Mandya
ವಿವಿಧೆಡೆ ಚಿನ್ನಾಭರಣ ಕಳವು ಮಾಡಿದ್ದ ಖದೀಮರ ಸೆರೆ ; 35 ಲಕ್ಷ ರೂ. ಮೌಲ್ಯದ ಮಾಲುಗಳ ವಶ
ಮಂಡ್ಯ : ಜಿಲ್ಲೆಯ ಮಳವಳ್ಳಿ ತಾಲೂಕಿನ ನಾನಾ ಭಾಗಗಳಲ್ಲಿ ಕಳವು ಪ್ರಕರಣಗಳಿಗೆ ಸಂಬಂದಿಸಿದಂತೆ ಸುಮಾರು 35 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ, ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಡಾ.ವಿ.ಜೆ.ಶೋಭರಾಣಿ ತಿಳಿಸಿದರು.
ಮಳವಳ್ಳಿ ತಾಲೂಕಿನ ಪಟ್ಟಣ ವ್ಯಾಪ್ತಿಯ ಮನೆಗಳ್ಳತನ, ಸಾಗ್ಯ ಸರಗೂರು ಗ್ರಾಮದ ಪಟ್ಟಲದಮ್ಮ ದೇವಾಸ್ಥಾನದಲ್ಲಿ ಕಳ್ಳತನ ಪೈಕಿ 168 ಗ್ರಾಂ ಚಿನ್ನ, 291 ಗ್ರಾಂ ಬೆಳ್ಳಿ ಹಾಗೂ ದ್ವಿಚಕ್ರ ವಾಹನ ಕಳ್ಳತನ ಪ್ರರಕಣದಲ್ಲಿ 19 ಬೈಕ್‌ಗಳನ್ನು ಆರೋಪಿಗಳನ್ನು ಬಂಧಿಸಿ ವಶಕ್ಕೆ ಪಡೆಯಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.

ಮಳವಳ್ಳಿ ಟೌನ್‌ನ ಗಂಗಾಧರ್ ಅವರ ಮನೆಯಲ್ಲಿ ಕಳ್ಳತನ ಪ್ರಕರಣದಲ್ಲಿ 16 ವರ್ಷದ ಬಾಲಕ ಹಾಗು ಆತನ ತಂದೆ ಬಾಬ್‌ಜಾನನ್ನು ಬಂಧಿಸಲಾಗಿದೆ. ತನಿಖೆಯ ವೇಳೆ ಮಳವಳ್ಳಿ ಪುರ ಪೊಲೀಸ್ ಠಾಣೆಯಲ್ಲಿ 3 ಹಲಗೂರು ಹಾಗೂ ಬನ್ನೂರು ಪೊಲೀಸ್ ಠಾಣೆಯಲ್ಲಿ ತಲಾ ಒಂದು ಪ್ರಕರಣದ ಪೈಕಿ ಒಟ್ಟು 20 ಲಕ್ಷ ರೂ ಮೌಲ್ಯದ 144 ಗ್ರಾಂ ಚಿನ್ನ, 46 ಗ್ರಾಂ ಬೆಳ್ಳಿ ವಶಕ್ಕೆ ಪಡೆಯಲಾಗಿದೆ. ಪಿಎಸ್‌ಐಗಳಾದ ಶಿವಲಿಂಗ ದಳವಾಯಿ ಲೋಕೇಶ್, ಎಎಸ್‌ಐಗಳಾದ ಎಂ.ಬಿ.ಸುರೇಶ್, ರಮೇಶ್, ಸಿಬ್ಬಂದಿಗಳಾದ ಮಾದೇಶ್, ಹರ್ಷವರ್ಧನ್, ವಿಖಾಶ್, ಸಿದ್ದರಾಜು, ರಫೀಕ್ ನಧಾಫ್, ಮಂಜು ಕಾರ‍್ಯನಿರ್ವಹಿಸಿದ್ದಾರೆ ಎಂದರು.
