National - International
ಮಹಾಕುಂಭ ಮೇಳ ದರ್ಶನಕ್ಕೆ ಫ್ಲೈಟ್ ನಲ್ಲಿ ಹೋಗುವ ಟ್ರಾವೆಲ್ ಪ್ಲಾನ್ ಇಲ್ಲಿದೆ..

Bengaluru to Prayagraj Travel Plan by Flight : 144 ವರ್ಷಕ್ಕೆ ಒಮ್ಮೆ ನಡೆಯುವ ಮಹಾಕುಂಭ ಮೇಳ ದರ್ಶನವು ಪುಣ್ಯ ಎನ್ನಬಹುದು. ಜಗತ್ತಿನ ಅತ್ಯಂತ ದೊಡ್ಡ ಧಾರ್ಮಿಕ ಉತ್ಸವವಾಗಿರುವ ಈ ಮಹಾಕುಂಭ ಮೇಳ ದರ್ಶನಕ್ಕೆ ಕರ್ನಾಟಕದಿಂದಲೂ ಪ್ರತಿನಿತ್ಯವೂ ಸಾವಿರಾರು ಜನ ಪ್ರಯಾಣ ಬೆಳೆಸುತ್ತಿದ್ದಾರೆ.
ಈಗಾಗಲೇ ಹಲವು ಭಕ್ತರು ಫ್ಲೈಟ್ ಮುಕಾಂತರ ಪ್ರಯಾಣಿಸಲು ಟಿಕೆಟ್ ಬುಕ್ ಮಾಡಿಕೊಂಡಿದ್ದು, ಎಲ್ಲಾ ಫ್ಲೈಟ್ ಟಿಕೆಟ್ ಗಳು ಬುಕ್ ಆಗಿರುವುದರಿಂದ ಹಲವರು ಫ್ಲೈಟ್ ಪ್ರಯಾಣದ ಟಿಕೆಟ್ ಗಾಗಿ ಒದ್ದಾಡುತ್ತಿದ್ದಾರೆ.
ಸದ್ಯಕ್ಕೆ ಪ್ರತಿದಿನವೂ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಿಂದ ಪ್ರಯಾಗರಾಜ್ ವಿಮಾನ ನಿಲ್ದಾಣಕ್ಕೆ 3 ವಿಮಾನಗಳ ಸೌಲಭ್ಯವಿದ್ದು, ಈ ಮುಂದೆ ಬೆಂಗಳೂರು ನಿಂದ ಪ್ರಯಾಗರಾಜ್ ಪ್ರಯಾಣಕ್ಕೆ ಕೆಲವು ದಿನಗಳವರೆಗೆ ಟಿಕೆಟ್ ಸಿಗಿವುದು ಬಹಳ ಕಷ್ಟ. ಇದಕ್ಕೆ ಪರ್ಯಾಯವಾಗಿ ಇರುವ ಆಯ್ಕೆಗಳ ವಿವರ ಇಲ್ಲಿದೆ..
ಪ್ರಯಾಗರಾಜ್ ಗೆ ಪ್ರಯಾಣ ಬೆಳೆಸಲು ಪರ್ಯಾಯ ಆಯ್ಕೆ ಇಲ್ಲಿದೆ…
ಸದ್ಯಕ್ಕೆ ಪೆಬ್ರವರಿ 26 ರವರೆಗೂ ಪ್ರಯಾಗ್ ರಾಜ್ ಗೆ ತೆರಳುವ ವಿಮಾನಗಳು ಪುಲ್ ಆಗಿರುವುದರಿಂದ ನೀವು ವಾರಾಣಸಿಗೆ ತೆರಳಿ ಅಲ್ಲಿಂದ ಪ್ರಯಾಗರಾಜ್ ಗೆ ಹೋಗಬಹುದು. ಏಕೆಂದರೆ ಪ್ರತಿದಿನ ಕೆಂಪೇಗೌಡ ವಿಮಾನ ನಿಲ್ದಾಣದಿನ ವಾರಾಣಸಿಗೆ 15 ವಿಮಾನಗಳ ಸೌಲಭ್ಯವಿದೆ. ವಾರಾಣಸಿಯಿಂದ ಪ್ರಯಾಗರಾಜ್ ಕೇವಲ 136km ಇರುವುದರಿಂದ ಸುಲಭವಾಗಿ ಹೋಗಬಹುದು. ಬೆಂಗಳೂರುನಿಂದ ವಾರಾಣಸಿಗೆ ಟಿಕೆಟ್ ದರ 20ಸಾವಿರ ರೂ. ಯಿಂದ 28 ಸಾವಿರ ರೂ. ವರೆಗೆ ಇದೆ.
