Connect with us

Manglore

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ನಾಲ್ವರು ಯ್ಯೂಟ್ಯೂಬರ್‌ಗಳಿಗೆ ಅಪರಿಚಿತರಿಂದ ಹಲ್ಲೆ- ಉದ್ವಿಗ್ನ ಸ್ಥಿತಿ ನಿರ್ಮಾಣ

Published

on

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ನಾಲ್ವರು ಯ್ಯೂಟ್ಯೂಬರ್‌ಗಳ ಮೇಲೆ ಅಪರಿಚಿತರು ಹಲ್ಲೆ ನಡೆಸಿದ ಪರಿಣಾಮ ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾದ ಘಟನೆ ಬುಧವಾರ ಸಂಜೆ ನಡೆದಿದೆ.

ಅಜಯ್‌ ಅಂಚನ್‌, ಅಭಿಷೇಕ್‌, ವಿಜಯ್‌ ಮತ್ತು ಇನ್ನೋರ್ವರು ಹಲ್ಲೆಗೆ ಒಳಗಾದ ಯ್ಯೂಟ್ಯೂಬರ್ ಎಂದು ತಿಳಿದುಬಂದಿದೆ.

ಅಪರಿಚಿತರು ಯೂಟ್ಯೂಬರ್‌ಗಳಿಗೆ ಹಲ್ಲೆ ನಡೆಸಿರುವ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಹಲ್ಲೆಗೊಳಗಾದ ಯೂಟ್ಯೂಬರ್ ಗಳು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಪೊಲೀಸರು ಸ್ಥಳಕ್ಕೆ ಬರುತ್ತಿದ್ದಂತೆ ಹಲ್ಲೆ ನಡೆಸಿದವರು ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ. ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು, ಭಾರೀ ಜನ ಜಮಾಯಿಸಿದ್ದಾರೆ. ಪೊಲೀಸರು ಸ್ಥಳದಲ್ಲಿ ಅಹಿತಕರ ಘಟನೆ ನಡೆಯದಂತೆ ಬಂದೋಬಸ್ತ್ ಮಾಡಿದ್ದಾರೆ.

Continue Reading

Manglore

ಉಳ್ಳಾಲ: 14ವರ್ಷಗಳ ಬಳಿಕ ವಾರೆಂಟ್ ಆರೋಪಿ ಅರೆಸ್ಟ್

Published

on

ಉಳ್ಳಾಲ: ನ್ಯಾಯಾಲಯ ಎಲ್‌ಪಿ‌ಸಿ ವಾರಂಟ್ ಹೊರಡಿಸಿದ್ದ ಆರೋಪಿಯನ್ನು 14ವರ್ಷಗಳ ಬಳಿಕ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು ಉಳ್ಳಾಲದ ಮುಕ್ಕಚೇರಿ ನಿವಾಸಿ ಆರೋಪಿ ಮೊಹಮ್ಮದ್ ಸಂಶೀರ್ ಬಂಧಿತ ಆರೋಪಿ.

ಠಾಣಾ ಮೊ.ನಂ. 312/2011 ಕಲಂ 8(c) (ii) r/w 20(b) NDPS ACT ಹಾಗೂ  JMFC 2ನೇ ನ್ಯಾಯಾಲಯದ CC ನಂ 1757/13 ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ. ಈತನನ್ನು ಪತ್ತೆ ಹಚ್ಚಿರುವ ಪೊಲೀಸರು ಮುಂದಿನ ಕ್ರಮ ಕೈಗೊಳ್ಳಲಾಗಿದೆ.

Continue Reading

Manglore

ಮಂಗಳೂರು: ಸೊಸೆಯೊಂದಿಗೆ ಮಾವ ಅನುಚಿತವಾಗಿ ವರ್ತಿಸಿ ಪುತ್ರನೊಂದಿಗೆ ಸೇರಿ ಹಲ್ಲೆ ಆರೋಪ- ದೂರು ದಾಖಲು

Published

on

ಮಂಗಳೂರು: ಮಾವ ತನ್ನೊಂದಿಗೆ ಅನುಚಿತವಾಗಿ ವರ್ತಿಸಿ ಹಲ್ಲೆಗೈದಿದ್ದಲ್ಲದೆ, ಪತಿಯೂ ಅವರಿಗೇ ಪ್ರೋತ್ಸಾಹಿಸಿ ಚಿಕಿತ್ಸೆ ನೀಡಲು ಹಿಂದೇಟು ಹಾಕಿದ್ದಾರೆಂದು ಆರೋಪಿಸಿ ವಿವಾಹಿತ ಮಹಿಳೆಯೋರ್ವರು ಸುಳ್ಯ ಠಾಣೆಗೆ ಪ್ರಕರಣದಾಖಲಾಗಿದೆ.

