Mandya
ಬಸವಣ್ಣನವರ ಆಧ್ಯಾತ್ಮಿಕ ಮೌಲ್ಯ ಚಿಂತನೆ ಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ಡಾ.ಕುಮಾರ

ಮಂಡ್ಯ: ಬಸವಣ್ಣನವರು ಜ್ಞಾನ ಭಂಡಾರ ವಿದ್ದಂತೆ ಅವರ ಚಿಂತನೆ ಮತ್ತು ಮೌಲ್ಯಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾಕುಮಾರ ತಿಳಿಸಿದರು.
ಅವರು ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ನಡೆದ ಬಸವಣ್ಣ ಮತ್ತು ಹೇಮರೆಡ್ಡಿ ಮಲ್ಲಮ್ಮ ದಿನಾಚರಣೆ ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿ, ಪ್ರತಿ ಮನೆಯಲ್ಲಿ ಮಕ್ಕಳಿಗೆ ಬಸವಣ್ಣನವರ ವಚನಗಳನ್ನು ತಿಳಿಸಿ ವಚನಗಳ ಮೌಲ್ಯಗಳನ್ನು ಮಕ್ಕಳ ಜೀವನದಲ್ಲಿ ರೂಡಿಸಬೇಕು ಎಂದರು
ಜಗಜ್ಯೋತಿ ಬಸವಣ್ಣನವರ ಆಧ್ಯಾತ್ಮಿಕ ತತ್ವ ಆದರ್ಶ ಗಳ ಬಗ್ಗೆ ಪ್ರತಿಯೊಬ್ಬರು ಅರಿತು ಕೊಳ್ಳಬೇಕು, ಅವರ ಬಗ್ಗೆ ತಿಳಿಯಲು ಕೇವಲ ತರಗತಿಗಳಲ್ಲಿ ಆಯ್ಕೆ ಮಾಡಿರುವ ಪಾಠ ಗಳಲ್ಲಿ ಒಂದು ಎರಡು ಪುಟಗಳಲ್ಲಿ ತಿಳಿಯಲು ಸಾಧ್ಯವಿಲ್ಲ ಕಾರಣ ಅವರೊಬ್ಬ ಜ್ಞಾನ ಭಂಡಾರ ವಿದ್ದಂತೆ.
ಈಗಿನ ಕಾಲದಲ್ಲಿ ಸಮಾಜವನ್ನು ಎದುರು ಹಾಕಿಕೊಂಡು ಬದುಕುವುದು ಸುಲಭ. ಕಾರಣ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಲ್ಲಿ ವಿದ್ಯಾವಂತರಾಗಿದ್ದಾರೆ, ಆದರೆ ಬಸವಣ್ಣನವರು ಅಂದಿನ ಕಾಲದಲ್ಲೇ ಜಾತಿ ಪದ್ಧತಿಯನ್ನು ವಿರೋಧಿಸಿ ಸಮಾಜವನ್ನು ಎದುರು ಹಾಕಿಕೊಂಡು ಜಾತಿ ಪದ್ಧತಿಯನ್ನು ಹೋಗಲಾಡಿಸಲು ಪ್ರತಿಯೊಬ್ಬರಿಗೂ ವಚನಗಳ ಮೂಲಕ ವಿಚಾರ ವಿನಿಮಯ ಮಾಡುತ್ತಿದ್ದ ಮಹಾನ್ ಶ್ರೇಷ್ಠರು.
ದೇವಾಲಯಕ್ಕೆ ಹೋಗಿ ಕೈ ಮುಗಿದು ಕೊಂಡು ಬಂದರೆ ಸಾಲದು, ನಾವು ಮಾಡುವಂತಹ ಕೆಲಸ ಕಾರ್ಯದಲ್ಲಿ ದೇವರನ್ನು ಕಾಣಬೇಕು. ಬಸವಣ್ಣನವರ ನುಡಿಯಂತೆ ದೇಹವೇ ದೇಗುಲ, ಶಿರವೇ ಕಳಸ ಎಂಬ ನುಡಿಯನ್ನು ಪಾಲಿಸಬೇಕು. ಮಾನವೀಯತೆಗಿಂತ ದೊಡ್ಡದ್ದು ಯಾವುದು ಇಲ್ಲ ಎಂಬ ಸಂದೇಶವನ್ನು ಇಡೀ ಜಗತ್ತಿಗೆ ನೀಡಿದವರು ಬಸವಣ್ಣ ನವರು ಎಂದರು.
