Mandya
ಶ್ರೀ ಜಗಜ್ಯೋತಿ ಬಸವೇಶ್ವರ ಪತ್ತಿನ ಸಹಕಾರದ ವತಿಯಿಂದ ಬಸವಣ್ಣ ಜಯಂತಿ ಆಚರಣೆ
ಮಂಡ್ಯ: ನಗರದ ವಿ.ವಿ. ರಸ್ತೆಯಲ್ಲಿರುವ ಶ್ರೀ ಜಗಜ್ಯೋತಿ ಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರಿ ಸಂಘದ, ವತಿಯಿಂದ ಕಚೇರಿಯ ಆವರಣದಲ್ಲಿ ಶ್ರೀ ಜಗಜ್ಯೋತಿ ಬಸವೇಶ್ವರರ 891ನೇ ಜಯಂತಿಯ ಕಾರ್ಯಕ್ರಮ ನೆರವೇರಿತು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮದ್ದೂರು ತಾಲೂಕಿನ ವೈದ್ಯನಾಥಪುರದ ಕದಂಬ ಜಂಗಮ ಮಠದ ಗುರುಗಳಾದ ಶ್ರೀ ರೇಣುಕಾಚಾರ್ಯಸ್ವಾಮೀಜಿರವರು ವಹಿಸಿ ಮತನಾಡಿದರು.
ಕಾರ್ಯಕ್ರಮವನ್ನು ಶ್ರೀ ಜಗಜ್ಯೋತಿ ಬಸವೇಶ್ವರರ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷರಾದ ಎಸ್.ನಾಗರಾಜ್ ರವರು ಉದ್ಘಾಟಿಸಿ ನಂತರ ಮಾತನಾಡಿ, ಕಾರ್ಯಕ್ರಮದ ಪ್ರಯುಕ್ತ ವಿಶ್ವಗುರುಗಳಾದ ಬಸವಣ್ಣನವರು ಎಲ್ಲಾ ನಾಡಿನ ಜನತೆಗೆ ಆಶೀರ್ವದಿಸಿ ಎಲ್ಲರಿಗೂ ಸಹ ಒಳ್ಳೆಯ ಆರೋಗ್ಯವನ್ನು ನೀಡುವುದರ ಜೊತೆಗೆ ಎಲ್ಲರಿಗೂ ಆಶೀರ್ವಾದ ಮಾಡುವಂತೆ ಪ್ರಾರ್ಥಿಸಿದರು. ಬಸವಣ್ಣನವರು ಶಿಕ್ಷಣಕ್ಕೆ ಮಹತ್ತರವಾದ ಮೌಲ್ಯಯುತ ವಚನಗಳನ್ನು ನೀಡಿರುತ್ತಾರೆ. ಅವುಗಳನ್ನು ಸಂರಕ್ಷಿಸುವ ಹೊಣೆಯು ನಮ್ಮದಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದ ಭಕ್ತಾದಿಗಳಿಗೆ ಪಾನಕ, ಮಜ್ಜಿಗೆಯನ್ನು ವಿತರಿಸಲಾಯಿತು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ದ್ಯಾವಣ್ಣ, ನಿರ್ದೇಶಕರುಗಳಾದ ಸಿ.ಎಂ. ಪುಟ್ಟ ಬುದ್ಧಿ, ಹೊನ್ನಮ್ಮ ಸೋಮಶೇಖರ್, ಹೆಚ್. ಸಿ. ಶಿವಕುಮಾರ್, ಬಿ.ಎಂ. ಮಹದೇವಸ್ವಾಮಿ, ರುದ್ರಸ್ವಾಮಿ, ಎಂ. ಮಹಾದೇವಯ್ಯ, ಮಧುಸೂದನ್, ಎಸ್. ಪಿ. ಉಮೇಶ್, ಶಕುಂತಳ, ಎಸ್.ಆರ್. ಶಿವಕುಮಾರಸ್ವಾಮಿ, ಮಲ್ಲೇಶ್, ವಿಶ್ವೇಶ್ವರಯ್ಯ, ಎನ್. ಎಸ್. ನವೀನ್, ಎ.ಸಿ. ಲಿಂಗದೇವರು, ಇನ್ನಿತರರು ಹಾಜರಿದ್ದರು.