ಸಾಗ್ಯ ಸರಗೂರು ಗ್ರಾಮದ ಶ್ರೀಪಟ್ಟಲದಮ್ಮ ದೇವಸ್ಥಾನದ ಬಾಗಿಲು ಒಡೆದು ಕಳ್ಳತನ ಪ್ರಕರಣದಲ್ಲಿ ತಮಿಳುನಾಡಿನ ವಿಜಯ್, ಮಣಿ, ಮಂಡ್ಯದ ಮಧುರ, ಭರತ್, ರಾಮನಗರದ ನವೀನ್, ಮೈಸೂರಿನ ಶಬ್ಬೀರ್ ಎನ್ನುವವರನ್ನು ಬಂಧಿಸಲಾಗಿದೆ. ಎಲ್ಲರ ವೃತ್ತಿ ಚಿಂದಿ ಆಯುವುದು, ಪಾತ್ರೆ ರಿಪೇರಿ ಮಾಡುವುದಾಗಿದೆ. ಆರೋಪಿಗಳ ಮೇಲೆ ಹಲಗೂರು ಠಾಣಾ ವ್ಯಾಪ್ತಿಯಲ್ಲಿ 4 ಪ್ರಕರಣಗಳಿವೆ. ಅವುಗಳಿಂದ ಮೌಲ್ಯದ 24 ಗ್ರಾಂ ಚಿನ್ನ, 245 ಗ್ರಾಂ ಬೆಳ್ಳಿ, 5094 ರೂ ಹುಂಡಿ ಹಣ, ಎರಡು ಜತೆ ದೀಪಾಲೆ ಕಂಬ, ಎರಡು ಪೂಜಾ ತಟ್ಟೆ, 5 ಗಂಟೆ, ಬೈಕ್ ಮತ್ತು ಗೂಟ್ಸ್ ಆಟೋ ಹಾಗೂ ಎರಡು ಮೇಕೆಗಳ ಮಾರಾಟದ ಹಣ ಸೇರಿ ಒಟ್ಟು 7,17,844 ರೂ. ವಶಕ್ಕೆ ಪಡೆಯುವಲ್ಲಿ ಠಾಣೆಯ ಪಿಎಸ್‌ಐ ಲೋಕೇಶ್, ರಿಯಾಜ್ ಪಾಷ, ಪ್ರಭುಸ್ವಾಮಿ, ರವಿಕಿರಣ್, ಲೋಕೇಶ್, ಸಿದ್ದರಾಜು, ಮೋಹನ್‌ಕುಮಾರ್, ರಫಿಕ್ ನಧಾಫ್ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.

ಮಳವಳ್ಳಿ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ಬಳಿ ಬೈಕ್ ಕಳ್ಳತನ ಬೇದಿಸಿರುವ ಟೌನ್ ಪೊಲೀಸರು ಮೈಸೂರಿನ ಕೆ.ಕಾರ್ತಿಕ್ ಮಳವಳ್ಳಿಯ ಎಸ್.ಎಸ್.ಸಾಗರ್ ಮತ್ತು ಎಂ.ಸಿ.ಪ್ರಜ್ವಲ್ ಎಂಬ ರೋಪಿಗಳನ್ನು ಬಂಧಿಸಿದ್ದಾರೆ. ತನಿಖೆಯ ವೇಳೆ ಬನ್ನೂರು ಠಾಣಾ ವ್ಯಾಪ್ತಿಯಲ್ಲಿ 10, ಕೊಳ್ಳೇಗಾಲ ಟೌನ್‌ನಲ್ಲಿ 2, ಕೊಳ್ಳೇಗಾಲ ಗ್ರಾಮಾಂತರ, ಮಂಡ್ಯ ಪಶ್ಚಿಮ ವ್ಯಾಪ್ತಿಯಲ್ಲಿ ತಲಾ 2, ಮೈಸೂರು ನಗರ, ಮಳವಳ್ಳಿ, ಕಿರುಗಾವಲು ಠಾಣಾ ವ್ಯಾಪ್ತಿಯಲ್ಲಿ ತಲಾ 1 ಪ್ರಕರಣಗಳಿಂದ 19 ಬೈಕ್ ವಶಕ್ಕೆ ಪಡೆಯಲಾಗಿದೆ. ಕರ‍್ಯಾಚರಣೆಯಲ್ಲಿ ಮಳವಳ್ಳಿ ಟೌನ್ ಪೊಲೀಸ್ ಠಾಣೆಯ ಪಿಎಸ್‌ಐ ಶಿವಲಿಂಗ ದಳವಾಯಿ, ಎಎಸ್‌ಐಗಳಾದ ಸುರೇಶ್, ಗೋಪಾಲ್, ಸಿಬ್ಬಂದಿಗಳಾದ ಮಾದೇಶ್, ಮಹದೇವಸ್ವಾಮಿ, ಹರ್ಷವರ್ಧನ್, ಪ್ರಭುಸ್ವಾಮಿ, ರಿಯಾಜ್ ಪಾಷಾ, ವಿಕಾಶ್, ಶ್ರೀನಿವಾಸ್, ಮಧುಕಿರಣ್ ಭಾಗವಹಿಸಿದ್ದರು. ಎಲ್ಲ ಪ್ರಕರಣಗಳನ್ನು ಡಿವೈಎಸ್‌ಪಿ ಎಸ್.ಬಿ.ಯಶವಂತ್‌ಕುಮಾರ್, ಸಿಐ ಬಿ.ಎಸ್.ಶ್ರೀಧರ್ ಮಾರ್ಗದರ್ಶನದಲ್ಲಿ ಬೇದಿಸಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಸಿಬ್ಬಂದಿ ವರ್ಗದ ಕಾರ್ಯವನ್ನು ಅವರು ಶ್ಲಾಘಿಸಿದರು.
