Connect with us

Mandya

ಬಸವ ಜ್ಯೋತಿ ಆಧ್ಯಾತ್ಮಿಕ‌ ಕಾರ್ಯಕ್ರಮ

Published

on

ಮಂಡ್ಯ: ಜಿಲ್ಲಾ ಶ್ರೀ ಜಗಜ್ಯೋತಿ ಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರ ನಿಯಮಿತ ಇವರ ಆಶ್ರಯದಲ್ಲಿ ಮನೆಮನೆಗೆ ಸೌಹಾರ್ದ ಬಸವ ಜ್ಯೋತಿ ಕಾರ್ಯಕ್ರಮದ 144ನೇ ಆಧ್ಯಾತ್ಮಿಕ ಕಾರ್ಯಕ್ರಮವು ಟಿ. ನರಸೀಪುರ ತಾಲೂಕಿನ ಮುಡುಕನಪುರದ ಶ್ರೀಮಠದ ಪರಮಪೂಜ್ಯ ಶ್ರೀ ಷಡಕ್ಷರಿದೇಶಿಕೇಂದ್ರ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಜರುಗಿತು.

ನಗರದ ಗಿರಿಜಾ ಚಲನಚಿತ್ರ ಮಂದಿರದ ಬಳಿ ಇರುವ ವೀರಶೈವ ವಿದ್ಯಾರ್ಥಿ ನಿಲಯದ ಸಭಾಂಗಣದಲ್ಲಿ
ಕಾರ್ಯಕ್ರಮವನ್ನು ಶ್ರೀ ಬಸವೇಶ್ವರ ಸೌಹಾರ್ದ ನಿಯಮಿತದ ಅಧ್ಯಕ್ಷರಾದ ಎಸ್. ನಾಗರಾಜ್ ರವರು ಉದ್ಘಾಟಿಸಿ, ಆಧ್ಯಾತ್ಮಿಕ ಮತ್ತು ಕಾಯಕ ವಿದ್ಯೆಯನ್ನು ಕಲಿಯದೆ ಇದ್ದರೆ ಜೀವನ ಪೂರ್ಣ ಆಗುವುದಿಲ್ಲ, ಹಾಗಾಗಿ ಆಧ್ಯಾತ್ಮಿಕದ ಕಡೆಗೆ ಸಾಗುವುದು ಅತಿ ಮುಖ್ಯ ಎಂದು ತಿಳಿಸಿದರು. ಜನಸಾಮಾನ್ಯರು ಧರ್ಮದಿಂದ ದೂರ ಸಾಗುತ್ತಿದ್ದಾರೆ, ಜನರ ಬಳಿಗೆ ಧರ್ಮವನ್ನು ಕೊಂಡೊಯ್ಯ ಬೇಕಾಗಿದೆ ಎಂದರು.

ಅರಿವಿನ ಮನೆಯನ್ನು ತಿಳಿಯುವುದು ಅಗತ್ಯ. ಸ್ವಲ್ಪ ಸಮಯದಲ್ಲೇ ಸ್ನಾನ, ಊಟ ಮಾಡಬಹುದು. ಆದರೆ ಮನುಷ್ಯನ ಆಯಸ್ಸು ಮುಗಿದರೂ ಸಂಪೂರ್ಣ ಅರಿವನ್ನು ಪಡೆಯಲು ಆಗುವುದಿಲ್ಲ, ಎಷ್ಟೇ ಸಮಯವಾದರೂ ಜ್ಞಾನ ತುಂಬುತ್ತಲೇ ಇರುತ್ತದೆ ಎಂದು ಹೇಳಿದರು.

ಬಸವಣ್ಣನವರು ಕಾಯಕದ ಮಹತ್ವವನ್ನು ಹೇಗೆ ತೋರಿಸಿದ್ದಾರೆ ಎಂಬುದರ ಬಗ್ಗೆ ಅರ್ಥಮಾಡಿಕೊಳ್ಳಬೇಕು. ಭಾರತ ದೇಶದಲ್ಲಿ 64 ವಿದ್ಯೆಗಳಿವೆ, ಅವುಗಳಲ್ಲಿ ಆಧ್ಯಾತ್ಮ, ಕಾಯಕ ವಿದ್ಯೆಯನ್ನು ತಿಳಿಯದೇ ಇದ್ದರೆ ಏನನ್ನೂ ಸಹ ಸಾಧಿಸಲು ಆಗುವುದಿಲ್ಲ.