ಸಾಂಸ್ಕೃತಿಕ ಹರಿಕಾರರಾದ ಬಸವಣ್ಣನವರ ವಚನಗಳು ಕರ್ನಾಟಕಕ್ಕೆ ಮಾತ್ರ ಸೀಮಿತವಾಗದೇ ಅವರು ನೀಡಿದ ವಚನಗಳ ಪುಸ್ತಕಗಳನ್ನು ಜಗತ್ತಿನಾದ್ಯಂತ ನೋಡಬಹುದು. ಕಾಯಕವೇ ಕೈಲಾಸ ಎಂಬ ತತ್ವವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು.
ಬಸವಣ್ಣನವರ ಅನುಭವ ಮಂಟಪದಲ್ಲಿ ಲಕ್ಷಾಂತರ ಜನರು ಸೇರಿ ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದರು. ಹಾಗೂ ಅನ್ನ ದಾಸೋಹ ಸಹ ನಡೆಸಲಾಗುತ್ತಿತ್ತು. ಜ್ಞಾನ ಮತ್ತು ಅನ್ನ ದಾಸೋಹ ನಡೆಸುವುದರ ಜೊತೆಗೆ ಜನರಿಗೆ ಅರ್ಥವಾಗುವ ಸರಳವಾಗಿ ವಚನಗಳ ಮೂಲಕ ಜೀವನದ ಸಂದೇಶಗಳನ್ನು ನೀಡಿದರು. ಅವರು ನೀಡಿರುವ ವಚನಗಳು ಇಂದಿಗೂ ಪ್ರಸ್ತುತ ಎಂದರು.
ಮಹಾ ಶರಣೆ ಹೇಮರೆಡ್ಡಿ ಮಲ್ಲಮ್ಮ ಅವರು ಸಾಂಪ್ರದಾಯಿಕ ಕುಟುಂಬದಲ್ಲಿ ಜನಿಸಿ ಮದುವೆ ಆದ ನಂತರ ತನ್ನ ಸಂಸಾರದಲ್ಲಿ ಅಥವಾ ಸುತ್ತಮುತ್ತ ಪರಿಸರದಲ್ಲಿ ಕಂಡಂತಹ ತೊಡಕುಗಳನ್ನು, ಸಮಸ್ಯೆಗಳನ್ನು ಆಧ್ಯಾತ್ಮಿಕ ನೆಲಗಟ್ಟೆಯಲ್ಲೆ ಮನ ಪರಿವರ್ತನೆ ಮಾಡುತ್ತಿದ್ದರು, ಸ್ವತಃ ಆಕೆಯ ಕುಟುಂಬದಲ್ಲಿ ಇದ್ದಂತಹ ಮೈದುನನ ಮನ ಪರಿವರ್ತನೆ ಮಾಡಿದರು ಎಂದು ಹೇಳಿದರು.
….
ಸಂತ ಶಿಶುನಾಳ ಷರೀಫ್ ರ ಶಿಷ್ಯ ಆಗಿದ್ದರು, ತನ್ನ ಗುರುಗಳ ಕೈಯಲ್ಲಿ ಹೋಗಳಿಸಿ ಕೊಂಡಂತಹ ಶಿಷ್ಯೆ ಹೇಮರೆಡ್ಡಿ ಮಲ್ಲಮ್ಮ ಅವರು. ವಿವಾಹಿತ ಜೀವನವನ್ನು ಹೊಂದಿದ್ದರೂ ಕೂಡ ಯಾವುದಕ್ಕೂ ಹಿಂಜರಿಯದೇ ಆಧ್ಯಾತ್ಮಿಕ ಜೀವನದ ಕಡೆ ಹೆಚ್ಚಾಗಿ ಒಲವು ನೀಡಿದರು ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಎಚ್ ಎಲ್ ನಾಗರಾಜ್ ಅವರು ಮಾತನಾಡಿ ಜಗಜ್ಯೋತಿ ಬಸವೇಶ್ವರರು ಇಂದಿಗೂ ಅಮೋಘ ಮತ್ತು ಅದ್ಭುತ ವಾದ ವ್ಯಕ್ತಿಯಾಗಿ ಕಾಣುತ್ತಾರೆ. 12 ನೇ ಶತಮಾನದಲ್ಲಿ ಇದ್ದ ಜಾತಿ, ಧರ್ಮ, ಲಿಂಗ, ಅಸ್ಪ್ರಶ್ಯತೆ ಯಂತಹ ಅಸಮಾನತೆಯ ಅಡ್ಡ ಗೋಡೆಗಳನ್ನು ತೊಡೆದು ಹಾಕಿ, ಜನರಿಗೆ ಧೈರ್ಯ, ಆತ್ಮ ವಿಶ್ವಾಸವನ್ನು ತುಂಬಿ ಸಮಾಜದಲ್ಲಿ ಸಮಾನತೆಯ ಕ್ರಾಂತಿಯನ್ನು ನಡೆಸಿ ಕ್ರಾಂತಿಕಾರಿ ಬಸವಣ್ಣ ಎಂದು ಅನಿಸಿ ಕೊಂಡವರು ಎಂದು ಹೇಳಿದರು.
