Connect with us

Hassan

ಬಿ. ಶಿವರಾಂ ವಿರುದ್ಧ ಏಕವಚನ ಬಳಕೆ

Published

on

ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ಮಾಡಲಿ: ಬಾಗೆ ಚಾರ್ಲ್ಸ್ ಒತ್ತಾಯ

ಹಾಸನ : ಮಾಜಿ ಸಚಿವರಾದ ಬಿ. ಶಿವರಾಂ ವಿರುದ್ಧ ಏಕವಚನದ ಪದ ಬಳಕೆ ಮಾಡಿದ್ದು, ಇದುವರೆಗೂ ಜಿಲ್ಲೆಗೆ ಯಾವುದೇ ಅಭಿವೃದ್ಧಿ ಕೆಲಸ ಮಾಡದ ಇವರನ್ನು ಜಿಲ್ಲಾ ಮಂತ್ರಿ ಕೆ.ಎನ್. ರಾಜಣ್ಣ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಿಂದ ಬದಲಾವಣೆ ಮಾಡಬೇಕು ಎಂದು ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಮತ್ತು ಗ್ರಾಮ ಪಂಚಾಯತಿ ಸದಸ್ಯ ಬಾಗೆ ಚಾರ್ಲ್ಸ್ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಹಕರ ಸಚಿವರಾದ ಕೆ. ಎನ್. ರಾಜಣ್ಣರವರು ಹಾಸನ ಜಿಲ್ಲೆಗೆ ಗಣರಾಜ್ಯೋತ್ಸವ ದಿನದಂದು ಮಾಜಿ ಸಚಿವರು ಜಿಲ್ಲಾ ನಾಯಕರಾದ ಬಿ. ಶಿವರಾಮ್ ರವರ ವಿರುದ್ಧ ಏಕವಚನದಲ್ಲಿ ಪದ ಬಳಕೆ ಮಾಡಿ ಅವರ ವ್ಯಕ್ತಿತ್ವಕ್ಕೆ ಕಳಂಕ ತರುವ ರೀತಿಯಲ್ಲಿ ಮಾತನಾಡಿದ್ದು, ಮಾಜಿ ಸಚಿವರು ಹಾಸನ ಜಿಲ್ಲಾ ಹಿರಿಯ ನಾಯಕ ಬಿ. ಶಿವರಾಮ್ ರವರ ಬಳಿ ಕ್ಷಮೆಯಾಚಿಸಬೇಕಾಗಿ ಮನವಿ ಮಾಡಿದ್ದರು. ಇದರ ವಿರುದ್ಧ ನಿಮ್ಮ ನಡವಳಿಕೆ ಬದಲಾವಣೆ ಮಾಡಿಕೊಳ್ಳದೆ ಹೋದಲ್ಲಿ ಜಿಲ್ಲಾದ್ಯಂತ ನಿಮ್ಮ ವಿರುದ್ಧ ಹೋರಾಟ ಮಾಡುವುದಾಗಿ ಶಿವರಾಮ್ ಅಭಿಮಾನಿಗಳು ಮತ್ತು ಜಿಲ್ಲಾ ಕಾಂಗ್ರೆಸ್ ನಾಯಕರುಗಳು, ಕೆಪಿಸಿಸಿ ಅಧ್ಯಕ್ಷರಿಗೆ ತಿಳಿಸಿರುತ್ತೇವೆ. ಜಿಲ್ಲಾ ಉಸ್ತುವಾರಿ ಸಚಿವರು ಕೇವಲ ತುಮಕೂರಿಗೆ ಮಾತ್ರ ಸೀಮಿತವಾಗಿದ್ದಾರೆ .