Special
ಪ್ರಕೃತಿ ಹಾಗೂ ಮನುಷ್ಯನ ವಿನಾಶಕ್ಕೆ ಕಾರಣವಾಗುತ್ತಿರುವ ಪ್ಲಾಸ್ಟಿಕ್ ಬಳಕೆ ನಿಷೇಧಿಸಬೇಕು

ಚನ್ನರಾಯಪಟ್ಟಣ : ಪ್ರಕೃತಿ ಹಾಗೂ ಮನುಷ್ಯನ ವಿನಾಶಕ್ಕೆ ಕಾರಣವಾಗುತ್ತಿರುವ ಪ್ಲಾಸ್ಟಿಕ್ ಬಳಕೆ ನಿಷೇಧಿಸಬೇಕು ಹಾಗೂ ಕಸ ತ್ಯಾಜ್ಯ ವಿಲೇವಾರಿಯ ಅರಿವು ಪ್ರತಿಯೊಬ್ಬ ನಾಗರೀಕರಿಗೂ ಬರಬೇಕಾಗಿದ್ದು ತಮ್ಮ ಮನೆಯಿಂದಲೇ ಹಸಿಕಸ, ಒಣಕಸ, ಇ – ತ್ಯಾಜ್ಯ ವಿಂಗಡಿಸಿ ಕಸ ಸಂಗ್ರಹಣೆಯ ವಾಹನಕ್ಕೆ ನೀಡಬೇಕಾಗಿದೆ.
ಮುಂದಿನ ದಿನಗಳಲ್ಲಿ ಪಟ್ಟಣದ ಸ್ವಚ್ಚತೆಗೆ ನೌಕರರು ಸಿಗುವುದು ವಿರಳ, ಏಕೆಂದರೆ ತಮ್ಮ ಮನೆಯಲ್ಲಿನ ಕಸವೇ ೨ ದಿನ ಕಳೆದರೆ ಗಬ್ಬು ನಾರುತ್ತದೆ. ಅದನ್ನು ಸ್ವಚ್ಚ ಮಾಡಿಕೊಳ್ಳುವುದೇ ಕಷ್ಟಕರ, ಆದ್ದರಿಂದ ಬೀದಿ ಬದಿಯ ಕಸದ ಸ್ವಚ್ಚತೆಗೆ ಯಕ್ಷ ಪ್ರಶ್ನೆಯಾಗಿ ಉಳಿಯುತ್ತದೆ. ಆದ್ದರಿಂದ ಪ್ರತಿಯೊಬ್ಬ ನಾಗರೀಕನೂ “ನನ್ನ ತ್ಯಾಜ್ಯ ನನ್ನ ಜವಬ್ದಾರಿ” ಎಂದು ಪುರಸಭೆಯೊಂದಿಗೆ ಕೈಜೋಡಿಸಬೇಕಾಗಿದೆ. “ನನ್ನ ಮನೆ, ನನ್ನ ಬೀದಿ, ನನ್ನ ಪಟ್ಟಣದ ಸ್ವಚ್ಛತೆ ದೇಶದ ಅಭಿವೃದ್ಧಿ” ಎಂದು ಅರಿತು ಬಾಳ್ಮೆ ಮಾಡಬೇಕಾಗಿದೆ.
