Connect with us

Mysore

ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಶಿಕ್ಷಕಿಗೆ ಜ್ಞಾನಯೋಗಿ ಶಿವಶರಣೆ ನೀಲಾಂಬಿಕೆ ಪ್ರಶಸ್ತಿ

Published

on

ನಂಜನಗೂಡು: ಮಾ.30

ನಂಜನಗೂಡು ತಾಲ್ಲೂಕಿನ ಹುರ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಶಿಕ್ಷಕಿ ಪದ್ಮ ನೆಲ್ಲಿತಾಳಪುರ ಅವರಿಗೆ ಜ್ಞಾನ ಯೋಗಿ ಶಿವಶರಣೆ ನೀಲಾಂಬಿಕೆ ಪ್ರಶಸ್ತಿ ಲಭಿಸಿದೆ. ವಿಶ್ವ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆ, ವಿಶ್ವ ಕನ್ನಡ ಕಲಾ ಸಂಸ್ಥೆ ವತಿಯಿಂದ ಬೆಂಗಳೂರಿನ ಮಹಾಲಕ್ಷ್ಮಿ ಕಲ್ಯಾಣ ಮಂಟಪದಲ್ಲಿ ನಡೆದ ವಿಶ್ವಕನ್ನಡ ಪ್ರಥಮ ರಾಜ್ಯಮಟ್ಟದ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳಾ ಸಾಧಕೀಯರನ್ನು ಗುರುತಿಸಿ ಸುಮಾರು 29 ಮಹಿಳಾ ಸಾಧಕೀಯರಿಗೆ ಪ್ರಶಸ್ತಿ ನೀಡಲಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಪರಿಗಣಿಸಿ, ವಿಶ್ವ ಕನ್ನಡ ಪ್ರಥಮ ರಾಜ್ಯಮಟ್ಟದ ಮಹಿಳಾ ಸಾಹಿತ್ಯ ಸಮ್ಮೇಳನ ಮತ್ತು ಪುಸ್ತಕ ಲೋಕಾರ್ಪಣೆ, ಸಾಧಕರಿಗೆ ಸನ್ಮಾನ, ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಿಕ್ಷಕಿ ಪದ್ಮ ನೆಲ್ಲಿತಾಳಪುರ ಅವರನ್ನು ಗುರುತಿಸಿ ಜ್ಞಾನಯೋಗಿ ಶಿವಶರಣೆ ನೀಲಾಂಬಿಕೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೈ‌.ಬಿ‌.ಹೆಚ್ ಜಯದೇವ್, ಸಮ್ಮೇಳನದ ಅಧ್ಯಕ್ಷೆ ಕಮಲಾರಾಜೇಶ್, ಗೌರವಾಧ್ಯಕ್ಷ ಆರ್ ಶೈಲಜಾ ಬಾಬು, ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ.ಈ ರವೀಶ್ ಪ್ರಶಸ್ತಿ ನೀಡಿ ಅಭಿನಂದಿಸಿದ್ದಾರೆ.

ನಂಜನಗೂಡು ಮಹದೇವಸ್ವಾಮಿ ಪಟೇಲ್.

Continue Reading
Click to comment

Leave a Reply

Your email address will not be published. Required fields are marked *

Mysore

ಜಾತಿ ಮತಗಳನ್ನ ಮೀರಿದಂತ ಸತ್ವಪೂರ್ಣ ಕವಿ ಅಕ್ಬರ್‌ ಅಲಿ: ಡಾ. ಸಿ.ಪಿ ಕೃಷ್ಣಕುಮಾರ್

Published

on

ಮೈಸೂರು: ಅಕಬರ್ ಅಲಿಯವರ ಸಾಹಿತ್ಯಗಳು‌ ಅಂದಿನ ಸಮಾಜದಲ್ಲಿನ ಜಾತಿ ಧರ್ಮ ವ್ಯವಸ್ತೆಗೆ ವಿರುದ್ದವಾಗಿ. ಎಲ್ಲರಿಗು ಸಮಾನತೆಯನ್ನು ನೀಡುವ ಕಲ್ಪನೆ ಹೊಂದಿದ್ದ, ಜಾತಿ ಮತಗಳನ್ನ ಮೀರಿದಂತ ಸತ್ವಪೂರ್ಣ ಕವಿ ಎಂದು ಎಂದು ಹಿರಿಯ ಸಾಹಿತಿ ಡಾ. ಸಿ.ಪಿ ಕೃಷ್ಣಕುಮಾರ್ ಹೇಳಿದರು.