Mandya
ಯುವಜನತೆ ಡ್ರಗ್ಸ್ ಸೇರಿದಂತೆ ಮಾದಕ ವಸ್ತುಗಳ ವಿರುದ್ಧ ಸದಾ ಜಾಗೃತರಾಗಿರಬೇಕು : ಡಿವೈಎಸ್‌ಪಿ ಚೆಲುವರಾಜು
ಕೆ.ಆರ್.ಪೇಟೆ : ವಿದ್ಯಾರ್ಥಿಗಳು ಹಾಗೂ ಯುವಜನರ ಉಜ್ವಲವಾದ ಭವಿಷ್ಯಕ್ಕೆ ಮಾರಕವಾಗಿರುವ ಡ್ರಗ್ಸ್ ಸೇರಿದಂತೆ ಮಾದಕ ವಸ್ತುಗಳ ವಿರುದ್ಧ ಸದಾ ಜಾಗೃತರಾಗಿರಬೇಕು ಎಂದು ಡಿವೈಎಸ್ಪಿ ಚೆಲುವರಾಜು ಹೇಳಿದರು.
ಅವರು ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್’ನಲ್ಲಿ ಕೃಷ್ಣರಾಜಪೇಟೆ ಪಟ್ಟಣ ಪೊಲೀಸ್ ಠಾಣೆ ವತಿಯಿಂದ ಆಯೋಜಿಸಿದ್ದ ಡ್ರಗ್ಸ್ ವಿರುದ್ಧದ ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿ, ವಿದ್ಯಾರ್ಥಿಗಳು ಹಾಗೂ ಯುವಜನರಲ್ಲಿ ಅರಿವಿನ ಜಾಗೃತಿ ಮೂಡಿಸಿ ಮಾತನಾಡಿದರು.

ಡ್ರಗ್ಸ್ ಎಂಬ ಮಾಯಾಲೋಕದ ಮಾದಕ ವಸ್ತುಗಳು ಸೇರಿದಂತೆ ತಂಬಾಕು ಉತ್ಪನ್ನಗಳು ವಿದ್ಯಾರ್ಥಿಗಳು ಹಾಗೂ ಯುವಜನರಲ್ಲಿ ವಿಶೇಷವಾದ ಆಕರ್ಷಣೆಯನ್ನು ರೂಪಿಸಿ, ನಶೆಯ ವಿಷ ವರ್ತುಲದಲ್ಲಿ ವಿದ್ಯಾರ್ಥಿಗಳನ್ನು ಬೀಳಿಸುತ್ತಿದೆ. ಆ ಮೂಲಕ ತಮ್ಮ ಉಜ್ವಲವಾದ ಭವಿಷ್ಯ ಹಾಗೂ ವ್ಯಕ್ತಿತ್ವವನ್ನು ಹಾಳು ಮಾಡಿ ವಿದ್ಯಾರ್ಥಿಗಳ ಭವ್ಯವಾದ ಭವಿಷ್ಯಕ್ಕೆ ಸಂಚಾಕಾರ ತಂದೊಡ್ದುವ ಮಾದಕ ವಸ್ತುಗಳ ಬಳಕೆಗೆ ಬಲಿಯಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಇದರ ವಿರುದ್ಧ ವಿದ್ಯಾರ್ಥಿಗಳು ಹಾಗೂ ಯುವಜನರು ಸದಾ ಜಾಗೃತರಾಗಿರಬೇಕು. ಕಾಳ ಸಂತೆಯಲ್ಲಿ ಡ್ರಗ್ಸ್ ಮಾರಾಟ ಮಾಡಿ ವಿದ್ಯಾರ್ಥಿಗಳ ಜೀವನವನ್ನು ನರಕಕ್ಕೆ ತಳ್ಳುವ ಸಮಾಜ ವಿರೋಧಿಗಳ ಬಗ್ಗೆ ಪೋಲೀಸ್ ಇಲಾಖೆಗೆ ಮಾಹಿತಿ ನೀಡಬೇಕು.
