Kodagu
ಬಂದಡ್ಕದಲ್ಲಿ ಗಡಿನಾಡ ಉತ್ಸವ; ಗ್ರಾಮದಲ್ಲಿ ಸಡಗರ, ಸಂಭ್ರಮ
ಮಡಿಕೇರಿ : ಕೇರಳದ ಬಂದಡ್ಕದಲ್ಲಿ ನಡೆದ ಗಡಿನಾಡ ಅರೆಭಾಷೆ ಉತ್ಸವ ಊರಿಡೀ ಹಬ್ಬದ ವಾತಾವರಣ ಮೂಡಿಸಿತು. ಸಭಾ ಕಾರ್ಯಕ್ರಮಕ್ಕೂ ಮುಂಚಿತವಾಗಿ ನಡೆದ ಮೆರವಣಿಗೆಯಂತು ಇಡೀ ಕಾರ್ಯಕ್ರಮಕ್ಕೆ ಮುಕುಟವಿದ್ದಂತಿತ್ತು.
ಬಂದಡ್ಕದ ಆರ್ಟ್ ಆಫ್ ಲಿವಿಂಗ್ ಜ್ಞಾನ ಮಂದಿರದಿಂದ ಹೊರಟ ಮೆರವಣಿಗೆಯನ್ನು ಬಂದಡ್ಕದ ಹಿರಿಯ ವರ್ತಕರಾದ ಕೃಷ್ಣಪ್ಪ ಕೊೈಂಗಾಜೆ ಅವರು ಉದ್ಘಾಟನೆ ಮಾಡಿದರು. ರವಿಪ್ರಸಾದ್ ಇಳಂದಿಲ ನಡೆಸಿಕೊಟ್ಟರು. ಬಂದಡ್ಕ ಪಟ್ಟಣದ ಮೂಲಕ ಸಾಗಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಬಂದ ಮೆರವಣಿಗೆ ಊರಿಡಿ ಹಬ್ಬದ ವಾತಾವರಣ ನಿರ್ಮಾಣ ಮಾಡಿತ್ತು.
ಬಹಳ ಶಿಸ್ತಿನಿಂದ, ವೈಭವದಿಂದ ಸಾಗಿ ಬಂದ ಮೆರವಣಿಗೆಯು ಬಂದಡ್ಕ ಪಟ್ಟಣದಲ್ಲಿ ಜನರ ಕಣ್ಮನ ಸೆಳೆಯಿತು. ಗಂಡಸರು, ಹೆಂಗಸರು, ಮಕ್ಕಳು ಅರೆಭಾಷೆ ಅಕಾಡೆಮಿ ಲಾಂಛನದ ಭಾವುಟವನ್ನು ಬೀಸುತ್ತಾ ಸಾಗಿದರು. ಪೂರ್ಣಕುಂಭ ಹಿಡಿದ ಮಹಿಳೆಯರು ಜರತಾರಿ ಸೀರೆಯುಟ್ಟು ಕಂಗೊಳಿಸುತ್ತಿದ್ದರು. ಪುರುಷರು ಬಿಳಿ ಶರ್ಟು, ಬಿಳಿ ದೋತಿ, ಬಿಳಿ ಅಂಗವಸ್ತ್ರವನ್ನು ತೊಟ್ಟು ಗಂಭೀರ ಹೆಜ್ಜೆ ಹಾಕಿದರೆ, ಮಕ್ಕಳು ರಂಗುರಂಗಿನ ಉಡುಪು ತೊಟ್ಟು ಮಿಂಚುತ್ತಿದ್ದರು.
ಮೆರವಣಿಗೆಯಲ್ಲಿ ಬಣ್ಣದ ಕೊಡೆಗಳು ಹೊಳೆಯುತ್ತಿದ್ದವು. ಬಾಲಕ ಬಾಲಕಿಯರು ಮೆರವಣಿಗೆಯುದ್ದಕ್ಕೂ ಸಮವಸ್ತ್ರ ತೊಟ್ಟು ಕುಣಿತ ಭಜನೆ ಮಾಡಿದರು. ಕೋಲಾಟ ಆಡಿದರು. ಜನರ ಉತ್ಸಾಹ ಮುಗಿಲು ಮುಟ್ಟಿತು.
ತಮ್ಮದೇ ಮನೆಯ ಸಮಾರಂಭವೆಂಬಂತೆ ಊರಿಗೇ ಊರೇ ನೆರೆದಿತ್ತು. ಸುಮಾರು 300 ಕ್ಕಿಂತ ಅಧಿಕ ಮಂದಿಯನ್ನು ಹೊಂದಿದ್ದ ಫರ್ಲಾಂಗ್ ಗಟ್ಟಲೆ ಉದ್ದದ ಮೆರವಣಿಗೆಯನ್ನು ನೋಡುವುದೇ ಕಣ್ಣಿಗೆ ಒಂದು ಹಬ್ಬವಾಗಿತ್ತು. ಮುಂಚೂಣಿಯಲ್ಲಿದ್ದ ಬ್ಯಾಂಡ್ ವಾದನ ಲಯಬದ್ದ ಹೆಜ್ಜೆಗೆ ನಾಂದಿ ಹಾಡಿತು.
