Connect with us

Hassan

ಅಯೋಧ್ಯೆಯ ಶ್ರೀ ರಾಮ ಮಂದಿರ ಮಂತ್ರಾಕ್ಷತೆ, ಕರಪತ್ರ, ಹಾಗೂ ಶ್ರೀ ರಾಮ ಮಂದಿರದ ಪೋಟೋವನ್ನು ಮನೆ ಮನೆಗೆ ವಿತರಣೆ

Published

on

ಹಾಸನ: ತಾಲ್ಲೂಕು ಕಟ್ಟಾಯ ಹೋಬಳಿಯ ಕಟ್ಟಾಯ ಗ್ರಾಮದ ಶ್ರೀ ಈಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ. ಹಾಗು ಶೆಟ್ಟಿಹಳ್ಳಿ ಮಲ್ಲೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಅಯೋಧ್ಯೆಯ ಶ್ರೀ ರಾಮ ಮಂದಿರ ಮಂತ್ರಾಕ್ಷತೆಯನ್ನು ಮನೆ ಮನೆಗೆ ಹೋಗಿ ಅಯೋಧ್ಯೆಯ ಕರಪತ್ರ, ಮಂತ್ರಾಕ್ಷತೆ ಹಾಗೂ ಶ್ರೀ ರಾಮ ಮಂದಿರದ ಪೋಟೋವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ೈ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಪ್ರಮುಖರಾದ ಶ್ರೀ ಲಾ .ನಾ .ಶಾಸ್ತ್ರಿಗಳು ಮಾತಾನಾಡಿದ ಅವರು ಅಯೋಧ್ಯೆಯ ಶ್ರೀ ರಾಮ ಮಂದಿರ ಮಂತ್ರಾಕ್ಷತೆಯನ್ನು ಮನೆ ಮನೆಗೆ ಕೊಡುವ ಕೆಲಸವನ್ನು ವಿಶ್ವ ಹಿಂದೂ ಪರಿಷತ್ ವತಿಯಿಂದ ರಾಷ್ಟ್ರಾದ್ಯಂತ ಮಾಡುತ್ತಿದೆ. ಸುಮಾರು 50-ಲಕ್ಷ ಶ್ರೀ ರಾಮ ಭಕ್ತರು. ದೇಶದ ಮಠಾಧೀಶರು ದಿನಾಂಕ 22-1-2024 ರಂದು ಶ್ರೀ ರಾಮ ಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ಅವರಿಗೆ ವಾಸ್ತವ್ಯ , ಊಟದ ವ್ಯವಸ್ಥೆಗೆ ತಯಾರಿ ಯಾಗುತ್ತಿದೆ. ಕರ್ನಾಟಕದಿಂದ 2000 ರಾಮ ಭಕ್ತರು ,ಗಣ್ಯರು. ಕರಸೇವಕರು ಪಾಲ್ಗೊಳ್ಳುತ್ತಿದ್ದಾರೆ.ಎಂದರು.