ಸಮಾಜ ಕಂಟಕರ ಬಗ್ಗೆ ಮಾಹಿತಿ ತಿಳಿಸದೇ ಹೋದರೆ ಡ್ರಗ್ಸ್ ಮಾರಾಟ ಜಾಲ ಹೆಮ್ಮರವಾಗಿ ಬೆಳೆಯುತ್ತದೆ.

ಈ ಬಗ್ಗೆ ಮಾಹಿತಿ ತಿಳಿದ ತಕ್ಷಣವೇ ಪೊಲೀಸರಿಗೆ ಇಲ್ಲವೇ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿ ಸಹಕರಿಸುವ ಮೂಲಕ ಡ್ರಗ್ಸ್ ಸೇರಿದಂತೆ ನಶೆಯಿಂದ ಮುಕ್ತವಾದ ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ನಾಗರಿಕ ಪೊಲೀಸರಿಗೆ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪಾಲಿಟೆಕ್ನಿಕ್ ಪ್ರಾoಶುಪಾಲ ಗೊರವಾಲೆ ನಾಗರಾಜು ಮಾತನಾಡಿ, ವಿದ್ಯಾರ್ಥಿಗಳು ಡ್ರಗ್ಸ್ ಸೇರಿದಂತೆ ನಶೆ ಬರಿಸಿ ಯುವಜನರ ಬದುಕನ್ನು ಹಾಳು ಮಾಡುವ ಮಾದಕ ವಸ್ತುಗಳ ಬಳಕೆ ಹಾಗೂ ಮಾರಾಟ ಜಾಲದ ವಿರುದ್ದ ಸದಾ ಜಾಗೃತರಾಗಿರಬೇಕು. ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಸಮಯದಲ್ಲಿ ಏಕಾಗ್ರತೆಯಿಂದ ಅಭ್ಯಾಸ ಮಾಡಿ ಸಾಧನೆ ಮಾಡಬೇಕು ಎಂದು ಕರೆ ನೀಡಿದರು.

ಪಟ್ಟಣ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಸುನಿಲ್ ಕುಮಾರ್, ಗ್ರಾಮಾoತರ ಠಾಣೆಯ ಇನ್ಸ್ ಪೆಕ್ಟರ್ ಮಹೇಶ್, ಹಿರಿಯ ಪ್ರಾದ್ಯಾ ಪಕ ಮಹಾಲಿಂಗೆಗೌಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Mandya
ಸಾಮಾಜಿಕ ಕಳಕಳಿಯ ನೈಜ ಚಿತ್ರ “ಸರ್ಕಾರಿ ನ್ಯಾಯಬೆಲೆ ಅಂಗಡಿ” ತೆರೆಗೆ : ಕೃಷ್ಣಪ್ಪ
ನಾಗಮಂಗಲ : ಗ್ರಾಮೀಣ ಭಾಗದ ಕಥಾವಸ್ತು ಆಧಾರಿತ “ಸರ್ಕಾರಿ ನ್ಯಾಯಬೆಲೆ ಅಂಗಡಿ” ಚಲನಚಿತ್ರದ ಪ್ರೀಮಿಯರ್ ಶೋ ನಾಳೆ ನಾಗಮಂಗಲದಲ್ಲಿ ಅಧಿಕೃತವಾಗಿ ಚಾಲನೆ ಯಾಗಲಿದೆ ಎಂದು ರಾಜ್ಯ ಪಡಿತರ ಚೀಟಿ ಸಂಘದ ರಾಜ್ಯಾಧ್ಯಕ್ಷ ಕೃಷ್ಣಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು, ಸರ್ಕಾರಿ ನ್ಯಾಯಬೆಲೆ ಅಂಗಡಿ ಚಲನಚಿತ್ರ ಅಂಗಡಿಯ ಮಾಲೀಕರ ಸಾಮಾಜಿಕ ಕಳಕಳಿಯ ಹಾಗೂ ಸರ್ಕಾರಿ ನ್ಯಾಯಬೆಲೆ ಅಂಗಡಿಗಳ ನೈಜ ಸಮಸ್ಯೆಗಳ ಕುರಿತಾದ ಚಿತ್ರ ಇದಾಗಿದೆ ಎಂದರು.