ಶಿವರಾಮ್ ಹಾಗೂ ಶಿವಲಿಂಗೇಗೌಡ ಅವರ ನಡುವಿನ ಗೊಂದಲ ಬಗೆಹರಿಸುವ ಬದಲು ಹಿರಿಯರಾದ ಶಿವರಾಮ್ ವಿರುದ್ಧ ಮಾತನಾಡಿರುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದರು. ಜಿಲ್ಲೆಗೆ ಅತಿಥಿಯಂತೆ ಬಂದು ಹೋಗುವ ರಾಜಣ್ಣ ಅವರಿಂದ ಇಡಿ ಜಿಲ್ಲಾಡಳಿತ ಹದಗೆಟ್ಟಿದ್ದು, ಎಲ್ಲಾ ಇಲಾಖೆಗಳು ಭ್ರಷ್ಟಾಚಾರದ ಕೂಪವಾಗಿದ್ದು, ಜನಸಾಮಾನ್ಯರ ಹತ್ತಿರ ಹಣದ ಬೇಡಿಕೆ ಇಡುತ್ತಿದ್ದಾರೆ. ಹೆಸರಿಗೆ ಮಾತ್ರ ಸಚಿವರು ಕಾಯಕರ್ತರ ತುಮಾಕೂರಿಗೆ ಬರಲು ಹೇಳುವ ಸಚಿವರು ಅಲ್ಲಿ ಹೋದಾಗ ನೀನು ಯಾರು ಎಂದು ಮಾತನಾಡಿಸುವುದಿಲ್ಲ. ಇಲ್ಲಿಂದ ತುಮಕೂರಿಗೆ ಹಣ, ಸಮಯ ಖಚು ಮಾಡಿಕೊಂಡು ಹೋಗುವದೇ ಬಾಕಿ ಮತ್ತು ಅಧಿಕಾರಿಗಳ ವಗಾವಣೆ ದಂಧೆಯಲ್ಲಿ ತೊಡಗಿಸಿಕೊಂಡುರುವ ಜಿಲ್ಲಾ ಉಸ್ತುವಾರಿ ಸಚಿವರು ಪಕ್ಷ ಸಂಘಟನೆ ಅಸಾಧ್ಯ. ಪಕ್ಷ ಅಧಿಕಾರಕ್ಕೆ ಬಂದು ಎಳು ಎಂಟು ತಿಂಗಳಾದರೂ ಒಂದೆ ಒಂದು ಕಾಯಕರ್ತರ ಸಭೆ ಕರೆಯಲಾಗದೆ ರಾಜಣ್ಣ ಅವರಿಂದ ಪಕ್ಷ ಸಂಘಟನೆ ಹೇಗೆ ಸಾಧ್ಯ. ಇವರು ಜಿಲ್ಲಾ ಉಸ್ತುವಾರಿ ಸಚಿವರು ಆದ ಮೇಲೆ ಜಿಲ್ಲಾ ಪಂಚಾಯಿತಿ ಅನುದಾನವನ್ನು ಬಿಟ್ಟು ಜಿಲ್ಲೆಗೆ ಗುರುತು ಮಾಡುವಂತ ಯಾವುದೇ ಅಭಿವೃದ್ಧಿ ಕೆಲಸಕ್ಕೆ ಇವತ್ತಿನವರೆಗೂ ಯಾವುದೇ ಅನುದಾನವನ್ನು ಬಿಡುಗಡೆ ಮಾಡಿಲ್ಲ. ಕೂಡಲೇ ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡಬೇಕು. ಏನಾದರೂ ಇವರ ನಾಯಕತ್ವದಲ್ಲಿ ಲೋಕಸಭೆ ಚುನಾವಣೆ ಎದುರಿಸಿದರೆ ಕಾಂಗ್ರೆಸ್ಸಿಗೆ ಸೋಲು ಖಚಿತ. ಇವರು ಉಸ್ತುವಾರಿ ಸಚಿವರಾದ ಮೇಲೆ ಕಾಂಗ್ರೆಸ್ಸಿನಲ್ಲಿ ಗುಂಪುಗಾರಿಕೆ ಮತ್ತು ಸಜಾತಿ ಪ್ರೇಮ ಮೇರೆಯುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಹಲಸುಲಿಗೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಶೋಭಗೌಡ, ಸಾಮಾಜಿಕ ಹೋರಾಟಗಾರ ಬಾಗೆಯ ರಾಜು ಇತರರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Hassan

