Politics
ಜೆಡಿಎಸ್ ಪಕ್ಷಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿದ ಹೆಚ್.ಡಿ.ಕುಮಾರಸ್ವಾಮಿ
ಪಕ್ಷ ಸೇರಿದ ವಿಶ್ರಾಂತ ಐಪಿಎಸ್ ಅಧಿಕಾರಿ ಜ್ಯೋತಿ ಪ್ರಕಾಶ್ ಮಿರ್ಜಿ ಅವರಿಗೆ ಹಿರಿಯ ಉಪಾಧ್ಯಕ್ಷ ಸ್ಥಾನ
ವೆಂಕಟರಾವ್ ನಾಡಗೌಡರಿಗೆ ಮಹಾ ಪ್ರಧಾನ ಕಾರ್ಯದರ್ಶಿ ಹುದ್ದೆ
ಐವರು ಕಾರ್ಯಾಧ್ಯಕ್ಷರು, ಮೂವರು ಹಿರಿಯ ಉಪಾಧ್ಯಕ್ಷರ ನೇಮಕ; ಶಾಸಕ ರವಿಕುಮಾರ್ ಖಜಾಂಚಿ
*
ಬೆಂಗಳೂರು: ಕರ್ನಾಟಕ ಪ್ರದೇಶ ಜನತಾದಳ (ಜಾತ್ಯತೀತ)ಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿರುವ ಮಾಜಿ ಮುಖ್ಯಮಂತ್ರಿಗಳು, ಪಕ್ಷದ ರಾಜ್ಯಾಧ್ಯಕ್ಷರಾದ ಹೆಚ್.ಡಿ.ಕುಮಾರಸ್ವಾಮಿ ಅವರು, ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ.
ಐವರು ಕಾರ್ಯಾಧ್ಯಕ್ಷರು:
ಅಲ್ಕೊಡ್ ಹನುಮಂತಪ್ಪ, ಸಿ.ಬಿ.ಸುರೇಶ್ ಬಾಬು, ಭೀಮಗೌಡ ಬಸನಗೌಡ ಪಾಟೀಲ್ (ರಾಜೂಗೌಡ), ಸಾ.ರಾ.ಮಹೇಶ್, ದೊಡ್ಡಪ್ಪಗೌಡ ಶಿವಲಿಂಗಪ್ಪಗೌಡ ನರೆಬೋ
ಹಿರಿಯ ಉಪಾಧ್ಯಕ್ಷರು:
ಡಾ.ಶ್ರೀನಿವಾಸ ಮೂರ್ತಿ, ರವೀಂದ್ರ ಶ್ರೀಕಂಠಯ್ಯ, ಸೋಮಣ್ಣ ಗೌಡ ಪಾಟೀಲ್, ಜ್ಯೋತಿ ಪ್ರಕಾಶ್ ಮಿರ್ಜಿ
ಉಪಾಧ್ಯಕ್ಷರು:
ಕೆ.ಎಂ.ತಿಮ್ಮರಾಯಪ್ಪ, ರಾಜಾ ವೆಂಕಟಪ್ಪ ನಾಯಕ ದೊರೆ, ಕರೆಮ್ಮ ಜಿ..ನಾಯಕ, ಚೌಡರೆಡ್ಡಿ ತೂಪಲ್ಲಿ, ಸುನೀತಾ ಚೌಹಾಣ್, ಕೆ.ಬಿ.ಪ್ರಸನ್ನ ಕುಮಾರ್, ಟಿ. ಎ.ಶರವಣ
ಮಹಾ ಪ್ರಧಾನ ಕಾರ್ಯದರ್ಶಿ:
ವೆಂಕಟರಾವ್ ನಾಡಗೌಡ
ಖಜಾಂಚಿ:
ಬಿ.ಎನ್.ರವಿಕುಮಾರ್
ಪ್ರಧಾನ ಕಾರ್ಯದರ್ಶಿಗಳು:
ಎ. ಪಿ.ರಂಗನಾಥ್, ಅರ್ ಪ್ರಕಾಶ್, ಸಯ್ಯದ್ ರೋಷನ್ ಅಬ್ಬಾಸ್, ರೆಹಮತುಲ್ಲಾ ಖಾನ್, ಸುಧಾಕರ್ ಲಾಲ್, ಶಿವಕುಮಾರ ನಾಟೀಕಾರ್, ಶಾರದಾ ಅಪ್ಪಾಜಿಗೌಡ, ರೂತ್
ಮನೋರಮಾ, ಮಲ್ಲೇಶ್ ಬಾಬು, ವೀರಭದ್ರಪ್ಪ ಹಲರವಿ
ಕಾರ್ಯದರ್ಶಿಗಳು:
