Connect with us

Kodagu

ಮಡಿಕೇರಿಯಲ್ಲಿ ಅಯೋಧ್ಯೆ ಪುಸ್ತಕ ಲೋಕಾರ್ಪಣೆ

Published

on

ಮಡಿಕೇರಿ : ಶ್ರೀರಾಮ ತನ್ನ ಜೀವನದುದ್ದಕ್ಕೂ ಪ್ರತಿಪಾದಿಸುತ್ತಾ ಅನುಸರಿಸುತ್ತಿದ್ದ ಆದರ್ಶ ಮತ್ತು ಪ್ರೀತಿಯ ಅಂಶಗಳೇ ಅವನನ್ನು ಭಾರತ ಮಾತ್ರವಲ್ಲ, ವಿಶ್ವದಾದ್ಯಂತ ಅನೇಕ ದೇಶಗಳು ಆರಾಧಿಸಲು ಕಾರಣವಾಗಿದೆ. ಶ್ರೀರಾಮನನ್ನು ಮನಸ್ಸಿಗೆ ಹಚ್ಚಿಕೊಂಡಲ್ಲಿ ಆತನಲ್ಲಿದ್ದ ಮಾನವ ಗುಣದ ಅನೇಕ ಋಣಾತ್ಮಕತೆಗಳ ಬಗ್ಗೆ ಪ್ರಶ್ನೆ ಮೂಡಬಹುದು. ಆದರೆ ಶ್ರೀರಾಮನನ್ನು ಹೃದಯದಲ್ಲಿ ಇರಿಸಿಕೊಂಡಾಗ ಮಾತ್ರ ಆತನ ಉತ್ತಮ ಗುಣಗಳನ್ನು ಜೀವನದಲ್ಲಿ ಅನುಸರಿಸಲು ಸಾಧ್ಯವಾಗುತ್ತದೆ ಎಂದು ಖ್ಯಾತ ಸಾಹಿತಿ ಡಾ.ಗಜಾನನ ಶರ್ಮ ಪ್ರತಿಪಾದಿಸಿದ್ದಾರೆ.

ನಗರದ ರೆಡ್ ಬ್ರಿಕ್ಸ್ ಇನ್ ನ ಸತ್ಕಾರ್ ಸಭಾಂಗಣದಲ್ಲಿ ಆಯೋಜಿತವಾಗಿದ್ದ ಪತ್ರಕರ್ತ ಅನಿಲ್ ಹೆಚ್. ಟಿ. ಬರೆದ ‘ಅಯೋಧ್ಯೆ ಶ್ರೀರಾಮನ ಮಂದಿರ, ಇದು ಪ್ರೀತಿಯ ಮಂದಿರ, ರಾಷ್ಟ್ರಮಂದಿರ’ ಪುಸ್ತಕವನ್ನು ಬಿಡುಗಡೆ ಮಾಡಿ ಗಜಾನನ ಶರ್ಮ ಮಾತನಾಡಿದರು.

ಎಂತಹ ಕಷ್ಟವನ್ನಾದರೂ ನಗುಮೊಗದಿಂದಲೇ ಸ್ವೀಕರಿಸಬೇಕು ಎಂಬ ಗುಣವನ್ನು ಕಲಿಸಿಕೊಟ್ಟವನು ರಘುರಾಮ. ಜಗದೇಕ ಸುಂದರಿಯಾಗಿ ಬಂದ ಶೂರ್ಪನಖಿ ಹಾಗೂ ಲಂಕೆಯ ಸಿಂಹಾಸನದ ಸೆಳೆತಗಳಿಗೆ ಕೂಡ ಶ್ರೀರಾಮ ಒಳಗಾಗಲಿಲ್ಲ. ಅಶ್ವಮೇಧ ಯಾಗ ಮಾಡುವಾಗ ಎಲ್ಲರೂ ಮತ್ತೊಂದು ಮದುವೆಯಾಗು ಎಂದಾಗಲೂ ಅದನ್ನೊಪ್ಪದೇ ತಾನು ನಂಬಿದ್ದ ಸೀತೆಯ ಪ್ರತಿಮೆಯನ್ನೇ ಪಕ್ಕದಲ್ಲಿರಿಸಿಕೊಂಡವ ರಾಮ. ಆತನ ಕಣ್ಣಿಗೆ ಅಳಿಲಿನ ಸೇವೆ, ಕಡು ಬಡವಿ ಶಬರಿಯ ಭಕ್ತಿಯೂ ಕಂಡಿತ್ತು. ಸೇವಕನಿಗೂ ತನ್ನ ಕುಟುಂಬದಲ್ಲಿ ಸ್ಥಾನ ಕಲ್ಪಿಸಿದ. ರಾಮನ ಬದುಕೇ ಪ್ರೀತಿಯ ಬದುಕಾಗಿತ್ತು. ಇಂತಹ ವ್ಯಕ್ತಿತ್ವವನ್ನು ನಾವು ಗೌರವಿಸಬಾರದೇ’ ಎಂದು ಗಜಾನನ ಶರ್ಮ ಪ್ರಶ್ನಿಸಿದರು.