ಬಸವಣ್ಣ ನವರು ಅನುಯಾಯಿಗಳಾಗಿ ಕಾಯಕ ತತ್ವದ ಮೂಲಕ ಅವತ ಆಧ್ಯಾತ್ಮಿಕ ಚಿಂತನೆಗಳನ್ನು ಅಳವಡಿಸಿಕೊಂಡಿದ್ದಾರೆ. ಬಸವಣ್ಣ ನವರು ಚಿಂತನೆಗಳನ್ನು ಅಳವಡಿಸಿಕೊಂಡು ನಿರಂತರ ಕಾಯಕದ ಮೂಲಕ ಸಮಾಜ ಕಟ್ಟೋಣ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎಮ್ ಬಾಬು ಹಾಗೂ ಇನ್ನಿತರ ಮುಖಂಡರುಗಳು ಉಪಸ್ಥಿತರಿದ್ದರು.
Mandya
ವಿರೋಧ ಪಕ್ಷಗಳು ಸಾವಿನಲ್ಲಿ ರಾಜಕೀಯ ಮಾಡೋದನ್ನು ಬಿಡಬೇಕು: ಎನ್.ಚಲುವರಾಯಸ್ವಾಮಿ

ಬೆಂಗಳೂರು: ವಿರೋಧ ಪಕ್ಷಗಳು ಸಾವಿನಲ್ಲೂ ರಾಜಕೀಯ ಮಾಡೋದನ್ನೂ ಬಿಡಬೇಕು ಎಂದು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ನಾಯಕರಿಗೆ ಸಚಿವ ಎನ್.ಚಲುವರಾಯಸ್ವಾಮಿ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಇಂದು ಎಂ.ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಳೆ(ಜೂ.17) ಪ್ರತಿಭಟನೆಯ ಬಗ್ಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಆದ ಘಟನೆಯ ಬಗ್ಗೆ ದುಃಖ ಇದೆ. ಈ ಪ್ರಕರಣದಿಂದ ರಾಜ್ಯ ಸರ್ಕಾರಕ್ಕೆ ನೋವು ತಂದಿದೆ. ಎಲ್ಲಿ ತಪ್ಪಾಗಿದೆ ಎಂದು ಕ್ರಮ ಆಗಿದೆ. ಅಲ್ಲದೇ ಮೃತರ ಕುಟುಂಬಗಳಿಗೆ 25 ಲಕ್ಷ ರೂ. ಪರಿಹಾರ ನೀಡಲಾಗಿದೆ ಎಂದು ಹೇಳಿದ್ದಾರೆ.
ನಮ್ಮ ರಾಜ್ಯದಲ್ಲಿ ಎಲ್ಲಿ ಏನೇ ತೊಂದರೆಯಾದರೂ ಅದು ಸರ್ಕಾರದ ಜವಾಬ್ದಾರಿ ಆಗಿರುತ್ತದೆ. ಅಹಮದಾಬಾದ್ ವಿಮಾನ ಅಪಘಾತದ ಜವಾಬ್ದಾರಿಯನ್ನು ಯಾರು ತೆಗೆದುಕೊಳ್ಳುತ್ತಾರೆ. ಉತ್ತರಪ್ರದೇಶದ ಕುಂಭಮೇಳದಲ್ಲಿ ಕಾಲ್ತುಳಿತವಾಗಿ ಸಾವಾಗಿರುವುದಕ್ಕೆ ಯಾರು ಜವಾಬ್ದಾರಿ ತೆಗೆದುಕೊಂಡಿದ್ದರು. ನಾವೂ ಈ ರಾಜ್ಯದಲ್ಲಿ ಅಭಿವೃದ್ಧಿ ಕೆಲಸವನ್ನು ಮಾಡುತ್ತಿದ್ದೇವೆ. ಅದನ್ನು ವಿರೋಧ ಪಕ್ಷಗಳಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಅದಕ್ಕೆ ಹೀಗೆಲ್ಲಾ ಪ್ರತಿಭಟನೆ ಮಾಡುತ್ತಿದ್ದಾರೆ. ಅವರ ಪಾಡಿಗೆ ಅವರು ಮಾಡಿಕೊಳ್ಳಲಿ ನಾವು ಅಡ್ಡಿಪಡಿಸುವುದಿಲ್ಲ ಎಂದಿದ್ದಾರೆ.