ಬೆಂಗಳೂರು to ಲಕ್ನೋ | ಲಕ್ನೋ to ಪ್ರಯಾಗರಾಜ್ | Lucknow to Prayagraj :
ಬೆಂಗಳೂರು ನಿಂದ ನೀವು ಲಕ್ನೋ ಗೆ ವಿಮಾನದಲ್ಲಿ ಪ್ರಯಾಣಿಸಲು ಅವಕಾಶವಿದೆ. ಏಕೆಂದರೆ ಪ್ರತಿದಿನ ಬೆಂಗಳೂರು ನಿಂದ ಲಕ್ನೋ ಗೆ 22 ವಿಮಾನಗಳು ಹಾರಾಡುತ್ತಿದ್ದು, ಟಿಕೆಟ್ ದರವು 16 ಸಾವಿರ ರೂ. ಯಿಂದ 22 ಸಾವಿರ ರೂ. ವರೆಗೆ ಇದೆ. ನಂತರ ಲಕ್ನೋ ನಿಂದ ಪ್ರಯಾಗರಾಜ್ ಗೆ ಕೇವಲ 233km ಇದ್ದು, ಸುಲಭವಾಗಿ ಬಸ್ ಮುಕಾಂತರ ಹೋಗಬಹುದು.
National - International
ಮನಮೋಹನ ಸಿಂಗ್ ಒಬ್ಬ ಅದ್ಭುತ ಅರ್ಥಶಾಸ್ತ್ರಜ್ಞ: ಅಮರ್ತ್ಯ ಸೇನ್ ಬಣ್ಣನೆ

ನವದೆಹಲಿ: ಮಾಜಿ ಪ್ರಧಾನ ಮಂತ್ರಿ ಮನಮೋಹನ ಸಿಂಗ್ ಅವರೊಬ್ಬರು ಉತ್ತಮ ರಾಜಕೀಯ ನಾಯಕರಾಗಿ ಗುರುತಿಸಿಕೊಂಡಿದ್ದವರು. ಜೊತೆಗೆ ಜಗತ್ತಿನ ಅಗತ್ಯತೆಗಳನ್ನು ಅರ್ಥಮಾಡಿಕೊಂಡಿದ್ದ ಓರ್ವ ಅದ್ಭುತ ಅರ್ಥಶಾಸ್ತ್ರಜ್ಞ ಎಂದು ನೋಬೆಲ್ ಪ್ರಶಸ್ತಿ ಪುರಸ್ಕೃತರಾದ ಅಮರ್ತ್ಯ ಸೇನ್ ಬಣ್ಣಿಸಿದ್ದಾರೆ.
ಪಶ್ಚಿಮ ಬಂಗಾಳದ ಬಿರಭೂಮ್‌ನಲ್ಲಿ ಶನಿವಾರ ಮಾತನಾಡಿದ ಅವರು, ನಾನು ಮತ್ತು ಮನಮೋಹನ ಸಿಂಗ್ ಕೇಂಬ್ರಿಡ್ಜ್‌ನಲ್ಲಿ ಒಟ್ಟಿಗೆ ವ್ಯಾಸಾಂಗ ಮಾಡಿದ್ದೇವು. ಆ ವೇಳೆ ಉತ್ತಮ ಸ್ನೇಹಿತರಾದ್ದೆವು. ನಾವಿಬ್ಬರೂ ವಿದ್ಯಾರ್ಥಿಗಳಾಗಿದ್ದಾಗ ಹಾಗೂ ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಸಹೋದ್ಯೋಗಿಗಳಾಗಿದ್ದಾಗಿಂದಲೂ ಹಲವಾರು ವಿಚಾರಗಳ ಬಗ್ಗೆ ಸುದೀರ್ಘವಾಗಿ ಚರ್ಚೆ ಮಾಡಿದ್ದೇವು ಎಂದು ನೆನದರು.