ಪತ್ರಕರ್ತ ಜಿ.ಚಿದ್ವಿಲಾಸ್ ಮಾತನಾಡಿ, ‘ವೀರಪ್ಪನ್ ಇದ್ದಂತ ಸಂದರ್ಭದಲ್ಲಿ, ಕೋವಿಡ್ ಕಾಲದಲ್ಲಿ ಅತ್ಯುತ್ತಮ ವರದಿಗಳನ್ನು ಅನಿಲ್ ಹೆಚ್.ಟಿ. ಬರೆದರು. ಈಗ ಅಯೋಧ್ಯೆ ಪುಸ್ತಕವನ್ನು ಅಷ್ಟೇ ಅತ್ಯುತ್ತಮವಾಗಿ ರಚಿಸಿದ್ದಾರೆ’ ಎಂದು ಶ್ಲಾಘಿಸಿದರು.

ಅಯೋಧ್ಯೆ ಕೃತಿಕಾರ ಅನಿಲ್ ಹೆಚ್.ಟಿ. ಮಾತನಾಡಿ, ಲಾಕ್ ಡೌನ್ ಡೈರಿ ನಂತರದ ತನ್ನ ಕೃತಿ ಅಯೋಧ್ಯೆ ಅನೇಕ ಓದುಗರ ಬೇಡಿಕೆಯನುಸಾರ ಪ್ರಕಟಿತವಾಗಿದೆ. ಅಯೋಧ್ಯೆಗೆ ಅನೇಕ ಬಾರಿ ತೆರಳಿದ್ದರೂ ಈಗ ದೇವನಗರಿಯಲ್ಲಿ ಆಗಿರುವ ಬದಲಾವಣೆ ಊಹೆಗೂ ನಿಲುಕದಂತಿದೆ. ಕೊಡಗಿನ ಜನತೆ ಕೂಡ ೨.೨೦೦ ಕಿಮೀ. ದೂರದ ಅಯೋಧ್ಯೆಯಲ್ಲಿನ ವಿದ್ಯಮಾನಗಳ ಬಗ್ಗೆ ಆಸಕ್ತಿ ವಹಿಸಿದ್ದು ಕೂಡ ಅಯೋಧ್ಯೆ ಪುಸ್ತಕ ಪ್ರಕಟಣೆಗೆ ಕಾರಣವಾಯಿತು ಎಂದು ಮಾಹಿತಿ ನೀಡಿದರು.

ಇದೇ ಸಂದರ್ಭ ಸರಿಗಮಪ ರಿಯಾಲಿಟಿ ಶೋನ ಸ್ಪರ್ಧಿ, ಕೊಡಗಿನ ಯುವ ಗಾಯಕ ಅನ್ವಿತ್ ಕುಮಾರ್ ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ಹಾಡನ್ನು ಸುಶ್ಯಾವ್ಯವಾಗಿ ಹಾಡು ಬರೆದ ಸಾಹಿತಿ ಮುಂದೆಯೇ ಹಾಡುವ ಮೂಲಕ ಅಪಾರ ಮೆಚ್ಚುಗೆಗೆ ಕಾರಣರಾದರು.