ಮಹಂತಯ್ಯಮಠ, ಶಂಸಿ ತಬ್ರಾಜ್, ಐಲಿನ್ ಜಾನ್ ಮಠಪತಿ, ಬಿ.ಕಾಂತರಾಜ್, ಡಾ.ವಿಜಯ ಕುಮಾರ್, ಡಾ.ಶೀಲಾ ನಾಯಕ್, ರೋಷನ್ ಬಾವಾಜಿ, ಚಂದ್ರಕಾಂತ್ ಶೇಕಾ, ಕನ್ಯಾಕುಮಾರಿ, ಸಿದ್ದಬಸಪ್ಪ ಯಾದವ್
*
ಜಿಲ್ಲಾಧ್ಯಕ್ಷರ ನೇಮಕ:
ಐದು ಜಿಲ್ಲೆಗಳಿಗೆ ನೂತನ ಜಿಲ್ಲಾಧ್ಯಕ್ಷರು ಹಾಗೂ ರಾಜ್ಯ ಮಟ್ಟದ ಮೂರು ವಿಭಾಗಗಳಿಗೆ ರಾಜ್ಯಾಧ್ಯಕ್ಷರು, ಕಾರ್ಯಾಧ್ಯಕ್ಷರನ್ನು ನೇಮಕ ಮಾಡಲಾಗಿದೆ.
ಮಾಜಿ ಶಾಸಕ ಡಾ.ಕೆ.ಅನ್ನದಾನಿ ಅವರನ್ನು ಪರಿಶಿಷ್ಟ ಜಾತಿ ವಿಭಾಗದ ರಾಜ್ಯಾಧ್ಯಕ್ಷರನ್ನಾಗಿ, ರಶ್ಮಿ ರಾಮೇಗೌಡ ಅವರನ್ನು ಮಹಿಳಾ ವಿಭಾಗದ ರಾಜ್ಯಾಧ್ಯಕ್ಷರನ್ನಾಗಿ, ರಾಜು ನಾಯಕ ಅವರನ್ನು ಯುವ ಜನತಾದಳದ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಶಿಕ್ಷಕರ ಕ್ಷೇತ್ರದ ಚುನಾವಣೆ ಉಸ್ತುವಾರಿ:
ಎನ್ ಡಿಎ ಮೈತ್ರಿಕೂಟದ ಅಭ್ಯರ್ಥಿ ಆಗಿ ಬೆಂಗಳೂರು ಶಿಕ್ಷಕರ ಕ್ಷೇತ್ರದ ಕಣದಲ್ಲಿರುವ ಜೆಡಿಎಸ್ ರಾಜ್ಯ ಕಾನೂನು ಘಟಕದ ಅಧ್ಯಕ್ಷ ಎ.ಪಿ.ರಂಗನಾಥ್ ಅವರ ಗೆಲುವಿಗೆ ಶ್ರಮಿಸಲು ಮೂವರು ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ.
ಬೆಂಗಳೂರು ನಗರ ಜೆಡಿಎಸ್ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ, ಮಾಜಿ ಶಾಸಕ ಇ.ಕೃಷ್ಣಪ್ಪ, ಬೆಂಗಳೂರು ನಗರದ ಮಾಜಿ ಅಧ್ಯಕ್ಷ ಆರ್ ಪ್ರಕಾಶ್ ಅವರಿಗೆ ಈ ಹೊಣೆ ವಹಿಸಲಾಗಿದೆ.
ಸರಣಿ ಸಭೆಗಳು, ಮುಖಂಡರಿಗೆ ಖಡಕ್ ಸೂಚನೆ:
ಪಕ್ಷದ ಕಚೇರಿ ಜೆ ಪಿ ಭವನದಲ್ಲಿ ಸರಣಿ ಸಭೆಗಳು ನಡೆದವು. ಮೊದಲು ರಾಜ್ಯ ಕೋರ್ ಕಮಿಟಿ ಸಭೆ ನಡೆದು, ಪಕ್ಷದ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಯಿತು. ಅಲ್ಲದೆ, ರಾಜ್ಯ ರಾಜಕೀಯ ಬೆಳವಣಿಗೆಗಳ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಲಾಯಿತು. ಅಲ್ಲದೆ, ಶಿಕ್ಷಕರ ಕ್ಷೇತ್ರ ಹಾಗೂ ಲೋಕಸಭೆ ಚುನಾವಣೆಯ ಉಸ್ತುವಾರಿಗಳ ಹೆಸರುಗಳನ್ನು ಅಂತಿಮಗೊಳಿಸಲಾಯಿತು.