ಗಡಿನಾಡ ಉತ್ಸವದ ಅಂಗವಾಗಿ ನಡೆದ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಅರೆಭಾಷೆ ಸಂಪ್ರದಾಯ ಬಿಂಬಿತವಾಯಿತು.
ಅಮರ ಸುಳ್ಯದ ಕ್ರಾಂತಿ, ಕೃಷಿ ಚಟುವಟಿಕೆಗಳು, ಆಟಿ ಕಳಂಜ, ದೀಪಾವಳಿ ಹಬ್ಬ, ಸಿದ್ಧವೇಷ ಕುಣಿತ, ವಾಲಗ ಕುಣಿತ, ಕೋಲಾಟ, ಎಲ್ಲವೂ ಪ್ರದರ್ಶನಗೊಂಡವು. ಉಳುಮೆಯ ಜೋಡೆತ್ತಿನ ಪ್ರದರ್ಶನ ಪ್ರೇಕ್ಷಕರ ವಿಶೇಷ ಮೆಚ್ಚುಗೆಗೆ ಪಾತ್ರವಾಯಿತು.
ಅದರಂತೆ ಹೆಣ್ಣು ಮಗುವಿನ ಹುಟ್ಟಿನಿಂದ ಮದುವೆ ಮಾಡಿ ಕೊಡುವ ತನಕದ ಶಾಸ್ತ್ರ ಸಂಪ್ರದಾಯಗಳನ್ನು ಒಳಗೊಂಡ ಕಾರ್ಯಕ್ರಮ ಸೇರಿದಂತೆ ಊರವರು ಮತ್ತು ಆಹ್ವಾನಿತ ತಂಡಗಳ ಸಾಂಸ್ಕøತಿಕ ಕಾರ್ಯಕ್ರಮಗಳು ಕಾರ್ಯಕ್ರಮದ ಉದ್ದಕ್ಕೂ ನಡೆದವು.
ಕಾಸರಗೋಡು ಜಿಲ್ಲೆಯ ಉದುಮ ಕ್ಷೇತ್ರದ ಶಾಸಕ ಸಿ.ಎಚ್.ಕುಂಞಂಬು ಅವರು ಉದ್ಘಾಟಿಸಿ ಮಾತನಾಡಿ ಬಂದಡ್ಕ ಭಾಗದಲ್ಲಿ ಇಂತಹ ಉತ್ಸವ ನಡೆಸುತ್ತಿರುವುದು ಸಂತೋಷ. ಈ ಗಡಿಭಾಗದಲ್ಲಿ ಅರೆಭಾಷೆಯನ್ನು ಮಾತನಾಡುತ್ತಿದ್ದಾರೆ. ತುಳು ಅಕಾಡೆಮಿಯ ರೀತಿಯಲ್ಲಿ ಮಂಜೇಶ್ವರದಲ್ಲಿ ಯಕ್ಷಗಾನ ಅಕಾಡೆಮಿ ಆರಂಭ ಮಾಡಿ ಯಶಸ್ವಿಯಾಗಿದ್ದೇನೆ. ತುಳು, ಅರೆಭಾಷೆ, ಯಕ್ಷಗಾನ, ಬ್ಯಾರಿ ಸೇರಿದಂತೆ ಎಲ್ಲಾ ಅಕಾಡೆಮಿಗಳನ್ನು ಸೇರಿಸಿ ಕಾಸರಗೋಡಿನಲ್ಲಿ ದೊಡ್ಡ ಕಾರ್ಯಕ್ರಮ ಆಯೋಜಿಸಲು ಸಹಕರಿಸುವಂತೆ ಕೋರಿದರು.
‘ಪ್ರವಾಸಿ ತಾಣ ಕಾಸರಗೋಡು ಜಿಲ್ಲೆಯ ಬೇಕಲ ಕೋಟೆ ಮತ್ತು ಪುಣ್ಯ ಕ್ಷೇತ್ರ ಸುಬ್ರಹ್ಮಣ್ಯ ಸಂಪರ್ಕಿಸುವ ನಿಟ್ಟಿನಲ್ಲಿ ಬೇಕಲ, ಬಂದಡ್ಕ, ಸುಳ್ಯ, ಸುಬ್ರಹ್ಮಣ್ಯ ಅಂತರರಾಜ್ಯ ಮಾರ್ಗದಲ್ಲಿ ಸರ್ಕಾರಿ ಬಸ್ ಸರ್ವೀಸ್ ಆರಂಬಿಸಲು ಎಲ್ಲಾ ಪ್ರಯತ್ನ ನಡೆಸಲಾಗುವುದು ಎಂದು ಉದುಮ ಕ್ಷೇತ್ರದ ಶಾಸಕ ಸಿ.ಎಚ್.ಕುಂಞಂಬು ಅವರು ಸಮಾರೋಪ ಸಮಾರಂಭದಲ್ಲಿ ತಿಳಿಸಿದ್ದಾರೆ.’
ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಬಂದಡ್ಕ ಗೌಡ ಗ್ರಾಮ ಸಮಿತಿಯ ವತಿಯಿಂದ ಬಂದಡ್ಕದ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮಯೂರ ಮಂಟಪ ಸಭಾಭವನದಲ್ಲಿ ನಡೆದ ಅರೆಭಾಷೆ ಗಡಿನಾಡ ಉತ್ಸವದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಅಂತಾರಾಜ್ಯ ಬಸ್ ಸರ್ವೀಸ್ ಆರಂಭಿಸಬೇಕು ಎಂದು ಅರೆಭಾಷೆ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಜಿ ಹಾಗೂ ಬಂದಡ್ಕದ ಪ್ರಮುಖರು ಮನವಿ ಸಲ್ಲಿಸಿದರು. ಈ ಮಾರ್ಗದಲ್ಲಿ ಹೊಸ ಬಸ್ ಮಾರ್ಗ ಮಂಜೂರು ಮಾಡಿಸಿ ಸರ್ಕಾರಿ ಬಸ್ ಸೇವೆ ಕಲ್ಪಿಸುವಲ್ಲಿ ಪ್ರಯತ್ನ ನಡೆಸಲಾಗುವುದು ಎಂದು ಅವರು ಹೇಳಿದರು.
ಸುಳ್ಯದಿಂದಲೂ ಬಸ್ ಆರಂಭ ಮಾಡುವಂತೆ ಪಿ.ಸಿ.ಜಯರಾಮ್, ಟಿ.ಎಂ.ಶಹೀದ್ ಅವರಿಗೆ ಇದೇ ವೇಳೆಯಲ್ಲಿ ಬಂದಡ್ಕದ ಪ್ರಮುಖರು ಮನವಿ ನೀಡಿದರು.
ಮಡಿಕೇರಿ ಆಕಾಶವಾಣಿಯ ಹಿರಿಯ ಉದ್ಘೋಷಕರಾದ ಸುಬ್ರಾಯ ಸಂಪಾಜೆ ಅವರು ಮಾತನಾಡಿ ಹೊಸ ಹೊಸ ಸಾಧ್ಯತೆಗಳನ್ನು ಅರೆಭಾಷೆ ಅಕಾಡೆಮಿಯಿಂದ ಪ್ರಸ್ತುತಪಡಿಸಿದ್ದು, ಹೊಸ ಹೊಸ ಸಾಧ್ಯತೆಗಳನ್ನು ಅನ್ವೇಷಣೆ ಮಾಡಬೇಕಿದೆ ಎಂದರು.
ಗೌಡರ ಯುವ ಸೇವಾ ಸಂಘದ ಸ್ಥಾಪಕಾಧ್ಯಕ್ಷರಾದ ನಿತ್ಯಾನಂದ ಮುಂಡೋಡಿ ಅವರು ಸಾಧಕರನ್ನು ಸನ್ಮಾನಿಸಿದರು. ಕರ್ನಾಟಕ ಮೀನುಗಾರಿಕಾ ನಿಗಮದ ಮಾಜಿ ಅಧ್ಯಕ್ಷರಾದ ಎ.ವಿ.ತೀರ್ಥರಾಮ ಬಹುಮಾನ ವಿತರಿಸಿದರು.
ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ, ಅರೆಭಾಷೆ ಗಡಿನಾಡ ಉತ್ಸವ ಸಂಘಟನಾ ಸಮಿತಿಯ ಅಧ್ಯಕ್ಷರಾದ ಕೊೈಂಗಾಜೆ ವೆಂಕಟ್ರಮಣ, ಪ್ರಧಾನ ಕಾರ್ಯದರ್ಶಿ ಚರಣ್ ಕುಮಾರ್ ಪಾಲಾರು ಮಾವಜಿ, ಕೋಶಾಧಿಕಾರಿ ಮೋಹನ್ ಇಳಂದಿಲ, ತರುಣ ಘಟಕದ ಅಧ್ಯಕ್ಷರಾದ ಗಣೇಶ್ ಪಾಲಾರುಮೂಲೆ, ಅಕಾಡೆಮಿ ಸದಸ್ಯರು ಇತರರು ಇದ್ದರು.
Kodagu
ಮಡಿಕೇರಿಯಲ್ಲಿ ನಾಳೆ ನಡೆಯುವ ಶಾಂತಿಯುತ ಪ್ರತಿಭಟನೆಗೆ ಕೊಡವಾಮೆರ ಕೊಂಡಾಟ ಬೆಂಬಲ
ಮಡಿಕೇರಿ : ಕೊಡವರ ಸಂವಿಧಾನ ಬದ್ದ ಹಕ್ಕಿಗಾಗಿ, ಮತ್ತು ಕೊಡವರ ಉಡುಪು ಹಾಗೂ ಸಂಸ್ಕೃತಿಯನ್ನು ಹತ್ತಿಕ್ಕಲು ಹುನ್ನಾರ ನಡೆಸಿ, ಅಮಾಯಕ ಕೊಡವರ ಮೇಲೆ ಹಲ್ಲೆ ನಡೆಸಿದ ಕಿಡಿಗೇಡಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಸರ್ಕಾರವನ್ನು ಆಗ್ರಹಿಸಿ ನಾಳೆ ಮಡಿಕೇರಿಯಲ್ಲಿ, ವಿವಿಧ ಸಂಘಟನೆಗಳು ನಡೆಸಲು ಚಿಂತಿಸಿರುವ, ಶಾಂತಿಯುತ ಪ್ರತಿಭಟನೆಗೆ ಕೊಡವಾಮೆರ ಕೊಂಡಾಟ ಸಂಘಟನೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ.
