Connect with us

Kodagu

ಅಯ್ಯಂಗೇರಿಯಲ್ಲಿ ಮನೆ ಕಳ್ಳತನ ಪ್ರಕರಣ ಇಬ್ಬರು ಆರೋಪಿಗಳನ್ನು ಬಂಧಿಸಿದ ಪೊಲೀಸರು

Published

on

ಭಾಗಮಂಡಲ ಮತ್ತು ನಾಪೋಕ್ಲು ಪೊಲೀಸರ ಜಂಟಿ ಕಾರ್ಯಚರಣೆ ಕಳ್ಳತನ ಪ್ರಕರಣ ದಾಖಲಾದ 48 ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿದ ಪೊಲೀಸರು.

ಭಾಗಮಂಡಲ ಪೊಲೀಸ್ ಠಾಣಾ ವ್ಯಾಪ್ತಿಯ ಅಯ್ಯೇಗೇರಿ ಗ್ರಾಮದಲ್ಲಿ ಮನೆ ಒಂದರ ಬೀಗ ಒಡೆದು ಚಿನ್ನಾಭರಣ ಕಳ್ಳತನ ಮಾಡಿದ್ದ ಚೋರರು.

ಅಯ್ಯಂಗೇರಿ ಗ್ರಾಮದ ನಿವಾಸಿಗಳಾದ ಕೆ.ಕೆ.ಮಿದ್ ಲಾಜ್ (22) ಹಾಗೂ ಫಾತಿಮಾ (26) ಬಂಧಿತ ಆರೋಪಿಗಳು.

ಅಯ್ಯಂಗೇರಿ ಗ್ರಾಮದ ಕೆ.ಹೆಚ್. ಜಮೀಲಾ ಎಂಬುವವರು ಏ.12ರಂದು ಸಂಬಂಧಿಕರ ಮನೆಗೆ ತೆರಳಿದ್ದಾಗ ಮನೆಯ ಬೀಗ ಹೊಡೆದು ಕಳ್ಳತನ ಮಾಡಿದ್ದ ಖದೀಮರು.

ಏ.13ರಂದು ಸಂಬಂಧಿಕರ ಮನೆಯಿಂದ ಜಮೀಲಾ ಅವರು ಮನೆಗೆ ಹಿಂದಿರುಗಿದಾಗ ಮನೆಯಲ್ಲಿ ಕಳ್ಳತನವಾಗಿರುವ ಬಗ್ಗೆ ಬೆಳಕಿಗೆ ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಜಮೀಲಾ ಅವರು ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ 177 ಗ್ರಾಂ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ ಒಂದು ದ್ವಿಚಕ್ರ ವಾಹನ ಹಾಗೂ ಎರಡು ಮೊಬೈಲ್ ಸಹಿತ ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ನಿರ್ದೇಶನದಂತೆ ಮಡಿಕೇರಿ ಉಪವಿಭಾಗದ ಡಿವೈಎಸ್ಪಿ ಮಹೇಶ್ ಕುಮಾರ್, ಗ್ರಾಮಾಂತರ ವೃತ್ತ ನಿರೀಕ್ಷಕ ಎಲ್. ಅರುಣ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಭಾಗಮಂಡಲ ಠಾಣಾಧಿಕಾರಿ ಶೋಭಾ ಲಮಾಣಿ,ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್, ನಾಪೋಕ್ಲು ಪೊಲೀಸ್ ಠಾಣೆ ಹಾಗೂ ಭಾಗಮಂಡಲ ಪೊಲೀಸ್ ಠಾಣೆಯ ಸಿಬ್ಬಂದಿಗಳು, ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Continue Reading
Click to comment