ಕೋರ್ ಕಮಿಟಿ ಸಭೆಯಲ್ಲಿ ಜಿಟಿ ದೇವೇಗೌಡರು, ಹೆಚ್.ಡಿ.ಕುಮಾರಸ್ವಾಮಿ, ಆಲ್ಕೊಡ್ ಹನುಮಂತಪ್ಪ, ಹೆಚ್.ಕೆ.ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ಎ.ಮಂಜು, ನೆಮಿರಾಜ್ ನಾಯಕ್, ದೊಡ್ಡಪ್ಪ ಗೌಡ ಪಾಟೀಲ್, ರಾಜಾ ವೆಂಕಟಪ್ಪ ನಾಯಕ ದೊರೆ, ಸುನೀತಾ ಚೌಹಾಣ್, ಡಿ.ನಾಗರಾಜಯ್ಯ, ಡಿಸಿ ತಮ್ಮಣ್ಣ, ಕೆ.ಎಂ.ಕೃಷ್ಣಾರೆಡ್ಡಿ, ಸಿ.ಎಸ್.ಪುಟ್ಟರಾಜು, ಸುರೇಶ್ ಗೌಡ, ಕೆ.ಎ.ತಿಪ್ಪೇಸ್ವಾಮಿ, ಚಂದ್ರಶೇಖರ್, ಪ್ರಸನ್ನ ಕುಮಾರ್, ತಿಮ್ಮರಾಯಪ್ಪ, ವೀರಭದ್ರಪ್ಪ ಹಾಲಹರವಿ, ಸೂರಜ್ ನಾಯಕ್ ಸೋನಿ ಅವರು ಭಾಗಿಯಾಗಿದ್ದರು.
ತದ ನಂತರ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಶಾಸಕರಾದ ಕೃಷ್ಣಪ್ಪ, ನೇಮಿರಾಜ್,ರಾಜೂಗೌಡ, ಕರೆಮ್ಮ ನಾಯಕ್, ವಿಧಾನ ಪರಿಷತ್ ಸದಸ್ಯರಾದ ಟಿ.ಎ.ಶರವಣ, ನಗರ ಜನತಾದಳ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ಸೇರಿದಂತೆ ಎಲ್ಲಾ ಶಾಸಕರು, ಮಾಜಿ ಶಾಸಕರು ಹಾಜರಿದ್ದರು.
ಮಿರ್ಜಿ ಅವರಿಗೆ ನೂತನ ಪದಾಧಿಕಾರಿಗಳ ಪಟ್ಟಿಯಲ್ಲಿ ಸ್ಥಾನ ನೀಡಲಾಗಿದ್ದು, ಅವರಿಗೆ ಹಿರಿಯ ಉಪಾಧ್ಯಕ್ಷ ಹುದ್ದೆ ಕೊಡಲಾಗಿದೆ.
*
//ಪಕ್ಷ ಸೇರಿದ ಜ್ಯೋತಿ ಪ್ರಕಾಶ್ ಮಿರ್ಜಿ//
ಜೆಡಿಎಸ್ ಪಕ್ಷ ಸೇರಿದ ವಿಶ್ರಾಂತ ಐಪಿಎಸ್ ಅಧಿಕಾರಿ ಜ್ಯೋತಿ ಪ್ರಕಾಶ್ ಮಿರ್ಜಿ ಅವರನ್ನು ರಾಜ್ಯಾಧ್ಯಕ್ಷರಾದ ಹೆಚ್.ಡಿ.ಕುಮಾರಸ್ವಾಮಿ ಅವರು, ಮತ್ತಿತರೆ ನಾಯಕರು ಪಕ್ಷದ ಬಾವುಟ ನೀಡುವ ಮೂಲಕ ಪಕ್ಷಕ್ಕೆ ಬರ ಮಾಡಿಕೊಂಡರು.