ಅಂದು ಬೆಳಗ್ಗೆ 11-00 ಗಂಟೆಯಿಂದ ಮಧ್ಯಾಹ್ನ 1-00 ಘಂಟೆಯ ವರೆಗೆ ಉದ್ಘಾಟನೆ ನೆರವೇರುವುದು ಈ ಸಂದರ್ಭದಲ್ಲಿ ಎಲ್ಲಾ ಗ್ರಾಮಗಳಲ್ಲಿ , ನಗರಗಳಲ್ಲಿ, ದೇವಸ್ಥಾನದಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತಿವೆ ಹಾಗೂ ಶ್ರೀ ರಾಮನ ಜಪ ಉದ್ಯೋಘೋಷಗಳು, ನಡೆಯಲಿವೆ, ಹಾಗೂ ದೇವಾಲಯದಲ್ಲಿ ಬಂದಂತಹ ಶ್ರೀ ರಾಮ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲು ಸ್ಥಳೀಯ ಭಕ್ತರು ತಯಾರಿದ್ದಾರೆ ಎಂದು ತಿಳಿಸಿದರು.
ಅಂದು ಸಂಜೆ ಎಲ್ಲ ಮನೆಗಳ ಮುಂದೆ ಐದು ದೀಪಗಳನ್ನು ಉತ್ತರಾಭಿಮುಖವಾಗಿ ಹಚ್ಚಬೇಕು, ಮನೆ ಮುಂದೆ ರಂಗೋಲಿ ಹಾಕಿ ಹಬ್ಬದ ವಾತಾವರಣ ಮಾಡಲು ತಿಳಿಸಿದರು. ವಿಶೇಷವಾಗಿ ಹಿಂದೂ ಬಾಂಧವರಿಗೆ ಸಂತೋಷದ ದಿನವಾಗಿದೆ ಎಂದು ತಿಳಿಸಿದರು
.
ಕಾರ್ಯಕ್ರಮದಲ್ಲಿ ಮಾತನಾಡಿದ ಹಾಸನ ಜಿಲ್ಲಾ ವಿಶ್ವ ಹಿಂದೂ ಪರಿಷತ್ತಿನ ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಟ್ಟಾಯ ಶಿವಕುಮಾರ್ ಮಾತನಾಡಿ. ಕಳೆದ ಮೂವತ್ತು ವರ್ಷದ ಹಿಂದೆ ಶ್ರೀ ಲಾಲ್ ಕೃಷ್ಣ ಆಡ್ವಾಣಿ ಅವರ ನೇತೃತ್ವದಲ್ಲಿ ಹೋರಟ ರಥಯಾತ್ರೆಗಳು ದೇಶಾದ್ಯಂತ ಸಂಚಾರ ಮಾಡಿದ ಸಂದರ್ಭದಲ್ಲಿ ಹಾಸನ ಜಿಲ್ಲೆಗೆ ಬಂದಂತ ಸಂದರ್ಭದಲ್ಲಿ ಜಿಲ್ಲಾಂದ್ಯಾಂತ ರಥಯಾತ್ರೆಯನ್ನು ಮೆರವಣಿಗೆ ಮೂಲಕ ಎಲ್ಲಾ ಕಡೆ ಸಂಚಾರಿಸಿ ಕಟ್ಟಾಯ ಹೋಬಳಿಯಲ್ಲಿ ಬಂದಾಗ ಒಂದು ರಾತ್ರಿ ಕಟ್ಟಾಯ ಗ್ರಾಮದಲ್ಲಿ ತಂಗಿದ್ದ ಶ್ರೀ ರಾಮನ ರಥಯಾತ್ರೆಯನ್ನು ಅದ್ದೂರಿಯಾಗಿ ಸ್ವಾಗತಿಸಲಾಗತ್ತು. ಎಂದು ತಿಳಿಸಿದರು.


ಅಯೋಧ್ಯೆಯ ಶ್ರೀ ರಾಮ ಮಂದಿರ ಉದ್ಘಾಟನೆ ಸಮಾರಂಭದಲ್ಲಿ ಹಾಸನ ಜಿಲ್ಲೆಯ ಮೂರು ಸ್ವಾಮಿಜಿ ರವರಿಗೆ ಅಹ್ವಾನ ಪತ್ರಿಕೆ ನೀಡಿ ಹಿರಿಯರು ಅಹ್ವಾನ ನೀಡಿದ್ದಾರೆ, ಶ್ರೀ ಆದಿಚುಂಚನಗಿರಿ ಮಠದ ಸ್ವಾಮೀಜಿರವರು, ಶ್ರೀ ಕೋಡಿಮಠದ ಶ್ರೀಗಳು. ಶ್ರವಣ ಬೆಳಗೊಳದ ಜ್ಯೈನಾ ಮುನಿಗಳನ್ನು ಅಹ್ವಾನ ನೀಡಿದ್ದಾರೆ. ಇಂದು. ಕಟ್ಟಾಯ ಗ್ರಾಮದಲ್ಲಿ ಹಾಗೂ ಶೆಟ್ಟಿಹಳ್ಳಿ ಗ್ರಾಮದಲ್ಲಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಮನೆ ಮನೆಗೆ ತೆರಳಿ ಸ್ಥಳೀಯ ಪ್ರಮುಖರ ಜೊತೆಯಲ್ಲಿ ಶ್ರೀ ರಾಮ ಮಂತ್ರಾಕ್ಷತೆ, ಶ್ರೀ ರಾಮ ಮಂದಿರ ಉದ್ಘಾಟನಾ ಸಮಾರಂಭದ ಕರಪತ್ರ. ಶ್ರೀ ರಾಮ ಮಂದಿರದ ಪೋಟೋ ನೀಡಲಾಯಿತು.


