Connect with us

Hassan

ಫೆ.೨೩-೨೪ ರಂದು ವಾಣಿಜ್ಯ ಶಿಕ್ಷಣ ಸಮಾವೇಶ ಕಾರ್ಯಕ್ರಮ : ಅರುಣ್ ಕುಮಾರ್

Published

on

ಹಾಸನ: ಇದೆ ತಿಂಗಳು ೨೩ರ ಶುಕ್ರವಾರ ಮತ್ತು ಫೆಬ್ರವರಿ ೨೪ರ ಶನಿವಾರದಂದು ಎರಡು ದಿನಗಳ ಕಾಲ ಹಾರನಹಳ್ಳಿ ರಾಮಸ್ವಾಮಿ ಇನ್ಸೂಟ್ಯೂಟ್ ಆಫ್ ಐಯರ್ ಎಜುಕೇಶನ್ ಸಂಸ್ಥೆಯಿಂದ ವಾಣಿಜ್ಯ ಶಿಕ್ಷಣ ಸಮಾವೇಶ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜು ನಿರ್ದೇಶಕ ಡಾ. ವೈ. ಅರುಣ್ ಕುಮಾರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ವಾಣಿಜ್ಯ ಶಿಕ್ಷಣ ಸಮಾವೇಶವು ಫೆಬ್ರವರಿ ೨೩ರ ರಂದು ಬೆಳಿಗ್ಗೆ ೧೦ ಗಂಟೆಗೆ ಪ್ರಾರಂಭವಾಗಲಿದ್ದು, ಉದ್ಘಾಟನೆಯನ್ನು ಎಂ.ಟಿ.ಇ.ಎಸ್. ಛೇರ‍್ಮನ್ ಅಶೋಕ್ ಹಾರನಹಳ್ಳಿ ನೆರವೇರಿಸಲಿದ್ದಾರೆ. ಫಸ್ಟ್ ನ್ಯೂಸ್ ಸಿಇಒ ಮತ್ತು ಎಚಿಡಿ ಎಸ್. ರವಿಕುಮಾರ್, ತೆರಿಗೆ ಇಲಾಖೆ ಸಹಾಯಕ ನಿರ್ದೇಶಕ ಕೋದಾಂಡರಾಮ್, ಶ್ರೀಲಕ್ಷ್ಮಿ ಕಾಫಿ ಕ್ಯೂರಿಂಗ್ ಎಂಡಿ ಹೇಮಂತ್, ಸುಬ್ರಮಣ್ಯ ದೇಸಾಯಿ, ಅನುಪಮ ಸಿಂಹ, ಹೆಚ್.ಸಿ. ರಾಜೀವ್, ಆರ್.ಜಿ. ಗಿರೀಶ್ ಇತರರು ಭಾಗವಹಿಸಲಿದ್ದಾರೆ ಎಂದರು. ಕಾರ್ಯಕ್ರಮದ ಉದ್ಘಾಟನೆಯ ನಂತರ ಅಪ್ಸ್ಕಿಲ್ಲಿಂಗ್ ಪ್ರೋಗ್ರಮ್ ಇದಾದೆ ನಂತರ ಲೆಟ್ಸ್ ಟಾಕ್ ಮನಿ ಅಂಡ್ ಬ್ಯುಸ್ನೇಸ್ ಐಡಿಯಾ ಜನರೇಶನ್ ಕುರಿತು ಸಂವಾದ ನಡೆಯಲಿದೆ ಎಂದು ಹೇಳಿದರು.

ಫೆಬ್ರವರಿ ೨೪ರ ಶನಿವಾರದಂದು ಎರಡನೇ ದಿನದ ಕಾರ್ಯಕ್ರಮದಲ್ಲಿ ಕ್ಯೂಜ್ ಮಾಸ್ಟರ್ ಶ್ರೀಧರ್ ಅವರು ೧೦ ಗಂಟೆಗೆ ನಡೆಸಿಕೊಡಲಿದ್ದಾರೆ. ಇದೆ ವೇಳೆ ಎ ಸೆಲ್ಫ್ ಡೆವಲಪ್ ಮೆಂಟ್ ಸೀಸನ್ ಕುರಿತು ಮೋಟಿವೇಶನಲ್ ಸ್ಪೀಕರ್ ರುತುಪೂರ್ಣ ಶರ್ಮ ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮದ ನಂತರದಲ್ಲಿ ಸಿ.ಎಸ್. ಕಿರಣ್ ದೇಸಾಯಿ ಅವರು ಮಾಹಿತಿ ನೀಡುವರು. ಸಂಜೆ ೪ ಗಂಟೆಗೆ ಮುಕ್ತಾಯ ಸಮಾರಂಭ ಜರುಗಲಿದ್ದು, ಮುಖ್ಯ ಅತಿಥಿಯಾಗಿ ಅಶೋಕ್ ಹಾರನಹಳ್ಳಿ, ಆರ್.ಟಿ. ದ್ಯಾವೇಗೌಡ, ಎಸ್.ಜಿ. ಶ್ರೀಧರ್, ಕೆ.ಎಂ. ಶಿವಣ್ಣ, ಶಿವರಾಂ ಕೃಷ್ಣಯ್ಯ ಇತರರು ಭಾಗವಹಿಸುವುದಾಗಿ ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ಬಿ.ಎನ್. ಅರುಣ್ ಕುಮಾರ್, ಪ್ರಿನ್ಸಿಪಾಲ್ ಹೆಚ್.ಕೆ. ಸತೀಶ್, ವಾಣಿಜ್ಯ ವಿಭಾಗದ ಗಣೇಶ್, ಅನಂತೇಶ್ ಇತರರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Hassan

