Uncategorized
ಇಸ್ಪೀಟ್ ಅಡ್ಡೆಯ ಮೇಲೆ ದಾಳಿ: ಐವರ ಬಂಧನ
ಚಾಮರಾಜನಗರ: ತಾಲೂಕಿನ ಮಾದಾಪುರ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಜೂಜಾಟ ಆಡುತ್ತಿದವರ ಮೇಲೆ ಪೊಲೀಸರು ದಾಳಿ ನಡೆಸಿ, ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.

ಮಾದಾಪುರ ಗ್ರಾಮದ ಕೂಸಣ್ಣ ಎಂಬುವವರ ಜಮೀನಿನ ಬಳಿ ಇರುವ ಸಾರ್ವಜನಿಕ ಸ್ಥಳದಲ್ಲಿ ಸಿದ್ದೇಶ್, ಮಹದೇವಪ್ರಸಾದ್, ಪ್ರಭುಸ್ವಾಮಿ, ಮಹದೇವಪ್ಪ, ಕೃಷ್ಣ ಎಂಬುವವರು ಜೂಜಾಟ ಆಡುತ್ತಿದ್ದರು. ಖಚಿತ ಮಾಹಿತಿಯ ಮೇರಗೆ ಪೂರ್ವ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ನವೀನ್ ಅವರು ದಾಳಿ ನಡೆಸಿ, ಸ್ಥಳದಲ್ಲಿದ್ದ 1,200 ರೂ, ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳ ಮೇಲೆ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Hassan
ರಾತ್ರೋರಾತ್ರಿ ಮಿನಿ ಪಿಕಪ್ ವಾಹನದಲ್ಲಿ ಬಂದು ಕಾಫಿ ಕಳ್ಳತನ
50 ಕೆಜಿ ಕಾಫಿಗೆ ಬರೋಬ್ಬರಿ 30000 ದರ ಹೆಚ್ಚಳ ಹಿನ್ನೆಲೆ,
ಮಲೆನಾಡಿನಲ್ಲಿ ಹೆಚ್ಚಾಗುತ್ತಿದ್ದಾರೆ ಕಾಫಿ ಕಳ್ಳರು,
*ರಾತ್ರೋರಾತ್ರಿ ತೋಟಕ್ಕೆ ನುಗ್ಗಿ ಗಿಡದಲ್ಲಿದ್ದ ಕಾಫಿಯನ್ನು ಕಳ್ಳತನ ಮಾಡುತ್ತಾರೆ ಖದೀಮರು*
ವಾಹನದಲ್ಲಿ ಬರ್ತಾರೆ ಸಿಕ್ಕಸಿಕ್ಕ ಕಡೆ ಕಾಫಿ ದೋಚಿ ಹೊರಡುವ ಕಳ್ಳರು,
ಸುದೀಪ್ ಹಾಗೂ ಮಧು ಎಂಬುವರ ಕಾಫಿ ತೋಟದಲ್ಲಿ ಗಿಡದಲ್ಲಿದ್ದ ಕಾಫಿಯನ್ನೇ ಕಳ್ಳತನ ಮಾಡಿದ ಚಾಲಾಕಿ ಕಳ್ಳರು,
ರಾತ್ರೋರಾತ್ರಿ ಮಿನಿ ಪಿಕಪ್ ವಾಹನದಲ್ಲಿ ಬಂದು ಕಳ್ಳತನ ಮಾಡಿರೋ ಕಾಫಿ ಕಳ್ಳರು,
ಬೇಲೂರು ತಾಲೂಕು, ಚಿನ್ನೇನಹಳ್ಳಿ ಗ್ರಾಮದಲ್ಲಿ ಘಟನೆ,
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಚಿನ್ನೇನಹಳ್ಳಿ ಗ್ರಾಮ,
ಒಂದು ಎಕರೆ ಎರಡು ಎಕರೆ ಇರೋ ತೋಟವನ್ನೇ ಟಾರ್ಗೆಟ್ ಮಾಡಿರುವ ಕಾಫಿ ಕಳ್ಳರು,
ಗಿಡದಲ್ಲಿದ್ದ ಕಾಫಿಯನ್ನು ಬಿಡುತ್ತಿಲ್ಲ ಕದೀಮರು
Kodagu
ಉಡೋತ್ ಮೊಟ್ಟೆ : ಡಿ.6 & 7 ರಂದು ಕೊರಗಜ್ಜ ದೈವದ ನೇಮೋತ್ಸವ
ಮಡಿಕೇರಿ : ಉಡೋತ್‌ಮೊಟ್ಟೆಯ ಶ್ರೀ ಸ್ವಾಮಿ ಕೊರಗಜ್ಜ ದೈವ ಸಾನಿಧ್ಯದಲ್ಲಿ ಡಿ.6ಮತ್ತು 7 ರಂದು ಐದನೇ ವರ್ಷದ ನೇಮೋತ್ಸವ ನಡೆಯಲಿದೆ.
