Connect with us

Crime

ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಆರೋಪ, 10 ಮಂದಿ ಬಂಧನ

Published

on

ಚಿಕ್ಕಮಗಳೂರು : ಬಾಲ ಮಂದಿರದಿಂದ ತಪ್ಪಿಸಿಕೊಂಡಿದ್ದ ಇಬ್ಬರು ಬಾಲಕಿಯರನ್ನು ವೇಶ್ಯಾವಾಟಿಕೆಯ ಜಾಲಕ್ಕೆ ತಳ್ಳಿ ಅತ್ಯಾಚಾರಕ್ಕೆ ಕಾರಣವಾಗಿದ್ದ ನಾಲ್ವರು ಸೇರಿದಂತೆ ಒಟ್ಟು ಹತ್ತು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಶಿವಮೊಗ್ಗದಲ್ಲಿ ಬಾಲಕಿಯೊಂದಿಗೆ ಸುತ್ತಾಡುತ್ತಿದ್ದ ಯುವಕನನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದರು. 16 ವರ್ಷದ ಬಾಲಕಿಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ ಯುವಕನ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೋಕ್ಸೋ) ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದರು. ಬಳಿಕ ಬಾಲಕಿಯನ್ನು ಚಿಕ್ಕಮಗಳೂರಿನ ಬಾಲ ಮಂದಿರಕ್ಕೆ ಒಪ್ಪಿಸಿದ್ದರು.

ಬಾಲ ಮಂದಿರದಿಂದ ಮತ್ತೊಬ್ಬ14 ವರ್ಷದ ಬಾಲಕಿಯೊಂದಿಗೆ ಹೊರಹೋಗಿದ್ದ ಬಾಲಕಿ, ವೇಶ್ಯಾವಾಟಿಕೆ ನಡೆಸುವವರ ಸಂಪರ್ಕಕ್ಕೆ ಸಿಲುಕಿದ್ದಾರೆ. ಈ ಇಬ್ಬರು ಬಾಲಕಿಯರನ್ನು ಹಾಸನದ ಮಧ್ಯವರ್ತಿಯೊಬ್ಬನ ಬಳಿ ಚಿಕ್ಕಮಗಳೂರಿನ ಮಧ್ಯವರ್ತಿ ಕಳುಹಿಸಿದ್ದಾರೆ. ಅಲ್ಲಿ ಇಬ್ಬರು ಬಾಲಕಿಯರ ಮೇಲೆ ಹಲವರಿಂದ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬುದು ಮೂಲಗಳ ಮಾಹಿತಿ, ಅಲ್ಲಿಂದ ಬಸ್ ಹತ್ತಿ ಬೆಂಗಳೂರಿಗೆ ತೆರಳಿ, ಧರ್ಮಸ್ಥಳಕ್ಕೆ ಪ್ರಯಾಣ ಬೆಳೆಸಿದ್ದರು. ಅಷ್ಟರಲ್ಲಿ ಬಾಲ ಮಂದಿರದ ಸಿಬ್ಬಂದಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಧರ್ಮಸ್ಥಳದಿಂದ ಬಾಲಕಿಯರನ್ನು ಕರೆ ತಂದು ವಿಚಾರಿಸಿದಾಗ ವೇಶ್ಯಾವಾಟಿಕೆಗೆ ತಳ್ಳಿ, ಹಾಸನದಲ್ಲಿ ಹಲವರಿಂದ ಅತ್ಯಾಚಾರ ನಡೆದಿದೆ ಎಂಬುದನ್ನು ಬಾಲಕಿಯರು ಪೊಲೀಸರ ಮುಂದೆ ತಿಳಿಸಿದ್ದಾರೆ

ಚಿಕ್ಕಮಗಳೂರಿನಿಂದ ಹಾಸನಕ್ಕೆ ಕಳುಹಿಸಿದ ಆರೋಪದಲ್ಲಿ ಮಧ್ಯವರ್ತಿ ದಂಪತಿ, ಹಾಸನದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದರು ಎನ್ನಲಾದ ದಂಪತಿ, ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿದ ಆರೋಪದಲ್ಲಿ ಆರು ಮಂದಿ ಸೇರಿ ಹತ್ತು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನೂ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ತಂಡ ರಚಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಬಾಲ ಮಂದಿರದಿಂದ ವಿದ್ಯಾರ್ಥಿನಿಯರು ತಪ್ಪಿಸಿಕೊಳ್ಳಲು ಅವಕಾಶ ಇಲ್ಲ. ಆಗಿರುವ ಪ್ರಮಾದಕ್ಕೆ ಕಾರಣ ಕೇಳಿ ಕಾವಲುಗಾರರಿಗೆ ಬಾಲ ಮಂದಿರದ ಮುಖ್ಯಸ್ಥರು ನೋಟಿಸ್ ನೀಡಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Crime

