Hassan
ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಮೇಲೆ ಹಲ್ಲೆ ಖಂಡಿಸಿ ದೂರು
ದಯಾನಂದ ಶೆಟ್ಟಿಹಳ್ಳಿ.
ಚನ್ನರಾಯಪಟ್ಟಣ. ತಾಲೂಕಿನ ಸಾತೇನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಅಭಿವೃದ್ಧಿ ಅಧಿಕಾರಿ ಮೇಲೆ ಸದಸ್ಯನೊಬ್ಬ ಹಲ್ಲೆ ಮಾಡಿರುವ ಘಟನೆ ನಡೆದಿರುವುದರಿಂದ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ತಾಲೂಕು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳ ನೌಕರರ ಸಂಘ, ತಾಲೂಕು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಹಾಗೂ ತಾಲೂಕು ಮಾಜಿ ಸೈನಿಕರ ಸಂಘ ಘಟನೆಯನ್ನು ಖಂಡಿಸಿ ತಾಲೂಕು ಪಂಚಾಯಿತಿ ಇಓ ಹಾಗೂ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ.
ವಾರನಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಯೋಗೇಶ್ ತಮ್ಮ ಗ್ರಾಮಕ್ಕೆ ಹೆಚ್ಚುವರಿ ಕಾಮಗಾರಿ ಅನುಷ್ಠಾನ ಮಾಡಿಸಿಕೊಂಡು ಬಂದಿದ್ದು ಆ ವಿಚಾರವಾಗಿ ಗಲಾಟೆಯಾಗಿದ್ದು ಅಭಿವೃದ್ಧಿ ಅಧಿಕಾರಿ ಮೇಲೆ ಹಲ್ಲೆ ಮಾಡಿರುವುದಲ್ಲದೆ ತನ್ನ ಕಾರಿನಿಂದ ರಾಡನ್ನು ತಂದು ಮತ್ತೆ ಹಲ್ಲೆ ಮಾಡಲು ಮುಂದಾಗಿರುವುದು ಸಿಸಿಟಿವಿ ಕ್ಯಾಮರದಲ್ಲಿ ಸೆರೆಯಾಗಿದೆ.
ಅಭಿವೃದ್ಧಿ ಅಧಿಕಾರಿ ಅರುಣ್ ಕುಮಾರ್ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಮಾಹಿತಿ ತಿಳಿಸಿ ನೆನ್ನೆ ದಿನ ಗ್ರಾಮಾಂತರ ಠಾಣೆಗೆ ದೂರು ನೀಡಲಾಗಿದ್ದು.
ಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Hassan
ಹಲಸು, ಹುಣಸೆ, ನೇರಳೆ ಸೇರಿದಂತೆ ಇತರ ಬೆಳೆಗಳಿಗಾಗಿ ರಾಷ್ಟ್ರೀಯ ಮಂಡಳಿ ಸ್ಥಾಪಿಸುವಂತೆ ಮನವಿ ಮಾಡಿದ ಎಚ್‌ಡಿಡಿ
ಸಂಸತ್ ಭವನದಲ್ಲಿ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಕೃಷಿ ಸಚಿವರನ್ನು ಭೇಟಿಯಾದ ಮಾಜಿ ಪ್ರಧಾನಿ ತಮ್ಮ ಪ್ರಸ್ತಾವನೆ ಬಗ್ಗೆ ಪತ್ರವನ್ನು ನೀಡಿದ್ದಾರೆ.
ಮಾಜಿ ಪ್ರಧಾನಿ ದೇವೇಗೌಡರು ಹುಣಸೆ, ಹಲಸು ಮತ್ತು ನೇರಳೆ ಔಷಧ ಗುಣಗಳುಳ್ಳ ಪೌಷ್ಟಿಕಾಂಶಯುಕ್ತ ಹಣ್ಣಿನ ಬೆಳೆಗಳಾಗಿವೆ. ಇವುಗಳನ್ನು ಶತಮಾನಗಳಿಂದ ಭಾರತದಲ್ಲಿ ಬೆಳೆಯಲಾಗುತ್ತಿದೆ. ಈ ಬೆಳೆಗಳು ಸಾವಯವವಾಗಿ ಬೆಳೆಯುತ್ತವೆ. ಪ್ರಕೃತಿಯಲ್ಲಿ ಇವು ಸಶಕ್ತವಾಗಿ ಬೆಳೆಯುತ್ತವೆ. ಕಡಿಮೆ ಮಳೆಯ ಅಗತ್ಯವಿರುತ್ತದೆ. ಕಡಿಮೆ ವೆಚ್ಚದಲ್ಲಿ ಬೆಳೆಸಲಾಗುತ್ತದೆ ಎಂದು ಕೃಷಿ ಸಚಿವರ ಗಮನಸೆಳೆದಿದ್ದಾರೆ.