ವಿಜಯನಗರದಲ್ಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಹಿಳಾ ಘಟಕ ಹಾಗೂ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಚುಟುಕು ರತ್ನ ಡಾ.ಎಂ ಅಕಬರ್ ಅಲಿ ಅವರ ಶತಮಾನೋತ್ಸವ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಕಬರ್ ಅಲಿಯವರು ಸಾಹಿತ್ಯ ಎಲ್ಲರಿಗೂ ಸಲ್ಲುತ್ತದೆ ಎಂದರೂ ತಪ್ಪಾಗಲಾರದು. ಆಧುನಿಕ ಕನ್ನಡ ಸಾಹಿತ್ಯದ ಆದ್ಯರು. ಮನನೀಯ ಕವಿ ಅಕಬರ್ ಅಲಿ ಎಂದು ಶ್ಲಾಘಿಸಿದರು.

ಸ್ತ್ರೀಯರಿಗೆ ಕಾನೂನಿನ ಅನುಕೂಲಗಳಿದ್ದರು ಅವರನ್ನು, ಅಗೌರವವಾಗಿ ಕಾಣಲಾಗುತ್ತದೆ. ಅಂತಹದರಲ್ಲಿ ಅಕಬರ್ ಅವರಿಗೆ ಸ್ತ್ರೀಯರ ಮೇಲೆ ಆದರ, ಗೌರವ ಇಟ್ಟುಕೊಂಡಿದ್ದ ಸ್ತ್ರೀ ಸಂವೇದಿಗಳು ಎಂದು ತಿಳಿಸಿದರು.

ನನ್ನ ಸಹದ್ಯೋಗಿಗಳು ಹಾಗೂ ಅವರ ಸರಳತೆ, ಸಜ್ಜನಿಕೆಯನ್ನು ನಾನು ಕಂಡುಂಡವನು. ಒಂದು ಮಾತಿನಲ್ಲಿ ಹೇಳುವುದಾದರೆ ಅವರು ಸಮತೋಲನ, ಸಂಪನ್ನನಾದಂತಹ ಸಮನ್ವಯ ಸಾಹಿತಿ ಎಂಬುದನ್ನ ಒಪ್ಪಬೇಕು. ಚುಟುಕು ಸಾಹಿತ್ಯದ ಎರಡು ಕಣ್ಣುಗಳು ದಿನಕರ ದೇಸಾಯಿ ಹಾಗೂ ಅಕಬರ್ ಅಲಿಯವರು. ಇವರ ಸಾಹಿತ್ಯದಲ್ಲಿ ಮತ ಧರ್ಮಗಳು ಗೌಣ. ಅವರಲ್ಲಿ ಮುಖ್ಯವಾದದ್ದು ಕವಿಧಾಮ, ಕವಿ ಮನೋಧರ್ಮ ಎಂದು ಹೆಮ್ಮೆಪಟ್ಟರು.

Continue Reading

Mysore

ಯೋಗ ವೈದ್ಯರತ್ನ ಪ್ರಶಸ್ತಿ ಪ್ರದಾನ

Published

on

ಮೈಸೂರು: ಯೋಗ ಒಕ್ಕೂಟವು ರಾಮಕೃಷ್ಣನಗರದ ಪರಮಹಂಸ ಯೋಗ ಮಹಾವಿದ್ಯಾಲಯದಲ್ಲಿ ಭಾನುವಾರ ಡಾ.ಎ.ಎಸ್. ಚಂದ್ರಶೇಖರ್‌ ಹಾಗೂ ಡಾ.ಜಯಶ್ರೀ ದಂಪತಿಗೆ ಯೋಗ ವೈದ್ಯರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಚಂದ್ರಶೇಖರ್‌ ಅವರಿಗೆ 70ನೇ ಹಾಗೂ ಜಯಶ್ರೀ ಅವರಿಗೆ 60ನೇ ಜನ್ಮದಿನವಾಗಿದ್ದು, ಈ ದಂಪತಿಯೂ ಆಯುರ್ವೇದ ವೈದ್ಯರಾಗಿದ್ದುಕೊಂಡು ಕಳೆದ ಮೂರ್ನಾಲ್ಕು ದಶಕಗಳಿಂದ ಸಮಾಜಮುಖಿ ಮಾಡುತ್ತಿರುವ ಸೇವೆ ಹಾಗೂ ಯೋಗ ಕ್ಷೇತ್ರಕ್ಕೆ ನೀಡಿರುವ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಯಿತು.

ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್‌. ಸುಬ್ರಹ್ಮಣ್ಯ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರದ ಸಹಾಯಕ ನಿರ್ದೇಶಕ ಡಾ.ವಿ. ಲಕ್ಷ್ಮೀನಾರಾಯಣ ಶೆಣೈ, ಜೆಎಸ್ಎಸ್‌ ಆಯುರ್ವೇದ ಆಸ್ಪತ್ರೆಯ ನಿವೃತ್ತ ಪ್ರಾಧ್ಯಾಪಕ ಡಾ. ಸದಾನಂದ್‌, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌, ಸುಯೋಗ ಆಸ್ಪತ್ರೆಯ ಅಧ್ಯಕ್ಷ ಡಾ.ಎಸ್.ಪಿ. ಯೋಗಣ್ಣ, ಎಂಐಟಿ ಅಧ್ಯಕ್ಷ ಡಾ.ಎಸ್. ಮುರಳಿ, ಹಿಮಾಲಯ ಪ್ರತಿಷ್ಠಾನ ಅಧ್ಯಕ್ಷ ಎನ್. ಅನಂತ ಮುಖ್ಯ ಅತಿಥಿಯಾಗಿದ್ದರು.

ಸುಮನಾ ಹಾಗೂ ಆಶಾದೇವಿ ಪ್ರಾರ್ಥಿಸಿದರು. ಮೈಸೂರು ಯೋಗ ಒಕ್ಕೂಟದ ಕಾರ್ಯಾಧ್ಯಕ್ಷ ಶಿವಪ್ರಕಾಶ್‌ ಕಾರ್ಯಕ್ರಮ ನಿರೂಪಿಸಿದರು. ಗೌರವಾಧ್ಯಕ್ಷ ಟಿ. ಜಲೇಂದ್ರಕುಮಾರ್‌ ಸ್ವಾಗತಿಸಿ, ಪ್ರಾಸ್ತಾವಿಕ ಭಾಷಣ ಮಾಡಿದರು. ಪ್ರಶಸ್ತಿ ಪುರಸ್ಕೃತರನ್ನು ಪ್ರಧಾನ ಕಾರ್ಯದರ್ಶಿ ಯೋಗಕುಮಾರ್‌ ಹಾಗೂ ಆಶಾದೇವಿ ಪರಿಚಯಿಸಿದರು. ಅಧ್ಯಕ್ಷ ಕೆ.ಜಿ. ದೇವರಾಜು, ಕಾರ್ಯಾಧ್ಯಕ್ಷ ಬಿ.ಪಿ. ಮೂರ್ತಿ, ಖಜಾಂಚಿ ನರಸಿಂಹ, ಜಿಎಸ್ಎಸ್‌ ಸಂಸ್ಥಾಪಕ ಶ್ರೀಹರಿ ದ್ವಾರಕನಾಥ್‌, ಬಿ. ಶಾಂತಾರಾಂ, ಶಶಿಕುಮಾರ್‌ ಸೇರಿದಂತೆ ಮೈಸೂರು ಯೋಗ ಒಕ್ಕೂಟದ ಎಲ್ಲಾ ಪದಾಧಿಕಾರಿಗಳು, ನಗರದ ವಿವಿಧ ಯೋಗ ಒಕ್ಕೂಟದ ಪದಾಧಿರಾಗಿಗಳು, ವಿಧಾನ ಪರಿಷತ್‌ ಮಾಜಿ ಸದಸ್ಯ ತೋಂಟದಾರ್ಯ ಮತ್ತಿತರರು ಪಾಲ್ಗೊಂಡಿದ್ದರು

Continue Reading

Mysore

ಕ್ಷೇತ್ರಗಳ ಪುನರ್‌ ವಿಂಗಡಣೆ ವಿಚಾರ: ಕೇಂದ್ರದ ವಿರುದ್ಧ ಮನು ಸಿಂಗ್ವಿ ಕಿಡಿ

Published

on

ಮೈಸೂರು :
ಎಐಸಿಸಿ ರಾಷ್ಟ್ರೀಯ ವಕ್ತಾರ, ರಾಜ್ಯಸಭಾ ಸದಸ್ಯ ಹಾಗು ಹಿರಿಯ ನ್ಯಾಯವಾದಿ ಅಭಿಷೇಕ್ ಮನು ಸಿಂಗ್ವಿ ಮೈಸೂರಿನಲ್ಲಿ ಸುದ್ದಿಗೋಷ್ಠಿ.
ಮೈಸೂರಿನ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ ಜೆ ವಿಜಯ್ ಕುಮಾರ್, ನಗರಾಧ್ಯಕ್ಷ ಆರ್ ಮೂರ್ತಿ ಸೇರಿದಂತೆ ಹಲವರು ಉಪಸ್ಥಿತಿ.

