Connect with us

Mysore

ವಿಜೃಂಭಣೆಯಿಂದ ಜರುಗಿದ ಶ್ರೀ ಅವಿಜ್ಞ ಸಾಯಿಬಾಬಾ ಪ್ರತಿಷ್ಠಾಪನಾ ಮಹೋತ್ಸವ

Published

on

ನಂಜನಗೂಡು ಮೇ.19

ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ಬಿಳಿಗೆರೆ ಹೋಬಳಿಯ ಸರಗೂರು ಗ್ರಾಮದಲ್ಲಿ ಶ್ರೀ ಅವಿಜ್ಞ ಸಾಯಿ ಕ್ಷೇತ್ರದಲ್ಲಿ ಶ್ರೀ ಅವಿಜ್ಞ ಸಾಯಿಬಾಬಾ ಮೂರ್ತಿಯ ಪ್ರತಿಷ್ಠಾಪನಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು. ಇಂದು ಮುಂಜಾನೆಯಿಂದಲೇ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲಾಯಿತು. ಮಹಾಗಣಪತಿ, ನವಗ್ರಹ,ನಾಗದೇವತೆ ಮತ್ತು ಶಿಖರ ಕಳಶ ಪ್ರತಿಷ್ಠಾಪನೆ ಮಾಡಲಾಯಿತು.


ಗೋ ದೇವತೆ ಗಂಗಾ ಪೂಜೆಯೊಂದಿಗೆ ಅಗ್ರೋದಕ ಸಹಿತ ಯಾಗ ಶಾಲೆ ಪ್ರವೇಶ ಮಾಡಿ ಗಣಪತಿ ಪೂಜೆ ಮಾಡಿ ಸ್ವಸ್ತಿ ಪುಣ್ಯಹ ವಾಹನ, ಪಂಚಗವ್ಯ ಸಾಧನ, ವಾಸ್ತು ಪೂಜೆ ಮತ್ತು ರಾಕ್ಸೊಘ್ನ ಹೋಮ, ಪರ್ಯಾಗ್ನಿ ಕರಣ ಶಿಖರ ಕಲಶ ಹಾಗೂ ನೂತನ ಶಿಲಾಮೂರ್ತಿಗೆ ಜಲಾದಿ ವಾಸ, ಧಾನ್ಯ ದಿವಾಸ, ಮೂರ್ತಿ ಸಂಸ್ಕಾರ ನ್ಯಾಸ ವಿಧಿ ಶಯನಾದಿ ವಾಸ ಮಾಡಲಾಯಿತು . ಬೆಳಿಗ್ಗೆ 4.50 ರಿಂದ 5.50ರ ವರೆಗೆ ಸಲ್ಲುವ ಬ್ರಾಹ್ಮೀ ಮುಹೂರ್ತ ಶುಭ ಲಗ್ನದಲ್ಲಿ ಅಷ್ಟ ಬಂದ ಪ್ರತಿಷ್ಠಾಪನೆ

ನೆರವೇರಿಸಿದರು. ಅಯೋಧ್ಯೆ ಶ್ರೀಬಾಲ ರಾಯನ ಖ್ಯಾತಿಯ ಶಿಲ್ಪಿ ಅರುಣ್ ಯೋಗಿರಾಜ್ ರವರ ಕೈಚಳಕದಲ್ಲಿ ಮೂಡಿ ಬಂದಿರುವ ಶ್ರೀ ಸಾಯಿಬಾಬಾ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ಮಹಾ ಮಂಗಳಾರತಿ

ಮಾಡಲಾಯಿತು. ಆಗಮಿಸಿದ ಭಕ್ತರಿಗೆ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.

ನಂಜನಗೂಡು ಮಹದೇವಸ್ವಾಮಿ ಪಟೇಲ್.