ಸುಳ್ಯ ತಾಲೂಕಿನ ಕಲ್ಲುಗುಂಡಿ ನಿವಾಸಿ ಸಾಹಿತ್ಯಾ ರೈ(27)ಎಂಬವರು ಫೆ.2ರಂದು ರಾತ್ರಿ 7.30ಕ್ಕೆ ಮನೆಯಲ್ಲಿ ಕೋಣೆಯಲ್ಲಿದ್ದರು. ಈ ವೇಳೆ ಮಾವ ನಿತ್ಯಾನಂದ ರೈ(58) ಅಕ್ರಮವಾಗಿ ಪ್ರವೇಶಿಸಿ ಅನುಚಿತವಾಗಿ ವರ್ತಿಸಿ, ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ. ತಕ್ಷಣ ಅವರು ತಪ್ಪಿಸಿಕೊಂಡು ಹೊರಗೆ ಬಂದಾಗ ಪತಿಯೂ ಸಹ ತಂದೆಯ ಪರವಾಗಿ ಮಾತನಾಡಿ ಇಬ್ಬರೂ ಹಲ್ಲೆಗೈದು ಮೂಗಿಗೆ ಕಚ್ಚಿ ಚಿಕಿತ್ಸೆ ಕೊಡಿಸಲು ನಿರಾಕರಿಸಿರುತ್ತಾರೆ.

ಬಳಿಕ ಸಾಹಿತ್ಯ ರೈಯವರ ತಂದೆ–ತಾಯಿ ಅವರನ್ನು ಸಂಪಾಜೆ ಸರಕಾರಿ ಆಸ್ಪತ್ರೆಗೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಬಗ್ಗೆ ನೀಡಿರುವ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ZERO FIR NO 01/2026 ಕಲಂ:85, 74, 115(2), 117(2), 351(2) ಜೊತೆಗೆ 3(5)BNS ನಂತೆ ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ಘಟನಾ ಸ್ಥಳದ ಆಧಾರದಲ್ಲಿ ಸುಳ್ಯ ಠಾಣೆಗೆ ಪ್ರಕರಣವನ್ನು ವರ್ಗಾಯಿಸಿ ತನಿಖೆ ನಡೆಸಲಾಗುತ್ತಿದೆ.

Continue Reading

Manglore

ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗೆ ‘ ಇನ್ಸ್ಟಿಟ್ಯೂಷನ್ಸ್ ಆಫ್ ಲೆಗಸಿ ‘ ಪ್ರಶಸ್ತಿ

Published

on

ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಮುನ್ನಡೆಯುತ್ತಿರುವ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಕಾರ್ಯ ಮತ್ತು ಸಾಧನೆಯನ್ನು ಗುರುತಿಸಿ ಬೆಂಗಳೂರಿನ ಅಕಾಡೆಮಿಕ್ ಇನ್‌ಸೈಟ್ಸ್ ವತಿಯಿಂದ ‘ ‘ ‘ಇನ್ಸ್ಟಿಟ್ಯೂಷನ್ಸ್ ಆಫ್ ಲೆಗಸಿ ‘ ಪ್ರಶಸ್ತಿ ನೀಡಿ ಗೌರವಿಸಿದೆ.

ಬೆಂಗಳೂರಿನಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಉಜಿರೆಯ ಎಸ್.ಡಿ.ಎಂ (ಸ್ವಾಯತ್ತ) ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ್ ಪಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಪರವಾಗಿ ಪ್ರಶಸ್ತಿ ಸ್ವೀಕಾರ ಮಾಡಿದರು.

ಪ್ರಶಸ್ತಿ ನೀಡಿದ ಬೆಂಗಳೂರಿನ ಅಕಾಡೆಮಿಕ್ ಇನ್‌ಸೈಟ್ಸ್ ಸಂಸ್ಥೆಯೂ, ಹಲವು ದಶಕಗಳಿಂದ ಶಿಕ್ಷಣ ಮತ್ತು ತತ್ಸಂಬಂಧಿ ಕ್ಷೇತ್ರಗಳ ಬೆಳವಣಿಗೆಗೆ ಪವಿಶ್ರಾಂತವಾಗಿ ಸೇವೆ ಸಲ್ಲಿಸುತ್ತಿರುವ ಎಸ್ ಡಿ ಎಮ್ ಶಿಕ್ಷಣ ಸಂಸ್ಥೆಯ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.

ಪ್ರಶಸ್ತಿಗೆ ಪಾತ್ರವಾದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಮತ್ತು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಡಿ. ವೀರೇಂದ್ರ ಹೆಗ್ಗಡೆ ಅಭಿನಂದನೆಗಳನ್ನು ತಿಳಿಸಿದ್ದಾರೆ. ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸೇರಿದಂತೆ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್., ಪ್ರಾಚಾರ್ಯರು, ಪೋಷಕರು ಹಾಗು ವಿದ್ಯಾರ್ಥಿಗಳು ಧನ್ಯವಾದಗಳನ್ನು ತಿಳಿಸಿರುತ್ತಾರೆ.

Continue Reading

Trending

error: Content is protected !!