Connect with us

Chikmagalur

ಅಶ್ವಿನಿ ಮಳೆ ತಂದ ಅನಾಹುತ

Published

on

ಮೂಡಿಗೆರೆಯಲ್ಲಿ ಇಂದು ಮದ್ಯಾಹ್ನ ಬಿದ್ದ ಅಶ್ವಿನಿ ಮಳೆ ಅವಂತರವನ್ನೇ ಸೃಷ್ಟಿ ಮಾಡಿದೆ. ಇಂದು ಸಂಜೆ 4.00 ಗಂಟೆಯಲ್ಲಿ ಮೂಡಿಗೆರೆ ರಾಕ್ ಗಾರ್ಡನ್ ಹೋಟೆಲ್ ಎದುರು ಮಳೆಯ ಅವಾಂತರಕ್ಕೆ ಏಲಕ್ಟ್ರಿಕ್ ಪೂಲ್ ಬೈಕ್ ಮೆಲೆ ಬಿದ್ದು ಸುಮಾರು 50.000 ಸಾವಿರ ರೂಪಾಯಿ ನಷ್ಟವಾದ ವರದಿಯಾಗಿದ್ದು ಕನ್ನೇಹಳ್ಳಿ ಭರತ್ ಮೆಸ್ಕಾಂ ಇಲಾಖೆ ವಾಹನ ಮಾಲೀಕರಿಗೆ ಸೂಕ್ತ ಪರಿಹಾರ ಕೊಡಬೇಕೆಂದು ವತ್ತಾಯ ಮಾಡಿದ್ದಾರೆ.

ಹಂಡುಗುಳಿ ಮಹೇಶ್ ಎಂಬುವವರಿಗೆ ಸೇರಿದ ಬೈಕ್ ತಮ್ಮ ಅಂಗಡಿ ಮುಂದೆ ನಿಲ್ಲಿಸಿದ್ದು ಇಂದು ದಿಡೀರ್ ಸುರಿದ ಮಳೆಗೆ ರಸ್ತೆ ಬದಿ ನಿರ್ಮಿಸಿದ್ದ ಎಲೆಟ್ರಿಕ್ ಪೋಲ್ ಅಂಗಡಿ ಮತ್ತು ಬೈಕ್ ಮೆಲೆ ಬಿದ್ದು ಅವಂತರವನ್ನೇ ಸೃಷ್ಟಿ ಮಾಡಿದ್ದೂ, ಅಲ್ಲಿನ ಸ್ಥಳೀಯರು ಮೆಸ್ಕಾಂ ಇಲಾಖೆಯ ಕಳಪೆ ಎಲೆಕ್ಷರಿಕ್ ಪೂಲ್ಗಳ ನೀರ್ಮಾಣವೆ ಇ ಘಟನೆಗೆ ಕಾರಣ ಎಂದು ಆಕ್ರೋಶ ವರ ಹಾಕಿದ್ದು ಇದಕ್ಕೆ ಸೂಕ್ತ ಪರಿಹಾರ ಕೊಡಬೇಕು ಇಲ್ಲವಾದಲ್ಲಿ ಮೆಸ್ಕಾಂ ಇಲಾಖೆ ಮುಂದೆ ಪ್ರತಿಭಟನೆ ಮಾಡಲಾಗುವದು ಎಂದು ಗ್ರಾಮಸ್ಥರು ಪತ್ರಿಕೆಗೆ ತಿಳಿಸಿದ್ದಾರೆ.

ವರದಿ
ಸಿ. ಎಲ್. ಪೂರ್ಣೇಶ್ ಚಕ್ಕೂಡಿಗೆ

Continue Reading
Click to comment

Leave a Reply

Your email address will not be published. Required fields are marked *

Chikmagalur

ವಿದ್ಯುತ್ ಸ್ಪರ್ಶಿಸಿ ಯುವಕ ಸಾವು

Published

on

ಚಿಕ್ಕಮಗಳೂರು ವಿದ್ಯುತ್ ಸ್ಪರ್ಶಿಸಿ ಯುವಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಗಂಜಲಗೋಡು ಗ್ರಾಮದಲ್ಲಿ ಸಂಭವಿಸಿದೆ.

