Connect with us

Mandya

ಆದಿಚುಂಚನಗಿರಿ ಮಠಕ್ಕೆ ಆರ್.ಅಶೋಕ್ ಭೇಟಿ : ಕಾಲ ಭೈರವೇಶ್ವರನಿಗೆ ನಮನ

Published

on

ನಾಗಮಂಗಲ : ತಾಲೂಕಿನ ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಠಕ್ಕೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಭಾನುವಾರ ಭೇಟಿ ನೀಡಿ ಶ್ರೀಕಾಲಭೈರವೇಶ್ವರಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.

ಆದಿಚುಂಚನಗಿರಿ ಮಠಕ್ಕೆ ಆಗಮಿಸಿದ ಆರ್.ಅಶೋಕ್ ಅವರನ್ನು ಶ್ರೀಮಠದ ವತಿಯಿಂದ ಪೂರ್ಣ ಕುಂಭದೊಂದಿಗೆ ಸ್ವಾಗತಿಸಲಾಯಿತು.

ಶ್ರೀಕಾಲಭೈರವೇಶ್ವರಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಮಾಳಮ್ಮದೇವಿ ಮತ್ತು ಸ್ಥಂಭಾಂಭಿಕ ದೇವಿಗೆ ಆರ್.ಅಶೋಕ್ ಪೂಜೆ ಸಲ್ಲಿಸಿದರು.

ಭೈರವೈಕ್ಯ ಬಾಲಗಂಗಾಧರನಾಥ ಸ್ವಾಮೀಜಿ ಅವರ ಗದ್ದುಗೆಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ನಂತರ ದೇವಾಲಯದಲ್ಲಿದ್ದ ಭಕ್ತರ ಕುಶಲೋಪರಿ ವಿಚಾರಿಸಿದ ಆರ್.ಅಶೋಕ್, ಬಳಿಕ ನಿರ್ಮಲಾನಂದನಾಥ ಸ್ವಾಮೀಜಿ ಅವರ ಆಶೀರ್ವಾದ ಪಡೆದು ಕೆಲಕಾಲ ಶ್ರೀಗಳೊಂದಿಗೆ ಮಾತುಕತೆ ನಡೆಸಿದರು.

ಈ ಸಂದರ್ಭ ಮುಖಂಡರಾದ ಜವರನಹಳ್ಳಿಗೌರೀಶ್, ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಂ.ಜಿ.ಶಿವರಾಮ್, ಆದಿಚುಂಚನಗಿರಿ ಮಠದ ಪಿಆರ್‌ಒ ರಾಮಚಂದ್ರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Mandya

ಡಾ.ಶಾಮನೂರು ಶಿವಶಂಕರಪ್ಪ ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕ ವ್ಯಕ್ತಿ: ಎಸ್.ಎಂ.ಗಂಗಾಧರ

Published

on

ಮದ್ದೂರು: ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ಅವರು ಸುದೀರ್ಘವಾದ ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕವಾಗಿ ಹಾಗೂ ದಕ್ಷತೆಯಿಂದ ಕರ್ತವ್ಯನಿರ್ವಹಿಸಿ ಸಹಸ್ರಾರು ಮಂದಿಗೆ ಅನುಕೂಲ ಕಲ್ಪಿಸಿದ್ದಾರೆಂದು ಶರಣರ ಸಂಘಟನೆ ವೇದಿಕೆ ತಾಲೂಕು ಅಧ್ಯಕ್ಷ ಎಸ್.ಎಂ.ಗಂಗಾಧರ ತಿಳಿಸಿದರು.

ನಗರದ ಶರಣರ ಸಂಘಟನೆಯ ವೇದಿಕೆಯ ಕಚೇರಿಯಲ್ಲಿ ಸೋಮವಾರ ಶಾಮನೂರು ಶಿವಶಂಕರಪ್ಪ ಅವರಿಗೆ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

 

ಡಾ.ಶಾಮನೂರು ಶಿವಶಂಕರಪ್ಪ ಅವರು ಜನ ಕಲ್ಯಾಣ ಟ್ರಸ್ಟ್ ಮೂಲಕ ಹಲವಾರು ಜನಪರ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಇವರ ನಿಧನ ಸಮಾಜಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಕಂಬಿನಿ ಮಿಡಿದರು.