ಈಗಾಗಲೇ ಪಟ್ಟಣದ ಜನಸಂಖ್ಯೆ ೨೩ ವಾರ್ಡುಗಳಿಂದ ೫೦ ರಿಂದ ೬೦,೦೦೦ ದಾಟಿರುವುದರಿಂದ ಹಾಸನ ಜಿಲ್ಲಾ ಕೇಂದ್ರ ಹೊರತುಪಡಿಸಿ ಅತಿ ಹೆಚ್ಚು ಜನದಟ್ಟಣೆ ಹೊಂದಿರುವ ಪಟ್ಟಣವಾಗಿದ್ದು ನಗರಸಭೆಯಾಗಿ ಮೇಲ್ದರ್ಜೆಗೇರಬೇಕಾಗಿದೆ. ತಾಲೂಕು ಮಟ್ಟದಲ್ಲಿ ಅತಿ ಹೆಚ್ಚು ವೈನ್ ಶಾಪ್, ಬಾರ್ ಮತ್ತು ರೆಸ್ಟೋರೆಂಟ್ ಸಿ. ಎಲ್. ಗಳು ಸೇರಿದಂತೆ ೩೩ ಅಬಕಾರಿ ಮಂದಿರಗಳಿವೆ. ಬೀದಿ ಬದಿಯ ಕ್ಯಾಟೀನ್‌ಗಳು ಹೋಟಲ್‌ಗಳು ಸೇರಿ ೨೦೦ ಕ್ಕೂ ಹೆಚ್ಚಾಗಿವೆ ಇವುಗಳಿಂದ ಪ್ರತಿನಿತ್ಯ ೧೮ ರಿಂದ ೨೦ ಟನ್ ಕಸ ಉತ್ಪಾದನೆಯಾಗುತ್ತಿದೆ.
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ೮ ಖಾಸಗಿ ಆಸ್ಪತ್ರೆ, ೪೦ ಕ್ಲಿನಿಕ್‌ಗಳಿಂದ ಬರುವ ಬಯೋಮೆಡಿಕಲ್ ತ್ಯಾಜ್ಯವನ್ನು ಹಾಸನದಿಂದ ಸಂಗ್ರಹಿಸುವುದನ್ನು ಬಿಟ್ಟರೆ, ಇತರೆ ತ್ಯಾಜ್ಯವನ್ನು ಪ್ರತಿದಿನ ಪುರಸಭೆಯಿಂದ ಸಂಗ್ರಹಿಸಲಾಗುತ್ತದೆ. ಇದಲ್ಲದೆ ಕಲ್ಯಾಣ ಮಂಟಪಗಳಿoದ ತ್ಯಾಜ್ಯವನ್ನು ಹೊರಹಾಕುತ್ತಾರೆ.
ವೈಜ್ಞಾನಿಕ ಕಸ ವಿಲೇವಾರಿ.
ಪಟ್ಟಣದ ಜನತೆ ತಮ್ಮ ಮನೆಯಲ್ಲಿಯೇ ಪೈಪ್ ಕಾಂಪೋಸ್ಟ್ ಗೊಬ್ಬರನ್ನು ತಯಾರಿಸಬಹುದು. ಮನೆಯ ಕಾಂಪೌಡಿನ ಒಂದು ಬದಿಯಲ್ಲಿ ಪ್ಲಾಸ್ಟಿಕ್ ಪೈಪನ್ನು ಅಳವಡಿಸಿ ಅದಕ್ಕೆ ಹಸಿ ಕಸ, ಬೆಲ್ಲ ಹಾಗೂ ಸಗಣಿ, ಮಣ್ಣು ಹಾಕುವ ಮೂಲಕ ಗೊಬ್ಬರ ತಯಾರಿಸ ಬಹುದು. ತರಕಾರಿ ಹಣ್ಣಿನ ಗಿಡಗಳಿದ್ದರೂ ಕೂಡ ನೇರವಾಗಿ ಹಸಿಕಸವನ್ನು ಬಳಕೆ ಮಾಡಬಹುದು.
