Hassan
ರೈತರಿಂದ ಕೆನರಾ ಬ್ಯಾಂಕಿಗೆ ಮುತ್ತಿಗೆ, ಆಕ್ರೋಶ
೨೫ ದಿನಗಳ ಒಳಗೆ ಸಮಸ್ಯೆ ಬಗೆಹರಿಸುವ ಅರ್ಜಿ ರೈತರಿಗೆ ನೀಡಿದ ಬ್ಯಾಂಕ್ ಅಧಿಕಾರಿ
ಹಾಸನ: ಅಪಾರ ಬೆಲೆ-ಬಾಳುವ ರೈತರ ಜಮೀನುಗಳನ್ನ ಇ-ಟೆಂಡರ್ ಮೂಲಕ ರೈತನಿಗೆ ಗೊತ್ತಾಗದಂತೆ ೧೦ ಲಕ್ಷ ಸಾಲಕ್ಕೆ ೬೫ ಲಕ್ಷ ಬೆಲೆಗೆ ಹಾರಾಜು ಮಾಡಲಾಗಿದ್ದು, ಖಂಡಿಸಿ ರಾಜ್ಯ ರೈತ ಸಂಘದಿಂದ ನಗರದ ಕೆನರಾ ಬ್ಯಾಂಕಿಗೆ ಮುತ್ತಿಗೆ ಹಾಕಿದಲ್ಲದೇ ಅಧಿಕಾರಿಗೆ ದಿಗ್ಬಂಧನ ಹಾಕಿದ ವೇಳೆ ಬ್ಯಾಂಕ್ ಮುಖ್ಯ ಅಧಿಕಾರಿಯೇ ಅರ್ಜಿ ಬರೆದು ೨೫ ದಿನಗಳ ಒಳಗೆ ರೈತರ ಸಾಲದ ಸಮಸ್ಯೆ ಬಗೆಹರಿಸುವುದಾಗಿ ರೈತ ಸಂಘಕ್ಕೆ ಮನವಿ ನೀಡಿದ ಪ್ರಸಂಗ ನಡೆಯಿತು.
ಬ್ಯಾಂಕಿನ ಮುಖ್ಯಸ್ಥ ಮಂಗಳೂರಿನಿಂದ ಇಲ್ಲಿಗೆ ಬಂದಿದ್ದು, ಇತ ಶೌಚಾಲಯಕ್ಕೆ ಹೋಗುವುದಾಗಿ ಹೇಳಿದರೂ ಬಿಡದೆ ರೈತರು ನ್ಯಾಯಾ ಕೊಡಿಸುವಂತೆ ಹಾಗೂ ರೈತರ ಸಮಸ್ಯೆಯನ್ನು ಬಗೆಹರಿಸಿಕೊಡಲು ಅಧಿಕಾರಿಯೇ ಲೆಟರ್ ಬರೆದುಕೊಡುವಂತೆ ಪಟ್ಟು ಹಿಡಿದರು. ಇಷ್ಟಕ್ಕೆ ಸುಮ್ಮನಾಗದ ರೈತರು ಆತನನ್ನು ಕಟ್ಟಿ ಹಾಕಲು ದಾರ ತರಲು ಮೂರ್ತಿ ಸೂಚಿಸಿದರು. ನಂತರ ಅಧಿಕಾರಿಯೇ ಒಂದು ಅರ್ಜಿ ಬರೆದು ರೈತರಿಗೆ ನೀಡಿದರು. ಅರ್ಜಿಯಲ್ಲಿ ಬರೆದಂತೆ ಹರಾಜು ಕೂಗಿರುವುದನ್ನು ಇನ್ನು ೨೫ ದಿನಗಳ ಒಳಗೆ ಬಗೆಹರಿಸಿ ಕೊಡಲಾಗುವುದು. ರೈತರ ಸಾಲದ ಬಟ್ಟಿ ಹಾಗೂ ಕಟ್ಟಿರುವ ಅಸಲು ಹಣ ದಲ್ಲೂ ಕುಡ ಬಿಟ್ಟು ಕಟ್ಟಿಸಿಕೊಳ್ಳಲಾಗುವುದು. ಈ ಬಗ್ಗೆ ಮಂಗಳೂರಿನಲ್ಲಿ ಸಭೆ ಸೇರಿ ತೀರ್ಮಾನಿಸಲಾಗುವುದು ಎಂದು ಭರವಸೆ ನೀಡಿದರು. ತುಂಬ ಸಮಯ ಕೆನರಾ ಬ್ಯಾಂಕಿನಲ್ಲಿ ರೈತರು ಕುಳಿತು ನಂತರ ಅಧಿಕಾರಿಗಳು ಅರ್ಜಿ ಕೊಟ್ಟ ನಂತರ ವಾಪಸ್ ರೈತರು ಹೋಗಿದ್ದಾರೆ.
ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕಣಗಾಲ್ ಮೂರ್ತಿ ಮಾಧ್ಯಮದೊಂದಿಗೆ ಮಾತನಾಡಿ, ಮಗ್ಗೆ ರಾಯರ ಕೊಪ್ಪಲಿನ ಶಿವಕುಮಾರ್ ಎಂಬುವರ ೭ವರೆ ಎಕರೆ ಜಮೀನನ್ನು ೧೨ ವರ್ಷಗಳ ಹಿಂದೆ ಅಡ ಇಟ್ಟು ೧೦ ಲಕ್ಷ ಪಡೆದಿದ್ದರು. ಆದರೇ ಈಗ ಹರಾಜು ಹಾಕಿದ್ದು, ಈಗಾಗಲೇ ಅವರ ಅಕ್ಕ-ತಂಗಿಯರ ಜಮೀನು ಎಲ್ಲಾ ನ್ಯಾಯಾಲಯದಲ್ಲಿ ಕೇಸು ನಡೆಯುತ್ತಿದ್ದು, ಬ್ಯಾಂಕಿನಿಂದ ಸಾಲ ಪಡೆದಿದ್ದು ೧೦ ಲಕ್ಷ ಆದರೆ ಜಮೀನನ್ನು ಹರಾಜು ಹಾಕಿರುವುದು ೬೫ ಲಕ್ಷಕ್ಕೆ. ಈ ಬಗ್ಗೆ ಸ್ಟೇಟ್ಮೆಮಂಟ್ ಕೇಳಿದರೇ ಹರಾಜು ಆಗಿದೆ ಹೋಗಿ ಎಂದು ಉತ್ತರಿಸಿ ಹೊರಗಡೆಗೆ ನೂಕುತ್ತಾರೆ ಎಂದರು. ಈ ಬಗ್ಗೆ ರೈತರು ಎಲ್ಲಾ ಸೇರಿ ಪ್ರತಿಭಟನೆ ಕೂಡ ಮಾಡಿದ್ದೇವೆ. ರೈತರ ಕೂರಿಸಿಕೊಂಡು ಸಭೆ ಮಾಡುವಂತೆ ಕೆನರಾ ಬ್ಯಾಂಕ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು. ಗುಟ್ಟಾಗಿ ಕರೆಯಿಸಿಕೊಂಡು ಎಲ್ಲಾದಕ್ಕೂ ಸಹಿಯನ್ನು ಮಾಡಿಸಿಕೊಂಡರು. ರೈತರ ಸಾಲಕ್ಕೆ ಬಟ್ಟಿ ಬಿಟ್ಟು ಕಟ್ಟಿಸಿಕೊಳ್ಳುವಂತೆ ಕೇಂದ್ರ ಮತ್ತು ರಾಜ್ಯ ಸರಕಾರ ಸ್ಪಷ್ಟವಾಗಿ ಹೇಳಿದ್ದರು. ಇನ್ನು ಆನ್ಲೈನ್ ಮೂಲಕ ಹರಾಜು ಮಾಡಿದರೇ ರೈತರಿಗೆ ಏನು ತಿಳಿಯುವುದಿಲ್ಲ. ಆದ್ರೆ ಈ ಬ್ಯಾಂಕಿನವರು ಒಟ್ಟಿಗೆ ಕರೆಯದೆ ಒಬ್ಬೊಬ್ಬರನ್ನೆ ಕರೆಯಿಸಿಕೊಂಡು ಮಾತನಾಡಿದ್ದಾರೆ. ಈ ಬಗ್ಗೆ ಮಂಗಳೂರಿನಿಂದ ಅಧಿಕಾರಿಗಳು ಇಲ್ಲಿಗೆ ಬಂದಿದ್ದು, ಇನ್ನು ಅವರಿಗೆ ಕನ್ನಡ ಭಾಷೆಯೇ ಬರುವುದಿಲ್ಲ. ಅವರನ್ನು ಇಲ್ಲಿ ಕೂಡಿ ಹಾಕಿದ್ದು, ನಮಗೆ ನ್ಯಾಯ ಕೊಡಿಸವರೆಗೂ ಹೊರಗೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದಿರುವುದಾಗಿ ಹೇಳಿದರು.
