Connect with us

Mandya

ಶ್ರೀ ಆತ್ಮಲಿಂಗೇಶ್ವರ ಪುಣ್ಯಕ್ಷೇತ್ರದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಫೆ.13 ರಿಂದ 18 ರವರೆಗೆ ಉತ್ಸವ: ಬಿ.ಬಸವರಾಜು

Published

on

ಮಂಡ್ಯ: ಶ್ರೀ ಆತ್ಮಲಿಂಗೇಶ್ವರ ಧರ್ಮದರ್ಶಿ ಮಂಡಳಿ ವತಿಯಿಂದ ಮದ್ದೂರು ತಾಲೂಕಿನ ಹನುಮಂತನಗರದ ಶ್ರೀ ಆತ್ಮಲಿಂಗೇಶ್ವರ ಪುಣ್ಯಕ್ಷೇತ್ರದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಫೆ.13  ರಿಂದ 18 ರವರೆಗೆ ಉತ್ಸವ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ, ರಥೋತ್ಸವ, ತೆಪ್ಪೋತ್ಸವ, ಶಯನೋತ್ಸವ ಮತ್ತು ಭಾರಿ ದನಗಳ ಜಾತ್ರೆ ನಡೆಯಲಿದೆ ಎಂದು ಭಾರತಿ ಎಜುಕೇಶನ್ ಟ್ರಸ್ಟ್‌ನ ಕಾರ್ಯಾಧ್ಯಕ್ಷ ಬಿ.ಬಸವರಾಜು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಆತ್ಮಲಿಂಗೇಶ್ವರ ಕ್ಷೇತ್ರದಲ್ಲಿ ಕಳೆದ 33 ವರ್ಷಗಳಿಂದಲೂ ಶಿವರಾತ್ರಿ ಉತ್ಸವಗಳು ಹಾಗೂ ರಥೋತ್ಸವ ಕಾರ್ಯಕ್ರಮಗಳು ನಡೆದುಕೊಂಡು ಬಂದಿರುತ್ತವೆ. ಈ ನಿಟ್ಟಿನಲ್ಲಿ 6 ದಿನಗಳು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.


ಫೆ.೧೩ರಂದು ಧ್ವಜಾರೋಹಣ, ಮಹಾಮಂಗಳಾರತಿ ಮಹಾಗಣಪತಿ ಪೂಜೆ, ಹೋಮ, ಲಘು ಪುರ್ಣಾಹುತಿ ದಿಬ್ಬಲಿ, ಮಹಾಮಂಗಳಾರತಿ, ಫೆ.14 ರಂದು ನಿತ್ಯಪೂಜೆ, ನವಗ್ರಹ ಮೃತ್ಯುಂಜಯ ಮತ್ತು ಶಾಂತಿಹೋಮ, ಮಹಾಮಂಗಳಾರತಿ ನಡೆಯಲಿದೆ. ಫೆ.15 ರಂದು ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಜಾಗರಣೆ, ವಿಶೇಷ ಅಭಿಷೇಕಗಳು, ಹರಿಕಥೆ, ಕೋಲಾಟ, ದೊಡ್ಡವರಸೆ, ಭಜನೆ, ಭರತನಾಟ್ಯ, ಪ್ರವಚನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಜಾನಪದ ನೃತ್ಯರೂಪಕ, ಡೊಳ್ಳುಕುಣಿತ, ಧಾರ್ಮಿಕ ಹಾಗೂ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿವೆ ಎಂದು ಹೇಳಿದರು.

ಫೆ.16 ರಂದು ವಿಶೇಷ ಪೂಜಾಲಂಕಾರದೊಂದಿಗೆ ಪೂಜಾಭಿಷೇಕ, ಫೆ.17 ರಂದು ಮಧ್ಯಾಹ್ನ 12.10ಕ್ಕೆ ರಥೋತ್ಸವ, ವಿವಿಧ ದೇವರುಗಳ ಉತ್ಸವಗಳು, ಕೀಲುಕುದುರೆ, ಗಾರುಡಿ ಬೊಂಬೆ, ಡೊಳ್ಳುಕುಣಿತ ಕಾರ್ಯಕ್ರಮಗಳು ಜರುಗಲಿದ್ದು, ಸಂಜೆಗೆ ಬಾರತೀ ಎಜುಕೇಷನ್ ಟ್ರಸ್ಟ್ ಹಾಗೂ ಮದ್ದೂರು ಎಪಿಎಂಸಿಯಿಂದ ಪಶುವೈದ್ಯಕೀಯ ನಿರ್ದೇಶಕರಿಂದ ನೇಮಿಸಲ್ಪಟ್ಟ ವೈದ್ಯಾಧಿಕಾರಿಗಳು ಆಯ್ಕೆ ಮಾಡುವ ವಿಜೇತ ರಾಸುಗಳಿಗೆ ಬಹುಮಾನ ನೀಡಲಾಗುವುದು ಎಂದರು.