ಈ ಕಾರ್ಯಕ್ರಮದಲ್ಲಿ ಹಾಸನ ತಾಲ್ಲೂಕು ವಿಶ್ವ ಹಿಂದೂ ಪರಿಷತ್ತಿನ ಗ್ರಾಮಾಂತರ ಅಧ್ಯಕ್ಷರಾದ ಹಾಗೂ ಮಂತ್ರಾಕ್ಷತೆ ಸಮಿತಿ ಕಟ್ಟಾಯ ಹೋಬಳಿಯ ಸಂಚಾಲಕರಾಗದ ಕಟ್ಟಾಯಶಿವಪ್ಪ,. ಹಾಸನ ತಾಲ್ಲೂಕು ಸಹಸಂಚಾಲಕರಾದ , ಮುಟ್ಟನಹಳ್ಳಿ ಯೋಗೀಶ್. ಅರ್ಚಕರಾದ ರಮೇಶ್, ಬಿಜೆಪಿ ಜಿಲ್ಲಾ ಮುಖಂಡರಾದ ಕೆ. ಎಂ. ಅಮೃತ್, ಕಟ್ಟಾಯ ಹೋಬಳಿಯ ಬಿಜೆಪಿ ಅಧ್ಯಕ್ಷ ರಾದ ಕಿರಣ್ ಕುಮಾರ್. ಕೆ. ಕಾರ್ಯದರ್ಶಿ ಕೆ,ಎಂ. ಗಿರೀಶ್. ಸ್ಥಳೀಯ ಪ್ರಮುಖರಾದ ಕೆ ಪ್ರಕಾಶ್. ಜಯರಾಮ್ ಗಾಣಿಗರಕೊಪ್ಪಲು. , ಪಟೇಲ್ ಗಣೇಶ್. ಕೆ. ಪಿ. ಶಿವಕುಮಾರ್. ಕೆ ,ಸ್ವಾಮಿ ಗೌಡರು. ಕೆ .ಎಂ .ವರದೆಗೌಡ. ಮಧುಕೇಶ್ವರ , ರವಿಕುಮಾರ್, ಕರುಣಾಕರ್, ಕೆ ಬಾಲಕೃಷ್ಣ ,ಪಟೇಲ್ ಕುಮಾರ್.ರಮೇಶ್. ಪುಟ್ಟ ರಾಜು,ಪಟೇಲ್ ಮಂಜುನಾಥ್ ಮುಟ್ಟನಹಳ್ಳಿ, ವಿಶ್ವ ನಾಥ್ ಕಲ್ಲಹಳ್ಳಿ, ಸಿಮೆಂಟ್ ಹರೀಶ್ ಬೆಳ್ಳೇಕೆರೆ , ಪ್ರವೀಣ್ ಶೆಟ್ಟಿಹಳ್ಳಿ ರಾಜಣ್ಣ,ಮುಂತಾದವರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Hassan

ಅರೇಹಳ್ಳಿಯಲ್ಲಿ ಮರುಕಳಿಸಿದ ಕಾಫಿ ಕಳ್ಳತನ!

Published

on

ಅರೆಹಳ್ಳಿ: ಭಾನುವಾರ ಮಧ್ಯರಾತ್ರಿ ಸುಮಾರು 3ರ ಸಮಯದಲ್ಲಿ ಮೂರ್ನಾಲ್ಕು ಜನರಿದ್ದ ಖದೀಮರ* ಗುಂಪು ಸುಮಾರು 2* ಲಕ್ಷ ಮೌಲ್ಯದ ಕಾಫಿಯನ್ನು ಕಳುವು ಮಾಡಿದ್ದರು ಈ ಬಗ್ಗೆ ಸ್ಥಳೀಯ ಕಾಫಿ ಬೆಳೆಗಾರ ಸಂಘದ ಸಹಕಾರದೊಂದಿಗೆ ಪೊಲೀಸ್ ಠಾಣೆಗೆ ಮಾಲೀಕರು ತೆರಳಿ ದೂರು ಸಲ್ಲಿಸಿ ತ್ವರಿತವಾಗಿ ಖದೀಮರನ್ನು ಪತ್ತೆ ಹಚ್ಚಿ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದ್ದರು.


