Connect with us

Mandya

ಎನ್‌ಡಿಎ ಸೋಲಿಸಲು ಆಗ್ರಹಿಸಿ ರಾಜ್ಯಾದ್ಯಂತ ರೈತ ಸಂಘ ಪ್ರಚಾರ: ಬಡಗಲಪುರ ನಾಗೇಂದ್ರ

Published

on

ಮಂಡ್ಯ: ರೈತ ಸಮುದಾಯ ಮತ್ತು ದುಡಿಯುವ ವರ್ಗವನ್ನು ನಿರ್ಲಕ್ಷ್ಯ ಮಾಡಿರುವ ಎನ್‌ಡಿಎ ಪಕ್ಷವನ್ನು ಸೋಲಿಸಿ ರೈತರನ್ನು ಉಳಿಸಿ ಎಂಬ ಘೋಷವಾಕ್ಯದೊಂದಿಗೆ ಈ ಬಾರಿ ರಾಜ್ಯದ ಎಲ್ಲ 28 ಕ್ಷೇತ್ರಗಳಲ್ಲೂ ಚುನಾವಣಾ ಪ್ರಚಾರ ನಡೆಸಲಾಗುವುದು ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಂದು 10 ವರ್ಷಗಳಾಗಿವೆ. ದೇಶದಲ್ಲಿ ಶೇ.60 ರಷ್ಟು ದುಡಿಯುವ ಮತ್ತು ರೈತರಿದ್ದರೂ ಈ ಸಮುದಾಯಕ್ಕೆ ಯಾವುದೇ ರೀತಿಯ ಕಾರ್ಯಕ್ರಮ ನೀಡದೆ ನಿರ್ಲಕ್ಷ್ಯ ಮಾಡಿದೆ ಎಂದು ಸುದ್ದಿಗೊಷ್ಠಿಯಲ್ಲಿ ಮಂಗಳವಾರ ಆರೋಪಿಸಿದರು.

ಎಂ.ಎಸ್.ಸ್ವಾಮಿನಾಥನ್ ವರದಿ ಅನುಷ್ಠಾನಗೊಳಿಸುವುದಾಗಿ ಹೇಳಿ ಅಧಿಕಾರ ಹಿಡಿದ ಎನ್‌ಡಿಎ ಈವರೆವಿಗೂ ಬೆಂಬಲ ಬೆಲೆ ರೂಪಿಸುವಲ್ಲಿ ವಿಫಲವಾಗಿದೆ? ಈ ಹಿಂದೆ 336 ಚುನಾವಣಾ ಪ್ರಚಾರ ಸಭೆಗಳಲ್ಲಿ ಬೆಂಬಲ ಬೆಲೆ ನೀಡುವುದಾಗಿ ಘೋಷಣೆ ಮಾಡಿದ್ದರಾದರೂ, ಅನುಷ್ಠಾನಗೊಳಿಸಲಿಲ್ಲ, 2016ರ ಫೆ.16 ರಂದು ಸ್ವಾಮಿನಾಥನ್ ಶಿಫಾರಸ್ಸಿನನ್ವಯ ಬೆಂಬಲ ಬೆಲೆ ಕೊಡಲಾಗದು ಎಂದು ಸುಪ್ರೀಂ ಕೋರ್ಟಿಗೆ ಅಫಿಡೆವಿಟ್ ಸಲ್ಲಿಸಿದ್ದಾರೆ. 2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ವಾಗ್ದಾನ ಮಾಡಿದ್ದರು. ಕೃಷಿ ಸಬ್ಸಿಡಿಯನ್ನು ಹಂತ ಹಂತವಾಗಿ ಕಡಿಮೆ ಮಾಡಲಾಗಿದೆ. ಕೃಷಿ ಬೆಳೆಗಳಿಗೆ ಬೆಲೆ ಇಲ್ಲದಂತಾಗಿದೆ. ಆದರೆ ಗ್ರಾಹಕರಿಗೆ ಮಾತ್ರ ಹೆಚ್ಚಿನ ಹೊರ ಹೊರಿಸಲಾಗುತ್ತಿದೆ ಎಂದು ಆಕ್ರೊಶ ವ್ಯಕ್ತಪಡಿಸಿದರು.