ವೀರಶೈವ ವೇದಿಕೆಯ ಕಲ್ಲೇಶ್‌ ಕುಮಾರ್, ನಟರಾಜ್, ಬಸವಣ್ಣ, ಗಿರೀಶ್, ರಶ್ಮಿ, ನಾಗೇಶ್, ಶಿಲ್ಪವಿಶ್ವನಾಥ್, ನಾಗರತ್ನ, ಎಂ.ಎನ್.ಬಸವಣ್ಣ ಸೇರಿದಂತೆ ಇತರರು ಇದ್ದರು.

Continue Reading

Mandya

ಮಹಾನ್‌ ನಾಯಕರ ಪುತ್ಥಳಿ ನಿರ್ಮಾಣದ ಭರವಸೆ ನೀಡಿರುವ K.M. ಉದಯ್‌ ನಿರ್ಧಾರ ಪ್ರಶಂನೀಯ: ಆನಂದಚಾರಿ

Published

on

ಮದ್ದೂರು: ನಗರದ ಪೇಟೆ ಬೀದಿ ಅಗಲೀಕರಣ ಸಂದರ್ಭದಲ್ಲಿ ಪ್ರಮುಖ ಸರ್ಕಲ್‌ಗಳಿಗೆ ಅನೇಕ ಸಮುದಾಯಗಳ ಮಹಾನ್ ನಾಯಕರ ಪುತ್ಥಳಿ ನಿರ್ಮಾಣಕ್ಕೆ ಮುಂದಾಗಿರುವ ಶಾಸಕ ಕೆ.ಎಂ .ಉದಯ್ ಕ್ರಮ ಪ್ರಶಂಸನೀಯ ಎಂದು ವಿಶ್ವಕರ್ಮ ಸಮಾಜದ ಜಿಲ್ಲಾ ಜಿಲ್ಲಾಧ್ಯಕ್ಷ ತೈಲೂರು ಆನಂದಚಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಶ್ವಕರ್ಮ ಸಮುದಾಯದ ಬಹಳ ದಿನದ ಬೇಡಿಕೆಗಳಲ್ಲಿ ಒಂದಾದ ಅಮರಶಿಲ್ಪಿ ಜಕ್ಕಣ್ಣಾಚಾರಿ ರವರ ಸರ್ಕಲ್ ಹಾಗೂ ಅವರ ಪ್ರತಿಮೆ ನಿರ್ಮಾಣ ಮಾಡಲು ಮುಂದಾಗಿರುವ ಜತೆಗೆ ಅನೇಕ ಮಹನೀಯರ ಪ್ರತಿಮೆ ನಿರ್ಮಾಣ ಮಾಡುತ್ತಿರುವುದು ಸಂತಸ ತಂದಿದೆ ಎಂದು ಪ್ರಕಟಣೆಯಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ.

 

ತಾಲೂಕಿನ ಕಾಯಕ ಸಮುದಾಯಗಳ ಬಗ್ಗೆ ಕಾಳಜಿಯನ್ನು ಇಟ್ಟು ಬಡ ವಿದ್ಯಾರ್ಥಿಗಳಿಗೆ ನೆರವು ನೀಡುತ್ತಾ ಬಡವರಿಗೆ ಆಶ್ರಯ ಯೋಜನೆಯ ಜತೆಗೆ ದೇವಾಲಯಗಳಿಗೆ ನೆರವು ನೀಡುತ್ತಾ ತಾಲೂಕಿನಲ್ಲಿ ಎಂದೂ ಕಾಣದ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ ಶಾಸಕ ಕೆ.ಎಂ. ಉದಯ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ವಿಶ್ವಕರ್ಮ ಸಮುದಾಯ ಭವನ ಹಾಗೂ ವಿಶ್ವಕರ್ಮ ಕುಲದೇವತೆ ಕಾಳಿಕಾಂಬ ದೇವಸ್ಥಾನಕ್ಕೆ ನಿವೇಶನ ನೀಡಬೇಕು. ಕಾಯಕ ಸಮುದಾಯಗಳ ಸಮುದಾಯ ಭವನಕ್ಕೆ ಹಾಗೂ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಸಹಕರಿಸಬೇಕು ಹಾಗೂ ಸಂಘ ಸಂಸ್ಥೆಗಳ ಬೆಂಬಲಿಸುವುದರ ಜತೆಗೆ ಅವರ ಮನವಿಗೆ ಸ್ಪಂದಿಸಬೇಕೆಂದು ಮನವಿ ಮಾಡಿದ್ದಾರೆ.

