Connect with us

Kodagu

ಗೋಣಿಕೊಪ್ಪ ಮಾರುಕಟ್ಟೆ ಹಿಂಭಾಗದಲ್ಲಿ ಬೆಂಕಿ ಅವಘಡ

Published

on

ಗೋಣಿಕೊಪ್ಪ ಮಾರುಕಟ್ಟೆ ಹಿಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ನಂದಿಸಲು ಹರಸಾಹನ ನಡೆಯುತ್ತಿದೆ. ಫಯರ್ಪೋರ್ಸ್ ತಂಡವೂ ಸ್ಥಳಕ್ಕೆ ಆಗಮಿಸುತ್ತಿದೆ.

Continue Reading
Click to comment

Leave a Reply

Your email address will not be published. Required fields are marked *

Kodagu

ಡಿ.17 ರಂದು ಕೆದಮುಳ್ಳೂರುವಿನಲ್ಲಿ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ

Published

on

ವಿರಾಜಪೇಟೆ: ವಿರಾಜಪೇಟೆ ತಾಲೂಕಿನ  ಕಾರ್ಯನಿರತ ಪತ್ರಕರ್ತರ ಸಂಘ, ಆರ್.ಐ.ಹೆಚ್.ಪಿ ಆಸ್ಪತ್ರೆ ಅಮ್ಮತ್ತಿ ಹಾಗೂ ಫಾತಿಮಾ ಮಾತೆಯ ದೇವಾಲಯ ಕೆದಮುಳ್ಳೂರು ಇವರ ಸಂಯುಕ್ತ ಆಶ್ರಯದಲ್ಲಿ ಡಿ.17 ರಂದು ಕೆದಮುಳ್ಳೂರುವಿನಲ್ಲಿ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ ಎಂದು ಕಾರ್ಯಕ್ರಮದ ಸಂಚಾಲಕ ಕಿಶೋರ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೆದಮುಳ್ಳೂರು ಗ್ರಾಮದ ಸೆಂಟ್ ಮೇರೀಸ್ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಉಚಿತ ಆರೋಗ್ಯ ತಪಾಸಣೆ, ನೇತ್ರ ತಪಾಸಣೆ ಹಾಗೂ ಕಣ್ಣಿನ ಪೊರೆ ಚಿಕಿತ್ಸೆಯನ್ನು ಏರ್ಪಡಿಸಲಾಗಿದೆ.

ಅಮ್ಮತ್ತಿಯ ಆರ್.ಐ.ಹೆಚ್.ಪಿ ಆಸ್ಪತ್ರೆಯ ನುರಿತ ವೈದ್ಯರು ಆರೋಗ್ಯ ಹಾಗೂ ನೇತ್ರ ಚಿಕಿತ್ಸೆಯನ್ನು ಒದಗಿಸಲಿದ್ದಾರೆ.

ಡಿ.17 ರ ಬೆಳಗ್ಗೆ 10 ರಿಂದ ಮದ್ಯಾಹ್ನ 1 ಗಂಟೆಯವರೆಗೆ ಶಿಬಿರ ನಡೆಯಲಿದ್ದು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಶಿಬಿರದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ.ಇದರೊಂದಿಗೆ ಸೆಹೆಲಿ ಆರೋಗ್ಯ ಕಿಟ್ ವಿತರಣಾ ಕಾರ್ಯಕ್ರಮ ಕ್ಕೆ ಚಾಲನೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