ಇದೆ ವೇಳೆ ರಾಜ್ಯ ರೈತ ಸಂಘದ ಮುಕಂಡರಾದ ಶಿವಕುಮಾರ್, ಮಂಜುನಾಥ್, ಮಲ್ಲೇಶ್, ಲಕ್ಷ್ಮಣ್ ಇತರರು ಉಪಸ್ಥಿತರಿದ್ದರು.

Hassan
ಹಾಸನದಲ್ಲಿ ಡಿ. 20ರಂದು ‘ಕ್ರಿಸ್ಮಸ್–2025 ಭರವಸೆಯ ಜಾಥಾ
ಹಾಸನ: “ಆಲ್ ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಫೋರಮ್ ಫಾರ್ ಹ್ಯೂಮನ್ ರೈಟ್ಸ್” ಹಾಸನ ಘಟಕದ ವೇದಿಕೆ ಅಡಿಯಲ್ಲಿ, ಹಾಸನ ಜಿಲ್ಲೆಯ ಸಮಸ್ತ ಕ್ರೈಸ್ತ ಸಮುದಾಯದ ಸಹಯೋಗದಲ್ಲಿ “ಕ್ರಿಸ್ಮಸ್–2025 ಭರವಸೆಯ ಜಾಥಾ” ಕಾರ್ಯಕ್ರಮವನ್ನು ಡಿ. 20, 2025ರ ಶನಿವಾರ ಮಧ್ಯಾಹ್ನ 3 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಎಂದು ಫಾದರ್ ಪ್ಯಾಟ್ರಿಕ್ ರಾವ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಗರದ ಸಂತ ಅಂತೋಣಿಯವರ ದೇವಾಲಯದಿಂದ ಜಾಥಾ ಆರಂಭವಾಗಲಿದ್ದು, ಎನ್.ಆರ್. ಸರ್ಕಲ್ ಹೇಮಾವತಿ ಪ್ರತಿಮೆ, ಮಹಾವೀರ ವೃತ್ತ, ಸಹ್ಯಾದ್ರಿ ಸರ್ಕಲ್, ಮಹಾರಾಜ ಪಾರ್ಕ್ ರಸ್ತೆ, ಸೈಟರ್ಸ್ ಮೆಮೋರಿಯಲ್ ಹಾಲ್ ವೃತ್ತ, ಆರ್.ಸಿ. ರಸ್ತೆ ಮೂಲಕ ಸಾಗಿಸಿ ಜಿಲ್ಲಾ ಪಂಚಾಯತ್ ಸರ್ಕಲ್ ಮೂಲಕ ಮತ್ತೆ ಸಂತ ಅಂತೋಣಿಯವರ ದೇವಾಲಯಕ್ಕೆ ವಾಪಸ್ಸಾಗಲಿದೆ. ನಂತರ ಚರ್ಚ್ ಆವರಣದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ.

ಜಾಥಾದ ಸಂದರ್ಭದಲ್ಲಿ ಸ್ತಬ್ಧ ಚಿತ್ರಗಳು, ಕ್ರಿಸ್ಮಸ್ ನೃತ್ಯ ರೂಪಕಗಳು, ಕೋಲಾಟಿ, ಕ್ರಿಸ್ಮಸ್ ಹಾಡುಗಳು ಸೇರಿದಂತೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಸುಮಾರು 4ರಿಂದ 5 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ.
