Hassan
ಮಾಧ್ಯಮ ಸ್ವಾತಂತ್ರ್ಯ ಸದ್ಬಳಕೆಯಾಗಲಿ: ಎಎಸ್‌ಪಿ ತಮ್ಮಯ್ಯ
ಹಾಸನ: ಹಾಸನ ಜಿಲ್ಲಾ ಪತ್ರಕರ್ತರ ಸಂಘದ ಸಾಂಸ್ಕೃತಿಕ ಸಮಿತಿ ವತಿಯಿಂದ ಅಪರಾಧ ಸುದ್ದಿ-ಪರಿಣಾಮಗಳು, ಸ್ಟಡೀ ವಿತ್ ಸೊಸೈಟಿ ಹೆಸರಿನಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಕೆ.ತಮ್ಮಯ್ಯ ಅವರೊಂದಿಗೆ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಮ್ಮಯ್ಯ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಲ್ಕನೇ ಸ್ತಂಭ ಎನಿಸಿರುವ ಮಾಧ್ಯಮ ರಂಗಕ್ಕೆ ಸಂವಿಧಾನದಲ್ಲೇ ರಕ್ಷಣೆ ಇದೆ. ಪತ್ರಿಕಾ ಸ್ವಾತಂತ್ರ್ಯ, ಅಭಿವ್ಯಕ್ತಿಗೆ ಸ್ವಾತಂತ್ರ್ಯ ಇದೆ. ಇದರ ಉದ್ದೇಶ ಅಧಿಕಾರದಲ್ಲಿರುವವರನ್ನು ಸದಾ ಎಚ್ಚರಿಸುವುದು, ಅವರು ಲೋಪ-ದೋಷ ಪ್ರಶ್ನೆ ಮಾಡುವುದಾಗಿದೆ ಎಂದರು.

ಆದರೆ ಬೇರೆ ಕಡೆಗಳಲ್ಲಿ ಈ ರೀತಿ ಇಲ್ಲ, ನಮ್ಮ ದೇಶದಲ್ಲಿ ಮಾಧ್ಯಮದವರೇ ತನಿಖಾ ವರದಿ ಮಾಡಬಹುದು, ಅದನ್ನು ಪ್ರಕಟ ಮಾಡಿ, ಹಂಚಿಕೆ ಮಾಡಲೂ ಬಹುದು. ಇದನ್ನು ಮಾಡಲು ಮಾಧ್ಯಮದವರಿಗೆ ಭಯ ಇರಬಾರದು, ಭಯ ಇದ್ದರೆ ಏನೂ ಮಾಡಲು ಆಗುವುದಿಲ್ಲ ಎಂದ ಅವರು, ಇತ್ತೀಚಿನ ದಿನ ಮಾನಗಳಲ್ಲಿ ಒಂದಲ್ಲ, ಒಂದು ಮಾಧ್ಯಮಗಳು ಉಳ್ಳವರ ನಿಯಂತ್ರಣದಲ್ಲಿವೆ. ಅಂದರೆ ಮಾಧ್ಯಮಗಳನ್ನೂ ನಿಯಂತ್ರಣ ಮಾಡಲಾಗುತ್ತಿದೆ. ಇನ್ನೂ ಕೆಲವು ಕಡೆ ರಾಜಕೀಯ ಒತ್ತಡ ಇದೆ. ಆರ್ಥಿಕ ಸ್ಥಿತಿಗತಿ ಸದೃಢವಾಗಿಲ್ಲ ಜೊತೆಗೆ ಭಯದ ವಾತಾವರಣವೂ ಹೆಚ್ಚಾಗುತ್ತಿದೆ ಎಂದು ಹೇಳಿದರು.
ಸಮಾಜದಲ್ಲಿ ಮೀಡಿಯಾ ವಿಚಾರಣೆ ಒಳ್ಳೆಯದಲ್ಲ, ಸಂದರ್ಶನ ಮಾಡುವಾಗ ಹುಷಾರು, ಯಾವುದೇ ಸಂದರ್ಭದಲ್ಲೂ ಜನರ ಭಾವನೆಗಳನ್ನು ಮಿಸ್ ಗೈಡ್ ಮಾಡಬಾರದು, ಪತ್ರಿಕೋದ್ಯಮ ವಿದ್ಯಾರ್ಥಿಗಳು ಸಂಶೋಧನಾತ್ಮಕ ವರದಿಗಾರಿಕೆಗೆ ಹೆಚ್ಚಿನ ಒತ್ತು ನೀಡಬೇಕು ಸಲಹೆ ನೀಡಿದರು.