Continue Reading

Kodagu

ಸಿಎನ್‌ಸಿ ವತಿಯಿಂದ ಡಿ.18ರಂದು ಗನ್ ಕಾರ್ನಿವಲ್ ತೋಕ್ ನಮ್ಮೆ ಆಚರಣೆ

Published

on

ಮಡಿಕೇರಿ: ಡಾರ್ಜಿಲಿಂಗ್ ಗೂರ್ಖಾಲ್ಯಾಂಡ್ ಮಾದರಿಯಲ್ಲಿ “ಕೊಡವಲ್ಯಾಂಡ್” ಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಡಿ.18ರಂದು ಗನ್ ಕಾರ್ನಿವಲ್ ತೋಕ್ ನಮ್ಮೆ ನಡೆಯಲಿದೆ. ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು 16ನೇ ವಾರ್ಷಿಕ ಸಾರ್ವಜನಿಕ ಗನ್ ಕಾರ್ನಿವಲ್-ತೋಕ್ ನಮ್ಮೆಯನ್ನು ಮೂರ್ನಾಡ್ ನ ಬಲಂಬೇರಿ ರಸ್ತೆಯ ಬಳಿ ಕಡಿಯತ್ನಾಡ್ ಗಡಿರೇಖೆಯ ಸಮೀಪ ಚೇನಂಡ ಪೃಥ್ವಿ ಅವರ ಕಾಫಿ ಕ್ಯಾಸಲ್ ಕೂರ್ಗ್ ರೆಸಾರ್ಟ್ ನಲ್ಲಿ ಜಾನಪದ ಸಂಭ್ರಮ ಮತ್ತು ಉತ್ಸಾಹದೊಂದಿಗೆ ಆಚರಿಸಲಾಗುತ್ತಿದೆ.

ಬಂದೂಕುಗಳನ್ನು ಹೂವುಗಳಿಂದ ಅಲಂಕರಿಸಲಾಗುತ್ತದೆ, ಮಕ್ಕಳು, ಮಹಿಳೆಯರು ಮತ್ತು ಪುರುಷರಿಗಾಗಿ ಶೂಟಿಂಗ್ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ. ಕೊಡವರು, ಕೊಡವತಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ.

ಬಂದೂಕು ಆದಿಮ ಸಂಜಾತ ಕೊಡವರ ಜನಾಂಗದ ಧಾರ್ಮಿಕ-ಜನಾಂಗೀಯ ಸಂಸ್ಕಾರವಾಗಿದೆ. ತೋಕ್ ಕೊಡವರ ಪ್ರಾಚೀನ ಹೆಮ್ಮೆ, ಹಳೆಯ ಸಂಪ್ರದಾಯದ ಆಚರಣೆಗಳು, ಜಾನಪದ ಕಾನೂನು ವ್ಯವಸ್ಥೆಗಳನ್ನು ಪ್ರದರ್ಶಿಸಲು ಮತ್ತು ಸಂರಕ್ಷಿಸಲು ಪ್ರತಿ ವರ್ಷ ಸಿಎನ್‌ಸಿ ತೋಕ್ ನಮ್ಮೆ ಗನ್ ಕಾರ್ನಿವಲ್ ಅನ್ನು ಆಯೋಜಿಸುತ್ತಿದೆ ಎಂದು ಹೇಳಿದ್ದಾರೆ.

ಗುರುವಾರ ನಡೆಯುವ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುವುದು ಎಂದು ಎನ್.ಯು.ನಾಚಪ್ಪ ತಿಳಿಸಿದ್ದಾರೆ. ಸರ್ವ ಕೊಡವರು ಕೊಡವ ಸಾಂಪ್ರದಾಯಿಕ ಉಡುಪಿನೊಂದಿಗೆ ಗನ್ ಸಹಿತ ಹಾಜರಾಗುವಂತೆ ಕೋರಿದ್ದಾರೆ.

Continue Reading

Kodagu

ಕೊಡಗು ವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಸಂಭ್ರಮದೊಂದಿಗೆ ಜರುಗಿದ ವಾರ್ಷಿಕ ಕ್ರೀಡಾಕೂಟ

Published

on

ಮಡಿಕೇರಿ : ನಗರದ ಕೊಡಗು ವಿದ್ಯಾಲಯದಲ್ಲಿ ವಾಷಿ೯ಕ ಕ್ರೀಡಾಕೂಟ ವಿದ್ಯಾಥಿ೯, ಶಿಕ್ಷಕರ ಸಂಭ್ರಮದೊಂದಿಗೆ ಜರುಗಿತು

ಕ್ರೀಡೋತ್ಸವದ ಒಲಂಪಿಕ್ ಟಾರ್ಚ್ ನ್ನು ಕೊಡಗು ಹೋಟೇಲ್, ರೆಸಾಟ್೯ ಅಸೋಸಿಯೇಷನ್ ಅಧ್ಯಕ್ಷ ಕುಂಡ್ಯೋಳಂಡ ದಿನೇಶ್ ಕಾರ್ಯಪ್ಪ ಬೆಳಗಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ವೆಂಕಟರಾಜು ಮಾತನಾಡಿ, ಕ್ರೀಡೆಗಳು ಶಾರೀರಿಕ ಆರೋಗ್ಯದ ಜೊತೆಗೆ ಮಾನಸಿಕ ಸ್ಥೈರ್ಯ, ಶಿಸ್ತು ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುತ್ತವೆ ಎಂದು ತಿಳಿಸಿದರು.