ಹುಣಸೆ ಹಣ್ಣನ್ನು ದೇಶಾದ್ಯಂತ ವ್ಯಾಪಕವಾಗಿ ಬೆಳೆಯಲಾಗುತ್ತದೆ. ಮಧ್ಯ, ಪೂರ್ವ ಮತ್ತು ದಕ್ಷಿಣ ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಆದರೆ, ಹಲಸು ಮತ್ತು ನೇರಳೆಗಳನ್ನು ಪ್ರಧಾನವಾಗಿ ಭಾರತದ ದಕ್ಷಿಣ, ಮಧ್ಯ, ಪೂರ್ವ ಮತ್ತು ಪೂರ್ವ ರಾಜ್ಯಗಳಲ್ಲಿ ಬೆಳೆಯಲಾಗುತ್ತದೆ. ಭಾರತವು ಈ ಹಣ್ಣುಗಳ ಅತಿದೊಡ್ಡ ಉತ್ಪಾದಕ ರಾಷ್ಟ್ರವಾಗಿದೆ. ಏಷ್ಯಾದ ಕೆಲ ದೇಶಗಳು ಮತ್ತು ಆಫ್ರಿಕನ್ ದೇಶಗಳಲ್ಲಿ ಸಣ್ಣ ಪ್ರಮಾಣದಲ್ಲಿ ಈ ಕೃಷಿ ಕಂಡುಬರುತ್ತದೆ ಎಂಬ ಅಂಶವನ್ನು ಮಾಜಿ ಪ್ರಧಾನಿಗಳು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.
ಭಾರತದಲ್ಲಿರುವ ಕೃಷಿ ಪದ್ಧತಿಗಳನ್ನು ಉಲ್ಲೇಖಿಸುತ್ತಾ ವಿವರ ನೀಡಿರುವ ದೇವೇಗೌಡರು, ಸಾಂಪ್ರದಾಯಿಕವಾಗಿ ಈ ಬೆಳೆಗಳನ್ನು ಬೀಜಗಳನ್ನು ನೆಟ್ಟು ಬೆಳೆಯಲಾಗುತ್ತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಕಸಿ ಮಾಡಿದ ಸಸಿಗಳು ಸಾಮಾನ್ಯವಾಗಿದ್ದು, ಇಳುವರಿ ಮತ್ತು ಗುಣಮಟ್ಟದಲ್ಲಿ ಸುಧಾರಣೆ ಕಂಡುಬಂದಿದೆ ಎಂದು ಗಮನಿಸಿದ್ದಾರೆ.
ಪ್ರತಿ ವರ್ಷ ದೊಡ್ಡ ಪ್ರಮಾಣದ ಉತ್ಪಾದನೆ ಮತ್ತು ಕೊಯ್ಲು ಮಾಡುತ್ತಿದ್ದರೂ ಹಣ್ಣುಗಳ ಗಮನಾರ್ಹ ಭಾಗವು ಕೊಯ್ಲು ಮಾಡದೆ ಮತ್ತು ಕಡಿಮೆ ಬಳಕೆಯಲ್ಲಿವೆ. ಕೊಯ್ಲು ಮಾಡುವಲ್ಲಿನ ತೊಂದರೆ, ಖರೀದಿದಾರರ ಕೊರತೆ, ಅಸಮರ್ಪಕ ಸಂಸ್ಕರಣಾ ಸೌಲಭ್ಯಗಳು ಮತ್ತು ದೇಶಾದ್ಯಂತ ಬೆಳೆಗಾರರಿಗೆ ಶೀತಲೀಕರಣ ಕೇಂದ್ರಗಳಿಗೆ ಸೀಮಿತ ಪ್ರವೇಶದಂತಹ ಸವಾಲುಗಳು ಇದಕ್ಕೆ ಕಾರಣ ಏನೆಂದು ತಿಳಿಸಿದ್ದಾರೆ.