ಕೇಂದ್ರ ಸರ್ಕಾರ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆಗೆ ಮುಂದಾಗುವ ಮೂಲಕ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಉಂಟು ಮಾಡುತ್ತಿದೆ.*
ಎಐಸಿಸಿ ವಕ್ತಾರ ಅಭಿಷೇಕ್ ಮನು ಸಿಂಗ್ವಿ ಮೈಸೂರಿನಲ್ಲಿ ಹೇಳಿಕೆ.
ಕೇಂದ್ರ ಗೃಹಸಚಿವ ಅಮಿತ್ ಶಾ ಕ್ಷೇತ್ರ ಪುನರ್ ವಿಂಗಡಣೆ ಬಗ್ಗೆ ಅರ್ಧ ಸತ್ಯವನ್ನಷ್ಟೇ ಹೇಳುತ್ತಿದ್ದಾರೆ.
ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಲ್ಲಿನ ಕ್ಷೇತ್ರಗಳು ಕಡಿಮೆಯಾಗುವುದಿಲ್ಲ ಎನ್ನುತ್ತಾರೆ.
ಆದರೆ ಉತ್ತರದ ರಾಜ್ಯಗಳಲ್ಲಿ ಕ್ಷೇತ್ರಗಳು ಹೆಚ್ಚಾಗುವ ಬಗ್ಗೆ ಮೌನವಾಗಿದ್ದಾರೆ.
ಎಸ್ ಆರ್ ಬೊಮ್ಮಾಯಿ ಕೇಸ್ ನಲ್ಲಿ ಸುಪ್ರೀಂ ಕೋರ್ಟ್ ನೀಡಿದ ಒಕ್ಕೂಟ ವ್ಯವಸ್ಥೆಯ ತೀರ್ಪಿಗೆ ವ್ಯತಿರಿಕ್ತವಾಗಿ ಕ್ಷೇತ್ರ ಪುನರ್ ವಿಂಗಡಣೆಯಾಗುತ್ತಿದೆ ಎಂದು ಪ್ರತಿಪಾದಿಸಿದ ಅಭಿಷೇಕ್ ಮನು ಸಿಂಗ್ವಿ.

ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಲೋಕಾಯುಕ್ತ ತನಿಖಾ ವರದಿಯಲ್ಲಿ ಕ್ಲೀನ್ ಚಿಟ್ ನೀಡಿದ ವಿಚಾರ.
ಬಿಜೆಪಿಯಿಂದ ಸಿಎಂ ಸಿದ್ದರಾಮಯ್ಯ ರಾಜಕೀಯ ಜೀವನದ ಮೇಲೆ ಕಪ್ಪುಚುಕ್ಕೆ ತರುವ ಪ್ರಯತ್ನ ನಡೆಯಿತು.
ಸಿದ್ದರಾಮಯ್ಯ ತಪ್ಪು ಇಲ್ಲದಿದ್ದರೂ ವಿವಾದಕ್ಕೆ ಎಳೆದರು.
ಬಿಜೆಪಿಯ ಈ ಪ್ರಯತ್ನಗಳು ವಿಫಲವಾದವು.
ಇದೀಗ ಲೋಕಾಯುಕ್ತವೂ ಕ್ಲೀನ್ ಚಿಟ್ ಕೊಟ್ಟಿದೆ ಎಂದ ಅಭಿಷೇಕ್ ಮನು ಸಿಂಗ್ವಿ.

ಇವಿಎಂ ಬಗ್ಗೆ ನಮಗೆ ತಕರಾರು ಇಲ್ಲ.
ಬದಲಿಗೆ ಕೆಲವು ಅನುಮಾನಗಳು ಇವೆ.
ಚುನಾವಣೆ ಪ್ರಕ್ರಿಯೆಗಳ ಬಗ್ಗೆಯೇ ನಮಗೆ ಅನುಮಾನವಿದೆ.
ಈ ಬಗ್ಗೆ ನಾವು ಉತ್ತರ ಬಯಸಿದ್ದೇವೆ.
ಮಹಾರಾಷ್ಟ್ರ ಸೇರಿದಂತೆ ಕೆಲವು ರಾಜ್ಯಗಳ ಚುನಾವಣೆಯಲ್ಲಿ ಮತದಾರರ ಸಂಖ್ಯೆ ಹೆಚ್ಚಾಗಿದೆ.
ಇದ್ದಕ್ಕಿದ್ದಂತೆ ಹೆಚ್ಚಾಗಿರುವುದರ ಬಗ್ಗೆ ನಮಗೆ ಅನುಮಾನವಿದೆ.
ಚುನಾವಣೆಗೆ ಬಿಜೆಪಿ ಬಳಿ ಹಣವಿದೆ.
ಸಿಬಿಐ, ಇಡಿ ಯನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ.
ಕಾಂಗ್ರೆಸ್ ರಾಷ್ಟೀಯ ವಕ್ತಾರ ಅಭಿಷೇಕ್ ಮನು ಸಿಂಗ್ವಿ ಮೈಸೂರಿನಲ್ಲಿ ಹೇಳಿಕೆ.

Continue Reading

Trending

error: Content is protected !!