ವಿಶೇಷ ಅತಿಥಿಗಳಾಗಿ ಆಗಮಿಸಿದ್ದ ಸರ್ಕಾರಿ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ.ಭವ್ಯಾ ನವೀನ್ ಮಾತನಾಡಿ, ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎನಿಸಿರುವ ಪ್ರತಿಕೋದ್ಯಮದ ಮೂಲ ಆಶಯವೇ ಸಮಾಜ ಮತ್ತು ಕಲಿಕೆ ಆಗಿದೆ. ಆದರೆ ಆರಂಭದ ಪತ್ರಿಕೋದ್ಯಮ, ಹಾಲಿ ಕಲಿಯುತ್ತಿರುವ, ಪತ್ರಿಕೋದ್ಯಮ ಕಲಿಸುತ್ತಿರುವ/ಅಸ್ತಿತ್ವದಲ್ಲಿರುವ ಪತ್ರಿಕೋದ್ಯಮ ವ್ಯತಿರಿಕ್ತವಾಗಿದೆ. ನನ್ನ ಪ್ರಕಾರ ಮೂರು ಕಾಲಘಟ್ಟದ ಪತ್ರಿಕೋದ್ಯಮದ ಆಶಯಗಳು ಒಂದೇ ಆದರೆ, ವಿದ್ಯಾರ್ಥಿಗಳು ಸೇರಿದಂತೆ ಎಲ್ಲರಿಗೂ ಅನುಕೂಲ ಆಗಲಿದೆ. ಪತ್ರಿಕೋದ್ಯಮ ಪ್ರಾಯೋಗಿಕ ಕಲಿಕೆಗೆ ಪೂರಕ ಆಗಿರಲಿ ಎಂದು ಆಶಿಸಿದರು.
ಇಡೀ ಕರ್ನಾಟದಲ್ಲಿ ಹೆಚ್ಚು ಪತ್ರಿಕೋದ್ಯಮ ಕಲಿಸುವ ಕಾಲೇಜು ಇರುವುದು ಹಾಸನದಲ್ಲಿ. ಹಾಗೆಯೇ ವಿದ್ಯಾರ್ಥಿಗಳೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಾಗೆಯೇ ರಾಜ್ಯದಲ್ಲೇ ಗಟ್ಟಿಯಾದ ಸಂಘ ಮತ್ತು ಹಿರಿಯ ಪತ್ರಕರ್ತರಿರುವುದು ಹಾಸನದಲ್ಲೇ. ಈ ಎಲ್ಲರಿಂದ ಭವಿಷ್ಯದಲ್ಲಿ ಜಿಲ್ಲೆಯಿಂದ ಉತ್ತಮ ಪತ್ರಕರ್ತರು ಹೊರ ಬರುವಂತಾಗಲಿ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜೆ.ಆರ್.ಕೆಂಚೇಗೌಡ ಅವರು, ಎಎಸ್ಪಿ ತಮ್ಮಯ್ಯ ಅವರು ಅಪರಾಧ ಪ್ರಕರಣಗಳ ವರದಿಗಾರಿಕೆ, ಮುನ್ನೆಚ್ಚರಿಕೆ ಬಗ್ಗೆ ಸಾಕಷ್ಟು ಮಾಹಿತಿ ಹಂಚಿಕೊಂಡಿದ್ದಾರೆ ಎಂದರು.
ವಿಶ್ವದಲ್ಲಿ ಭಾರತ ಪತ್ರಿಕೋದ್ಯಮದಲ್ಲಿ ೧೫೯ನೇ ಸ್ಥಾನದಲ್ಲಿದೆ. ಇದಕ್ಕೆ ಮಾಧ್ಯಮ ಬಂಡವಾಳ ಶಾಹಿಗಳ ಹಿಡಿತ, ರಾಜಕೀಯ ವ್ಯವಸ್ಥೆ, ಸಂಸ್ಥೆಗಳ ಆರ್ಥಿಕ ಸ್ಥಿತಿಗತಿ ಇದಕ್ಕೆ ಕಾರಣ ಎಂದರು.