ಡಿ.6ರಂದು ಬೆಳಿಗ್ಗೆ 7 ಗಂಟೆಗೆ ಗಣಪತಿ ಹೋಮ ಮತ್ತು ಪ್ರಸಾದ ವಿತರಣೆ ನಡೆಯಲಿದೆ. ಸಂಜೆ 6 ಗಂಟೆಗೆ ದೈವದ ಭಂಡಾರ ಇಳಿಯುವುದು. ರಾತ್ರಿ 9 ಗಂಟೆಯಿಂದ ಡಿ.7ರ ಮಧ್ಯಾಹ್ನದ ವರೆಗೆ ಪರಿವಾರ ಸತ್ಯ ದೈವಗಳಾದ ಶ್ರೀ ಧರ್ಮದೈವ, ಪಂಜುರ್ಲಿ, ಶ್ರೀ ಸತ್ಯ ದೈವ ಕಲ್ಲುರ್ಟಿ, ಶ್ರೀ ಮಂತ್ರವಾದಿ ಗುಳಿಗ ಹಾಗೂ ಶ್ರೀ ಸಾರ್ಲಪಟ್ಟದ ಸ್ವಾಮಿ ಕೊರಗಜ್ಜ ದೈವದ ನೇಮ ಜರುಗಲಿದೆ.

ಎರಡು ದಿನವೂ ಅನ್ನದಾನ ನೆರವೇರಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೈವಸ್ಥಾನದ ಪ್ರಮುಖರು ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9900931278 , 9591304757೯೫೯೧೩೦೪೭೫೭, ೯೪೮೩೩೯೯೦೭೭ ಸಂಪರ್ಕಿಸಬಹುದಾಗಿದೆ.
Uncategorized
ತರಳಬಾಳು ಸಮಾಗಮ, ಶಿಕ್ಷಣ ಕೇಂದ್ರದಿಂದ ರಾಜ್ಯೋತ್ಸವ, ದತ್ತಿ ಉಪನ್ಯಾಸ
ಮೈಸೂರು: ನಗರದ ಟಿ.ಕೆ. ಬಡಾವಣೆಯ ತರಳಬಾಳು ಶಿಕ್ಷಣ ಕೇಂದ್ರದಲ್ಲಿ ತರಳಬಾಳು ಸಮಾಗಮ ವತಿಯಿಂದ ಭಾನುವಾರ ಕನ್ನಡ ರಾಜ್ಯೋತ್ಸವ ಹಾಗೂ ಎಚ್.ಎಸ್. ರುದ್ರಪ್ಪ, ರೇವಮ್ಮ ಹಾಗೂ ಆರ್.ಬಿ. ಚನ್ನಬಸಪ್ಪ, ಎನ್. ಸುವರ್ಣ ಮತ್ತು ಎಚ್. ಗುರುಸಿದ್ದಪ್ಪ, ಕಲ್ಲಮ್ಮ ಹಾಗೂ ಎಂ. ಸಿದ್ದಪ್ಪ ದತ್ತಿ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಉದ್ಘಾಟಿಸಿದರು. ಜೆಎಸ್ಎಸ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಎಲ್. ತಿಪ್ಪೇಸ್ವಾಮಿ ಉಪನ್ಯಾಸ ನೀಡಿದರು.