ಈ ಹಣ್ಣುಗಳು ಮತ್ತು ಅವುಗಳ ಉಪ ಉತ್ಪನ್ನಗಳು ಔಷಧೀಯ ಕೈಗಾರಿಕೆಗಳಿಂದ ಬೇಡಿಕೆ ಸೇರಿದಂತೆ ದೇಶೀಯ ಮತ್ತು ರಫ್ತು ಮಾರುಕಟ್ಟೆಗಳಲ್ಲಿ ಹೆಚ್ಚಿನ ಬೇಡಿಕೆಯನ್ನು ಹೊಂದಿವೆ. ಈ ಬೆಳೆಗಳನ್ನು ಹೆಚ್ಚಿನ ಆದಾಯ ಗಳಿಸುವ, ‘ಡಾಲರ್ ಗಳಿಸುವ’ ಬೆಳೆಗಳೆಂದು ಕೃಷಿ ಸಚಿವರ ಗಮನ ಸೆಳೆದರು. ಅಲ್ಲದೆ, ಇದು ರಾಷ್ಟ್ರೀಯ ಆರ್ಥಿಕತೆಗೆ ಕೊಡುಗೆ ನೀಡುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ದೊಡ್ಡ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಹೇಳಿದ್ದಾರೆ.
Hassan
ದಾಖಲೆಯ ಚಳಿ ನಡುವೆ ಟ್ರಕ್ ಚಾಲಕರಿಗಾಗಿ DHTPL ಚಳಿಗಾಲದ ಸುರಕ್ಷತಾ ಅಭಿಯಾನ
ಕದಬಹಳ್ಳಿ: ಕಳೆದ ದಶಕದಲ್ಲೇ ಕಂಡುಬಂದ ದಾಖಲೆಯ ಚಳಿಗಾಲದ ಹಿನ್ನೆಲೆಯಲ್ಲಿ ದೇವಿಹಳ್ಳಿ ಹಾಸನ ಟೋಲ್‌ವೇ ಪ್ರೈವೇಟ್ ಲಿಮಿಟೆಡ್ DHTPL) ಸಂಸ್ಥೆಯು ಕದಬಹಳ್ಳಿ ಹಾಗೂ ಶಾಂತಿಗ್ರಾಮ ಟೋಲ್ ಪ್ಲಾಜಾಗಳಲ್ಲಿ ಸಮಗ್ರ ಚಳಿಗಾಲದ ಸುರಕ್ಷತಾ ಅಭಿಯಾನವನ್ನು ಹಮ್ಮಿಕೊಂಡಿತ್ತು.
ರಾಷ್ಟ್ರೀಯ ಪೂರೈಕೆ ಸರಪಳಿಯನ್ನು ನಿರ್ವಹಿಸುವಲ್ಲಿ ಟ್ರಕ್ ಚಾಲಕರು ವಹಿಸುವ ನಿರ್ಣಾಯಕ ಪಾತ್ರವನ್ನು ಗುರುತಿಸುವುದು, ಕಲ್ಯಾಣ ಮತ್ತು ರಸ್ತೆ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಇದರ ಅಂಗವಾಗಿ ಟ್ರಕ್ ಚಾಲಕರಿಗೆ 200 ಗುಣಮಟ್ಟದ ಉಣ್ಣೆ ಟೋಪಿ ವಿತರಿಸಲಾಯಿತು.

