Chamarajanagar
ಪೊಡುಗಳ ನಿವಾಸಿಗಳು ಮುಂಬರುವ ಲೋಕಸಭಾ ಚುನಾವಣೆಯ ಬಹಿಷ್ಕರಿಸಲು ತೀರ್ಮಾನಿಸಿ ಧರಣಿ ನಡೆಸಿದರು
ತಾಲೂಕಿನ ಬಿಳಿಗಿರಿರಂಗನ ಬೆಟ್ಟದ ಹೊಸ ಪೊಡು, ಯರಕನಗದ್ದೆ ಕಾಲೋನಿ, ಸೀಗೆಬೆಟ್ಟ ಪೊಡು ಮತ್ತು ಬಂಗ್ಲೆ ಪೊಡುಗಳ ನಿವಾಸಿಗಳು ಮುಂಬರುವ ಲೋಕಸಭಾ ಚುನಾವಣೆಯ ಬಹಿಷ್ಕರಿಸಲು ತೀರ್ಮಾನಿಸಿ ಧರಣಿ ನಡೆಸಿದರು.

ಈ ಬಗ್ಗೆ ಸೋಲಿಗ ಮುಖಂಡರು ಮಾತನಾಡಿ ಬೆಟ್ಟದ ಸೋಲಿಗರ ಕಂದಾಯ ಇಲಾಖೆಯಿಂದ 1962-63 ರಲ್ಲಿ ಕಂದಾಯ ಭೂಮಿಯನ್ನು ಆಗಿನ ಸರ್ಕಾರ ಮಂಜೂರು ಮಾಡ ಲಾಗಿದ್ದು ರೂ.30 ಸೋಲಿಗ ಕುಟುಂಬಗಳು ಪಡೆದುಕೊಂಡಿರುತ್ತಾರೆ ಅಲ್ಲಿಂದ ಪ್ರಸ್ತುತ ವರೆಗೂ ಭೂಮಿಯನ್ನು ವ್ಯವಸಾಯಕ್ಕಾಗಿ ಮಾಡಿಕೊಂಡು ಬಂದಿದ್ದಾರೆ ಅದರ ಕಳೆದ 4 ವರ್ಷಗಳಿಂದ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿ ಸರ್ವೆ ಮಾಡಿ ಸೋಲಿಗರ ಕುಟುಂಬಗಳ ಜಮೀನು ಅರಣ್ಯಕ್ಕೆ ಸೇರಿದೆ ಎಂದು ಹೇಳಿ ಮೂಲ ದಾಖಲಾತಿಗಳನ್ನು ಸಲ್ಲಿಸುವಂತೆ ಹಲವು ಬಾರಿ ತಹಸಿಲ್ದಾರ್ ಉಪವಿಭಾಗಾಧಿಕಾರಿ ನೋಟಿಸ್ ನೀಡಿದ್ದರು.

ಈ ಬಗ್ಗೆ ಆರ್ ಟಿ ಸಿ ಹಕ್ಕು ಪತ್ರ ಭೂಕಂದಾಯ ರಚನೆ ಕಟ್ಟಿರುವುದನ್ನು ಹಾಗೂ ಸರ್ಕಾರದ ಯೋಜನೆಗಳಿಂದ ಸಾಲ ಸೌಲಭ್ಯ ಪಡೆದುಕೊಂಡಿದ್ದಾರೆ ಬಿಳಿಗಿರಂಗನ ಬೆಟ್ಟ 595 ಕರೆ ಜಮೀನನ್ನು ಬೆಟ್ಟದಲ್ಲಿ ವಾಸವಾಗಿರುವ ಸೋಲಿಗರು ಮತ್ತು ಇತರ ಜನಾಂಗದ 135 ಜನರಿಗೆ ನೀಡುತ್ತಾರೆ ಆದರೆ ಸೋಲಿಗರ ಜಮೀನನ್ನು ಮಾತ್ರ ಅರಣ್ಯ ಇಲಾಖೆಗೆ ಸೇರಿದೆ ಎಂದು ಪ್ರತ್ಯೇಕ ಸರ್ವೇ ನಂಬರ್ ರಚಿಸಿ ಸೋಲಿಗರ ಜಮೀನುಗಳನ್ನು ಅರಣ್ಯಕ್ಕೆ ಸೇರಿಸಲು ತೀರ್ಮಾನಿಸಿದ್ದಾರೆ ಇತರ ವರ್ಗದ ಜಮೀನನ್ನು ಸರಿಯಾಗಿದೆ ಎಂದು ಹೇಳಿ ಬೆಟ್ಟದ ಮೂಲ ನಿವಾಸಿಗಳಾದ ನಮಗೆ ಅನ್ಯಾಯ ಮಾಡಲಾಗುತ್ತಿದೆ ಸೋಲಿಗರ ಜಮೀನನ್ನು ಪಕ್ಕ ಪೋಡಿ ಅಡಿಯಲ್ಲಿ ತರಬೇಕು ಹೊಸ ಮನೆಗಳಿಗೆ ಮಂಜೂರಾತಿ ನೀಡಿ ಮೂಲ ಸೌಲಭ್ಯ ನೀಡುವಂತೆ ಒತ್ತಾಯಿಸಿದ್ದಾರೆ ಸೋಲಿಗ ಸಮುದಾಯದ ಮುಖಂಡರಾದ ಗಿರಿ ಮಾದೇಗೌಡ ಬಸವರಾಜು ಸಿದ್ದೇಗೌಡ ನಂಜೇಗೌಡ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Chamarajanagar