ಸಿಂಗ್ ಅವರು ಗೌತಮ ಬುದ್ಧ ವಿವರಿಸಿದ್ದ ವಜ್ರಚ್ಛೇದಿಕ ಪ್ರಜ್ಞಾಪರಮಿತಾ ಸಂದೇಶದ ಸಾರವನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದವರು. ಮನಮೋಹನ ಸಿಂಗ್ ಸಿಖ್ ಧರ್ಮದವರಾಗಿದ್ದರೂ ಸಹಾ ಗೌತಮ ಬುದ್ಧ, ಇತರ ಧರ್ಮಗಳ ಸಂದೇಶಗಳನ್ನು ಜನರಿಗೆ ತಲುಪಿಸುವಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ ಎಂದರು.
ನಾನು ಮನಮೋಹನ ಸಿಂಗ್ ಅವರನ್ನು ತುಂಬಾ ಇಷ್ಟಪಟ್ಟಿದ್ದೇನೆ, ಸ್ನೇಹಿತ ಎಂದು ಹೀಗೆ ಹೇಳುತ್ತಿಲ್ಲ ಎಂದು ಅಮರ್ತ್ಯ ಸೇನ್ ವಿವರಿಸಿದರು.
National - International
ರಾಜ್ಯ ಉಚ್ಛ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಮೂರ್ತಿಯಾಗಿ ನದಾಫ್ ನೇಮಕ

ನವದೆಹಲಿ: ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಮೂರ್ತಿಯಾಗಿ ವಕೀಲ ತಾಜ್ ಅಲಿ ಮೌಲಾಸಾಬ್ ನದಾಫ್ ಅವರನ್ನು ನೇಮಿಸುವ ಅನಮೋದನೆಗೆ ಕೇಂದ್ರ ಸರ್ಕಾರ ಅಸ್ತು ಎಂದಿದೆ.
ನದಾಫ್ ಅವರನ್ನು ಹೆಚ್ಚುವರಿ ನ್ಯಾಯಾಮೂರ್ತಿಯಾಗಿ ನೇಮಿಸಲು ಸುಪ್ರೀಂ ಕೋರ್ಟ್ ಕೊಲಿಜಿಯಂ 2023ರ 19 ರಂದು ಶಿಫಾರಸ್ಸು ಮಾಡಿತ್ತು.
ನದಾಫ್ ಅವರ ಅವಧಿ ಎರಡು ವರ್ಷಗಳಾಗಿದೆ. ಹೈಕೋರ್ಟ್‌ನಲ್ಲಿ 62 ನ್ಯಾಯಮೂರ್ತಿ ಹುದ್ದೆಗಳ ಪೈಕಿ, 49 ಹುದ್ದೆಗಳು ಈಗಾಗಲೇ ಭರ್ತಿಯಾಗಿವೆ.
National - International
ಬಜೆಟ್ ಅಧಿವೇಶನದ ಮೊದಲ ಹಂತದ ಕಲಾಪ: ಮಾ.10 ಕ್ಕೆ ಮುಂದೂಡಿಕೆ

ನವದೆಹಲಿ: ಬಜೆಟ್ ಅಧಿವೇಶನದ ಮೊದಲ ಹಂತದ ಕಲಾಪ ಶೇ.112ರಷ್ಟು ಫಲಭದ್ರವಾಗಿದ್ದು, ಸದನದ ಕಾರ್ಯಕಲಾಪಗಳನ್ನು ಮಾರ್ಚ್ 10ವರೆಗೆ ಮುಂದೂಡಲಾಗಿದೆ ಎಂದು ಸ್ಪೀಕರ್ ಓಂ ಬಿರ್ಲಾ ಘೋಷಿಸಿದರು.
ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯದ ಮೇಲೆ, 17 ಗಂಟೆ 23ನಿಮಿಷ ಚರ್ಚೆ ನಡೆದಿದೆ. ಬಜೆಟ್ ಮೇಲೆ 170 ಸದಸ್ಯರು ಮಾತನಾಡಿದ್ದಾರೆ ಎಂದು ಮಾಹಿತಿ ನೀಡಿದರು.
ಇದಕ್ಕೂ ಮುನ್ನ ಗುಜರಾತ್ ಉದ್ಯಮಿಯೊಬ್ಬರಿಗೆ ಯೋಜನೆ ವಹಿಸುವ ಸಂಬಂಧ ವಿರೋಧ ಪಕ್ಷಗಳು ಪ್ರತಿಭಟಿಸಿದ್ದರಿಂದ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಗಿತ್ತು.
ಕಲಾಪ ಆರಂಭವಾಗುತ್ತಿದ್ದಂತೆಯೇ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆದಾಯ ತೆರಿಗೆ ಮಸೂದೆ ಮಂಡಿಸಿದರು.
-
Mysore20 hours ago
ಲೋಕಾಯುಕ್ತ ಬಲೆಗೆ ಬಿದ್ದ ಬೆಟ್ಟದಪುರ ಸಬ್ ಇನ್ಸ್ಪೆಕ್ಟರ್ ಶಿವಶಂಕರ್
-
Kodagu20 hours ago
ಸುಗ್ರಿವಾಜ್ಞೆ ಅನುಷ್ಠಾನಕ್ಕೂ ಮೊದಲು ಬಡವರ ಸಾಲಮನ್ನಾ ಮಾಡಲಿ: ಯುವ ಜೆಡಿಎಸ್ ಆಗ್ರಹ
-
Kodagu23 hours ago
ಯುವ ಕಾಂಗ್ರೆಸ್ಗೆ ನೀಡಿದ್ದ ರಾಜೀನಾಮೆ ಹಿಂಪಡೆದ ಅನೂಪ್ ಕುಮಾರ್
-
Mysore20 hours ago
ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಆಡಳಿತದಲ್ಲಿ ಬಳಕೆ ಮಾಡಬೇಕು: ಪುರುಷೋತ್ತಮ ಬಿಳಿಮಲೆ
-
Mandya21 hours ago
ಸಕ್ಕರೆ ಕಾರ್ಖಾನೆಗಳು ರೈತರಿಗೆ 14 ದಿನದೊಳಗಾಗಿ ಹಣ ಪಾವತಿ ಮಾಡಿ: ಡಾ.ಕುಮಾರ
-
Mandya20 hours ago
ಮತ್ತತ್ತಿ: ಕಾವೇರಿ ನದಿಯಲ್ಲಿ ಮುಳುಗಿ ಯುವತಿಯರು ಸಾ**ವು
-
Tech13 hours ago
ಅತ್ಯಂತ ಶಕ್ತಿಶಾಲಿ ಕ್ಯಾಮೆರಾ ಹೊಂದಿರುವ ಮಧ್ಯಮ ಬೆಲೆಯ ವಿವೋ ಕಂಪನಿಯ Vivo V50 ಹೊಸ ಫೋನ್ ಬಿಡುಗಡೆ : ಬೆಲೆ ಎಷ್ಟು?
-
Hassan18 hours ago
ಹಾಸನ ವಿಮಾನ ನಿಲ್ದಾಣದ ಬಗ್ಗೆ ಸುದೀರ್ಘ ಚರ್ಚೆ ಮಾಡಿದ್ದೇವೆ: ಎಚ್ಡಿ ಕುಮಾರಸ್ವಾಮಿ