ಕೇಂದ್ರದ ಎನ್‌ಡಿಎ ಸರ್ಕಾರ ಚಳವಳಿಗಳನ್ನು ಹಿಮ್ಮೆಟ್ಟಿಸುವ ಮೂಲಕ ಮಹಾತ್ಮಾಗಾಂಧಿ ಅವರ ಆಶಯಗಳಿಗೆ ಅಪಮಾನ ಮಾಡಿದೆ. 383 ದಿನಗಳ ಕಾಲ ಪ್ರತಿಭಟನೆ ವಾಪಸ್ಸುಪಡೆಯಲಾಗಿದೆ. ಬೆಂಬಲ ಬೆಲೆ ಜಾರಿಗೆ ಸಮಿತಿ ರಚನೆ ಮಾಡುವುದಾಗಿ ಹೇಳಿದ್ದರು. ಆದರೆ ಅವರಿಗೆ ಬೇಕಾದವರನ್ನು ಸಮಿತಿಯೊಳಗೆ ಸೇರಿಸಿದ್ದಾರೆ. ರೈತ ಪ್ರತಿನಿಧಿಗಳನ್ನು ಸಮಿತಿಯಲ್ಲಿ ಸೇರಿಸಿಲ್ಲ, ಈ ಹಿನ್ನೆಲೆಯಲ್ಲಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲೂ ಸಹ ರೈತ ಸಂಘದ ವತಿಯಿಂದ ಅಭಿಯಾನ ಮಾಡುತ್ತೇವೆ. ರೈತ ಸಂಘದೊಂದಿಗೆ ಕೈ ಜೋಡಿಸುವ ಸಿವಿಲ್ ಸಂಘಟನೆಗಳೊಂದಿಗೆ ಅಭಿಯಾನ ಮಾಡಿ ಬಿಜೆಪಿಯನ್ನು ಸೋಲಿಸುವುದೇ ನಮ್ಮ ಮುಖ್ಯ ಉದ್ಧೇಶವಾಗಿದೆ ಎಂದು ತಿಳಿಸಿದರು.

ಜೆಡಿಎಸ್ ಸಹ ರೈತ ವಿರೋಧಿಯಾಗಿದೆ. ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಾರಿಗೊಳಿಸಲಾಗಿದ್ದ ಭೂಸುಧಾರಣಾ ಕಾಯಿದೆ ತಿದ್ದುಪಡಿ ವೇಳೆ ಪರವಾಗಿ ಮತ ಚಲಾಯಿಸಿದ್ದಾರೆ. ಗೇಣಿದಾರರ ಪರವಾಗಿ ಭೂಸುಧಾರಣಾ ಕಾಯ್ದೆ ಬಂದಿದೆ. ಅದಕ್ಕೆ ಕೈ ಎತ್ತುವ ಮೂಲಕ ಅದರ ಪರ ಎಂಬುದನ್ನು ಸಾಭೀತುಪಡಿಸಿರುವುದನ್ನು ಖಂಡಿಸುತ್ತೇವೆ, ಮೇಕೆದಾಟು ಯೋಜನೆ ಕುರಿತಂತೆ ತಮಿಳುನಾಡು ಸರ್ಕಾರ ವಿರೋಧ ವ್ಯಕ್ತಪಡಿಸಿರಬಹುದು. ಆದರೆ ರಾಜ್ಯ ಸರ್ಕಾರ ಅದರ ಪ್ರಣಾಳಿಕೆಯಲ್ಲಿ ರೂಪಿಸಿಲ್ಲ. ರಾಜ್ಯ ಸರ್ಕಾರವನ್ನು ನಾವು ಒತ್ತಾಯ ಮಾಡಿ ಪತ್ರ ಬರೆದಿದ್ದೇವೆ. ಮೇಕೆದಾಟು ಅನುಷ್ಠಾನಗೊಳಿಸುವುದು ಸೇರಿದಂತೆ ವಿವಿಧ ರೈತ ಪರ ಯೋಜನೆಗಳ ಕುರಿತಂತೆ ಪ್ರಸ್ತಾಪಿಸಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಮುಖಂಡರಾದ ತಗ್ಗಹಳ್ಳಿ ಪ್ರಸನ್ನ, ಪ್ರಕಾಶ್, ನಾಗರಾಜು, ಚಂದ್ರಶೇಖರ್, ಮೈಸೂರು ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಇದ್ದರು.

Continue Reading
Click to comment

Leave a Reply

Your email address will not be published. Required fields are marked *

Mandya

ಮದ್ದೂರು: ತಾಲೂಕು ದಲಿತ ಸಾಹಿತ್ಯ ಪರಿಷತ್ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ರವರ ಪರಿನಿಬ್ಬಾಣ ದಿನ ಆಚರಣೆ

Published

on

ಮದ್ದೂರು: ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಾಲೂಕು ದಲಿತ ಸಾಹಿತ್ಯ ಪರಿಷತ್ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ರವರ ಪರಿನಿಬ್ಬಾಣ ದಿನ ಕಾರ್ಯಕ್ರಮದ ನಡೆಯಿತು.

ದಲಿತ ಸಾಹಿತ್ಯ ಪರಿಷತ್ ನ ತಾಲೂಕು ಅಧ್ಯಕ್ಷ ಕೆ. ಟಿ.ಶಿವಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಬುದ್ಧ, ರವರು ರಾಜಮನೆತನದಲ್ಲಿ ಹುಟ್ಟಿಸಾಮಾಜಿಕ ಸ್ಥಿತಿಗತಿಯನ್ನು ನೋಡಿ ತಮ್ಮ ಕುಟುಂಬವನ್ನೇ ತೊರೆದು ತಪ್ಪಸ್ಸನ್ನು ಮಾಡಿ ಜ್ಞಾನ ಪಡೆದು ಪಂಚಶೀಲ ತತ್ವಗಳನ್ನು ಬೋಧಿಸುವ ಮೂಲಕ ಸಮಾಜ ಏಳಿಗೆಗಾಗಿ ಶ್ರಮಿಸುವ ಮಹಾಪುರುಷ. ಬುದ್ಧ ಅವರ ಅನುಯಾಯಿಯಾದ ಡಾ.ಅಂಬೇಡ್ಕರ್ ರವರು ಸಮಾಜ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ಸಮಾನತೆ, ಭಾತೃತ್ವ, ಸಹೋದರತ್ವ, ಸಹಬಾಳ್ವೆ ಯನ್ನು ಸಂವಿಧಾನ ಅಳವಡಿಸುವುದರ ಮೂಲಕ ಸಾಮಾಜಿಕ ಸಮಾನತೆವನ್ನು ಸಾರಿದರು. ಅಂಬೇಡ್ಕರ್ ರವರು ಪರಿನಿಬ್ಬಾಣ ಹೊಂದಿರಬಹುದು ಆದರೆ ಅವರ ಆದರ್ಶ ಅಮರವಾಗಿವೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹುರಗಲವಾಡಿ ರಾಮಯ್ಯ ಅಂಬೇಡ್ಕರ್ ರವರು ಶೋಷಿತರಿಗೆ ಮತದಾನ ಹಕ್ಕುನ್ನು ನೀಡುವುದರ ಮೂಲಕ ಶೋಷಿತ ವರ್ಗಗಳ ಧ್ವನಿಯಾದರು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಜನಿಸಿದ ಸಂಘಟನೆಯ ಮುಖಂಡ ಕೋನ ಶಾಲೆ ರಾಜು ಅವರ ಕುಟುಂಬಕ್ಕೆ ಆರ್ಥಿಕ ನೆರವು ನೀಡಲಾಯಿತು.

ಕಾರ್ಯಕ್ರಮದಲ್ಲಿ ರಾಜ್ಯ ಸಂಘಟನಾ ಸಂಚಾಲಕ ಸೋಮನಹಳ್ಳಿ ಅಂದಾನಿ, ನಾರಾಯಣ್, ಬಿ.ಎಂ.ಸತ್ಯ ಸುಶೀಲಮ್ಮ , ಮಲವರಾಜ್, ಡಿ. ಸಿ.ಮಹೇಂದ್ರ,ದಲಿತ ಸಾಹಿತ್ಯ ಡಾ. ಮಲ್ಲೀಕೇಶ್ ಸರೋಜಮ್ಮ, ಲಿಂಗರಾಜು, ಬಸವರಾಜು, ರಾಚಯ್ಯ, ಇಂದಿರಾ, ರಾಜು, ಪುಟ್ಟಲಿಂಗಯ್ಯ, ರಮೇಶ್ ಶೋಭಾಶಿವಣ್ಣ , ಪ್ರಮೀಳಾ ವೆಂಕಟೇಶ್ , ಗೋವಿಂದ ರಾಜ್, ಮಲ್ಲೇಶ್, ರಮೇಶ್, ಪ್ರಸನ್ನ, ಚಂದ್ರಶೇಖರ್, ಗುರುಸಿದ್ದು,ಮಲ್ಲೀಕ್, ಶಶಿ ಕುಮಾರ್ , ಶ್ರೀನಿವಾಸ ಶೆಟ್ಟಿ, ಅಶೀಪ್ ಪಾಷಾ, ನಳಿನ, ರುಕ್ಮಿಣಿ, ಶಿಕ್ಷಕರಾದ ನಾಗೇಶ್, ವೆಂಕಟೇಶ್, ಲೋಕೇಶ್, ಸಿದ್ದಲಿಂಗಯ್ಯ, ರಮೇಶ್ ಹಾಗೂ ಇತರರು ಹಾಜರಿದ್ದರು.

Continue Reading

Mandya

ಮಳವಳ್ಳಿಯಲ್ಲಿ ಸುತ್ತೂರು ಜಯಂತಿ- ಡಿ.16 ರಾಷ್ಟ್ರಪತಿಗಳ ಅಗಮನ – ಭದ್ರತೆ ತಂಡದಿಂದ ಹೆಲಿಕ್ಯಾಪ್ಟರ್ ಅಣಕು ಪ್ರದರ್ಶನ

Published

on

ಮಂಡ್ಯ: ಮಳವಳ್ಳಿ ಪಟ್ಟಣದಲ್ಲಿ ಸುತ್ತೂರಿನ ಆದಿ ಜಗದ್ಗುರು ಶ್ರೀ ಶಿವರಾತ್ರಿ ಶಿವಯೋಗಿಗಳ ರವರ 1066ನೇ ಜಯಂತಿ ಮಹೋತ್ಸವ ಡಿ.15 ರಿಂದ ಅರಂಭವಾಗಲಿದ್ದು, ಡಿ.16 ರಂದು ಭಾರತದ ಘನತೆ ವೆತ್ತ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರು ಕಾರ್ಯಕ್ರಮಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ದೆಹಲಿ ಭದ್ರತಾ ಪಡೆ ಅಧಿಕಾರಿಗಳು ಇಂದು (ಭಾನುವಾರ) ಮಾರೆಹಳ್ಳಿ ಬಳಿ ನಿರ್ಮಿಸಲಾಗಿರುವ ಹೆಲಿಪ್ಯಾಡ್ ಜಾಗದಲ್ಲಿ ಹೆಲಿಕ್ಯಾಪ್ಟರ್ ಅಣಕು ಪ್ರದರ್ಶನ ನಡೆಸಿದರು.

ಮಾರೆಹಳ್ಳಿ ಬಳಿ ಹೆಲಿಪ್ಯಾಡ್ ನಿರ್ಮಿಸಲಾಗಿದ್ದು, ಭಾನುವಾರ ದೆಹಲಿ ಭದ್ರತಾ ಪಡೆ ಅಧಿಕಾರಿಗಳ ತಂಡ ಹಾಗೂ ಜಿಲ್ಲಾಧಿಕಾರಿಗಳಾದ ಡಾ.ಕುಮಾರ ನೇತೃತ್ವದಲ್ಲಿ ಅಗಮಿಸಿ ಹೆಲಿಕ್ಯಾಪ್ಟರ್ ಅಣಕು ಪ್ರದರ್ಶನ ನಡೆಸಿ ರಾಷ್ಟ್ರಪತಿಗಳು ಬಂದಾಗ ಎಲ್ಲಿ ಯಾವ ರೀತಿ ಲ್ಯಾಂಡಿಂಗ್ ಮಾಡುವುದರ ಕುರಿತು ಪ್ರಾಯೋಗಿಕವಾಗಿ ಪ್ರದರ್ಶನ ನಡೆಸಿದರು.

ನಂತರ ಜಯಂತಿ ಮಹೋತ್ಸವದ ಸ್ವಾಗತ ಸಮಿತಿ ಗೌರವ ಅಧ್ಯಕ್ಷರಾದ ಶ್ರೀ ಚನ್ನಬಸವಸ್ವಾಮಿಗಳ ದಿವ್ಯ ಸಮ್ಮುಖದಲ್ಲಿ ಜಿಲ್ಲಾಧಿಕಾರಿ ಡಾ,ಕುಮಾರ ,ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿಗಳಾದ ಎಸ್.ಇ.ಗಂಗಾಧರಸ್ವಾಮಿ, ಎಸ್,ತಿಮ್ಮಯ್ಯ, ಡಿವೈಎಸ್ಪಿ ಯಶವಂತ್ ಕುಮಾರ್, ಉಪ ವಿಭಾಗಾದಿಕಾರಿ ಶಿವಮೂರ್ತಿ, ತಹಶೀಲ್ದಾರ್ ಡಾ.ಲೋಕೇಶ್ ಹಾಗೂ ಜಯಂತಿ ಮಹೋತ್ಸವದ ಸಮಿತಿಯ ಸದಸ್ಯರು ಕಾರ್ಯಕ್ರಮದ ವೇದಿಕೆ, ವಸ್ತುಪ್ರದರ್ಶನ ಸ್ಟಾಲ್, ದಾಸೋಹ ವ್ಯವಸ್ಥೆಯ, ಅಗಮನ, ನಿರ್ಗಮನ ಸ್ಥಳಗಳು, ವಾಹನ ಪಾರ್ಕಿಂಗ್, ದೇವಸ್ಥಾನ ನಿರ್ಮಾಣ ಸೇರಿದಂತೆ ಸುತ್ತಮುತ್ತಲ ಸ್ವಚ್ಚತೆ, ಕುಡಿಯುವ ನೀರು ಸೌಲಭ್ಯಗಳ ಕುರಿತು ಅಂತಿಮ ಹಂತದ ಪರಿಶೀಲನೆ ನಡೆಸಿ ಬಂದೋಬಸ್ತ್ ಕುರಿತು ಚರ್ಚೆ ನಡೆಸಿದರು.

ಪಟ್ಟಣಕ್ಕೆ ರಾಷ್ಟ್ರಪತಿಗಳ ಅಗಮನ ಹಿನ್ನೆಲೆಯಲ್ಲಿ ದೆಹಲಿ ಭದ್ರತಾ ಪಡೆಯ ಅಧಿಕಾರಿಗಳ ನಿರ್ದೇಶನದಂತೆ ಪಟ್ಟಣದಲ್ಲಿ ಭಾರಿ ಬಿಗಿಪೋಲಿಸ್ ಬಂದೋಬಸ್ತ್ ಕಲ್ಪಿಸಲಾಗಿದ್ದು, ರಾಷ್ಟ್ರಪತಿಗಳು ಅಗಮಿಸುವ ಮಾರ್ಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಪುಟ್‌ಬಾತ್ ಅಂಗಡಿಗಳ ತೆರವು, ವಾಹನಗಳ ಸಂಚಾರ , ಸೇರಿದಂತೆ ಹಲವು ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ ಎಂದರು.

Continue Reading

Mandya

ಡಿ.28 ರಂದು ಪ್ರತಿಭಾ ಪುರಸ್ಕಾರ ಮತ್ತು ಹಿರಿಯ ನಾಗರಿಕರಿಗೆ ಸನ್ಮಾನ : ಪಾಪಣ್ಣ

Published

on

ಮಳವಳ್ಳಿ : ಇದೇ ಡಿ.28 ರಂದು ಬೆಂಗಳೂರಿನ ಲಕ್ಷ್ಮೀನಾರಾಯಣಪುರದ ಒಡಲೂರು ಶ್ರೀ ಜ್ಯೋತಿ ರಾಮಲಿಂಗ ಸ್ವಾಮಿಗಳ ಸಮರಸ ಸನ್ಮಾರ್ಗ ಸಂಘದ ಕಚೇರಿಯಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಹಿರಿಯ ನಾಗರಿಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಆರ್.ಆರ್ ವಧು- ವರರ ಕೇಂದ್ರದ
ಅಧ್ಯಕ್ಷ ಪಾಪಣ್ಣ ಅವರು ತಿಳಿಸಿದರು.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ನಾರಾಯಣಪ್ಪ.ವಿ ಜಾಲಗೆರೆ ಮಾತನಾಡಿ, ಪಾಪಣ್ಣನವರ ಕಾರ್ಯಕ್ರಮಕ್ಕೆ ಸಂಪೂರ್ಣ ಬೆಂಬಲ ಹಾಗೂ ಸಹಭಾಗಿತ್ವವನ್ನು ವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕೇಳಿಕೊಂಡರು.

ಸುದ್ದಿಗೋಷ್ಠಿಯಲ್ಲಿ ಮಡಿವಾಳರ ಖಡ್ಗ ಪತ್ರಿಕೆಯ ಚಂದ್ರಶೇಖರ್, ಶಂಕರಮಠ ವಾರ್ಡ್ ಒಬಿಸಿ ಅಧ್ಯಕ್ಷ ಜಯರಾಮ್, ಬಿಜೆಪಿ ಮುಖಂಡ ಕೆಂಚಪ್ಪ, ಮುಖಂಡರಾದ ನಾಗರಾಜ ಮತ್ತು ಮುನಿರಾಜು, ವೆಂಕಟಾದ್ರಿ ಟೆಂಟ್ ಹೌಸ್ ಮಾಲೀಕ ವೆಂಕಟೇಶ್ ಉಪಸ್ಥಿತರಿದ್ದರು.

Continue Reading

Trending

error: Content is protected !!