Connect with us

State

ಭಾರತದ ಮೂಲನಿವಾಸಿಗಳು ಆತಂಕದಲ್ಲಿದ್ದಾರೆ: ಡಾ.ಹೆಚ್.ಸಿ.ಮಹದೇವಪ್ಪ*

Published

on

*ಭಾರತದ ಮೂಲನಿವಾಸಿಗಳು ಆತಂಕದಲ್ಲಿದ್ದಾರೆ: ಡಾ.ಹೆಚ್.ಸಿ.ಮಹದೇವಪ್ಪ*

ಮೈಸೂರು,ಮಾ.2: ಪ್ರಪಂಚಕ್ಕೆ ಶಾಂತಿ, ಅಹಿಂಸೆ, ಸಹಿಷ್ಣುತೆಯನ್ನು ಭೋದನೆ ಮಾಡಿದ ರಾಷ್ಟ್ರ ಭಾರತ. ಅಹಿಂಸೆ ಹಾಗೂ ಅಸಹಕಾರದಿಂದ ಸ್ವಾತಂತ್ರ್ಯ ಪಡೆದ ಈ ದೇಶದ ಇಂದಿನ ಆಡಳಿತ ವ್ಯವಸ್ಥೆಯು ಎಲ್ಲರನ್ನೂ ತಳಮಳಗೊಳಿಸುತ್ತಿದೆ. ಸ್ವಾತಂತ್ರ್ಯದ ಉದ್ದೇಶ ಬುಡಮೇಲು ಮಾಡಲಾಗುತ್ತಿದ್ದು, ಭಾತರದ ಮೂಲನಿವಾಸಿಗಳು ಆತಂಕದಲ್ಲಿದ್ದಾರೆ ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ಹೇಳಿದರು.

ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಪ.ಮಲ್ಲೇಶ್- 90ರ ಅಂಗವಾಗಿ ಶನಿವಾರ ಕಲಾಮಂದಿರದಲ್ಲಿ ನಡೆದ ‘ಭಾರತ ಜನತಂತ್ರದ ಸಮಕಾಲೀನ ತಲ್ಲಣಗಳು’ ಕುರಿತ ಎರಡು ದಿನದ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ದೇಶದ ಉಜ್ವಲ ಭವಿಷ್ಯಕ್ಕೆ ಮಾರ್ಗ ತೊರಿಸುವ ಸಂವಿಧಾನ ಇಂದು ಅಪಾಯದಲ್ಲಿದೆ. ಜನರ ಜೀವನ ನಿಜಕ್ಕೂ ಕಷ್ಟದಲ್ಲಿದೆ. ಅಸ್ಪೃಶ್ಯತೆ ನಿವಾರಣೆ ಆಗಿಲ್ಲ. ಕೋಮ ಸೌಹರ್ದತೆ ಸಂಪೂರ್ಣ ಸಾಧಿಸಿಲ್ಲ. ನಮ್ಮ ದೇಶದ ಮೂಲ ಕಸುಬಾದ ಕೃಷಿ ಆಧಾರಿತ ಬದುಕು ಸಂಕಷ್ಟಕ್ಕೆ ಸಿಲುಕಿದ. ರೈತರು ಕೃಷಿ ನಿಲ್ಲಿಸಿ ಬೀದಿಗಿಳಿದು ಹೋರಾಟ ಮಾಡಬೇಕಾದ ಹೀನಾಯ ಪರಿಸ್ಥಿತಿ ಬಂದೊದಗಿರುವುದು ಅತ್ಯಂತ ನಾಚಿಗೇಡಿನ ಸಂಗತಿ ಎಂದರು.