Continue Reading

Mandya

5 ತಿಂಗಳೊಳಗೆ ಮದ್ದೂರು ನಗರದ ಕಾಮಗಾರಿ ಆರಂಭವಾಗಲಿದೆ: ಕೆ. ಎಂ. ಉದಯ್

Published

on

ಮದ್ದೂರು : 5 ತಿಂಗಳೊಳಗೆ ನಗರದ ಪೇಟೆಬೀದಿ ಆಗಲೀಕರಣ ಕಾಮಗಾರಿ ಆರಂಭವಾಗಲಿದೆ ಎಂದು ಶಾಸಕ ಕೆ. ಎಂ. ಉದಯ್ ಹೇಳಿದರು.

ಈ ಬಗ್ಗೆ ಕದಲೂರಿನ ಅವರ ನಿವಾಸದ ಕಚೇರಿಯಲ್ಲಿ ಸೋಮವಾರ ಕರೆಯಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಮೊದಲು ನಗರದ ಪ್ರಮುಖ ಬೀದಿಯಾದ ಪೇಟೆ ಬೀದಿಯನ್ನು 100 ಅಡಿಗೆ ವಿಸ್ತರಣೆ ಮಾಡಲು ಅನುಮೋದನೆ ಪಡೆಯಲಾಗಿತ್ತು. ಅದರಂತೆ ಸಂಬಂಧಪಟ್ಟ ಆಧಿಕಾರಿಗಳು ಡಿಪಿಆರ್ ಅನ್ನೂ ಕೂಡಾ ಸಿದ್ಧಪಡಿಸಿದ್ದರು. ಆದರೆ ಇತ್ತೀಚೆಗೆ ಕಾರಣಾಂತರಗಳಿಂದ 80 ಅಡಿಗಳಿಗೆ ವಿಸ್ತರಣೆ ಮಾಡಲು ಸಿಎಂ ಸಿದ್ದರಾಮಯ್ಯ ರವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಮಟ್ಟದ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ತೀರ್ಮಾನವಾದ ಹಿನ್ನೆಲೆಯಲ್ಲಿ ಮತ್ತೆ 80 ಅಡಿಗಳಿಗೆ ಡಿ ಪಿ ಆರ್ ಅನ್ನು ಸಿದ್ದಪಡಿಸಿ ಇಷ್ಟರಲ್ಲೇ ಕಳುಹಿಸಲಾಗುವುದು ಎಂದು ಹೇಳಿದರು.


ಅದಕ್ಕಾಗಿಯೇ ಇಂದು ತಹಸೀಲ್ದಾರ್, ಪೌರಾಡಳಿತ ಆಯುಕ್ತೆ, ಪಿ ಡಬ್ಲ್ಯೂ ಡಿ ಅಧಿಕಾರಿಗಳು ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇನೆ, ರಸ್ತೆಯ ವಿನ್ಯಾಸ ಸೇರಿದಂತೆ ಹಲವು ವಿಷಯದ ಬಗ್ಗೆ ಚರ್ಚಿಸಲಾಯಿತು ಎಂದರು.

ಮುಂದಿನ ದಿನಗಳಲ್ಲಿ ವಿಸ್ತರೀಕರಣಕ್ಕೆ ಜಾಗವನ್ನು ಕಳೆದುಕೊಳ್ಳುವವವರಿಗೆ ಈಗಿರುವ ಮೌಲ್ಯಕ್ಕಿಂತ 2 ಪಟ್ಟು ಪರಿಹಾರ ಹಾಗೂ ಶಿಫ್ಟಿಂಗ್ ಗಾಗಿ ಹೆಚ್ಚುವರಿಯಾಗಿ 5ಲಕ್ಷ ರೂ ಗಳನ್ನು ನೀಡುವುದಾಗಿ ತಿಳಿಸಿದರು.


ಈ ವೇಳೆ ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

Continue Reading

Trending

error: Content is protected !!