ಇದಾದ ಬೆನ್ನಲ್ಲೇ ಎಚ್ಚೆತ್ತ ಪೊಲೀಸ್ ಇಲಾಖೆ ರಾತ್ರಿ ಸಮಯದಲ್ಲಿ ಗಸ್ತು ಚುರುಕುಗೊಳಿಸಿದ್ದರು* ಇವುಗಳ ನಡುವೆ ಇಂದು ಮುಂಜಾನೆ ಸುಮಾರು 4.30ರ ಸಮಯದಲ್ಲಿ ಮೂರ್ನಾಲ್ಕು ಜನರಿದ್ದ ಅದೇ? ಖದೀಮರ ಗುಂಪು ಪುನಃ ಕಾಫಿ ದೋಚಲು ಯತ್ನಿಸಿದ್ದು ಆ ವೇಳೆಗಾಗಲೇ ಎಚ್ಚೆತ್ತ ಕಾಫಿ ಬೆಳೆಗಾರ ಜಗನ್ನಾಥ್ ಶೆಟ್ಟಿ ಎಂಬುವವರು ಕಾರಿನಿಂದ ಹೊರಗೆ ಇಳಿದು ಬರಲು ಯತ್ನಿಸಿದ್ದಾರೆ ಆಗ ಅಲ್ಲಿದ್ದ ಗುಂಪು ಮಚ್ಚಿನಿಂದ ತಲೆಗೆ ಮಾರಣಾಂತಿಕ ಹಲ್ಲೆ ನಡೆಸಿದ್ದಲ್ಲದೆ ಅಲ್ಲಿಂದ ಸುಮಾರು100* ಕೆಜಿ ಗಳಷ್ಟು ಕಾಫಿಯನ್ನು ದೋಚಿ ಪರಾರಿಯಾಗಿರುವ ಘಟನೆ ಬೇಲೂರು ತಾಲೂಕಿನ ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ!

ಪ್ಲಾಂಟರ್ಸ್ ಸಂಘದ ಉಪಾಧ್ಯಕ್ಷ ಮಂಜುನಾಥ್ ಶೆಟ್ಟಿ, ಕರ್ನಾಟಕ ಕಾಫಿ ಬೆಳೆಗಾರರ ಸಂಘದ ಮಾಜಿ ಉಪಾಧ್ಯಕ್ಷ ಬಿ.ಪಿ ಬಸವರಾಜ್ , ಗ್ರಾಮದ ಮುಖಂಡ ಅಮಿತ್ ಶೆಟ್ಟಿ ಈ ಘಟನೆಯನ್ನು ತೀವ್ರವಾಗಿ ಖಂಡಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪೋಲೀಸ್ ಇಲಾಖೆ ತಪ್ಪಿತಸ್ಥರನ್ನು ಅದಷ್ಟು ಬೇಗ ಪತ್ತೆ ಹಚ್ಚಿ ಅಂತವರ ವಿರುದ್ಧ ಕಠಿಣ ಶಿಕ್ಷೆ ಜರುಗಿಸುವ ಮೂಲಕ ಇಂತಹ ಪ್ರಕರಣಗಳು ನಮ್ಮ ಬಾಗದಲ್ಲಿ ಮತ್ತೆಂದಿಗೂ ಮರುಕಳಿಸಬಾರದು, ಮೂರ್ನಾಲ್ಕು ದಿನಗಳ ಹಿಂದೆ ಅದೇ ಸ್ಥಳದಲ್ಲಿ ಕಾಫಿ ಕಳವು ನಡೆದು ಪೊಲೀಸರಿಗೆ ಮಾಹಿತಿ ನೀಡಿ ಪ್ರಕರ*ಣ ದಾಖಲಿಸಿ? ಮತ್ತೆ ಅದಕ್ಕಿಂತಲೂ ಕ್ರೌರ್ಯ ಮನಸ್ಸಿನಿಂದ ಇಂತಹ ಪ್ರಕರಣಗಳು ಮರುಕಳಿಸುತ್ತಿದೆ ಎಂದರೆ ಅದು ಯಾರ ವೈಫಲ್ಯ? ಎಂದು ಪ್ರಶ್ನಿಸಿದ್ದಾರೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜಿತಾ ಬೇಟಿ ನೀಡಿ ಅಧಿಕಾರಿಗಳೊಂದಿಗೆ ಪ್ರಕರಣ ಕುರಿತ ಹೆಚ್ಚಿನ ಮಾಹಿತಿ ಪಡೆದಿದ್ದಾರೆ.ಹಾಗು ಶ್ವಾನ ದಳ ವಿಶೇಷ ತನಿಖಾ ತಂಡದಿಂದ ತನಿಖೆ ಮುಂದುವರೆದಿದ್ದು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ

Continue Reading

Hassan

ಸುತ್ತೂರು ಜಾತ್ರಾ ಮಹೋತ್ಸವ

Published

on

ಹಾಸನ: ಜ15-20ರ ವರೆಗೂ ನಡೆಯುವ ಸುತ್ತೂರು ಜಾತ್ರಾ ಮಹೋತ್ಸವ ಅಂಗವಾಗಿ ಸಂಚರಿಸುತ್ತಿರುವ ಪ್ರಚಾರದ ರಥ ಇಂದು ನಗರಕ್ಕೆ ಆಗಮಿಸಿದಾಗ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ಸ್ವಾಗತಿಸಿ ಪೂಜೆ ಸಲ್ಲಿಸುವ ಮೂಲಕ ಬರಮಾಡಿಕೊಂಡರು.

ಮೊದಲು ತಣ್ಣೀರುಹಳ್ಳ ಮಠ, ಶ್ರೀ ಬಸವೇಶ್ವವರ ಕಲ್ಯಾಣ ಮಂಟಪ ಹಾಗೂ ಶ್ರೀ ಜವೇನಹಳ್ಳಿ ಮಠಕ್ಕೆ ಸುತ್ತೂರು ಜಾತ್ರಾ ಮಹೋತ್ಸವದ ರಥ ಬಂದಾಗ ಆಡಳಿತ ಮಂಡಳಿಯವರು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಮಠದ ಭಕ್ತರು ಪೂಜೆ ಸಲ್ಲಿಸಿ ಸ್ವಾಗತಿಸಿದರು.

ಸುತ್ತೂರು ಜಾತ್ರಾ ಮಹೋತ್ಸವ ಅಂಗವಾಗಿ ರಾಜ್ಯದ ಹಲವು ಜಿಲ್ಲೆಯಲ್ಲಿ ಪ್ರಚಾರ ರಥಯಾತ್ರೆ ಸಂಚರಿಸಿ ಜಾತ್ರೋತ್ಸವ ಹಾಗೂ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ತಿಳಿಸಲಾಗುತ್ತಿದೆ.

ಈ ವೇಳೆ ಲಿಂಗಾಯತ ವೀರಶೈವ ಸಮಾಜದ ಜಿಲ್ಲಾಧ್ಯಕ್ಷ ಬಿ.ಪಿ. ಐಸಾಮಿಗೌಡ, ಉಪಾಧ್ಯಕ್ಷ ಬಿ.ಎಂ. ಭುವನಾಕ್ಷ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಕಿರಣ್ ಕುಮಾರ್ ಹೊಸಮನಿ, ತಣ್ಣೀರು ಹಳ್ಳ ಮಠದ ಮ್ಯಾನೇಜರ್ ಶಂಕರ್ ಜಗದೀಶ್, ಬಾಳ ನಾಗೇಶ್, ಶೋಭನ್ ಬಾಬು, ಯು.ಎಸ್‌. ಬಸವರಾಜ್, ಸೋಮಶೇಖರ್, ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಪಾಟೀಲ್, ಪಾಲಾಕ್ಷ, ಧನಲಕ್ಷ್ಮಿ, ಇಂದ್ರಮ್ಮ, ಸಾವಿತ್ರಮ್ಮ, ಇಂಜಿನಿಯರ್ ಉಪಸ್ಥಿತರಿದ್ದರು.