ಖಾಸಗಿ ಶಾಲಾ ಶಿಕ್ಷಕಿ ಅಪಹರಣ ಪ್ರಕರಣ – ಕಿಡ್ನಾಪರ್ಸ್‌ನ್ನು ಪತ್ತೆ ಹಚ್ಚಿದ ಪೊಲೀಸರು

Published

on

ಹಾಸನ : ಹಾಸನ ಹೊರವಲಯದ ಬಿಟ್ಟಗೌಡನಹಳ್ಳಿ ಬಳಿ ಖಾಸಗಿ ಶಾಲಾ ಶಿಕ್ಷಕಿ ಅಪಹರಣ ಪ್ರಕರಣ
ಕಿಡ್ನಾಪರ್ಸ್‌ನ್ನು ಪತ್ತೆ ಹಚ್ಚಿದ ಪೊಲೀಸರು
ನೆಲ್ಯಾಡಿ ಬಳಿ ತೆರಳುತ್ತಿದ್ದ ವೇಳೆ ಎಲ್ಲರೂ ಪೊಲೀಸರ ವಶಕ್ಕೆ


ಅರ್ಪಿತಳನ್ನು ರಕ್ಷಿಸಿ ಕಿಡ್ನಾಪ್ ಮಾಡಿದವರನ್ನು ವಶಕ್ಕೆ ಪಡೆದ ಪೊಲೀಸರು
ಹಾಸನ ನಗರ ಪೊಲೀಸ್ ಠಾಣೆಗೆ ಕರೆತರುತ್ತಿರುವ ಪೊಲೀಸರು
ಯುವತಿ ಅಪಹರಿಸಿ ಸೋಮವಾರಪೇಟೆ ಕಡೆ ಕರೆದೊಯ್ದಿದ್ದ ಖತರ್ನಾಕ್ ಕಿಡ್ನಾಪರ್ಸ್


ಪೊಲೀಸರಿಗೆ ಸಿಗದ ರೀತಿ ಪ್ಲಾನ್ ಮಾಡಿ ಅರ್ಪಿತಾಳನ್ನು ಕರೆದೊಯ್ಯಲು ಯತ್ನಿಸುತ್ತಿದ್ದ ರಾಮು ಮತ್ತು ತಂಡ
ಅಪರಹರಣಕ್ಕೊಳಗಾಗಿದ್ದ ಅರ್ಪಿತಾಳನ್ನು ರಕ್ಷಿಸಿ ರಾಮು ಮತ್ತು ತಂಡವನ್ನು ವಶಕ್ಕೆ ಪಡೆದು ಹಾಸನಕ್ಕೆ ಕರೆತರುತ್ತಿರುವ ಪೊಲೀಸರು

Continue Reading

Crime

ಉದ್ಯಮಿ ಕೃಷ್ಣೇಗೌಡ ಕೊಲೆ ಪ್ರಕರಣ CIDಗೆ – ಇಂದಿನಿಂದಲೇ CID ಡ್ರಿಲ್

Published

on

ಹಾಸನ : ಮಾಜಿ ಸಚಿವ ಎಚ್.ಡಿ.ರೇವಣ್ಣ ಆಪ್ತ ಉದ್ಯಮಿ ಕೃಷ್ಣೇಗೌಡ ಕೊಲೆ ಪ್ರಕರಣ

ಆರೋಪಿಗಳ ಬಂಧನದ ವಿಷಯದಲ್ಲಿ ಜಿಲ್ಲಾ ಪೊಲೀಸ್ ವಿಫಲ

ಪ್ರಕರಣ ಮುಚ್ಚಿ ಹೋಗಬಹುದು ಸಾಧ್ಯತೆ ಹಿನ್ನಲೆ

ಕಾನೂನು, ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್.ಹಿತೇಂದ್ರ ಪ್ರಕರಣವನ್ನು ಸಿಐಡಿಗೆ ವಹಿಸಿ ಆದೇಶ

ತಕ್ಷಣದಿಂದ ಜಾರಿಗೆ ಬರುವಂತೆ ಪ್ರಕರಣದ ತನಿಖಾಧಿಕಾರಿ ಹತ್ಯೆಗೆ ಸಂಬಂಧಿಸಿದ ಎಲ್ಲ ಕಡತಗಳನ್ನು ಸಿಐಡಿಗೆ ಸಲ್ಲಿಸಲು ಸೂಚನೆ