Continue Reading
Click to comment

Leave a Reply

Your email address will not be published. Required fields are marked *

Mysore

ಚಂದ ವಸೂಲಿಗೆ ಬಂದವರಿಗೆ ಹಣ ಕೊಟ್ಟು ವಂಚನೆಗೆ ಒಳಗಾದರೆ ನಾವು ಜವಾಬ್ದಾರರಲ್ಲ: ಅತ್ತಹಳ್ಳಿ ದೇವರಾಜ್

Published

on

ತಿ.ನರಸೀಪುರ: ಕಬ್ಬು ಬೆಳೆಗಾರರ ಸಂಘದ ಹೆಸರು ಬಳಕೆ ಮಾಡಿಕೊಂಡು ಅಕ್ರಮವಾಗಿ ಚಂದ ವಸೂಲಿ ಮಾಡುತ್ತಿದ್ದಾರೆ. ಇದಕ್ಕೆಅಧಿಕಾರಿಗಳಾಗಲಿ ಹಾಗೂ ಸಾರ್ವಜನಿಕರಾಗಲಿ ಯಾರು ಕೂಡ ಸ್ಪಂದಿಸಬಾರದು ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್ ತಿಳಿಸಿದರು.

ಪಟ್ಟಣದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಹೆಸರಿನಲ್ಲಿ ವಿಶ್ವ ರೈತ ದಿನಾಚರಣೆ (ರೈತರ ಹಬ್ಬ) ಆಚರಣೆ ಅಂಗವಾಗಿ ಯಾವುದೇ ರಾಷ್ಟ್ರೀಯ ಹಬ್ಬಗಳ ಆಚರಣೆ-ಇನ್ನಿತರೆ ಸಂಘದ ಸಭೆ ಸಮಾರಂಭಗಳನ್ನು ನಡೆಸಲು ಯಾವುದೇ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು, ನೌಕರರು, ರಾಜಕಾರಣಿಗಳು, ಜನಪ್ರತಿನಿಧಿಗಳು ಹಾಗೂ ಖಾಸಗಿ ಸಂಘ ಸಂಸ್ಥೆಗಳಲ್ಲಿ ಕಬ್ಬು ಬೆಳೆಗಾರರ ಸಂಘದ ಹೆಸರಿನಲ್ಲಿ ಚಂದಾ ವಸೂಲಿ ಮಾಡುತ್ತಿರುವುದು ಕೇಳಿ ಬರುತ್ತಿದೆ. ನಮ್ಮ ಸಂಘಟನೆಯೂ ಯಾರ ಬಳಿಯೂ ಚಂದ ವಸೂಲಿ ಮಾಡುವುದಿಲ್ಲ. ಅವಶ್ಯಕತೆ ಬಿದ್ದಾಗ ಸಂಘಟನೆ ಪದಾಧಿಕಾರಿಗಳು ಹಾಗೂ ರೈತರಿಂದಲೇ ಹಣ ಸಂಗ್ರಹಿಸಿ ಖರ್ಚು ಮಾಡಿ ಸಾಮಾಜಿಕ ಜಾಲತಾಣದ ಮೂಲಕ ಲೆಕ್ಕವನ್ನು ಒಪ್ಪಿಸುತ್ತೇವೆ. ಇದು ನಮ್ಮ ಸಂಘದ ಸಿದ್ಧಾಂತ. ಚಂದ ವಸೂಲಿಗೆ ಬಂದವರಿಗೆ ಹಣ ಕೊಟ್ಟು ವಂಚನೆಗೆ ಒಳಗಾದರೆ ಅದಕ್ಕೆ ನಾವು ಜವಾಬ್ದಾರರಲ್ಲ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘ, ಸಂಘದ ಪರವಾಗಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್ ತಿಳಿಸಿದ್ದಾರೆ.