ಫೆ.೧೮ರಂದು ಸಂಜೆ 6.30 ರಿಂದ ತೆಪ್ಪೋತ್ಸವ, ಹಾಗೂ ರಾತ್ರಿ 8 ರಿಂದ ಶಯನೋತ್ಸವ, ಧಾರ್ಮಿಕ ಕಾರ್ಯಕ್ರಮಗಳು ಇರುತ್ತವೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಭಗವಂತನ ಕೃಪೆಗೆ ಪಾತ್ರರಾಗಬೇಕೆಂದು ಮನವಿ ಮಾಡಿದರು.

ದನಗಳ ಜಾತ್ರೆಯ ಉತ್ತಮ ರಾಸುಗಳಿಗೆ ಜೋಡಿ ಎತ್ತುಗಳ ವಿಭಾಗದ ಪ್ರಥಮ ಸ್ಥಾನಕ್ಕೆ 15 ಸಾವಿರ, ದ್ವಿತೀಯ 9 ಸಾವಿರ, ತೃತೀಯ 6 ಸಾವಿರ, ಜೋಡಿ ಉಳುಮೆ ಹಸುಗಳ ವಿಭಾಗಕ್ಕೆ ಪ್ರಥಮ 10 ಸಾವಿರ, ದ್ವಿತೀಯ 7,500, ತೃತೀಯ 5 ಸಾವಿರ ತಲಾ ಐದು ವಿಭಾಗಗಳ ಸ್ಪರ್ಧೆಗಳಿಗೆ ನೀಡಲಾಗುವುದು. ಬಹುಮಾನದ ಮೊತ್ತದಲ್ಲಿ ಎಪಿಎಂಸಿಯಿಂದ 22,500 ರೂ ಸೇರಿದಂತೆ ಭಾರತೀ ಎಜುಕೇಷನ್ ಟ್ರಸ್ಟ್ 2,95,000 ರೂ.ಗಳನ್ನು ಭರಿಸಲಿದೆ. ಅತ್ಯುತ್ತಮ ಚಪ್ಪರಕ್ಕೂ 10 ಸಾವಿರ ರೂ. ಬಹುಮಾನ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಕಾರ್ಯದರ್ಶಿ ಸಿದ್ದೇಗೌಡ, ಸ್ನಾತಕೋತ್ತರ ವಿಭಾಗದ ನಿರ್ದೇಶಕ ಎಸ್.ನಾಗರಾಜು, ಉಪನ್ಯಾಸಕ ಶಿವಲಿಂಗೇಗೌಡ ಇತರರಿದ್ದರು.

Continue Reading

Mandya

ಜ್ಞಾಪಕಶಕ್ತಿಹೀನ 72 ವರ್ಷದ ತಂದೆ ವಿರೂಪಾಕ್ಷ ಅವರು ಕಾಣೆಯಾಗಿದ್ದಾರೆ : ಸಂತೋಷ್

Published

on

ಮಂಡ್ಯ: ಜ್ಞಾಪಕಶಕ್ತಿಹೀನ 72 ವರ್ಷದ ತಂದೆ ವಿರೂಪಾಕ್ಷ ಅವರು ಕಾಣೆಯಾಗಿದ್ದು, ಎಲ್ಲಾದರು ಕಂಡು ಬಂದಲ್ಲಿ ಮಾಹಿತಿ ನೀಡುವಂತೆ ಪುತ್ರ ಸಂತೋಷ್ ಮನವಿ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಂದೆ ವಿರೋಪಾಕ್ಷ ಅವರೊಂದಿಗೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ವಾಸವಿದ್ದೇನೆ. ಕಳೆದ 10 ದಿನಗಳ ಹಿಂದ ವಾಯು ವಿಹಾರಕ್ಕೆಂದು ಹೊರಬಂದ ಅವರು, ಬಸ್ ಹತ್ತಿ ಮೈಸೂರು, ಬೇಲೂರು ಮೂಲಕ ಮಂಡ್ಯದಲ್ಲಿ ತಪ್ಪಿ ಹೋಗಿದ್ದಾರೆ ಎಂಬ ಮಾಹಿತಿ ಪಡೆದಿದ್ದೇವೆ ಎಂದರು.