ನಾವೆಲ್ಲರೂ ವೃತ್ತಿ ಬದ್ಧತೆಯಿಂದ ಕೆಲಸ ಮಾಡೋಣ, ಮಕ್ಕಳು ಸಾಕಷ್ಟು ಕನಸು ಹೊತ್ತು ಈ ಕ್ಷೇತ್ರಕ್ಕೆ ಬಂದಿರುತ್ತೀರಿ, ಕ್ರೀಯಾತ್ಮಕವಾಗಿ ಕೆಲಸ ಮಾಡಿ, ಅದಕ್ಕೆ ತಕ್ಕುದಾದ ಸಂಭಾವನೆ, ಗೌರವ ಇದೆ. ಸೈದ್ಧಾಂತಿಕ ನಿಯಮ ಸ್ಪಷ್ಟವಾಗಿರಲಿ ಎಂದರು.
ಸಾಂಸ್ಕೃತಿಕ ಸಮಿತಿಯ ಪ್ರಸನ್ನ ಕುಮಾರ್(ಚಲಂ) ಸ್ಟಡೀ ವಿತ್ ಸೊಸೈಟಿ, ಕಲಿಕೆಯ ಒಂದು ತಾಣ, ಈ ಕಾಲಘಟ್ಟದಲ್ಲಿ ನಾವು ನಿತ್ಯ ಕಲಿಯಬೇಕಿದೆ ಅದಕ್ಕಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯದರ್ಶಿ ಕೆ.ಎಂ.ಹರೀಶ್, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಉಪಾಧ್ಯಕ್ಷರಾದ ಎನ್.ನಂಜುಂಡೇಗೌಡ, ಜಿ.ಪ್ರಕಾಶ್, ಸಾಂಸ್ಕೃತಿಕ ಸಮಿತಿಯ ಸದಸ್ಯರು ಇದ್ದರು. ಚೈತ್ರಾ ಮಹಾಲಿಂಗು ನಿರೂಪಿಸಿದರು. ಮಲ್ಲಿಕಾರ್ಜುನ್ ಕೊಚ್ಚರಗಿ ಸ್ವಾಗತಿಸಿದರು. ಕಡೆಯಲ್ಲಿ ತಮ್ಮಯ್ಯ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
Hassan
ಚರಂಡಿಯಲ್ಲಿ ಪತ್ತೆಯಾದ ವೈದ್ಯಕೀಯ ತ್ಯಾಜ್ಯ; ಸಾರ್ವಜನಿಕರ ಆರೋಗ್ಯಕ್ಕೆ ತೀವ್ರ ಆತಂಕ!
ಅರಸೀಕೆರೆ ನಗರದ ಬಿ.ಹೆಚ್ ರಸ್ತೆಯ ಹಳೆಯ ಜನತ ಬಜಾರ್ ಗಲ್ಲಿಯಲ್ಲಿ ಕ್ಲಿನಿಕ್ ಅಥವಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಬಳಸಿದ ಇಂಜೆಕ್ಷನ್ ಸಿರಿಂಜ್ ಗಳು ಮತ್ತು ಕೈವಸ್ತ್ರ ಇರುವ ಚೀಲವನ್ನು ಚರಂಡಿಯಲ್ಲಿ ಎಸೆದಿರುವ ಘಟನೆ ನಡೆದಿದೆ. ಇಂದು ಮುಂಜಾನೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಾರ್ವಜನಿಕರು ಚೀಲವನ್ನು ಗಮನಿಸಿ ಮಾಹಿತಿ ನೀಡಿದ್ದಾರೆ. ಚರಂಡಿಗಳಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಬಳಸಿದ ಇಂಜೆಕ್ಷನ್ ಸಿರೆಂಜ್‌ಗಳು ಪತ್ತೆ ಆಗಿರೋದು ನಗರದ ನೈರ್ಮಲ್ಯ ಮತ್ತು ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸಿದೆ.

ಈ ರೀತಿ ಅಜಾಗರೂಕತೆ ಇಂದ ರೋಗಗಳು ಹರಡುವ ಸಾಧ್ಯತೆ ಇರುತ್ತದೆ.ಆಸ್ಪತ್ರೆಗಳು ಕ್ಲಿನಿಕ್ ಅಥವಾ ಪ್ರಯೋಗಾಲಗಳು ತಮ್ಮ ವೈದ್ಯಕೀಯ ತ್ಯಾಜ್ಯವನ್ನು ನಿಯಮಾವಳಿ ಪ್ರಕಾರ ವಿಲೇವಾರಿ ಮಾಡದೆ ಈ ರೀತಿ ಚರಂಡಿಗೆ ಎಸೆದಿರುವುದು ಕಾನೂನು ಬಾಹಿರವಾಗಿದು ನಗರದ ಪ್ರಮುಖ ಜನನಿ ಬಿಡು ಪ್ರದೇಶವಾಗಿದ್ದು ಸುತ್ತಮುತ್ತಲಿರುವ ಯಾವುದೋ ಕ್ಲಿನಿಕ್ ಅಥವಾ ಆಸ್ಪತ್ರೆಯ ಸಿಬ್ಬಂದಿ ಎಸೆದು ಹೋಗಿರಬಹುದು ಎಂದು ಸಾರ್ವಜನಿಕರು ಮಾಹಿತಿ ನೀಡಿದ್ದಾರೆ.