ಮುಂದುವರೆದು ಮಾತನಾಡಿ ಇತ್ತೀಚಿನ ದಿನಗಳಲ್ಲಿ ನಮ್ಮ ರಾಜ್ಯ ಕಬ್ಬು ಬೆಳೆಗಾರರ ಸಂಘದ ಹೆಸರಿನಲ್ಲಿ ಪುಸ್ತಕ-ಬಿಡುಗಡೆ ಮಾಡುತ್ತೇವೆ ಎಂದು ಅಲ್ಲದೆ ರಾಷ್ಟ್ರೀಯ ಹಬ್ಬಗಳ ಆಚರಣೆ ಹೆಸರಿನಲ್ಲಿ ಹಣ ಮತ್ತು ದವಸ ಧಾನ್ಯಗಳು ಸೇರಿದಂತೆ ಚಂದಾ ವಸೂಲಿ ಮಾಡುತ್ತಿರುವುದು ಕೇಳಿ ಬಂದಿದೆ ಇದಕ್ಕೆ ಸಂಘಟನೆಯಾಗಲಿ, ಸಂಘದ ಪದಾಧಿಕಾರಿಗಳಾಗಲಿ ಜವಾಬ್ದಾರರಲ್ಲ ಎಂದು ತಿಳಿಸಲು ಬಯಸುತ್ತೇವೆ.

ಆದ್ದರಿಂದ ಈ ರೀತಿಯ ವಂಚನೆಗೆ ಒಳಗಾಗದೆ ಇರಲು ಅಂತವರ ಮೇಲೆ ಅನುಮಾನ ಬಂದರೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳನ್ನು ಕೇಳಿ ತಿಳಿದುಕೊಳ್ಳಬೇಕು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್ ಮನವಿ ಮಾಡಿದರು.

Continue Reading

Mysore

ಬೆಂಗಳೂರಿನಲ್ಲೇ ಐಪಿಎಲ್ ಉದ್ಘಾಟನಾ ಪಂದ್ಯ: ವೆಂಕಟೇಶ್ ಪ್ರಸಾದ್

Published

on

ಮೈಸೂರು: ಮುಂಬರುವ ಐಪಿಎಲ್ ಟೂರ್ನಿಯ ಉದ್ಘಾಟನಾ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ಅಧ್ಯಕ್ಷ ವೆಂಕಟೇಶ್ ಪ್ರಸಾದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ಪ್ರತಿ ಬಾರಿಯೂ ಐಪಿಎಲ್ ಟ್ರೋಫಿ ಗೆದ್ದ ತಂಡದ ತವರು ಮೈದಾನದಲ್ಲಿ ಉದ್ಘಾಟನಾ ಪಂದ್ಯ ನಡೆಯುತ್ತಿತ್ತು. ಆದರೆ ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಸಂಭವಿಸಿದ ಕಾಲ್ತುಳಿತದ ಘಟನೆಯಿಂದ ಸಾಕಷ್ಟು ಗೊಂದಲ ಉಂಟಾಗಿತ್ತು. ಹೀಗಾಗಿ ನಮ್ಮ ತಂಡ ಚುನಾವಣೆಯಲ್ಲಿ ಗೆದ್ದ ಬಳಿಕ ರಾಜ್ಯ ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದೇವೆ ಎಂದು ಹೇಳಿದರು.

ಸಿಎಂ, ಡಿಸಿಎಂ ಈಗಾಗಲೇ ಪಂದ್ಯಾವಳಿ ನಡೆಸಲು ಅನುಮತಿ ನೀಡಿದ್ದು, ಈ ಬಗ್ಗೆ ಗೃಹ ಸಚಿವರೊಂದಿಗೂ ಫೋನ್ ಮೂಲಕ ಮಾತನಾಡಿದ್ದೇನೆ. ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಈ ಬಾರಿಯ ಐಪಿಎಲ್ ಉದ್ಘಾಟನಾ ಪಂದ್ಯದ ದಿನಾಂಕ ನಿಗದಿ ಆಗಲಿದೆ. ಬಿಸಿಸಿಐ ಸಹ ಬೆಂಗಳೂರಿನಲ್ಲಿ ಈ ಬಾರಿಯ ಉದ್ಘಾಟನೆ ಪಂದ್ಯವನ್ನು ನಡೆಸಲು ಮಾತುಕತೆ ನಡೆಸುತ್ತಿದೆ. ಬೆಂಗಳೂರಿನಲ್ಲಿ ಐಪಿಎಲ್, ಅಂತಾರಾಷ್ಟ್ರೀಯ ಸೇರಿದಂತೆ ಎಲ್ಲಾ ಮಾದರಿ ಪಂದ್ಯಗಳು ನಡೆಯಲಿವೆ ಎಂದರು.