Mandya
ಪೋಷಕರು ತಮ್ಮ ಮಕ್ಕಳ ಮೇಲೆ ನಿಗಾವಹಿಸಿ : ನ್ಯಾ.ಹೆಚ್. ಶಶಿಧರ ಶೆಟ್ಟಿ*
ಮಂಡ್ಯ : ಯುವಜನತೆಗೆ ಕಾನೂನಿನ ಜ್ಞಾನ ಬಹಳ ಅಗತ್ಯವಾಗಿದ್ದು, ಕಾನೂನಿನ ಮಾಹಿತಿಗಳನ್ನು ತಿಳಿದುಕೊಳ್ಳಬೇಕು. ಕಾನೂನಿನ ನಿಯಮಗಳ ಉಲ್ಲಂಘನೆಯ ಬಗ್ಗೆ ಅರಿವು ಮೂಡಿಸಬೇಕು ಎಂದು ಜಿಲ್ಲಾ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಹೆಚ್. ಶಶಿಧರ ಶೆಟ್ಟಿ ರವರು ಹೇಳಿದರು.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಬೆಂಗಳೂರು, ರಾಜ್ಯ ಮಕ್ಕಳ ರಕ್ಷಣಾ ನಿರ್ದೇಶನಾಲಯ ಬೆಂಗಳೂರು ಬಾಲ ನ್ಯಾಯ ಸಮಿತಿ ಕರ್ನಾಟಕ ಉಚ್ಚ ನ್ಯಾಯಾಲಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಂಡ್ಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಕೀಲರ ಸಂಘ (ರಿ), ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ,ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯನ್ನು “ಬಾಲ್ಯವಿವಾಹ ಮುಕ್ತ ಮಾಡುವ ಸಂಕಲ್ಪ” ಅಭಿಯಾನದ ಅಂಗವಾಗಿ ಮಕ್ಕಳ ಸಂರಕ್ಷಣೆ ಮತ್ತು ಕಾನೂನು ಕುರಿತು ಬೃಹತ್ ತರಬೇತಿ ಕಾರ್ಯಾಗಾರ ಮಂಡ್ಯ ನಗರದ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಹೆಚ್. ಶಶಿಧರ ಶೆಟ್ಟಿ ರವರು ಕಾರ್ಯಕ್ರಮ ವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಯುವಜನತೆಯು ದೇಶಕ್ಕೆ ಪ್ರೇರಣೆಯಾಗಬೇಕು ಹೊರತು ಮಾದಕ ವಸ್ತುಗಳಿಗೆ ಮೊರೆ ಹೋಗಬಾರದು.
ಇತ್ತೀಚಿನ ದಿನಗಳಲ್ಲಿ ಡ್ರಗ್ಸ್ ಗೆ ಮಕ್ಕಳು ಮೊರೆ ಹೋಗುತ್ತಿದ್ದಾರೆ ಪೋಷಕರು ಮತ್ತು ಅಧಿಕಾರಿಗಳು ಮಕ್ಕಳ ಬಗ್ಗೆ ನಿಗ ವಹಿಸಬೇಕು ಎಂದು ಹೇಳಿದರು.
ಸಾರ್ವಜನಿಕರಲ್ಲಿ ಕಾನೂನಿನ ಅರಿವಿನ ಬಗ್ಗೆ ಮಾಹಿತಿ ತಿ ಕಾನೂನಿನ ಜ್ಞಾನ ಬಹಳ ಮುಖ್ಯ ವಾಹನ ಚಲಾಯಿಸುವ ಹೆಲ್ಮೆಟ್, ಚಾಲನಾ ಪರವಾನಗಿ,ವಾಹನದ ಭದ್ರತಾ ವಿಮೆಯನ್ನು ಹೊಂದಿರಬೇಕು ಎಂದು ಹೇಳಿದರು
ಮಕ್ಕಳ ಮೇಲೆ ದೌರ್ಜನ್ಯ ನಡೆದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಬೇಕು. ದೇಶದಲ್ಲಿ 43% ಸಣ್ಣ ಹುಡುಗರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ. ಆದ್ದರಿಂದ ಪೋಷಕರು ಮಕ್ಕಳ ಮೇಲೆ ಜ್ಞಾನ ವಹಿಸಬೇಕು ಎಂದು ಹೇಳಿದರು.