Politics
ಮದ್ದೂರು ಕಲ್ಲು ತೂರಾಟ ಪ್ರಕರಣ|ಬಿಜೆಪಿ ಸತ್ಯಶೋಧನಾ ತಂಡ ರಚನೆ: ಬಿ.ವೈ.ವಿಜಯೇಂದ್ರ
ಬೆಂಗಳೂರು: ಮದ್ದೂರು ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್‌ರಾವ್ ನೇತೃತ್ವದಲ್ಲಿ ಸತ್ಯಶೋಧನಾ ತಂಡ ರಚನೆ ಮಾಡಿದ್ದು, ಘಟನೆ ನಡೆದ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ ಬಳಿಕ ವರದಿ ನೀಡಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಮದ್ದೂರಿನಲ್ಲಿ ಪೊಲೀಸ್ ಇಲಾಖೆಯ ಸಂಪೂರ್ಣ ವೈಫಲ್ಯ ಎದ್ದು ಕಾಣುತ್ತಿದೆ. ರಾಜ್ಯದಲ್ಲಿ ತುಘಲಕ್ ದರ್ಬಾರ್ ನಡೆದಿದೆ. ನಿಜಾಮರ ಆಡಳಿತವನ್ನು ನಿನ್ನೆ ಪ್ರಕರಣ ನೆನೆಪು ಮಾಡಿದೆ ಎಂದು ವ್ಯಂಗ್ಯ ಮಾಡಿದರು.

ಸಿಎಂ ಮತ್ತು ಗೃಹ ಸಚಿವರು ತಮ್ಮ ಧೋರಣೆಯನ್ನು ಸರಿಪಡಿಸಿಕೊಳ್ಳದಿದ್ದರೆ ರಾಕ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಹಾಳಾಗುತ್ತದೆ. ಅದಕ್ಕ ಸರ್ಕಾರವೇ ನೇರ ಹೊಣೆ ಹೊರಬೇಕಾಗುತ್ತದೆ. ಗಣೇಶ ಮೆರವಣಿಗೆಯಲ್ಲಿ ಕೇಸರಿ ಶಾಲು ಹಾಕಿ ವರ್ತಿಸಿದ ಪಿಎಸ್‌ಐ ಒಬ್ಬರನ್ನು ಅಮಾನತು ಮಾಡಿರುವ ಮಾಹಿತಿ ಇದೆ. ನಾನೇನು ಪಾಕಿಸ್ತಾನದಲ್ಲಿ ಇದ್ದೇವಾ? ಎಂದು ಪ್ರಶ್ನಿಸಿದರು.
ನಮ್ಮ ರಾಜ್ಯದಲ್ಲಿ ಇವತ್ತು ಏನಾಗುತ್ತಿದೆ? ದಿನನಿತ್ಯ ಯಾವ ರೀತಿ ಪರಿಸ್ಥಿತಿ ಹದಗೆಡುತ್ತಿದೆ? ಕಾನೂನು ಸುವ್ಯವಸ್ಥೆ ಮುರಿದುಬಿದ್ದಿದೆ. ಕಾಂಗ್ರೆಸ್ ಸರ್ಕಾರಕ್ಕೆ ಯಾಕೆ ಇಂಥ ದುರ್ಬುದ್ಧಿ ಬಂದಿದೆ? ಕಾಂಗ್ರೆಸ್ ಸರ್ಕಾರಕ್ಕೆ ಹಿಂದೂಗಳು ಏನು ಅನ್ಯಾಯ ಮಾಡಿದ್ದಾರೆ ಎಂದು ರಾಜ್ಯದ ಅಸಂಖ್ಯಾತ ಹಿಂದೂ ಕಾರ್ಯಕರ್ತರು ಸಿಎಂ ಅವರನ್ನು ಪ್ರಶ್ನಿಸುತ್ತಿದ್ದಾರೆ. ಮುಖ್ಯಮಂತ್ರಿಗಳ ಸುತ್ತ ಅಯೋಗ್ಯರನ್ನೇ ಇಟ್ಟುಕೊಂಡಂತಿದೆ ಎಂದು ವಾಗ್ದಾಳಿ ನಡೆಸಿದರು.
ಹಿಂದೂಗಳ ಮೇಲೆ ಕಲ್ಲೆಸೆತ, ಹಲ್ಲೆ ನಡೆಯುತ್ತಿದೆ. ಗಣಪತಿ ಮಹೋತ್ಸವವನ್ನೂ ಹಿಂದೂಗಳು ವಿಜೃಂಭಣೆಯಿಂದ ಆಚರಿಸಲು ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್ ಸರ್ಕಾರದ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣವು ಕಳೆದ ಎರಡೂವರೆ ವರ್ಷಗಳಿಂದ ನಿರಂತರವಾಗಿ ನಡೆಯುತ್ತ ಬಂದಿದೆ ಎಂದು ಟೀಕಿಸಿದರು.