ಸಾಹಿತಿ ಡಾ..ಗಜಾನನ ಶರ್ಮಾ, ನಾಗರತ್ನ ಶರ್ಮಾ ದಂಪತಿಯನ್ನು ಕೊಡಗಿನ ಜನತೆಯ ಪರವಾಗಿ ಹಿರಿಯ ಪತ್ರಕರ್ತ ಜಿ.ರಾಜೇಂದ್ರ, ಕಾಫಿ ಬೆಳೆಗಾರ ವಿನೋದ್ ಶಿವಪ್ಪ, ನಗರಸಭೆಯ ಅಧ್ಯಕ್ಷೆ ಅನಿತಾ ಪೂವಯ್ಯ, ಡಾ.ಎಂ.ಜಿ.ಪಾಟ್ಕರ್, ಹೆಚ್.ಎಸ್.ತಿಮ್ಮಪ್ಪಯ್ಯ ಸನ್ಮಾನಿಸಿ ಗೌರವಿಸಿದರು. ಲೇಖಕ ಅನಿಲ್ ಹೆಚ್.ಟಿ. ಅವರನ್ನು ಸಮರ್ಥ ಕನ್ನಡಿಗ ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು.

Continue Reading
Click to comment

Leave a Reply

Your email address will not be published. Required fields are marked *

Kodagu

ಮತದಾನ ಜಾಗೃತಿಗೆ ಸೆಲ್ಫಿ ಸ್ಪರ್ಧೆ

Published

on

ಮಡಿಕೇರಿ : ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾನ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ಸೆಲ್ಫಿ contest ನಡೆಸಲು ತೀರ್ಮಾನಿಸಲಾಗಿರುತ್ತದೆ. ಈ ಸೆಲ್ಫಿ contest ನಲ್ಲಿ #Lets Vote Kodagu! ಶೀರ್ಷಿಕೆಯಲ್ಲಿ ಸ್ಪರ್ಧೆ ನಡೆಯಲಿದೆ.

ಮಡಿಕೇರಿ ಜಿಲ್ಲಾಧಿಕಾರಿಗಳ ಕಚೇರಿ, ನಗರದ ರಾಜಾಸೀಟು, ಸೋಮವಾರಪೇಟೆ ತಾಲೂಕು ಪಂಚಾಯತ್ ಕಚೇರಿ, ಪೊನ್ನಂಪೇಟೆ ತಾಲ್ಲೂಕು ಪಂಚಾಯತ್ ಕಚೇರಿ, ವಿರಾಜಪೇಟೆ ತಹಸೀಲ್ದಾರ್ ಕಚೇರಿ, ಕುಶಾಲನಗರ ಕಾವೇರಿ ನಿಸರ್ಗಧಾಮ ಈ 06 ಸ್ಥಳಗಳಲ್ಲಿ ಮತದಾನ ಜಾಗೃತಿಗಾಗಿ ಸೆಲ್ಫಿ ಪಾಯಿಂಟ್‍ಗಳನ್ನು ನಿರ್ಮಿಸಲಾಗಿರುತ್ತದೆ. ಸಾರ್ವಜನಿಕರು ಮತ್ತು ಯುವ ಮತದಾರರು ಪೋಟೊವನ್ನು ಕಳುಹಿಸಬಹುದಾಗಿದೆ.

ಅಲ್ಲದೆ ಏಪ್ರಿಲ್, 26 ರಂದು ಮತದಾನ ನಡೆಯಲಿರುವ ಆಯ್ದ ವಿಶೇಷ ಮತಗಟ್ಟೆಗಳಲ್ಲಿಯೂ ಸೆಲ್ಪಿ ಪಾಯಿಂಟ್ ಗಳನ್ನು ಸ್ಥಾಪಿಸಲಿದ್ದು, ಈ ಮತಗಟ್ಟೆಗಳಲ್ಲಿ ಮತದಾನ ಮಾಡಿದ ನಂತರ ಸೆಲ್ಪಿ ಪಾಯಿಂಟ್‍ನಲ್ಲಿ ಪೋಟೋಗಳನ್ನು ಕ್ರಿಯಾತ್ಮಕವಾಗಿ ಸೆಲ್ಪಿ ಕ್ಲಿಕ್ಕಿಸಿ ಕಳುಹಿಸಲು ಅವಕಾಶ ಕಲ್ಪಿಸಲಾಗಿದೆ.