ವಿದ್ಯಾರ್ಥಿಗಳು ಸೋಲು–ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಪರಿಶ್ರಮ ಹಾಗೂ ಆತ್ಮವಿಶ್ವಾಸದೊಂದಿಗೆ ಮುಂದುವರಿಯಬೇಕು. ವ್ಯಕ್ತಿತ್ವ ನಿರ್ಮಾಣದಲ್ಲಿ ಗೆಳೆಯರ ಪಾತ್ರ ಮಹತ್ವದ್ದಾಗಿದ್ದು, ವಿಫಲತೆಯನ್ನು ಧೈರ್ಯದಿಂದ ಎದುರಿಸುವುದು ನಾಯಕತ್ವದ ಪ್ರಮುಖ ಗುಣವೆಂದು ಅಭಿಪ್ರಾಯಪಟ್ಟರು.

ಕುಂಡ್ಲೋಳಂಡ ದಿನೇಶ್ ಕಾರ್ಯಪ್ಪ ಮಾತನಾಡಿ ಸಾಮಾಜಿಕ ಮಾಧ್ಯಮಗಳ ಪರಿಣಾಮದಿಂದ ವಿದ್ಯಾರ್ಥಿಗಳು ಎದುರಿಸುತ್ತಿರುವ ಸವಾಲುಗಳು ಹಾಗೂ ವಿದ್ಯಾರ್ಥಿ–ಗುರುಗಳ ನಡುವಿನ ಪರಸ್ಪರ ಗೌರವದಲ್ಲಿ ಉಂಟಾಗುತ್ತಿರುವ ಕುಸಿತದ ಬಗ್ಗೆ ಗಮನ ಸೆಳೆದರು. ಶೈಕ್ಷಣಿಕ ಸಾಧನೆಯಷ್ಟೇ ಜೀವನದಲ್ಲಿ ಯಶಸ್ಸಿಗೆ ಸಾಕಾಗುವುದಿಲ್ಲ ಎಂದು ನೈಜ ಉದಾಹರಣೆಗಳ ಮೂಲಕ ವಿವರಿಸಿದ ದಿನೇಶ್ ಕಾಯ೯ಪ್ಪ , ಜೀವನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅಪಾರ ಅವಕಾಶಗಳಿವೆ ಎಂದು ತಿಳಿಸಿದರು. ಉತ್ತಮ ಸ್ನೇಹಿತರ ಆಯ್ಕೆ ಹಾಗೂ ಧನಾತ್ಮಕ ಮನೋಭಾವ ಬೆಳೆಸಿಕೊಳ್ಳುವ ಅಗತ್ಯವನ್ನು ಅವರು ಪ್ರತಿಪಾದಿಸಿದರು.

ಕೊಡಗು ವಿದ್ಯಾಲಯದ ಪ್ರಾಂಶುಪಾಲರಾದ ಕೆ.ಎಸ್.ಸುಮಿತ್ರಾ ಮಾತನಾಡಿ, ಶಿಕ್ಷಕರ ನಿಷ್ಠಾವಂತ ಸೇವೆ, ಪೋಷಕರು, ಆಡಳಿತ ಮಂಡಳಿಯ ಸಹಕಾರದಿಂದಾಗಿ ಸಮಗ್ರ ಅಭಿವೃದ್ಧಿ ಸಾಧ್ಯವಾಗಿದೆ ಎಂದು ಪ್ರಶಂಸಿಸಿದರು. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಗುಣಮಟ್ಟದ ಶಿಕ್ಷಣ, ಶಿಸ್ತು, ಮೌಲ್ಯಾಧಾರಿತ ಬೋಧನೆ ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಇನ್ನಷ್ಟು ಕಾರ್ಯಕ್ರಮಗಳನ್ನು ರೂಪಿಸಲಾಗುವುದೆಂದು ಅವರು ಭರವಸೆ ನೀಡಿದರು.