ಬಾಲ್ಯ ವಿವಾಹ ಮುಕ್ತ ಜಿಲ್ಲೆಯನಾಗಿಸಲು ಪೋಷಕರ ಪಾತ್ರ ಬಹಳ ಮುಖ್ಯ.ಮಕ್ಕಳನ್ನು ದೇಶದ ಸಂಪತ್ತನ್ನಾಗಿ ಮಾಡಬೇಕೆ ಹೊರತು ಮಕ್ಕಳ ಆಸೆ,ಆಕಾಂಕ್ಷೆ,ಭಾವನೆಯನ್ನು ಮೊಟಕುಗೊಳಿಸಬಾರದು ಎಂದು ಹೇಳಿದರು.

ಮಕ್ಕಳನ್ನು ಸಾಮಾಜಿಕ ಪಿಡುಗಿನಿಂದ ಹೊರ ತರಲು ಆಶಾ ಕಾರ್ಯಕರ್ತರ ಮಹತ್ವ ಬಹಳ ಮುಖ್ಯವಾಗಿದೆ ಹಿರಿಯರನ್ನು ಮತ್ತು ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು ಮತ್ತು ಗೌರವಿಸಬೇಕು ಎಂದು ತಿಳಿಸಿದರು
ಜಿಲ್ಲಾಧಿಕಾರಿಗಳಾದ ಡಾ. ಕುಮಾರ ರವರು ಕಾರ್ಯಕ್ರಮದ ಅಧ್ಯಕತೆಯನ್ನು ವಹಿಸಿ ಮಾತನಾಡಿ, ಪ್ರತಿ ವರ್ಷ ಸುಮಾರು 65 ರಿಂದ 70 ಬಾಲ್ಯ ವಿವಾಹ ಪ್ರಕರಣಗಳು ದಾಖಲಾಗಿದೆ ಆದರೆ ಕಳೆದ ವರ್ಷ ಕೇವಲ 14 ಪ್ರಕರಣಗಳು ಮಾತ್ರ ದಾಖಲಾಗಿವೆ ಜಿಲ್ಲೆಯಲ್ಲಿ ಬಾಲ್ಯ ವಿವಾಹ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಹಲವು ಕಾರ್ಯಕ್ರಮಗಳನ್ನು ಮಾಡಲಾಗಿದೆ ಎಂದು ಹೇಳಿದರು.
ಸರ್ಕಾರ, ಸಂಘ ಸಂಸ್ಥೆ, ಅಧಿಕಾರಿಗಳು, ಎಲ್ಲರೂ ಸಾರ್ವಜನಿಕರು ಜೊತೆಯಾಗಿ ಬಾಲ್ಯ ವಿವಾಹವನ್ನು ತೊಡೆದು ಹಾಕಬೇಕು ಎಂದು ಹೇಳಿದರು ಹೆಣ್ಣಿಗೆ ಸಿಗಬೇಕಾದಂತಹ ಗೌರವ, ಸ್ಥಾನಮಾನ ಎಲ್ಲವೂ ಕೂಡ ಸಿಗಬೇಕು. ಎಂದು ಹೇಳಿದರು.

ಜಿಲ್ಲಾ ಬಾಲ್ಯ ವಿವಾಹ ಮುಕ್ತ ಜಿಲ್ಲೆಯನ್ನಾಗಿಸಲು ಪೋಷಕರು ಮತ್ತು ಸಮಾಜದ ಜವಾಬ್ದಾರಿ ಬಹಳ ಅಗತ್ಯ. ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿಸಲು ಶಿಕ್ಷಣದಿಂದ ಮಾತ್ರ ಸಾಧ್ಯ. ಎಂದು ಹೇಳಿದರು.