ಹಾಸನದಲ್ಲಿ ಗೃಹಸಚಿವ ಜಿ.ಪರಮೇಶ್ವರ್ ಹೇಳಿಕೆ

Published

on

ಸರ್ಕಾರ ರಾಜ್ಯದಲ್ಲಿ ಶಾಂತಿಯನ್ನು ಬಯಸುತ್ತದೆ

ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ ಆಗಬೇಕು

ಅದೇ ಪ್ರಕಾರ ಜನರ ಆಸ್ತಿ, ಜೀವ ರಕ್ಷಣೆ ಆಗಬೇಕು

ಪೊಲೀಸ್ ಇಲಾಖೆ ಕ್ರಿಯಾಶೀಲವಾಗಿ ಕೆಲಸ ಮಾಡಬೇಕು

ಈ ನಿಟ್ಟಿನಲ್ಲಿ ಅಧಿಕಾರಗಳಿಗೆ ಸೂಚನೆ ಕೊಟ್ಟಿದ್ದೇನೆ

ಪೊಲೀಸ್‌ರು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ

ವಿರೋಧ ಪಕ್ಷದವರು ಕಾನೂನು ವ್ಯವಸ್ಥೆ ಕೆಟ್ಟಿದೆ ಎಂದು ಹೇಳಿಕೆ ಕೊಟ್ಟಿದ್ದಾರೆ

ಅದನ್ನು ನಾನು ಸೂಕ್ಷ್ಮವಾಗಿ ಗಮನಿಸಿದ್ದೇನೆ

ನಮ್ಮ ಜವಾಬ್ದಾರಿ ಇದೆ, ಯಾರನ್ನು ಮೆಚ್ಚಲಿಸಕ್ಕೆ, ಅಪರಾಧ ಪ್ರಕರಣಗಳ ಅಂಕಿ ಅಂಶ ಕಡಿಮೆ ಮಾಡುವುದು ಮುಖ್ಯ ಅಲ್ಲ

ಕಮ್ಯೂನಲ್ ಗಲಾಟೆ ಒಂದು ವರ್ಷದಿಂದ ಆಗಿಲ್ಲ

ಗಣೇಶ ಹಬ್ಬ ರಾಜ್ಯದಲ್ಲಿ ಶಾಂತಿಯುತವಾಗಿ ನಡೆದಿದೆ

ಹಿಂದೆ ಶಿವಮೊಗ್ಗ, ಹುಬ್ಬಳ್ಳಿಯಲ್ಲಿ ಗಲಾಟೆಗಳು ಆಗಿವೆ

ಈ ಬಾರಿ ಯಾವುದೇ ಘಟನೆ ಆಗಿಲ್ಲ

ದಕ್ಷಿಣಕನ್ನಡ, ಶಿವಮೊಗ್ಗ, ಹುಬ್ಬಳ್ಳಿ ಜಿಲ್ಲೆಗಳಲ್ಲಿ ಕಮ್ಯೂನಲ್ ವಿಚಾರದಲ್ಲಿ ನಡೆಯುತ್ತಿದ್ದ ಗಲಾಟೆಗಳು ನಿಂತು ಹೋಗಿದ್ದಾವೆ