ಬಸವಧರ್ಮವನ್ನು ಯಾರು ಆಚರಣೆ ಮಾಡುತ್ತಾರೋ ಅವರ ಬಾಯಿಂದ ಮೃದುವಾದ ಮಾತು ಬರುತ್ತದೆ. ಬಸವ ಧರ್ಮವನ್ನು ನಾವು ಆಚರಣೆ ಮಾಡಬೇಕಾದ್ದು ಎಷ್ಟು ಮುಖ್ಯ ಎಂಬುದರ ಬಗ್ಗೆ ತಿಳಿದುಕೊಳ್ಳಬೇಕು. ಬಸವ ಧರ್ಮ ಎಂದರೆ ಏನು ಎಂಬುದರ ಬಗ್ಗೆ ಮಕ್ಕಳಿಗೆ ತಿಳಿಸಬೇಕು. ಮೊಬೈಲ್ ಹಾಗೂ ಟಿವಿ ಮೂಲಕ ಮಕ್ಕಳ ಮನಸ್ಸನ್ನು ಕೆಡಿಸುತ್ತಿದ್ದೇವೆ. ಆಧ್ಯಾತ್ಮಿಕ ಶರಣರ ಜೀವನದ ಬಗ್ಗೆ ತಿಳಿಸಬೇಕೆಂದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಬಸವ ಸಮಿತಿಯ ಅಧ್ಯಕ್ಷರಾದ ಎಂ.ಬಿ. ರಾಜಶೇಖರ್, ಶ್ರೀ ಜಗದ್ಗುರು ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಕೆ.ಎಸ್. ಷಡಕ್ಷರಿ, ದಾಸೋಹ ಪ್ರಾಯೋಜಕರಾದ ಬಿ.ಕೆ. ಮಂಜುನಾಥ್, ಉಪಾಧ್ಯಕ್ಷರಾದ ದ್ಯಾವಣ್ಣ, ನಿರ್ದೇಶಕರುಗಳಾದ ಶಿವಕುಮಾರ್, ಮಹದೇವಸ್ವಾಮಿ, ಯುವ ಮುಖಂಡರಾದ ಜಗದೀಶ್, ಮಧುಸೂದನ್, ರುದ್ರಸ್ವಾಮಿ, ಇನ್ನಿತರರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Mandya

ಬಿದರಹಳ್ಳಿಹುಂಡಿ ಗ್ರಾಮದಲ್ಲಿ ಮಾನವ ಸರಪಳಿ ನಿರ್ಮಿಸಿ, ಡೆಂಗ್ಯೂ ಜಾಗೃತಿ

Published

on

ಶ್ರೀರಂಗಪಟ್ಟಣ : ಸ್ವಚ್ಚತೆ ಕಾಪಾಡಿ ಡೆಂಗ್ಯೂದಿಂದ ದೂರವಿರಿ.
ಸಾರ್ವಜನಿಕರು ತಮ್ಮ ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು ಎಲ್ಲಿಯೂ ನೀರಿಲ್ಲದಂತೆ ನೋಡಿಕೊಂಡು ಜಾಗೃತಿ ವಹಿಸಿ,ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಿದರೆ ಡೆಂಗ್ಯೂ ಜ್ವರವನ್ನು ನಿಯಂತ್ರಣ ಮಾಡಬಹುದಾಗಿದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರು ಹೇಳಿದರು.