ವಿಜಯ್ ಹಜಾರೆಯಲ್ಲಿ ಕೊಹ್ಲಿ: ಈ ಬಾರಿಯ ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯಲ್ಲಿ ವಿರಾಟ್ ಕೊಹ್ಲಿ ಅವರು ದೆಹಲಿ ತಂಡದಲ್ಲಿ ಆಡುವುದಾಗಿ ತಿಳಿಸಿದ್ದಾರೆ. ಹೀಗಾಗಿ ವಿಜಯ್ ಹಜಾರೆ ಪಂದ್ಯಕ್ಕಾಗಿ ಕೊಹ್ಲಿ ಅವರು ಬೆಂಗಳೂರಿಗೆ ಬರಲಿದ್ದು, ಚಿನ್ನಸ್ವಾಮಿ ಸೇರಿದಂತೆ ಬೆಂಗಳೂರಿನಲ್ಲಿರುವ ಮೂರು ಕ್ರೀಡಾಂಗಣದಲ್ಲಿ ಪಂದ್ಯ ಎಲ್ಲಿ ನಡೆಯಲಿದೆ ಎಂಬ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ ಎಂದು ವೆಂಕಟೇಶ್ ಪ್ರಸಾದ್ ತಿಳಿಸಿದರು.


ಮೈಸೂರು ಸ್ಟೇಡಿಯಂ ಬಗ್ಗೆ ಚರ್ಚೆ: ಮೈಸೂರಿನಲ್ಲಿ ಅಂತರಾಷ್ಟಿçÃಯ ಗುಣಮಟ್ಟದ ಸ್ಟೇಡಿಯಂ ನಿರ್ಮಾಣದ ಬಗ್ಗೆ ಮಾತುಕತೆಗಳು ನಡೆಯುತ್ತಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಎಲ್ಲಾ ರೀತಿಯ ಕಾರ್ಯಯೋಜನೆ ರೂಪಿಸಿ, ಸುಸಜ್ಜಿತ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸುವ ಕುರಿತು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಕಳೆದ ಮೂರು ವರ್ಷಗಳಿಂದ ಸಾಕಷ್ಟು ಪಂದ್ಯಗಳು ಬೆಂಗಳೂರು ಸೇರಿದಂತೆ ರಾಜ್ಯದ ಬೇರೆ ಬೇರೆ ಕ್ರೀಡಾಂಗಣಗಳಲ್ಲಿ ನಡೆದಿರಲಿಲ್ಲ. ಈ ವಿಷಯದಲ್ಲಿ ಸಾಕಷ್ಟು ಗೊಂದಲಗಳಾಗಿತ್ತು, ನಮ್ಮ ತಂಡ ಈ ಗೊಂದಲಗಳನ್ನು ಬಗೆಹರಿಸಿ ಉತ್ತಮ ಕ್ರಿಕೆಟ್‌ಗೆ ಆದ್ಯತೆ ನೀಡುತ್ತೇವೆ ಎಂದರು.