ಜಿಲ್ಲೆಯಾದ್ಯಂತ ಎಲ್ಲಾ ಸಾರ್ವಜನಿಕರು, ಮತದಾರರು ಮತದಾನದ ಪೂರ್ವದಲ್ಲಿ ನಾನು ಮತ ಚಲಾಯಿಸುತ್ತೇನೆ ಎಂಬ ಪರಿಕಲ್ಪನೆಯೊಂದಿಗೆ ತಾವಿರುವ ಸ್ಥಳದಲ್ಲಿಯೇ ವೈಯಕ್ತಿಕವಾಗಿ ಮತ್ತು ಗುಂಪಾಗಿ ಮತದಾನದಲ್ಲಿ ಪೂರ್ವದಲ್ಲಿ ಕ್ರಿಯಾತ್ಮಕವಾಗಿ ಸೆಲ್ಪಿ ಕ್ಲಿಕ್ಕಿಸಿ ವ್ಯಾಟ್ಸಪ್ ಮೊಬೈಲ್ ಸಂಖ್ಯೆ : 9741224300 ಗೆ ಕಳುಹಿಸಿ ಸ್ಪರ್ದೆಯಲ್ಲಿ ಭಾಗವಹಿಸಬಹುದಾಗಿದೆ. ಅಲ್ಲದೆ ಮತದಾನದ ದಿನದಂದು ಮತ ಚಲಾಯಿಸಿದ ನಂತರ “I VOTED’’ ಎಂಬ ಶೀರ್ಷಿಕೆಯೊಂದಿಗೆ ಸೆಲ್ಪಿ ಕ್ಲಿಕ್ಕಿಸಿ 9741224300 ವಾಟ್ಸಪ್ ಸಂಖ್ಯೆಗೆ ಕಳಹಿಸಲು ಅವಕಾಶ ಕಲ್ಪಿಸಲಾಗಿರುತ್ತದೆ. ಇಂದಿನಿಂದ ಮತದಾನ ಪೂರ್ಣಗೊಳ್ಳುವವರೆವಿಗೂ ಈ ಸೆಲ್ಫಿ contest ಸ್ಪರ್ಧೆಯಲ್ಲಿ ಜಿಲ್ಲೆಯ ಎಲ್ಲಾ ಮತದಾರರು/ ಸಾರ್ವಜನಿಕರು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಕ್ರಿಯಾತ್ಮಕವಾಗಿ ಸೆಲ್ಪಿ ಕ್ಲಿಕ್ಕಿಸಿ ಕಳುಹಿಸುವ ಆಯ್ದ ಪೋಟೊಗಳಿಗೆ ಆಕರ್ಷಕ ಬಹುಮಾನವನ್ನು ನೀಡಲಾಗುವುದು.

ಕೊಡಗು ಜಿಲ್ಲಾ ಸ್ವೀಪ್ ಸಮಿತಿಯ ವ್ಯಾಟ್ಸಪ್ ಸಂಖ್ಯೆಗೆ ಉತ್ತಮವಾಗಿ ಕ್ಲಿಕ್ಕಿಸಿದ ಒಂದು ಪೋಟೊವನ್ನು ಕಳುಹಿಸಲು ಅವಕಾಶ ನೀಡಲಾಗಿದೆ. #Lets Vote Kodagu! ಸೆಲ್ಫಿ ಸ್ಪರ್ಧೆಯಲ್ಲಿ ಭಾಗವಹಿಸಿ ಆಕರ್ಷಕ ಬಹುಮಾನ ಗೆಲ್ಲಿರಿ.