ತೀವ್ರ ಚಳಿಯಿಂದ ತಕ್ಷಣದ ರಕ್ಷಣೆಯನ್ನು ಒದಗಿಸುವ ಉದ್ದೇಶದಿಂದ ವಿಶೇಷವಾಗಿ ಟ್ರಕ್ ಚಾಲಕರಿಗೆ ಫೈರ್ ಕ್ಯಾಂಪ್ ಏರ್ಪಡಿಸಲಾಗಿದ್ದು, ಚಾಲಕರಿಗೆ ಬಿಸಿ ಕಾಫಿ ಹಾಗೂ ಬಿಸ್ಕತ್ ವಿತರಿಸಲಾಯಿತು. ಚಾಲಕರು ಈ ಮಾನವೀಯ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದಲ್ಲದೆ, DHTPL ಮಾರ್ಗಾಧಿಕಾರಿಗಳು ರಸ್ತೆಗಳಲ್ಲಿ ಪಾಲಿಸಬೇಕಾದ ನಿಯಮಗಳು ಮತ್ತು ತಪ್ಪಿಸಬೇಕಾದ ಕ್ರಮಗಳ ಕುರಿತು ಜಾಗೃತಿ ಅಧಿವೇಶನ ನಡೆಸಿ, ವಿಶೇಷವಾಗಿ ಮಂಜು ಪರಿಸ್ಥಿತಿಯಲ್ಲಿ ಹಾಗೂ ತೀವ್ರ ಚಳಿಯ ಸಮಯದಲ್ಲಿ ರಾತ್ರಿ ಚಾಲನೆ ಮಾಡುವಾಗ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ರಸ್ತೆ ಬಳಕೆದಾರರ ಸುರಕ್ಷತೆ ಮತ್ತು ಟ್ರಕ್ ಚಾಲಕರ ಕಲ್ಯಾಣಕ್ಕೆ ಸಂಸ್ಥೆ ಬದ್ಧವಾಗಿರುವುದಕ್ಕೆ ಇಂತಹ ಕಾರ್ಯಕ್ರಮಗಳು ಸಾಕ್ಷಿಯಾಗಿದೆ ಎಂದು DHTPL ಅಧಿಕಾರಿಗಳು ತಿಳಿಸಿದ್ದಾರೆ.
Hassan
ಆಳ್ವಾಸ್ ಸಾಂಸ್ಕೃತಿಕ ವೈಭವ
ವರದಿ : ರಾಜೇಂದ್ರ ಸುಹಾಸ್
ಅರಕಲಗೂಡು: ಆಳ್ವಾಸ್ ಸಾಂಸ್ಕೃತಿಕ ವೈಭವ ,ಆಳ್ವಾಸ್ ಪ್ರತಿಭಾನ್ವಿತ 350 ವಿದ್ಯಾರ್ಥಿ ಕಲಾವಿದರಿಂದ ಕಾರ್ಯಕ್ರಮ ಡಿ. 20 2025 ಶನಿವಾರ ಸಂಜೆ 5.45ಕ್ಕೆ ತಾಲ್ಲೂಕು ಕ್ರೀಡಾಂಗಣ,ಆಯೋಜಿಸಲಾಗಿದೆ. ಎಂದು ಸಂಯೋಜಕರಾದ ಅರುಣ್ ಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಾಲೂಕಿನ ಶಾಸಕರಾದ ಎ ಮಂಜು ರವರ ಅಧ್ಯಕ್ಷತೆ ಯಲ್ಲಿ ಆತ್ಮೀಯ ಭಾರತ ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ತಮ್ಮ ಮುಂದೆ ಪ್ರದರ್ಶಿಸುವ ಮೂಲಕ ತಮ್ಮೆಲ್ಲರನ್ನು ಮೂಕ ವಿಸ್ಮಿತರನ್ನಾಗಿ ಮಾಡುವಂತ ಕಾರ್ಯಕ್ರಮವೇ ಆಳ್ವಾಸ್ ಸಾಂಸ್ಕೃತಿಕ ವೈಭವ, ದೇಶ ವಿದೇಶಗಳ ಜನರ ಮನಸೂರೆಗೊಂಡಿರುವ ಆಳ್ವಾಸ್ ಸಾಂಸ್ಕೃತಿಕ ವೈಭವ ನಮ್ಮ ಗ್ರಾಮೀಣ ಭಾಗದಲ್ಲಿ ನೆಡೆಯುತ್ತಿರುವುದು ಸಂತಸದ ಸಂಗತಿಯಾಗಿರುತ್ತದೆ.