ಪುಲ್ವಾಮ ದಾಳಿಯಲ್ಲಿ ಮೃತಪಟ್ಟರ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ : ಫೆ.14 ರಂದು ಬೈಕ್ ರ‍್ಯಾಲಿ

Published

on

ಹಾಸನ: ಪುಲ್ವಾಮ ದಾಳಿಯಲ್ಲಿ ಮೃತಪಟ್ಟರ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವ ಉದ್ದೇಶದಿಂದ ಫೆ.14 ರಂದು ನಗರದಲ್ಲಿ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ನಿವೃತ್ತ ಅರೆಸೇನಾ ಪಡೆ
ಒಕ್ಕೂಟದ ಜಿಲ್ಲಾಧ್ಯಕ್ಷ ಸಿ. ನಾಗೇಶ್ ಹೇಳಿದರು.

ನಗರದಲ್ಲಿ‌‌‌ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2019 ರ ಫೆ. 14 ರಂದು ಜಮ್ಮು ಕಾಶ್ಮೀರ ದ ಪುಲ್ವಾಮ ಬಳಿ‌ ನಡೆದ ಉಗ್ರರ ದಾಳಿಯಲ್ಲಿ 44 ಮಂದಿ ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದು ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಉದ್ದೇಶದಿಂದ ಬೈಕ್ ರ್ಯಾಲಿ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಅಂದು ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಹಾಸನ ನಗರದ ಡೈರಿ ಸರ್ಕಲ್ ನಿಂದ ಬೈಕ್ ರ್ಯಾಲಿ
ಪ್ರಾರಂಭವಾಗಿ ರಿಂಗ್ ರಸ್ತೆಯವ ತನ್ವಿ ತ್ರಿಷಾ ಕಲ್ಯಾಣ ಮಂಟಪ ಮಾರ್ಗವಾಗಿ ಸುಬೇದಾರ್ ನಾಗೇಶ್ ವೃತ್ತ, ಸಾಲಗಾಮೆ ರಸ್ತೆ, ಮಲೆನಾಡು ಇಂಜಿನಿಯರಿಂಗ್ ಕಾಲೇಜು, ಸಹ್ಯಾದ್ರಿ ಸರ್ಕಲ್, ಹೇಮಾವತಿ ಪ್ರತಿಮೆ ಮುಂಭಾಗದಿಂದ ಎನ್ ಆರ್ ಸರ್ಕಲ್, ಡಿ ಸಿ ಕಛೇರಿ ಮೂಲಕ ಹಾಯ್ದು ರೈಲ್ವೆ ಸ್ಟೇಷನ್ ಮತ್ತು ಡೈರಿ ಸರ್ಕಲ್ ಮುಖಾಂತರ ಕೆಂಚಟಹಳ್ಳಿಯಲ್ಲಿ ಇರುವ ನಮ್ಮ ನಿವೃತ್ತ ಅರಸೇನಾ ಪಡೆಯ ಕಟ್ಟಡದ ಹತ್ತಿರಕ್ಕೆ ಸಾಗುತ್ತದೆ ಮತ್ತು ಅಲ್ಲಿ ಮುಕ್ತಾಯವಾಗುತ್ತದೆ ಎಂದು ವಿವರಿಸಿದರು.

ರ್ಯಾಲಿಯಲ್ಲಿ ಸಾರ್ವಜನಿಕರು, ವಿವಿಧ ಸಂಘಟನೆ ಪ್ರತಿನಿಧಿಗಳು ಭಾಗವಹಿಸಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಬೇಕಾಗಿ ಮನವಿ ಮಾಡಿದರು.

ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷ ರಮೇಶ್, ನಾರಾಯಣಪ್ಪ, ಎಚ್.ಕುಮಾರ್, ಎಚ್.ಆರ್.ವಿಜಯ್ ಕುಮಾರ್ ಮತ್ತಿತರರು ಇದ್ದರು.