ಈ ಚಿತ್ರವು ಬಹಳ ನಿರೀಕ್ಷಿತ ಮಟ್ಟದಲ್ಲಿ ವೀಕ್ಷಿಸಲು ಕುತೂಹಲವಾಗಿದ್ದು, ಜು. 31ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮುಖಾಂತರ ಚಿತ್ರವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ತಾರಗಣದಲ್ಲಿ ನಾಯಕ ನಟನಾಗಿ ಕುಮಾರ್ ಬಂಗಾರಪ್ಪ, ರಾಗಿಣಿ, ದೊಡ್ಡಣ್ಣ ಹಾಗೂ ಅನೇಕ ಕಲಾವಿದರು ವಿಶೇಷವಾಗಿ ಮುಖ್ಯಮಂತ್ರಿ ಪಾತ್ರದಲ್ಲಿ ಮಾಜಿ ಸಂಸದರಾದ ಶಿವರಾಮೇಗೌಡರು ಅಭಿನಯ ಮಾಡಿದ್ದಾರೆ ಎಂದರು.

ಚಲನಚಿತ್ರದ ಪ್ರೀಮಿಯರ್ ಶೋ ಚಿತ್ರತಂಡದ ಮೆರವಣಿಗೆ ಅದ್ದೂರಿಯಾಗಿ ನಡೆಯಲಿದ್ದು ಚಿತ್ರತಂಡ ಭಾಗವಹಿಸಲಿದೆ. ಚಲನಚಿತ್ರದ ನಿರ್ಮಾಣ ತಂಡದ ಪದ್ಮ ಚಂದ್ರಶೇಖರ್.ಬಾ.ಮ ಹರೀಶ್.ಭಾ ಮ. ಗಿರೀಶ್ ಆಗಮಿಸಲಿದ್ದಾರೆ.
ಗೋಷ್ಠಿಯಲ್ಲಿ ಶಿವ ರಾಮಣ್ಣ. ಮಹದೇವ್ ಶಿವಣ್ಣ ಅರಸೇಗೌಡ ಉಪಸ್ಥಿತರಿದ್ದರು.
Mandya
ಶಾಶ್ವತ ನಿವಾಸಿ ಪ್ರಮಾಣ ಪತ್ರ(PRC) ಗಳನ್ನು ನೀಡಲು ಏಕರೂಪದ ವ್ಯವಸ್ಥೆ ಜಾರಿ
ಮಂಡ್ಯ : ಸರ್ಕಾರದ ಸೂಚನೆಯ ರೀತ್ಯಾ ಶಾಶ್ವತ ನಿವಾಸಿ ಪ್ರಮಾಣಪತ್ರಗಳನ್ನು ನೀಡುವ ಉದ್ದೇಶದಿಂದ ಇತ್ತೀಚಿಗೆ ಮಾರ್ಗಸೂಚಿಗಳನ್ನು ನೀಡಿ ಏಕರೂಪ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿರುತ್ತದೆ. ಇದರಂತೆ, ನಾಗರೀಕರು ಶಾಶ್ವತ ನಿವಾಸಿ ಪ್ರಮಾಣಪತ್ರಗಳನ್ನು ಅಗತ್ಯವಿರುವ ನಾಗರೀಕರುಗಳು ತಮ್ಮ ಅರ್ಜಿಗಳನ್ನು ಸಲ್ಲಿಸಿ ಪಡೆಯಬಹುದಾಗಿರುತ್ತದೆ ಮತ್ತು ಅಂತಹ ಅರ್ಜಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಲು ಜಿಲ್ಲಾಧಿಕಾರಿ ಡಾ.ಕುಮಾರ ಅವರು ಸಭೆಯನ್ನು ನಡೆಸಿ ಎಲ್ಲಾ ತಹಶೀಲ್ದಾರ್ ಗಳಿಗೆ ಹಾಗೂ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.