Continue Reading

Hassan

ದಾಖಲೆ ತಿರುಚಿ ಪೌತಿ ಖಾತೆ ಕುರಿತು ಕ್ರಮ ಕೈಗೊಳ್ಳಬೇಕು-ದಲಿತ ಸಂಘರ್ಷ ಸಮಿತಿ ಆಗ್ರಹ

Published

on

ಹಾಸನ: ಹಿರಿಯ ನಾಗರಿಕರಾದ ಮಲ್ಲಮ್ಮ ಕೋಂ ಸಣ್ಣಯ್ಯ ಅವರ ಆಸ್ತಿಯ ದಾಖಲೆಯನ್ನು ತಿರುಚಿ, ಕುಟುಂಬದ ಪ್ರಾಮಾಣಿಕ ವಾರಸುದಾರರನ್ನು ಬಿಟ್ಟು ತಪ್ಪು ಮಾಹಿತಿಯ ಆಧಾರದ ಮೇಲೆ ಪೌತಿ ಖಾತೆ ಮಾಡಿಸಿಕೊಳ್ಳಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ (ಡಾ. ಬಿ.ಆರ್. ಅಂಬೇಡ್ಕರ್ ವಿಚಾರ ವೇದಿಕೆ)ಯ ಜಿಲ್ಲಾ ಸಂಚಾಲಕ ಅರೇಹಳ್ಳಿ ನಿಗರಾಜು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತಾನಾಡಿದ ಅವರು, ಆಲೂರು ಪಟ್ಟಣ ಪಂಚಾಯಿತಿ ತಪ್ಪು ದಾಖಲೆಗಳನ್ನು ಆಧರಿಸಿ ಆಸ್ತಿಯನ್ನು ಮೂರನೇ ವ್ಯಕ್ತಿಗೆ ಕ್ರಯ ಮಾಡಿದ ಕ್ರಮವನ್ನು ತಡೆಯಬೇಕು ಎಂದು ಸಮಿತಿ ಒತ್ತಾಯಿಸಿದರು.

ಅರಸೀಕೆರೆ ತಾಲ್ಲೂಕಿನ ದೇವರಹಳ್ಳಿಯ ಡಿ.ಎಂ. ಸಣ್ಣಪ್ಪರ ಕುಟುಂಬಕ್ಕೆ ಸೇರಿದ ಮಲ್ಲಮ್ಮ ಅವರು 1987ರ ನವೆಂಬರ್ 10ರಂದು ಜಿ. ಅಬ್ದುಲ್ ಸುಬಾನ್ ಅವರ ಪುತ್ರಿ ಯಾಸ್ಮಿನ್ ಮೊಹುದ್ದೀನ್ ಅವರಿಂದ ನಿವೇಶನವನ್ನು ಸಬ್‌ರಿಜಿಸ್ಟರ್ ಕಚೇರಿಯ ನಂ.229, ದಿನಾಂಕ 25/11/1987ರ ಪತ್ರದ ಮೂಲಕ ಕ್ರಯ ಮಾಡಿಕೊಳ್ಳಲಾಗಿತ್ತು.

ಆ ಆಸ್ತಿಗೆ ಅದೇ ಸಮಯದಲ್ಲಿ ಮಲ್ಲಮ್ಮ ಅವರ ಹೆಸರಲ್ಲಿ ಅಧಿಕೃತ ಖಾತೆಯೂ ತೆರೆದಿತ್ತು. ಮಲ್ಲಮ್ಮ ಜೀವಿತಾವಸ್ಥೆಯಲ್ಲಿಯೇ ತಮ್ಮ ಮೂವರು ಮಕ್ಕಳಿಗೂ ಆಸ್ತಿಯಲ್ಲಿ ಸಮಾನ ಹಕ್ಕು ಇರುವಂತೆ ದಾಖಲೆಗಳಲ್ಲಿ ಸ್ಪಷ್ಟವಾಗಿ ಗುರುತಿಸಲಾಗಿದೆ.