 

ಮಂಡ್ಯ ನಗರದಲ್ಲಿ ತಲೆಸುತ್ತಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಅವರ ಬಗ್ಗೆ ಮಾಹಿತಿ ದೊರೆತ ವೇಳೆಯಲ್ಲಿ ಮತ್ತೆ ಅವರು ಕಾಣಿಯಾಗಿದ್ದು, ಕಳೆದ ಗುರುವಾರ ಮದ್ದೂರು ತಾಲೂಕಿನಲ್ಲಿ ಪತ್ತಯಾಗಿದ್ದರು ಎಂದು ಸ್ಥಳೀಯರು ತಿಳಿಸಿದರು.

ಆದರೆ ಇದುವರೆಗೆ ಅವರ ಸುಳಿವು ಸಿಕ್ಕಿಲ್ಲ. ಯಾರಿಗಾದರು ಕಂಡಬಂದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಅಥವಾ 9880394671, 9972272055, 9945599002 ಸಂಖ್ಯೆಯನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಅವರು ಮನವಿ ಮಾಡಿದರು.

Continue Reading

Mandya

ಕಾಯಕ ಶರಣರ ಆದರ್ಶ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು :ಡಾ. ಬಿ.ವಿ. ನಂದೀಶ್

Published

on

ಮಂಡ್ಯ : ಕಾಯಕ ಶರಣರು ಸಮಾಜಕ್ಕೆ ವಚನಗಳ ಮೂಲಕ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಯುವಜನತೆಯು ಕಾಯಕ ಶರಣರ ಆದರ್ಶ, ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಬಿ.ವಿ.ನಂದೀಶ್ ಹೇಳಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಂಡ್ಯ ಇವರ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿಯ ಸಭಾಂಗಣದಲ್ಲಿ ನಡೆದ ಕಾಯಕ ಶರಣರ ಜಯಂತಿ (ಮಾದರ ಚೆನ್ನಯ್ಯ ಮಾದರ ಧೂಳಯ್ಯ ಡೋಹರ ಕಕ್ಕಯ್ಯ ಸಮಗಾರ ಹರಳಯ್ಯ ಉರಿಲಿಂಗ ಪೆದ್ದಿ) ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, 12 ನೇ ಶತಮಾನದಲ್ಲಿ ಸಾಮಾಜಿಕ ಸುಧಾರಣೆಗಳನ್ನು ಮಾಡಿದ್ದಾರೆ.

ಶರಣರು ಅನ್ನ ದಾಸೋಹ ಮತ್ತು ಕಾಯಕ ದಾಸೋಹವನ್ನು ಆರಾಧಿಸುತ್ತಿದ್ದರು.ಯುವಸಮುದಾಯವು ಶರಣರ ಆದರ್ಶಗಳನ್ನುಬೆಳಸಿಕೊಳ್ಳಬೇಕು ಮತ್ತು ಸಮುದಾಯಕ್ಕೆ ಮಾದರಿಯಾಗುವಂತಹ ಕಾರ್ಯಗಳನ್ನು ಮಾಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಬೆಂಗಳೂರಿನ ಪರಿಶಿಷ್ಟ ಜಾತಿ ಹಾಗೂ ಪಂಗಡ ಆಯೋಗದ ಮಾಜಿ ಸದಸ್ಯರಾದ ವೆಂಕಟೇಶ್ ದೊಡ್ಡೇರಿ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತರಾದ ಬಿ.ಎಸ್. ಅನುಪಮ, ಮುಖಂಡರುಗಳಾದ ಎಲ್ .ಸಂದೇಶ್, ಕೃಷ್ಣ, ತಮ್ಮಣ್ಣ, ಸಿ.ಕೆ ಪಾಪಯ್ಯ ಎನ್ .ಆರ್ ಚಂದ್ರಶೇಖರ್, ಕೆಂಪಣ್ಣ ಹಾಗೂ ಇನ್ನಿತರರು ಭಾಗವಹಿಸಿದ್ದರು.

Continue Reading

Mandya

ಮಕ್ಕಳು ಅಂತರ್ಜಾಲದ ಬಳಕೆಯನ್ನು ಕಡಿಮೆ ಮಾಡಬೇಕು : ಬಿ.ಸಿ ಶಿವಾನಂದ ಮೂರ್ತಿ

Published

on

ಮಂಡ್ಯ : ಪ್ರಸ್ತುತ ಕಾಲದಲ್ಲಿ ಮಕ್ಕಳು ಅಂತರ್ಜಾಲ ಬಳಕೆಯನ್ನು ಹೆಚ್ಚು ಮಾಡುತ್ತಿದ್ದಾರೆ, ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ಹೋಗಿದ್ದಾರೆ ಇದರಿಂದ ಮಕ್ಕಳ ಮನಸ್ಥಿತಿ ಕುಗ್ಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಸಿ ಶಿವಾನಂದ ಮೂರ್ತಿ ಅವರು ಹೇಳಿದರು.

