Connect with us

Kodagu

ಬಿಳಿಗೇರಿಯ ಶ್ರೀ ಭಗವತಿ ಉತ್ಸವ ಸಂಪನ್ನ 

Published

on

ಮಡಿಕೇರಿ: ಐತಿಹಾಸಿಕ ಹಿನ್ನಲೆಯನ್ನು ಒಳಗೊಂಡ ಮಡಿಕೇರಿ ತಾಲ್ಲೂಕಿನ ಬಿಳಿಗೇರಿ ಗ್ರಾಮದ ಪುರಾತನ ಶ್ರೀ ಭಗವತಿ ದೇವಾಲಯದ ವಾರ್ಷಿಕೋತ್ಸವ ವಿಶೇಷ ಪೂಜಾ ಕಾರ್ಯ, ತೆರೆಗಳ ದರ್ಶನ, ದೇವರ ಅವಭೃತ ಸ್ನಾನ ಮತ್ತು ನೃತ್ಯ ಬಲಿಯೊಂದಿಗೆ ಶ್ರದ್ಧಾ ಭಕ್ತಿಯಿಂದ  ಬುಧವಾರ ಸಂಪನ್ನಗೊಂಡಿತು.
ಇದೇ ಮಾ.೨೨ ರಂದು ಮಹಾಗಣಪತಿ ಹೋಮದೊಂದಿಗೆ ಆರಂಭಗೊಂಡ ಉತ್ಸವದಲ್ಲಿ ತಕ್ಕರ ಮನೆಯಿಂದ ಭಂಡಾರ ತರುವದು,  ಅಂದಿ ಬೆಳಕು,  ದೇವರ ನೃತ್ಯ ಬಲಿ, ಶ್ರೀ ಪರದೇವರ ಕೋಟದಲ್ಲಿ ಕೊಟ್ಟಿ ಪಾಡುವ ಸಾಂಪ್ರದಾಯಿಕ ಧಾರ್ಮಿಕ ಆಚರಣೆಗಳು ಶ್ರದ್ಧಾ ಭಕ್ತಿಯಿಂದ ನೆರವೇರಿತು. ದೇವತಾ ಕಾರ್ಯಗಳು ತಂತ್ರಿಗಳಾದ ಉದಯ ಕುಮಾರ್ ಹುಲಿತಾಳ ಅವರ ನೇತೃತ್ವದಲ್ಲಿ, ಕುಮಾರ್, ಪ್ರಶಾಂತ್ ಬಟ್ಟೆಮಕ್ಕಿ ಅವರುಗಳ ಸಹಕಾರದೊಂದಿಗೆ ನಡೆಯಿತು.
  ಉತ್ಸವದ ನಾಲ್ಕನೇ ದಿನವಾದ ಮಂಗಳವಾರದ ದೊಡ್ಡ ಹಬ್ಬದಂದು ಬೆಳಗ್ಗೆ  ದೇವರ ನೃತ್ಯ ಬಲಿ, ಶ್ರೀ ಪರದೇವರ ಕೋಟದಿಂದ ದೇವರ ಮುಡಿ ಮಲಿಯಪಟ್ಟಿಗೆ ಬರುವುದು, ಶೀ ಅಯ್ಯಪ್ಪ ದೇವರ ಭಂಡಾರ ತರುವುದು, ಎತ್ತು ಪೋರಾಟ, ಹಬ್ಬದ ಕಟ್ಟು ಮುರಿಯುವುದು, ತೆಂಗೆಪೋರು, ಬೆಳಕು, ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು.
ಮಧ್ಯಾಹ್ನದ ಬಳಿಕ ದೇವರ ಪ್ರದಕ್ಷಿಣೆ ನೃತ್ಯ ಬಲಿ ನಡೆದು, ಶೀ ಪರದೇವರ, ಶ್ರೀ ಅಯ್ಯಪ್ಪ ದೇವರ, ಕುಟ್ಟಿಚಾತ ದೇವರ ತೆರೆ  ಕಾರ್ಯಕ್ರಮ ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ ನೆರವೇರಿತು. ಬುಧವಾರ  ಸಂಜೆ ಬೆಳಕು, ದೇವರು ಬಲಿ ಬರುವುದು, ದೇವರ ಜಳಕ, ದೇವರ ನೃತ್ಯ ಬಲಿ, ಅನ್ನಸಂತರ್ಪಣೆ ಮತ್ತು ಮಂತ್ರಾಕ್ಷತೆ ಕಾರ್ಯಗಳೊಂದಿಗೆ ಉತ್ಸವ ಸಂಪನ್ನಗೊಂಡಿತು. ಉತ್ಸವದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
Continue Reading