ಘಟನೆ ನಡೆದು ತಿಂಗಳಾದರೂ ಹಲ್ಲೆ ಆರೋಪಿಗಳ ಬಂಧನವಾಗಿಲ್ಲ. ಕಟ್ಟೆಮಾಡು ಮಹಾದೇವರ ಸಮಿತಿಯ ತೀರ್ಮಾನ ಸಂವಿಧಾನ ವಿರೋದಿಯಾಗಿದ್ದರೂ, ಜಿಲ್ಲಾಧಿಕಾರಿಗಳು ಅದೇ ದಿನ ಸಮಿತಿಯ ವಿರುದ್ದ ಕ್ರಮ ಕೈಗೊಂಡು, ವೈವಿಧ್ಯತೆಯಲ್ಲಿ ಏಕತೆ ಎಂಬ ಸಂವಿಧಾನದ ಆಶಯವನ್ನು ಎತ್ತಿ ಹಿಡಿಯಬೇಕಿತ್ತು. ಆದರೆ ಮತ್ತೆ ಮತ್ತೆ ಸಮಯ ಅವಕಾಶ ನೀಡುವ ಮೂಲಕ ಗೊಂದಲವನ್ನು ಮುಂದುವರೆಸಿರುವ ಜಿಲ್ಲಾಡಳಿತದ ನಿಲುವನ್ನ ಪ್ರಶ್ನಿಸಿ ಮತ್ತು ಕೊಡವರ ಮೇಲೆ ಹಲ್ಲೆ, ದಬ್ಬಾಳಿಕೆ ನಡೆಸಿದ ವ್ಯಕ್ತಿಯು ಒಂದು ರಾಜಕೀಯ ಪಕ್ಷದ ಜಿಲ್ಲಾ ಉಪಾಧ್ಯಕ್ಷನಾದರೂ ಆತನ ವಿರುದ್ಧ ಕ್ರಮ ಕೈಗೊಳ್ಳದ ಆ ಪಕ್ಷದ ನಿಲುವನ್ನು ಖಂಡಿಸಿ, ದಿನಾಂಕ 20ನೇ ಸೋಮವಾರ ಮಡಿಕೇರಿಯಲ್ಲಿ, ವಿವಿಧ ಕೊಡವ ಸಂಘಟನೆಗಳು ನಡೆಸಲು ಚಿಂತಿಸುತ್ತಿರುವ , ಶಾಂತಿಯುತ ಬೃಹತ್ ಜಾತಕ್ಕೆ ಕೊಡವಾಮೆರ ಕೊಂಡಾಟ ಸಂಘಟನೆ ಸಂಪೂರ್ಣ ಬೆಂಬಲ ನೀಡಲಿದೆ.
ಶಾಂತಿ ಸಹಬಾಳ್ವೆ ಕೊಡವರ ರಕ್ತದಲ್ಲಿಯೇ ಇದ್ದು, ಶತಮಾನಗಳಿಂದ ಸರ್ವ ಜನಾಂಗ ಮತ್ತು ಧರ್ಮಗಳೊಂದಿಗೆ ಶಾಂತಿಯಿಂದ ಬಾಳುತ್ತಿದ್ದು, ಆದರೆ ಸ್ವಾಭಿಮಾನಕ್ಕೆ ದಕ್ಕೆ ಆದರೂ ನಾವೇ ಶಾಂತಿ ಕಾಪಾಡಬೇಕೆಂಬುದು ಬಾಲಿಶತನದ ಹೇಳಿಕೆಯಾಗಿದ್ದು, ನಾವು ಕಾನೂನಿನ ವ್ಯಾಪ್ತಿಯಲ್ಲಿ ಮತ್ತು ನಮ್ಮ ಸಂಸ್ಕೃತಿಯ ಪರವಾಗಿ ಇರುವಾಗ ಅದನ್ನು ಕಾಪಾಡದೇ ಮತ್ತು ಕಾನೂನಿನ ಕ್ರಮ ಕೈಗೊಳ್ಳದೆ ಶಾಂತಿ ಸಭೆ ಅಥವಾ ಮೌನವಾಗಿ ಇರುವುದರಲ್ಲಿ ಅರ್ಥವಿಲ್ಲ. ಮೊದಲು ಪೋಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಕಾನೂನು ಕ್ರಮ ಕೈಗೊಳ್ಳಲಿ ನಂತರ ಶಾಂತಿ ತನ್ನಾಲೇ ನೆಲೆಸಲಿದೆ ಎಂದು ಹೇಳಿದೆ.