ಜ್ಞಾನವೇ ವಿದ್ಯಾರ್ಥಿಯ ಯಶಸ್ಸಿಗೆ ಅಂತಿಮ ಸಾಧನ
ಯಳಂದೂರು ಪಟ್ಟಣದ ಬಿಳಿಗಿರಿ ಪ್ರಥಮ ದರ್ಜೆ ಕಾಲೇಜು ಪ್ರಥಮ ವರ್ಷದ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳಿಂದ ಸ್ವಾಗತ ಕಾರ್ಯಕ್ರಮ ಹಾಗೂ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ ಹೇಮಂತ್ ಕುಮಾರ್ ” ಜ್ಞಾನವೇ ವಿದ್ಯಾರ್ಥಿಯ ಸಾಧನೆಗೆ ಅಂತಿಮ ಸಾಧನ ಹಾಗೂ ಜ್ಞಾನಾರ್ಜನೆಯ ಮೂಲಕವೇ ಉತ್ತಮ ಜೀವನ ಕಂಡುಕೊಳ್ಳಲು ಸಾಧ್ಯ “ಎಂದು ತಮ್ಮ ಭಾಷಣದ ಮೂಲಕ ವಿದ್ಯಾರ್ಥಿಗಳ ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರದಲ್ಲಿ ಮಾತನಾಡಿದ ಇತಿಹಾಸ ಪ್ರಾಧ್ಯಾಪಕ ಪ್ರೊ ಗಣೇಶ್ ಪ್ರಕಾಶ್ ” ಉತ್ತಮ ಮಾರ್ಗದರ್ಶನ ಕಂಡುಕೊಂಡು ಉತ್ತಮ ಜೀವನ ವೃದ್ಧಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಆಂಗ್ಲ ಭಾಷಾ ಉಪನ್ಯಾಸಕ ಶ್ರೀನಿವಾಸ ಅಂಬಳೆ ರವರು ಜನ್ಮದ ಅತ್ಯಂತ ಪುಟ್ಟ ಜೀವನವು ಬಹುಪಾಲು ನಿದ್ರೆಯಲ್ಲಿಯೇ ಕಳೆದು ಹೋಗುತ್ತದೆ ಆದ್ದರಿಂದ ಈ ಅಲ್ಪ ಸಮದಲ್ಲಿಯೇ ವಿದ್ಯಾರ್ಥಿಗಳು ಸಾಧಿಸಬೇಕಾದದ್ದು ಬಹಳ” ಎಂದು ಸಲಹೆ ನೀಡಿದರು.
ಕನ್ನಡ ಪ್ರಾಧ್ಯಾಪಕಿ ಪ್ರೊ ಪದ್ಮ ರವರು “ಪರಿಶ್ರಮವೇ ವಿದ್ಯಾರ್ಥಿಯ ಏಳಿಗೆ ಕಾರಣವಾಗುವ ಸಂಗತಿ” ಎಂದು ಭಾಷಣ ನೆರವೇರಿಸಿದರು.
ಕಾಲೇಜಿನ ಸಿಬ್ಬಂದಿಗಳು ಹಾಗೂ ವಿಧ್ಯಾರ್ಥಿ ವರ್ಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
Chamarajanagar
ಜಾತ್ರಾ ಮಹೋತ್ಸವ: ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿದ ನಾಗವಳ್ಳಿ ಗ್ರಾಮಸ್ಥರು
ವರದಿ: ಉಲ್ಲಾಸ್ ಎಂ.ನಾಗವಳ್ಳಿ
ಚಾಮರಾಜನಗರ: ತಾಲೂಕಿನ ನಾಗವಳ್ಳಿ ಗ್ರಾಮದ ಸಾವಿರಾರು ಸಂಖ್ಯೆಯ ಭಕ್ತಾದಿಗಳು ಮಹಾಲಯ ಅಮಾವಾಸ್ಯೆ ಪ್ರಯುಕ್ತ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯಲಿರುವ ಜಾತ್ರಾ ಮಹೋತ್ಸವಕ್ಕೆ ಹತ್ತಕ್ಕೂ ಹೆಚ್ಚಿನ ಬಸ್ ಗಳಲ್ಲಿ ತೆರಳಿದರು.