ಈ ಬಗ್ಗೆ ವಿರೋಧ ಪಕ್ಷದವರು ಹೇಳಬೇಕು

ಕೊಲೆಗಳು ನಡೆಯುತ್ತಿವೆ ಅದರ ಅಂಕಿ ಅಂಶ ಇದೆ

ಹಿಂದೆ ಕೊಲೆಗಳು ಎಷ್ಟು ಆಗಿದ್ದಾವೆ ಆ ಸಂಖ್ಯೆ ಕಂಪೇರ್ ಮಾಡಲಿ

ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ

ನಾಲ್ಕು ತಿಂಗಳಿನಿಂದ ಅನೇಕ ಘಟನೆಗಳು ನಡೆದಿವೆ

ಹಾಸನದಲ್ಲೂ ಘಟನೆಗಳು ನಡೆದಿವೆ

ಅದರ ಬಗ್ಗೆ ಪೊಲೀಸ್ ಇಲಾಖೆ ಕ್ರಮ ಜರುಗಿಸಿದೆ

ನಮ್ಮಲ್ಲೆರಿಗೂ ಒಂದೇ ಕಾನೂನು ಇದೆ

ಎಲ್ಲರಿಗೂ ಇರುವುದು ಒಂದೇ ಕಾನೂನು

ಯಾರು, ಎಷ್ಟೇ ದೊಡ್ಡವರಾದರು ಕಾನೂನು ಒಂದೇ

ಆದ್ದರಿಂದ ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ

ಯಾರನ್ನು ರಕ್ಷಸಿದೆ ಯಾವ ಒತ್ತಡಕ್ಕೂ ಮಣಿಯದೆ ಕ್ರಮ ಕೈಗೊಂಡಿದ್ದೇವೆ

ರಾಜ್ಯದಲ್ಲಿ ಸೈಬರ್ ಕ್ರೈಂ ಪ್ರಕರಣಗಳು ಜಾಸ್ತಿಯಾಗಿದ್ದೇವೆ

ಕರ್ನಾಟಕ ರಾಜ್ಯದಲ್ಲಿ 43 ಸೆನ್ ಪೊಲೀಸ್ ಠಾಣೆಗಳನ್ನು ತೆರೆದಿದ್ದೇವೆ

ಅವರಿಗೆ ಕಾನೂನಾತ್ಮಕವಾಗಿ ಏನೆಲ್ಲ ಶಕ್ತಿ ಕೊಡಬೇಕು ಕೊಟ್ಟಿದ್ದೇವೆ

ಬೆಂಗಳೂರು ಒಂದು ಕಡೆ ಸೈಬರ್ ಕ್ರೈಂ ನಡೆಯುತ್ತಿತ್ತು

ಈಗ ಎಲ್ಲಾ ಜಿಲ್ಲೆಗಳಲ್ಲೂ ನಡೆಯುತ್ತಿದೆ ಹಾಗಾಗಿ ಸೆನ್ ಪೊಲೀಸ್ ಠಾಣೆ ತೆರೆದಿದ್ದೇವೆ

ಜನ ಕಂಪ್ಲೆಂಟ್ ರಿಜಿಸ್ಟರ್ ಮಾಡ್ತಾರೆ ಅದರ ತನಿಖೆಯನ್ನು ಪೊಲೀಸರು ಮಾಡುತ್ತಿದ್ದಾರೆ

ಹಣ ಕಳ್ಳತನವಾಗಿರುವುದನ್ನು ಪತ್ತೆ ಹಚ್ಚುತ್ತಿದ್ದಾರೆ

ಸೈಬರ್ ಕ್ರೈಂ ಜಾಸ್ತಿ ಆಗಿದೆ, ಅದನ್ನು ಹ್ಯಾಂಡಲ್‌ ಮಾಡುತ್ತಿದ್ದೇವೆ

Continue Reading

Hassan

ಕಳುವಾದ ಮಾಲುಗಳು ವಾರಸುದಾರರಿಗೆ ಹಸ್ತಾಂತರ

Published

on

ಹಾಸನ ಜೂ.24(ಕರ್ನಾಟಕ ವಾರ್ತೆ):ಗೃಹ ಸಚಿವರಾದ ಡಾ.ಜಿ.ಪರಮೇಶ್ವರ ಅವರು ಜಿಲ್ಲಾ ಪೊಲೀಸ್ ಕಚೇರಿ ಆವರಣದಲ್ಲಿ ಇಂದು ಜರುಗಿದ ಕಳುವಾಗಿ ಪತ್ತೆಯಾಗಿರುವ ಮಾಲುಗಳನ್ನು ವಾರಸುದಾರರಿಗೆ ಹಿಂದಿರಿಗಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾರಸುದಾರರಿಗೆ ಮಾಲುಗಳನ್ನು ಹಸ್ತಾಂತರ ಮಾಡಿದರು.