ಜವಾಹರಲಾಲ್ ನೆಹರು ಅವರು ಪ್ರಧಾನಿಯಾಗಿದ್ದಾಗ ಡಾ.ಬಿ.ಆರ್.ಅಂಬೇಡ್ಕರ್ ನೀಡಿದ ಸಂವಿಧಾನದ ಆಶಯ ಈಡೇರಿಸಲು ಪಂಚವಾರ್ಷಿಕ ಯೋಜನೆ ಮುಖಾಂತರ ದೇಶವನ್ನು ಹಂತಹಂತವಾಗಿ ಅಭಿವೃದ್ಧಿ ಮಾಡುವಂಥ ಪ್ರಯತ್ನ ನಡೆದು ದೇಶದಲ್ಲಿ ಕೃಷಿಯ ಉತ್ಪಾದನೆಗೆ ಪ್ರೇರಕ ಶಕ್ತಿಯಾದ ಬಾಕ್ರಾನಂಗಲ್ ಅಣೆಕಟ್ಟೆ ‌ನಿರ್ಮಾಣ ಮಾಡಲಾಯಿತು ಎಂದು ವಿವರಿಸಿದರು.

ಭೂಮಿ ಸಾಮಾನ್ಯ ಜನರಿಗೆ, ಕೃಷಿಕರಿಗೆ ಸಾಮಾಜಿಕ ಭದ್ರತೆ ಒದಗಿಸುತ್ತದೆ. ಆದರೆ ಇಂದು ಭೂಮಿಯು ಬಂಡವಾಳಶಾಹಿಗಳ ಕೈಸೇರುತ್ತಿದೆ. ಒಬ್ಬ ವ್ಯಕ್ತಿ ನೂರಾರು ಎಕ್ಕರೆ ಹೊಂದುವಂಥ ಕರಾಳ ಶಾಸನವನ್ನು ಇಂದಿನ ಬಿಜೆಪಿ ಸರ್ಕಾರ ಜಾರಿ ಮಾಡಿದೆ. ಇದರಿಂದ ಸಾಮಾಜಿಕ ನ್ಯಾಯ ಮರೀಚಿಕೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಿಂಧೂ ನಾಗರಿಕತೆ, ಸ್ವಾತಂತ್ರ್ಯ ಹೋರಾಟದ ಹಿನ್ನೆಲೆ, ಪುರಾತನ ಚರಿತ್ರೆ, ನಮ್ಮ ಸಾಂಸ್ಕೃತಿಕ ಬದುಕು, ಧಾರ್ಮಿಕ ಆಚಾರ, ವಿಚಾರ, ವಿಭಿನ್ನವಾದ ಪ್ರಾಂತ್ಯಗಳ ಜನಜೀವನ ಹಾಗೂ ಸ್ವತಃ ನೋವನ್ನು ಅನುಭವಿಸಿ, 15 ಕ್ಕೂ ಹೆಚ್ವು ರಾಷ್ಟ್ರಗಳ ಸಂವಿಧಾನವನ್ನು ಆಳವಾಗಿ ಅಧ್ಯಯನ ಮಾಡಿ ಬಾಬಾಸಾಹೇಬರು ಭಾರತದ ಸಂವಿಧಾನ ರಚಿಸಿದ್ದಾರೆ. ಸಮಾನತೆ, ಸಮಾನ ಅವಕಾಶ, ಸಂಪತ್ತಿನ ಹಂಚಿಕೆ, ಸಾಮಾಜಿಕವಾಗಿ, ಆರ್ಥಿಕವಾಗಿ ಶೈಕ್ಷಣಿಕವಾಗಿ ಹಂಚುವುದು ಸೇರಿದಂತೆ ಸಂವಿಧಾನದ ನೀತಿ, ನಿರ್ದೇಶನಗಳು ಇನ್ನೂ ಸಮರ್ಪಕವಾಗಿ ಜಾರಿಯಾಗಿಲ್ಲ ಎಂದು ಹೇಳಿದರು.

