Connect with us

Mandya

ಪ್ರತಿಯೊಬ್ಬರೂ ಸೊಳ್ಳೆಗಳ ಜೀವನ ಚಕ್ರ ಅರಿತು ಮಲೇರಿಯಾ, ಡೆಂಗ್ಯೂ, ಚಿಕೂನ್ ಗುನ್ಯಾ ರೋಗಗಳಿಂದ ದೂರವಿರಿ

Published

on

ಶ್ರೀರಂಗಪಟ್ಟಣ: ಪ್ರತಿಯೊಬ್ಬರೂ ಸೊಳ್ಳೆಗಳ ಜೀವನ ಚಕ್ರ ಅರಿತು ಮಲೇರಿಯಾ, ಡೆಂಗ್ಯೂ, ಚಿಕ್ಕುಂ ಗುನ್ಯಾ ರೋಗಗಳಿಂದ ದೂರವಿರಿ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್ ಡಿ ಬೆನ್ನೂರ ಹೇಳಿದರು.

ಅವರು ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿ ಹಾಗೂ ಸಾರ್ವಜನಿಕ ಆಸ್ಪತ್ರೆ ಶ್ರೀರಂಗಪಟ್ಟಣ ವತಿಯಿಂದ ಗಂಜಾಂ ಸರಕಾರಿ ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ “ಮಲೇರಿಯಾ ವಿರೋಧಿ ಮಾಸಾಚರಣೆ,” ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಪ್ರತಿ ವರ್ಷ ಜೂನ್ ತಿಂಗಳಾದ್ಯಂತ ಮಲೇರಿಯಾ ರೋಗ ಹರಡುವ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತಿದ್ದು ಈ ವರ್ಷ” ಹೆಚ್ಚು ಸಮಾನತೆಯ ಜಗತ್ತಿಗೆ ಮಲೇರಿಯಾ ವಿರುದ್ಧದ ಹೋರಾಟವನ್ನು ತೀವೃಗೊಳಿಸೋಣ” ಎಂಬ ಧ್ಯೇಯ ವಾಕ್ಯದೊಂದಿಗೆ ಜನಸಾಮಾನ್ಯರಲ್ಲಿ ಮಲೇರಿಯಾ ಸೇರಿದಂತೆ ಸೊಳ್ಳೆಗಳಿಂದ ಹರಡುವ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.


ಸೊಳ್ಳೆಗಳ ಬೆಳವಣಿಗೆ ಹಂತಗಳ ಹಾಗೂ ಜೀವನ ಚಕ್ರಗಳ ಕುರಿತು ಮಕ್ಕಳಿಗೆ ಮಾಹಿತಿ ನೀಡುತ್ತ
ಮನೆಯ ಸುತ್ತ ಮುತ್ತ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು ನೀರಿನ ಸಂಗ್ರಹಗಳ ಪರಿಕರಗಳನ್ನು ವಾರಕ್ಕೆರಡು ಬಾರಿ ಸ್ವಚ್ಚವಾಗಿ ತೊಳೆಯಬೇಕು. ಮಲಗುವಾಗ ತಪ್ಪದೆ ಸೊಳ್ಳೆ ಪರದೆ ಬಳಸಿ,ಘನ ತ್ಯಾಜ್ಯ ವಸ್ತುಗಳನ್ನು ಸರಿಯಾಗಿ ವಿಲೇವಾರಿ ಮಾಡಬೇಕು. ಜ್ವರ ಬಂದಾಗ ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ನಂತರ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಸಿ.ಚಂದನ ಮಲೇರಿಯಾ, ಡೆಂಗ್ಯೂ, ಚಿಕ್ಕುo ಗುನ್ಯಾ ರೋಗದ ಲಕ್ಷಣಗಳು, ಚಿಕಿತ್ಸೆ, ಪತ್ತೆ ಹಚ್ಚುವಿಕೆ ಕುರಿತಂತೆ ಹಾಗೂ ಸ್ವಯಂ ರಕ್ಷಣಾ ವಿಧಾನಗಳ ಕುರಿತು ಮಕ್ಕಳಿಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಬಸವರಾಜ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಮಹಾದೇವಮ್ಮ, ಸಹ ಶಿಕ್ಷಕರಾದ ಕೆ.ಎನ್.ಚಂದ್ರಮ್ಮ, ಪಿ.ಕೆ.ಕುಮದ್ವತಿ, ಹೆಚ್.ಎನ್.ಪುಷ್ಪಲತಾ, ಆರ್.ವಿಜಯ, ಹೆಚ್.ಆರ್.ರವಿಕುಮಾರ್, ಜೆ ಎಸ್ ರಾಜಮ್ಮ,ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಸಿ ಚಂದನ ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Mandya