ಶಾಶ್ವತ ನಿವಾಸಿ ಪ್ರಮಾಣಪತ್ರಕ್ಕಾಗಿ ಅರ್ಜಿಗಳನ್ನು ಅಟಲ್ ಜೀ ಜನಸ್ನೇಹಿ ಕೇಂದ್ರಗಳು, ಬಾಪೂಜಿ ಸೇವಾ ಕೇಂದ್ರಗಳು/ಗ್ರಾಮ ಒನ್ ಕೇಂದ್ರಗಳು/ಕರ್ನಾಟಕ ಒನ್ ಕೇಂದ್ರಗಳು/ಕಾಮನ್ ಸರ್ವೀಸ್ ಸೆಂಟರ್ ಗಳಲ್ಲಿ ಅಥವಾ https://ajsk.karnataka.gov.in/nk5_online/Login/Login_Public ಜಾಲತಾಣದ ಮೂಲಕ ಸಲ್ಲಿಸಬಹುದು.
ಅರ್ಜಿ ಸ್ವೀಕರಿಸಿದ ನಂತರ ಸಕ್ಷಮ ಪ್ರಾಧಿಕಾರಿಗಳಾದ ತಹಶೀಲ್ದಾರ್ ರವರು ದಾಖಲೆಗಳನ್ನು ಪರಿಶೀಲಿಸಿ, ಪಾರದರ್ಶಕವಾಗಿ ತುರ್ತಾಗಿ ಪ್ರಮಾಣಪತ್ರಗಳನ್ನು ನೀಡುವಂತೆ ಸೂಚಿಸಲಾಯಿತು.

ಶಾಶ್ವತ ನಿವಾಸಿ ಪ್ರಮಾಣಪತ್ರಗಳನ್ನು ಪಡೆಯಲು ಅರ್ಹರಿರುವ ಅರ್ಜಿದಾರರು: ರಾಜ್ಯದಲ್ಲಿ ಕನಿಷ್ಟ 10 ವರ್ಷಗಳ ಕಾಲ ಸಾಮಾನ್ಯ ನಿವಾಸಿಯಾಗಿರಬೇಕು/ ಕರ್ನಾಟಕದಲ್ಲಿ ಜನಿಸಿರಬೇಕು/ಕರ್ನಾಟಕದಲ್ಲಿ ಕನಿಷ್ಠ 10 ವರ್ಷಗಳ ಕಾಲ ನಿರಂತರವಾಗಿ ವಾಸವಾಗಿರಬೇಕು/ಕರ್ನಾಟಕದಲ್ಲಿ ಕನಿಷ್ಠ 10 ವರ್ಷಗಳ ಶಿಕ್ಷಣ ಪಡೆದಿರಬೇಕು/ ಕರ್ನಾಟಕದಲ್ಲಿ ಕನಿಷ್ಠ 10 ವರ್ಷಗಳಿಂದ ಆಸ್ತಿ ಹೊಂದಿರಬೇಕು/ ಕರ್ನಾಟಕ ಸರ್ಕಾರ ಅಥವಾ ಸಾರ್ವಜನಿಕ ಸಂಸ್ಥೆಯಲ್ಲಿ ಕನಿಷ್ಠ 7 ವರ್ಷ ಸೇವೆ ಸಲ್ಲಿಸಿರಬೇಕು/PRC ಹೊಂದಿರುವ ಅಥವಾ PRC ಪಡೆಯಲು ಅರ್ಹರಾಗಿರುವ ವ್ಯಕ್ತಿಯನ್ನು ವಿವಾಹವಾಗಿರಬೇಕು/ಪೋಷಕರು ಅಥವಾ ಪತಿ / ಪತ್ನಿಯವರ ಮೂಲಕ ಸರ್ಕಾರದ ನಿಯಮಾನುಸಾರ ಅರ್ಹತೆ ಹೊಂದಿರಬೇಕು.