ಮಲ್ಲಮ್ಮ ಅವರ ಮರಣದ ನಂತರ ಕುಟುಂಬದಲ್ಲಿ ವಾರಸುದಾರರ ವಿವರದಲ್ಲಿ ಗೊಂದಲ ಸೃಷ್ಟಿಸಲಾಯಿತು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಮಲ್ಲಮ್ಮ ಅವರ ಹಿರಿಯ ಮಗ ಶಿವಶಂಕರ್ ಅವರು ಈಗಾಗಲೇ ಮರಣ ಹೊಂದಿದ್ದು, ಅವರಿಗೆ ಎರಡು ಪತ್ನಿಯರು — ಹಿರಿಯ ಪತ್ನಿ ವಿಮಲ ಹಾಗೂ ಎರಡನೇ ಪತ್ನಿ ರಾಧ  ಇದ್ದಾರೆ.

ವಿಮಲ ಅವರಿಗೆ ನಂದಕುಮಾರ್ ಎಂಬ ಮಗನಿದ್ದು, ರಾಧ ಅವರಿಗೆ ಮಾನಸ ಎಂಬ ಮಗಳಿದ್ದಾರೆ. ಶಿವಶಂಕರ್ ಅವರ ಮರಣದ ನಂತರ ದಾಖಲೆಯಲ್ಲಿ ‘ವಂಶವೃಕ್ಷ’ ಬರೆದಾಗ ಹಿರಿಯ ಪತ್ನಿ ವಿಮಲರ ಹೆಸರನ್ನು ಉದ್ದೇಶಪೂರ್ವಕವಾಗಿ ಕೈಬಿಟ್ಟು ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಲಾಗಿದೆ.

ಈ ತಪ್ಪು ಮಾಹಿತಿಯ ಆಧಾರದ ಮೇಲೆ ಪೌತಿ ಖಾತೆ ಮಾಡಿಸಿಕೊಂಡು, ವಿಮಲ ಅವರಿಗೆ ಯಾವುದೇ ಮಾಹಿತಿ ನೀಡದೇ ಆಸ್ತಿಯನ್ನು ಮಾರಾಟ ಮಾಡಿರುವುದು ಗಮನಕ್ಕೆ ಬಂದಿದೆ ಎಂದು ಸಮಿತಿ ಆರೋಪಿಸಿದೆ.

ಸಮಿತಿ ಹೇಳುವಂತೆ, ತಪ್ಪು ಮಾಹಿತಿ ನೀಡಿ ಖಾತೆ ಮಾಡಿಸುವುದು ಕಾನೂನುಬಾಹಿರ. ಆಸ್ತಿ ಕ್ರಯ ಮಾಡಿದವರಿಗೆ ಯಾವುದೇ ಪರಿಸ್ಥಿತಿಯಲ್ಲೂ ಹೊಸ ಖಾತೆ ಮಾಡಬಾರದು, ದಾಖಲೆಗಳ ಸಂಪೂರ್ಣ ಪರಿಶೀಲನೆ ಮಾಡಿ ನಿಜಸ್ಥಿತಿಯನ್ನು ಬಹಿರಂಗಪಡಿಸಬೇಕು.

ತಪ್ಪು ದಾಖಲೆ ಸಲ್ಲಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಿದ್ದರೆ, ಹಾಸನ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಕಾನೂನು ಕ್ರಮಕ್ಕೆ ಒತ್ತಾಯಿಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ನಿಂಗರಾಜು ಅರೇಹಳ್ಳಿ, ವೆಂಕಟೇಶ್ ಬ್ಯಾಕ್ರವಳ್ಳಿ, ಲಕ್ಷ್ಮೀ, ವಸಂತ್ ಕುಮಾರ್, ವಿಮಲಾ, ದ್ರಾಕ್ಷಾಹಿಣಿ ಹಾಗೂ ಇತರರು ಉಪಸ್ಥಿತರಿದ್ದರು.

Continue Reading

Trending

error: Content is protected !!