ಚರ್ಚ್ ಆವರಣದಲ್ಲಿ ನಡೆಯುವ ಕ್ರಿಸ್ಮಸ್ ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ಧರ್ಮಕ್ಷೇತ್ರದ ಹ್ಯೂಮನ್ ರೈಟ್ಸ್ ಚೇರ್ಮನ್ ಹಾಗೂ ಹಾಸನ–ಚಿಕ್ಕಮಗಳೂರು ಧರ್ಮಕ್ಷೇತ್ರದ ಬಿಷಪ್‌ರು, ಸಿ.ಎಸ್.ಐ ಧರ್ಮಪ್ರಾಂತ್ಯದ ಬಿಷಪ್‌ರು, ಜಿಲ್ಲಾ ಉಸ್ತುವಾರಿ ಸಚಿವರು, ಲೋಕಸಭಾ ಸದಸ್ಯರು, ವಿಧಾನಸಭಾ ಸದಸ್ಯರು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳು ಭಾಗವಹಿಸಲಿದ್ದಾರೆ.
ಈ ಭರವಸೆಯ ಜಾಥಾ ಹಾಗೂ ಕ್ರಿಸ್ಮಸ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಆಲ್ ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಫೋರಮ್ ಫಾರ್ ಹ್ಯೂಮನ್ ರೈಟ್ಸ್, ಹಾಸನ ವಲಯವು ಮನವಿ ಮಾಡಿದೆ.
ಸುದ್ದಿಗೋಷ್ಠಿಯಲ್ಲಿ ಫಾ. ಸುದರ್ಶನ್ ಕುಮಾರ್, ಫಾ. ಜೋಸೆಫ್, ಫಾ. ಸಿಲ್ವೆಸ್ಟರ್, ಫಾ. ಜೋಶ್ವ ಹಾಗೂ ಇತರರು ಉಪಸ್ಥಿತರಿದ್ದರು.
Hassan
ಕರ್ನಾಟಕ ಮಾದಾರ ಮಹಾಸಭಾ ಸದಸ್ಯತ್ವ ನೋಂದಣಿ ಹಾಗೂ ತಾಲ್ಲೂಕು ಘಟಕಗಳ ಆಯ್ಕೆ
ಹಾಸನ: ಕರ್ನಾಟಕ ಮಾದಾರ ಮಹಾಸಭಾ (ರಿ) ರಾಜ್ಯ ಸಮಿತಿ ಹಾಗೂ ರಾಜ್ಯಾಧ್ಯಕ್ಷರ ಆದೇಶದ ಮೇರೆಗೆ, ದಿನಾಂಕ 10-12-2025 ರಂದು ಬೆಳಗಾವಿಯಲ್ಲಿ ನಡೆದ ರಾಜ್ಯ ಕಾರ್ಯಕಾರಣಿ ಸಭೆಯ ಅಜೆಂಡಾ ಅನ್ವಯ, ಕರ್ನಾಟಕ ಮಾದಾರ ಮಹಾಸಭಾದ ಸದಸ್ಯತ್ವ ನೋಂದಣಿ ಮತ್ತು ಸಂಘಟನಾ ಅಭಿಯಾನವನ್ನು ರಾಜ್ಯಾದ್ಯಂತ ಬಲಪಡಿಸುವ ಉದ್ದೇಶದಿಂದ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಸಭೆಗಳನ್ನು ಆಯೋಜಿಸಲಾಗುತ್ತಿದೆ. ಎಂದು ವಿಜಯಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಾಸನ ಜಿಲ್ಲೆಯಲ್ಲಿ 22 ಡಿ. (ಸೋಮವಾರ) ಬೆಳಗ್ಗೆ 11 ಗಂಟೆಗೆ ಹಾಸನ ನಗರದ ಸ್ವಾಭಿಮಾನ ಭವನದಲ್ಲಿ ಮಹತ್ವದ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಸಭೆಯಲ್ಲಿ ಜಿಲ್ಲೆಯಲ್ಲಿ ಎಲ್ಲಾ ಏಳು ತಾಲ್ಲೂಕುಗಳ ಮಾದಿಗ ಸಮುದಾಯದ ಎಲ್ಲ ಪಕ್ಷಗಳ ರಾಜಕಾರಣಿಗಳು, ಹೋರಾಟಗಾರರು, ವಿದ್ಯಾರ್ಥಿಗಳು, ನೌಕರ ಬಾಂಧವರು, ಸಮಾಜಮುಖಿ ಚಿಂತಕರು ಹಾಗೂ ಮಹಿಳೆಯರು ಭಾಗವಹಿಸಲಿದ್ದಾರೆ. ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತಲಾ ಎರಡು ಸಾವಿರ ಸದಸ್ಯತ್ವ ನೋಂದಣಿ ಮಾಡುವ ಗುರಿಯೊಂದಿಗೆ, ಒಂದು ಕುಟುಂಬಕ್ಕೆ ಒಬ್ಬರಂತೆ ರೂ.500 ಶುಲ್ಕದ ಮೂಲಕ ಸದಸ್ಯತ್ವ ನೋಂದಣಿ ನಡೆಸುವ ಬಗ್ಗೆ ಚರ್ಚೆ ನಡೆಯಲಿದೆ. ಜೊತೆಗೆ ಜಿಲ್ಲಾ ಮತ್ತು ತಾಲ್ಲೂಕು ಘಟಕಗಳ ರಚನೆ, ಪದಾಧಿಕಾರಿಗಳ ಆಯ್ಕೆ, ಹಾಗೂ ರಾಜ್ಯ ಸಮಿತಿಯ ಆದೇಶದಂತೆ ಮುಂದಿನ ಸಂಘಟನಾ ಕಾರ್ಯಚಟುವಟಿಕೆಗಳ ಕುರಿತು ವಿವರವಾದ ಚರ್ಚೆ ನಡೆಯಲಿದೆ.
ಪಕ್ಷಾತೀತವಾಗಿ ಸಮುದಾಯದ ಎಲ್ಲ ಬಾಂಧವರು ಸಭೆಯಲ್ಲಿ ಭಾಗವಹಿಸಿ ತಮ್ಮ ತಮ್ಮ ತಾಲೂಕಿನಿಂದ ಅಗತ್ಯ ಸಲಹೆ–ಸೂಚನೆಗಳನ್ನು ನೀಡಿ ಸಂಘಟನೆಯನ್ನು ಬಲಪಡಿಸಬೇಕೆಂದು ಹಾಸನ ಜಿಲ್ಲಾ ಕರ್ನಾಟಕ ಮಾದಾರ ಮಹಾಸಭಾ ಮನವಿ ಮಾಡಿದೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಎಂ.ಆರ್. ವೆಂಕಟೇಶ್ (ರಾಜ್ಯ ಸಮಿತಿ ಸದಸ್ಯರು, ಹಾಸನ ಜಿಲ್ಲಾ ಉಸ್ತುವಾರಿ ಹಾಗೂ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷರು), ಎಂ.ಟಿ.ಆರ್. ವಿಜಯಕುಮಾರ್ (ಜಿಲ್ಲಾಧ್ಯಕ್ಷರು), ವತ್ಸಲಾ ಶೇಖರಪ್ಪ (ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರು), ಶ್ರೀನಿವಾಸ್ (ಚನ್ನರಾಯಪಟ್ಟಣ), ಸಿ.ಆರ್. ಮಂಜುನಾಥ್ (ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರು), ಭೈರೇಶ್ (ಜಿಲ್ಲಾ ಎಸ್‌ಸಿ–ಎಸ್‌ಟಿ ಮೇಲ್ವಿಚಾರಣಾ ಸಮಿತಿ ಸದಸ್ಯರು), ಕಡಗ ಸತೀಶ್ ಹಾಗೂ ಪ್ರಕಾಶ್ ವಿರೂಪಾಕ್ಷಿಪುರ ಸೇರಿದಂತೆ ಸಮುದಾಯದ ಪ್ರಮುಖ ನಾಯಕರು ಉಪಸ್ಥಿತರಿದ್ದರು.