ನಾವೂ ಕಾಲ್ತುಳಿತ ಘಟನೆಯನ್ನು ಒಪ್ಪುವುದಿಲ್ಲ. ಮುಂದೆ ಹೀಗೆ ಆಗದಂತೆ ಏನು ಮಾಡಬೇಕೋ ಅದನ್ನು ಸರ್ಕಾರ ಮಾಡುತ್ತದೆ. ಹಲವು ಕಡೆ ಇಂತಹ ಘಟನೆ ನಡೆದಿದೆ. ನಟ ಡಾ.ರಾಜ್ ಕುಮಾರ್ ಸಾವಿನ ಸಮಯದಲ್ಲಿ ಕಾಲ್ತುಳಿತ ಆಗಿದ್ದಾಗ ಕುಮಾರಸ್ವಾಮಿ ಹೊಣೆ ಹೊತ್ತರಾ? ವಿಪಕ್ಷಗಳು ಸಾವಿನಲ್ಲೂ ರಾಜಕೀಯ ಮಾಡುತ್ತಾರೆಂದು ನನಗೆ ತಿಳಿದಿರಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
Mandya
ಆರೋಗ್ಯ ಧಾಮವನ್ನು ಸಮರ್ಪಕವಾಗಿ ನಿರ್ವಹಿಸಿ: ಡಾ.ಕುಮಾರ

ಮಂಡ್ಯ : ರೋಗಿಗಳ ಆರೈಕೆಗಾಗಿ ಬರುವ ಆರೈಕೆದಾರರು ತಂಗಲು ಸಿ.ಎಸ್.ಆರ್ ಅನುದಾನ ಬಳಸಿ ಮಿಮ್ಸ್ ಆವರಣದಲ್ಲಿ ನಿರ್ಮಿಸಲಾಗಿರುವ ಆರೋಗ್ಯ ಧಾಮವನ್ನು ಸಮರ್ಪಕವಾಗಿ ನಿರ್ವಹಿಸಿ ಎಂದು ಜಿಲ್ಲಾಧಿಕಾರಿ ಡಾ ಕುಮಾರ ಅವರು ಹೇಳಿದರು.
ಇಂದು ಮಿಮ್ಸ್ ವೈದ್ಯಕೀಯ ಕಾಲೇಜಿನ ನಿರ್ದೇಶಕರ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆರೋಗ್ಯ ಧಾಮದ ಹೊಣೆಗಾರಿಕೆಯನ್ನು ನಿಭಾಯಿಸಲು ನೋಡೆಲ್ ಅಧಿಕಾರಿಗಳಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕರಾದ ಎಂ.ಪಿ. ಕೃಷ್ಣಕುಮಾರ್, ಉಸ್ತುವಾರಿ ಹಾಗೂ ಮೇಲ್ವಿಚರಣೆಗೆ ಮಿಮ್ಸ್ ಆಸ್ಪತ್ರೆಯ ಸ್ಥಾನಿಯ ವೈದ್ಯಾಧಿಕಾರಿ ಡಾ.ದರ್ಶನ್ ಕುಮಾರ್ ಅವರನ್ನು ನೇಮಿಸಲಾಗಿದೆ ಎಂದು ತಿಳಿಸಿದರು.