ಡಾ.ಬಾಲಗಂಗಾಧರನಾಥ ಸ್ವಾಮೀಜಿರವರ 81ನೇ ಜಯಂತೋತ್ಸವ, ಶಾಲಾ ಕಾಲೇಜುಗಳ ವಾರ್ಷಿಕ ವೈಭವ

Published

on

ಮಂಡ್ಯ : ವಿಶ್ವಮಾನವ ವಿದ್ಯಾಸಂಸ್ಥೆ ವಿಶ್ವ ಮಾನವ ಕ್ಷೇತ್ರ ಕೊಮ್ಮೇರಹಳ್ಳಿ, ಮಂಡ್ಯ ತಾಲೂಕು ಇವರ ವತಿಯಿಂದ ವಿಶ್ವಮಾನವ ಕ್ಷೇತ್ರದ ಬಿಜಿಎಸ್ ಸಭಾಂಗಣದಲ್ಲಿ ನಡೆದ ಪರಮಪೂಜ್ಯ ಜಗದ್ಗುರು ಶ್ರೀ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿರವರ 81ನೇ ಜಯಂತೋತ್ಸವ ಹಾಗೂ ಶಾಲಾ ಕಾಲೇಜುಗಳ ವಾರ್ಷಿಕ ವೈಭವ 2025ರ ಸಮಾರಂಭವೂ ಶ್ರೀ ಆದಿಚುಂಚನಗಿರಿ ಶಾಖಾಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪುರುಷೋತ್ತಮನಂದನಾಥ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ಜರುಗಿತು.

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಶಾಲಾ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿಗಳಾದ ಡಾ.ಎ.ಟಿ ಶಿವರಾಂ ರವರು ಪ್ರಧಾನ ಭಾಷಣ ಮಾಡಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಬಿಇಓ ಮಹಾದೇವ್ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಸಿ.ಇ.ಓ ಡಾ.ಎನ್.ಶಿವರಾಮರೆಡ್ಡಿ, ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ.ಯೋಗಾನಂದ, ಪಿಯುಸಿ ಕಾಲೇಜಿನ ಪ್ರಾಂಶುಪಾಲ ಆನಂದ್, ಕನ್ನಡ ಮಾಧ್ಯಮ ಮುಖ್ಯ ಶಿಕ್ಷಕ ಹೆಚ್.ಆರ್.ನಾಗರಾಜ್, ಆಂಗ್ಲ ಮಾಧ್ಯಮ ಮುಖ್ಯ ಶಿಕ್ಷಕ ರಾಘವೇಂದ್ರ, ಕೆ.ಎನ್.ಮೇಘನಾಥ್, ಪ್ರೈಮರಿ ವಿಭಾಗದ ಮುಖ್ಯ ಶಿಕ್ಷಕ ಬಿ.ಸಿ.ಮುಕುಂದ ಹಾಜರಿದ್ದರು.

Continue Reading

Mandya

ಅನಿಕೇತನ ಶಾಲೆಯಿಂದ ವಂದೇ ಮಾತರಂ 150 ಜಾಗೃತಿ ಜಾಥಾ

Published

on

ಮಂಡ್ಯ: ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಕಾವೇರಿ ಉದ್ಯಾನವನದಲ್ಲಿ ಅನಿಕೇತನ ಸ್ಕೂಲ್ ಆಫ್ ಎಜುಕೇಷನ್ ವಿದ್ಯಾಸಂಸ್ಥೆ ವತಿಯಿಂದ ವಂದೇಮಾತರಂ 150ವರ್ಷ ತುಂಬಿದ ಹಿನ್ನೆಲೆಯಲ್ಲಿ ಜಾಗೃತಿ ಜಾಥಾ ನಡೆಸಿತು.

ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿಯ ಸಂಕೇತವಾದ ಬಂಕಿಮ ಚಂದ್ರಚಟರ್ಜಿ ರವರಿಂದ ರಚಿತವಾದ ವಂದೇಮಾತರಂ ಗೀತೆ ರಚನೆಯಾಗಿ 150ವರ್ಷ ಸಂದಿರುವ ಸಂದರ್ಭದಲ್ಲಿ ಅರ್ಥಪೂರ್ಣವಾಗಿ ಆಚರಿಸಲು ಮಂಡ್ಯದ ಕಾವೇರಿ ಉದ್ಯಾನವನದಿಂದ ಮೈಸೂರು ಬೆಂಗಳೂರು ಹೆದ್ದಾರಿ, ಜೆ.ಸಿ ವೃತ್ತ, ಮಹಾವೀರ ವೃತ್ತದ ಮೂಲಕ ಸರ್.ಎಂ.ವಿಶ್ವೇಶ್ವರಯ್ಯ ರಸ್ತೆ ಮಾರ್ಗವಾಗಿ ಜಿಲ್ಲಾ ಕ್ರೀಡಾಂಗಣದವರೆಗೂ ಜಾಗೃತಿ ಜಾಥಾ ನಡೆಸಲಾಯಿತು.

ಪೊಲೀಸ್ ವೃತ್ತ ನಿರೀಕ್ಷಕರಾದ ಸಿದ್ದರಾಜು ರವರು ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅನಿಕೇತನ ಸ್ಕೂಲ್ ಆಫ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಡಾ.ಟಿ.ಎಂ.ಜಗದೀಶ್, ರಾಷ್ಟ್ರಗೀತೆ ಜನಗಣಮನ ಹಾಡಿನಂತೆಯೇ ವಂದೇ ಮಾತರಂ ಗೀತೆಯನ್ನು ಪ್ರತಿದಿನ ಶಾಲಾ- ಕಾಲೇಜು ಗಳಲ್ಲಿ ವಿದ್ಯಾರ್ಥಿಗಳು ಹಾಡಲಿ ಎಂದು ಸರ್ಕಾರಗಳಿಗೆ ಆಗ್ರಹಿಸಿದರು.

ದೇಶದಲ್ಲಿರುವ ಭಾರತೀಯರೆಲ್ಲಾ ಒಂದೇ ತಾಯಿ ಭಾರತಮಾತೆಯ ಮಕ್ಕಳಾಗಿದ್ದಾರೆ ಈ ಹಾಡಿನ ಮೂಲಕ ದೇಶಪ್ರೇಮ ರಾಷ್ಟ್ರಭಕ್ತಿ, ರಾಷ್ಟ್ರೀಯ ಏಕತೆ ಮತ್ತು ಶೌರ್ಯ ಮೂಡಿಸುವ ಚೈತನ್ಯದಾಯಕ ಸಾಲುಗಳಿವೆ ಎಂದು ತಿಳಿಸಿದರು.
ವಿದ್ಯಾರ್ಥಿಗಳೇ ನಿಮ್ಮನ್ನು ಯಾರಾದರೂ ಕೇಳಿದರೆ ಹಿಂದೂ ಧರ್ಮ ಮೊದಲ ಭಾರತ ದೇಶ ಮೊದಲ ದೇವರು ಮೊದಲ ಎಂದು ಕೇಳಿದರೆ ನೀವು ದೇಶ ಮೊದಲು ಎಂದು ಹೆಮ್ಮೆಯಿಂದ ಹೇಳಿ ಎಂದು ಮನವಿ ಮಾಡಿದರು.

