Connect with us

Chikmagalur

ಕುಡಿಯುವ ನೀರೊದಗಿಸುವ ಹಿರೇಕೊಳಲೆ ಕೆರೆ ತುಂಬಿ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಭಾನುವಾರ ನಗರಸಭೆ ವತಿಯಿಂದ ಬಾಗಿನ

Published

on

ಚಿಕ್ಕಮಗಳೂರು: ನಗರದ ಏಳೆಂಟು ವಾರ್ಡ್‌ಗಳಿಗೆ ಕುಡಿಯುವ ನೀರೊದಗಿಸುವ ಹಿರೇಕೊಳಲೆ ಕೆರೆ ತುಂಬಿ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಭಾನುವಾರ ನಗರಸಭೆ ವತಿಯಿಂದ ಬಾಗಿನ ಅರ್ಪಿಸಲಾಯಿತು.
ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕ ಎಚ್.ಡಿ.ತಮ್ಮಯ್ಯ, ವಿಧಾನ ಪರಿಷತ್ ಸದಸ್ಯರುಗಳಾದ ಸಿ.ಟಿ.ರವಿ, ಎಸ್.ಎಲ್.ಬೋಜೇಗೌಡ, ನಗರಸಭೆ ಆಯುಕ್ತ ಬಿ.ಸಿ.ಬಸವರಾಜು ಸೇರಿದಂತೆ ಇತರರು ಗಂಗಾ ಪೂಜೆ ನೆರವೇರಿಸಿ ಒಟ್ಟಿಗೆ ಬಾಗಿನ ಅರ್ಪಿಸಿದರು.


ಈ ವೇಳೆ ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಕಳೆದ ವರ್ಷ ಬರಗಾಲ ಇದ್ದರೂ ಹಿರೇಕೊಳಲೆ ಮತ್ತು ಅಯ್ಯನ ಕೆರೆ ಕೋಡಿ ಬಿದ್ದಿದ್ದವು. ಭೂಮಿ, ನೀರನ್ನು ಮಾತೆಯರಿಗೆ ಹೋಲಿಸುವ ಪದ್ಧತಿ ಇದ್ದರೆ ಭಾರತದಲ್ಲಿ ಮಾತ್ರ. ಸಧ್ಯದಲ್ಲೇ ಯಗಚಿ ಜಲಾಶಯ ಕೋಡಿ ಬೀಳಲಿದೆ. ಹಿರೇಕೊಳಲೆಯಲ್ಲಿ ಇನ್ನೂ ಹೆಚ್ಚು ನೀರು ಸಂಗ್ರಹಿಸುವ ಕೆಲಸ ಮಾಡುತ್ತೇವೆ. ೫೦ ಲಕ್ಷ ರೂ. ವೆಚ್ಚದಲ್ಲಿ ಕೆರೆ ಏರಿ ಕಾಮಗಾರಿ ನಡೆಯುತ್ತಿದೆ. ಇನ್ನೂ ೭೫ ಲಕ್ಷ ರೂ. ಮೊನ್ನೆಯಷ್ಟೆ ಬಿಡುಗಡೆ ಆಗಿದೆ ಎಂದರು.


ನಮ್ಮ ಜಿಲ್ಲೆಯನ್ನು ಅತೀ ಹೆಚ್ಚು ಮಳೆ ಪೀಡಿತ ಪ್ರದೇಶವೆಂದು ಘೋಷಿಸಬೇಕೆಂದು ಸದನದಲ್ಲಿ ಸರ್ಕಾರವನ್ನು ಒತ್ತಾಯಿಸಿದ್ದೇವೆ. ಮುಂದಿನ ದಿನಗಳಲ್ಲಿ ಒಳ್ಳೆ, ಮಳೆ, ಬೆಳೆ ಕೊಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಪಂಚಭೂತಗಳಿಂದಲೇ ಜಗತ್ತು ಸೃಷ್ಠಿಯಾಗಿದೆ. ಅದನ್ನು ಕೃತಜ್ಞತೆಯಿಂದ ನೆನಪಿಸಿಕೊಂಡು ಬದುಕುವುದು ಸನಾತನ ಸಂಸ್ಕೃತಿಯ ಒಂದು ಭಾಗ. ಅದರ ಅಂಗವಾಗಿ ಗಂಗೆಗೆ ಇಂದು ಬಾಗಿನ ಅರ್ಪಿಸಿ ಎಲ್ಲವೂ ನಿನ್ನಿಂದಲೇ ಬಂದಿರುವುದು ಎನ್ನುವ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದೇವೆ. ಈ ವರ್ಷವೂ ಕೆರೆ ಭರ್ತಿ ಆಗಿದೆ. ಪ್ರತಿ ವರ್ಷವೂ ಸುಖ ಸಂವೃದ್ಧಿ ನೆಲೆಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ ಎಂದರು.


ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಮಾತನಾಡಿ, ಹಿಂದೆ ಹಿರೇಕೊಳಲೆ ಕೆರೆಯಿಂದ ನೈಸರ್ಗಿಕವಾಗಿ ಇಡೀ ನಗರಕ್ಕೆ ನೀರು ಪೂರೈಸಲಾಗುತ್ತಿತ್ತು. ಈ ಕೆರೆಯನ್ನು ಸಂರಕ್ಷಿಸಬೇಕು. ಒತ್ತುವರಿ ತೆರವುಗೊಳಿಸಬೇಕು. ಹೂಳು ತೆಗೆದರೆ ಇಂದಿಗೂ ಅರ್ಧ ನಗರಕ್ಕೆ ನೀರು ಕೊಡಲು ಸಾಧ್ಯವಿದೆ. ಕೆರೆಗಳ ನಿರ್ವಹಣೆ ವಿಚಾರದಲ್ಲಿ ಸರ್ಕಾರವೂ ಕಾಳಜಿ ವಹಿಸಬೇಕಿದೆ ಎಂದರು.
ಪ್ರಾಕೃತಿಕವಾಗಿ ಒಂದೇವಾರದಲ್ಲಿ ಇಡೀ ರಾಜ್ಯದ ಎಲ್ಲಾ ಜಲಾಶಯ, ಕೆರೆಗಳಿಗೆ ನೀರು ಹರಿದು ಬಂದೇ ವಾರದಲ್ಲಿ ಚಿತ್ರಣ ಬದಲಾಗಿದೆ. ಇದೆಲ್ಲ ಭಗವಂತನ ಕೃಪೆ, ಪರಿಸರವನ್ನು ನಾವು ಸದಾ ಕಾಪಾಡಿಕೊಳ್ಳಬೇಕು. ಪ್ರಾಣಿ, ಪಕ್ಷಿ, ಪರಿಸರವನ್ನು ಸಂರಕ್ಷಿಸಿ ಸಮತೋಲನವನ್ನು ಕಾಪಾಡಿಕೊಳ್ಳಬೇಕು ಎಂದರು.


ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮೊಹಮದ್ ಸಯ್ಯದ್ ಮತ್ತು ಸದಸ್ಯರು, ಆಶ್ರಯ ಸಮಿತಿ ಸದಸ್ಯರುಗಳು, ನಗರಸಭೆ ಸದಸ್ಯರುಗಳು, ಹಿರೇಕೊಳಲೆ ಗ್ರಾ.ಪಂ.ಅಧ್ಯಕ್ಷರು ಇತರರು ಈ ಸಂದರ್ಭದಲ್ಲಿ ಇದ್ದರು

Continue Reading

Chikmagalur

ಮುಳ್ಳಯ್ಯನ ಗಿರಿ ರಸ್ತೆಯಲ್ಲಿ ಕಿ.ಮೀ. ಗಟ್ಟಲೇ ಟ್ರಾಫಿಕ್ ಜಾಮ್,

Published

on

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ಮಳೆಯ ನಡುವೆಯೂ ಸಾವಿರಾರು ಪ್ರವಾಸಿಗರ ದಂಡು ಚಂದ್ರದ್ರೋಣ ಪರ್ವತ ಶ್ರೇಣಿಯ ಪ್ರವಾಸಿ ತಾಣಗಳಿಗೆ ಹರಿದು ಬಂದಿದೆ.