ಮಹಾಲಯ ಅಮಾವಾಸ್ಯೆಯ ಸಂದರ್ಭದಲ್ಲಿ ಪ್ರತಿ ವರ್ಷ ನಿರಂತರವಾಗಿ ಗ್ರಾಮದ ಜನರು ಮಲೆ ಮಹದೇಶ್ವರ ಬೆಟ್ಟದ ಜಾತ್ರಾ ಮಹೋತ್ಸವಕ್ಕೆ ತೆರಳಿ ಮಾದಪ್ಪನ ಕೃಪೆಗೆ ಪಾತ್ರರಾಗುತ್ತಾರೆ.
ಗ್ರಾಮದ ಜನರು ಬೆಟ್ಟಕ್ಕೆ ತೆರಳುವ ದಿನದಂದು ಹಬ್ಬದ ವಾತಾವರಣ ನಿರ್ಮಾಣವಾಗಿರುತ್ತದೆ. ಬೆಟ್ಟಕ್ಕೆ ತೆರಳುವ ಮುಂಜಾನೆ ಎಲ್ಲರೂ ಸಡಗರ ಸಂಭ್ರಮದಿಂದ ಉಘೇ ಮಾದಪ್ಪ ಉಘೇ ಎಂದು ಘೋಷಣೆ ಕೂಗುತ್ತಾ ಗ್ರಾಮದ ಬಸ್ ನಿಲ್ದಾಣದ ಸಮೀಪವಿರುವ ಮಂಟೇಸ್ವಾಮಿ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ ನಂತರ ಬೆಟ್ಟಕ್ಕೆ ತೆರಳುವ ಸಂಪ್ರದಾಯವಿದೆ. ಮೂರು ದಿನಗಳ ಕಾಲ ಬೆಟ್ಟದಲ್ಲಿ ಉಳಿದುಕೊಂಡು ಮಾದಪ್ಪನ ದರ್ಶನ ಪಡೆದು ತಮ್ಮ ಹರಕೆಯನ್ನು ತೀರಿಸಿ ದೇವರ ಕೃಪೆಗೆ ಪಾತ್ರರಾಗುತ್ತಾರೆ.

ಹಬ್ಬದ ವಾತಾವರಣ:
ಜಾತ್ರಾ ಮಹೋತ್ಸವವನ್ನು ಮುಗಿಸಿಕೊಂಡು ಬೆಟ್ಟದಿಂದ ಸ್ವಗ್ರಾಮಕ್ಕೆ ಬರುವ ಸಹಸ್ರಾರು ಪರುಸೆ ಜನರನ್ನು ಬರಮಾಡಿಕೊಳ್ಳಲು ಗ್ರಾಮದಲ್ಲಿ ಚಪ್ಪರ ಹಾಕಿ, ಪ್ರಮುಖ ಬೀದಿಯಲ್ಲಿ ತಳಿರು ತೋರಣ ಹಾಗೂ ಲೈಟಿಂಗ್ಸ್ ಅಳವಡಿಸಿ ಅಂದು ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆ ಮಾಡಿರುತ್ತಾರೆ. ಪರುಸೆ ಜನರು ಗ್ರಾಮಕ್ಕೆ ಬರುತ್ತಿದ್ದಂತೆ ಹರಕೆ ಹೊತ್ತ ಮಹಿಳೆಯರು ಪಂಜನ್ನು ಉರಿಸುವುದು ಹಾಗೂ ಸಕ್ಕರೆ ಬಾಳೆಹಣ್ಣು ಮಿಶ್ರಣದ ಪ್ರಸಾದವನ್ನು ಭಕ್ತರಿಗೆ ನೀಡಿ ಹರಕೆ ತೀರಿಸುವ ಈ ಸಂಪ್ರದಾಯ ಅಂದಿನ ಕಾಲದಿಂದಲೂ ನಾಗವಳ್ಳಿ ಗ್ರಾಮದಲ್ಲಿ ನಡೆದುಕೊಂಡು ಬಂದಿದೆ.
