Connect with us

Location

/ಎಸ್ ಟಿ ವರ್ಗಕ್ಕೆ ಕಾಡುಗೊಲ್ಲ ಸಮುದಾಯ//* *ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಭೇಟಿಯಾಗಿ ಕೃತಜ್ಞತೆ ಅರ್ಪಿಸಿದರು ಸಮುದಾಯದ ಮುಖಂಡರು*

Published

on

*//ಎಸ್ ಟಿ ವರ್ಗಕ್ಕೆ ಕಾಡುಗೊಲ್ಲ ಸಮುದಾಯ//*

*ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಭೇಟಿಯಾಗಿ ಕೃತಜ್ಞತೆ ಅರ್ಪಿಸಿದರು ಸಮುದಾಯದ ಮುಖಂಡರು*

*ಪ್ರಧಾನಿ ಮೋದಿ ಅವರಿಗೆ ಮನವಿ ಸಲ್ಲಿಸಿದ್ದ ಮಾಜಿ ಪ್ರಧಾನಿಗಳು*

*ಮಾಜಿ ಸಿಎಂ ಕುಮಾರಸ್ವಾಮಿ ಉಪಸ್ಥಿತಿ*

***

ಬೆಂಗಳೂರು: ಕಾಡುಗೊಲ್ಲ, ಅಡವಿಗೊಲ್ಲ ಮತ್ತು ಹಟ್ಟಿಗೊಲ್ಲ ಸಮುದಾಯಗಳ ಜನರನ್ನು ಪರಿಶಿಷ್ಠ ವರ್ಗದ ಪಟ್ಟಿಗೆ ಸೇರಿಸುವ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡ ಅವರನ್ನು ಇಂದು ಅವರ ನಿವಾಸದಲ್ಲಿ ಭೇಟಿಯಾದ ಸಮುದಾಯದ ಮುಖಂಡರು ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಅವರು ಉಪಸ್ಥಿತರಿದ್ದರು. ಮಾಜಿ ಪ್ರಧಾನಿಗಳು ಸಮುದಾಯದ ಬಗ್ಗೆ ಪ್ರಧಾನಿಗಳಿಗೆ ಮನವಿ ಸಲ್ಲಿಸುವ ವೇಳೆಯಲ್ಲಿ ಮಾಜಿ ಮುಖ್ಯಮಂತ್ರಿಗಳು ಕೂಡ ಇದ್ದರು.

ಚಿಕ್ಕನಾಯಕನಹಳ್ಳಿ ಶಾಸಕ ಸುರೇಶ್ ಬಾಬು ಅವರೊಂದಿಗೆ ಮಾಜಿ ಪ್ರಧಾನಿಗಳು; ಈ ಸಮುದಾಯ ಶೈಕ್ಷಣಿಕ ಮತ್ತು ಆರ್ಥಿಕವಾಗಿ ಪುರೋಭಿವೃದ್ಧಿ ಹೊಂದಲು ಎಸ್ಟಿ ವರ್ಗಕ್ಕೆ ಸೇರಿಸಬೇಕು ಎಂದು ಮನವಿ ಪತ್ರವನ್ನು ಸಲ್ಲಿಸಿದ್ದರು. ಇದರಿಂದ ಸಂತಸಗೊಂಡ ಸಮುದಾಯದ ಪ್ರಮುಖರು ಮಾಜಿ ಪ್ರಧಾನಿಗಳಿಗೆ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮುಖಂಡರ ಜತೆ ಚರ್ಚೆ ನಡೆಸಿದ ಮಾಜಿ ಪ್ರಧಾನಿಗಳು; ನನ್ನ ಮನವಿಗೆ ಕೇಂದ್ರ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ಅದರಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಅವರು ನಾನು ಸಲ್ಲಿಸಿದ ಮನವಿ ಪತ್ರವನ್ನು ಬುಡಕಟ್ಟು ಸಮುದಾಯ ವ್ಯವಹಾರಗಳ ಖಾತೆ ಸಚಿವ ಅರ್ಜುನ್ ಮುಂಡಾ ಅವರಿಗೆ ಕಳಿಸಿಕೊಟ್ಟರು.