ಆರೋಗ್ಯ ಧಾಮಕ್ಕೆ ರೂ 30 ಶುಲ್ಕ
ಆರೋಗ್ಯ ಧಾಮದ ಸೌಲಭ್ಯದ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲು ದಾಖಲಾತಿ ವಿಭಾಗಗಳಲ್ಲಿ ಫಲಕಗಳನ್ನು ಅಳವಡಿಸಿ. ಆಸ್ಪತ್ರೆಗೆ ದಾಖಲಾದ ರೋಗಿಗಳ ಪರವಾಗಿ ಬರುವ ಆರೈಕೆದಾರರು “ಆರೋಗ್ಯ ಧಾಮದಲ್ಲಿ ತಂಗಲು ಇಚ್ಚೆಪಟ್ಟಲ್ಲಿ ದಿನಕ್ಕೆ (24 ಗಂಟೆಗಳು) ರೂ.30 ಶುಲ್ಕವನ್ನು ಪಾವತಿಸಿಕೊಂಡು ರಶೀದಿ ನೀಡಬೇಕು ಎಂದು ತಿಳಿಸಿದರು.
ವಿಧಿಸಲಾಗುವ ರೂ.30 ಶುಲ್ಕವನ್ನು ಬಳಕೆದಾರರ ನಿಧಿಗೆ ಜಮೆ ಮಾಡಬೇಕು ಮತ್ತು ಈ ಮೊತ್ತದಿಂದಲೇ ಆರೋಗ್ಯಧಾಮದ ನಿರ್ವಹಣೆ ಆರೋಗ್ಯಧಾಮಕ್ಕೆ ನೇಮಿಸಿಕೊಳ್ಳಲಾಗಿರುವ ಸಿಬ್ಬಂದಿಗಳು ವೇತನ ಪಾವತಿಗೆ ವೆಚ್ಚ ಮಾಡಬೇಕು. ರೋಗಿಯು ಆಸ್ಪತ್ರೆಯಲ್ಲಿ ದಾಖಲಾದ ನಂತರ ನೀಡಲಾಗುವ ದಾಖಲಾತಿ ಸಂಖ್ಯೆಯ ಆಧಾರದ ಮೇಲೆ ಅವರ ಆರೈಕೆದಾರರಿಗೆ ಕಂಪ್ಯೂಟರ್ ಆಧಾರಿತ ಪಾವತಿ ಚೀಟಿಯನ್ನು ನೀಡಬೇಕು ಎಂದು ತಾಕೀತು ಮಾಡಿದರು.
ಆರೈಕೆದಾರರು ರೋಗಿಯ ದಾಖಲಾತಿ ವಿವರ, ಆರೋಗ್ಯಧಾಮಕ್ಕೆ ದಾಖಲಾದ ಆರೈಕೆದಾರರ ದಾಖಲಾತಿ ಚೀಟಿ, ಆರೈಕೆದಾರರ ಗುರುತಿನ ಚೀಟಿಯ ಜೆರಾಕ್ಸ್ ಪ್ರತಿಯನ್ನು ನೀಡಿ ಆರೋಗ್ಯಧಾಮದಲ್ಲಿ ದಾಖಲಾಗಬೇಕು. ಆರೋಗ್ಯಧಾಮದಲ್ಲಿ ಸ್ವಚ್ಛತೆ ಕಾಪಾಡಬೇಕು, ಅಧಿಕಾರಿಗಳು ಆರೈಕೆದಾರರು ಆರೋಗ್ಯಧಾಮದಲ್ಲಿ ಅನುಸರಿಸಬೇಕಾದ ನಿಯಮಗಳ ಫಲಕವನ್ನು ಅಳವಡಿಸಿ, ನಿಯಮ ಉಲ್ಲಂಘಿಸಿದವರು ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದರು.
ಆರೋಗ್ಯಧಾಮದ ವಿವರಗಳು ಮತ್ತು ದಾಖಲಾದವರ ವಿವರಗಳನ್ನು ಪ್ರತ್ಯೇಕವಾಗಿ ನಿರ್ವಹಿಸಬೇಕು. ಆರೋಗ್ಯಧಾಮದಲ್ಲಿ ಸಿಸಿಟಿವಿ ಕಣ್ಗಾವಲನ್ನು ಏರ್ಪಡಿಸಲಾಗಿದೆ. ಪ್ರತಿನಿತ್ಯವೂ ಆರೋಗ್ಯ ಧಾಮವನ್ನು ಸ್ವಚ್ಛಗೊಳಿಸಿ ನೈರ್ಮಲ್ಯ ಕಾಪಾಡುವುದು ಅಧಿಕಾರಿಗಳ ಜವಾಬ್ದಾರಿ, ಸಾಧ್ಯವಾದಷ್ಟು ಶೀಘ್ರವಾಗಿ ಆರೋಗ್ಯ ಧಾಮದ ದಾಖಲಾತಿ ಪ್ರಾರಂಭಿಸಿ ಸಾರ್ವಜನಿಕರಿಗೆ ಅನುವು ಮಾಡಿ ಎಂದು ತಿಳಿಸಿದರು.