ನಿಬಂಧನೆಗಳು: ಒಬ್ಬ ವ್ಯಕ್ತಿ ಒಂದು ಪೋಟೊವನ್ನು ಮಾತ್ರವೇ ಕಳುಹಿಸತಕ್ಕದ್ದು. ಪೋಟೊ ಜೊತೆಯಲ್ಲಿ ತಮ್ಮ ಹೆಸರು, ಊರಿನ ಹೆಸರನ್ನು ಕಡ್ಡಾಯವಾಗಿ ಕಳುಹಿಸತಕ್ಕದ್ದು. ವಿಜೇತರನ್ನು ಆಯ್ಕೆ ಮಾಡುವಲ್ಲಿ ಕೊಡಗು ಜಿಲ್ಲಾ ಸ್ವೀಪ್ ಸಮಿತಿ ನಿರ್ಣಯವೇ ಅಂತಿಮವಾಗಿರುತ್ತದೆ. ಯಾವುದೇ ಧರ್ಮ, ಜಾತಿ, ವ್ಯಕ್ತಿ, ರಾಜಕೀಯ ಪಕ್ಷ, ಚುನಾವಣಾ ಅಭ್ಯರ್ಥಿ ಪರವಾಗಿ ಅಥವಾ ಪಕ್ಷದ ಗುರುತಿನೊಂದಿಗೆ ಕಳುಹಿಸುವ ಪೋಟೊವನ್ನು ಸ್ಫರ್ಧೆಗೆ ಪರಿಗಣಿಸಲಾಗುವುದಿಲ್ಲ. ವ್ಯಾಟ್ಸಪ್ ಮುಖಾಂತರವಾಗಿ ಮಾತ್ರವೇ ಪೋಟೊ ಸಲ್ಲಿಸಲು ಅವಕಾಶವಿದೆ ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರು ತಿಳಿಸಿದ್ದಾರೆ.

Continue Reading

Kodagu

ಬಾರ್ ವೆಂಡರ್ ಕೊಲೆ – ಆರೋಪಿ ಬಂಧನ

Published

on

ವರದಿ : ಟಿ.ಆರ್ ಪ್ರಭುದೇವ್ ಕುಶಾಲನಗರ
=================
ಕುಶಾಲನಗರದ ಹೃದಯ ಭಾಗದಲ್ಲಿರುವ ಖಾಸಗಿ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ವೆಂಡರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಬರ್ಬರ ಹತ್ಯೆ ನಡೆದ ಘಟನೆ ಭಾನುವಾರ ನಡೆದಿದೆ.
ಮೂಲತ ಸೋಮವಾರಪೇಟೆಯ ನಿವಾಸಿ ಸಂತೋಷ್ (42) ಕೊಲೆಯಾದ ದುರ್ದೈವಿ.
ಸಂತೋಷ್ ಹಲವಾರು ವರ್ಷಗಳಿಂದ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಭಾನುವಾರ ಕೂಡ ಕೆಲಸದಲ್ಲಿ ಇದ್ದು ಬಾರ್ ಮುಚ್ವುವ ಸಂದರ್ಭದಲ್ಲಿ ಅಂದಾಜು ರಾತ್ರಿ 11.25 ರ ಸಮಯದಲ್ಲಿ ಬಾರ್‌ನಲ್ಲಿ ಮದ್ಯ ಸೇವಿಸುತ್ತಿದ್ದ ಜನತಾ ಕಾಲೋನಿಯ ನಿವಾಸಿ ಹರ್ಷ (33) ನಡುವೆ ಕ್ಷುಲ್ಲಕ ಕಾರಣಕ್ಕೆ ಮಾತಿನ ಚಕಮಕಿ ನಡೆದಿದೆ. ಬಾರ್ ಸಮೀಪದಲ್ಲಿ ಕೈ ತೊಳೆಯುವ ಜಾಗದಲ್ಲಿ ಹರ್ಷ ಸಂತೋಷ್ ಮೇಲೆ ದೊಡ್ಡ ಬಿಯರ್ ಗ್ಲಾಸ್‌ನಿಂದ ತಲೆಗೆ ಹೊಡೆದು ನಂತರ ಚೂರಾದ ಗ್ಲಾಸ್‌ನ ಹರಿತವಾದ ಭಾಗದಿಂದ ಕುತ್ತಿಗೆ ಇರಿದಿದ್ದಾನೆ ಎಂದು ಪೋಲಿಸ್ ಮೂಲಗಳು ತಿಳಿಸಿದೆ.
ಘಟನೆಯಲ್ಲಿ ತೀವ್ರವಾಗಿ ರಕ್ತಸ್ರಾವಗೊಂಡ ಸಂತೋಷ್‌ನನ್ನು ಹೋಟೆಲ್ ಮಾಲೀಕರು ಕೂಡಲೇ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಕೇಂದ್ರ ಮಡಿಕೇರಿಗೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಸಂತೋಷ್ ಮೃತಪಟ್ಟಿದ್ದಾರೆ.
ಆರೋಪಿಹರ್ಷನನ್ನು ಪೋಲಿಸ್ ಬಂದಿಸಿದ್ದಾರೆ. ಘಟನಾ ಸ್ಥಳಕ್ಕೆ ಎಎಸ್‌ಪಿ.ಸುಂದರ್ ರಾಜ್, ಡಿವೈಎಸ್‌ಪಿ ಗಂಗಾಧರಪ್ಪ, ಸಿ.ಐ ಪ್ರಕಾಶ್ ಭೇಟಿ ಪರಿಶೀಲನೆ ನಡೆಸಿದರು.