ತಕ್ಷಣವೇ ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವರು; “ತಮ್ಮ ಮನವಿಯನ್ನು ಪರಿಗಣಿಸಿ ಪರಿಶೀಲನೆ ನಡೆಸಲಾಗುತ್ತಿದೆ” ನನಗೆ ಪತ್ರದ ಮುಖೇನ ತಿಳಿಸಿದ್ದಾರೆ ಎಂದು ಮುಖಂಡರಿಗೆ ತಿಳಿಸಿದರು.

ಅಲ್ಲದೆ, ಈ ಬಗ್ಗೆ ತಾವು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರಿಗೂ ಪತ್ರ ಬರೆದು ಮನವಿ ಮಾಡಿಕೊಂಡಿದ್ದೆ. ಅವರೂ ಕೂಡ ಮನವಿ ಸಕಾರಾತ್ಮಕವಾಗಿ ಸ್ಪಂದಿಸಿ ಉತ್ತರ ಬರೆದಿದ್ದಾರೆ ಎಂದು ಮಾಜಿ ಪ್ರಧಾನಿಗಳು ವಿಚಾರಿಸಿದರು.

ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿಯೂ ಅಲಕ್ಷ್ಯಕ್ಕೆ ತುತ್ತಾಗಿರುವ ಅಡವಿಗೊಲ್ಲ ಸಮುದಾಯಕ್ಕೆ ರಾಜಕೀಯವಾಗಿಯೂ ಪ್ರಾತಿನಿದ್ಯ ಸಿಕ್ಕಿಲ್ಲ. ಮಾಜಿ ಪ್ರಧಾನಿಗಳ ಈ ಪ್ರಯತ್ನದಿಂದ ನಮ್ಮ ಸಮುದಾಯಕ್ಕೆ ದೊಡ್ಡ ಆಶಾಕಿರಣ ಮೂಡಿದಂತಾಗಿದೆ. ನಮ್ಮ ಸಮುದಾಯದ ಮಕ್ಕಳಿಗೆ ಉತ್ತಮ ಭವಿಷ್ಯ ಸಿಗುತ್ತದೆ ಎನ್ನುವ ವಿಶ್ವಾಸ ಹೊಂದಿದ್ದೇವೆ ಎಂದು ಮುಖಂಡರು ಕೃತಜ್ಞತಾಪೂರ್ವಕವಾಗಿ ಹೇಳಿದರು.

ಡಿಸೆಂಬರ್ 21ರಂದು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದ ಮಾಜಿ ಪ್ರಧಾನಿಗಳು; ಶೋಷಿತ ಕಾಡುಗೊಲ್ಲ ಸಮುದಾಯದ ದುಸ್ಥಿತಿಯ ಬಗ್ಗೆ ಗಮನ ಸೆಳೆದು, ಅವರನ್ನು ಪರಿಶಿಷ್ಠ ವರ್ಗದ ಪಟ್ಟಿಗೆ ಸೇರಿಸಲು ಕ್ರಮ ವಹಿಸಬೇಕು ಎಂದು ಮನವಿ ಮಾಡಿದ್ದರು.

ಈ ಮನವಿಯನ್ನು ಪರಿಗಣಿಸಿದ್ದ ಪ್ರಧಾನಿಗಳು, ಅದನ್ನು ಬುಡಕಟ್ಟು ಸಮುದಾಯ ವ್ಯವಹಾರಗಳ ಸಚಿವಾಲಯಕ್ಕೆ ಪರಿಶೀಲನೆಗೆ ಕಳಿಸಿ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಚಿತ್ರದುರ್ಗದ ಜಿಲ್ಲಾ ಪಂಚಾಯಿತಿಯ ಮಾಜಿ ಸದಸ್ಯರಾದ ಮೀನಾಕ್ಷಿ ನಂದೀಶ್ ಸೇರಿದಂತೆ ಇನ್ನೂ ಅನೇಕ ಮುಖಂಡರು ಹಾಜರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Mandya