Kodagu
ಅಖಿಲ ಕೊಡವ ಸಮಾಜ ನಡೆಗೆ ಕೊಡವ ರೈಡರ್ಸ್ ಕ್ಲಬ್ ಖಂಡನೆ.! ರಾಜಿನಾಮೆಗೆ ಒತ್ತಾಯ
ಮಡಿಕೇರಿ : ಅಖಿಲ ಕೊಡವ ಸಮಾಜ ಎನ್ನುವುದು ಕೊಡವ ಜನಾಂಗದ ಮಾತೃ ಸಂಸ್ಥೆಯೇ ಹೊರತು ಅದರ ಅಧ್ಯಕ್ಷ ಹಾಗೂ ಕಾರ್ಯದರ್ಶಿಯೇ ಇಲ್ಲಿ ಸರ್ವಾಧಿಕಾರಿ ಅಲ್ಲ. ಜನಾಂಗದ ಭಾವನೆಗೆ ಧಕ್ಕೆ ತರುವವರು ಕೂಡಲೇ ಅವರ ಸ್ಥಾನಕ್ಕೆ ರಾಜಿನಾಮೆ ನೀಡಿ ಗೌರವದಿಂದ ಕೆಳಗಿಳಿಯಬೇಕು ಎಂದು ಕೊಡವ ರೈಡರ್ಸ್ ಕ್ಲಬ್ ಒತ್ತಾಯಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಕೊಡವ ರೈಡರ್ಸ್ ಕ್ಲಬ್ ಅಧ್ಯಕ್ಷ ಅಜ್ಜಿಕುಟ್ಟೀರ ಪ್ರಥ್ವಿ ಸುಬ್ಬಯ್ಯ, ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಹಾಗೂ ಕಾರ್ಯದರ್ಶಿ ಕೀತಿಯಂಡ ವಿಜಯ್ ಕುಮಾರ್ ನಡೆಯನ್ನು ಬಲವಾಗಿ ಖಂಡಿಸಿದ್ದು, ಇವರು ಕಟ್ಟೆಮಾಡು ಶ್ರೀ ಮೃತ್ಯುಂಜಯ ದೇವಸ್ಥಾನದ ವಿವಾದದ ವಿಷಯದಲ್ಲಿ ಪತ್ರಿಕಾ ಗೋಷ್ಠಿ ನಡೆಸುವಾಗ ಕನಿಷ್ಠಪಕ್ಷ ಅಖಿಲ ಕೊಡವ ಸಮಾಜದ ಕೋರ್ ಕಮಿಟಿ ಸದಸ್ಯರ ಸಭೆಯನ್ನು ಕರೆಯದೆ ಇವರಿಬ್ಬರ ಮನಸ್ಸಿಗೆ ಬಂದ ಹಾಗೆ, ಯಾರದೋ ನಿರ್ದೆಶನದಂತೆ ಪತ್ರಿಕಾ ಗೋಷ್ಠಿ ನಡೆಸಿ ಜನಾಂಗವನ್ನು ತಲೆತಗಿಸುವಂತೆ ಮಾಡಿದ್ದಾರೆ. ಈಗಾಗಲೇ ಕೊಡವ ಜನಾಂಗದಲ್ಲಿ ಇವರ ವಿರುದ್ಧ ಆಕ್ರೋಶಗಳು ಭುಗಿಲೆದ್ದಿದ್ದು ಜವಾಬ್ದಾರಿ ಸ್ಥಾನದಲ್ಲಿರುವ ಇವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವ ಮೂಲಕ ಗೌರವ ಕಾಪಾಡಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕಟ್ಟೆಮಾಡು ಶ್ರೀ ಮೃತ್ಯುಂಜಯ ದೇವಸ್ಥಾನದ ವಸ್ತ್ರ ಸಂಹಿತೆ ವಿಷಯವಾಗಿ ಹಾಗೂ ಕುಪ್ಯಚೇಲೆಗೆ ಅವಮಾನ ಮಾಡಿದ ವಿಷಯವಾಗಿ ದೇಶದಾದ್ಯಂತ ಕೊಡವ ಜನಾಂಗ ಮಾತ್ರವಲ್ಲದೆ ಕೊಡವ ಸಂಸ್ಕೃತಿಯಡಿಯಲ್ಲಿ ಬದುಕು ಸಾಗಿಸುತ್ತಿರುವ ಭಾಷಿಕ ಜನಾಂಗಗಳು ಕೂಡ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ ಘಟನೆಯನ್ನು ಖಂಡಿಸಿದ್ದಾರೆ. ಆದರೆ ಕೊಡವ ಜನಾಂಗದ ಮಾತೃ ಸಂಸ್ಥೆ ಎನಿಸಿಕೊಂಡಿರುವ ಸ್ವಾತಂತ್ರ್ಯ ಪೂರ್ವದ ಸಂಸ್ಥೆಯಾದ ಅಖಿಲ ಕೊಡವ ಸಮಾಜದ ನಡೆ ಹಾಗೂ ಕೊಡವ ಸಮಾಜಗಳ ಒಕ್ಕೂಟದ ನಡೆ ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಕೂಡಲೇ ಈ ಎರಡು ಸಂಸ್ಥೆಗಳ ಪ್ರಮುಖರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಜನಾಂಗದ ಗೌರವವನ್ನು ಉಳಿಸಲಿ ಎಂದು ಪ್ರಥ್ವಿ ಸುಬ್ಬಯ್ಯ ಒತ್ತಾಯಿಸಿದ್ದಾರೆ.