ಮಹಿಳಾ ಕ್ರಿಕೆಟ್‌ಗೂ ಆದ್ಯತೆ: ನೂತನವಾಗಿ ಅಧಿಕಾರಕ್ಕೆ ಬಂದಿರುವ ನಮ್ಮ ತಂಡದಲ್ಲಿನ ಬಹುತೇಕರು ಕ್ರಿಕೆಟ್ ಹಿನ್ನೆಲೆಯನ್ನು ಹೊಂದಿದ್ದು, ಕ್ರಿಕೆಟ್‌ನ ಬೆಳವಣಿಗೆಗೆ ಅಗತ್ಯವಿರುವ ರೀತಿಯಲ್ಲಿ ರೂಪುರೇಷಗಳನ್ನು ತಯಾರಿಸಿ ಕಾರ್ಯನಿರ್ವಹಿಸುತ್ತೇವೆ. ಕೇವಲ ಪುರುಷರ ಕ್ರಿಕೆಟ್‌ಗೆ ಮಾತ್ರವಲ್ಲದೇ ಮಹಿಳಾ ಕ್ರಿಕೆಟ್‌ನ ಬೆಳವಣಿಗೆಗೂ ಆದ್ಯತೆ ನೀಡಲಿದ್ದು, ಇದಕ್ಕಾಗಿಯೇ ನಮ್ಮ ತಂಡದಲ್ಲಿ ಮಹಿಳಾ ಸದಸ್ಯೆ ಸಹ ಇದ್ದಾರೆ. ಹೀಗಾಗಿ ಎಲ್ಲರ ಸಹಕಾರ, ಸಲಹೆ-ಸೂಚನೆಗಳನ್ನು ಪರಿಗಣಿಸಿ ಮುನ್ನಡೆಯುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೆಎಸ್‌ಸಿಎ ಕಾರ್ಯದರ್ಶಿ ಸಂತೋಷ್ ಮೆನನ್, ಎಂಸಿಎ ಸದಸ್ಯ ಅವಿನಾಶ್ ವೈದ್ಯ, ಕೆಎಸ್‌ಸಿಎ ಮೈಸೂರು ವಲಯ ಸಂಚಾಲಕ ಶ್ರೀನಿವಾಸ್ ಪ್ರದಾದ್ ಇದ್ದರು.

Continue Reading

Mysore

ಮಾನಸ ಯುವ ಸಂವರ್ಧನೆ ಕಾರ್ಯಾಗಾರ ಯಶಸ್ವಿ

Published

on

ಮೈಸೂರು: ಶಾಲಾ- ಕಾಲೇಜು ಹಂತದಲ್ಲಿ ಒಳ್ಳೆಯ ಸ್ನೇಹಿತರನ್ನು ಆಯ್ಕೆ ಮಾಡಿಕೊಂಡರೆ ಗುರಿ ಸಾಧನೆಗೆ ಪೂರಕವಾಗಲಿದೆ ಎಂದು ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ್ ಸಲಹೆ ನೀಡಿದರು.

ಮೈಸೂರು ವಿಶ್ವವಿದ್ಯಾನಿಲಯ ವತಿಯಿಂದ ಮಾನಸ ಗಂಗೋತ್ರಿಯ ಸೆನೆಟ್ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಮಾನಸ ಯುವ ಸಂವರ್ಧನೆ 2025-26 ಯುವ ಸಬಲೀಕರಣ ಮತ್ತು ಔದ್ಯೋಗಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ನೀವು ಶಾಲಾ ಕಾಲೇಜು ಜೀವನದಲ್ಲಿ ಒಳ್ಳೆಯ ಸ್ನೇಹಿತರನ್ನು ಆಯ್ಕೆ ಮಾಡಿಕೊಳ್ಳಬೇಕು. ಆಗ ಓದುವ ವಾತಾವರಣ ತಾನಾಗೇ ಸೃಷ್ಟಿಯಾಗುತ್ತದೆ. ಅದರಲ್ಲೂ ಒಂದೇ ರೀತಿಯ ಗುರಿ ಹೊಂದಿರುವ ಸ್ನೇಹಿತರು ಒಗ್ಗೂಡಿದರೆ ಸಾಧನೆಗೆ ಹೆಚ್ಚು ಅನುಕೂಲವಾಗಲಿವೆ ಎಂದರು.