ಗೋವಾದಲ್ಲಿ ಮಂಡ್ಯ ಜಿಲ್ಲೆ ಕರಾಟೆ ವಿದ್ಯಾರ್ಥಿಗಳ‌ ಸಾಧನೆ

Published

on

ಮಂಡ್ಯ : ಇದೇ ಮೇ.18 ಹಾಗೂ 19 ರಂದು ಗೋವಾದ ಕಾಲಂಗಟ್ಟ್ ನ ಸ್ಟೇಡಿಯಂ ನಡೆದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕರ್ನಾಟಕ ತಂಡದಿಂದ ಮಂಡ್ಯದ 5 ವಿದ್ಯಾರ್ಥಿಗಳು ಭಾಗವಹಿಸಿ ಹಲವು ಪದಕ ಗಳಿಸಿದ್ದಾರೆ.

ಸ್ಪರ್ಧೆಯಲ್ಲಿ 13 ವರ್ಷ ವಯೋಮಿತಿಯ ವಿಭಾಗದಲ್ಲಿ ಶಶಾಂಕ್ ಬೆಳ್ಳಿಯ ಪದಕ(ಬ್ಲೂ ಬೆಲ್ಟ್ ) .ವಿಷ್ಣು ಮೊದಲಿಯಾರ್ ಚಿನ್ನದ ಪದಕ ( ಬ್ಲಾಕ್ ಬೆಲ್ಟ್ ) ವಿಭಾಗದಲ್ಲಿ. 15 ವರ್ಷದಲ್ಲಿ ಹರ್ಷ ಎಂ ಗೌಡ ಚಿನ್ನದ ಪದಕ ( ಬ್ಲಾಕ್ ಬೆಲ್ಟ್ ). ವರುಣ್ ಗೌಡ ಬೆಳ್ಳಿ ಪದಕ (ಬ್ಲಾಕ್ ಬೆಲ್ಟ್ ). ಹಾಗೂ ನೂತನ್ ಬೆಳ್ಳಿ ಪದಕ (ಬ್ರೌನ್ ಬೆಲ್ಟ್ ) ಗೆದಿದ್ದಾರೆ.

ಸ್ಪರ್ಧೆಯಲ್ಲಿ ಕರ್ನಾಟಕ. ಮಹಾರಾಷ್ಟ್ರ. ತಮಿಳುನಾಡು. ಆಂಧ್ರ. ಗೋವಾ. ಕೇರಳ ರಾಜ್ಯದ ತಂಡಗಳು ಭಾಗವಹಿಸಿದವು. ತಂಡದ ನಿರ್ವಾಹಕರಗಿ ಕುಮಾರ್ ಹಾಗೂ ಮುಖ್ಯ ತರಬೇತುದಾರರಾದ ಲೋಕೇಶ್ ಮೊದಲಿಯಾರ್ ಸಾರತ್ಯದಲ್ಲಿ ಈ ಚಾಂಪಿಯನ್ ಷಿಪ್ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡ ಭಾಗವಹಿಸಿತ್ತು.

ಪದಕ ವಿಜೇತ ಎಲ್ಲಾ ವಿದ್ಯಾರ್ಥಿಗಳನ್ನು ಟೀಮ್ vlmaa ಕರಾಟೆ ಟ್ರೈನಿಂಗ್ ಸ್ಕೂಲ್ . ಗೋಜು ರಿಯೋ ಕರಾಟೆ ಡೊ ಅಕಾಡೆಮಿ ಇಂಡಿಯಾ ಹಾಗೂ ಪೋಷಕರ ವತಿಯಿಂದ ಅಭಿನಂದನೆ ಸಲ್ಲಿ ಸಾಲಾಯಿತು.