Kodagu

ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನ: ಸಿಎಂರೊಂದಿಗೆ ಸಂವಾದ ನಡೆಸಿದ ಎ.ಎಸ್‌.ಪೊನ್ನಣ್ಣ

Published

on

ಬೆಳಗಾವಿ/ಮಡಿಕೇರಿ: ಬೆಳಗಾವಿಯ ಸುವರ್ಣ ಸೌಧದಲ್ಲಿ ಇಂದಿನಿಂದ ಚಳಿಗಾಲದ ಅಧಿವೇಶನ ಆರಂಭವಾಗಿದೆ.

ಈ ಅಧಿವೇಶನದಲ್ಲಿ  ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸಂವಾದ ನಡೆಸಿದ್ದಾರೆ.

Continue Reading

Kodagu

ಅಂತರಾಷ್ಟ್ರೀಯ ಮಟ್ಟದ ಬ್ರೈನೋಬ್ರೈನ್ ಸ್ಪರ್ಧೆ: ಮಡಿಕೇರಿಯ ಎಸ್.ಅನ್ವಿತ್  ಚಾಂಪಿಯನ್

Published

on

ಮಡಿಕೇರಿ: ಇತ್ತೀಚೆಗೆ ದುಬೈಯಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ 15ನೇ ಬ್ರೈನೋಬ್ರೈನ್ ಸ್ಪರ್ಧೆಯಲ್ಲಿ ಮಡಿಕೇರಿಯ ಅನ್ವಿತ್ ಎಸ್. ಜೂನಿಯರ್ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.

ನಗರದ ಬ್ರೈನೋಬ್ರೈನ್ ಅಬಕಾಸ್ ಸಂಸ್ಥೆಯ ಮುಖ್ಯಸ್ಥರಾದ ಮಾಪಂಗಡ ಕವಿತಾ ಕರುಂಬಯ್ಯ ಅವರ ಬಳಿ ಎಸ್.ಅನ್ವಿತ್  ತರಬೇತಿ ಪಡೆಯುತ್ತಿದ್ದಾನೆ. ದುಬೈನ ಶೇಖ್ ರಶೀದ್ ಸಭಾಂಗಣದಲ್ಲಿ ನಡೆದ ಸ್ಪರ್ಧೆಯಲ್ಲಿ ಅನ್ವಿತ್ ಸೇರಿದಂತೆ ಕರ್ನಾಟಕ ರಾಜ್ಯದ ಆರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸುಮಾರು 16 ದೇಶಗಳ 1,800 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಮದೆನಾಡಿನ ಬಿಜಿಎಸ್ ಶಾಲೆಯ 3ನೇ ತರಗತಿಯ ವಿದ್ಯಾರ್ಥಿಯಾಗಿರುವ ಎಂಟು ವರ್ಷದ ಅನ್ವಿತ್ ಎಸ್. ಮದೆನಾಡು ಮದೆ ಮಹೇಶ್ವರ ಪದವಿಪೂರ್ವ ಕಾಲೇಜ್ ನ ಉಪನ್ಯಾಸಕ ಶ್ರೀನಿವಾಸ ವಿ. ಹಾಗೂ ಪವಿತ್ರ ಎಂ.ಎನ್ ದಂಪತಿಯ ಪುತ್ರ.

ಬಹುಮಾನ ವಿತರಣಾ ಸಮಾರಂಭದಲ್ಲಿ ಬಹುಮಾನ ವಿತರಿಸಿ ಮಾತನಾಡಿದ ಬ್ರೈನೋಬ್ರೈನ್ ಅಂತಾರಾಷ್ಟ್ರೀಯ ದುಬೈ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆನಂದ್ ಸುಬ್ರಮಣ್ಯಂ ಹಾಗೂ ತಾಂತ್ರಿಕ ನಿರ್ದೇಶಕ ಅರುಲ್ ಸುಬ್ರಹ್ಮಣ್ಯಂ ಅವರು ಅನ್ವಿತ್ ಸಾಧನೆಯನ್ನು ಶ್ಲಾಘಿಸಿದರು.

ಮಾರ್ಗದರ್ಶಕಿ ಮಾಪಂಗಡ ಕವಿತಾ ಕರುಂಬಯ್ಯ ಅವರು ಮಾತನಾಡಿ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಅನ್ವಿತ್, ರಾಷ್ಟ್ರಮಟ್ಟ ಮತ್ತು ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿರುವುದು ಹೆಮ್ಮೆ ಎನಿಸಿದೆ. ತಂದೆ ತಾಯಿಗಳ ಸಹಕಾರದಿಂದ ಅನ್ವಿತ್ ಚಿಕ್ಕ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿದ್ದು, ಅಂತಾರಾಷ್ಟ್ರೀಯ ಮಟ್ಟದ ಯಶಸ್ಸು ಅವರ ಕುಟುಂಬದವರಿಗೆ ಸಲ್ಲಬೇಕು ಎಂದರು.

Continue Reading

Kodagu

ಶನಿವಾರಸಂತೆ – ಡಿ.10ಕ್ಕೆ ವಿದ್ಯುತ್ ವ್ಯತ್ಯಯ

Published

on

ಮಡಿಕೇರಿ : 66/11 ಕೆ.ವಿ ಶನಿವಾರಸಂತೆ ಮತ್ತು 66/11 ಕೆವಿ ಮಲ್ಲಿಪಟ್ಟಣ ವಿದ್ಯುತ್ ವಿತರಣಾ ಉಪ ಕೇಂದ್ರದಲ್ಲಿ ಮೂರನೇ ತ್ರೈಮಾಸಿಕ ಅವಧಿಯ ನಿರ್ವಹಣೆ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವುದರಿಂದ ಈ ಉಪ ಕೇಂದ್ರದಿಂದ ಹೊರಹೊಮ್ಮುವ ಎಲ್ಲಾ ಮಾರ್ಗಗಳಲ್ಲ್ಲಿ ಡಿಸೆಂಬರ್, 10 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಶನಿವಾರಸಂತೆ ಶಾಖೆಯ ಶನಿವಾರಸಂತೆ ಪಟ್ಟಣ, ಅಪ್ಪ್ಡಶೆಟ್ಟಳ್ಳಿ, ಮಾದ್ರೆ, ಚಿಕ್ಕಕೊಳತ್ತೂರು, ದುಂಡಳ್ಳಿ, ಬೆಂಬಳೂರು, ಬಿಳಹ, ಹಂಡ್ಲಿ, ಕಿತ್ತೂರು, ಸಂಪಿಗೆದಳ, ಮಾದ್ರದಳ್ಳಿ, ಮಣಗಲಿ, ಗೌಡಳ್ಳಿ, ಬೀಟಿಕಟ್ಟೆ, ಶುಂಠಿ, ಶಾಂತ್ವೇರಿ, ಬಸವನಕೊಪ್ಪ, ಕೊಡ್ಲಿಪೇಟೆ ಶಾಖೆಯ ಮುಳ್ಳೂರು, ಗೋಪಾಲಪುರ, ಜಾಗೇನಹಳ್ಳಿ, ನಿಡ್ತ, ಚೌಡೇನಹಳ್ಳಿ, ದೊಡ್ಡಳ್ಳಿ, ಹರೆಹೊಸೂರು, ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಬೆಸೂರು ಪಂಚಾಯಿತಿ, ನೀರುಗುಂದ, ನಿಲುವಾಗಿಲು, ದೊಡ್ಡಭಂಡಾರ, ಬ್ಯಾಡಗೊಟ್ಟ, ಕೊಡ್ಲಿಪೇಟೆ ಟೌನ್, ಅವರದಾಳು, ಬೆಂಬಳೂರು, ದೊಡ್ಡಕೊಡ್ಲಿ, ಕ್ಯಾತೆ, ದೊಡ್ಡಕುಂದಾ, ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

 

ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.

Continue Reading

Trending

error: Content is protected !!