾಲೆಗೆ ಹಾಜರಾಗಿ, ವಿದ್ಯಾರ್ಥಿಗಳನ್ನು ಥಳಿಸಿದ್ದ ಪ್ರಕರಣದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯೂ ಅಮಾನತು ಮಾಡಿ ಆದೇಶ ನೀಡಿದೆ.

ಡಿ.8 ರಂದು ಶಿಕ್ಷಕ ಮತ್ತು ಆತನ ಪತ್ನಿ ಶಾಲೆಗೆ ಬಂದು ವಿದ್ಯಾರ್ಥಿಗಳನ್ನು ಥಳಿಸಿದ್ದರು. ಈ ಬಗ್ಗೆ ಗ್ರಾಮಸ್ಥರು ಕ್ಷೇತ್ರ ಶಿಕ್ಷಣಾಧಿಕಾರಿಗೆ ಲಿಖಿತ ದೂರು ನೀಡಿದ್ದರು.


ಸಿಆರ್ ಪಿ ಮತ್ತು ಶಿಕ್ಷಣ ಸಂಯೋಜಕರುಗಳ ಪ್ರಕರಣದ ಬಗ್ಗೆ ನೀಡಿರುವ ವರದಿ, ವಿದ್ಯಾರ್ಥಿಗಳ ಹೇಳಿಕೆ ಆಧರಿಸಿ ಹಾಗೂ ಕರ್ತವ್ಯ ಸಮಯದಲ್ಲಿ ಮದ್ಯಪಾನ ಮಾಡಿರುವುದಾಗಿ ಶಿಕ್ಷಕನೇ ಸ್ವ ಅಕ್ಷರದಲ್ಲಿ ಬರೆದು ಕೊಟ್ಟಿರುವ ಹಿನ್ನೆಲೆಯಲ್ಲಿ ಇಲಾಖೆಯ ವಿಚಾರಣೆ ಕಾಯ್ದಿರಿಸಿ, ಮುಂದಿನ ಆದೇಶದವರೆಗೆ ಅಮಾನತು ಮಾಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್. ದೀಪಾ ಆದೇಶ ನೀಡಿದ್ದಾರೆ.

Continue Reading

Hassan

ಕನ್ನಡದಲ್ಲಿ ಗುಣಮಟ್ಟದ ವಿಜ್ಞಾನ ಬರವಣಿಗೆ ಹೆಚ್ಚಾದರೆ ವಿಜ್ಞಾನ ಜನರ ಬದುಕಿನ ಭಾಗವಾಗುತ್ತದೆ: ಡಾ. ಬಿ.ಎಸ್. ಶೈಲಜಾ

Published

on

ಹಾಸನ: ಕನ್ನಡದಲ್ಲಿ ಗುಣಮಟ್ಟದ ವಿಜ್ಞಾನ ಬರವಣಿಗೆ ಹೆಚ್ಚಾದರೆ ವಿಜ್ಞಾನವು ಜನಸಾಮಾನ್ಯರ ಬದುಕಿನ ಭಾಗವಾಗುತ್ತದೆ. ಇದು ಕೇವಲ ಭಾಷಾ ಸೇವೆಯಷ್ಟೇ ಅಲ್ಲ, ಸಮಾಜದ ಬೌದ್ಧಿಕ ಬೆಳವಣಿಗೆಗೆ ನೀಡುವ ಮಹತ್ವದ ಸೇವೆಯೂ ಹೌದು ಎಂದು ನೆಹರು ತಾರಾಲಯದ ಮಾಜಿ ನಿರ್ದೇಶಕಿ ಹಾಗೂ ಖಗೋಳ ವಿಜ್ಞಾನಿ ಡಾ. ಬಿ.ಎಸ್. ಶೈಲಜಾ ಹೇಳಿದರು.