ಯಾವ ರೀತಿಯ ಸಾಧನೆ ಮಾಡುವ ಗುರಿ ಹೊಂದಿದ್ದೇವೆ. ಆ ರೀತಿಯ ಸ್ನೇಹ ಬಳಗವನ್ನು ಹೊಂದಬೇಕು. ನಾನು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಈ ಅಂಶವೇ ಕಾರಣವಾಯಿತು. ನಾನು ಯುಪಿಎಸ್‌ಸಿ ಪರೀಕ್ಷೆಯನ್ನು ಅಭ್ಯಾಸ ಮಾಡುವಾಗ ನನ್ನೊಂದಿಗೆ ಇದ್ದ ಎಲ್ಲಾ ಸ್ನೇಹಿತರೂ ಒಳ್ಳೆಯ ಹುದ್ದೆಯಲ್ಲಿದ್ದಾರೆ. ಶಾಲಾ ಕಾಲೇಜಿನ ಸ್ನೇಹಿತರು ಒಳ್ಳೆಯ ಹುದ್ದೆಯಲ್ಲಿದ್ದಾರೆ. ಹಾಗಾಗಿ ಸ್ನೇಹಿತರ ಆಯ್ಕೆ ನಮ್ಮ ಭವಿಷ್ಯದ ಮೇಲೆ ಹೆಚ್ಚು ಪರಿಣಾಮ ಉಂಟುಮಾಡುತ್ತದೆ ಎಂದು ಹೇಳಿದರು.

ನಾವು ಯಾವ ರೀತಿ ಸಿದ್ದತೆ ನಡೆಸಬೇಕು ಎಂಬುದರ ಬಗ್ಗೆ ಕರಾರುವಕ್ಕಾದ ನಿಲುವು ಹೊಂದಿರಬೇಕು. ಎಲ್ಲದಕ್ಕಿಂತಲೂ ಮುಖ್ಯವಾಗಿ ಆಸಕ್ತಿ ಮುಖ್ಯವಾಗುತ್ತದೆ. ಅದಕ್ಕಾಗಿ ನೀವು ಬರೆಯುವ ಪುಸ್ತಕದ ಮೊದಲ ಹಾಳೆಯಲ್ಲಿ ನಿಮ್ಮ ಗುರಿ ಏನು ಎಂಬುದನ್ನು ಸ್ಪಷ್ಟವಾಗಿ ಬರೆದುಕೊಳ್ಳಬೇಕು. ಸಾಧ್ಯವಾದಲ್ಲಿ ಅದನ್ನು ಓದುವ ಕೊಠಡಿಯಲ್ಲಿ ನಿಮಗೆ ಕಾಣಿಸುವಂತೆ ಅಂಟಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮ ಆಯೋಜನೆ ಸಮಿತಿಯ ಅಧ್ಯಕ್ಷ ಆನಂದ್ ಮಾತನಾಡಿ, ವಿದ್ಯಾಭ್ಯಾಸದಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಜೀವನದಲ್ಲಿ ಹೇಗೆ ಯಶಸ್ವಿಯಾಗಬೇಕು. ಕೌಶಲ್ಯಗಳನ್ನು ಪಡೆದುಕೊಳ್ಳುವ ಬಗ್ಗೆ, ತರಬೇತಿ ವಿಧಾನಗಳ ಬಗ್ಗೆ ತಿಳಿಸಿಕೊಟ್ಟು ಅವರನ್ನು ಯಶಸ್ಸಿನ ಕಡೆ ಕರೆದೊಯ್ಯುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್, ಕುಲಸಚಿವೆ ಎಂ.ಕೆ.ಸವಿತಾ, ಪರೀಕ್ಷಾಂಗ ಕುಲಸಚಿವ ಪ್ರೊ.ಎನ್.ನಾಗರಾಜ್, ಹಣಕಾಸು ಅಧಿಕಾರಿ ಕೆ.ಎಸ್.ರೇಖಾ ಮುಂತಾದವರಿದ್ದರು.

Continue Reading

Trending

error: Content is protected !!