ನಿನ್ನೆ ಸುರಿದ ಭಾರಿ ಮಳೆಯಿಂದಾಗಿ ಕೃಷಿ ಜಮೀನಿನಲ್ಲಿ ಕೆಳಕ್ಕೆ ಜಗ್ಗಿದ್ದ ಮೈನ್ಸ್ ವಯರ್ ಸರಿಪಡಿಸಲು ಹೋಗಿ‍, ವಿದ್ಯುತ್ ಪ್ರವಹಿಸಿ ಗಂಜಲಗೂಡು ಗ್ರಾಮದ 23 ವರ್ಷದ ಯುವಕ ಜೀವಿತ್ ಸ್ಥಳದಲ್ಲಿ ಮೃತಪಟ್ಟಿದ್ದಾನೆ‌.

ಕಳೆದ ಎರಡು ವರ್ಷಗಳ ಹಿಂದೆ ಜೀವಿತ್ ತಂದೆ ಶೇಖರಪ್ಪ ಸಾವನ್ನಪ್ಪಿದ ಬಳಿಕ ಜೀವಿತ್ ಸಂಪೂರ್ಣವಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ. ಇಂದು ಸಂಭವಿಸಿದ ವಿದ್ಯುತ್ ಅವಘಡದಲ್ಲಿ ಜೀವಿತ್ ಮೃತಪಟ್ಟಿದ್ದು ಮೃತ ಜೀವಿತ್ ತಾಯಿ ರೇಣುಕ ಅನಾಥರಾಗಿದ್ದಾರೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ‌.

Continue Reading

Chikmagalur

ಅಕ್ರಮ ಪಿಸ್ತೂಲ್ ಹೊಂದಿದ ಇಬ್ಬರ ಬಂಧನ

Published

on

ಮಂಗಳೂರು: ಅಕ್ರಮ ಶಸ್ತ್ರಾಸ್ತ್ರವಾದ ಪಿಸ್ತೂಲ್ ನ್ನು ವಶದಲ್ಲಿರಿಸಿಕೊಂಡಿರುವ ಆರೋಪಿಗಳಿಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಮುಹಮ್ಮದ್ ಅಸ್ಗರ್(26), ಅಬ್ದುಲ್ ನಿಸಾರ್.ಕೆ(29) ಬಂಧಿತರು.

ಉಳ್ಳಾಲ ತಾಲೂಕು ತಲಪಾಡಿ ಗ್ರಾಮದ ಪಿಲಿಕೂರು ಎಂಬಲ್ಲಿ ಇಬ್ಬರು ವ್ಯಕ್ತಿಗಳು ಕಪ್ಪು ಬಣ್ಣದ ಕಾರಿನಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಮಾರಕಾಯುಧವಾದ ಪಿಸ್ತೂಲ್ ನ್ನು ವಶದಲ್ಲಿರಿಸಿಕೊಂಡು ಯಾವುದೋ ದುಷ್ಕೃತ್ಯವನ್ನು ನಡೆಸುವುದಕ್ಕಾಗಿ ತಿರುಗಾಡುತ್ತಿದ್ದರೆಂಬ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳಿಂದ ಪಿಸ್ತೂಲ್, ಎರಡು ಸಜೀವ ಮದ್ದುಗುಂಡುಗಳು, ಎರಡು ಮೊಬೈಲ್ ಫೋನುಗಳು, ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ರೂ. 7,15,000/- ಆಗಬಹುದು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಆರೋಪಿಯ ಪೈಕಿ ಮುಹಮ್ಮದ್ ಅಸ್ಗರ್ ಎಂಬಾತನ ವಿರುದ್ಧ ಈ ಹಿಂದೆ ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ, ಅಪಹರಣ, ಹಲ್ಲೆ ಪ್ರಕರಣ ಮತ್ತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಗಾಂಜಾ ಮಾರಾಟ ಪ್ರಕರಣ ಹಾಗೂ ಬೆಂಗಳೂರು ನಗರದ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಗಾಂಜಾ ಸಾಗಾಟದ ಪ್ರಕರಣ ಹೀಗೆ ಒಟ್ಟು 8 ಪ್ರಕರಣಗಳು ದಾಖಲಾಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