ಚರಂಡಿ ಅಥವಾ ಬಯಲಿಗೆ ಎಸದ ಇಂಜೆಕ್ಷನ್ ಸೂಜಿಗಳು ಪೌರಕಾರ್ಮಿಕರಿಗೆ ಅಥವಾ ಸ್ಥಳೀಯರಿಗೆ ಚುಚ್ಚಿಕೊಳ್ಳುವ ಮೂಲಕ ಮಾರಣಾಂತಿಕ ಸಾಂಕ್ರಮಿಕ ರೋಗಗಳು ಹರಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಸಂಬಂಧಪಟ್ಟ ಇಲಾಖೆಯವರು ಕೂಡಲೇ ಸ್ಥಳದಲ್ಲಿರುವ ತ್ಯಾಜ್ಯವನ್ನು ತೆರವುಗೊಳಿಸಿ ಚೀಲ ಎಸೆದಿರುವ ಕ್ಲಿನಿಕ್ ಅಥವಾ ಆಸ್ಪತ್ರೆ ಯಾವುದು ಎಂದು ಪರಿಶೀಲಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
Hassan
ಶ್ರೀ ಕ್ಷೇತ್ರ ಕಾಳಿಕಾಂಬ ಕಮಠೇಶ್ವರ ದೇವಾಲಯದಲ್ಲಿ ‘ಆನಂದದ ಅನುಭೂತಿ ಶಿಬಿರ’ಕ್ಕೆ ಚಾಲನೆ
ಹಾಸನ : ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಹಾಗೂ ಹಾಸನ ಜಿಲ್ಲಾ ಮತ್ತು ತಾಲ್ಲೂಕು ವಿಶ್ವಕರ್ಮ ಸಮಾಜದ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಎಲ್ಲಾ ವಿಶ್ವಕರ್ಮ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಹಾಸನ ನಗರದ ಶ್ರೀ ಕ್ಷೇತ್ರ ಕಾಳಿಕಾಂಬ ಕಮಠೇಶ್ವರ ದೇವಾಲಯದಲ್ಲಿ ಇಂದಿನಿಂದ ಆರಂಭವಾದ ಆರು ದಿನಗಳ ಕಾಲದ ಯೋಗ, ಪ್ರಾಣಾಯಾಮ, ಧ್ಯಾನ ಮತ್ತು ಸುದರ್ಶನ ಕ್ರಿಯೆ ಒಳಗೊಂಡ “ಆನಂದದ ಅನುಭೂತಿ ಶಿಬಿರ” ವನ್ನು ಹಾಸನ ಜಿಲ್ಲಾ ವಿಶ್ವಕರ್ಮ ಸಮಾಜದ ಅಧ್ಯಕ್ಷ ಹೆಚ್. ವಿ. ಹರೀಶ್ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ಹಾಸನ ನಗರಸಭೆಯ ನಿವೃತ್ತ ಆಯುಕ್ತ ಪರಮೇಶ್ವರಪ್ಪ, ಹಾಸನ ತಾಲ್ಲೂಕು ವಿಶ್ವಕರ್ಮ ಸಮಾಜದ ಉಪಾಧ್ಯಕ್ಷ ಎ. ಬ್ಯಾಟರಂಗಾಚಾರ್, ಸಹ ಕಾರ್ಯದರ್ಶಿ ಎಂ. ಟಿ. ಸುರೇಶ್, ನಿರ್ದೇಶಕ ಬಿ. ಲೋಕೇಶ್, ಯೋಗ ತರಬೇತುದಾರರಾದ ಜಿ. ಎ. ಸುಬ್ಬುಕೃಷ್ಣ, ಹೆಚ್. ಎಲ್. ವಿದ್ಯಾ ಮತ್ತು ಎ. ಎನ್. ನಳಿನಾಕ್ಷಿ ಮತ್ತಿತರರು ಹಾಜರಿದ್ದರು.