ಪ್ರಪಂಚದ ಇತಿಹಾಸದಲ್ಲಿ ಚಳುವಳಿಗಳು ಜನಜೀವನದಲ್ಲಿ ಅಮೂಲಾಗ್ರವಾದ ಬದಲಾವಣೆ ತಂದಿವೆ. ಆದರೆ ಇಂದು ಪ್ರಜಾಸತ್ಯಾತ್ಮಕ ನಿರ್ಧಾರಗಳನ್ನು ಬಲಪಡಿಸುವಂಥ ಚಳುವಳಿಗಳು ಕ್ಷೀಣಿಸುತ್ತಿದೆ. ಅಧ್ಯಯನ ಶೀಲತೆ ಕಡಿಮೆಯಾಗುತ್ತಿದೆ. ಎಂಬತ್ತನೇ ದಶಕದ ಹೋರಾಟ, ಜೆಪಿ ಅವರ ಸಮಗ್ರ ಕ್ರಾಂತಿ, ನಂಜುಂಡಸ್ವಾಮಿಯವರ ಭಾರತ ಚಳಿವಳಿ, ದಲಿತ ಸಂಘಟನೆಗಳ ಶಾಂತಿಯುವಾದ ಹೋರಾಟಗಳು, ಅನ್ಯಾಯದ ವಿರುದ್ಧದ ಧ್ವನಿ ಕವಲಾಗಿ ಹೊಡೆದುಹೋಗುತ್ತಿದೆ ಎಂದು ವಿಷಾಧ ವ್ಯಕ್ತಪಡಿಸಿದರು.

*ಸರ್ವಾಧಿಕಾರ ಎಂದಿಗೂ ಉಳಿಯುವುದಿಲ್ಲ*

ಪ್ರಸ್ತುತ ನಮ್ಮೆಲ್ಲರ ವಾಕ್‌ ಸ್ವಾತಂತ್ರ್ಯಕ್ಕೆ ದಕ್ಕೆ ಒದಗಿದೆ. ಇದರ ಕತ್ತು ಹಿಚುಕಿದರೆ ಪ್ರಜಾಪ್ರಭುತ್ವ ಸಂಪೂರ್ಣ ನಾಶವಾಗಲಿದೆ. ವ್ಯಕ್ತಿಪೂಜೆ ಸರ್ವಾಧಿಕಾರಕ್ಕೆ ಪ್ರೇರಣವಾಗಲಿದೆ. ಸರ್ವಾಧಿಕಾರಿಯು ಪ್ರಜಾಪ್ರಭುತ್ವ ನಾಶಮಾಡುತ್ತಾನೆ. ಇದರಿಂದ ದೇಶ ಅವನತಿ ಕಾಣಲಿದೆ. ಅಂತಹ ಕಾಲಗಟ್ಟದಲ್ಲಿ ನಾವು ನಿಂತಿದ್ದೇವೆ. ಈ ದೇಶವು ಅನೇಕ ಹೋರಾಟ ಕಂಡು, ಜೀರ್ಣಿಸಿಕೊಂಡಿದೆ. ಹೀಗಾಗಿ ಬಹಳಷ್ಟು ಕಾಲ ಸರ್ವಾಧಿಕಾರ ಉಳಿಯುವುದಿಲ್ಲ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯಂತ್ರಿಗಳ ರಾಜಕೀಯ ಸಲಹೆಗಾರ ಬಿ.ಆರ್.ಪಾಟೀಲ, ಪ್ರೊ.ಕಾಂಚಾಲಯ್ಯ, ಸುಕನ್ಯ ಕಮರಳ್ಳಿ, ಚಿಂತಕ ಬಸವರಾಜು, ಸವಿತಾ ಮಲ್ಲೇಶ್, ರಂಗಕರ್ಮಿ ಜನ್ನಿ, ಉಗ್ರನರಸಿಂಹಗೌಡ, ಸಾಹಿತಿ ನಾ.ದಿವಾಕರ, ಪ್ರೊ.ಕಾಳಚನ್ನೇಗೌಡ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

State

ವಿಧಾನಸೌಧದ ಗುಮ್ಮಟದಲ್ಲಿ ಬಿರುಕು – ಸಿಎಂ ಗಮನಕ್ಕೆ ತರ್ತೀನಿ ಎಂದ ಸ್ಪೀಕರ್‌

Published

on

ಬೆಂಗಳೂರು: ವಿಧಾನಸೌಧದ ಪೂರ್ವ ಭಾಗದ ಗುಮ್ಮಟದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಮಾಹಿತಿ ಪಡೆದ ಸ್ಪೀಕರ್ ಯುಟಿ ಖಾದರ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಸಿಎಂ ಗಮನಕ್ಕೆ ತರುವುದಾಗಿಯೂ ಹೇಳಿದ್ದಾರೆ.

ಗುಮ್ಮಟದಲ್ಲಿ ಸಣ್ಣ ಮಟ್ಟದ ಬಿರುಕು ಕಾಣಿಸಿದ್ದು. ಜೋರು ಮಳೆ ಬಂದಾಗ ನೀರು ಸಹ ಲೀಕೇಜ್ ಆಗುತ್ತಿದೆ ಎಂದು ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ಜೊತೆ ಖುದ್ದು ಸ್ಪೀಕರ್ ಯು.ಟಿ ಖಾದರ್ ಪರಿಶೀಲನೆ ನಡೆಸಿದ್ದಾರೆ.

ಪರಿಶೀಲನೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಧಾನಸೌಧ ರಾಜಕೀಯ ನಾಯಕರ ಕಟ್ಟಡವಾಗಿರದೇ ಪ್ರವಾಸಿಗರ ಆಕರ್ಷಣೆಯ ಕೇಂದ್ರವೂ ಆಗಿದೆ. ಆದ್ರೆ ದೊಡ್ಡ ಕಟ್ಟಡಗಳನ್ನು ಸರಿಪಡಿಸುವಾಗ ಮತ್ತೊಂದು ಕಡೆ ಸ್ವಲ್ಪ ಹೆಚ್ಚು-ಕಡಿಮೆ ಆಗಬಹುದು. ಗುಮ್ಮಟ ನಮ್ಮ ವ್ಯಾಪ್ತಿಗೆ ಬರುವುದಿಲ್ಲ, ಫ್ಲೋರ್‌ಗಳು ಮಾತ್ರ ವ್ಯಾಪ್ತಿಗೆ ಬರುತ್ತದೆ. ಆದರೂ ಈ ವಿಚಾರವನ್ನ ಸಿಎಂ ಗಮನಕ್ಕೆ ತರುತ್ತೇನೆ ಎಂದಿದ್ದಾರೆ.

ನಮ್ಮ ವ್ಯಾಪ್ತಿಯಲ್ಲಿನ ಫ್ಲೋರ್‌ಗಳನ್ನು ಸರಿಪಡಿಸಿದ್ದೇನೆ. ಡಿಪಿಆರ್ ಹಾಗೂ ಲೋಕೋಪಯೋಗಿ ಇಲಾಖೆಯವರ ವ್ಯಾಪ್ತಿಗೆ ಗುಮ್ಮಟ ಬರುತ್ತದೆ. ಅವರ ಗಮನಕ್ಕೆ ತಂದು ಸರಿಪಡಿಸಲು ಹೇಳುತ್ತೇನೆ. ಇದು ಬಹಳ ವರ್ಷಗಳ ಹಳೆಯ ಕಟ್ಟಡ. ಕೆಲವೊಂದು ಲೋಪದೋಷ ಆಗಿರಬಹುದು, ಆದಷ್ಟು ಬೇಗ ಸಿಎಂಗೆ ವಿಚಾರ ತಿಳಿಸುತ್ತೇನೆ ಎಂದು ಆಶ್ವಾಸನೆ ನೀಡಿದ್ದಾರೆ.