ನಗರದ ಬಿಜಿವಿಎಸ್ ಕಚೇರಿಯಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿಯ ಹಾಸನ ಜಿಲ್ಲಾ ಸಮಿತಿಯಿಂದ ಆಯೋಜಿಸಿದ್ದ “ಆಗಸದ ಅಚ್ಚರಿಗಳು ಖಗೋಳ ವಿಜ್ಞಾನಿಯೊಂದಿಗೆ ಸಂವಾದ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಜ್ಞಾನವು ಪ್ರಯೋಗಶಾಲೆ ಹಾಗೂ ಸಂಶೋಧನಾ ಪ್ರಬಂಧಗಳಿಗೆ ಮಾತ್ರ ಸೀಮಿತವಾಗದೇ, ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ತಲುಪಬೇಕು . ಈ ನಿಟ್ಟಿನಲ್ಲಿ ಕನ್ನಡ ವಿಜ್ಞಾನ ಬರವಣಿಗೆಯ ಪ್ರಮಾಣ ಹೆಚ್ಚಾಗಬೇಕಿದ್ದು, ಕನ್ನಡ ಸಾಹಿತ್ಯ ಪರಿಷತ್ತು, ವಿಜ್ಞಾನಿಗಳು ಹಾಗೂ ವಿಜ್ಞಾನಾಸಕ್ತರ ಜವಾಬ್ದಾರಿ ದೊಡ್ಡದಿದೆ ಎಂದರು.

ಕನ್ನಡದಲ್ಲಿ ವಿಜ್ಞಾನ ಬರವಣಿಗೆಯೂ ತಪ್ಪು ಪದಬಳಕೆ ಹಾಗೂ ಅತಿರಂಜಿತ ಅನುವಾದಗಳು ವಿಜ್ಞಾನವನ್ನು ಅಂಧಶ್ರದ್ಧೆಯತ್ತ ಕರೆದೊಯ್ಯುವ ಅಪಾಯವಿದೆ . ‘ಗಾಡ್ ಪಾರ್ಟಿಕಲ್’ ಎಂಬ ಪದವನ್ನು ‘ದೇವಕಣ’ ಎಂದು ಬಳಸುವುದು ವೈಜ್ಞಾನಿಕವಾಗಿ ಸರಿಯಲ್ಲ. ಮಾಧ್ಯಮಗಳು ಶೀರ್ಷಿಕೆ ಹಾಗೂ ರೋಚಕತೆಯ ಹಿಂದೆ ಹೋಗದೆ ವಿಷಯದ ವೈಜ್ಞಾನಿಕ ಸ್ಪಷ್ಟತೆಯನ್ನು ಕಾಪಾಡಬೇಕು ಎಂದು ಸಲಹೆ ನೀಡಿದರು.

ಪಂಚಾಂಗ, ಅಧಿಕ ವರ್ಷ, ನಕ್ಷತ್ರಗಳು ಅಂಧನಂಬಿಕೆಗಳಲ್ಲ; ಅವು ಸೂರ್ಯ, ಚಂದ್ರ, ನಕ್ಷತ್ರಗಳ ಚಲನೆಯನ್ನು ಆಧರಿಸಿದ ವೈಜ್ಞಾನಿಕ ಕಾಲಗಣನಾ ವ್ಯವಸ್ಥೆಗಳೆಂದು ವಿವರಿಸಿದರು. ಯುಎಫ್‌ಓ, ಏಲಿಯನ್, ಧೂಮಕೇತುಗಳ ಕುರಿತ ಚರ್ಚೆಗಳಲ್ಲಿ ಊಹೆ ಮತ್ತು ವಿಜ್ಞಾನ ನಡುವಿನ ಗಡಿ ಸ್ಪಷ್ಟವಾಗಬೇಕು; ಯಾರು ಹೇಳಿದರು ಎಂಬುದಕ್ಕಿಂತ ಯಾವ ಸಾಕ್ಷ್ಯವಿದೆ ಎಂಬುದೇ ವಿಜ್ಞಾನದ ಅಳತೆ ಎಂದರು.