ಬಳಿಕ ಮಾತನಾಡಿದ ಎನ್‌ಸಿಸಿ ಗೈಡ್ ಮಾಸ್ಟರ್ ರಾಜು, ಸಾಹಿತಿ ಬಂಕಿಮ ಚಂದ್ರ ಚಟರ್ಜಿ ಅವರು 1875ರಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಏಕತೆ ಮತ್ತು ಶೌರ್ಯ ಪ್ರತಿಬಿಂಬಿಸುವ ಹೋರಾಟದ ಗೀತೆಯಾಗಿ ಒಂದೇ ಮಾತರಂ ರಚನೆಗೊಳ್ಳುತ್ತದೆ ಆಗ ಬ್ರಿಟಿಷರ ಸಂಕೋಲೆಯಲ್ಲಿ ದೇಶವಿತ್ತು ಎಂದು ನುಡಿದರು.

ಸ್ವಾತಂತ್ರ್ಯ ಸಂಗ್ರಾಮದ ಪೂರ್ತಿದಾಯಕ ಗೀತೆ ವಂದೇ ಮಾತರಂ ಗೀತೆಯು ಭಾರತ ದೇಶದಲ್ಲಿ ಸ್ವಾತಂತ್ರ್ಯ ಚಳುವಳಿಗೆ ಪೂರ್ತಿದಾಯಕವಾಗಿ ಹೋರಾಟ ಗೀತೆ ಯಾಗಿ ಮೈ ರೋಮಾಂಚನಗೊಳಿಸುವಂತೆ ಸದ್ದು ಮಾಡಿತು ಎಂದು ಹೇಳಿದರು.
ಈ ಹಾಡು ರಚನೆಯಾಗಿ 59 ವರ್ಷ ತುಂಬಿದಾಗ 1925 ರಲ್ಲಿ ಬ್ರಿಟಿಷರ ಆಡಳಿತವಿತ್ತು, ನೂರು ವರ್ಷ ತುಂಬಿದಾಗ 1975ರಲ್ಲಿ ತುರ್ತು ಪರಿಸ್ಥಿತಿಯ ದಿನಗಳು ಎದುರಿಸಬೇಕಿತ್ತು 150 ವರ್ಷ ತುಂಬಿದ ಈ ಸಂದರ್ಭದ 2025 ರಲ್ಲಿ ನಮ್ಮ ಭಾರತ ದೇಶವು ಸ್ಮರಿಸುತ್ತಿದೆ ಅದೇ ರೀತಿ ಶಾಲೆಯ ವಿದ್ಯಾರ್ಥಿಗಳು ಜಾಗೃತಿ ಜಾತ ಮಾಡಿ ಹೆಮ್ಮೆ ಪಡುತ್ತಿರುವುದು ಸ್ಥಾಪನೆಯ ಎಂದು ನುಡಿದರು.

ಜಾಥಾದಲ್ಲಿ ಅನಿಕೇತನ ಸ್ಕೂಲ್ ಆಫ್ ಎಜುಕೇಷನ್ ಟ್ರಸ್ಟ್ ಉಪಾಧ್ಯಕ್ಷರಾದ ಡಾ.ಟಿ.ಎಂ.ಪ್ರಕಾಶ್, ಪ್ರಾಂಶುಪಾಲ ಡಾ.ರಾಮಲಿಂಗಯ್ಯ, ಟ್ರಸ್ಟಿ ಕೆ.ಎಸ್.ಬಸವರಾಜು, ಡಿ.ಎಸ್.ದೇವರಾಜು, ಉಪ ಪ್ರಾಂಶುಪಾಲರಾದ ಮಂಗಳಮ್ಮ, ಮುಖ್ಯೋಪಾಧ್ಯಾಯನಿ ತೇಜೇಶ್ವರಿ, ಕಾರ್ಯದರ್ಶಿಗಳಾದ ಹೆಚ್.ಎಸ್. ಚುಂಚೆಗೌಡ, ಎನ್‌ಸಿಸಿ ಗೈಡ್ ಮಾಸ್ಟರ್ ರಾಜು, ಅಧ್ಯಾಪಕ ವರ್ಗದವರು ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

Continue Reading

Mandya

ವಿವಿಧ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದ ಶಾಸಕ ಕೆ.ಎಂ.ಉದಯ್

Published

on

ಮದ್ದೂರು: ಗ್ರಾಮೀಣ ಭಾಗದ ಸಮಗ್ರ ಅಭಿವೃದ್ಧಿಗೆ ಸರ್ಕಾರದಿಂದ ವಿಶೇಷ ಅನುದಾನ ತಂದು ಅಗತ್ಯ ಕ್ರಮ ಕೈಗೊಂಡಿರುವುದಾಗಿ ಶಾಸಕ ಕೆ.ಎಂ.ಉದಯ್ ತಿಳಿಸಿದರು.