ಕಾರು-ಬೈಕ್‌-ಟಿಟಿ ಸೇರಿದಂತೆ  ಇಂದು 1850 ವಾಹನಗಳು ಗಿರಿಭಾಗಕ್ಕೆ ಭೇಟಿ ನೀಡಿವೆ. ಇದರ ನಡುವೆ ಚಾಲಕನ ನಿಯಂತ್ರಣ ತಪ್ಪಿ ಕಾರು-ಜೀಪ್ ಮುಖಾಮುಖಿ ಡಿಕ್ಕಿ ಸಂಭವಿಸಿದೆ.

ಡಿಕ್ಕಿಯ ರಭಸಕ್ಕೆ ಕಾರು-ಜೀಪಿನ ಮುಂಭಾಗ ಜಖಂಗೊಂಡಿದೆ. ಕಾರು ಮುಳ್ಳಯ್ಯನಗಿರಿಯಿಂದ ವಾಪಸ್ ಆಗುವಾಗ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಯಾರಿಗೂ ಯಾವುದೇ ಹಾನಿ ಸಂಭವಿಸಿಲ್ಲ, ಅಪಘಾತ ಸಂಭವಿಸಿದ ಪರಿಣಾಮ ಗಿರಿಯಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ನಿಯಂತ್ರಿಸಲು ಪೊಲೀಸರು ಹಾಗೂ ಪ್ರವಾಸಿ ಮಿತ್ರರು ಹರಸಾಹಸ ಪಡುವಂತಾಯಿತು.

ಟ್ರಾಫಿಕ್ ಕಂಟ್ರೋಲ್ ಮಾಡಲಾಗದೆ 2 ಗಂಟೆಗಳ ಕಾಲ ವಾಹನಗಳನ್ನ ಕೈಮರ ಚಕ್ ಪೋಸ್ಟ್ ನಲ್ಲಿ ನಿಲ್ಲಿಸಲಾಗಿತ್ತು. ಗಿರಿ ಪ್ರದೇಶದಲ್ಲಿ ವಾಹನಗಳು ಕಡಿಮೆಯಾದ ಬಳಿಕ ಮತ್ತೆ ವಾಹನಗಳನ್ನ ಬಿಡಲಾಯಿತು.

Continue Reading

Chikmagalur

ಭಿಕ್ಷೆ ಬೇಡಿ ಕುರ್ಚಿ ದಾನ ಕೊಟ್ಟ ದಲಿತ ಸಂಘಟನೆಗಳು

Published

on

ಚಿಕ್ಕಮಗಳೂರು : ತಾಲೂಕು ಕಚೇರಿಯಲ್ಲಿ ಕೂರಲು ಚೇರ್ ಇಲ್ಲ ಎಂದು ಭಿಕ್ಷೆ ಎತ್ತಿ ಕುರ್ಚಿಗಳನ್ನು ಕೊಡುಗೆಯಾಗಿ ನೀಡಿದ ವಿಲಕ್ಷಣ ಘಟನೆ ನಡೆದಿದೆ.

ಅಜ್ಜಂಪುರ ತಾಲೂಕಿನ ತಾಲೂಕು ಕಚೇರಿಗೆ 3500ರೂ. ಭಿಕ್ಷೆ ಎತ್ತಿ ಅದರಲ್ಲಿ 2500 ರೂ. ಕೊಟ್ಟು ದಲಿತ ಸಂಘಟನೆ ಕಾರ್ಯಕರ್ತರು ಕುರ್ಚಿ ತಂದಿದ್ದಾರೆ ಉಳಿದ ಹಣವನ್ನು ಸರ್ಕಾರಕ್ಕೆ ನೀಡಿವೆ .

ಅಜ್ಜಂಪುರ ಪಟ್ಟಣದ ಬಸ್ ಸ್ಟ್ಯಾಂಡ್, ಬಿ.ಎಚ್.ರಸ್ತೆ, ಹೋಟೆಲ್, ಅಂಗಡಿಗಳಲ್ಲಿ ಭಿಕ್ಷೆ ಎತ್ತಿದ ಹಣದಲ್ಲಿ ತಾಲೂಕು ಕಚೇರಿಯಲ್ಲಿ ಸಾರ್ವಜನಿಕರಿಗೆಂದೇ 8 ಚೇರ್ ನೀಡಿದ್ದಾರೆ.

ಮಳೆ ಸುರಿಯುತ್ತಿದ್ದರೂ ರಸ್ತೆ-ರಸ್ತೆಯಲ್ಲಿ ದಲಿತಪರ ಸಂಘಟನೆಗಳ ಒಕ್ಕೂಟದಿಂದ ಭಿಕ್ಷೆ ಎತ್ತಲಾಯಿತು.

Continue Reading

Chikmagalur

ದತ್ತು ಕೇಂದ್ರದ ಸಿಬ್ಬಂದಿ ನಿರ್ಲಕ್ಷ್ಯ, ಮೈ ಸುಟ್ಟುಕೊಂಡು ನರಳುತ್ತಿರುವ ಕಂದಮ್ಮ

Published

on

ಚಿಕ್ಕಮಗಳೂರು : ನಗರದ ದತ್ತು ಸಂಸ್ಥೆಯಲ್ಲಿ ಹೆಣ್ಣು ಮಗುವಿನ ಮೇಲೆ ಆರೈಕಾ ಸಿಬ್ಬಂದಿ ಕುದಿಯುವ ನೀರು ಸುರಿದ ಘಟನೆ ನಡೆದಿದೆ. ಮಗುವಿನ ಸೊಂಟದ ಕೆಳಭಾಗ ಸಂಪೂರ್ಣ ಸುಟ್ಟಿದೆ. ಮಲ ವಿಸರ್ಜನೆ ಮಾಡಿದ್ದ ಮಗುವನ್ನು ಸ್ವಚ್ಛ ಮಾಡುವಾಗ ಘಟನೆ ಸಂಭವಿಸಿದೆ.

ಒಂದು ವರ್ಷ ಮೂರು ತಿಂಗಳ ಹೆಣ್ಣು ಮಗುವಿನ ಮೇಲೆ ಸಿಬ್ಬಂದಿ ಯಡವಟ್ಟಿನಿಂದ ಕುದಿಯುವ ಬಿಸಿ ನೀರು ಸುರಿದ ಪರಿಣಾಮ ಸೊಂಟದ ಕೆಳಭಾಗ ಸಂಪೂರ್ಣ ಸುಟ್ಟು ಹೋಗಿದೆ. ಮಲ ವಿಸರ್ಜನೆ ಮಾಡಿದ್ದ ಮಗುವನ್ನು ಸ್ವಚ್ಛ ಮಾಡುವಾಗ ದುರ್ಘಟನೆ ಸಂಭವಿಸಿದೆ.

ಚಿಕ್ಕಮಗಳೂರು ನಗರದ ಗಾಂಧಿನಾಗರದಲ್ಲಿರುವ ಸರ್ಕಾರಿ ವಿಶೇಷ ದತ್ತು ಸಂಸ್ಥೆ ಮಕ್ಕಳ ರಕ್ಷಣಾ ನಿರ್ದೇಶನಾಲಯದ ಅಡಿಯಲ್ಲಿ ಬರಲಿದೆ. ಅನಾಥ ಮಕ್ಕಳನ್ನು ರಕ್ಷಣೆ ಮಾಡಿ ಆರೈಕೆ ಮಾಡುವ ಜವಾಬ್ದಾರಿ ಹೊಂದಿದೆ. ಆದರೆ ಸಿಬ್ಬಂದಿಗಳ ಬೇಜವಾಬ್ದಾರಿಗೆ ಮಗು ನರಳಾಡುವಂತಾಗಿದೆ. ಜುಲೈ 09 ರಂದು ಘಟನೆ ನಡೆದಿದ್ದು, ಇಡೀ ಪ್ರಕರಣ ಮೇಲಧಿಕಾರಿಗಳಿಗೆ ತಿಳಿಯದಂತೆ ಸಿಬ್ಬಂದಿ ಮುಚ್ಚಿಟ್ಟಿದ್ದಾರೆ.

ಸದ್ಯ ಚಿಕ್ಕಮಗಳೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲಾ ಮಕ್ಕಳ‌ ರಕ್ಷಣಾ ಘಟಕದ ದತ್ತು ಸಂಸ್ಥೆ ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

Continue Reading

Trending

error: Content is protected !!