ನಕ್ಷತ್ರಗಳಲ್ಲಿ ಜೀವ ಸಾಧ್ಯತೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ವಿಜ್ಞಾನವು ಕಲ್ಪನೆಯಲ್ಲ, ಸಾಕ್ಷ್ಯ ಮತ್ತು ಕ್ರಮಬದ್ಧ ಪರಿಶೀಲನೆಯ ಮೂಲಕ ಉತ್ತರ ಹುಡುಕುತ್ತದೆ ಎಂದು ವಿವರಿಸಿದರು. ದೀರ್ಘಕಾಲ ಸ್ಥಿರವಾಗಿ ಬೆಳಗುವ ನಕ್ಷತ್ರಗಳು, ಅವುಗಳ ಸುತ್ತಲಿನ ಗ್ರಹಗಳು, ವಾತಾವರಣದ ಅನಿಲಗಳ ಸ್ಪೆಕ್ಟ್ರಮ್ ವಿಶ್ಲೇಷಣೆ ಮೂಲಕ ಜೀವದ ಸಾಧ್ಯತೆ ಪರಿಶೀಲಿಸಲಾಗುತ್ತದೆ ಎಂದು ತಿಳಿಸಿದರು.

ಸೊನ್ನೆಯನ್ನು ಆರ್ಯಭಟರು ಕಂಡುಹಿಡಿದರು ಎಂಬ ಸಾಮಾನ್ಯ ನಂಬಿಕೆ ಸಂಪೂರ್ಣ ಸತ್ಯವಲ್ಲ. ಆರ್ಯಭಟರಿಗಿಂತಲೂ ಮುಂಚೆಯೇ ಸೊನ್ನೆಯ ಬಳಕೆಯ ಸಾಕ್ಷ್ಯಗಳು ದೊರಕಿವೆ. ಆದ್ದರಿಂದ ವಿಜ್ಞಾನ ಇತಿಹಾಸವನ್ನು ಸರಳವಾಗಿ ಆದರೆ ಸತ್ಯಸಹಿತವಾಗಿ ಮಕ್ಕಳಿಗೆ ತಿಳಿಸಬೇಕೆಂದು ಹೇಳಿದರು.

ಶಾಲಾ ಹಂತದಲ್ಲಿ ವಿಜ್ಞಾನ ಕಲಿಕೆಗೆ ಸರಳತೆ, ಸತ್ಯ ಮತ್ತು ಪ್ರಶ್ನಿಸುವ ಮನೋಭಾವ ಈ ಮೂರು ಅಂಶಗಳು ಅನಿವಾರ್ಯ. ಇಲ್ಲದಿದ್ದರೆ ವಿಜ್ಞಾನ ಪಾಠಗಳು ಮಕ್ಕಳಲ್ಲಿ ಭಯ ಹುಟ್ಟಿಸುವ ವಿಷಯವಾಗುತ್ತದೆ ಎಂದು ಡಾ. ಶೈಲಜಾ ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಬಿಜಿವಿಎಸ್ ಕಾರ್ಯಕರ್ತ ಅಹಮದ್ ಹಗರೆ ಸ್ವಾಗತಿಸಿ, ಜಿಲ್ಲಾಧ್ಯಕ್ಷರಾದ  ಸಿ. ಸೌಭಾಗ್ಯ ವಂದಿಸಿದರು. ಸಂವಾದದಲ್ಲಿ ಶಿಕ್ಷಣ ತಜ್ಞರು, ವಿಜ್ಞಾನ ಬರಹಗಾರರು, ಶಿಕ್ಷಕರು, ಕಾಲೇಜು ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿ ಪ್ರಶ್ನೋತ್ತರ ಸಂವಾದ ನಡೆಸಿದರು.

Continue Reading

Trending

error: Content is protected !!