ಬಾಲ್ಯ ವಿವಾಹ ಕುರಿತು ಅಂಗನವಾಡಿಕಾರ್ಯಕರ್ತರು ಹಾಗೂ ಆಶಾಕಾರ್ಯಕರ್ತೆಯರು ಗ್ರಾಮೀಣ ಪ್ರದೇಶಗಳಲ್ಲಿ ಅರಿವು ಮೂಡಿಸುವಂತಹ ಕಾರ್ಯಕ್ರಮಗಳನ್ನು ಮಾಡಬೇಕು ಎಂದು ಸೂಚಿಸಿದರು.
ಬಾಲ್ಯ ವಿವಾಹ ಪದ್ಧತಿಯನ್ನು ಕಾನೂನಿನಿಂದ ಮಾತ್ರ ಹೋಗಲಾಡಿಸಲು ಸಾಧ್ಯವಿಲ್ಲ ಪೋಷಕರ ಮಾನವೀಯತೆ, ಹೃದಯವಂತಿಕೆದಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ,ಪ್ರಭಾರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಅಧ್ಯಕ್ಷರಾದ ಶಿವಪ್ರಸಾದ್ ಮಾತನಾಡಿ ಎಲ್ಲರಿಗೂ ಸಮಾನವಾದ ಹಕ್ಕುಗಳು ಇವೆ. ಮಕ್ಕಳ ಪರಿಪೂರ್ಣ ಬೆಳವನೆಗೆ ತುಂಬಾ ಮುಖ್ಯ, ಮಕ್ಕಳ ಭಾವನೆಗಳನ್ನು ಕಟ್ಟಿ ಹಾಕಬಾರದು ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಕೆ.ಆರ್. ನಂದಿನಿ ಮಾತನಾಡಿ ಕಾನೂನಿನ ನಿಯಮಗಳನ್ನು ಪಾಲಿಸಬೇಕು.
ಯುವಜನತೆ ಕಾನೂನಿನ ನಿಯಮಗಳನ್ನು ತಿಳಿದುಕೊಳ್ಳುವುದು ತುಂಬಾ ಅಗತ್ಯ ಎಂದು ಹೇಳಿದರು.
ಗ್ರಾಮೀಣ ಪ್ರದೇಶಗಳಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯ ಪಾತ್ರ ಬಹಳ ಮುಖ್ಯ. ಸಾಮಾಜಿಕವಾಗಿ ಆರ್ಥಿಕವಾಗಿ,ಧಾರ್ಮಿಕವಾಗಿ ಜಿಲ್ಲೆಯು ಶ್ರೀಮಂತ ಜಿಲ್ಲೆಯಾಗಿದೆ. ಜಿಲ್ಲೆಯಲ್ಲಿ ಬಾಲ್ಯ ವಿವಾಹ ಮುಕ್ತ ಜಿಲ್ಲೆಯನ್ನಾಗಿಸಬೇಕು ಪೋಷಕರು ಮಕ್ಕಳ ಪ್ರತಿಭೆಯನ್ನು ಗುರುತಿಸಬೇಕು ಮತ್ತು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು.ಎಂದು ಹೇಳಿದರು.