ಮನೆಗಳಿಂದಲೇ ಕಸ ವಿಂಗಡಣೆ ಕಡ್ಡಾಯ:
ಪ್ರತಿ ಮನೆ ಹಾಗೂ ಹೊಟೆಲ್, ಕಲ್ಯಾಣ ಮಂಟಪ, ಅಂಗಡಿಗಳಿAದಲೂ ಹಸಿ ಕಸ, ಒಣಕಸ ಹಾಗೂ ಇ ತ್ಯಾಜ್ಯವನ್ನು ಪ್ರತ್ಯೇಕ ಮಾಡಿ ಕಸ ಸಂಗ್ರಹಿಸುವ ವಾಹನಗಳಿಗೆ ನೀಡಬೇಕು. ಎಲ್ಲೆಂದರಲ್ಲಿ ಕಸ ಬಿಸಾಡುವುದನ್ನು ನಿಲ್ಲಿಸಬೇಕು. ಎಲ್ಲೆಂದರಲ್ಲಿ ಕಸ ಹಾಗೂ ಪ್ಲಾಸ್ಟಿಕ್ ತ್ಯಾಜ್ಯವನ್ನು ಬಿಸಾಡುವುದರಿಂದ ಚರಂಡಿಗಳು ಕಟ್ಟಿಕೊಳ್ಳುತ್ತವೆ ಇದರಿಂದ ಮಳೆಯ ನೀರು ಸರಾಗವಾಗಿ ಹರಿಯುವುದಿಲ್ಲ. ಚರಂಡಿ ಕಟ್ಟಿಕೊಂಡು ನೀರು ರಸ್ತೆಯ ಮೇಲೆ ಹರಿಯುವುದರಿಂದ ರಸ್ತೆ ಕೂಡ ಹಾಳಾಗುತ್ತದೆ.
ನಲ್ಲೂರು ಬಳಿ ಇರುವ ತ್ಯಾಜ್ಯ ವಿಲೇವಾರಿ ಘಟಕ.:
ಪಟ್ಟಣದಿಂದ ೧೦ ಕಿ.ಮೀ. ಅಂತರದಲ್ಲಿ ನಲ್ಲೂರು ಬಳಿ ೨೧ ಎಕರೆಯಲ್ಲಿ ತ್ಯಾಜ್ಯ ವಿಲೇವಾರಿ ಘಟಕವಿದ್ದು. ಈ ಮೊದಲೆಲ್ಲ ನೊಣದ ಕಾಟ, ನಾಯಿಗಳ ಕಾಟ ಹಾಗೂ ವಾಸನೆಯಿಂದ ಸುತ್ತಮುತ್ತಲ ಗ್ರಾಮಸ್ಥರು ಹೈರಾಣಾಗಿದ್ದರು ಆದರೆ ಇತ್ತೀಚೆಗೆ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ೩.೮೦ ಕೋಟಿ ಅನುದಾನದಲ್ಲಿ ನೂತನವಾಗಿ ಟ್ರಾಮೆಲ್, ಬೇಲಿಂಗ್, ಶೆಡ್ಡರ್ ಯಂತ್ರಗಳನ್ನು ಸುಸಜ್ಜಿತ ಕಾಂಕ್ರಿಟ್ ನೆ¯ ಹಾಸು ಹಾಗೂ ಅದಕ್ಕೆ ನೆರಳಿನÀ ವ್ಯವಸ್ಥೆ, ತೂಕದ ಯಂತ್ರ ಅಳವಡಿಕೆ ಇನ್ನಿತರೆ ಕಾಮಕಾರಿಗಳು ಪೂರ್ಣಗೊಂಡಿವೆ.
ಆಧುನಿಕ ಯಂತ್ರಗಳಿAದ ಕಸವನ್ನು ಭೇರ್ಪಡಿಸಿ ರೈತರು ಬಳಸುವಂತೆ ೧ ಕಿಲೊ ಗ್ರಾಂ ಗೆ ೧ ರೂನಂತೆ ತಯಾರಿಸಲಾಗುತ್ತಿದೆ. ಇಷ್ಟೇ ಅಲ್ಲದೆ ಎರೆಹುಳು ಗೊಬ್ಬರ ಕೂಡ ತಯಾರಿಸಲಾಗುತ್ತಿದೆ, ಪುನರ್ಬಳಕೆಗೆ ಬಾರದ ಪ್ಲಾಸ್ಟಿಕ್ ವಸ್ತುಗಳನ್ನು ಮುಂದಿನ ೧೦ ವರ್ಷಗಳ ಮುಂದಾಲೋಚನೆಯೊAದಿಗೆ ೧ ಎಕರೆ ಪ್ರದೇಶದಲ್ಲಿ ಸಂಗ್ರಹಿಸಲಾಗುತ್ತದೆ.