Continue Reading

Hassan

ಅರೆಸ್ಟ್ ಆಗಿರುವ ದೇವರಾಜೇಗೌಡ್ರ ಆರೋಪ ಸಾಬೀತಾದ್ರೆ ರಾಜಕೀಯ ನಿವೃತ್ತಿ

Published

on

ಹಾಸನ : ನೂರು ಕೋಟಿಯಲ್ಲಿ ಐದು ಕೋಟಿ ಅಡ್ವಾನ್ಸ್ ನೀಡಲು ನನ್ನ ಮೂಲಕ ಯತ್ನ ಮಾಡಲಾಗಿದೆ ಎಂದು ಬಂದನದಲ್ಲಿರೊ ದೇವರಾಜೇಗೌಡ ಮಾಡಿರುವ ನನ್ನ ಮೇಲಿನ ಆರೋಪದ ವಿಚಾರದಲ್ಲಿ ಸಾಬೀತಾದರೇ ನಾನು ರಾಜಕೀಯ ಬಿಟ್ಟು ಹೋಗುತ್ತೇನೆ ಎಂದು ವಿದಾನಪರಿಷತ್ ಮಾಜಿ ಸದಸ್ಯ ಎಂ.ಎ. ಗೋಪಾಲಸ್ವಾಮಿ ಸವಾಲು ಹಾಕಿದರು.

ಪತ್ರಿಕಾಗೋಷ್ಠಿಯಲ್ಲಿ ಸೋಮವಾರದಂದು ಪೆನ್ ಡ್ರೈವ್ ಕೇಸ್ ನಲ್ಲಿ ಕುಮಾರಸ್ವಾಮಿ ಹೆಸರು ಹೇಳಲು ಡಿ.ಕೆ. ಶಿವಕುಮಾರ್ ನೂರು ಕೋಟಿ ಆಫರ್ ಆರೋಪವನ್ನು ಇವರ ವಿರುದ್ದ ನೂರು ಕೋಟಿ ಆಫರ್ ಆರೋಪ ಮಾಡಿದ್ದ ವಕೀಲ ದೇವರಾಜೇಗೌಡ ನೂರು ಕೋಟಿಯಲ್ಲಿ ಐದು ಕೋಟಿ ಅಡ್ವಾನ್ಸ್ ನೀಡಲು ನನ್ನ ಮೂಲಕ ಯತ್ನ ಎಂದಿದ್ದ ಬಂದನದಲ್ಲಿರೊ ದೇವರಾಜೇಗೌಡ