ಉಪಲೋಕಾಯುಕ್ತರು ಭೇಟಿ ನೀಡಿದ ಸಂದರ್ಭದಲ್ಲಿ ಕೆಲವು ನ್ಯೂನತೆಗಳನ್ನು ತಿಳಿಸಿದ್ದು, ಅವುಗಳನ್ನು ಸರಿಪಡಿಸಿಕೊಂಡು ವರದಿ ನೀಡುವಂತೆ ಈಗಾಗಲೇ ತಿಳಿಸಲಾಗಿತ್ತು. ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು ಹಾಗೂ ಸಿಬ್ಬಂದಿಗಳನ್ನು ಪರಿಶೀಲಿಸಲು ಆಗಿಂದಾಗ ಭೇಟಿ ನೀಡಿ ಪರಿಶೀಲಿಸುವಂತೆ ಮಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ್ ಅವರಿಗೆ ತಿಳಿಸಿದರು.
ಮಿಮ್ಸ್ ನಿರ್ದೇಶಕ ಡಾ.ನರಸಿಂಹಸ್ವಾಮಿ ಮಾತನಾಡಿ, ಹೊರ ರೋಗಿ ವಿಭಾಗದಲ್ಲಿ ವಿಕಲಚೇತನರಿಗೆ, ಪುರುಷರಿಗೆ, ಮಹಿಳೆಯರಿಗೆ, ಹಿರಿಯ ನಾಗರೀಕರಿಗೆ ಪ್ರತ್ಯೇಕ ಸಾಲಿನ ವ್ಯವಸ್ಥೆ ಮಾಡಲಾಗಿದೆ. ಸ್ವಚ್ಛತಾ ಕೆಲಸಗಳನ್ನು ನಿಯಮಿತವಾಗಿ ಪರಿಶೀಲಿಸಲಾಗುತ್ತಿದೆ. ಶುದ್ಧ ಕುಡಿಯುವ ನೀರಿನ ಆರ್.ಓ ಅಳವಡಿಕೆಯ ಕೆಲಸ ಪ್ರಗತಿಯಲ್ಲಿದೆ ಎಂದರು.
ಸಭೆಯ ನಂತರ ಜಿಲ್ಲಾಧಿಕಾರಿಗಳು ಓ.ಪಿ.ಡಿ ಹಾಗೂ ಔಷಧಿ ವಿತರಣಾ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ವಾಹನ ನಿಲುಗಡೆ ಸ್ಥಳಕ್ಕೆ ಭೇಟಿ ನೀಡಿ ಶುಲ್ಕ ಪಡೆಯುತ್ತಿರುವ ಬಗ್ಗೆ ವಿಚಾರಣೆ ನಡೆಸಿದರು. ಎಂಟು ಗಂಟೆಯ ಅವಧಿಗೆ ರೂ 7/- ನಿಗದಿಯಾಗಿದ್ದು, ರೂ 10/- ಚೀಟಿಗಳು ಲಭ್ಯವಿದ್ದು, ಕಂಪ್ಯೂಟರ್ ಆಧಾರಿತ ಬಿಲ್ ನೀಡಿ ಸರಿಯಾಗಿ ನಿರ್ವಹಿಸದಿದ್ದಲ್ಲಿ ಟೆಂಡರ್ ರದ್ದು ಪಡಿಸುವುದಾಗಿ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಕುಷ್ಟರೋಗ ನಿರ್ಮೂಲನಾಧಿಕಾರಿ ಡಾ.ಸೋಮಶೇಖರ್, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಜಯಪ್ರಕಾಶ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
Mandya
ಕೆ.ಆರ್.ಪೇಟೆ ದೇವಿರಮ್ಮಣ್ಣಿ ಕೆರೆಯಲ್ಲಿ ಬಲೆಗೆ ಬಿದ್ದ ಬಂಗಾರ ಬಣ್ಣದ ಗೌರಿ ಮೀನು

ವರದಿ : ಅಲ್ಲಾಪಟ್ಟಣ ಸತೀಶ್
ಮಂಡ್ಯ : ಕೆ.ಆರ್.ಪೇಟೆ ದೇವಿರಮ್ಮಣ್ಣಿ ಕೆರೆಯಲ್ಲಿ ಬಂಗಾರ ಬಣ್ಣದ ಗೌರಿ ಮೀನೊಂದು ಬಲೆಗೆ ಬಿದ್ದಿದ್ದು, ಬರೋಬ್ಬರಿ ಒಂದು ಸಾವಿರ ರೂಪಾಯಿಗೆ ಮಾರಾಟವಾಗಿದೆ.