Politics
ಭಾರತವನ್ನು ಮುನ್ನಡೆಸುವುದಕ್ಕೆ ಪ್ರಧಾನಿ ಮೋದಿ ಅವರಿಂದ ಸಾಧ್ಯ: ಬಿ.ವೈ. ವಿಜಯೇಂದ್ರ
ಬೆಂಗಳೂರು: ಪ್ರಧಾನಿ ಮೋದಿ ಅವರಿಂದ ಮಾತ್ರ ಭಾರತವನ್ನು ಮುನ್ನಡೆಸುವುದಕ್ಕೆ ಸಾಧ್ಯವೆಂದು ದೇಶದ ಸಾರ್ವಜನಿಕರು ಒಪ್ಪಿಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು.
ನಗರದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದೇಶದ ಜನತೆ ಕಾಂಗ್ರೆಸ್ ಪಕ್ಷದ ಬಗ್ಗೆ ಏಕೆ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಚರ್ಚಿಸಬೇಕು ಅಥವಾ ಚಿಂತನೇ ಮಾಡಬೇಕೆ ವಿನಾಃ ಇವಿಎಂ ಬಗ್ಗೆ ಪ್ರಶ್ನೆ ಮಾಡುತ್ತಿರುವುದು ಮುರ್ಖತನದ ಪರಮಾವಧಿ. ದೇಶದ ಭವಿಷ್ಯದ ದೃಷ್ಟಿಯಿಂದ ನರೇಂದ್ರ ಮೋದಿ ಜೀ ಅವರಿಂದ ಮಾತ್ರ ಭಾರತವನ್ನ ಮುನ್ನಡೆಸುವುದಕ್ಕೆ ಸಾಧ್ಯವೆಂದು ದೇಶದ ಜನ ಒಪ್ಪಿಕೊಂಡಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಇದನ್ನು ಒಪ್ಪಿಕೊಳ್ಳುವುದಕ್ಕೆ ತಯಾರಿಲ್ಲದೆ ಪ್ರಸ್ತುತ ಇವಿಎಂ ಮೇಲೆ ದೂರುವುದು ಮತ್ತು ದೋಷಪೂರಿತ ಎಂದು ಕಾಂಗ್ರೆಸ್ ಹೇಳುತ್ತಿರುವುದು ಹುಚ್ಚುತನದ ಪರಮಾವಧಿ ಎಂದು ಲೇವಡಿ ಮಾಡಿದರು.

ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯನವರಿಗೆ ಇವಿಎಂ ಮೇಲೆ ಏಕೆ ವಿಶ್ವಾಸ ಕಡಿಮೆ ಆಗಿದೆ? ರಾಹುಲ್ ಗಾಂಧಿಯವರು ಸತತವಾಗಿ 3 ಬಾರಿ ಕೇಂದ್ರ ಲೋಕಸಭಾ ಚುನಾವಣೆಯ ಸೋಲನ್ನು ಒಪ್ಪಿಕೊಂಡಿದ್ದಾರೆ ಎಂದರು.
ಬ್ಯಾಲೆಟ್ ಪೇಪರ್ ಸಂಬಂಧ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿಯು ಬ್ಯಾಲೆಟ್ ಪೇಪರ್‌ಗೆ ಹೆದರುವುದಿಲ್ಲ, ನಾವು ಏಕೆ ಹೆದರಬೇಕು? ಎಂದು ಕೇಳಿದರಲ್ಲದೇ ಕೇಂದ್ರದಲ್ಲಿ ಸತತವಾಗಿ 3 ಬಾರಿ ನರೇಂದ್ರ ಮೋದಿ ಜೀ ಅವರ ಸರ್ಕಾರ ಇದೆ. ಬಿಜೆಪಿ ಬ್ಯಾಲೆಟ್ ಪೇಪರ್‌ಗೆ ಹೆದರಿಕೊಳ್ಳುವ ಅವಶ್ಯಕತೆ ಇಲ್ಲ. ಇವಿಎಂ ಬಗ್ಗೆಯೂ ಹೆದರುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.
Hassan
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಈಗ ಜೈಲಿನಲ್ಲಿ ಲೈಬ್ರರಿ ಕ್ಲರ್ಕ್
ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದು, ಪರಪ್ಪನ ಅಗ್ರಹಾರದಲ್ಲಿ ಸಾಮಾನ್ಯ ಕೈದಿಗಳಂತೆ ತಮ್ಮ ತಪ್ಪಿಗೆ ಶಿಕ್ಷೆಯನ್ನ ಅನುಭವಿಸುತ್ತಿದ್ದಾರೆ.