ಮಾಡಿರುವ ನನ್ನ ಮೇಲಿನ ಆರೋಪದ ಬಗ್ಗೆ ಮಾತನಾಡಿ, ಪೆನ್‌ಡ್ರೈವ್ ವಿಚಾರದಲ್ಲಿ ಸಾಕಷ್ಟು ಪ್ರಚಾರಗಳು ಆಗಿ ಚರ್ಚೆ ನಡೆದಿದೆ. ಕಳೆದ ಶುಕ್ರವಾರ ಕೇಸ್ ಒಂದರಲ್ಲಿ ಜೈಲಿಗೆ ಹೋಗಿರೊ ವಕೀಲ ದೇವರಾಜೇಗೌಡ ಆರೋಪ ಮಾಡಿದಾರೆ. ನಾನು ಐದು ಕೋಟಿ ಹಣವನ್ನು ನನ್ನ ಮೂಲಕ ಕೊಟ್ಟು ಕಳಿಸಿದ್ರು ಎಂದು ಹೇಳಿದ್ದನ್ನ ನೀವು ಬಿತ್ತರಿಸಿದ್ದೀರಿ. ನೂರು ಕೋಟಿ ಎಂದರೆ ಎಷ್ಟು ಚೀಲ ಬೇಕು? ಐದು ಕೋಟಿಗೆ ಎಷ್ಟು ಚೀಲ ಬೇಕು? ಆತ ಡೂಪ್ಲಿಕೇಟ್ ವಕೀಲ ಹೊರತು ನೋ ಒರಿಜಿನಲ್ ವಕೀಲನೊ ಗೊತ್ತಿಲ್ಲ. ನನ್ನ ಮೇಲೆ ನಮ್ಮ ಸಚಿವರಾದ ಪ್ರಿಯಾಂಕ್ ಖರ್ಗೆ, ಚಲುವರಾಯಸ್ವಾಮಿ, ಕೃಷ್ಣೆಗೌಡ ವಿರುದ್ದ ಆರೋಪಮಾಡಿದ್ದಾರೆ. ಬೌರಿಂಗ್ ಕ್ಲಬ್ ನಲ್ಲಿ ಹಣ ತಂದಿದ್ದ ಬಗ್ಗೆ ಹೇಳಿದಾರೆ. ಈತ ಹಾಸನದ ಸಂಸದರ ವಿರುದ್ದ ಹೋರಾಟ ಮಾಡಿ ಸದಸ್ಯತ್ವ ಅನರ್ಹಗೊಳಿಸೊವರೆಗು ಪ್ರಯತ್ನ ಮಾಡಿದ್ರು. ರೇವಣ್ಣಗೆ ಏಕ ವಚನದಲ್ಲಿ ಮಾತನಾಡಿ, ಎನ್.ಆರ್. ವೃತ್ತದಲ್ಲಿ ಬಿಗ್ ಸ್ಕ್ರೀನ್ ಹಾಕೊದಾಗಿ ಹೇಳಿದ್ದರು. ನಮ್ಮ ಜಿಲ್ಲೆಯಲ್ಲಿ ಬಿಜೆಪಿಯವರು ನಮಗೆ ಸಹಾಯ ಮಾಡಿರೋದು ಸತ್ಯ. ಯಾರು ಸಹಾಯ ಮಾಡಿದ್ರು ಎಂದು ಮುಂದೆ ಹೇಳಲಾಗುವುದು. ನಾನು ಐದು ಕೋಟಿ ಹಣ ಕೊಟ್ಟಿದ್ದರೆ, ಪ್ರಯತ್ನ ಮಾಡಿದ್ದರೆ ಆತ ಬಿಜೆಪಿ ಮುಖಂಡ ಆಗಿರುವುದರಿಂದ ಇಡಿ ಮೂಲಕ ನನ್ನ ಹಿಡಿಸಬಹುದಿತ್ತಲ್ಲ. ಆತ ಬ್ಲಾಕ್ ಮೇಲ್ ಮಾಡುತ್ತಿರಬಹುದು ಎಂಬ ಅನುಮಾನ ಇದೆ ಎಂದು ಅನುಮಾನಪಟ್ಟರು. ಕುಮಾರಸ್ವಾಮಿ ಅವರು ರೇವಣ್ಣ ಅವರ ಹೆಗಲ ಮೇಲೆ ಗನ್ ಇಟ್ಟು ಶಿವಕುಮಾರ್ ಮೇಲೆ ಅಟ್ಯಾಕ್ ಮಾಡ್ತಿದ್ದಾರಾ ಎನ್ನೋ ಅನುಮಾನ ಇದೆ. ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿ ವಿರೋದಿಸೊ ದೇವರಾಜೇಗೌಡ ಬೆಂಗಳೂರಿನಲ್ಲಿ ಕುಮಾರಸ್ವಾಮಿ ಪರವಾಗಿ ಇರ್ತಾರೆ.

ದೇವರಾಜೇಗೌಡ ಯಾವ ನಾಯಕ, ಆತ ಗ್ರಾಪಂ ಚುನಾವಣೆಗೆ ನಿಂತಿದ್ದವನಾ! ಏನೂ ಅಲ್ಲದ ವ್ಯಕ್ತಿಯು ಹೇಗೆ ಇಷ್ಟುದೊಡ್ಡ ಮಟ್ಟಕ್ಕೆ ಬೆಳೆದಿದ್ದಾನೆ. ಇವನ ಮಾತು ನೋಡಿದರೆ ಬೂತನ ಕೈಲಿ ಭಗವಗ್ದೀತೆ ಕೊಟ್ಟಂತೆ ಆಗಿದೆ. ಈ ಕ್ಷೇತ್ರದ ಲೋಕಸಭಾ ಸದಸ್ಯ ಏನಾಗಿದ್ದಾನೆ ಎನ್ನೊ ಅನುಮಾನ ನನಗಿದೆ. ಡಿ.ಕೆ. ಶಿವಕುಮಾರ್ ಅವರು ನಮ್ಮ ಪಕ್ಷದ ಅಧ್ಯಕ್ಷರು ಭವಿಷ್ಯದ ನಾಯಕ. ಈ ವೇಳೆ ನನ್ನ ವಿರುದ್ದ ಸುಳ್ಳು ಆರೋಪ ಮಾಡಿದಾರೆ ಎಂದು ಆಕ್ರೋಶವ್ಯಕ್ತಪಡಿಸಿದರು.

ನನಗೂ ಬೇರಿಂಗ್ ಕ್ಲಬ್ ಗೂ ಅನಿನಾಭವ ಸಂಬಂದವಿದ್ದು, ನಾನು ವಾರದಲ್ಲಿ ಮೂರು ದಿನ ಬೆಂಗಳೂರಿಗೆ ಹೋದರೆ ಅಲ್ಲೇ ಇರ್ತಿನಿ. ಐದು ಕೋಟಿ ಎಂದರೆ ಕನಿಷ್ಠ ಹತ್ತು ಬ್ಯಾಗ್ ಬೇಕು. ಕುಮಾರಸ್ವಾಮಿ ಅವರಿಗೆ ಹೇಳ್ತೇನೆ ವಿಜಯೇಂದ್ರ ಅವರಿಗೆ ಹೇಳ್ತೇನೆ ಅವರೇ ತನಿಖೆ ಮಾಡಿಸಲಿ. ಕುಮಾರಸ್ವಾಮಿ ಅವರ ಮನಸ್ಥಿತಿ ಚಂಚಲವಾಗಿದೆ. ತನಿಖೆ ನಡೆಯುವಾಗಲೇ ಅವರು ಸರ್ಕಾರವನ್ನು ಟೀಕೆ ಮಾಡುತ್ತಾರೆ. ಬೌರಿಂಗ್ ಕ್ಲಬ್ ನಲ್ಲಿ ರೂಂ ೧೧೦ ನಂಬರ್ ಎಂದಿದ್ದು, ಅಲ್ಲಿ ಈ ಸಂಖ್ಯೆ ಇರುವ ರೂಂ ಇರುವುದಿಲ್ಲ. ಇಡಿ, ಐಟಿ ಇದೆ ತನಿಖೆ ನಡೆಸಲಿ. ದೇವರಾಜೇಗೌಡ ಅವರು ಬೌರಿಂಗ್ ಕ್ಲಬ್ ನಲ್ಲಿ ಬೇಟಿಯಾಗಿಲ್ಲ. ಹಣಕಾಸು ವಿಚಾರದಲ್ಲಿ ಆತನ ಜೊತೆ ಮಾತನಾಡಿರುವುದು ಸಾಬೀತಾದರೇ ನಾನು ರಾಜಕೀಯ ಬಿಟ್ಟು ಹೋಗುತ್ತೇನೆ ಎಂದು ಸವಾಲು ಹಾಕಿದರು.

ವಕೀಲ ದೇವರಾಜೇಗೌಡ ಅವರನ್ನು ಎಂದೂ ಕೂಡ ಬೌರಿಂಗ್ ಕ್ಲಬ್ ನಲ್ಲಿ ಬೇಟಿಯಾಗಿಲ್ಲ. ಅವನಿಗೆ ಪ್ರಚಾರ ಬೇಕಾಗಿದೆ. ಅವನ ಹಿಂದೆ ದೊಡ್ಡ ತಿಮಿಂಗಿಲ ಇದೆ. ಕುಮಾರಸ್ವಾಮಿ ಅವರೇ ದೊಡ್ಡ ತಿಮಿಂಗಿಲ ಎಂದು ಕಿಡಿಕಾರಿದರು. ಕುಮಾರಸ್ವಾಮಿ ಅವರು ಕೇಂದ್ರದಲ್ಲಿ ಸಚಿವ ಆಗ್ತಾರಂತೆ. ದಯವಿಟ್ಟು ದೇವರಾಜೇಗೌಡರ ಬಗ್ಗೆ ತನಿಖೆ ನಡೆಸಲಿ ಎಂದು ಒತ್ತಾಯಿಸಿದರು.

Continue Reading

Hassan

ಬಿ.ಕಾಂ, ತರಗತಿಯ ಹೊಸ ಕೋರ್ಸು ಆರಂಭ, ಶಿಕ್ಷಣದ ಜೊತೆ ಉದ್ಯೋಗ, ಮೇ.೩೦ ರಂದು ಬೃಹತ್ ಉದ್ಯೋಗ ಮೇಳ: ಕೆ.ಜಿ. ಕವಿತ