Hassan
ಹಾಸನದಲ್ಲಿ ‘ಆನಂದದ ಅನುಭೂತಿ ಶಿಬಿರ’ಕ್ಕೆ ಚಾಲನೆ
ಹಾಸನ : ಮೇ 29 , ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಹಾಗೂ ಹಾಸನ ಜಿಲ್ಲಾ ಮತ್ತು ತಾಲ್ಲೂಕು ವಿಶ್ವಕರ್ಮ ಸಮಾಜದ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಎಲ್ಲಾ ವಿಶ್ವಕರ್ಮ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಹಾಸನ ನಗರದ ಶ್ರೀ ಕ್ಷೇತ್ರ ಕಾಳಿಕಾಂಬ ಕಮಠೇಶ್ವರ ದೇವಾಲಯದಲ್ಲಿ ಆರು ದಿನಗಳ “ಆನಂದದ ಅನುಭೂತಿ ಶಿಬಿರ” ಶುಕ್ರವಾರ ಆರಂಭವಾಯಿತು.
ಯೋಗ, ಪ್ರಾಣಾಯಾಮ, ಧ್ಯಾನ ಹಾಗೂ ಸುದರ್ಶನ ಕ್ರಿಯೆಗಳನ್ನು ಒಳಗೊಂಡಿರುವ ಈ ಶಿಬಿರವನ್ನು ಹಾಸನ ಜಿಲ್ಲಾ ವಿಶ್ವಕರ್ಮ ಸಮಾಜದ ಅಧ್ಯಕ್ಷ ಹೆಚ್.ವಿ. ಹರೀಶ್ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಹಾಸನ ನಗರಸಭೆಯ ನಿವೃತ್ತ ಆಯುಕ್ತ ಪರಮೇಶ್ವರಪ್ಪ, ಹಾಸನ ತಾಲ್ಲೂಕು ವಿಶ್ವಕರ್ಮ ಸಮಾಜದ ಉಪಾಧ್ಯಕ್ಷ ಎ. ಬ್ಯಾಟರಂಗಾಚಾರ್, ಸಹ ಕಾರ್ಯದರ್ಶಿ ಎಂ.ಟಿ. ಸುರೇಶ್, ನಿರ್ದೇಶಕ ಬಿ. ಲೋಕೇಶ್ ಹಾಗೂ ಯೋಗ ತರಬೇತುದಾರರಾದ ಜಿ.ಎ. ಸುಬ್ಬುಕೃಷ್ಣ, ಹೆಚ್.ಎಲ್. ವಿದ್ಯಾ ಮತ್ತು ಎ.ಎನ್. ನಳಿನಾಕ್ಷಿ ಉಪಸ್ಥಿತರಿದ್ದರು.
-
Special14 hours agoಉಚಿತ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ತರಬೇತಿ: ಅರ್ಜಿ ಆಹ್ವಾನ!
-
Chamarajanagar18 hours agoಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ಆರೋಪಿ ಬಂಧನ
-
Hassan17 hours agoಹಾಸನ ಜಿಲ್ಲೆಯಲ್ಲಿ ಭಾರೀ ಮಳೆ: ಕೆರೆ–ಕಟ್ಟೆಗಳು ತುಂಬಿ ರೈತರಲ್ಲಿ ಸಂತಸ
-
Kodagu21 hours agoಗುಡ್ಲೂರು ಗ್ರಾಮದಲ್ಲಿ ಆರೋಗ್ಯ ಜಾಗೃತಿ ಹಾಗೂ ತಪಾಸಣಾ ಶಿಬಿರ
-
Politics20 hours agoಹೈಕಮಾಂಡ್ ಸೂಚನೆಯಂತೆ ರಾಜೀನಾಮೆ ಸಲ್ಲಿಕೆ: ಸಿದ್ದರಾಮಯ್ಯ
-
Special3 hours agoLPG ಸಿಲಿಂಡರ್ ಹೊಸ ನಿಯಮಗಳು: ಈ ತಪ್ಪು ಮಾಡಿದ್ರೆ ಗ್ಯಾಸ್ ಕನೆಕ್ಷನ್ ಬ್ಲಾಕ್ ಆಗಬಹುದು!
-
State16 hours agoಕರ್ನಾಟಕದಲ್ಲಿ ಗುಡುಗು–ಸಿಡಿಲು ಮಳೆ ಎಚ್ಚರಿಕೆ: ಆರೆಂಜ್, ಯೆಲ್ಲೋ ಅಲರ್ಟ್ IMDಯಿಂದ ಘೋಷಣೆ
-
Chamarajanagar23 hours agoಪಡಿತರ ಅಕ್ಕಿ ಸಾಗಿಸುತ್ತಿದ್ದ ಆರೋಪಿ ಬಂಧನ