2025 ರಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ ವೆಂಕಟರಾಜ , ದಿನೇಶ್ ಕಾರ್ಯಪ್ಪ ನೇತ್ರಾ ಗಣಪತಿ ಬಹುಮಾನ ಮತ್ತು ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಜಿಲ್ಲಾಧಿಕಾರಿಗಳು ಕ್ರೀಡಾಕೂಟ, ಫುಡ್ ಸ್ಟಾಲ್ಗಳ ಉದ್ಘಾಟನೆಯನ್ನು ನೆರವೇರಿಸಿದರು. ಪೋಷಕರಿಗಾಗಿ ವಿಶೇಷ ಫನ್ ಸ್ಪೋರ್ಟ್ಸ್‌ಗಳನ್ನು ಏರ್ಪಡಿಸಿದ್ದರು.

ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ , ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು. ಓವರ್ಆಲ್ ಚಾಂಪಿಯನ್ ಪ್ರಶಸ್ತಿಯನ್ನು ಬಾಪು ಗ್ರೂಪ್ ಪಡೆದುಕೊಂಡಿತು.

ಶಿಕ್ಷಕಿಯರಾದ ಅಂಜನ್ ಪಿ.ಎನ್. ಸೋನಾಮುತ್ತಮ್ಮ ವಿದ್ಯಾರ್ಥಿಗಳಾದ ಯಶೀಕ ಶೆಟ್ಟಿ ಪ್ರಣವ್ ಪಿ. ನಿರೂಪಿಸಿದರು. ಅತಿಥಿಗಳ ಪರಿಚಯವನ್ನು ವಿದ್ಯಾರ್ಥಿ ತ್ರಿನಾದ್ ,ಶಿಕ್ಷಕಿ ಸೋನಾಮುತ್ತಮ್ಮ ನೆರವೇರಿಸಿದರು. ವಿದ್ಯಾಥಿ೯ಗಳಾದ ಜನ್ಯ ಸಿ.ಟಿ. ಸ್ವಾಗತಿಸಿ, ಕೌಶಲ್ ಸಿ.ಪಿ. ವಂದಿಸಿದರು.

ಕೊಡಗು ವಿದ್ಯಾಲಯದ ಆಡಳಿತ ಮಂಡಳಿ ಉಪಾಧ್ಯಕ್ಷೆ ಅಕಾಡೆಮಿಕ್ ಅಧ್ಯಕ್ಷೆ ಊರ್ವಶಿ ಮುದ್ದಯ್ಯ, ಕ್ರೀಡಾ ಚೇರ್ ಪರ್ಸನ್ ರಘು ಮಾದಪ್ಪ, ಸಲಹಾ ಮಂಡಳಿ ಸದಸ್ಯ ಕುಮಾರ್ ಸುಬ್ಬಯ್ಯ, ಕಾರ್ಯದರ್ಶಿ ಬಿ.ಎಸ್. ಪೂಣಚ್ಚ, ಸಮಿತಿ ಸದಸ್ಯರಾದ ಗುರುದತ್ತ್ ನಿಯತ ದೇವಯ್ಯ ಸೋಮಣ್ಣ,ಪ್ರಾಂಶುಪಾಲರಾದ ಸುಮಿತ್ರ ಕೆ.ಎಸ್ ಆಡಳಿತ ನಿರ್ವಹಣಾಧಿಕಾರಿ ರವಿ ಪಿ. ಮೇಜರ್ ದಾಮೋದರ್ , ಆಪರ್ಚುನಿಟಿ ಶಾಲೆಯ ಸಲಹೆಗಾರ್ತಿ ಮೀನಾ ಕಾರ್ಯಪ್ಪ, ಕಾರ್ಯದರ್ಶಿ ವೀಣಾ ಚಂಗಪ್ಪ ಸಲಹಾ ಮಂಡಳಿಯ ಸದಸ್ಯೆ ಪುಷ್ಪಾ ಕುಟ್ಟಣ್ಣ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳ ಪಥಸಂಚಲನ ಬ್ಯಾಂಡ್ ಪ್ರದಶ೯ನ, ಸ್ವಾಗತ ನೃತ್ಯ ಕಾರ್ಯಕ್ರಮಕ್ಕೆ ಮೆರಗು ನೀಡಿತು. ಕೊಡಗು ವಿದ್ಯಾಲಯದ ಆಪರ್ಚುನಿಟಿ ಶಾಲೆಯ ಮಕ್ಕಳ ನೃತ್ಯ ಪ್ರದರ್ಶನವು ಎಲ್ಲರ ಮನಸೆಳೆಯಿತು.

Continue Reading

Trending

error: Content is protected !!