ತರಳಬಾಳು ಸಮಾಗಮ ಅಧ್ಯಕ್ಷ ಡಿ.ಎನ್. ಲೋಕಪ್ಪ ಅಧ್ಯಕ್ಷತೆ ವಹಿಸಿದ್ದರು. ತರಳಬಾಳು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್. ಮಹದೇವಸ್ವಾಮಿ, ಡಾ.ಎಚ್.ಎಸ್. ರುದ್ರೇಶ್ ಇದ್ದರು. ತರಳಬಾಳು ಸಮಾಗಮದ ಕಾರ್ಯದರ್ಶಿ ಶಿವಕುಮಾರ್ ಹಂಜಿ ಸ್ವಾಗತಿಸಿದರು. ದಾಕ್ಷಾಯಿಣಿ ಕಾರ್ಯಕ್ರಮ ನಿರೂಪಿಸಿದರು.
ಕನ್ನಡದಲ್ಲಿ ಅಧಿಕ ಅಂಕಗಳನ್ನು ಪಡೆದ ಪಿಯುಸಿಯ ಮೌರ್ಯ ಲೋಕೇಶ್, ಸಿ.ಎಸ್. ನಿಶ್ಚಲ್, ಎಸ್‌ಎಸ್‌ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಎಂ. ಧನುಷ್ ಹಾಗೂ ಜಿ. ನಮಿತಾ ಅವರಿಗೆ ಪುರಸ್ಕಾರ ನೀಡಲಾಯಿತು. ಆರು ಮತ್ತು ಹತ್ತನೇ ತರಗತಿ ವಿದ್ಯಾರ್ಥಿಗಳು ನೃತ್ಯ, ಸಾನ್ವಿ ಹಾಗೂ ಕವನ ಅವರು ಕನ್ನಡ ಭಾವಗೀತೆ ಹಾಡಿದರು.
-
Mysore10 hours agoಉದ್ಯಮಿ ಅಪಹರಿಸಿ ಕೋಟಿ ರೂ.ಗಳಿಗೆ ಡಿಮ್ಯಾಂಡ್: ನಾಲ್ವರ ಬಂಧನ
-
Mysore13 hours agoಬಸ್ ನಿಲ್ದಾಣಕ್ಕೆ ಕಾರು ಡಿಕ್ಕಿ: ಚಾಲಕನಿಗೆ ಗಂಭೀರ ಗಾಯ
-
Special8 hours agoಮಹಿಳೆಯರಿಗೆ ದೊಡ್ಡ ಅವಕಾಶ! ಅಂಗನವಾಡಿಯ 571 ಹುದ್ದೆಗಳಿಗೆ ಅರ್ಜಿ ಅಹ್ವಾನ.
-
Hassan12 hours agoHKS PUC ಕಾಲೇಜಿನಲ್ಲಿ ಜರುಗಿದ ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಕ್ರೀಡಾಕೂಟ ಸಮಾರೋಪ ಸಮಾರಂಭ
-
Chikmagalur13 hours agoಕಾಫಿನಾಡಲ್ಲಿ ನಿಲ್ಲದ ಕಾಡಾನೆ ದಾಳಿ: ಕಾರ್ಮಿಕ ಗಣಪತಿ ಪ್ರಾಣಾಪಾಯದಿಂದ ಪಾರು
-
Chikmagalur13 hours agoಗ್ರಾ.ಪಂ.ಸದಸ್ಯ ಗಣೇಶ್ ಕೊಲೆ ಪ್ರಕರಣ: ಐವರ ಬಂಧನ, ಮೂವರಿಗಾಗಿ ತೀವ್ರ ಶೋಧ
-
State14 hours agoನಾಳೆಯಿಂದ ಚಳಿಗಾಲದ ಅಧಿವೇಶನ: ಸುವರ್ಣಸೌಧದಲ್ಲಿ ಸುತ್ತ ಹೈ ಆಲರ್ಟ್ 6,000 ಪೊಲೀಸ್ ಭದ್ರತೆ
-
Mysore18 hours agoಕೊಲ್ಕತ್ತಾದ ಮೈಸೂರು ಉದ್ಯಾನಕ್ಕೆ 10ನೇ ಚಾಮರಾಜ ಒಡೆಯರ್ ನಾಮಫಲಕ ಅಳವಡಿಸಲು ಪತ್ರ