Continue Reading

Hassan

ಫೆಬ್ರವರಿ 13 ರಂದು ಕರ್ನಾಟಕ ಮಾದರ ಮಹಾಸಭಾ ಜಿಲ್ಲಾ ಘಟಕದ ಸದಸ್ಯತ್ವ ನೋಂದಣಿಗೆ ಚಾಲನೆ

Published

on

ಹಾಸನ: ಕರ್ನಾಟಕ ಮಾದರ ಮಹಾಸಭಾ ಜಿಲ್ಲಾ ಘಟಕ ವತಿಯಿಂದ ಫೆಬ್ರವರಿ 13 ರಂದು ಬೆಳಗ್ಗೆ 9 ಗಂಟೆಗೆ ನಗರದ ಪಾಲಿಕಾ ಹೋಟೇಲ್ ಸಭಾಂಗಣದಲ್ಲಿ ಸದಸ್ಯತ್ವ ನೋಂದಣಿಗೆ ಚಾಲನೆ ನೀಡಲಾಗುವುದು ಎಂದು ಸಂಘಟನೆಯ ವಿಜಯ್ ಕುಮಾರ್ ಹೇಳಿದರು.


ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಮಾದರ ಮಹಾಸಭಾವನ್ನು ಪಕ್ಷಾತೀತವಾಗಿ ಸಂಘಟಿಸಲಾಗಿದ್ದು, ಪ್ರತಿ ಜಿಲ್ಲೆಯಲ್ಲೂ ಸದಸ್ಯತ್ವ ನೋಂದಣಿ ನಡೆಯುತ್ತಿದೆ. ಅದರಂತೆ ಹಾಸನ ಜಿಲ್ಲೆಯಲ್ಲಿ ಫೆ.13 ರಂದು ಆಹಾರ ಸಚಿವ ಕೆ.ಸಿ. ಮುನಿಯಪ್ಪ ಅವರು ಸದಸ್ಯತ್ವ ಅಭಿಯಾನಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದ ಅಂಗವಾಗಿ ಕರ್ನಾಟಕ ಮಾದರ ಮಹಾಸಭಾ ನೌಕರರ ಘಟಕವೂ ಉದ್ಘಾಟನೆಯಾಗಲಿದ್ದು, ಘಟಕದ ರಾಜ್ಯಾಧ್ಯಕ್ಷ ಮಂಜುನಾಥ್ ಓಣಿಕೇರಿ ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಸಭೆಯ ವತಿಯಿಂದ ಎಂಬಿಬಿಎಸ್ ಹಾಗೂ ಉನ್ನತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಲಾಗುವುದು ಎಂದು ತಿಳಿಸಿದ ಅವರು, ಸಮುದಾಯದ ಹೆಚ್ಚಿನ ಸಂಖ್ಯೆಯವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಕೆಂಚಪ್ಪ, ಕುಮಾರಸ್ವಾಮಿ, ಸತೀಶ್ ಮತ್ತಿತರರು ಉಪಸ್ಥಿತರಿದ್ದರು.

Continue Reading

Hassan

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೈತ್ರಿಗೆ ವಿರೋಧ: ಪ್ರೀತಂಗೌಡರ ವಿರುದ್ಧ ಲಿಂಗೇಶ್ ವಾಗ್ದಾಳಿ

Published

on

ಹಾಸನ: ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್–ಬಿಜೆಪಿ ಮೈತ್ರಿಯಿಂದ ಟಿಕೆಟ್ ವಂಚಿತರಾಗುವ ಭಯದಿಂದಲೇ ಮಾಜಿ ಶಾಸಕ ಪ್ರೀತಂಗೌಡ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೈತ್ರಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಲಿಂಗೇಶ್ ಆರೋಪಿಸಿದರು.

ನಗರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಲೋಕಸಭಾ ಚುನಾವಣೆಯಲ್ಲಿಯೂ ಜೆಡಿಎಸ್–ಬಿಜೆಪಿ ಮೈತ್ರಿ ಇದ್ದಾಗ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದರು. ಈಗಾಗಲೇ ಒಂದು ಕಾಲನ್ನು ಕಾಂಗ್ರೆಸ್‌ಗೆ ಇಟ್ಟಿದ್ದಾರೆ. ಮೈತ್ರಿಯಿಂದ ಟಿಕೆಟ್ ಸಿಗದಿದ್ದರೆ ಕಾಂಗ್ರೆಸ್‌ನಿಂದಲೇ ಸ್ಪರ್ಧೆ ಮಾಡುವ ಸಾಧ್ಯತೆ ಇದೆ” ಎಂದು ಕಿಡಿಕಾರಿದರು.
“ಹಾಸನದಲ್ಲಿ ಬಿಜೆಪಿ ಹೈಕಮಾಂಡ್ ಪ್ರೀತಂಗೌಡರೇನಾ? ಅವರಿಗೆ ಯಾವುದೇ ನಿಯಂತ್ರಣ ಇಲ್ಲವೇ?” ಎಂದು ಪ್ರಶ್ನಿಸಿದರು.