ಕಟ್ಟೆಮಾಡು ಶ್ರೀ ಮೃತ್ಯುಂಜಯ ದೇವಸ್ಥಾನದಲ್ಲಿ ಕೆಲವೇ ಕೆಲವರಿಂದ ಕೊಡವ ಸಾಂಪ್ರದಾಯಿಕ ಉಡುಪಿಗೆ ಆದ ಅವಮಾನದ ವಿಷಯವಾಗಿ ಘಟನೆಯನ್ನು ಖಂಡಿಸಿ ಹಾಗೂ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಹೇಳಿಕೆ ನೀಡಿ, ಶಾಂತಿಯುತವಾಗಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಹೊರಟ ನಮ್ಮನ್ನು ಬಂಧಿಸಿ ಊರೂರು ಸುತ್ತಾಡಿಸಿ ಜಿಲ್ಲೆಯಲ್ಲಿ ಪ್ರತಿಭಟನೆಯ ಕಾವು ಏರುತ್ತಿದ್ದಂತೆ ಮೂರು ವಾಹನಗಳಲ್ಲಿ ಕರೆದುಕೊಂಡು ಹೋದವರನ್ನು ವಾಪಾಸು ಕರೆತಂದು ಬಿಟ್ಟಿದ್ದಾರೆ. ಈ ಸಂದರ್ಭದಲ್ಲಿ
ಅಜ್ಜಿಕುಟ್ಟೀರ ಪ್ರಥ್ವಿ ಸುಬ್ಬಯ್ಯ, ಸಣ್ಣುವಂಡ ದರ್ಶನ್ ಕಾವೇರಪ್ಪ ಹಾಗೂ ಚಮ್ಮಟೀರ ಪ್ರವೀಣ್ ಉತ್ತಪ್ಪ ಅವರನ್ನು ಯಾವುದೋ ಕ್ರಿಮಿನಲ್ ಹಿನ್ನೆಲೆ ಉಳ್ಳವರಂತೆ ಹಾಗೂ ಕೊಲೆ ಅಪರಾಧ ಮಾಡಿದವರಂತೆ ನಾವು ರಾತ್ರಿ ಮಲಗಿ ಮುಂಜಾನೆ ಏಳುವ ಮೊದಲೆ ನಮ್ಮ ಮನೆಗಳಿಗೆ ಪೊಲೀಸರು ಸುತ್ತುವರಿದು ನಮ್ಮನ್ನು ವಶಕ್ಕೆ ತೆಗೆದುಕೊಂಡು ಬಂದು ಠಾಣೆಯಲ್ಲಿ ಕೂರಿಸಿದ್ದಾರೆ. ನಂತರ ಕೇಳಲು ಬಂದವರನ್ನು ಕೂಡ ಬಂಧಿಸಿ ಪೊನ್ನಂಪೇಟೆಯಿಂದ ಕುಶಾಲನಗರ ದಾಟಿ ಕೂಡಿಗೆಗೆ ಕೊಂಡೊಯ್ಯುವವರೆಗೂ ತುಟಿ ಬಿಚ್ಚದೆ ಇರುವ ಅಖಿಲ ಕೊಡವ ಸಮಾಜ ಹಾಗೂ ಕೊಡವ ಸಮಾಜ ಒಕ್ಕೂಟಗಳ ನಾಯಕರುಗಳು ಮಡಿಕೇರಿಯಲ್ಲಿ ನಡೆದ ಸಭೆಗೆ ಹಾಜರಾಗುವ ಮೂಲಕ ಜನಾಂಗಕ್ಕೆ ಏನೂ ತೊಂದರೆಯಾದರೂ ಚಿಂತೆ ಇಲ್ಲ ನಮಗೆ ನಮ್ಮ ಪ್ರತಿಷ್ಟೆ ಮುಖ್ಯ ಎಂದು ತೊರಿಸಿಕೊಟ್ಟಿದ್ದಾರೆ. ಇದೀಗ ಮತ್ತೆ ಗೊಂದಲದ ಹೇಳಿಕೆಗಳನ್ನು ನೀಡುವ ಮೂಲಕ ಜನಾಂಗದ ಭಾವನೆಗಳಿಗೆ ಘಾಸಿ ಉಂಟುಮಾಡಿದ್ದಾರೆ. ಇವರುಗಳು ಹೆಗ್ಗಣವನ್ನು ಬಿಲದೊಳಗೆ ಬಿಟ್ಟು ಹೊರಗೆ ತೇಪೆ ಹಾಕುವ ಕೆಲಸ ಮಾಡುತ್ತಿದ್ದಾರೆ ಇದು ಖಂಡನೀಯವಾಗಿದ್ದು, ಕಟ್ಟೆಮಾಡು ಪ್ರಕರಣದ ಪ್ರಮುಖ ಆರೋಪಿಗಳನ್ನು ಬಂಧಿಸುವವರೆಗೂ ಹಾಗೂ ಸಾಂಪ್ರದಾಯಿಕ ಉಡುಪಿನ ಗೊಂದಲ ನಿವಾರಣೆಗೆ ಆಗುವವರೆಗೂ ಶಾಂತಿ ಮಾತುಕತೆಯ ಅಗತ್ಯತೆ ಇಲ್ಲ. ಈಗಾಗಲೇ ಕೊಡವ ರೈಡರ್ಸ್ ಕ್ಲಬ್ ಸಂಸ್ಥೆ ದೇಶ ತಕ್ಕರಾದ ಬೊಳ್ಳೇರ ವಿನಯ್ ಅಪ್ಪಯ್ಯ ಅಧ್ಯಕ್ಷತೆಯಲ್ಲಿ ಒಂದಷ್ಟು ಪ್ರಮುಖರ ಸಭೆ ಕರೆದು ಸುಮಾರು 35ಕ್ಕೂ ಅಧಿಕ ಮಂದಿ ಅಖಿಲ ಕೊಡವ ಸಮಾಜಕ್ಕೆ ಭೇಟಿ ನೀಡುವ ಮೂಲಕ ಅಧ್ಯಕ್ಷರಿಗೆ ಖುದ್ದಾಗಿ ನಮ್ಮ ಬೇಡಿಕೆಯನ್ನು ನೀಡುವ ಮೂಲಕ ಕೊಡವ ಸಮಾಜದ ಹಾಗೂ ಸಂಘಟನೆಗಳ ಪ್ರಮುಖರು ಸೇರಿದಂತೆ ದೇಶ ತಕ್ಕ, ನಾಡು ತಕ್ಕ, ಊರು ತಕ್ಕರು ಹಾಗೂ ಕೊಡವ ಸಂಸ್ಕೃತಿಯನ್ನು ಪಾಲಿಸುತ್ತಿರುವ ಜನಾಂಗದ ಫ್ರಮುಖರ ಸಭೆಯನ್ನು ಒಟ್ಟಿಗೆ ಕರೆದು ಸಮಸ್ಯೆಯನ್ನು ಇದೆ ಜನವರಿ 20ರ ಒಳಗೆ ಇತ್ಯರ್ಥಪಡಿಸುವಂತೆ ಮನವಿ ನೀಡಲಾಗಿತ್ತು. ಇದರ ಜೊತೆಗೆ ಇತರ ಕೊಡವ ಸಂಘಟನೆಗಳ ಪ್ರಮುಖರು ಕೂಡ ಇವರನ್ನು ಒತ್ತಾಯಿಸಿದರು. ಆದರೆ ಇದ್ಯಾವುದಕ್ಕೂ ಕ್ಯಾರೇ ಎನ್ನದೆ ಇದೀಗ ಕೊಡವರನ್ನು ಮಂಡಿಯೂರುವಂತೆ ಮಾಡಿದ್ದಾರೆ. ಈ ಕೂಡಲೆ ಇವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದರೆ ಜನಾಂದೋಲನದ ಮೂಲಕ ರಾಜೀನಾಮೆ ಪಡೆಯುವ ಕೆಲಸ ಕೂಡ ನಮಗೆ ಗೊತ್ತಿದೆ. ಹಾಗೇ ಕಟ್ಟೆಮಾಡು ವಿಷಯವಾಗಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಮಾಡಲು ಮುಂದಾದ ನಾವುಗಳು ಕಾನೂನಿಗೆ ಗೌರವ ನೀಡಿ, ಪೊಲೀಸ್ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಮನವಿಗೆ ಸ್ಪಂದಿಸಿ ಜನವರಿ 11ಕ್ಕೆ ಪ್ರಕರಣ ಇತ್ಯರ್ಥವಾಗಿ ಆರೋಪಿಗಳ ವಿರುದ್ಧ ಕ್ರಮ ಕೈಗೊಂಡು ನಮ್ಮನ್ನು ಪೊಲೀಸ್ ಇಲಾಖೆಯೇ ದೇವಸ್ಥಾನಕ್ಕೆ ಕರೆದುಕೊಂಡು ಹೋಗುತ್ತಾರೆ ಎಂಬ ಭರವಸೆಯಲ್ಲಿ ಇದ್ದೇವು, ಆದರೆ ಇದೀಗ ಮತ್ತೆ ಫೆಬ್ರವರಿ 11ರವರೆಗೆ ನಿಷೇದಾಜ್ಞೆ ಏರುವ ಮೂಲಕ ನಮ್ಮ ಹೋರಾಟವನ್ನು ಸಂವಿದಾನಧಡಿಯಲ್ಲಿ ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ ಕೂಡಲೆ ಆರೋಪಿಗಳ ವಿರುದ್ಧ ಕ್ರಮ ಕೈಗೊಂಡು ನಮ್ಮ ಸಾಂಪ್ರದಾಯಿಕ ಉಡುಪಿನಲ್ಲಿ ನಮಗೆ ದೇವಸ್ಥಾನಕ್ಕೆ ಹೋಗಲು ಅವಕಾಶ ಮಾಡಿಕೊಡದೆ ಇದ್ದ ಪಕ್ಷದಲ್ಲಿ ಕಾನೂನಿನಡಿಯಲ್ಲಿಯೆ ಹೆಜ್ಜೆಯನ್ನು ಇಡಬೇಕಾಗುತ್ತದೆ, ಸದ್ಯದಲ್ಲಿಯೇ ಪ್ರಮುಖರ ಸಭೆ ಕರೆದು ಕಾನೂನು ಹೋರಾಟ ಸೇರಿದಂತೆ ಶಾಂತಿಯುವಾದ ಹೋರಾಟದ ರೂಪುರೇಷೆಗಳನ್ನು ಹಾಕಬೇಕಾಗುತ್ತದೆ ಎಂದು ಕೊಡವ ರೈಡರ್ಸ್ ಕ್ಲಬ್ ಎಚ್ಚರಿಸಿದೆ.