ಜಿಲ್ಲಾಡಳಿತದ ವತಿಯಿಂದ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ “ಸುರಕ್ಷತ ಅಂತರ್ಜಲ ದಿನ”ದ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಾಗಾರ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ಸಮಯವನ್ನು ಬಹುತೇಕ ಟಿ.ವಿ, ಮೊಬೈಲ್ ಗಳಲ್ಲಿಯೆ ಕಳೆಯುತ್ತಿದ್ದೆವೆ ಸಮಾಜ ಜವಾಬ್ದಾರಿಯನ್ನು ಮರೆತಿದ್ದೇವೆ ಎಂದು ತಿಳಿಸಿದರು.

ಅತಿಯಾದ ಮೊಬೈಲ್ ಬಳಕೆಯಿಂದ ಮೆದುಳು ಹಾಗೂ ಹೃದಯ ಸಂಬಂಧಿ ಕಾಯಿಲೆಗಳು ಮನುಷ್ಯರಲ್ಲಿ ಹೆಚ್ಚಾಗುತ್ತಿವೆ. 20 ವರ್ಷಗಳ ಹಿಂದೆ ಜನರು ತಮ್ಮ ಕುಟುಂಬ ಸ್ನೇಹಿತರೊಂದಿಗೆ ಸಮಯ ಕಳೆದು ಕೆಲಸದ ಒತ್ತಡವನ್ನು ನಿವಾರಣೆ ಮಾಡಿಕೊಳ್ಳುತ್ತಿದ್ದರು. ಹಾಗೂ ಸಾಮಾಜಿಕ ಮೌಲ್ಯಗಳನ್ನು ಬೆಳೆಸಿಕೊಳ್ಳುತ್ತಿದ್ದರು. ಆದರೆ ಇಂದು ಅತಿಯಾದ ಮೊಬೈಲ್ ಬಳಕೆಯಿಂದ ಎಲ್ಲರ ಬದುಕಿನಲ್ಲಿಯೂ ಒತ್ತಡ ಹೆಚ್ಚಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.

ಪ್ರಸ್ತುತ ತಂತ್ರಜ್ಞಾನವನ್ನು ಬಳಸಿ ಯಾವುದೇ ಪ್ರಶ್ನೆಗಳಿಗಾದರೂ ಉತ್ತರವನ್ನು ಕ್ಷಣಾರ್ಧದಲ್ಲಿಯೇ ಕಂಡುಕೊಳ್ಳಬಹುದು. ಅಂತರ್ಜಾಲವನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು. ಹೆಚ್ಚಿನ ಸಮಯ ಅಂತರ್ಜಾಲದಲ್ಲಿ ಕಳೆಯುವುದು ಒಳ್ಳೆಯದಲ್ಲ ಸಾಧ್ಯವಾದಷ್ಟು ಅಂತರ್ಜಾಲದಿಂದ ದೂರ ಉಳಿಯಬೇಕು. ಸಾರ್ವಜನಿಕರು ಇದರ ಕುರಿತಾಗಿ ಅರಿತುಕೊಳ್ಳಬೇಕು ಎಂದರು.

ಕಚೇರಿ ಕೆಲಸಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅನಗತ್ಯವಾಗಿ ಹಂಚಿಕೊಳ್ಳಬೇಡಿ. ಸೈಬರ್ ಗಳ್ಳರು ನಿಮ್ಮ ಸಂಪೂರ್ಣ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪಡೆದು ನಿಮ್ಮ ಹಿಂದೆ ಬೀಳುತ್ತಾರೆ ಆದ್ದರಿಂದ ಸಾಮಾಜಿಕ ಜಾಲತಾಣಗಳಿಂದ ದೂರ ಉಳಿಯಿರಿ. ಸೈಬರ್ ಕಳ್ಳರಿಂದ ಯಾವುದೇ ಕರೆ ಬಂದರೂ ಸಹ ಧೃತಿಗೆಡದೆ ಸೈಬರ್ ಸಹಾಯವಾಣಿಗೆ ಕರೆ ಮಾಡಿ ಪ್ರಕರಣ ದಾಖಲಿಸಿ ಸೈಬರ್ ವಂಚನೆಯಿಂದ ದೂರ ಉಳಿಯಿರಿ ಹಾಗೂ ಇದರ ಕುರಿತಾಗಿ ನಿಮ್ಮ ಒಡನಾಡಿಗಳಿಗೂ ಅರಿವು ಮೂಡಿಸಿ ಎಂದು ಹೇಳಿದರು.