ಶಾಶ್ವತ ನಿವಾಸಿ ಪ್ರಮಾಣಪತ್ರಗಳನ್ನು ಪಡೆಯಲು ಅರ್ಹರಿರುವ ಅರ್ಜಿದಾರರು, ಅನುಬಂಧ-01 ರ ರೀತ್ಯಾ ಅಫಿಡವಿಟ್ ಗೆ ಪೂರಕವಾಗಿ ಮುಂದಿನಂತೆ ಒಂದಕ್ಕಿಂತ ಹೆಚ್ಚಿನ ದಾಖಲೆಗಳನ್ನು ಸಲ್ಲಿಸಬೇಕು: ಜನನ ಪ್ರಮಾಣ ಪತ್ರ/ ಶಾಲಾ ಶೈಕ್ಷಣಿಕ ದಾಖಲೆಗಳು/ 10 ವರ್ಷಗಳ ನಿವಾಸದ ದಾಖಲೆ/ ಆಸ್ತಿ ದಾಖಲೆ/ ಮತದಾರರ ಪಟ್ಟಿ/ ಆಧಾರ್/ ಪಡಿತರ ಚೀಟಿ/ ಸರ್ಕಾರಿ ಅಥವಾ ಸಾರ್ವಜನಿಕ ಸಂಸ್ಥೆಯ ಸೇವಾ ಪ್ರಮಾಣ ಪತ್ರ/ ವಿವಾಹ ಪ್ರಮಾಣ ಪತ್ರ/ ಸರ್ಕಾರ ಮಾನ್ಯಗೊಳಿಸಿರುವ ಇತರೆ ಪೂರಕ ದಾಖಲೆಗಳು.

ಮೇಲ್ಕಂಡಂತೆ, ಏಕರೂಪ ವ್ಯವಸ್ಥೆಯ ಅಡಿಯಲ್ಲಿ ಶಾಶ್ವತ ನಿವಾಸಿ ಪ್ರಮಾಣಪತ್ರಗಳನ್ನು ನೀಡುವ ಪ್ರಕ್ರಿಯೆಯಲ್ಲಿ ಸರ್ಕಾರದ ನಿಯಮಾವಳಿಗಳಿಗೆ ಯಾವುದೇ ಧಕ್ಕೆಯಾಗದಂತೆ ಪಾರದರ್ಶಕವಾಗಿ ನಿರ್ವಹಣೆ ಮಾಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
-
State12 hours agoಮೈಸೂರಲ್ಲಿ ಜಾನಕಮ್ಮ ನೆನಪಲ್ಲಿ ಸಂಗೀತದೌತಣ: ಎಸ್. ಜಾನಕಿ ಅಧ್ಯಯನ ಪೀಠ, ಧ್ಯಾನ ಮಂಟಪ ಸ್ಥಾಪನೆಗೆ ಹಂಸಲೇಖ ಘೋಷಣೆ
-
Special22 hours agoಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ 18 ಶಾಖಾಧಿಕಾರಿ ಹುದ್ದೆಗಳ ನೇಮಕಾತಿ: ಅರ್ಜಿ ಆಹ್ವಾನ!!
-
Politics2 hours agoNEET ಪ್ರಶ್ನೆಪತ್ರಿಕೆ ಸೋರಿಕೆ: ಪ್ರಧಾನಿ ಮೋದಿಗೆ ಡಿಸಿಎಂ ಜಿ. ಪರಮೇಶ್ವರ್ ಪತ್ರ
-
Politics4 hours agoKPSC ನೇಮಕಾತಿ ಅಕ್ರಮ ಆರೋಪ: ಸಿಬಿಐ ತನಿಖೆಗೆ ಅಭ್ಯರ್ಥಿಗಳ ಒತ್ತಾಯ
-
Hassan23 hours agoಬೇಡಿಕೆಗಳ ಈಡೇರಿಕೆಗೆ ಕೃಷಿ ಕಾಲೇಜು ಎದುರು ವಿದ್ಯಾರ್ಥಿಗಳ ಅನಿರ್ದಿಷ್ಟಾವಧಿ ಧರಣಿ
-
National8 hours agoನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿವಾದ : ‘ಯುವಕರ ಭವಿಷ್ಯವೇ ಸರ್ಕಾರದ ಮೊದಲ ಆದ್ಯತೆ’ – ಪ್ರಧಾನಿ ಮೋದಿ
-
Kodagu22 hours agoಚೇಲಾವರ ಜಲಪಾತ, ಕಬ್ಬೆಬೆಟ್ಟದಲ್ಲಿ ಗ್ರಾಮಸ್ಥರು, ವಿವಿಧ ಸಂಘ ಸಂಸ್ಥೆಗಳಿಂದ ಸ್ವಚ್ಛತಾ ಶ್ರಮದಾನ
-
State10 hours agoಪ್ರತಿಭಟನಾನಿರತ ವಿದ್ಯಾರ್ಥಿಗಳ ವಿರುದ್ಧದ ಕೇಸ್ ಕೈಬಿಟ್ಟರೆ ಉಪವಾಸ ಅಂತ್ಯ: ಸೋನಂ ವಾಂಗ್ಚುಕ್