Leave a Reply

Your email address will not be published. Required fields are marked *

Kodagu

ಕರಾಟೆ ಸ್ಪರ್ಧೆಯಲ್ಲಿ ಸಿ.ಐ.ಪಿ.ಯು.ಸಿ ವಿದ್ಯಾರ್ಥಿನಿ ಎಂ.ಎಸ್.ನಿಶಿತಾ ನೀಲಮ್ಮ ಸಾಧನೆ

Published

on

ಪೊನ್ನಂಪೇಟೆಯ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಪಿ.ಯು. ಕಾಲೇಜಿನಲ್ಲಿ ದ್ವಿತೀಯ ಪಿ.ಯು ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಎಂ .ಎಸ್. ನಿಶಿತಾ ನೀಲಮ್ಮ, ನವೆಂಬರ್ 30, 2025 ರಂದು ಮೈಸೂರಿನ ಮಹಾರಾಜ ಕಾಲೇಜುನಲ್ಲಿ ಜರುಗಿದ ನಾಲ್ಕನೇ VSK ಓಪನ್ ಕರಾಟೆ ಚಾಂಪಿಯನ್‌ಶಿಪ್ -2025 ರಲ್ಲಿ ಭಾಗವಹಿಸಿದ್ದರು. ಇವರು ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ ಮತ್ತು ಕುಮಿಟೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಈ ವಿದ್ಯಾರ್ಥಿನಿಯನ್ನು ಸಿ.ಐ.ಪಿ.ಯು.ಕಾಲೇಜಿನ ಪ್ರಾಂಶುಪಾಲೆ ಡಾ.ರೋಹಿಣಿ ತಿಮ್ಮಯ್ಯ ಅಭಿನಂದಿಸಿದ್ದರು. ಕುಮಾರಿ ನಿಶಿತಾ ನೀಲಮ್ಮ ಮಂಡೇಪಂಡ ನಂದ ಸುಬ್ಬಯ್ಯ ಮತ್ತು ಎಂ .ಎಸ್. ಆಶಾ ಸುಬ್ಬಯ್ಯ ಅವರ ಪುತ್ರಿಯಾಗಿದ್ದಾರೆ. ಇವರು ವಿರಾಜಪೇಟೆಯ ಮೆಬುಕಾನ್ ಗೊಜುರಿಯೋ ಸಂಸ್ಥೆಯ ಶಿಕ್ಷಕರಾದ ಸೆನ್ಸಾಯಿ ಎಂ.ಬಿ.ಚಂದ್ರನ್ ಅವರ ಮಾರ್ಗದರ್ಶನದಲ್ಲಿ ಕರಾಟೆಯನ್ನು ಅಭ್ಯಾಸ ಮಾಡುತ್ತಿದ್ದಾರೆ.

Continue Reading

Kodagu

ಕರಾಟೆ ಸ್ಪರ್ಧೆ: ಸಿ.ಐ.ಪಿ.ಯು.ಸಿ ವಿದ್ಯಾರ್ಥಿನಿ ಎಂ.ಎಸ್.ನಿಶಿತಾ ನೀಲಮ್ಮ ಸಾಧನೆ

ಚಾಲಕನ ನಿಯಂತ್ರಣ ತಪ್ಪಿ ಓಮಿನಿ ಪಲ್ಟಿ: ತಪ್ಪಿದ ಅನಾಹುತ

Published

on

ನಾಪೋಕ್ಲು : ಚಾಲಕನ ನಿಯಂತ್ರಣ ಕಳೆದುಕೊಂಡ ಮಾರುತಿ ಕಾರೊಂದು ರಸ್ತೆ ಬದಿಯ ತೋಟದ ಚೆರಂಡಿಗೆ ಉರುಳಿಬಿದ್ದ ಘಟನೆ ನಾಪೋಕ್ಲು ಮಡಿಕೇರಿ ಮುಖ್ಯ ರಸ್ತೆಯ ಕೊಟ್ಟಮುಡಿ ಜಂಕ್ಷನ್ ಬಳಿ ಗುರುವಾರ ಸಂಜೆ ನಡೆದಿದೆ.

ಕುಶಾಲನಗರದಿಂದ ಬೆಟ್ಟಗೇರಿ, ಕೊಟ್ಟಮುಡಿ ಮಾರ್ಗವಾಗಿ ಬಲ್ಲಮಾವಟಿ ಗ್ರಾಮದ ನಿವಾಸಿ ನಿತಿನ್ ಎಂಬುವವರು ತಮ್ಮ ಮಾರುತಿ ಓಮಿನಿ ಕಾರಿನಲ್ಲಿ ಹಂದಿಯನ್ನು ಸಾಗಿಸುತ್ತಿದ್ದ ಸಂದರ್ಭ ಕೊಟ್ಟಮುಡಿ ಜಂಕ್ಷನ್ ಬಳಿಯ ರಸ್ತೆಯಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು ಕಾರು ರಸ್ತೆ ಬದಿಯ ಜೆ ವಿ ಎಸ್ಟೇಟ್ ನ ತೋಟದ ಚೆರಂಡಿಗೆ ಉರುಳಿ ಬಿದ್ದಿದೆ.ಅಪಘಾತದಿಂದ ಕಾರಿನ ಮೆಲ್ಬಾಗ ಹಾಗೂ ಒಂದು ಬದಿಗೆ ಹಾನಿಯಾಗಿದ್ದು ಕಾರಿನ ಚಾಲಕ ನಿತಿನ್ ಹಾಗೂ ಜೊತೆಗಿದ್ದ ಇನ್ನೊಬ್ಬ ವ್ಯಕ್ತಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಅಪಘಾತದಿಂದ ಕಾರಿನಲ್ಲಿದ್ದ ಹಂದಿಗೂ ಯಾವುದೇ ಹಾನಿಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ತೋಟದ ಚೆರಂಡಿಗೆ ಉರುಳಿ ಬಿದ್ದ ಕಾರನ್ನು ಸಾರ್ವಜನಿಕರ ಸಹಕಾರದಿಂದ ಮೇಲೆತ್ತಿ ತೆರವು ಗೊಳಿಸಲಾಯಿತು.

ವರದಿ:ಝಕರಿಯ ನಾಪೋಕ್ಲು

Continue Reading

Trending

error: Content is protected !!