ಕೃಷ್ಣೇಗೌಡ ಹತ್ಯೆ ನಂತರ ಐವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು

ಪ್ರಮುಖ ಆರೋಪಿಗಳಾದ ಯೋಗಾನಂದ ಹಾಗೂ ಅನಿಲ್ ಅವರಿಬ್ಬರ ಸುಳಿವು ಪತ್ತೆಯಲ್ಲಿ ಸಂಪೂರ್ಣ ವಿಫಲ

ಈ ನಡುವೆ ಪ್ರಕರಣದ ಇಬ್ಬರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿರುವ ನ್ಯಾಯಾಲಯ

ಇಡೀ ರಾಜ್ಯದ ಗಮನ ಸೆಳೆದಿದ್ದ ಪ್ರಕರಣ ಹಳ್ಳ ಹಿಡಿಯುವ ಸಾಧ್ಯತೆ

ಪ್ರಕರಣದ ಗಂಭೀರತೆಗೆ ತಕ್ಕಂತೆ ತನಿಖೆ ನಡೆಯದಿರುವ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳ ಚರ್ಚೆ

ಪ್ರಕರಣ ನಡೆದಾಗ ಇದ್ದ ಎಸ್ಪಿ ಹರಿರಾಂಶಂಕರ್ ವರ್ಗಾವಣೆ

ಆ ಸ್ಥಾನಕ್ಕೆ ಬಂದ ಮೊಹಮದ್ ಸುಜೀತಾ ಅವರಿಂದಲೂ ಆರೋಪಿಗಳ ಬಂಧಿಸುವಲ್ಲಿ ವಿಫಲ

ಈಗ ಸಿಐಡಿ ಪ್ರವೇಶದಿಂದ ಪ್ರಕರಣದ ತನಿಖೆಯ ದಿಕ್ಕು ಬದಲಾಗುವ ಸಾಧ್ಯತೆ

 

Continue Reading

Crime

ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ

Published

on

ಹಾಸನ : ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ
ಆಲೂರು ತಾಲ್ಲೂಕಿನ ಕವಳಗೆರೆ ಗ್ರಾಮದ ಸುಚಿತ್ರಾ (20) ಕೊಲೆಯಾದ ಯುವತಿ
ಹಾಸನ ತಾಲ್ಲೂಕಿನ, ಕುಂತಿಗುಡ್ಡದಲ್ಲಿ ಘಟನೆ
ತೇಜಸ್ (23) ಕೊಲೆ ಮಾಡಿರುವ ಆರೋಪಿ
ಮೊಸಳೆಹೊಸಳ್ಳಿ ಇಂಜಿನಿಯರ್ ಕಾಲೇಜಿನಲ್ಲಿ ಬಿಇ ಮ್ಯಾಕಾನಿಕಲ್ ಓದುತ್ತಿದ್ದ ಸುಚಿತ್ರಾ
ಸುಚಿತ್ರಾಳ ಕತ್ತು ಕುಯ್ದು ಬರ್ಬರವಾಗಿ ಹತ್ಯೆ ಮಾಡಿ ಎಸ್ಕೇಪ್ ಆಗಿರುವ ಆರೋಪಿ ತೇಜಸ್
ಮುಂಚಿನ ಕಾರ್ಯಾಚರಣೆ ನಡೆದಿ ಗ್ರಾಮಾಂತರ ಪೊಲೀಸರು
ಯುವತಿ ಕೊಂದಿದ್ದ ಇಂಜಿನಿಯರಿಂಗ್ ಪದವಿಧರ ತೇಜಸ್ ಪೊಲೀಸರ ವಶಕ್ಕೆ
ಪ್ರೇಮ ವೈಫಲ್ಯದಿಂದ ಗೆಳತಿಯನ್ನೇ ಬರ್ಬರವಾಗಿ ಕೊಲೆ ಮಾಡಿರೊ ಆರೋಪ
ಮೊಸಳೆಹೊಸಳ್ಳಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಮಾಡಿದ್ದ ತೇಜಸ್
ಪ್ರೀತಿಸಲು ನಿರಾಕರಿಸಿದ್ದಕ್ಕೆ ಕುಂತಿ ಬೆಟ್ಟಕ್ಕೆ ಕರೆದೊಯ್ದು ಹತ್ಯೆ ಮಾಡಿರೊ ಆರೋಪ
ಇಂದು ಮುಂಜಾನೆ ಯುವತಿಯನ್ನು ತನ್ನೊಟ್ಟಿಗೆ ಕರೆದೊಯ್ದಿದ್ದ ತೇಜಸ್
ಒಂಟಿಯಾಗಿ ಕರೆದೊಯ್ದು ಕುತ್ತಿಗೆ ಸೀಳಿ ಹತ್ಯೆಮಾಡಿದ್ದ ಪಾತಕಿ

 

Continue Reading

Trending