Kodagu
ಕನೆಕ್ಟಿಂಗ್ ಕೊಡವಾಸ್ ಹೋರಾಟಕ್ಕೆ ನಮ್ಮ ಬೆಂಬಲ
ಮಡಿಕೇರಿ : ಅಖಿಲ ಕೊಡವ ಸಮಾಜದವರು ಶಾಂತಿ ಸಂಧಾನದ ಮಾತಾನಾಡಿರುವುದು ಸರಿಯಲ್ಲ ಎಂದು ತಿಂಗಕೊರ್ ಮೊಟ್ಟ್ ತಲೆಕಾವೇರಿಕ್ ನಡ್ಪು (ಕಾವೇರಿಯ ಕೊಡವ ಭಕ್ತಾದಿಗಳ ಸಂಘಟನೆ) ಹೇಳಿದೆ.
ಪತ್ರಿಕಾ ಹೇಳಿಕೆ ನೀಡಿರುವ ಸಂಘಟನೆಯ ಅಧ್ಯಕ್ಷ ಮಲ್ಲಪನ್ನೇರ ವಿನು ಚಿಣ್ಣಪ್ಪ, ಇಲ್ಲಿ ತಪ್ಪು ಮಾಡಿರುವುದು ನಾವಲ್ಲ. ಹಾಗಾಗಿ ನಾವೇಕೆ ಶಾಂತಿ ಸಂಧಾನದ ಬಗ್ಗೆ ಮಾತನಾಡುವುದು, ತಪ್ಪು ಮಾಡಿದವರು ಅದರ ಬಗ್ಗೆ ಮಾತನಾಡಲಿ ಎಂದು ಹೇಳಿದ್ದು, ಕನೆಕ್ಟಿಂಗ್ ಕೊಡವಾಸ್ ಸಂಘಟನೆಯ ಹೋರಾಟಕ್ಕೆ ತಿಂಗಕೊರ್ ಮೊಟ್ಟ್ ತಲೆಕಾವೇರಿಕ್ ನಡ್ಪು (ಕಾವೇರಿಯ ಕೊಡವ ಭಕ್ತಾದಿಗಳ ಸಂಘಟನೆ) ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದ್ದಾರೆ.
-
Kodagu21 hours ago
ಅಖಿಲ ಕೊಡವ ಸಮಾಜದ ಹೇಳಿಕೆಗೆ ನಮ್ಮ ವಿರೋಧವಿದೆ, ಹೋರಾಟ ಮುಂದುವರಿಯಲಿದೆ – ಕನೆಕ್ಟಿಂಗ್ ಕೊಡವಾಸ್ ಸಂಘಟನೆ ಸ್ಪಷ್ಟನೆ
-
Kodagu20 hours ago
ಕಿಡಿಗೇಡಿಗಳನ್ನು ಬಂಧಿಸದೇ ನಡೆಸುವ ಶಾಂತಿ ಮಾತುಕತೆಗೆ ನಮ್ಮ ಬೆಂಬಲವಿಲ್ಲ: ಯುಕೊ ಸ್ಪಷ್ಟನೆ
-
Tech17 hours ago
ಮೊಬೈಲ್ ಬಳಕೆದಾರರಿಗೆ ದೂರ ಸಂಪರ್ಕ ಇಲಾಖೆಯಿಂದ ಗೂಡ್ ನ್ಯೂಸ್ : ಪ್ರತಿಯೊಬ್ಬರು ತಿಳಿದುಕೊಳ್ಳಲೇಬೇಕಾದ ಮಾಹಿತಿ
-
Sports22 hours ago
Champions Trophy 2025ಕ್ಕೆ ಟೀಂ ಇಂಡಿಯಾ ಪ್ರಕಟ: ಗಿಲ್ಗೆ ಉಪನಾಯಕ ಪಟ್ಟ
-
National - International23 hours ago
ಕೊಲ್ಕತ್ತಾ ವೈದ್ಯ ಮೇಲಿನ ಅತ್ಯಾಚಾರ ಪ್ರಕರಣ: 57 ದಿನಗಳಲ್ಲಿ ತೀರ್ಪು ಪ್ರಕಟ; ರಾಯ್ ದೋಷಿ
-
Cinema24 hours ago
ನಟ ಸೈಫ್ ಅಲಿ ಖಾನ್ಗೆ ಚಾಕು ಇರಿತ ಪ್ರಕರಣ: ಪತ್ನಿ ಕರೀನಾ ಕಪೂರ್ ಫಸ್ಟ್ ರಿಯಾಕ್ಷನ್!
-
Mysore21 hours ago
ಮೈಸೂರು ವಿವಿ ಗೌರವ ಡಾಕ್ಟರೇಟ್ ತಂದ ಖುಷಿ
-
Mysore19 hours ago
ಮೈಸೂರಿನ ಮಾರುಕಟ್ಟೆಗೆ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು