Kodagu
ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಠಾಪನೆ ನಾಪೋಕ್ಲುವಿನ ವಿವಿಧ ದೇವಾಲಯದಲ್ಲಿ ವಿಶೇಷ ಪೂಜೆ
ನಾಪೋಕ್ಲು :ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆಯ ಹಿನ್ನೆಲೆ ನಾಪೋಕ್ಲುವಿನ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಿತು.
ನಾಪೋಕ್ಲು ಪಟ್ಟಣದ ಶ್ರೀ ರಾಮ ಮಂದಿರ ಹಾಗು ಕಕ್ಕುಂದಕ್ಕಾಡು ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಾಲಯದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿತು.

ಪಟ್ಟಣದ ಶ್ರೀರಾಮ ಮಂದಿರದಲ್ಲಿ ಭಜನೆ,ರಾಮತಾರಕ ಹೋಮ, ಕರಸೇವಕರಿಗೆ ಹಾಗೂ ಅಂದು ಆಂದೋಲನದಲ್ಲಿ ಪಾಲ್ಗೊಂಡ ಹಿರಿಯರಿಗೆ ಗೌರವ ಅರ್ಪಣೆ ಕಾರ್ಯಕ್ರಮ ನಡೆಯಿತು.
ಬಳಿಕ ಅಯೋಧ್ಯೆಯಲ್ಲಿ ಶ್ರೀ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ಸಂದರ್ಭ ಬೃಹತ್ ಎಲ್ಇಡಿ ಪರದೆಯಲ್ಲಿ ಅಳವಡಿಸಲಾದ ನೇರ ಪ್ರಸಾರದ ವೀಕ್ಷಣೆಯನ್ನು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡ ಭಕ್ತಾದಿಗಳು ಕಣ್ತುಂಬಿ ಕೊಂಡರು.ಬಳಿಕ ಭಕ್ತಾದಿಗಳಿಗೆ ಪ್ರಸಾದ ವಿತರಣೆ ನಡೆಯಿತು.
ಪೂಜಾ ವಿಧಿವಿಧಾನಗಳನ್ನು ಅರ್ಚಕರಾದ ರವಿ ಉಡುಪ ನೆರವೇರಿಸಿದರು.

ಈ ಸಂದರ್ಭ ವಿವಿಧ ಹಿಂದೂ ಸಂಘಟನೆಯ ಕಾರ್ಯಕರ್ತರು, ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು.

Kodagu
ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಾಸಕ
ವಿರಾಜಪೇಟೆ : ತಾಲ್ಲೂಕು ಕೊಟ್ಟೋಳಿಯಲ್ಲಿರುವ ಶ್ರೀ ಧಾರಾಮಹೇಶ್ವರ ದೇವಾಲಯದ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಭಾಗವಹಿಸಿದರು.
ದೇವಸ್ಥಾನ ಸಮಿತಿಯ ಕೋದಂಡ ಅಜಯ್ ಹಾಗೂ ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು.
ಶ್ರೀ ದೇವರ ಪ್ರತಿಷ್ಠ ಮಹೋತ್ಸವದಲ್ಲಿ ಭಾಗವಹಿಸುವಂತೆ ಶಾಸಕರಿಗೆ ಆಮಂತ್ರಣ ನೀಡಿದ ಪ್ರಯುಕ್ತ ದೇವರ ಸನ್ನಿಧಿಗೆ ತೆರಳಿದ ಶಾಸಕರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ಆಶೀರ್ವಾದ ಪಡೆದರು. ಇದೇ ಸಂದರ್ಭದಲ್ಲಿ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ ಶಾಸಕರು ತಮ್ಮ ವೈಯಕ್ತಿಕ ರೂ 1 ಲಕ್ಷ ಧನಸಹಾಯ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ವಿರಾಜಪೇಟೆ ತಾಲೂಕು ಕೆಡಿಪಿ ಸದಸ್ಯರಾದ ಮಾಳೇಟೀರ ಪ್ರಶಾಂತ್, ಕುಂಡಚ್ಚಿರ ಮಂಜು ದೇವಯ್ಯ, ಹಾಗೂ ಭಕ್ತದಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.
Kodagu
ಮಂಗಳವಾರ ಬ್ಯಾಡಗೊಟ್ಟ ಪಂಚಾಯತ್ ನ ನೂತನ ಕಟ್ಟಡ ಉದ್ಬಾಟನೆ
ಕೊಡ್ಲಿಪೇಟೆ : ಸಮೀಪದ ಬ್ಯಾಡಗೊಟ್ಟ ಪಂಚಾಯತ್ ನಲ್ಲಿ ನೂತನವಾಗಿ ನಿರ್ಮಾಣ ವಾಗಿರುವ ಸಂಜೀವಿನಿ ಸಭಾಂಗಣ ಫೆ.10 ರಂದು ಮಂಗಳವಾರ ಉದ್ಬಾಟನೆ ಯಾಗಲಿದೆ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹರೀಶ್ ಹೆಚ್.ಎಸ್.ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಪಂಚಾಯತ್ ಕಚೇರಿಯ ಮೊದಲಂತಸ್ಥಿನಲ್ಲಿ ನಿರ್ಮಿಸಿರುವ ಕಟ್ಟಡವನ್ನು ಉದ್ಬಾಟನೆ ಸಮಾರಂಭದ ಅದ್ಯಕ್ಷತೆಯನ್ನು ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ.ಮಂಥರ್ ಗೌಡ ವಹಿಸಲಿದ್ದಾರೆ. ಮುಖ್ಯಮಂತ್ರಿಗಳ ಕಾನೂನು ಸಲಹೇಗಾರ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ ಮುಂತಾದ ಜನಪ್ರತಿನಿಧಿಗಳು, ಪಂಚಾಯತ್ ಅಧ್ಯಕ್ಷರು ಮತ್ತು ಜನಪ್ರತಿನಿಧಿಗಳು, ಇಲಾಖಾಧಿಕಾರಿಗಳು ಭಾಗವಹಿಸಲಿದ್ದಾರೆ.
Kodagu
ದೇಶೀಯ ಕ್ರೀಡೋತ್ಸವ ಮತ್ತು ಜಾನಪದ ನಮ್ಮೆಗೆ ಅನುದಾನ ಕೋರಿ ಮನವಿ
ಮಡಿಕೇರಿ : ಕೊಡಗಿನ ಮೂಲನಿವಾಸಿ ೨೧ ಕೊಡವ ಭಾಷಿಕ ಸಮುದಾಯಗಳ ವತಿಯಿಂದ ಏಪ್ರಿಲ್ ತಿಂಗಳಿನಲ್ಲಿ ಇದೇ ಪ್ರಥಮ ಬಾರಿಗೆ ನಡೆಸುತ್ತಿರುವ ’ದೇಶೀಯ ಕ್ರೀಡೋತ್ಸವ’ಕ್ಕೆ ಅನುದಾನ ಕೋರಿ ಕೊಡವ ಭಾಷಿಕ ಕೂಟವು ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ ಅವರಿಗೆ ಮನವಿ ಸಲ್ಲಿಸಿತು.
ಕೊಡವ ಭಾಷಿಕ ಕೂಟದ ಅಧ್ಯಕ್ಷ ಡಾ.ಮೇಚಿರ ಸುಭಾ? ನಾಣಯ್ಯ ಅವರ ನೇತೃತ್ವದಲ್ಲಿ ವಿರಾಜಪೇಟೆಯಲ್ಲಿ ಅರುಣ್ ಮಾಚಯ್ಯ ಅವರನ್ನು ಭೇಟಿಯಾದ ನಿರ್ದೇಶಕರುಗಳು ಹಾಗೂ ಸಮುದಾಯಗಳ ಮುಖಂಡರುಗಳು ಕ್ರೀಡೋತ್ಸವದ ಯಶಸ್ಸಿಗೆ ಅಗತ್ಯ ಸಹಕಾರ ನೀಡುವಂತೆ ಕೋರಿದರು.
ಕೆಂಬಟ್ಟಿ ಜಾನಪದ ನಮ್ಮೆ
ಕೊಡವ ಭಾಷಿಕ ಮೂಲನಿವಾಸಿ ಕೆಂಬಟ್ಟಿ ಸಮುದಾಯದ ವತಿಯಿಂದ ಪ್ರಥಮ ಬಾರಿಗೆ ’ಕೆಂಬಟ್ಟಿ ಜಾನಪದ ನಮ್ಮೆ’ಯನ್ನು ನಡೆಸಲಾಗುತ್ತಿದ್ದು, ಅಗತ್ಯ ಸಹಕಾರ ಕೋರಿ ಕೆಂಬಟ್ಟಿ ಸಮುದಾಯದ ನಿಯೋಗ ವಿರಾಜಪೇಟೆಯಲ್ಲಿ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿತು.
ನಿಯೋಗದಲ್ಲಿ ಅಧ್ಯಕ್ಷ ಬಿಲ್ಲರೀಕುಟ್ಟಡ ಪ್ರಭು ಐಯ್ಯಪ್ಪ, ನಿರ್ದೇಶಕರುಗಳಾದ ಬಾಳೆಕುಟ್ಟಡ ಉದಯ್ ಮಾದಪ್ಪ, ಪೆಗ್ಗೋಲಿ ದಿನೇಶ್, ಚವರೆಕುಟ್ಟಡ ಜೀವನ್, ಕೋಪರೆ ಕುಟ್ಟಡ ಸಾಗರ್ ಪೊವಣ್ಣ, ಚಿಮ್ಮಿಕುಟ್ಟಡ ನಿತೇಶ್, ಪ್ರಮುಖರಾದ ಚೋಕುಟ್ಟಡ ಚಿಮ್ಮ ಅಯ್ಯಪ್ಪ, ಬಿದ್ದಣ ಕುಟ್ಟಡ ಕಿರಣ್ ಕಾವೇರಪ್ಪ, ಮೊಟ್ಟ ಕುಟ್ಟಡ ಭೋಜಮ್ಮ, ಜೋ ಕುಟ್ಟಡ ವ್ಯೆಶಾಲಿ ಪ್ರಕಾಶ್, ಬಿದ್ದಣಡ ಕುಟ್ಟ ರೋಹಿಣಿ ಪುಪ್ಪ, ಚಿಮ್ಮಿಡ ಕುಟ್ಟ ಗಿರೀಶ್ ಬೆಳ್ಳಿಪ್ಪ, ಚೋಕುಟ್ಟಡ ಸಂತೋಸ್, ಉತ್ತು ಕುಟ್ಟಡ ಮನು ಬಿದ್ದಪ್ಪ, ಬಿಲ್ಲಿರಿ ಕುಟ್ಟಡ ಮಂಜೇಶ್, ಚವರೆ ಕುಟ್ಟಡ ಸುಬ್ರಮಣಿ, ಚಿಮ್ಮಿಕುಟ್ಟಡ ವಿಲ್ಮ ಅಶೋಕ್,, ಚವರೆಡ ಕುಟ್ಟ ಸುಬ್ಬಕ್ಕಿ ಮುತಪ್ಪ ಮತ್ತಿತರರು ಹಾಜರಿದ್ದರು.
-
Chamarajanagar18 hours agoನಾನಂಥವನಲ್ಲಾ ಎಂದ ನಂದಕುಮಮಾರ್: ಚಾಮರಾಜನಗರ ಹಿರಿಕಾಟಿ ಕ್ರಷರ್ ವಿವಾದಕ್ಕೆ ಸ್ಪಷ್ಟನೆ
-
Hassan16 hours agoಕೃಷಿ ಸಾಲವನ್ನು ತೀರಿಸಲಾಗದೆ ರೈತನೋರ್ವ ಆತ್ಮ*ತ್ಯೆ
-
Kodagu16 hours agoಪ್ರಸ್ತುತ ಸಮಾಜದಲ್ಲಿ ಮಕ್ಕಳಿಗೆ ಸಾತ್ವಿಕ ಶಿಕ್ಷಣ ನೀಡುವ ಜವಾಬ್ದಾರಿ ಪೋಷಕರ ಮೇಲಿದೆ : ಡಿವೈಎಸ್ಪಿ ಮಹೇಶ್ ಕುಮಾರ್
-
Uncategorized9 hours agoದಿ. ರಾಕೇಶ್ ಸಿದ್ದರಾಮಯ್ಯ ಸ್ಮರಣಾರ್ಥ ಕಾರ್ ರೇಸ್ : ಕುಚುಕು ಗೆಳೆಯ ನನ್ನ ನೆನೆದ ಸಂಸದ ಸುನಿಲ್ ಬೋಸ್
-
Kodagu9 hours agoಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಾಸಕ
-
Kodagu10 hours agoಮಂಗಳವಾರ ಬ್ಯಾಡಗೊಟ್ಟ ಪಂಚಾಯತ್ ನ ನೂತನ ಕಟ್ಟಡ ಉದ್ಬಾಟನೆ
-
Uncategorized10 hours agoಫೆ.11ರಂದು ನಾಪೋಕ್ಲುವಿನಲ್ಲಿ ಮಸ್ಜಿದು ತೌಹೀದ್ ನೂತನ ಮಸೀದಿ ಉದ್ಘಾಟನೆ ಹಾಗೂ ದಅವಾ ಸಮ್ಮೇಳನ
-
State10 hours agoಬೆಸ್ಕಾಂನಲ್ಲಿ 520 ಹುದ್ದೆಗಳಿಗೆ ನೇರ ನೇಮಕಾತಿ!