ಅವರು ತಾಲೂಕಿನ ಮಹದೇವಪುರ ಆಯುಷ್ಮಾನ್ ಆರೋಗ್ಯ ಮಂದಿರ ವತಿಯಿಂದ ಬಿದರಹಳ್ಳಿಹುಂಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಹಾಗೂ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಂದ ನಡೆಸಿದ “ಡೆಂಗ್ಯೂ ನಿಯಂತ್ರಣ” ಕುರಿತಾಗಿ ಜಾಗೃತಿ ಜಾಥಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಡೆಂಗ್ಯೂ ವೈರಸ್ ಹೊತ್ತೊಯ್ಯುವ ಈಡಿಸ್ ಹೆಣ್ಣು ಸೊಳ್ಳೆ ಕಡಿತದಿಂದ ಡೆಂಗ್ಯೂ ಜ್ವರ ಕಾಣಿಸುತ್ತದೆ. ಈ ಸೊಳ್ಳೆ ಶುದ್ಧ ನೀರಿನಲ್ಲಿ ಉತ್ಪತ್ತಿ ಆಗುತ್ತಿದ್ದು, ಆದ ಕಾರಣ ಪರಿಕರಗಳನ್ನು ಮುಚ್ಚಿಟ್ಟು ಸೊಳ್ಳೆಗೆ ಶುದ್ಧ ನೀರು ಸಿಗದಂತೆ ನೋಡಿಕೊಂಡು ಹಾಗೆ ಮಲಗುವಾಗ ಸೊಳ್ಳೆ ಪರದೆ ಕಡ್ಡಾಯವಾಗಿ ಬಳಸಿಕೊಂಡು ಈ ಎಲ್ಲಾ ನಿಯಂತ್ರಣ ಕ್ರಮಗಳನ್ನು ಪಾಲಿಸಿ ಡೆಂಗ್ಯೂ ಕಾಯಿಲೆ ಓಡಿಸಬೇಕೆಂದು ಸಾರ್ವಜನಿಕರಿಗೆ ಮನವಿ ಮಾಡಿದರು.

ನಂತರ ಆರೋಗ್ಯ ನೀರಿಕ್ಷಣಾಧಿಕಾರಿ ಎಂ.ಎನ್.ಕೃಷ್ಣೇಗೌಡ ಮಕ್ಕಳೊಂದಿಗೆ ಮಕ್ಕಳಾಗಿ “ಓಡಿಸಿ ಓಡಿಸಿ, ಸೊಳ್ಳೆ ಓಡಿಸಿ”, “ಓಡಿಸಿ ಓಡಿಸಿ,ಡೆಂಗ್ಯೂ ಜ್ವರ, ಓಡಿಸಿ” “ನಿಂತ ನೀರು ಸೊಳ್ಳೆಗಳ ತವರು” “ಕೀಟ ಚಿಕ್ಕದು,ಕಾಟ ದೊಡ್ಡದು” ಎಂಬ ಘೋಷಣೆಯೊಂದಿಗೆ ಸಾರ್ವಜನಿಕರಿಗೆ ಶಾಲಾ ಮಕ್ಕಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಾರ್ವಜನಿಕ ಸ್ಥಳಗಳಲ್ಲಿ ಮಾನವ ಸರಪಳಿ ನಿರ್ಮಿಸಿ ಜಾಗೃತಿ ಮೂಡಿಸಿದರು.

ಈ ವೇಳೆ ಗ್ರಾಮ ಪಂಚಾಯತಿ ಸದಸ್ಯ ಅಣ್ಣಪ್ಪ ,ಮುಖ್ಯ ಶಿಕ್ಷಕಿ ಶುಭಾಂಗಿಣಿ, ಸಹ ಶಿಕ್ಷಕರಾದ ಸಂತೋಷ್, ಯಶೋಧ, ಅನುಷ,ಸಮುದಾಯ ಆರೋಗ್ಯ ಅಧಿಕಾರಿ ಶರತ್ ಕುಮಾರ,ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶಶಿಕಲಾ, ಆಶಾ ಕಾರ್ಯಕರ್ತೆ ಸುಮಾ,ರತ್ನಮ್ಮ, ನೇತ್ರಾವತಿ,ಜ್ಯೋತಿ,ನೀರು ಗಂಟೆ ಸತೀಶ್ ಹಾಗೂ ಪ್ರೌಢ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು, ಸಾರ್ವಜನಿಕರು ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಜಾಥಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Continue Reading