ಗಂಡು – ಹೆಣ್ಣು ಎಂಬ ತಾರತಮ್ಯವಿಲ್ಲದೆ ಎಲ್ಲರಿಗೂ ಸಮಾನವಾದ ರೀತಿಯಲ್ಲಿ ನೋಡಬೇಕು ಹೆಣ್ಣು ಮಕ್ಕಳನ್ನ ದೇಶವನ್ನು ಪ್ರತಿನಿಧಿಸುವಂತಹ ಸ್ಥಾನಮಾನವನ್ನು ದೊರಕಿಸಬೇಕು ಎಂದು ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳಾದ ಆನಂದ.ಎಂ ರವರು ಮಾತನಾಡಿ ಜಿಲ್ಲೆಯನ್ನು ಬಾಲ್ಯ ವಿವಾಹ ಮುಕ್ತ ಜಿಲ್ಲಾಯಾಗಿ ಮಾಡಬೇಕು ಮತ್ತು ಭ್ರೂಣ ಹತ್ಯೆಯನ್ನು ತಡೆಯಬೇಕು.ಹೆಣ್ಣು ಮಕ್ಕಳ್ನನು ಗೌರವಿಸಬೇಕು ಮಕ್ಕಳನ್ನು ಪ್ರೇರಣೆ ಆಗುವಂತೆ ಮಾಡಬೇಕು.ವ್ಯಾಜ್ಯ ಮುಕ್ತ ಜಿಲ್ಲೆಯಾಗಿ ಮಾಡಬೇಕು ದೋರಣೆಯನ್ನು ತೊಲಗಿಸಬೇಕು ಸಾರ್ವಜನಿಕರು ಭಾರತ ಸಂವಿಧಾನ ಬದ್ದವಾಗಿ ಕಾರ್ಯವನ್ನು ನಿರ್ವಹಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ವೆಂಕಟೇಶ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿರ್ದೇಶನಾಲಯ ಜಂಟಿ ನಿರ್ದೇಶಕರಾದ ನಿಶ್ಚಲ್ ಬಿ.ಹೆಚ್, ಮಕ್ಕಳ ರಕ್ಷಣಾ ನಿರ್ದೇಶನಾಲಯ ನಿರ್ದೇಶಕರಾದ ಡಾ.ಸ್ನೇಹ ಸಿ.ವಿ ವಕೀಲರ ಸಂಘ,ಅಧ್ಯಕ್ಷರಾದ ಸತ್ಯಾನಂದ.ಟಿ.ಎಸ್. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಉಪ ನಿರ್ದೇಶಕರಾದ ಆಶಾ, ರಶ್ಮಿ ರವರು ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
Mandya
ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಸಮಯವನ್ನು ಮೀಸಲಿಡಬೇಕು : ಸಾಹಿತಿ ಟಿ. ಸತೀಶ್ ಜವರೇಗೌಡ
ನಾಗಮಂಗಲ : ಮಕ್ಕಳು ಶಾಲಾ ಕಲಿಕಾ ಅವಧಿ ಮುಗಿಸಿ ಮನೆಗೆ ಬಂದಾಗ, ಪೋಷಕರು ಅದೆಷ್ಟೇ ದಿನನಿತ್ಯದ ಒತ್ತಡಗಳ ನಡುವೆ ಇದ್ದರೂ ಕೂಡ, ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಸಮಯವನ್ನು ಮೀಸಲಿಡಬೇಕು. ಆ ಮೂಲಕ ಅವರ ಭವಿಷ್ಯವನ್ನು ರೂಪಿಸಲು ಶ್ರಮಿಸಬೇಕು ಎಂದು ಯುವ ಬರಹಗಾರರ ಬಳಗದ ಅಧ್ಯಕ್ಷ ಹಾಗೂ ಸಾಹಿತಿ ಟಿ. ಸತೀಶ್ ಜವರೇಗೌಡ ಕರೆ ನೀಡಿದರು.
ತಾಲೂಕಿನ ಗದ್ದೆಭುವನಹಳ್ಳಿಯ ಸಮೀಪವಿರುವ ಋಷಿ ಶ್ರೀ ವಿದ್ಯಾನಿಕೇತನ ವಿದ್ಯಾಸಂಸ್ಥೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ‘ಶಾಲಾ ವಾರ್ಷಿಕೋತ್ಸವ ಮತ್ತು ಋಷಿ ಕಲಾ ಸಂಭ್ರಮ’ದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿ, ಶಿಕ್ಷಣ ಮತ್ತು ಆರೋಗ್ಯ ಮನುಷ್ಯನಿಗೆ ನಿಜವಾದ ಸಂಪತ್ತು. ಒಬ್ಬ ವ್ಯಕ್ತಿ ಶಿಕ್ಷಣ ಪಡೆದರೆ ಆತ ಎಂದಿಗೂ ಕೂಡ ಅದನ್ನು ಕಳೆದುಕೊಳ್ಳುವುದಿಲ್ಲ. ಅದು ಸದಾ ಅಕ್ಷಯವಾಗುವ ಸಂಪತ್ತು ಎಂದು ತಿಳಿಸಿದರು.