Continue Reading

Agriculture

ಗಾಳಿಮಳೆಗೆ ನೆಲಕಚ್ಚಿದ ಭತ್ತದ ಬೆಳೆ

Published

on

ದಾವಣಗೆರೆ. ಮೇ.೧೯; ಮಳೆಗಾಳಿಗೆ ದಾವಣಗೆರೆ ಸಮೀಪದ ದೊಡ್ಡಬಾತಿ ಗ್ರಾಮದಲ್ಲಿ ನೂರಾರು ಎಕರೆ ಭತ್ತದ ಬೆಳೆ ನೆಲಕಚ್ಚಿದೆ.ಫಸಲಿಗೆ ಬಂದಿದ್ದ ಭತ್ತ ಕಟಾವಿಗೆ ಮುನ್ನವೇ

ನೀರುಪಾಲಾಗಿದೆ.ಕಳೆದ ಸಂಜೆ ಬೀಸಿದ ಗಾಳಿಮಳೆಗೆ ಭತ್ತದ ಬೆಳೆ‌ಗೆ ಹಾನಿಯಾಗಿದೆ.ಬರದ ನಡುವೆಯೂ ಕೊಳವೆಬಾವಿಯ ಮೂಲಕ ಭತ್ತ ಬೆಳೆದಿದ್ದ ರೈತರಿಗೆ ಮಳೆಯಾಗಿದ್ದು ಒಂದುಕಡೆ ಸಂತಸ ತಂದರೆ ಮತ್ತೊಂದೆಡೆ ಬೆಳೆದ ಭತ್ತ ನೀರುಪಾಗಿದೆ ಇದರಿಂದ ರೈತರು ಆತಂಕಕ್ಕೊಳಗಾಗಿದ್ದಾರೆ. ಈ ವೇಳೆ ದೊಡ್ಡಬಾತಿ ಗ್ರಾಮದ ರೈತ ಉಮೇಶ್ ಮಾತನಾಡಿ ಸಾಲಮಾಡಿ ನನ್ನ ಒಂದು ಎಕರೆ ಜಮೀನಿನಲ್ಲಿ ಭತ್ತ ಬೆಳೆದಿದ್ದೆ ಆದರೆ ಇದೀಗ ಬೆಳೆಯೆಲ್ಲಾ

ನೆಲಕಚ್ಚಿದೆ.ಐವತ್ತು ಸಾವಿರ ಲಾಭ ತೆಗೆಯುವ ಕನಸು ಕಂಡಿದ್ದೆ.ಮಳೆಯಿಲ್ಲದೇ ಬರ ಆವರಿಸಿದ್ದರು ಕೊಳವೆಬಾವಿ ಮೂಲಕ ನೀರು ಹರಿಸಿ ಭತ್ತ ನಾಟಿ ಮಾಡಿದ್ದೆ ಹಗಲು ರಾತ್ರಿ ಕರೆಂಟ್ ಗೆ ನೀರು ಹಾಯಿಸಿದ್ದೇಲ್ಲಾ ನೀರಿನಲ್ಲಿ

ಹೋಮ‌ಮಾಡಿದಂತಾಗಿದೆ.ಅಧಿಕಾರಿಗಳು ನಮ್ಮ ಜಮೀನಿಗೆ ಭೇಟಿ‌ನೀಡಿ ನಮಗಾದ ನಷ್ಟ. ಭರಿಸಿಕೊಡಬೇಕು ಎಂದು ಅಳಲು ತೊಡಿಕೊಂಡರು.ದೊಡ್ಡಬಾತಿ ಗ್ರಾಮದ ಹಲವೆಡೆ ಬೆಳೆದ ಭತ್ತ ನೀರುಪಾಲಾಗಿದ್ದು ರೈತರು ಸಂಕಷ್ಟದಲ್ಲಿದ್ದಾರೆ.

Continue Reading

Trending

error: Content is protected !!