ಎಚ್.ಡಿ. ಕುಮಾರಸ್ವಾಮಿ ಕೇಂದ್ರ ಸಚಿವರಾಗಿ ಮಂಡ್ಯ ಜಿಲ್ಲೆಗೆ ₹500 ಕೋಟಿ ವೆಚ್ಚದಲ್ಲಿ ಸಂಶೋಧನಾ ಕೇಂದ್ರ ತಂದಿರುವುದನ್ನು ಸ್ವಾಗತಿಸಿದ ಲಿಂಗೇಶ್, “ಇದರ ಲಾಭ ಹಾಸನಕ್ಕೂ ಆಗಲಿದೆ. ಜಿಲ್ಲೆಯಲ್ಲೂ ಬೃಹತ್ ಕೈಗಾರಿಕೆ ತರಲು ಮನವಿ ಮಾಡಿದ್ದೇವೆ ಎಂದರು.

ಹಾಸನ ಜಿಲ್ಲೆಯ ಸಂಸದರು ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಸಕ್ರಿಯರಾಗದೇ, ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಶಿವಲಿಂಗೇಗೌಡರ ವರ್ತನೆಗೆ ಖಂಡನೆ:

ಶಾಸಕ ಶಿವಲಿಂಗೇಗೌಡ ಅವರು ವಿಧಾನಸೌಧದಲ್ಲಿ ನಡೆದುಕೊಂಡ ರೀತಿಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಲಿಂಗೇಶ್, “ಸದನದ ಗೌರವ ಕಾಪಾಡಬೇಕು. ಶಾಸಕ ಶರಣ ಸಲಗರ ಅವರ ಪತ್ನಿ ಕುರಿತು ಸದನದಲ್ಲಿ ಮಾತನಾಡಿರುವುದು ಖಂಡನೀಯ” ಎಂದು ಹೇಳಿದರು.

ಅರಸೀಕೆರೆ ಕ್ಷೇತ್ರದಲ್ಲಿ ದೇವೇಗೌಡರ ವರ್ಚಸ್ಸು ಇರಲಿಲ್ಲ ಎಂಬ ಶಿವಲಿಂಗೇಗೌಡರ ಆರೋಪಕ್ಕೂ ಪ್ರತಿಕ್ರಿಯಿಸಿದ ಅವರು, “ಶಿವಲಿಂಗೇಗೌಡರು ಶಾಸಕರಾಗುವುದಕ್ಕೂ ಮೊದಲು ಜೆಡಿಎಸ್‌ನಿಂದ ಹಲವರು ಗೆದ್ದಿದ್ದಾರೆ. ಸಿದ್ಧಾಂತವಿಲ್ಲದೆ ಮಂತ್ರಿಗಿರಿಯ ಆಸೆಗಾಗಿ ಕಾಂಗ್ರೆಸ್ ಸೇರಿದ್ದಾರೆಎಂದು ಟೀಕಿಸಿದರು.

ಎಚ್.ಕೆ. ಕುಮಾರಸ್ವಾಮಿ ಪ್ರತಿಕ್ರಿಯೆ
ಮಾಜಿ ಸಚಿವ ಎಚ್.ಕೆ. ಕುಮಾರಸ್ವಾಮಿ ಮಾತನಾಡಿ, “ಮೈತ್ರಿ ಮಾಡಿಕೊಳ್ಳಲು ನಾವು ಅಂಗಲಾಚುತ್ತಿಲ್ಲ. ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿದ್ದೇವೆ. ಪ್ರೀತಂಗೌಡರು ರಾಜ್ಯ ಪ್ರಧಾನ ಕಾರ್ಯದರ್ಶಿ ಅಷ್ಟೇ, ಹೈಕಮಾಂಡ್ ಅಲ್ಲ. ಅವರ ಮಾತಿನಿಂದ ಎಲ್ಲವೂ ನಡೆಯುವುದಿಲ್ಲ” ಎಂದರು.
“ಸಮಯ ಬಂದಾಗ ನಮ್ಮ ಶಕ್ತಿ ಪ್ರದರ್ಶಿಸುತ್ತೇವೆ” ಎಂದು ತಿರುಗೇಟು ನೀಡಿದರು.

Continue Reading

Trending

error: Content is protected !!