ಜೈಲಾಧಿಕಾರಿಗಳು ಪ್ರಜ್ವಲ್ ರೇವಣ್ಣರನ್ನು ಲೈಬ್ರರಿಯ ಕ್ಲರ್ಕ್ ಆಗಿ ನೇಮಿಸಿದ್ದು, ಪುಸ್ತಕಗಳನ್ನು ನೀಡುವುದು ಹಾಗೂ ನೋಂದಣಿ ಮಾಡಿಕೊಳ್ಳುವ ಕೆಲಸವನ್ನು ಮಾಡುತ್ತಿದ್ದಾರೆ.

ಪ್ರಜ್ವಲ್ ಸದ್ಯ ಒಂದು ದಿನದ ಮಟ್ಟಿಗೆ ಕೆಲಸ ಮಾಡಿದ್ದು, ದಿನಗೂಲಿಯಾಗಿ ದಿನಕ್ಕೆ 522 ರೂ. ಗಳನ್ನು ನೀಡಲಾಗುತ್ತದೆ. ಕೆಲಸಕ್ಕೆ ಹಾಜರಾಗದಿದ್ದರೆ ಸಂಬಳ ನೀಡಲಾಗುವುದಿಲ್ಲ.
ಇನ್ನೂ ಟ್ರಯಲ್ ಕೋರ್ಟ್‌ಗೆ ಆಗಾಗ ಬರಬೇಕಾಗಿರುವುದರಿಂದ ಹಾಗೂ ವಕೀಲರ ಜೊತೆ ಇತರೆ ಪ್ರಕರಣಗಳ ಸಂಬಂಧ ಚರ್ಚೆ ಮಾಡಬೇಕಾಗಿರುವ ಕಾರಣ ಪ್ರಜ್ವಲ್ ಅವರನ್ನು ಪೂರ್ತಿ ಕೆಲಸಕ್ಕೆ ನಿಯೋಜಿಸಿಲ್ಲ.
-
Mysore14 hours agoರಾಜಕೀಯ ಪಕ್ಷಗಳು ಜನಕಲ್ಯಾಣದ ಪರ್ಯಾಯ ಶಕ್ತಿ: ಡಾ.ಬಿಜೆವಿ
-
Manglore8 hours agoಆರ್ಥೋಪೆಡಿಕ್ ರೊಬೊಟಿಕ್ ಸರ್ಜರಿ ವ್ಯವಸ್ಥೆ ‘ಸ್ಕೈವಾಕರ್’ ಯೆನೆಪೊಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಲಭ್ಯ
-
Hassan10 hours agoಓಪನ್ ಕರಾಟೆ ಚಾಂಪಿಯನ್ ಶಿಪ್ನಲ್ಲಿ ಡೆಕ್ಕನ್ ವ್ಯಾಲಿ ಇಂಟರ್ ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳು ಚಾಂಪಿಯನ್
-
Kodagu11 hours agoಚನ್ನಪಟ್ಟಣದಲ್ಲಿ ಅಪಘಾತ: ಕೊಡಗಿನ ದಂಪತಿ ದುರ್ಮರಣ
-
Kodagu7 hours agoವಿರಾಜಪೇಟೆ ಸುತ್ತಮುತ್ತ ಸೆ.11 ರಂದು ವಿದ್ಯುತ್ ವ್ಯತ್ಯಯ
-
National5 hours agoಭಾರತದ ನೂತನ ಉಪರಾಷ್ಟ್ರಪತಿಯಾಗಿ ಆಯ್ಕೆಯಾದ ಸಿ.ಪಿ. ರಾಧಾಕೃಷ್ಣನ್
-
Manglore9 hours agoಪುತ್ತೂರು: ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ
-
Kodagu7 hours agoಕುಶಾಲನಗರ ಮತ್ತು ವಿರಾಜಪೇಟೆ ನಗರ ಸ್ಥಳೀಯ ಸಂಸ್ಥೆಗಳನ್ನು 2011 ರ ಜನಗಣತಿಯನ್ನಾಧರಿಸಿ ವಾರ್ಡ್ವಾರು ಕ್ಷೇತ್ರಗಳ ಪುನರ್ ವಿಂಗಡಣೆ