Chamarajanagar
ಹೊಯ್ಸಳ, ಕೆಳದಿ ಚೆನ್ನಮ್ಮ ಜಿಲ್ಲಾಮಟ್ಟದ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ
ಚಾಮರಾಜನಗರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿ ಯೋಜನೆಯಡಿ ನಾವೀನ್ಯತೆ, ತಾರ್ಕಿಕ ಸಾಧನೆಗಳು, ಕ್ರೀಡೆ, ಕಲೆ, ಸಾಂಸ್ಕೃತಿಕ ಮತ್ತು ಸಂಗೀತ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿರುವ 5 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಪ್ರಸಕ್ತ ಸಾಲಿನ ಜಿಲ್ಲಾಮಟ್ಟದ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಪ್ರತಿ ಕ್ಷೇತ್ರದಲ್ಲಿ ಇಬ್ಬರು ಮಕ್ಕಳಂತೆ ಒಟ್ಟು 8 ಮಕ್ಕಳನ್ನು ಸದರಿ ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಪ್ರತಿ ಮಗುವಿಗೆ 10 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು. ಮಕ್ಕಳ ವಯೋಮಿತಿಯು 5 ವರ್ಷಕ್ಕಿಂತ ಮೇಲ್ಪಟ್ಟಿರಬೇಕು ಹಾಗೂ 18 ವರ್ಷದೊಳಗಿರಬೇಕು. ಮಕ್ಕಳ ವಯೋಮಿತಿಯ ಬಗ್ಗೆ ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕರಿಸಿ ಸಲ್ಲಿಸಬೇಕು. ಪ್ರತಿ ಕ್ಷೇತ್ರಕ್ಕೂ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕು.

ಆಸಕ್ತಿಯುಳ್ಳ ಮಕ್ಕಳು ನಿಗದಿಪಡಿಸಿದ ಅರ್ಜಿ ನಮೂನೆಯನ್ನು ನಗರದ ಜಿಲ್ಲಾಡಳಿತ ಭವನದ ಮೊದಲನೆ ಮಹಡಿಯಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರ ಕಚೇರಿಯಲ್ಲಿ (ಕೊಠಡಿ ಸಂಖ್ಯೆ 129) ಪಡೆದು ಭರ್ತಿ ಮಾಡಿ ಅಕ್ಟೋಬರ್ 8 ರೊಳಗೆ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
-
Mandya20 hours agoಮಾಹಿತಿ ಹಕ್ಕು ಅಧಿನಿಯಮ ಕಾಯ್ದೆ ಕುರಿತು ವರದಿ ಸಲ್ಲಿಸಿ: ಆಶಿತ್ ಮೋಹನ್ ಪ್ರಸಾದ್
-
Manglore20 hours agoಧರ್ಮಸ್ಥಳದಲ್ಲಿ ರುದ್ರಪಾರಾಯಣ
-
Hassan21 hours ago19 ನೇ ವಾರ್ಡ್ ಅರಳೇಪೇಟೆ ನಿವಾಸಿಗಳಿಂದ ಪ್ರಸಾದ ವಿತರಣೆ
-
Hassan2 hours agoಎನ್ ಆರ್ ಸಂತೋಷ್ ಅವರಿಗೆ ಕ್ಷಮೆ ಕೇಳಲು ಸಿದ್ದ : ಅರಸೀಕೆರೆ ನಗರಸಭೆ ಅಧ್ಯಕ್ಷ ಸಮೀವುಲ್ಲಾ
-
Mysore18 hours agoಜಾತಿ ಗಣತಿ ಸಮೀಕ್ಷೆಯಲ್ಲಿ ಗೆಜ್ಜಗಾರರೆಂದು ನಮೂದಿಸಿ : ಗೋಳೂರು ಸ್ನೇಕ್ ಬಸವರಾಜು ಮನವಿ
-
Kodagu20 hours agoಕೊಡವರು ಧರ್ಮದ ಕಾಲಂನಲ್ಲಿ ಹಿಂದೂ ಎಂದು ನಮೂದಿಸಿ : ಬಿಜೆಪಿ ಮನವಿ
-
State16 hours agoಅನಗತ್ಯವಿರುವ ಅಂಶಗಳನ್ನು ತೆಗೆದುಹಾಕಲು ಹಿಂದುಳಿದ ವರ್ಗಗಳ ಆಯೋಗವೇ ನಿರ್ಧರಿಸುತ್ತದೆ: ಸಿಎಂ ಸಿದ್ದರಾಮಯ್ಯ
-
Chikmagalur19 hours agoಅರಣ್ಯ ಇಲಾಖೆಯಿಂದ ಬೈಕ್ಗಳ ಮುಟ್ಟುಗೋಲಿಗೆ ಕ್ರಮ