Mandya

ಕುಡಿದ ಮತ್ತಿನಲ್ಲಿ ಮಾರಣಾಂತಿಕ ಹಲ್ಲೆ ಮೂವರು ಆರೋಪಿಗಳ ಬಂದನ

Published

on

ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಸಮೀಪ ಕುಂದೂರು ಗ್ರಾಮದ ರಸ್ತೆಯಲ್ಲಿ ದಿನಾಂಕ 30-6-2024 ರಂದು ರಾತ್ರಿ ಸುಮಾರು 9.30 ಸಮಯದಲ್ಲಿ ದೊಡ್ಡ ಸೋಮನಹಳ್ಳಿ ಗ್ರಾಮದ ಕುಮಾರ್ ಮತ್ತು ಆತನ ಬಾಮೈದ ಬೋರಲಿಂಗಯ್ಯ ಬೈಕ್ ನಲ್ಲಿ ಹೋಗುವ ಸಂಧರ್ಭದಲ್ಲಿ ಮೂತ್ರ ವಿಸರ್ಜನೆ ಮಾಡಲೆಂದು ಬೈಕ್ ನಿಲ್ಲಿಸಿದ್ದಾರೆ ಅಲ್ಲಯೇ ರಸ್ತೆ ಬದಿಯಲ್ಲೇ ಮದ್ಯಾಪಾನ ಮಾಡುತ್ತಾ ಕುಳಿತಿದ್ದ ಮೂವರು ಅನಾಮಿಕ ಆಸಾಮಿಗಳು ಮದ್ಯಪಾನದ ನಿಶೆಯಲ್ಲಿ ವಿನಾ ಕಾರಣ ಗಲಾಟೆ ಮುಂದಾಗಿದ್ದಾರೆ ಅಲ್ಲಿಯೇ ಇದ್ದ ಬಿಯರ್

ಬಾಟೇಲ್ ನಲ್ಲಿ ಬೋರಲಿಂಗಯ್ಯನ ಮತ್ತು ಕುಮಾರ್ ಎಂಬುವವರ ಮೇಲೆ ಮಾರಣಂತಿಕ ಹಲ್ಲೆ ನೆಡೆಸಿದ್ದು ಈ ವಿಚಾರವಾಗಿ ಕಿಕ್ಕೇರಿ ಪೋಲೀಸರು ದೂರು ಧಾಖಲಾಗಿತ್ತು‌. ಯಾವುದೇ ಪರಿಚನೇ ಇಲ್ಲದೆ ರಸ್ತೆಯಲ್ಲಿ ಹೋಗುತ್ತಿರುವರ ಮೇಲೆ ಕುಡಿದ ಮತ್ತಿನಲ್ಲಿ ಹಲ್ಲೆ ನೆಡಿಸಿರುವ ಹಲ್ಲೆ ಕೋರರನ್ನು ಯಾರೆಂದು ಪತ್ತೆ ಹಚ್ಚಿ ಬಂದಿಸುವಲ್ಲಿ ಯಶಸ್ವಿಯಾಗಿಗಿದ್ದಾರೆ..

ಮೂವರು ಆರೋಪಿಗಳು ಸ್ನೇಹಿತರಾಗಿದ್ದು ತಾಲ್ಲೂಕಿನ ಅಣೇಚಾಕನಹಳ್ಳಿ ಗ್ರಾಮದ ಸುದೀಪ, ಅಲೀಯಾಸ್ ಸುದಿ, ಗಂಗನಹಳ್ಳಿ ಗ್ರಾಮದ ನಾಗರಾಜು, ಕುಂದೂರು ಗ್ರಾಮದ ಲಕ್ಷ್ಮಣ್ ಅಲಿಯಾಸ್ ಬೀರ ಇವರು ಅಂದು ಕುಡಿತ ಮತ್ತಿನಲ್ಲಿ ಹಲ್ಲೆ ನೆಡೆಸಿ ಬೆಂಗಗಳೂರಿನಲ್ಲಿ ತಲೆಮರೆಸಿಕೊಂಡಿದ್ದರು ಕಳೆದ ಒಂದುವಾರದಿಂದ ಇವರ ಪತ್ತೆಗಾಗಿ ಕಿಕ್ಕೇರಿ ಪೋಲೀಸ್ ಠಾಣೆಯ ಇನ್ ಇನ್ಸ್ಪೆಕ್ಟರ್ ರೇವತಿ, ಸಿಬ್ಬಂದಿಗಳಾದ ವಿನೋಧ್, ಕುಮಾರ್, ಬಂದಿಸಿ ನ್ಯಾಯಾಲಯದ ಬಂದನಕ್ಕೆ ಒಪ್ಪಿಸಿದ್ದಾರೆ…

ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ

Continue Reading

Mandya

ಮದ್ದೂರು ತಾಲೂಕಿನ ಸೋಮನಹಳ್ಳಿ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ಡಿಪ್ಲೋಮೋ ಪ್ರವೇಶ ಆರಂಭ*

Published

on

*ಮದ್ದೂರು ತಾಲೂಕಿನ ಸೋಮನಹಳ್ಳಿ ಸರ್ಕಾರಿ ಉಪಕರಣಗಾರ ಮತ್ತು ತರಬೇತಿnnnnn

ಮಂಡ್ಯ : ಮದ್ದೂರು ತಾಲೂಕಿನ ಸೋಮನಹಳ್ಳಿ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ಡಿಪ್ಲೋಮೋ ಪ್ರವೇಶ ಆರಂಭವಾಗಿದೆ ಎಂದು ತರಬೇತಿ ಕೇಂದ್ರದ ಉಪನ್ಯಾಸಕ ಶಾಂತರಾಜ ಅರಸ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಮತ್ತು ಡೆನ್ಮಾರ್ಕ್ ಸರಕಾರದಿಂದ ಬೆಂಗಳೂರಿನ ರಾಜಾಜಿನಗರದಲ್ಲಿ ಸ್ಥಾಪನೆಗೊಂಡಿರುವ ಈ ಕೇಂದ್ರ ಪ್ರಸ್ತುತ 33 ಶಾಖೆಗಳನ್ನು ರಾಜ್ಯಾದ್ಯಂತ ಹೊಂದಿದೆ ಎಂದು ತಿಳಿಸಿದರು .

ಈಗಾಗಲೇ 800 ವಿದ್ಯಾರ್ಥಿಗಳು ತರಬೇತಿ ಪಡೆದು ಉನ್ನತ ಹುದ್ದೆಗಳಲ್ಲಿ ನೇಮಕಗೊಂಡು ಸ್ವಂತ ಉದ್ಯಮವನ್ನು ಕೂಡ ಆರಂಭಿಸಿದ್ದಾರೆ ಎಂದು ತಿಳಿಸಿದರು.

2024 25ನೇ ಸಾಲಿನಲ್ಲಿ ಪ್ರವೇಶ ಆರಂಭಿಸಲಾಗಿದ್ದು ಎಸ್ ಎಸ್ ಎಲ್ ಸಿ ಮತ್ತು ಐಟಿಐ ಹಾಗೂ ಪಿಯುಸಿ ತೇರ್ಗಡೆಯಾದವರು ಪ್ರವೇಶ ಪಡೆಯಬಹುದಾಗಿದೆ ಎಂದರು .

ಮತ್ತೊಬ್ಬ ಉಪನ್ಯಾಸಕ ನರೇಂದ್ರಬಾಬು ಮಾತನಾಡಿ, ಡಿಪ್ಲೋಮೋ ಇನ್ ಟೂಲ್ ಮತ್ತು ಡೈ ಮೇಕಿಂಗ್ ಕೋರ್ಸ್ಗೆ ನೇರ ಪ್ರವೇಶಾತಿ ಲಭ್ಯವಿದ್ದು ಆಸಕ್ತ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.

ಗೋಷ್ಠಿಯಲ್ಲಿ ತರಬೇತಿ ಕೇಂದ್ರದ ಪ್ರಾಂಶುಪಾಲ ಶಿವಕುಮಾರ್, ಉಪನ್ಯಾಸಕ ಸಿದ್ದಾರ್ಥ ಉಪಸ್ಥಿತರಿದ್ದರು.

Continue Reading

Trending

error: Content is protected !!