Hassan
ರೌಡಿಶೀಟರ್ ಜೆಸಿಬಿ ಮಂಜನ ಮೇಲೆ ಮಾರಕಾಸ್ತ್ರಗಳಿಂದ ಅಟ್ಯಾಕ್
ಹಾಸನ : ರೌಡಿಶೀಟರ್ ಜೆಸಿಬಿ ಮಂಜನ ಮೇಲೆ ಮಾರಕಾಸ್ತ್ರಗಳಿಂದ ಅಟ್ಯಾಕ್ ಮಾಡಿದ ಗ್ಯಾಂಗ್
ಕುತ್ತಿಗೆಗೆ ಭರ್ಜಿಯಿಂದ ತಿವಿದು ಕೊಲೆಗೆ ಯತ್ನ
ಕೂದಲೆಳೆ ಅಂತರದಲ್ಲಿ ಪಾರಾದ ರೌಡಿಶೀಡರ್ ಜೆಸಿಬಿ ಮಂಜ
ಹಾಸನ ನಗರದ, ರಿಂಗ್ ರಸ್ತೆಯಲ್ಲಿ ಘಟನೆ

ಮನೆಯಲ್ಲಿದ್ದ ಜೆಸಿಬಿ ಮಂಜನನ್ನು ಮಾತನಾಡಬೇಕೆಂದು ಫೋನ್ ಮಾಡಿ ಕರೆಸಿದ ರಾಜಿ
ಬಾರ್ ಪಕ್ಕದಲ್ಲಿರುವ ಫುಟ್‌ಬಾತ್ ಮೇಲೆ ಮಾತನಾಡುತ್ತಿದ್ದ ವೇಳೆ ದಿಢೀರ್ ಅಟ್ಯಾಕ್ ಮಾಡಿದ ಇಪ್ಪತ್ತಕ್ಕೂ ಹೆಚ್ಚು ಪುಡಿರೌಡಿಗಳಿದ್ದ ಗ್ಯಾಂಗ್
ಯೋಗಿಹಳ್ಳಿ ಗ್ರಾಮದ ರಾಜಿ, ಅಶೋಕ ಎಂಬುವವರ ವಿರುದ್ಧ ಆರೋಪ
ಗಾಯಾಳುವಿಗೆ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ
ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ
ಹಾಸನ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ
-
Hassan6 hours agoರೌಡಿಶೀಟರ್ ಜೆಸಿಬಿ ಮಂಜನ ಮೇಲೆ ಮಾರಕಾಸ್ತ್ರಗಳಿಂದ ಅಟ್ಯಾಕ್
-
Chamarajanagar22 hours agoನಾಳೆ ರಂಗವಾಹಿನಿ ಜಾನಪದ ಕಾಲೇಜು ಉದ್ಘಾಟನೆ ಕಾರ್ಯಕ್ರಮ
-
Mandya21 hours agoSSLC ಪರೀಕ್ಷಾ ಫಲಿತಾಂಶ ಹೆಚ್ಚಿಸಲು ಕಾರ್ಯೋನ್ಮುಖರಾಗಲು ಸೂಚಿಸಿದ ಕೆ.ಆರ್.ನಂದಿನಿ
-
Mysore3 hours agoಗೃಹಲಕ್ಷ್ಮೀ ಯೋಜನೆ ಬಗ್ಗೆ ಸದನಕ್ಕೆ ತಪ್ಪು ಮಾಹಿತಿ: ಲಕ್ಷ್ಮೀ ಹೆಬ್ಬಾಳ್ಕರ್ ವಜಾಗೆ ಹೇಮಾ ನಂದೀಶ್ ಆಗ್ರಹ
-
Chikmagalur21 hours agoಡಿ.20 ರಿಂದ ಜ.6ರವರೆಗೆ ಜಿಲ್ಲೆಯಲ್ಲಿ ಹೆಲಿಟೂರಿಸಂ ಚಟುವಟಿಕೆ
-
State20 hours agoಗೃಹಲಕ್ಷ್ಮೀ ಯೋಜನೆಯಲ್ಲಿ ಮೋಸ: ನ್ಯಾಯಾಂಗ ತನಿಖೆಗೆ ಆಗ್ರಹಿಸಿದ ಸಿ.ಟಿ.ರವಿ
-
Hassan19 hours agoಪೊಲೀಸರ ಭರ್ಜರಿ ಕಾರ್ಯಚರಣೆ: ಮಟ್ಕಾ ಆಡುತ್ತಿದ್ದ 17 ಮಂದಿ ಬಂಧನ
-
Special5 hours ago994 ಪಿಡಿಒ ಹುದ್ದೆಗಳ ನೇಮಕಾತಿ 2026: ಪದವೀಧರರಿಗೆ ಭರ್ಜರಿ ಸರ್ಕಾರಿ ಉದ್ಯೋಗ ಅವಕಾಶ