Continue Reading

Kodagu

ನೆಲಜಿ ಗ್ರಾಮದಲ್ಲಿ ಕಾಡಾನೆ ದಾಳಿಗೆ ಕಾರು ದ್ವಂಸ

Published

on

ವರದಿ :ಝಕರಿಯ ನಾಪೋಕ್ಲು

ನಾಪೋಕ್ಲು :ನಾಪೋಕ್ಲು ಬಳಿಯ ನೆಲಜಿ ಗ್ರಾಮದ ಮನೆಯಂಗಳದ ಶೆಡ್ ನಲ್ಲಿ ನಿಲ್ಲಿಸಿದ್ದ ಕಾರನ್ನು ಕಾಡಾನೆಗಳು ದಾಳಿ ನಡೆಸಿ ಧ್ವಂಸಗೊಳಿಸಿದ ಘಟನೆ ನಡೆದಿದೆ.

ನೆಲಜಿ ಗ್ರಾಮದ ಕೈಬುಲಿರ ದಿನೇಶ್ ಎಂಬುವವರ ಮನೆಯ ಪಕ್ಕದ ಶೆಡ್ ನಲ್ಲಿ ನಿಲ್ಲಿಸಿದ್ದ ಕಾರಿನ ಮೇಲೆ ದಾಳಿನಡೆಸಿದ ಕಾಡಾನೆಗಳು ದ್ವಂಸಗೋಳಿಸಿದೆ. ಇದರಿಂದ ಕಾರಿನ ಹಿಂಬದಿ ಜಖಂಗೊಂಡಿದ್ದು ಶೆಡ್ ನ ಮೇಲ್ಚಾವಣಿಗೂ ಹಾನಿಯಾಗಿ ಅಪಾರ ನಷ್ಟ ಉಂಟಾಗಿದೆ.
ಸೋಮವಾರ ಮುಂಜಾನೆ ನೆಲಜಿ ಗ್ರಾಮದ ಕೈಬುಲಿರ ಐನ್ ಮನೆ ಬಳಿಯಲ್ಲಿ ಕಾಡಾನೆಗಳ ಹಿಂಡು ಕಂಡುಬಂದಿದ್ದು ಮನೆಯ ಆವರಣದಲ್ಲೂ ಕಾಡಾನೆಗಳು ಜಾಲಾಡಿ ನಷ್ಟ ಉಂಟು ಮಾಡಿದೆ.

ನೆಲಜಿ ಗ್ರಾಮದಲ್ಲಿ ಇತ್ತೀಚೆಗೆ ಕಾಡಾನೆಗಳು ನಿರಂತರ ಧಾಳಿ ನಡೆಸುತ್ತಾ ಗ್ರಾಮಸ್ಥರ ತೋಟಗಳಿಗೆ ಲಗ್ಗೆ ಇಟ್ಟು ಲಕ್ಷಾಂತರ ರುಪಾಯಿ ನಷ್ಟ ಉಂಟುಮಾಡಿದೆ. ಸಂಬಂಧಪಟ್ಟ ಅರಣ್ಯ ಇಲಾಖೆ ಕೂಡಲೇ ಕಾಡಾನೆಗಳನ್ನು ಕಾಡಿಗಟ್ಟುವ ಅಥವಾ ಹಿಡಿದು ಸ್ಥಳಾಂತರಿಸಲು ಕ್ರಮ ಕೈಗೊಳ್ಳದೇ ಹೋದರೆ ನೆಲಜಿ ಮುಖ್ಯ ರಸ್ತೆಯನ್ನು ತಡೆದು ಉಗ್ರ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

Continue Reading

Trending

error: Content is protected !!