ಪಟ್ಟಣದ ಸ್ವಚ್ಚತೆಯಲ್ಲಿ ಪೌರ ಕಾರ್ಮಿಕರು:
ಪ್ರತಿ ನಿತ್ಯ ಪಟ್ಟಣದ ತ್ಯಾಜ್ಯ ವಿಲೇವಾರಿಗೆ ೧೦ ಆಟೋ ಟಿಪ್ಪರ್, ೨ ಟ್ರಾಕ್ಟರ್, ೧ ಕಂಪ್ಯಾಕ್ಟರ್, ಸೇರಿದಂತೆ ೧೫ ಚಾಲಕರು, ೧೫ ಜನ ಸಹಾಯಕರು ಹಾಗೂ ನಲ್ಲೂರು ತ್ಯಾಜ್ಯ ವಿಂಗಡಣೆಗೆ ೧೦ ನೌಕರರು ಬೀದಿ ಹಾಗೂ ರಸ್ತೆ ಕಸ ಗುಡಿಸುವ ಪೌರ ಕಾರ್ಮಿಕರು ಸೇರಿ ಪ್ರತಿನಿತ್ಯ ೮೫ ಜನ ತ್ಯಾಜ್ಯ ವಿಲೇವಾರಿಯ ಕೆಲಸ ನಿರ್ವಹಿಸುತ್ತಾರೆ.
ಆರೋಗ್ಯ ನಿರೀಕ್ಷಕ ಡಿ.ಪಿ. ರಾಜು ಅವರು ಈಗಾಗಲೇ ೮ ಎಕರೆ ಜಾಗದಲ್ಲಿ ಬಯಳ ವರ್ಷಗಳಿಂದ ಸಂಗ್ರಹವಾಗಿರುವ ೮೦,೦೦೦ ಟನ್ ಕಸ ವಿಲೇವಾರಿಯಾಗಬೇಕಾಗಿದ್ದು, ಈಗಿರುವ ಯಂತ್ರಗಳ ಮೂಲಕ ಪ್ರತಿ ದಿನ ೫೦ ಟನ್ ಕಸ ವಿಲೇವಾರಿ ಮಾಡಬಹುದೆಂದು ತಿಳಿಸಿದ್ದಾರೆ. ಶಾಸಕ ಸಿ.ಎನ್.ಬಾಲಕೃಷ್ಣ ಕೂಡ ಹೆಚ್ಚು ಸಾಮರ್ಥ್ಯವಿರುವ ಕಸ ವಿಂಗಡಣೆಯ ಯಂತ್ರಗಳನ್ನು ಒದಗಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
“ಪಟ್ಟಣದ ಎಲ್ಲಾ ನಾಗರೀಕ ಬಂಧುಗಳು ನಿಮ್ಮ ಪಟ್ಟಣದ ಸ್ವಚ್ಛತೆ ಹಾಗೂ ಅಭಿವೃದ್ಧಿಯ ದೃಷ್ಠಿಯಿಂದ ಹಸಿ ಕಸ, ಒಣಕಸ ಹಾಗೂ ಇ ತ್ಯಾಜ್ಯವನ್ನು ವಿಂಗಡಿಸಿ ಬೀದಿ ಬದಿ ಎಲ್ಲೆಂದರೆಲ್ಲಿ ಎಸೆಯಬೇಡಿ ಕಸ ಸಂಗ್ರಹಣೆಯ ವಾಹನಕ್ಕೆ ನೀಡಿ.”
ಕೆ.ಎನ್. ಹೇಮಂತ್, ಪುರಸಭಾ ಮುಖ್ಯಾಧಿಕಾರಿ. “ಎಲ್ಲಾ ನಾಗರೀಕರು ನಮ್ಮ ಪಟ್ಟಣ ಎಂದು ಭಾವಿಸಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಭೀರುವುದನ್ನು ತಪ್ಪಿಸುವ ಸಲುವಾಗಿ ವಾಯುವಿಹಾರ ತಾಣದ ಬದಿಯುಲ್ಲಿ ರಸ್ತೆ ಬದಿಯಲ್ಲಿ ಕಸ ಸುರಿಯಬೇಡಿ, ಅಂತವರಿಗೆ ಕಠಿಣ ದಂಢ ವಿಧಿಸಲಾಗುತ್ತದೆ.”