ಮಕ್ಕಳು ಓದುವ ಸಮಯದಲ್ಲಿ ಪೋಷಕರು ಟಿವಿ ಮತ್ತು ಮೊಬೈಲಿನಿಂದ ದೂರವಿರಬೇಕು. ಅವರು ಕೂಡ ಮಕ್ಕಳ ಜೊತೆಗೆ ದಿನಪತ್ರಿಕೆಗಳನ್ನೋ ಅಥವಾ ಪುಸ್ತಕಗಳನ್ನೋ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಆಗ ಮಕ್ಕಳು ಪಠ್ಯಪುಸ್ತಕಗಳನ್ನು ಕೇಂದ್ರೀಕರಿಸಿ ಅಭ್ಯಾಸ ಮೂಲಕ ಕಲಿಕಾ ಆಸಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಾರೆ. ಅವರು ಪುಸ್ತಕದ ಒಡನಾಟಕ್ಕೆ ಹೋದಾಗ ಟಿವಿ, ಮೊಬೈಲಿನಿಂದ ಸಹಜವಾಗಿ ದೂರ ಉಳಿಯುತ್ತಾರೆ ಎಂದರು.
ಪ್ರಕೃತಿಯ ಸಂಪತ್ತನ್ನು ವೃದ್ಧಿಸಲು ಶ್ರಮಿಸಿದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ನಾಡಿಗೆ ದೊಡ್ಡ ಕೊಡುಗೆ ಕೊಟ್ಟು ಹೋಗಿದ್ದಾರೆ. ಯಾವ ಮನುಷ್ಯ ಪ್ರಕೃತಿಯ ಆಸರೆಯಲ್ಲಿ ಬದುಕುತ್ತಾನೋ ಆ ವ್ಯಕ್ತಿ ಸಮಾಜದಲ್ಲಿ ಉತ್ತಮ ನಾಗರಿಕನಾಗುತ್ತಾನೆ. ಆದ್ದರಿಂದ ಮಕ್ಕಳಿಗೆ ಪ್ರಕೃತಿಯ ಜೊತೆಗೆ ಒಡನಾಟದ ಅಗತ್ಯವಿದೆ. ಇಂತಹ ವಾತಾವರಣ ಕಲ್ಪಿಸಿ ಮಕ್ಕಳ ಭವಿಷ್ಯ ರೂಪಿಸುವ ಜೊತೆಗೆ, ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸುವ ಕೆಲಸವನ್ನು ಋಷಿಶ್ರೀ ಶಿಕ್ಷಣ ಸಂಸ್ಥೆ ಮಾಡುತ್ತಿದೆ. ಮಕ್ಕಳ ಸುರಕ್ಷತೆಗೆ ಪೂರಕವಾಗಿ ಯಾವೆಲ್ಲಾ ಸೌಕರ್ಯಗಳನ್ನು ಕಲ್ಪಿಸಬೇಕೋ ಅವೆಲ್ಲವನ್ನು ಈ ಶಿಕ್ಷಣ ಸಂಸ್ಥೆ ಒದಗಿಸಿರುವುದು ಶ್ಲಾಘನೀಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಮೈಸೂರಿನ ಜೆಎಸ್ಎಸ್ ಮಹಿಳಾ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಹೊನ್ನಶೆಟ್ಟಿ ಮಾತನಾಡಿ, ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಬಹುಮುಖ್ಯ. ಮಕ್ಕಳಿಗೆ ವಿದ್ಯೆ, ವಿನಯ, ವಿವೇಕದ ಜೊತೆಗೆ ಒಳ್ಳೆಯ ಮಾತುಗಳನ್ನಾಡುವುದನ್ನು ಕಲಿಸಿದರೆ, ಅಂತಹ ಮಕ್ಕಳು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳುತ್ತಾರೆ ಎಂದು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಆರ್. ಲೋಕೇಶ್ ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನ ಮುಂದುವರಿಯುತ್ತಿರುವ ಸನ್ನಿವೇಶದಲ್ಲಿ ಮಕ್ಕಳನ್ನು ಸ್ಪರ್ಧಾತ್ಮಕ ಯುಗಕ್ಕೆ ಪರಿಚಯಿಸಬೇಕಿದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ಮತ್ತು ಮೌಲ್ಯಯುತ ಶಿಕ್ಷಣ ಕಲಿಸುವುದು ಅಗತ್ಯ ಎಂದು ತಿಳಿಸಿದರು.