ತೀರಾ ಅಪರೂಪವೆಂಬ 04 ಕೆಜಿ ತೂಕವುಳ್ಳ ಬಂಗಾರದ ಬಣ್ಣದ ಮೀನನ್ನು ನೋಡಲು ಜನತೆ ಮುಗಿ ಬೀಳುತ್ತಿದ್ದು, ವಳಗೆರೆ ಮೆಣಸದ ರಾಜು ಎಂಬುವವರು ಒಂದು ಸಾವಿರ ರೂಪಾಯಿಗೆ ಕೊಂಡುಕೊಂಡಿದ್ದಾರೆ.
ಕೆ.ಆರ್.ಪೇಟೆ ಪಟ್ಟಣದ ದೇವಿರಮ್ಮಣ್ಣಿ ಕೆರೆಯಲ್ಲಿ ಮೀನು ಹಿಡಿಯಲು ಇಂದು ಮುಂಜಾನೆ ರಾಮಚಂದ್ರನಾಯಕ ಎಂಬುವವರು ಬಲೆ ಬೀಸಿದ್ದಾಗ ಬಲೆಗೆ ಬಂಗಾರ ಬಣ್ಣದ ಗೌರಿ ಮೀನು ಬಿದ್ದಿರುವುದನ್ನು ಕಂಡು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಬಂಗಾರ ಬಣ್ಣದ ಗೌರಿ ಮೀನು ಅಪರೂಪದ ತಳಿಯಾಗಿದ್ದು, ಮುಳ್ಳುಗಳಿಲ್ಲದ ತಿನ್ನಲು ರುಚಿಕರವಾದ ಈ ಮೀನಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ ಎಂದು ಮೀನು ಮಾರಾಟಗಾರ ಬಲೆರಾಮು ತಿಳಿಸಿದ್ದಾರೆ.
-
Hassan12 hours ago
ಹಾಸನದ ಖಾಸಗಿ ಶಾಲಾ-ಕಾಲೇಜಿಗೆ ಬಾಂಬ್ ಹಾಕುವ ಬೆದರಿಕೆ
-
Kodagu10 hours ago
ಪಂಚಾಯತಿಯಲ್ಲಿ ಶೇ.25 ನಿಧಿಯಲ್ಲಿ ಹೊಲಿಗೆ ಯಂತ್ರ ವಿತರಣೆ.
-
Mandya6 hours ago
ಕೆ.ಆರ್.ಪೇಟೆ ದೇವಿರಮ್ಮಣ್ಣಿ ಕೆರೆಯಲ್ಲಿ ಬಲೆಗೆ ಬಿದ್ದ ಬಂಗಾರ ಬಣ್ಣದ ಗೌರಿ ಮೀನು
-
Chikmagalur13 hours ago
ಕೊಪ್ಪ ತಾಲ್ಲೂಕಿನಲ್ಲಿ ಬೃಹತ್ ಗಾತ್ರದ ಮರ ಉರುಳಿ ರಸ್ತೆ ಬಂದ್
-
Kodagu12 hours ago
ಕೊಡವರ ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ಅಪಾರ
-
Kodagu13 hours ago
ರಾಜ್ಯ ಸರಕಾರಕ್ಕೆ ಅಭಿನಂದನೆ ಸಲ್ಲಿಸಿದ ಕೊಡವ ಸಮಾಜ
-
Chikmagalur10 hours ago
ಮರ ಬಿದ್ದು ಬೈಕ್ ಸವಾರ ದು*ರ್ಮರಣ
-
Mysore10 hours ago
ಜಾತಿಗಣತಿ ಬಗ್ಗೆ ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯಗೆ ಏನು ಗೊತ್ತು ?