ಜಿಲ್ಲೆಯಲ್ಲಿ ಕಳೆದ ಆರು ತಿಂಗಳಿಂದ ಕಳುವಾಗಿ ಪತ್ತೆಯಾಗಿರುವ 2 ಕೆ.ಜಿ.150 ಗ್ರಾಂ ಚಿನ್ನ, ಒಂದು ಕೆ.ಜಿ.ಬೆಳ್ಳಿ, ಬೈಕ್ ಗಳು ಸೇರಿದಂತೆ ಸುಮಾರು 1.25 ಕೋಟಿ ಮೌಲ್ಯದ ಮಾಲುಗಳನ್ನು ವಾರಸುದಾರರಿಗೆ ಹಿಂದಿರುಗಿಸಲಾಯಿತು.

ಇದೇ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಸೈಬರ್ ಕ್ರೈಂ ವಂಚನೆಗೆ ಒಳಗಾಗದಂತೆ ಸಾರ್ವಜನಿಕರು ಎಚ್ಚರವಹಿಸಲು ಅನುಸರಿಸ ಬೇಕಾದ ನಿಮಗಳ ಬಗ್ಗೆ ಅರಿವು ಮೂಡಿಸುವ ಕರಪತ್ರವನ್ನು ಸಚಿವರು ಬಿಡುಗಡೆ ಮಾಡಿದರು.

ಸಹಕಾರ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎನ್.ರಾಜಣ್ಣ , ದಕ್ಷಿಣ ವಲಯದ ಪೊಲೀಸ್ ಮಹಾ ನಿರ್ದೇಶಕರಾದ ಡಾ.ಬೋರಲಿಂಗಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತ ಎಂ.ಎಸ್ ಅವರು ಉಪಸ್ಥಿತರಿದ್ದರು.

Continue Reading

Hassan

ರೋಗಿಯನ್ನು ಕರೆ ತರುತ್ತಿದ್ದ 108 ಅಂಬ್ಯುಲೆನ್ಸ್‌ನ ಟೈಯರ್ ಬ್ಲಾಸ್ಟ್ : ಹಳ್ಳಕ್ಕೆ ಇಳಿದು ವಾಲಿದ ಅಂಬ್ಯುಲೆನ್ಸ್

Published

on

ಹಾಸನ : ರೋಗಿಯನ್ನು ಕರೆ ತರುತ್ತಿದ್ದ 108 ಅಂಬ್ಯುಲೆನ್ಸ್‌ನ ಟೈಯರ್ ಬ್ಲಾಸ್ಟ್

ಟೈಯರ್ ಬ್ಲಾಸ್ಟ್ ಆಗುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿದ ಅಂಬ್ಯುಲೆನ್ಸ್

ರಸ್ತೆಯ ಬದಿಯ ಹಳ್ಳಕ್ಕೆ ಇಳಿದು ವಾಲಿದ ಅಂಬ್ಯುಲೆನ್ಸ್

ಅಂಬ್ಯುಲೆನ್ಸ್‌ನಲ್ಲಿದ್ದ ರೋಗಿ ಸೇರಿ ಮೂರು ಮಂದಿಗೆ ಸಣ್ಣಪುಟ್ಟ ಗಾಯ

ಅರಕಲಗೂಡಿನಿಂದ ಹಾಸನಕ್ಕೆ ರೋಗಿಯನ್ನು ಕರೆ ತರುತ್ತಿದ್ದ 108 ಅಂಬುಲೆನ್ಸ್

ಹಾಸನದ ಹೊರವಲಯದ ಶ್ರೀರಾಮನಗರ ಬಳಿ ಘಟನೆ

ಬೇರೆ ಅಂಬ್ಯುಲೆನ್ಸ್‌ನಲ್ಲಿ ರೋಗಿ‌ಯನ್ನು ಆಸ್ಪತ್ರೆಗೆ ರವಾನೆ ಮಾಡಿದ 108 ಅಂಬ್ಯುಲೆನ್ಸ್ ಸಿಬ್ಬಂದಿ

ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ

ಹಾಸನ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ

Continue Reading

Trending

error: Content is protected !!