ಡಾ.ಸಿ.ಎನ್.ಬಾಲಕೃಷ್ಣ ಶಾಸಕರು ಶ್ರವಣಬೆಳಗೊಳ ಕ್ಷೇತ್ರ.
“ಕ್ರಿಮಿ ನಾಶಕ ಹಾಗೂ ರಾಸಾಯನಿಕ ಬಳಕೆಯಿಂದ ಮನುಷ್ಯನ ಆರೋಗ್ಯದ ಮೇಲೆ ದುಷ್ಫರಿಣಾಮ ಉಂಟಾಗುವುದರಿAದ ರೈತರು ಪುರಸಭೆಯ ನೂತನ ಯುಂತ್ರಗಳಿAದ ವಿಂಗಡಣೆಯಾದ ಗೊಬ್ಬರ ಹಾಗೂ ಎರೆಹುಳ ಗೊಬ್ಬರವನ್ನು ಕೃಷಿಗೆ ಬಳಸಿ”
ಪುಟ್ಟೇಗೌಡ ಶೆಟ್ಟಿಹಳ್ಳಿ ಸಾವಯವ ಕೃಷಿಕ.
“ಈಗಗಲೇ ಮೈಸೂರಿನಲ್ಲಿ ಪ್ಲಾಸ್ಟಿಕ್ ಬಳಸಿ ಇಟ್ಟಿಗೆ ತಯಾರಿಸುತ್ತಿದ್ದು ನಮ್ಮ ಪಟ್ಟಣದಲ್ಲೂ ಅದನ್ನು ಪ್ರಯೋಗ ಮಾಡಿದರೆ ಪ್ಲಾಸ್ಟಿಕ್ ತ್ಯಾಜ್ಯದಿಂದ ಮುಕ್ತಿ ಪಡೆಯಬಹುದು” .
ಸಿ.ಆರ್. ಕುಮಾರ್ ಕಾಸ್ಮೆಟಿಕ್ಸ ಚನ್ನರಾಯಪಟ್ಟಣ.
ವರದಿ : ದಯಾನಂದ್ ಶೆಟ್ಟಿಹಳ್ಳಿ

-
Hassan1 month ago
ಮಲಗಿದಲ್ಲಿಯೇ ವ್ಯಕ್ತಿ ಸಾವು
-
Mysore1 month ago
KSRTC BUS – ಚಲಿಸುವಾಗ ನಿಯಂತ್ರಣ ತಪ್ಪಿ ಅಪಘಾತ
-
Crime2 weeks ago
ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ
-
Hassan2 months ago
ಹಾಸನ-ಅರ್ಧ ಗಂಟೆಯಲ್ಲಿ 1 ಲೀಟರ್ ಮದ್ಯ ಕುಡಿಯುವ ಚಾಲೆಂಜ್- ಓರ್ವ ಸಾವು
-
Hassan6 days ago
ಜಿಲ್ಲಾಧಿಕಾರಿ ಕಛೇರಿ ಎಸ್ಡಿಎ ಆತ್ಮಹತ್ಯೆ
-
Mysore1 month ago
ಮಾಂಗಲ್ಯ ಸರ ಅಪಹರಣ, ಪೊಲೀಸ್ ವತಿಯಿಂದ ತಪಾಸಣೆ
-
Crime1 month ago
ಕ್ಷುಲ್ಲಕ ಕಾರಣಕ್ಕೆ ಪೆಟ್ರೋಲ್ ಬಂಕ್ಗೆ ನುಗ್ಗಿ ಯುವಕನ ಮಚ್ಚಿನಿಂದ ಹಲ್ಲೆ
-
State1 month ago
ರೇಷನ್ ಕಾರ್ಡ್ ತಿದ್ದುಪಡಿಗೆ ಅವಧಿ ವಿಸ್ತರಸಿದ ಸರಕಾರ