Published

on

ಹಾಸನ: ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ೨೦೨೪-೨೫ನೇ ಸಾಲಿನಲ್ಲಿ ಬಿ.ಕಾಂ. ಪದವಿ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಅಪ್ರೆಂಟಿಶಿಪ್ ಎಂಬಾಡೆಂಡ್ ಡಿಗ್ರಿ ಪ್ರೊಗ್ರಾಮ್ ಎಂಬ ನೂತನ ಕೋರ್ಸ್‌ನ್ನು ಪ್ರಾರಂಭಿಸಲು ಮುಂದಾಗಿದ್ದು, ಶಿಕ್ಷಣದ ಜೊತೆಯಲ್ಲಿ ಉದ್ಯೋಗದ ಮೂಲಕ ಗಳಿಕೆ ಮಾಡಬಹುದು. ಮೇ.೩೦ ರ ಗುರುವಾರದಂದು ಕಾಲೇಜು ಆವರಣದಲ್ಲಿ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಕೆ.ಜಿ. ಕವಿತ ಮತ್ತು ವಾಣಿಜ್ಯ ಶಾಸ್ತ್ರದ ಮುಖ್ಯಸ್ಥರಾದ ರಾಜಶೇಖರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಈ ಹೊಸ ಕೋರ್ಸು ಈಗಾಗಲೇ ತೆಲಗಾಂಣ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಚಾಲ್ತಿಯಲ್ಲಿದ್ದು, ನಮ್ಮ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಗದಗ, ಧಾರವಾಡ, ಹಾವೇರಿ, ಮೈಸೂರು ಮತ್ತು ಹಾಸನ ೬ ಜಿಲ್ಲೆಗಳಲ್ಲಿ ಈ ಕೋರ್ಸ್‌ನ್ನು ಪ್ರಾರಂಭಿಸಲು ಅನುಮತಿ ನೀಡಿದೆ. ಅದರಲ್ಲಿ ನಮ್ಮ ಕಾಲೇಜು ಕೂಡ ಒಂದಾಗಿದೆ. ಈ ಕೋರ್ಸ್ ಮೂರು ವರ್ಷದ ಪದವಿಯಾಗಿದ್ದು, ಪ್ರಥಮ ಮತ್ತು ದ್ವಿತೀಯ ವರ್ಷ ಕಾಲೇಜಿನಲ್ಲಿ ವ್ಯಾಸಂಗ ಮಾಡಿದರೆ ಮತ್ತು ಅಂತಿಮ ವರ್ಷ ಖಾಸಗಿ ಕಂಪನಿಯಲ್ಲಿ ತರಬೇತಿಯನ್ನು ಪಡೆದುಕೊಳ್ಳಲ್ಲಿದ್ದಾರೆ. ತರಬೇತಿ ಅವಧಿಯಲ್ಲಿ ರೂ.೭೦೦೦ ರಿಂದ ರೂ. ೧೦೦೦೦ ಗಳವರೆಗೆ ಸ್ಪೆಫಂಡ್‌ನ್ನು ನೀಡುತ್ತಾರೆ. ಕಾಲೇಜು ಶಿಕ್ಷಣ ಇಲಾಖೆಯು ಖಂSಅI ಖಇಖಿಂIಐ ಂSSಔಅIಂಖಿIಔಓ SಏIಐಐS ಅಔUಓಅIಐ ಔಈ IಓಆIಂ) ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿರುತ್ತದೆ. ಈ ನೂತನ ಕೋರ್ಸ್‌ಗೆ ಒಂದು ವರ್ಷದಲ್ಲಿ ೬೦ ವಿದ್ಯಾರ್ಥಿಗಳಿಗೆ ಮಾತ್ರ ಕಲಿಯಲು ಅವಕಾಶ ಸಿಗಲಿದೆ ಎಂದರು. ೨ ವರ್ಷ ಕಾಲೇಜಿನಲ್ಲೇ ವ್ಯಾಸಂಗ ಮಾಡಿದ ಬಳಿಕ ಅಂತಿಮ ವರ್ಷದ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳುವ ಕಾರ್ಖಾನೆ ಅಥವಾ ಕಂಪನಿಗಳಲ್ಲೇ ಉಳಿದು ಕೆಲಸ ಮಾಡಬೇಕು. ಆ ಅವಧಿಯಲ್ಲಿ ಮಾಸಿಕ ೧೦ ಸಾವಿರ ಸೈಫಂಡ್ ಸಿಗಲಿದೆ ಎಂದರು. ಉದ್ಯೋಗಕ್ಕೆ ಪೂರಕವಾದ ಪಡೆಯಲು ಕೌಶಲ್ಯವನ್ನು ಕಾಲೇಜು ಜೊತೆಗೆ ಅಲ್ಲೂ ಕಲಿತು ಈ ಕೊಳ್ಳಬಹುದು ಎಂದ ಅವರು, ಈ ಸಂಬಂಧ ಸರ್ಕಾರ ರಾಜ್ಯದ ಒಟ್ಟು ೧೧ ಜಿಲ್ಲೆಗಳ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಪದವಿನ ಜೊತೆಗೆ ಸಂಪಾದನೆಯೂ ಆಗಲಿದೆ. ತಿಳುವಳಿಕೆ ಜೊತೆಗೆ ಉದ್ಯೋಗ ನಿರ್ವಹಣೆಯ ಚಾಕಚಾಕ್ಯತೆ ಸಹ ಪಡೆಯಬಹುದು. ೨೦೨೪-೨೫ನೇ ಶೈಕ್ಷಣಿಕ ಸಾಲಿಗೆ ಪದವಿ ಕೋರ್ಸುಗಳಾದ ಬಿ.ಎ., ಬಿ.ಕಾಂ, ಬಿ.ಎಸ್ಸಿ, ಬಿ.ಸಿ.ಎ., ಮತ್ತು ಬಿ.ಬಿ.ಎ. ಕೋರ್ಸುಗಳಿಗೆ ಪ್ರವೇಶಾತಿ ಪ್ರಾರಂಭವಾಗಿರುತ್ತದೆ ಎಂದು ಹೇಳಿದರು.

ಮೇ ೩೦ರ ಗುರುವಾರದಂದು ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಬೃಹತ್ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದ್ದು, ವಿವಿಧ ಕಂಪನಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲಿದೆ. ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಎಂ.ಕೆ. ಹರ್ಷ,. ಯೋಗೀಶ್, ಮಂಜೂಳಾ, ಮಧುಸೂದನ್ ಇತರರು ಉಪಸ್ಥಿತರಿದ್ರು.

Continue Reading

Trending

error: Content is protected !!