Continue Reading

State

ಒಂದೇ ಕುಟುಂಬದ ಐವರು ಸೇರಿ ಏಳು ಮಂದಿ ಮಣ್ಣನಡಿ ಸಿಲುಕಿರುವ ಶಂಕೆ ವ್ಯಕ್ತ

Published

on

ಕಾರವಾರ, ಜು.16: ಅಂಕೋಲಾ ತಾಲೂಕಿನ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ ಬಳಿ ಭಾರೀ ಪ್ರಮಾಣ ಗುಡ್ಡ ಕುಸಿತ ಸಂಭವಿಸಿದ್ದು, ಒಂದೇ ಕುಟುಂಬದ ಐವರು ಸೇರಿ ಒಟ್ಟು ಏಳು ಮಂದಿ ಮಣ್ಣನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ರಾಷ್ಟ್ರೀಯ ಹೆದ್ದಾರಿಯ 66ರಲ್ಲಿ ಐಆರ್ ಬಿ ಕಂಪೆನಿ ಹೆದ್ದಾರಿ ಅಗಲೀಕರಣಕ್ಕಾಗಿ ರಸ್ತೆ ಪಕ್ಕದ ಗುಡ್ಡವನ್ನು ಭಾರೀ ಪ್ರಮಾಣದಲ್ಲಿ ಅಗೆಯಲಾಗಿತ್ತು. ಕಳೆದೆರಡು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ಈ ಗುಡ್ಡ ಭಾರೀ ಪ್ರಮಾಣದಲ್ಲಿ ಕುಸಿದಿದೆ. ಮನೆಯ ಮೇಲೆ ಭಾರೀ ಪ್ರಮಾಣದ ಮಣ್ಣು ಕುಸಿದುಬಿದ್ದ ಪರಿಣಾಮ ಐವರು ಅದರಡಿ ಸಿಲುಕಿರುವ ಶಂಕೆ ಇದೆ. ಈ ವೇಳೆ ಹೆದ್ದಾರಿ ಬದಿಯಲ್ಲಿ ಕ್ಯಾಂಟೀನ್ ವೊಂದರ ಪಕ್ಕದಲ್ಲಿ ನಿಲ್ಲಿಸಿದ್ದ ಟ್ಯಾಂಕರ್ ವೊಂದು ಮಣ್ಣಿನ ರಭಸಕ್ಕೆ ಗಂಗಾವಳಿ ನದಿಗೆ ಕೊಚ್ಚಿಹೋಗಿದೆ. ಅದರಲ್ಲಿದ್ದ ಚಾಲಕ ಹಾಗೂ ಕ್ಲೀನರ್ ಸಹ ಮಣ್ಣಿನಡಿಯಲ್ಲಿ ಸಿಲುಕಿದ್ದಾರೆ.

Continue Reading

State

ಹಿರಿಯ ಪತ್ರಕರ್ತ ಕೃಷ್ಣಪ್ಪ ನಿಧನ

Published

on

ಬೆಂಗಳೂರು:
ಪ್ರಜಾವಾಣಿಯ ಹಿರಿಯ ಪತ್ರಕರ್ತರಾಗಿದ್ದ ಆರ್ ಕೃಷ್ಣಪ್ಪ (75) ಇಂದು ನಿಧನರಾದರು. ಅವರು ಪತ್ನಿ ಒಬ್ಬ ಪುತ್ರನನ್ನು ಅಗಲಿದ್ದಾರೆ.
ಪ್ರಜಾವಾಣಿಗೆ ಸೇರಿದ್ದ ಅವರು ಹಿರಿಯ ಉಪ ಸಂಪಾದಕರಾಗಿ ನಿವೃತ್ತರಾಗಿದ್ದರು.
ಪತ್ರಕರ್ತರ ಸಂಘಟನೆಯಲ್ಲಿ ಸಕ್ರಿಯರಾಗಿದ್ದ ಆರ್ ಕೃಷ್ಣಪ್ಪ, ಕರ್ನಾಟಕ ಪತ್ರಕರ್ತರ ಸಹಕಾರ ಸಂಘ, ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಕೆಯುಡಬ್ಲ್ಯೂಜೆ ಒಡನಾಡಿಯಾಗಿಯೂ ಇದ್ದರು.
ಪ್ರಸ್ತುತ ಹಿರಿಯ ಪತ್ರಕರ್ತರ ವೇದಿಕೆಯ ಅಧ್ಯಕ್ಷರಾಗಿದ್ದರು.

 

ಕೆಯುಡಬ್ಲ್ಯೂಜೆ ಸಂತಾಪ:

ಹಿರಿಯ ಪತ್ರಕರ್ತರ ವೇದಿಕೆ ಸಂಘಟನೆಯಲ್ಲಿ ಸಕ್ರೀಯವಾಗಿದ್ದ ಕೃಷ್ಣಪ್ಪ ಅವರ ನಿಧನ ನೋವಿನ ಸಂಗತಿ ಎಂದು ಕೆಯುಡಬ್ಲ್ಯೂಜೆ ಸಂತಾಪ ವ್ಯಕ್ತಪಡಿಸಿದ.
ಕೃಷ್ಣಪ್ಪ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಪ್ರಾರ್ಥಿಸಿದ್ದಾರೆ.

Continue Reading

Trending

error: Content is protected !!