3 ಗಂಟೆ 30 ನಿಮಿಷ ದೇಶ ವಿದೇಶಗಳ ವಿವಿಧ ಪ್ರಕಾರದ ಶಾಸ್ತ್ರೀಯ, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ತಮ್ಮೆಲ್ಲರನ್ನು ಹೊಸ ಸಾಂಸ್ಕೃತಿಕ ಲೋಕಕ್ಕೆ ಕೊಂಡೊಯ್ಯುವ ಈ ಕಾರ್ಯಕ್ರಮಕ್ಕೆ ತಪ್ಪದೇ ತಮ್ಮ ಕುಟುಂಬಗಳ ಸಮೇತರಾಗಿ ಆಗಮಿಸಬೇಕು ಕಾರ್ಯಕ್ರಮ ವಿಶೇಷತೆಗಳು ಕಲಾತ್ಮಕ ಯೋಗ,ಶಾಸ್ತ್ರೀಯ ನೃತ್ಯ – ಅಷ್ಟಲಕ್ಷ್ಮೀ, ಆಂಧ್ರದ ಜನಪದ ಬಂಜಾರ ನೃತ್ಯ , ಮಣಿಪುರಿ ಸ್ಟಿಕ್ ಡ್ಯಾನ್ಸ್ ಬುಡಕಟ್ಟು ಯಕ್ಷಗಾನ-ಶಂಕರಾರ್ಧ,ಗುಜರಾತಿನ ಗಾರ್ಭ ಮತ್ತು ದಾಂಡಿಯ ,ಮಲ್ಲಕಂಬ ಹಾಗೂ ರೋಪ್ ಕಸರತ ,ಸೃಜನಾತ್ಮಕ ನೃತ್ಯ, ಕಥಕ್ ನೃತ್ಯ – ವರ್ಷಧಾರೆ, ಪುರುಲಿಯಾ ಸಿಂಹ ನೃತ್ಯ, ಯಕ್ಷಗಾನ- ಶ್ರೀರಾಮ ಪಟ್ಟಾಭಿಷೇಕ, ಬೊಂಬೆ ವಿನೋದಾವಳ, ವಿವಿಧ ಕಾರ್ಯಕ್ರಮ ಗಳು ಇರುತ್ತವೆ.
ಅರಕಲಗೂಡು ಶಾಲಾ ಶಿಕ್ಷಣ ಇಲಾಖೆ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಯ ಎಲ್ಲಾ ವೃಂದ ಅಧ್ಯಕ್ಷರು ಪದಾಧಿಕಾರಿಗಳು ಮತ್ತು ಖಾಸಗಿ ಶಾಲೆ ಗಳ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಗಳ ಸಹಕಾರದಲ್ಲಿ ನಡೆಯುತ್ತದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿ ಯಲ್ಲಿ ಸಂಯೋಜಕರು ಮಹೇಶ್ ಹೊಂಬಳ , ರಘು , ರವಿಕುಮಾರ್, ಕೊಡಹಳ್ಳಿಅಶೋಕ್ ಹಾಜರಿದ್ದರು.
-
State19 hours agoಟಾಟಾ ಸ್ಕಾಲರ್ಶಿಪ್ 2025–26: ವಿದ್ಯಾರ್ಥಿಗಳಿಗೆ ಅರ್ಜಿ ಆಹ್ವಾನ: ₹1,00,000 ವರೆಗೆ ಆರ್ಥಿಕ ನೆರವು
-
Hassan12 hours agoಆಳ್ವಾಸ್ ಸಾಂಸ್ಕೃತಿಕ ವೈಭವ
-
Hassan11 hours agoದಾಖಲೆಯ ಚಳಿ ನಡುವೆ ಟ್ರಕ್ ಚಾಲಕರಿಗಾಗಿ DHTPL ಚಳಿಗಾಲದ ಸುರಕ್ಷತಾ ಅಭಿಯಾನ
-
Hassan17 hours agoಉತ್ತಮ ಸಮಾಜ ನಿರ್ಮಾಣಕ್ಕೆ ನವೋದಯ ಹಳೆಯ ವಿದ್ಯಾರ್ಥಿಗಳ ಸಮ್ಮೇಳನ
-
Chikmagalur10 hours agoಅತ್ಯಾಚಾರ ಆರೋಪಿಗೆ 20 ವರ್ಷ ಕಠಿಣ ಸಜೆ
-
Mysore9 hours agoಬಸವ ಮಾರ್ಗದಲ್ಲಿ ವಚನ ಪಠಣ: ವ್ಯಸನಮುಕ್ತ ಜೀವನ ಕುರಿತು ವಿಶೇಷ ಉಪನ್ಯಾಸ
-
Chamarajanagar9 hours agoಡಿ.21ಕ್ಕೆ ಜಿಲ್ಲೆಯಾದ್ಯಂತ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ
-
Kodagu12 hours agoಟಿಪ್ಪರ್ ವಾಹನದ ಹಿಂಬದಿಗೆ ಅಪ್ಪಳಿಸಿದ ಬೊಲೆರೋ ಜೀಪ್ – ಪ್ರಯಾಣಿಕರಿಗೆ ಗಾಯ