ತಾಲೂಕಿನ ಕೂಳಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರೆಕಲ್ ದೊಡ್ಡಿ, ಮೇಲದಾಸನದೊಡ್ಡಿ, ಕೊತ್ತಿಪುರ ಹಾಗೂ ಅಣ್ಣಹಳ್ಳಿದೊಡ್ಡಿ ಗ್ರಾಮಗಳಲ್ಲಿ ಅಂದಾಜು 3 ಕೋಟಿ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಮತ್ತು ಸಿಸಿ ಚರಂಡಿ ಕಾಮಗಾರಿಗಳಿಗೆ ಶುಕ್ರವಾರ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.

ಕೆಲವೆಡೆ ಹೊಸ ರಸ್ತೆಗಳ ನಿರ್ಮಾಣ, ಮರು ಡಾಂಬರೀಕರಣ, ದುರಸ್ತಿ ಕಾರ್ಯ ಪೂರ್ಣಗೊಂಡರೆ ಕೆಲವೆಡೆ ಕಾಮಗಾರಿ ಪ್ರಗತಿಯಲ್ಲಿದ್ದು, ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಲಾಗುತ್ತಿದೆ. ಗ್ರಾಮೀಣ ರಸ್ತೆಗಳ ಸುಧಾರಣೆಗೆ ಸಾಕಷ್ಟು ಅನುದಾನ ಬಿಡುಗಡೆಯಾಗುತ್ತಿದ್ದು, ಶೀಘ್ರದಲ್ಲೆ ಗ್ರಾಮೀಣ ಭಾಗದ ಎಲ್ಲ ರಸ್ತೆಗಳು ಉತ್ತಮ ಸ್ಥಿತಿ ತಲುಪುತ್ತವೆ ಎಂದರು.

 

ಈಗಾಗಲೇ ಅಭಿವೃದ್ಧಿಯಲ್ಲಿ ಸಾಕಷ್ಟು ಹಿಂದುಳಿದಿರುವ ಗ್ರಾಮಗಳನ್ನು ಹಂತ ಹಂತವಾಗಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗುತ್ತಿದ್ದು, ಇನ್ನು ಕೆಲ ದಿನಗಳಲ್ಲೇ ಕೂಳಗೆರೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ 10 ಕೋಟಿ ರೂ.ಗೂ ಹೆಚ್ಚಿನ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾದರಿ ಗ್ರಾಮಗಳನ್ನಾಗಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಬನ್ನಹಳ್ಳಿ ಏತ ನೀರಾವರಿ ಯೋಜನೆಯೂ ಕೂಡ ಅಂತಿಮ ಘಟ್ಟಕ್ಕೆ ತಲುಪಿದ್ದು, ಮುಂದಿನ ಬೇಸಿಗೆ ಬೆಳೆ ವೇಳೆಗೆ 18 ಕೆರೆಗಳಿಗೆ ನೀರು ತುಂಬಿಸುವ ಮೂಲಕ ರೈತರ ಬೇಸಾಯಕ್ಕೆ ಅನುಕೂಲ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಗ್ರಾ.ಪಂ. ಅಧ್ಯಕ್ಷ ಕೆಂಪರಾಜು, ಕೆಡಿಪಿ ಸದಸ್ಯ ಸಿದ್ದರಾಜು, ಮುಖಂಡರಾದ ಜಯರಾಂ, ತಿಪ್ಪೂರು ಮನು, ಮಹೇಶ್, ಎಇಇ ನವೀನ್, ಎಇ ನವೀನ್ ಇದ್ದರು

Continue Reading

Trending

error: Content is protected !!