ಹೊಸಕೊಪ್ಪಲು ಗ್ರಾಮದ ಬ್ರಿಲಿಯಂಟ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಶ್ರೀನಿವಾಸ್ ಮಾತನಾಡಿದರು. ಋಷಿಶ್ರೀ ವಿದ್ಯಾನಿಕೇತನ ವಿದ್ಯಾ ಸಂಸ್ಥೆಯ ಅಧ್ಯಕ್ಷೆ ಲಕ್ಷ್ಮಮ್ಮ ಉದ್ಘಾಟಿಸಿದರು. ಕ್ಷೇತ್ರ ಸಮನ್ವಯಾಧಿಕಾರಿ ಕೆ. ರವೀಶ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ವಿರೂಪಾಕ್ಷ, ಕರಡಳ್ಳಿ ವಲಯ ಸಂಪನ್ಮೂಲ ವ್ಯಕ್ತಿ ಎನ್.ಎಸ್. ಸುರೇಶ್, ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ನಟರಾಜು, ಖಜಾಂಚಿ ಎಸ್.ವಿ. ಮಂಜುನಾಥ್, ಶಾಲೆಯ ಮುಖ್ಯ ಶಿಕ್ಷಕ ಎನ್. ಗುರುಪ್ರಸಾದ್, ವಿಸ್ಡ್ಂ ಪಬ್ಲಿಕ್ ಶಾಲೆಯ ಬೋರೇಗೌಡ ಸೇರಿದಂತೆ ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ವಿದ್ಯಾರ್ಥಿ ಪೋಷಕರು ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿನಿ ಭವ್ಯ ಅವರನ್ನು ಸನ್ಮಾನಿಸಲಾಯಿತು. ಶಾಲೆಯ ವಿದ್ಯಾರ್ಥಿಗಳು ಎಲ್ಲಾ ಶಿಕ್ಷಕರಿಗೂ ಸನ್ಮಾನಿಸಿ ಗುರುವಂದನೆ ಸಲ್ಲಿಸಿದರು. ಶಾಲಾ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ತಾಲೂಕಿನ ಗದ್ದೆಭುವನಹಳ್ಳಿಯ ಋಷಿಶ್ರೀ ವಿದ್ಯಾನಿಕೇತನ ವಿದ್ಯಾ ಸಂಸ್ಥೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವದಲ್ಲಿ ಸಾಹಿತಿ ಟಿ. ಸತೀಶ್ ಜವರೇಗೌಡ ಅವರನ್ನು ಕನ್ನಡ ಪ್ರಾಧ್ಯಾಪಕ ಪ್ರೊ. ಹೊನ್ನಶೆಟ್ಟಿ ಸನ್ಮಾನಿಸಿದರು. ಸಂಸ್ಥೆಯ ಅಧ್ಯಕ್ಷೆ ಲಕ್ಷ್ಮಮ್ಮ, ಕಾರ್ಯದರ್ಶಿ ನಟರಾಜು, ಖಜಾಂಚಿ ಎಸ್.ವಿ. ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಆರ್. ಲೋಕೇಶ್, ಬಿ.ಆರ್.ಸಿ. ಕೆ. ರವೀಶ್ ಉಪಸ್ಥಿತರಿದ್ದರು.
Mandya
ಧರ್ಮಸ್ಥಳ ಸಂಘದಿಂದ ಬಡ ಕುಟುಂಬಕ್ಕೆ ವಾತ್ಸಲ್ಯ ಕಿಟ್ ವಿತರಣೆ
ಶ್ರೀರಂಗಪಟ್ಟಣ: ತಾಲೂಕಿನಲ್ಲಿ ಇರುವ ಸುಮಾರು 31 ಬಡ ಕುಟುಂಬಗಳಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘದ
ಪ್ರಾದೇಶಿಕ ನಿರ್ದೆಶಕ ಜಯಂತ್ ಪೂಜಾರಿರವರು ವಾತ್ಸಲ್ಯ ಕಿಟ್ ವಿತರಿಸಿದರು.
ಶ್ರೀ ಕ್ಷೇತ್ರದಿಂದ ವಿತರಿಸಲಾಗುತ್ತಿರುವ ಈ ವಾತ್ಸಲ್ಯ ಕಿಟ್ ಗಳು ಅವರ ಬಡತನವನ್ನು ತಾತ್ಕಲಿಕವಾಗಿ ನೀಗಿಸಿ, ಜೀವನದಲ್ಳಿ ಮುಂದೆ ಬರಲು ಉತ್ಸಾಹ ತುಂಬಲಿದೆ ಎಂದರು.

ಈ ವೇಳೆ ಪುರಸಭಾ ಸದಸ್ಯ ರಾಜು, ಜನ ಜಾಗೃತಿ ವೇದಿಕೆ ಅಧ್ಯಕ್ಷೆ ನಳಿನಿ, ಮಾಜಿ ಪುರಸಭೆ ಸದಸ್ಯ ಸುಬ್ರಮಣ್ಯ, ಕ್ಷೇತ್ರ ಯೋಜನಾಧಿಕಾರಿ ಗಣಪತಿ ಭಟ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸಂಘದ ಸದಸ್ಯರು, ಸೇವಾ ಪ್ರತಿನಿಧಿಗಳು ಹಾಗೂ ಇತರರು ಉಪಸ್ಥಿತರಿದ್ದರು.
-
Special19 hours agoಕೊನೆಗೂ ಬಂತು ಯುಪಿಎಸ್ಸಿ ನೇಮಕಾತಿ: 933 ಹುದ್ದೆಗಳಿಗೆ ಇಂದಿನಿಂದಲೇ ಅರ್ಜಿ ಸಲ್ಲಿಸುವಿಕೆ ಆರಂಭ!
-
Sports16 hours agoWPL Champions| ಸತತ 2ನೇ ಆರ್ಸಿಬಿಗೆ ಚಾಂಪಿಯನ್ ಕಿರೀಟ: RCB ಹ್ಯಾಟ್ರಿಕ್ ಸಾಧನೆ!
-
National20 hours agoಹಾಸನ ಮೆಗಾ ಡೇರಿ ವಿಸ್ತರಣೆಗೆ ಕೇಂದ್ರದ ನೆರವು: NDDB ಮೂಲಕ 150 ಕೋಟಿ ರೂ. ಸಾಲ ಸೌಲಭ್ಯ ಕೊಡಿಸಲು ಕೇಂದ್ರ ಸಮ್ಮತಿ
-
Kodagu23 hours agoಫೆ. 7ಕ್ಕೆ ಕೆಎಸ್ಆರ್ಟಿಸಿ ನೂತನ ಬಸ್ಸು ನಿಲ್ದಾಣ ಉದ್ಘಾಟನೆ
-
Mysore20 hours agoಮನರೇಗಾ ಹೆಸರು ಬದಲಾವಣೆ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ವಿರುದ್ಧ ಯತೀಂದ್ರ ಸಿದ್ದರಾಮಯ್ಯ ವಾಗ್ದಾಳಿ
-
National10 minutes agoರೆಪೋ ದರ ಶೇ.5.25 ದರದಲ್ಲೇ ಮುಂದೂವರಿಕೆ, ಬದಲಾವಣೆ ಇಲ್ಲ: ಸಂಜಯ್ ಮಲ್ಹೋತ್ರಾ
-
Kodagu1 hour agoಖಾಸಗಿ ಬಸ್- ಬೈಕ್ ನಡುವೆ ಮುಖಾಮುಖಿ ಡಿಕ್ಕಿ : ಇಬ್ಬರು ಬೈಕ ಸವಾರರ ದುರ್ಮರಣ
-
Chikmagalur3 hours agoತಾಪಂ-ಜಿಪಂ-ಜಿಬಿಎ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ ವಿಚಾರ : ಸಚಿವ ಪರಮೇಶ್ವರ್