ರಾಷ್ಟ್ರೀಯ ಮಾಹಿತಿ ಕೇಂದ್ರದ ಹಿರಿಯ ತಾಂತ್ರಿಕ ನಿರ್ದೇಶಕರಾದ ಸಂಗೀತ ಮಂಜುನಾಥ್ ಅವರು ಮಾತನಾಡಿ ಇವತ್ತಿನ ಮಕ್ಕಳು ಸಾಮಾಜಿಕ ಜಾಲತಾಣಗಳಾದ ಇನ್ಸ್ಟಾಗ್ರಾಮ್ ಫೇಸ್ಬುಕ್ ಗಳಲ್ಲಿ ಮುಳುಗಿ ಹೋಗಿದ್ದಾರೆ. ಇದರಿಂದ ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಮಾನಸಿಕ ಸಮಸ್ಯೆ ಹೆಚ್ಚಾಗಿ ಉದ್ಭವಿಸುತ್ತಿದೆ. ಮಕ್ಕಳು ಹಿರಿಯರೊಂದಿಗೆ ಸಮಯ ಕಳೆಯುವುದನ್ನು ಮರೆತು ಹೋಗಿದ್ದಾರೆ ಎಂದು ಹೇಳಿದರು.

ಜನರು ಸಾಮಾಜಿಕ ಜಾಲತಾಣ ವೈಯಕ್ತಿಕ ಫೋಟೋಗಳ ಹಂಚಿಕೆಯನ್ನು ಕಡಿಮೆ ಮಾಡಬೇಕು ಇದರಿಂದ ಸೈಬರ್ ಕಳ್ಳರು ಡೀಪ್ ಫೇಕ್ ನಂತಹ ಅಪಾಯ ಉಂಟಾಗುತ್ತದೆ. ಅಂತರ್ಜಾಲದಲ್ಲಿ ಫ್ರಾಡ್ ಆಗುವ ಸಾಧ್ಯತೆ ಇರುತ್ತದೆ ಸುಳ್ಳು ಮಾಹಿತಿಯನ್ನು ಹರಿ ಬಿಡಲಾಗುತ್ತಿದೆ ಜನರು ಇದರ ಕುರಿತಾಗಿ ಅರಿಯ ಬೇಕು ಆಗ ಮಾತ್ರ ಆನ್ ಲೈನ್ ವಂಚನೆಯಿಂದ ಬಚಾವಾಗಬಹುದು ಎಂದು ತಿಳಿಸಿದರು.

ಅಪರಿಚಿತ ನಂಬರ್ ಗಳಿಂದ ಕರೆ ಮಾಡಿ ಓ.ಟಿ.ಪಿ. ಯು.ಪಿ.ಐ ಪಿನ್ ಅನ್ನು ಯಾರೆ ಕೇಳಿದರು ಹೇಳಬೇಡಿ. ಇಂತಹ ಕರೆ ಬಂದ ನಂತರ ಭಯ ಪಡದೆ ಐ.ಟಿ ಸೈಬರ್ ನಂಬರ್ 930 ಗೆ ಕರೆ ಮಾಡಿ ಅಥವಾ ಸಂಚಾರ್ ಸತಿ ವೆಬ್ ನಲ್ಲಿ ಪ್ರಕರಣ ದಾಖಲಿಸಿ ಎಂದು ಮಾಹಿತಿ ನೀಡಿದರು.

ಕಾರ್ಯಗಾರದ ನಂತರ ಸೈಬರ್ ಕ್ರೈಂ ಗೆ ಸಂಬಂಧಿಸಿದ ರಸಪ್ರಶ್ನೆ ಕಾರ್ಯಕ್ರಮವನ್ನು ಆಯೋಜಿಸಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು.

ಜಿಲ್ಲಾ ರಾಷ್ಟ್ರೀಯ ಮಾಹಿತಿ ಕೇಂದ್ರದ ಕೆ.ವಿ.ಕೆ ಅಪ್ಪರಾವ್, ರಾಷ್ಟ್ರೀಯ ಮಾಹಿತಿ ಕೇಂದ್ರದ ಸಿಬ್ಬಂದಿ ವರ್ಗ ಹಾಗೂ ಜಿಲ್ಲಾ ಪಂಚಾಯತ್ ಸರ್ಕಾರಿ ನೌಕರರು ಉಪಸ್ಥಿತರಿದ್ದರು.

Continue Reading

Trending

error: Content is protected !!